💐ಕಬೀರರ ಮಾನವೀಯತೆ*💐
ಕಬೀರದಾಸರು ಉತ್ತರ ಭಾರತದ ಶ್ರೇಷ್ಠ ಸಂತಕವಿ.
ಅವರು ಮಾನವ ಪ್ರೇಮಿಗಳೂ, ದಯಾಳುಗಳೂ ಆಗಿದ್ದರು. ಕಬೀರದಾಸರು ವೃತ್ತಿಯಲ್ಲಿ ನೇಕಾರರಾಗಿದ್ದರು. ಸ್ವಂತಃ ಚಾದರ ನೇಯುತ್ತಿದ್ದರು. ತಯಾರಿಸಿದ ಚಾದರಗಳನ್ನು ಪೇಟೆಗೆ ಒಯ್ದು ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು.
ಒಮ್ಮೆ ಒಂದು ಚಾದರ ನೇಯ್ದು, ಅದನ್ನೂ ಮಾರಲು ಪೇಟೆಗೆ ಹೊರಟಿದ್ದರು. ಅವರ ಪತ್ನಿಯೂ ದಾರಿಯಲ್ಲಿ ಹಸಿವೆಯಾದರೆ ಇರಲೆಂದು ಒಂದು ಬುಟ್ಟಿಯಲ್ಲಿ ರೊಟ್ಟಿಯನ್ನು ಕಟ್ಟಿಕೊಟ್ಟಳು. ದಾರಿಯಲ್ಲಿ ಆಕಸ್ಮಿಕ ಜೋರಾಗಿ ಮಳೆ ಸುರಿಯಿತು. ಕಬೀರದಾಸರಿಗೆ ಮುಂದೆ ಹೋಗಲಾಗಲಿಲ್ಲ. ಸಮೀಪದ ಒಂದು ಮನೆಯ ಮುಂದಿನ ಕಟ್ಟೆಯ ಮೇಲೆ ನಿಂತುಕೊಂಡರು. ಅಲ್ಲಿ ನಿಂತುಕೊಂಡು ಏನೋ ಯೋಚನೆಯಲ್ಲಿ ಮುಳುಗಿದ್ದಾಗ ಅಕಸ್ಮಾತ್ತಾಗಿ ಸಮೀಪದಿಂದ ಒಂದು ಆರ್ತನಾದ ಕೇಳಿ ಬಂತು.
ಹೊರಗೆ ನೋಡಿದರು. ಒಬ್ಬ ಬಡ ಭಿಕ್ಷುಕ ಬಿದ್ದುಕೊಂಡು ನರಳುತ್ತಿದ್ದ. ಚಳಿಯಿಂದ ನಡುಗುತ್ತಿದ್ದ. ಅವನ ಅವ್ಯವಸ್ಥೆಯನ್ನು ಕಂಡು ಕಬೀರದಾಸರು ಕರಗಿ ಹೋದರು. ತಕ್ಷಣವೇ ಅವನ ಬಳಿ ಓಡಿದರು. ಅವನನ್ನು ಹೊತ್ತುಕೊಂಡು ಬಂದು, ತಾವು ನಿಂತುಕೊಂಡ ಕಟ್ಟೆಯ ಮೇಲೆ ಕುಳಿಸಿದರು. ತಮ್ಮ ಅಂಗವಸ್ತ್ರದಿಂದ ಆತನ ಮೈಯೋರೆಸಿ, ತಾವು ತಂದ ಹೊಸ ಚಾದಾರನನ್ನು ಅವನ ಮೈಮೇಲೆ ಹೊದಿಸಿದರು. ಇಷ್ಟೇ ಅಲ್ಲ. ತನಗಾಗಿ ತಂದಿದ್ದ ಆಹಾರವನ್ನು ಅವನಿಗೆ ತಿನ್ನಲು ಕೊಟ್ಟರು. ಯಾರೋ ಅಪರಿಚಿತ ಬಂದು ಇಷ್ಟೆಲ್ಲಾ ಉಪಚಾರ ಮಾಡಿದ್ದನ್ನು ಕಂಡು ಅನುಭವಿಸಿ ಆ ಭಿಕ್ಷುಕನಿಗೆ ಅಪಾರ ಆನಂದವಾಯಿತು.
ಕೃತಜ್ಞತೆಯ ಕಣ್ಣುಗಳಿಂದ ಕಬೀರದಾಸರನ್ನು ನೋಡುತ್ತಾ, ಅನಂದಷ್ಟಗಳನ್ನು ಸುರಿಸುತ್ತಾ ಆ ಬಡವ ಹೀಗೆ ನುಡಿದ,
"ನಿನ್ನನ್ನು ದೇವರೇ ಕಳುಹಿಸಿರಬೇಕು, ನೀನೆಷ್ಟು ಒಳ್ಳೆಯವನಾಗಿರು! ದೇವರು ನಿನಗೆ ಒಳ್ಳೆಯದನ್ನೇ ಮಾಡಲಿ!
ಆ ಬಡವನು ಪಟ್ಟ ಹರ್ಷವನ್ನು ಕಂಡು ಕಬೀರದಾಸರ ಮನಸ್ಸು ಅರಳಿತು.
ಆಧಾರ : ವಿ ಕೆ ಬೋಧಿವೃಕ್ಷ
ಮಾಹಿತಿ ಮೂಲ: What's up groups

No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you