For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

10th ಅಭಿವೃದ್ಧಿ, Part - 3, Lesson 1

Share:

10th ಅಭಿವೃದ್ಧಿ - PART 2 Lesson 1

Share:

10th ಅಭಿವೃದ್ಧಿ - Part 1, Lesson 1

Share:

10th ಭಾರತದ ವಾಯುಗುಣ Part-2 , Lesson 3

Share:

10th ಭಾರತದ ವಾಯುಗುಣ. Part-1 Lesson - 3

Share:

ಭಾರತದ ಮಣ್ಣುಗಳು Part -2, Lesson - 4

Share:

ಭಾರತದ ಮಣ್ಣುಗಳು - Part - 1, Lesson -4

Share:

ಡಾ. ಬಿ. ಆರ್ ಅಂಬೇಡ್ಕರ್ - ಸ್ವಾತಂತ್ರ್ಯ ಹೋರಾಟ. Lesson - 8

Share:

ಸುಭಾಸಚಂದ್ರ ಬೋಸ್ - ಸ್ವಾತಂತ್ರ್ಯ ಹೋರಾಟ lesson - 8

Share:

ಅಸಹಕಾರ ಚಳುವಳಿಯ - ಸ್ವಾತಂತ್ರ್ಯ ಹೋರಾಟ Lesson 8

Share:

ಭೋಜರಾಜ

*🌻ದಿನಕ್ಕೊಂದು ಕಥೆ🌻*

ಭೋಜರಾಜನು ಅನುಭಾವಿ. ಆತ ಬಾಲಕನಿದ್ದಾಗ ನಡೆದ ಘಟನೆ. ಭೋಜನು ತಂದೆಗೆ ಒಬ್ಬನೇ ಮಗ. ತೀಕ್ಷಣಮತಿಯೂ ಸ್ಪುರದ್ರೂಪಿಯೂ ಆದ ಭೋಜನ ಮೇಲೆ ತಂದೆಗೆ ಅಪಾರ ಪ್ರೀತಿ. ಮಗನು ರಾಜಗದ್ದುಗೆಯನ್ನು ಏರುವುದನ್ನೇ ಕನಸು ಕಾಣುತ್ತಿದ್ದ . ಆದರೆ ವಿಧಿ ಬಯಸಿದ್ದೇ ಬೇರೆ. ಭೋಜನ ತಂದೆ ಭಯಂಕರ ಕಾಯಿಲೆಯಿಂದ ಮರಣದ ಹಾಸಿಗೆ ಹಿಡಿದ. ಸಕಲ ವೈದ್ಯೋಪಚಾರಗಳು ವಿಫಲಗೊಂಡವು. ಈ ಕಾಯಿಲೆಯಿಂದ ತಾನಿನ್ನು ಉಳಿಯುವುದಿಲ್ಲವೆಂಬ ಅರಿವೂ ಭೋಜನ ತಂದೆಗೆ ಆಯಿತು. ಬೇರೆ ಗತಿಗಾಣದೆ ತನ್ನ ಸತಿ- ಮಹಾರಾಣಿಯ ತಮ್ಮನಾದ ಮುಂಜನನ್ನು ಕರೆದು ಹೇಳಿದ- ''ಭೋಜನು ಇನ್ನೂ ಚಿಕ್ಕ ಬಾಲಕ. ಆತನನ್ನು ಬೆಳೆಸಿ ವಿದ್ಯಾವಂತನೂ, ವೀರನೂ, ರಾಷ್ಟ್ರನಾಯಕನೂ ಆಗುವಂತೆ ಮಾಡಿ ರಾಜಗದ್ದುಗೆಯ ಮೇಲೆ ಕೂಡಿಸುವುದು ನಿನ್ನ ಹೊಣೆ, ಅಲ್ಲಿಯವರೆಗೆ ನೀನೇ ಭೋಜನ ಪರವಾಗಿ ಈ ರಾಜ್ಯವನ್ನಾಳು,''ಎಂದು ಅವನಿಂದ ವಚನ ಪಡೆದು ಕಣ್ಣು ಮುಚ್ಚಿದ. ಜಾಣನಾದ ಮುಂಜನು, ಭೋಜನ ರಕ್ಷ ಕನಾಗಿ ಶಿಕ್ಷ ಕನಾಗಿ ರಾಜ್ಯವನ್ನಾಳತೊಡಗಿದ. ಆದರೆ ರಾಜ್ಯಲಕ್ಷ್ಮಿಯು ಕೈಗೆ ಬರುವುದೇ ತಡ ಮಾವ ಮುಂಜನ ಮನಸ್ಸು ಚಂಚಲಿಸಿತು. ತನ್ನ ಕೈಗೆ ಬಂದ ಈ ರಾಜ್ಯಲಕ್ಷ್ಮಿಯು ಶಾಶ್ವತವಾಗಿ ತನ್ನ ವಂಶಕ್ಕೆ ದಕ್ಕಬೇಕೆಂದು ಬಯಸಿದ. ತನ್ನ ಈ ಬಯಕೆಗೆ ಒಂದೇ ಒಂದು ಅಡ್ಡಿ ಈ ಬಾಲಕ ಭೋಜನೆಂದುಕೊಂಡ. ಈತನನ್ನು ಮುಗಿಸಿದರೆ ಮಾತ್ರ ತನ್ನ ಕನಸು ನನಸಾಗುವುದು ಎಂದು ಭಾವಿಸಿದ. ಅದೇ ಕ್ಷ ಣದಿಂದ ಭೋಜನನ್ನು ಕಂಡಕೂಡಲೇ ಶತ್ರುವನ್ನು ಕಂಡಂತೆ ಭಾವಿಸತೊಡಗಿದ. ತನ್ನದಲ್ಲದ ರಾಜ್ಯವನ್ನು ತನಗೆ ಮಾಡಿಕೊಳ್ಳಲು ಹೊಂಚು ಹಾಕಿದ. ಸೇವಕಧಿರನ್ನು ಕರೆದು ವನವಿಹಾರದ ನೆಪಮಾಡಿಕೊಂಡು ಭೋಜನನ್ನು ಅರಣ್ಯದಲ್ಲಿ ಮುಗಿಸಿ ಬರಲು ಹೇಳಿದ. ನಾಲ್ವರು ಸೇವಕರು ಮುಗ್ಧ ಬಾಲಕ ಭೋಜನನ್ನು ಘೋರಾರಣ್ಯಕ್ಕೆ ಕರೆದೊಯ್ದರು. ಸ್ವಲ್ಪ ಸಮಯ ಸುಂದರ ಸೃಷ್ಟಿಯ ಮಡಿಲಲ್ಲಿ ಬಾಲಕನೊಂದಿಗೆ ಕೂಡಿ ಆಡಿ ನಲಿದರು. ಯುವರಾಜ ಭೋಜನ ನಿಷ್ಕಲ್ಮಷ ನಡೆ ನುಡಿಗಳಿಂದ ನಾಲ್ವರು ಸೇವಕರ ಮನಃಪರಿವರ್ತನಗೊಂಡಿತು. ಬಾಲಕನ ಪ್ರಾಣ ತಗೆಯಲು ಅವರಿಗೆ ಮನಸ್ಸಾಗಲಿಲ್ಲ . ಸತ್ಯ ಸಂಗತಿಯನ್ನು ಬಾಲಕ ಭೋಜನಿಗೆ ತಿಳಿಸಿ ಪಕ್ಕದಲ್ಲಿದ್ದ ಆಶ್ರಮದಲ್ಲಿ ಇರಲು ಹೇಳಿ ನಡೆದರು. ಆಗ ಭೋಜ ನುಡಿದ, ''ಅದೇಕೆ ನೀವು ನಿಮ್ಮ ರಾಜಾಜ್ಞೆಯನ್ನು ಪಾಲಿಸಿರಿ. ನಿಮ್ಮಂಥ ದಯಾಳುಗಳ, ಪ್ರೇಮ ಹೃದಯಿಗಳ ಕೈಯಲ್ಲಿ ಪ್ರಾಣವನ್ನು ಬಿಡುವುದು ಒಂದು ಸೌಭಾಗ್ಯ''! ಬಾಲಕನ ನಿರ್ಭಿತ ನುಡಿಗಳನ್ನು ಕೇಳಿ ಸೇವಕರಿಗೆ ಪರಮಾಶ್ಚರ್ಯ ! ನಾಳೆ ಸಮರ್ಥ ರಾಷ್ಟ್ರನಾಯಕರಾಗಲಿರುವ ಧೀಮಂತರಾದ ತಮ್ಮ ಪ್ರಾಣಕ್ಕೆ ಧಕ್ಕೆ ತರುವ ಕಾರ್ಯ ನಮ್ಮಿಂದಾಗದು !' ಎಂದು ನಾಲ್ವರೂ ಯುವರಾಜ ಭೋಜನ ಕಾಲಿಗೆ ಎರಗಿದರು. ಕಟುಕರಿಗೆ ಬಂದ ಈ ಕಾರುಣ್ಯ ಭೋಜನ ಸೋದರ- ಮಾವನಾದ ಮುಂಜನಿಗೆ ಬಾರದಿರುವುದು ಎಂಥ ವಿಪರ್ಯಾಸ ! 'ಆಗಲಿ ನನ್ನದೊಂದು ಮಾತಿದೆ ಅದನ್ನು ನನ್ನ ಮಾವ ಮುಂಜನಿಗೆ ತಲುಪಿಸಿರಿ' ಎಂದು ಭೋಜನು ತಾಳೆಗರಿಯಲ್ಲಿ ಈ ಕೆಳಗಿನಂತೆ ಬರೆದುಕೊಟ್ಟ. ಕೃತಯುಗಾಲಂಕಾರ ಪ್ರಾಯನಾದ ಮಾಂಧಾತಾ ಮಹಾರಾಜ ಹೋದ. ತ್ರೇತಾಯುಗದಲ್ಲಿ ಮಹಾಸಾಗರಕ್ಕೆ ಸೇತುವೆ ನಿರ್ಮಿಸಿ ರಾವಣನನ್ನು ಜಯಿಸಿದ ಆ ಮಹಾನುಭಾವ ರಾಮನೆಲ್ಲಿ ? ದ್ವಾಪರ ಯುಗದಲ್ಲಿ ಮಹಿಯನ್ನಾಳಿದ ಧರ್ಮ ಮುಂತಾದ ರಾಜರು ಸ್ವರ್ಗಕ್ಕೆ ಹೋಗಿಯೇ ಬಿಟ್ಟರು ! ಕಲಿಯುಗದಲ್ಲಿ ಆಳುತ್ತಿರುವ ಮುಂಜನೆ, ನೀನು ಮಾತ್ರ ಅವರಂತೆ ಈ ಭೂಮಂಡಲವನ್ನು ಇಲ್ಲಿಯೇ ಬಿಟ್ಟು ಹೋಗಲಾರೆ ಅಲ್ಲವೇ ? ಈ ಅಮರ ನುಡಿಗಡಣದ ಆ ಹಸಿರೆಲೆಯನ್ನು ಸೇವಕರು ಮುಂಜರಾಜನ ಕೈಗಿತ್ತರು. ಇದು ಭೋಜನ ಅಂತಿಮ ಪತ್ರವಿರಬಹುದು ಎಂದು ಮುಂಜನು ಅದನ್ನು ಓದಿದ. ತಕ್ಷ ಣ ಆತನಲ್ಲಿದ್ದ ಅಜ್ಞಾನಜನಿತ ಭಯದ ಕತ್ತಲೆ ಹರಿದುಹೋಗಿತ್ತು. ಅರುವಿನ ಕಣ್ಣು ತೆರೆದು ನಿಂದಿತ್ತು. ಅಭಯಾನಂದದ ಪ್ರಭೆಯು ಅವನ ಸುತ್ತ ಚಲ್ಲುವರೆದಿತ್ತು ! ತತ್ಪರಿಣಾಮವಾಗಿ ಮುಂಜನು ಯುವರಾಜ ಭೋಜನನ್ನು ಕರೆತಂದು ರಾಜಗದ್ದುಗೆಯ ಮೇಲೆ ಕುಳ್ಳಿರಿಸಿದ !       

ಆಧಾರ : ಶ್ರೀ ಸಿದ್ದೇಶ್ವರ ಸ್ವಾಮೀಜಿ.                                ಸಂಗ್ರಹ: ವೀರೇಶ್ ಅರಸಿಕೆರೆ.
Share:

LESSON 3 - ಬ್ರಿಟಿಷ್‌ ಆಳ್ವಿಕೆಯ ಪರಿಣಾಮಗಳು








Share:

RACHANA 2 SOCIAL SCIENCE

Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com