For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಇತಿಹಾಸ - ಅಧ್ಯಾಯ-1 ಭಾರತಕ್ಕೆ ಯುರೋಪಿಯನ್ನರ ಆಗಮನ



ಇತಿಹಾಸ


ಅಧ್ಯಾಯ-1 ಭಾರತಕ್ಕೆ ಯುರೋಪಿಯನ್ನರ ಆಗಮನ

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.


1. 1453ರಲ್ಲಿ ಆಟೋಮಾನ್ ಟರ್ಕರು - ನಗರವನ್ನು ವಶಪಡಿಸಿಕೊಂಡರು. (ಕಾನ್ಸ್ಟಾಂಟಿನೋಪಲ್)


2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು


ಕಂಡುಹಿಡಿದನು. (ವಾಸ್ಕೋಡಗಾಮನು)


3. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ . (ಪಾಂಡಿಚೇರಿ ಅಥವಾ ಪುದುಚೇರಿ)


4. ರಾಬರ್ಟ್ ಕೈವನು 1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ - ಕದನ ಸಾರಿದನು. (ಪ್ಲಾಸಿ)


5. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ 'ದಿವಾನಿ' ಹಕ್ಕನ್ನು ನೀಡಿದನು. (ಎರಡನೇ ಷಾ ಅಲಂ)


6. ಬಂಗಾಳದಲ್ಲಿ 'ದ್ವಿ ಪ್ರಭುತ್ವ'ವನ್ನು ಜಾರಿಗೆ ತಂದವನು . (ರಾಬರ್ಟ್ ಕೈವ್)


II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.


1. ಯುರೋಪಿನಲ್ಲಿ ಬೇಡಿಕೆ ಇದ್ದ ಭಾರತದ ಸಾಂಬಾರ ಪದಾರ್ಥಗಳು ಯಾವುವು?


• ಯುರೋಪಿನಲ್ಲಿ ಬೇಡಿಕೆ ಇದ್ದ ಭಾರತದ ಸಾಂಬಾರ ಪದಾರ್ಥಗಳು ಮೆಣಸು, ಜೀರಿಗೆ, ದಾಲ್ವಿನ್ನಿ, ಏಲಕ್ಕಿ ಮತ್ತು ಶುಂಠಿ


2. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು? • ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಕಾನ್ಸ್ಟಾಂಟಿನೋಪಲ್


3. ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರೇನು? • ಉತ್ತರ: ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರು- ಬೈಜಾಂಟೀನ್


4. ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು?


• ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಕಾನ್ಸ್ಟಾಂಟಿನೋಪಲ್


5. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?


• ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಅರಬರು


6. ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?


• ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಇಟೆಲಿಯ ವರ್ತಕರು


7. ಏಷ್ಯಾ ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಯಾವ ನಗರದ ಮೂಲಕ ನಡೆಯತ್ತಿತ್ತು?


• ಏಷ್ಯಾ ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಕಾನ್ ಸ್ಟಾಂಟಿನೋಪಲ್ ನಗರದ ಮೂಲಕ ನಡೆಯತ್ತಿತ್ತು


8. ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?


• ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಆಟೋಮಾನ್ ಟರ್ಕರು


9. ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ಯಾವಾಗ ವಶಪಡಿಕೊಂಡರು?


• ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು 1453 ರಲ್ಲಿ ವಶಪಡಿಕೊಂಡರು.


10. ವರ್ತಕರಿಗೆ ಕಾನ್ ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.ಏಕೆ?


• ವರ್ತಕರಿಗೆ ಕಾನ್ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ ಏಕೆಂದರೆ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು.


11. ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲು ಕಾರಣವೇನು?


• ಇಟೆಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು.


12. ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ಯಾವುವು?


• ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ದಿಕ್ಕೂಚಿ,ಆಸ್ಟೋಲೋಬ್ (ನಕ್ಷತ್ರ ಉನ್ನತಿ ಮಾಪನ),ಸಿಡಿಮದ್ದು


13. ಆಸ್ಟೋಲೋಬ್ ಎಂದರೇನು?


• ಆಸ್ಟೋಲೋಬ್ ಎಂದರೆ ನಕ್ಷತ್ರ ಉನ್ನತಿ ಮಾಪನ


14. ಆಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಳ್ಳಲು ಕಾರಣವೇನು?


• ಏಷ್ಯಾ ಮತ್ತು ಯುರೋಪಿನ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿದ್ದರಿಂದ ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.


15, ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಉಂಟಾದ ಪರಿಣಾಮವೇನು?


• ಆಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.


16. ವಾಸ್ಕೋಡಗಾಮನು ಯಾವ ದೇಶದ ನಾವಿಕ?


ರಾಮನು ಪೋರ್ಚುಗಲ್ ದೇಶದ ನಾವಿಕ


17. ವಾಸ್ಕೋಡಗಾಮನು ಯಾವ ನಗರದಿಂದ ಹೊರಟನು?


• ವಾಸ್ಕೋಡಗಾಮನು ಲಿಸ್ಟನ್ ನಗರದಿಂದ ಹೊರಟನು


18. ವಾಸ್ಕೋಡಗಾಮನು ಯಾವ ನಗರಕ್ಕೆ ಬಂದು ತಲುಪಿದನು?


• ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಬಂದು ತಲುಪಿದನು


19. ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಯಾವಾಗ ಬಂದು ತಲುಪಿದನು?


• ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ 1453ರಲ್ಲಿ ಬಂದು ತಲುಪಿದನು.


20. ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ಯಾರು?


• ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ವಾಸ್ಕೋಡಗಾಮ.


21. ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಮೊದಲಿಗರು ಯಾರು?


• ಪೋರ್ಚುಗೀಸರು


22.ಯುರೋಪಿನ ವ್ಯಾಪಾರಿ ಕಂಪೆನಿಗಳನ್ನು ಹೆಸರಿಸಿ.


• ಪೋರ್ಚುಗೀಸ್,ಡಚ್ ಇಂಗ್ಲಿಷ್, ಫ್ರೆಂಚ್


23. ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಯಾರು?


• ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಪೋರ್ಚುಗೀಸರು.


24. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು?


• ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಪೋರ್ಚುಗೀಸರು


25. ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಯಾರು? • ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಫ್ರಾನ್ಸಿಸ್ಕೋ ಡಿ ಆಿಡ


26. ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಯಾರು?


• ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಫ್ರಾನ್ಸಿಸ್ಕೋ ಡಿ ಆಿಡ


27. ನೀಲಿ ನೀರಿನ ನೀತಿ ಎಂದರೇನು?


• ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀತಿಯನ್ನು ನೀಲಿ ನೀರಿನ ನೀತಿ ಎನ್ನುವರು.


28. ಫ್ರಾನ್ಸಿಸ್ಕೊ ಡಿ ಆಲೈಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಯಾರು?


• ಫ್ರಾನ್ಸಿಸ್ಕೊ ಡಿ ಆಿಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಆಲ್ವಿನ್ನೋ ಆಲ್ಬುಕರ್ಕ


29. ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು?


• ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಆನ್ನೋ ಆಲ್ಬುಕರ್ಕ


30. 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಯಾರು?


• 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಆಲೋನ್ನೋ ಆಲ್ಬುಕರ್ಕ


31. ಪೋರ್ಚುಗೀಸರ ಆಡಳಿತ ಕೇಂದ್ರ ಯಾವುದು? • ಪೋರ್ಚುಗೀಸರ ಆಡಳಿತ ಕೇಂದ್ರ ಗೋವಾ


32. ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಲು ಕಾರಣವೇನು?


• ಡಚ್ ಮತ್ತು ಇಂಗ್ಲಿಷರ ಆಗಮನದಿಂದ ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಿದರು.


33. ಡಚ್ಚರು ಯಾವ ದೇಶದವರು?


• ಡಚ್ಚರು ಹಾಲೆಂಡ್ ಅಥವಾ ನೆದರ್‌ಲ್ಯಾಂಡ್ ದೇಶದವರು. 34. ಡಚ್ಚರ ಕಂಪೆನಿಯ ಹೆಸರೇನು?


• ಡಚ್ಚರ ಕಂಪೆನಿಯ ಹೆಸರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ


35. ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು?


• ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ 1602ರಲ್ಲಿ ಸ್ಥಾಪನೆಯಾಯಿತು.


36. ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಏಕೆ ಸ್ಥಾಪನೆ ಮಾಡಿದರು?


• ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸ್ಥಾಪನೆ ಮಾಡಿದರು.


37. ಭಾರತದಲ್ಲಿ ಡಚ್ಚರ ವ್ಯಾಪಾರ ಕೋಠಿಗಳು ಯಾವುವು?


• ಸೂರತ್, ಪ್ರೋಚ್, ಕ್ಯಾಂಬೆ,ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಚಿನ್ನೂರ್


38, ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಯಾರು?


• ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಡಚ್ಚರು


39. ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಹೇಗೆ ಮುರಿದರು?


• ಸೂರತ್,ಪ್ರೋಚ್,ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಚಿನ್ನೂರ್ ಮೊದಲಾದ ಕಡೆಗಳಲ್ಲಿ ತಮ್ಮ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಮುರಿದರು.


40. ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಳ್ಳಲು ಕಾರಣವೇನು?


• ಭಾರತಕ್ಕೆ ಬಂದ ಇಂಗ್ಲಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾರದೆ ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಂಡರು.


41. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು?


• ಇಂಗಿಷ್ ಈಸ್ಟ್ ಇಂಡಿಯಾ ಕಂಪೆನಿ 1600ರಲ್ಲಿ ಸ್ಥಾಪನೆಯಾಯಿತು.


42. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಯಾರು?


• ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಇಂಗ್ಲೆಂಡಿನ ರಾಣಿ ಎಲಿಜಬೆತ್


43, ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಯಾರು?


• ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಜಹಾಂಗೀರ್.


44. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಎಲ್ಲಿ ಆರಂಭವಾಯಿತು?


• ಸೂರತ್‌ನಲ್ಲಿ ಆರಂಭವಾಯಿತು.


45. ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಯಾರು?


• ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಸರ್ ಥಾಮಸ್ ರೋ


46. ಸರ್ ಥಾಮಸ್ ರೋ ಯಾರು?


• ಸರ್ ಥಾಮಸ್ ರೋ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್‌ನ ರಾಯಭಾರಿ


47. ಇಂಗ್ಲಿಷರು ಸೆಂಟ್ ಜಾರ್ಜ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಹೇಗೆ ಕಟ್ಟಿದರು? • ಇಂಗ್ಲಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್‌ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಜಾರ್ಜ ಘೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು.


48. ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಯಾರು?


• ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಇಂಗ್ಲೆಂಡಿನ ರಾಜ ಎರಡನೇ ಚಾರ್ಲ್ಸ್


49. ಇಂಗ್ಲಿಷರು ಘೋರ್ಟ್ ವಿಲಿಯಂ ಎಂಬ ಕೋಟೆಯನ್ನು ಹೇಗೆ ಕಟ್ಟಿದರು?


• ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನತಿ,ಕಲಿಕಟ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಇಂಗ್ಲಿಷರು ಪೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು.


50. ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಯಾವುವು?


• ಉತ್ತರ: ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಮದ್ರಾಸ್,ಬಾಂಬೆ, ಕಲ್ಕತ್ತ


51. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಯಾವುದು?


• ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಕಲ್ಕತ್ತ


52. ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ ತಂದವರು ಯಾರು?


• ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ ತಂದವರು ಇಂಗ್ಲಿಷರು


53, ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು ಯಾವಾಗ ಸ್ಥಾಪನೆಯಾಯಿತು?


• ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು 1664ರಲ್ಲಿ ಸ್ಥಾಪನೆಯಾಯಿತು.


54. ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಯಾವುದು?


• ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಸೂರತ್


55. ಫ್ರೆಂಚರ ವ್ಯಾಪಾರ ಕೇಂದ್ರಗಳು ಯಾವುವು?


• ಸೂರತ್,ಮಚಲೀಪಟ್ಟಣ,ಚಂದ್ರನಗರ,ಮಾಹೆ,ಕಾರೈಕಲ್ಲು,ಕಾಸಿಂಬಜಾರ್,ಬಾಲಸೂರ್


56. ಫ್ರೆಂಚರು ವಾಲಿಕೊಂಡಪುರಂನ್ನು (ಪಾಂಡಿಚೇರಿ) ಹೇಗೆ ರಾಜಧಾನಿಯನ್ನಾಗಿ ಮಾಡಿಕೊಂಡರು?


• ಫ್ರೆಂಚರು ವಾಲಿಕೊಂಡಪುರಂನ ಸ್ಥಳಿಯ ಮುಸ್ಲಿಂ ಅಧಿಕಾರಿಯಿಂದ ಒಂದು ಹಳ್ಳಿಯನ್ನು ಪಡೆದು ಅದನ್ನು - ದೊಡ್ಡ ವ್ಯಾಪಾರ ಕೇಂದ್ರವಾಗಿ ಮಾರ್ಪಡಿಸಿ, ರಾಜಧಾನಿಯನ್ನಾಗಿ ಮಾಡಿಕೊಂಡರು.


57. ವಾಲಿಕೊಂಡಪುರಂನ ಮತ್ತೊಂದು ಹೆಸರೇನು?


• ವಾಲಿಕೊಂಡಪುರಂನ ಮತ್ತೊಂದು ಹೆಸರು ಪಾಂಡಿಚೇರಿ ಅಥವಾ ಪುದುಚೇರಿ


58. ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಯಾವುದಾಗಿತ್ತು?


• ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಪಾಂಡಿಚೇರಿ ಆಗಿತ್ತು.


59. ಫ್ರೆಂಚರ ಗವರ್ನರ್ ಯಾರು?


• ಫ್ರೆಂಚರ ಗವರ್ನರ್ ಡೂಪ್ಲೆ


60. ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿಯಲು ಕಾರಣವೇನು?


• ಬ್ರಿಟಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾಗದೆ ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿದರು.


61. ತಮಿಳುನಾಡಿನ ಪೂರ್ವ ಭಾಗವನ್ನು ಏನೆಂದು ಕರೆಯುವರು?


• ತಮಿಳುನಾಡಿನ ಪೂರ್ವ ಭಾಗವನ್ನು ಕಾರ್ನಾಟಿಕ್ ಎಂದು ಕರೆಯುವರು.


62. ಮೂರು ಕಾರ್ನಾಟಿಕ್ ಯುದ್ಧಗಳು ನಡೆಯಲು ಮುಖ್ಯ ಕಾರಣವೇನು?


• ಹೈದರಾಬಾದ್ ಸಂಸ್ಥಾನ ಮತ್ತು ಕಾರ್ನಾಟಿಕ್ ಪ್ರಾಂತ್ಯದಲ್ಲಿನ ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಬ್ರಿಟಿಷರು ಮತ್ತು ಫ್ರೆಂಚರು ಯತ್ನಿಸಿದರು.ಅದರ ಪರಿಣಾಮದಿಂದ ಮೂರು ಕಾರ್ನಾಟಿಕ್ ಯುದ್ದಗಳು ನಡೆದವು.


63. ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಯಾರು?


• ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಲಾಬೋರ್ಡಿನಾ


64. ಮೊದಲ ಕಾರ್ನಾಟಿಕ್ ಯುದ್ದ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?


• ಮೊದಲ ಕಾರ್ನಾಟಿಕ್ ಯುದ್ದ ಏಕ್ಸ್-ಲಾ-ಚಾಪಲ್ ಒಪ್ಪಂದದೊಂದಿಗೆ ಕೊನೆಗೊಂಡಿತು


65. ಎರಡನೇ ಕಾರ್ನಾಟಿಕ್ ಯುದ್ದ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?


• ಎರಡನೇ ಕಾರ್ನಾಟಿಕ್ ಯುದ್ಧ ಪಾಂಡಿಚೇರಿ ಒಪ್ಪಂದದೊಂದಿಗೆ ಕೊನೆಗೊಂಡಿತು


66, ಮೂರನೇ ಕಾರ್ನಾಟಿಕ್ ಯುದ್ದ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?


• ಮೂರನೇ ಕಾರ್ನಾಟಿಕ್ ಯುದ್ಧ ಪ್ಯಾರೀಸ್ ಒಪ್ಪಂದದೊಂದಿಗೆ ಕೊನೆಗೊಂಡಿತು


68. ಮೂರನೇ ಕಾರ್ನಾಟಿಕ್ ಯುದ್ಧದ ಸಮಯದಲ್ಲಿ ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಿದವರು ಯಾರು?


• ಕೌಂಟ್ ಡಿ ಲಾಲಿ


69. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರವನ್ನು ನಡೆಸಲು ದಸ್ತಕ್ಗಳನ್ನು ನೀಡಿದವರು ಯಾರು?


• ಫಾರೂಕ್ ಶಿಯಾರ್


70. ದಸ್ತಕ್ ಎಂದರೇನು?


• ವ್ಯಾಪಾರ ನಡೆಸಲು ಪರವಾನಗಿ ಪತ್ರವನ್ನು ದಸ್ತಕ್ ಎನ್ನುವರು.


71. ಪ್ಲಾಸಿ ಕದನ ನಡೆದ ವರ್ಷ ಯಾವುದು?


• 1757


72. ಪ್ಲಾಸಿ ಕದನ ಯಾರ ನಡುವೆ ನಡೆಯಿತು?


• ಸಿರಾಜ್-ಉದ್-ದೌಲ ಮತ್ತು ಬ್ರಿಟಿಷರು


73.ಅಲಿವರ್ಧಿ ಖಾನನ ಮೊಮ್ಮಗನನ ಹೆಸರೇನು?


• ಸಿರಾಜ್-ಉದ್-ದೌಲ


74. ಕಪ್ಪು ಕೋಣೆ ದುರಂತ ಎಂದರೇನು?


• ಸಿರಾಜ್-ಉದ್-ದೌಲನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು. ಅವರಲ್ಲಿ 123 ಮಂದಿ ಅಸುನೀಗಿದರು.ಇದನ್ನು ಕಪ್ಪು ಕೋಣೆ ದುರಂತ ಎನ್ನುವರು.


75. ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವರು ಯಾರು?


• ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವರು ಮೀರ್ ಜಾಫರ್


76. ಬಕ್ಸಾರ್ ಕದನ ಯಾವಾಗ ನಡೆಯಿತು?


• ಬಕ್ಸಾರ್ ಕದನ 1764ರಲ್ಲಿ ನಡೆಯಿತು.


77. ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಯಾವುವು?


• ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಮೀರ್ ಖಾಸಿಂ,ಎರಡನೇ ಷಾ ಆಲಂ,


ಪುಜ್-ಉದ್-ದೌಲ


78, ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಯಾರು?


• ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಹೆಕ್ಟರ್ ಮತ್ತೋ


79. ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಯಾರು?


• ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಷಾ ಆಲಂ


80. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ಯಾರು?


• ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ರಾಬರ್ಟ ಕೈವ್
Share:

9 comments:

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com