For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ನವೆಂಬರ್ 26 ಸಂವಿಧಾನ ದಿನಾಚರಣೆಯ ಮಾಹಿತಿ*

🙏💐 *ನವೆಂಬರ್ 26 ಸಂವಿಧಾನ ದಿನಾಚರಣೆಯ ಮಾಹಿತಿ*💐🙏

*1949ರ ನವೆಂಬರ್ 26 ರಂದು ಬಾಬಾಸಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಮಿತಿ ಸದಸ್ಯರು ಭಾರತ ದೇಶಕ್ಕೆ ಸಮರ್ಪಿಸಿದ ಸಂವಿಧಾನವನ್ನು ಆಂಗೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಇದು ಭಾರತದ ಇತಿಹಾಸದಲ್ಲಿ ಹೊಸ ಶಖೆಯನ್ನು ಆರಂಭಿಸಿತ್ತು.*

👉 *ಭಾರತದ ಸಂವಿಧಾನ ಬಗ್ಗೆ:*
*ಭಾರತದಲ್ಲಿ ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂತು.*
*ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ. (ಕನ್ನಡ ಭಾಷೆಯಲ್ಲೂ ಓದಬಹುದು)*
*ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.*
*ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.*
*ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.*
*ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.*
*ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ*
*ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್ನಿಂದ ಎರವಲು ಪಡೆಯಲಾಗಿದೆ.*
*ಇದು ವಿಶ್ವದ ಯಾವುದೇ ಸ್ವತಂತ್ರ್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.*
*ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 98 ತಿದ್ದುಪಡಿಗಳಿವೆ.*
*ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.*
*ಇದರ ಕರಡನ್ನು 1949ರ ನವೆಂಬರ್ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು.*
*ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು.*
*1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ ಬಂತು.*
*ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು.*
*ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಅದಕ್ಕೆ ಕೇವಲ 94 ತಿದ್ದುಪಡಿಗಳನ್ನು ತರಲಾಗಿದೆ.*

*ಸಂವಿಧಾನದ ಮಹತ್ವ/ಪ್ರಾಮುಖ್ಯತೆ*
*ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ ಅವುಗಳ ಜವಾಬ್ದಾರಿಯನ್ನೂ* *ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.*
*ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತುಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ*
*ಸಂಪುಟ ಸಮಿತಿ*
*ಎರಡನೆಯ ಮಹಾಯುದ್ಧವು ಮೇ ೯, ೧೯೪೫ರಂದು* *ಯೂರೋಪಿನಲ್ಲಿ ಮುಕ್ತಾಯಗೊಂಡಿತು.ಅದೇ ವರ್ಷದ ಜುಲೈನಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಹೊಸ ಸರಕಾರವು ಅಧಿಕಾರಕ್ಕೆ ಬಂದಿತು. ಈ ಹೊಸ* *ಸರಕಾರವು ತನ್ನ ಭಾರತೀಯ ಧೋರಣೆ (ಇಂಡಿಯನ್ ಪಾಲಿಸಿ)ಯನ್ನು ಘೋಷಿಸಿ, ಸಂವಿಧಾನದ ಕರಡನ್ನು ತಯಾರು ಮಾಡಲು ಸಮಿತಿಯನ್ನು ರಚಿಸಲು ನಿರ್ಧರಿಸಿತು. ಮೂವರು ಬ್ರಿಟೀಷ್ ಮಂತ್ರಿಗಳ ತಂಡವೊಂದು, ಭಾರತದ ಸ್ವಾತಂತ್ರ್ಯದ ಬಗ್ಗೆ, ಪರಿಹಾರ ಹುಡುಕಲುಭಾರತಕ್ಕೆ ಬಂದಿತು. ಈ ತಂಡವನ್ನು 'ಸಂಪುಟ* *ಸಮಿತಿ' (Cabinet Mission) ಎಂದು ಕರೆಯಲಾಯಿತು.*
*ಸಂವಿಧಾನದ ರೂಪುರೇಷೆಗಳನ್ನು ಚರ್ಚಿಸಿದ ಈ ಸಮಿತಿಯು, ಕರಡು ಸಂವಿಧಾನ ರಚನಾ ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನದ ಕೆಲವು ವಿವರಗಳನ್ನು ಸ್ಪಷ್ಟಪಡಿಸಿತು. ಬ್ರಿಟಿಷ್ ಭಾರತದ ಪ್ರಾಂತ್ಯಗಳ ೨೯೬ ಸ್ಥಾನಗಳಿಗೆ ಚುನಾವಣೆಗಳು ೧೯೪೬ರ ಜುಲೈ - ಅಗಸ್ಟ್ ಹೊತ್ತಿಗೆ ಮುಗಿದವು. ಆಗಸ್ಟ್ ೧೫, ೧೯೪೭ರಂದು ಭಾರತದ ಸ್ವಾತಂತ್ರ್ಯದೊಂದಿಗೆ ಸಂವಿಧಾನರಚನಾ ಸಮಿತಿಯು ಸಂಪೂರ್ಣವಾಗಿ ಸ್ವಾಯತ್ತ ಸಭೆಯಾಗಿ ಮಾರ್ಪಟ್ಟಿತು. ಈ ಸಮಿತಿಯುಡಿಸೆಂಬರ್ ೯, ೧೯೪೬ರಂದು ತನ್ನ ಕೆಲಸವನ್ನು ಆರಂಭಿಸಿತು.*
*ಸಂವಿಧಾನ ರಚನಾಸಭೆ: ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು.ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. ಜವಾಹರ್ಲಾಲ್ ನೆಹರೂ,ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಬಿ.ಆರ್.ಅಂಬೇಡ್ಕರ್ , ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಶಿಯವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ತಾತ್ಕಲಿಕ ಅಧ್ಯಕ್ಷರಾಗಿದ್ದರು.* *ನಂತರ, ಡಾ.ರಾಜೇಂದ್ರ ಪ್ರಸಾದ್ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.*
*ಸಂವಿಧಾನ ರಚನಾಸಭೆಯು ಎರಡು ವರ್ಷ ೧೧ ತಿಂಗಳು ೧೮ ದಿನಗಳ ಕಾಲದ ಅವಧಿಯಲ್ಲಿ ೧೬೬ ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗು ಪತ್ರಕರ್ತರಿಗೂ ಪ್ರವೇಶವಿತ್ತು.*

👉 *ಆಶಯಗಳ ನಿಷ್ಕರ್ಷೆ(ಧೇಯಗಳ ನಿರ್ಣಯ)*
👉 *ಸಂವಿಧಾನದ ಮೂಲ ತತ್ವಗಳು:*
• *ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ.*
• *ಭಾರತವು ಹಿಂದಿನ ಬ್ರಿಟಿಷ್ ಭಾರತದ ಪ್ರದೇಶಗಳು, ಭಾರತದ ರಾಜ್ಯಗಳು ಮತ್ತು ಭಾರತವನ್ನು ಸೇರಬಯಸುವ ಇತರ ಪ್ರದೇಶಗಳ ಒಕ್ಕೂಟ.*
• *ಒಕ್ಕೂಟವನ್ನು ಸೇರುವ ಪ್ರದೇಶಗಳು ಸ್ವಾಯತ್ತ ಘಟಕಗಳಾಗಿದ್ದು ಒಕ್ಕೂಟಕ್ಕೆ ಒಪ್ಪಿಸಿದ ಅಧಿಕಾರಗಳ ಹೊರತಾಗಿ ಸರಕಾರದ ಮತ್ತು ಆಡಳಿತದ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸಬಲ್ಲವಾಗಿರುತ್ತವೆ*
• *ಸ್ವತಂತ್ರ ಸಾರ್ವಭೌಮ ಭಾರತದ ಮತ್ತು ಅದರ ಸಂವಿಧಾನದ ಎಲ್ಲಾ ಅಧಿಕಾರಗಳು ಮತ್ತು ಅಧಿಕರಣಗಳು ಭಾರತದ ಪ್ರಜೆಗಳಿಂದ ದೊರೆಯಲ್ಪಡುತ್ತವೆ*
• *ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಕಾನೂನಿನ ಮುಂದೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳು; ಮತ್ತು ಕಾನೂನು ಮತ್ತು ಸಾರ್ವಜನಿಕ ಸದಾಚಾರದ ಮಿತಿಗಳಲ್ಲಿನ ಮಾತು, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ ಮತ್ತು ಕೃತ್ಯಗಳ ಮೂಲಭೂತ ಹಕ್ಕುಗಳು ಆಶ್ವಾಸಿತವಾಗಿದೆ ಮತ್ತಿವುಗಳು ಒದಗಿಸಲ್ಪಡುತ್ತವೆ*
• *ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ಆದಿವಾಸಿ ಪ್ರಾಂತ್ಯಗಳಿಗೆ, ದೀನ ಮತ್ತು ಹಿಂದುಳಿದ ವರ್ಗಗಳಿಗೆ ಸಮರ್ಪಕ ಸಂರಕ್ಷಣೆಗಳು ಒದಗಿಸಲಾಗುತ್ತದೆ*
• *ಭಾರತ ಗಣರಾಜ್ಯದ ಭೂಮಿ, ಸಾಗರ ಮತ್ತು ವಾಯು ಪರಿಮಿತಿಗಳ ಸಾರ್ವಭೌಮತೆಯನ್ನು ಎಲ್ಲಾ ನಾಗರೀಕ ದೇಶಗಳಂತೆ ನ್ಯಾಯವಾಗಿ ಮತ್ತು ಕಾನೂನಿಗನುಸಾರವಾಗಿ ಕಾಪಾಡಲ್ಪಡುತ್ತದೆ*
• *ಈ ದೇಶವು ಲೋಕಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ತನ್ನ ಸಂಪೂರ್ಣ ಮತ್ತು ಮನಸಾರ ಪ್ರಯತ್ನವನ್ನು ಮಾಡುವುದು.*

👉 *ಪೀಠಿಕೆ*
*ಮುಖ್ಯ ಲೇಖನ: ಭಾರತ ಸಂವಿಧಾನದ ಪೀಠಿಕೆ*
*(ಪ್ರಸ್ತಾವನೆ)*
*ಭಾರತ ಧರ್ಮಲಿಂಗಂ ಎಂಬು*
*“ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ* *ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ,*
*ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;ವನ್ನು*
*ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;ವನ್ನು*
*ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ*
*ಗಳನ್ನು ದೊರಕಿಸಿ*
*ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ* *ಎಲ್ಲರಲ್ಲೂ ಭ್ರಾತೃತ್ವತೆ ಯನ್ನು* *ಪ್ರೋತ್ನಾಹಿಸಲು ನಿರ್ಧರಿಸಿ*
*ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ* *ವಿಧಿಸಿಕೊಳ್ಳುತ್ತೇವೆ.*
*ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ* *ನಿವಾರಿಸಬಹುದಾದ ಕಾರಣ ಸರ್ವೋಚ್ಛ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ. ಇದಕ್ಕೆ ಉದಾಹರಣೆ, 'ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ' ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ಮಾತ್ರ, ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ* *ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು.*
*ಪೀಠಿಕೆಯ ಮೂಲಪ್ರತಿಯಲ್ಲಿ "ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ" ಎಂದಿತ್ತು. ಎರಡು ಹೆಚ್ಚಿನ ಪದಗಳಾದ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು ೧೯೭೬ರಲ್ಲಿಸಂವಿಧಾನದ ೪೨ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೆ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ, ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು* *ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು.
*
👉 *ಪೀಠಿಕೆಯ ಮಹತ್ವ*

*ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು* *ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ.
ಪೀಠಿಕೆಯ ಮೊದಲ ಪದಗಳು - "ನಾವು, ಜನರು " - ಭಾರತದಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ -ನವೆಂಬರ್ ೨೬ ೧೯೪೯ ಎಂದು ಹೇಳುತ್ತದೆ.
ಪೀಠಿಕೆಯ ಕೆಲವು ಪದಗಳ ನಿರೂಪಣೆ
ಸಾರ್ವಭೌಮ
ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥಾವ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ.
ಸಮಾಜವಾದಿ
ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ.
ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ.
ಜಾತ್ಯತೀತ
ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವುಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.
ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.
ಗಣತಂತ್ರ
ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಗಣತಂತ್ರ ಎಂದರೆ " ಒಂದು
Share:

ಕಲ್ಲಿನ ಸಿಂಹಗಳಿಂದ ನಮಗೆ ಏನೂ ಆಗುವುದಿಲ್ಲ ಎನ್ನುವುದಾದರೆ ಕಲ್ಲಿನ ದೇವರಿಂದ ಏನಾದರೂ ಆಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀಯೆ

ಒಂದು ಸಂಜೆ ತಂದೆ ಮಗನನ್ನು ಊರ ಮುಂದೆ ಇರುವ ದೇವಾಲಯಕ್ಕೆ ಕರಂದುಕೊಂಡು ಹೋದ..ದೇವಾಲಯದ ಹೆಬ್ಬಾಗಿಲಲ್ಲಿ ಕೆತ್ತಿದ್ದ ಸಿಂಹದ ವಿಗ್ರಹಗಳನ್ನ ನೋಡಿ ಮಗ  ಕಿರುಚುತ್ತಾ ಹೇಳಿದ "ಅಪ್ಪಾ !!ಓಡು ಓಡು ಇಲ್ಲಿ ಸಿಂಹಗಳು ಇದ್ದಾವೆ ನಮ್ಮನ್ನು ತಿಂದುಬಿಡುತ್ತವೆ...." ಓಡುತ್ತಿದ್ದ ಮಗನನ್ನು ನಿಲ್ಲಿಸಿ ತಂದೆ ಹೇಳಿದ "ಭಯ ಬೇಡ ಮಗೂ ಅವು ಕಲ್ಲಿನ ಸಿಂಹಗಳು ಅವುಗಳಿಂದ ನಮಗೆ ಏನೂ ಆಗುವುದಿಲ್ಲ."...ಮಗ ಮರುಪ್ರಶ್ನೆ ಎಸೆದ "ಕಲ್ಲಿನ ಸಿಂಹಗಳಿಂದ ನಮಗೆ ಏನೂ ಆಗುವುದಿಲ್ಲ ಎನ್ನುವುದಾದರೆ ಕಲ್ಲಿನ ದೇವರಿಂದ ಏನಾದರೂ ಆಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀಯೆ ಅಪ್ಪಾ..!! ?"
ತಂದೆ ತನ್ನ ಡೈರಿಯಲ್ಲಿ ಈ ರೀತಿ ಬರೆಯುತ್ತಾನೆ.."'ಇದುವರೆಗೆ ನನ್ನ ಮಗನ ಪ್ರಶ್ನೆ ಗೆ ಉತ್ತರ ಕೊಡಲು ಸಾಧ್ಯವಾಗಿಲ್ಲ .ಅಂದಿನಿಂದ ಕಲ್ಲಿನ ವಿಗ್ರಹ ಬಿಟ್ಟು ಮನುಷ್ಯರಲ್ಲಿ ದೇವರನ್ನು ಹುಡುಕಲು ಪ್ರಾರಂಭಿಸಿದೆ..ದೇವರನ್ನು ಕಾಣಲಾಗಲಿಲ್ಲ ಆದರೆ ಮಾನವೀಯತೆಯನ್ನು ಕಂಡೆ"...

ಎಂಥಾ ಮಾತು ಅಲ್ವಾ  !!!!
Share:

ವಿಶ್ವ ಮಕ್ಕಳ ದಿನಾಚರಣೆ





ವಿಶ್ವ ಮಕ್ಕಳ ದಿನಾಚರಣೆ

20 ನೆ ನವಂಬರ್ ವಿಶ್ವ ಮಕ್ಕಳ ದಿನಾಚರಣೆ . 14 ನೆ ನವಂಬರ್ ಭಾರತದಲ್ಲಿ ಮಕ್ಕಳ ದಿನಾಚರಣೆ
ಪ್ರಪಂಚದಲ್ಲಿ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವರು. ಈ ದಿನವನ್ನು ಮಕ್ಕಳ ಬಾಲ್ಯವನ್ನು ಸಂಭ್ರಮದಿಂದ ಕಾಣಲು ಆಚರಿಸಲಾಗುವುದು. ಈ ದಿನವನ್ನು ಬಾಲ್ಯದ ಹೆಸರಿನಲ್ಲಿ ಆಚರಿಸಲಾಗುವುದು.
ಮಕ್ಕಳ ದಿನವನ್ನು 1959 ಕ್ಕೆ ಮೊದಲು ಜಗತ್ತಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ ಆಚರಿಸುತ್ತಿದ್ದರು. ಈ ದಿನ ವನ್ನು ವಿಶ್ವ ಸಂಸ್ಥೆಯ ಸಾಮಾನ್ಯಸಭೆಯು ತೀರ್ಮಾನಿಸಿದಂತೆ ಪ್ರಥಮ ಬಾರಿಗೆ 1954 ರಲ್ಲಿ ಆಚರಿಸಲಾಯಿತು. ಇದನ್ನು ಮೂಲಭೂತ ಉದ್ಧೇಶ ಸಮುದಾಯದ ವಿನಿಮಯದ ಹೆಚ್ಚಳ ಮತ್ತು ಮಕ್ಕಳ ತಿಳುವಳಿಕೆ ಜಾಸ್ತಿ ಮಾಡುವುದು, ಅಲ್ಲದೆ ಮಕ್ಕಳಿಗೆ ಅನುಕೂಲವಾದ ಕಲ್ಯಾಣ ಕಾರ್ಯಕ್ರಮಗಳನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಆಚರಣೆಯನ್ನು ಪ್ರಾರಂಭಿಸಲಾಯಿತು.

ನವೆಂಬರ್ 20ನ್ನು ವಿಶ್ವ ಮಕ್ಕಳ ದಿನವಾಗಿ ಆರಿಸಲು ಕಾರಣ, ಅದು ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು 1959ರಲ್ಲಿ, ಅಂಗೀಕರಿಸಿದ ದಿನ. ಮಕ್ಕಳ ಹಕ್ಕುಗಳ ಸಮಾವೇಶವು
1989 ರಲ್ಲಿ ಅದಕ್ಕೆ ಸಹಿ ಮಾಡಿತು. ಆಗಿನಿಂದ 191 ದೇಶಗಳು ಇದನ್ನು ಒಪ್ಪಿವೆ.

ಮಕ್ಕಳದಿನಾಚರಣೆಯನ್ನು ವಿಶ್ವಾದ್ಯಂತ 1953, ಅಕ್ಟೋಬರನಲ್ಲಿ ಆಚರಿಸಲಾಯಿತು. ಇದನ್ನು ಜಿನೆವಾದಲ್ಲಿನ ಅಂತರಾಷ್ಟ್ರೀಯ ಮಕ್ಕಳ ಕಲ್ಯಾಣ ಸಮಿತಿಯು ಪ್ರಾಯೋಜಿಸಿತು. ಅಂತರಾಷ್ಟ್ರೀಯ ಮಕ್ಕಳ ದಿನದ ಯೋಜನೆಯು ಶ್ರೀ. ಕೃಷ್ಣ ಮೆನೆನ್ ಅವರಿಂದ ಸೂಚಿಸಿದರು. 1954 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅದನ್ನು ಅನುಮೋದಿಸಿತು. ನವಂಬರ್ 20 ವಿಶ್ವ ಮಕ್ಕಳ ದಿನ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 1954 ರಲ್ಲಿ ಮಕ್ಕಳ ದಿನಾಚರಣೆ ಮಾಡಲು ಘೋಷಣೆ ಮಾಡಿತು. ಪ್ರಪಂಚದ ಎಲ್ಲ ರಾಷ್ಟ್ರಗಳು ಅದನ್ನು ಆಚರಿಸಲು ಪ್ರೋತ್ಸಾಹಿಸಿತು. ಮಕ್ಕಳಲ್ಲಿ ಪರಸ್ಪರ ವಿನಮಯ ಮತ್ತು ಅರಿವು ಹೆಚ್ಚಿಸಲು, ಮತ್ತು ಮಕ್ಕಳ ಕಲ್ಯಾಣ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಜಗತ್ತಿನಾದ್ಯಂತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು.
ಈಗಾಗಲೇ ತೀಳಿಸಿರುವಂತೆ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಜವಹರಲಾಲ್ ನೆಹರು ಅವರ ಜನ್ಮದಿನವಾದ ನವಂಬರ ೧೪ ರಂದು ಆಚರಿಸಲಾಗುವುದು. ಅಂದು ಮಕ್ಕಳಿಗೆ ಖಷಿಯಿಂದ ಕುಣಿಯುವ ದಿನ, ಬಾಲ್ಯದ ಸೊಗಸು, ಬೆಡಗು , ಬೆರಗು ಮತ್ತು ನೆಹರು ಅವರ ಮಕ್ಕಳ ಮೇಲಿನ ಅಪಾರ ಅಕ್ಕರೆ ಪ್ರೀತಿಯನ್ನು ಸಂಭ್ರಮದಿಂದ ನೆನೆವ ದಿನ. ಭಾರತದಾದ್ಯಂತ “ಮಕ್ಕಳದಿನಾಚರಣೆ “ಯನ್ನು ಬಹು ಸಡಗರ ಮತ್ತು ಸಂಭ್ರಮದಿಂದ ಆಚರಿಸುವರು.
ಮಕ್ಕಳ ದಿನವನ್ನು ಅವರಿಗೆ ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು, ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರೀಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ. ಆಚರಿಸಲಾಗುವುದು. ನಿಮ್ಮ ಮಕ್ಕಳಿಗೆ ಅದೃಷ್ಟವಶದಿಂದ ತನ್ನಲ್ಲಿರುವುದನ್ನು ಇಲ್ಲದೆ ಇರುವ ಇತರರೊಂದಿಗೆ ಹಂಚಿಕೊಳ್ಳುವುದರ ಮೌಲ್ಯವನ್ನು ತಿಳಿಸಿದರೆ, ಮಗುವು ಹೊಣೆಯರಿತ ಮಾನವನಾಗಿ ಬೆಳೆಯಲು ಅನುವಾಗುವುದು. ಇದರ ಜೊತೆ ಇನ್ನೊಂದು ಮಗುವು ನಿರ್ಲಕ್ಷತೆಯಿಂದ ಬಾಲಾಪರಾಧಿಯಾಗುವುದನ್ನೂ ತಪ್ಪಿಸಿದಂತಾಗುವುದು.ಇದಕ್ಕೆ ಕಾರಣ ನಿಮ್ಮ ಮುಂದಾಲೋಚನೆ ಎಂಬ ತೃಪ್ತಿಯಾಗುವುದು 

ತಿಳುವಳಿಕೆ ಜಾಸ್ತಿ ಮಾಡುವುದು, ಅಲ್ಲದೆ ಮಕ್ಕಳಿಗೆ ಅನುಕೂಲವಾದ ಕಲ್ಯಾಣ ಕಾರ್ಯಕ್ರಮಗಳನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಆಚರಣೆಯನ್ನು ಪ್ರಾರಂಭಿಸಲಾಯಿತು.

ನವೆಂಬರ್ 20ನ್ನು ವಿಶ್ವ ಮಕ್ಕಳ ದಿನವಾಗಿ ಆರಿಸಲು ಕಾರಣ, ಅದು ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು 1959ರಲ್ಲಿ, ಅಂಗೀಕರಿಸಿದ ದಿನ. ಮಕ್ಕಳ ಹಕ್ಕುಗಳ ಸಮಾವೇಶವು
1989 ರಲ್ಲಿ ಅದಕ್ಕೆ ಸಹಿ ಮಾಡಿತು. ಆಗಿನಿಂದ 191 ದೇಶಗಳು ಇದನ್ನು ಒಪ್ಪಿವೆ.

ಮಕ್ಕಳದಿನಾಚರಣೆಯನ್ನು ವಿಶ್ವಾದ್ಯಂತ 1953, ಅಕ್ಟೋಬರನಲ್ಲಿ ಆಚರಿಸಲಾಯಿತು. ಇದನ್ನು ಜಿನೆವಾದಲ್ಲಿನ ಅಂತರಾಷ್ಟ್ರೀಯ ಮಕ್ಕಳ ಕಲ್ಯಾಣ ಸಮಿತಿಯು ಪ್ರಾಯೋಜಿಸಿತು. ಅಂತರಾಷ್ಟ್ರೀಯ ಮಕ್ಕಳ ದಿನದ ಯೋಜನೆಯು ಶ್ರೀ. ಕೃಷ್ಣ ಮೆನೆನ್ ಅವರಿಂದ ಸೂಚಿಸಿದರು. 1954 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅದನ್ನು ಅನುಮೋದಿಸಿತು. ನವಂಬರ್ 20 ವಿಶ್ವ ಮಕ್ಕಳ ದಿನ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 1954 ರಲ್ಲಿ ಮಕ್ಕಳ ದಿನಾಚರಣೆ ಮಾಡಲು ಘೋಷಣೆ ಮಾಡಿತು. ಪ್ರಪಂಚದ ಎಲ್ಲ ರಾಷ್ಟ್ರಗಳು ಅದನ್ನು ಆಚರಿಸಲು ಪ್ರೋತ್ಸಾಹಿಸಿತು. ಮಕ್ಕಳಲ್ಲಿ ಪರಸ್ಪರ ವಿನಮಯ ಮತ್ತು ಅರಿವು ಹೆಚ್ಚಿಸಲು, ಮತ್ತು ಮಕ್ಕಳ ಕಲ್ಯಾಣ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಜಗತ್ತಿನಾದ್ಯಂತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು.
ಈಗಾಗಲೇ ತೀಳಿಸಿರುವಂತೆ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಜವಹರಲಾಲ್ ನೆಹರು ಅವರ ಜನ್ಮದಿನವಾದ ನವಂಬರ ೧೪ ರಂದು ಆಚರಿಸಲಾಗುವುದು. ಅಂದು ಮಕ್ಕಳಿಗೆ ಖಷಿಯಿಂದ ಕುಣಿಯುವ ದಿನ, ಬಾಲ್ಯದ ಸೊಗಸು, ಬೆಡಗು , ಬೆರಗು ಮತ್ತು ನೆಹರು ಅವರ ಮಕ್ಕಳ ಮೇಲಿನ ಅಪಾರ ಅಕ್ಕರೆ ಪ್ರೀತಿಯನ್ನು ಸಂಭ್ರಮದಿಂದ ನೆನೆವ ದಿನ. ಭಾರತದಾದ್ಯಂತ “ಮಕ್ಕಳದಿನಾಚರಣೆ “ಯನ್ನು ಬಹು ಸಡಗರ ಮತ್ತು ಸಂಭ್ರಮದಿಂದ ಆಚರಿಸುವರು.
ಮಕ್ಕಳ ದಿನವನ್ನು ಅವರಿಗೆ ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು,
ಮೂಲ: ವಿಕಾಸಪಿಡಿಯಾ
Share:

ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ


*🌻ದಿನಕ್ಕೊಂದು ಕಥೆ🌻
 ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ*

ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ನಮಗಿರುವ ಸೌಲಭ್ಯಗಳನ್ನು ಬಳಸುತ್ತಾ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಇನ್ನಷ್ಟು ಉತ್ತಮ ಪ್ರಯತ್ನ ಮಾಡಬೇಕೆ ಹೊರತು ಇತರರ ಜತೆಗೆ ಹೋಲಿಸಿಕೊಂಡು ನರಳಬಾರದು. ಆ ರೀತಿಯ ಸಂದೇಶವನ್ನು ನೀಡುವ ಒಂದು ಒಳ್ಳೆಯ ಕಥೆ ಸದ್ಯಕ್ಕೆ ವೈರಲ್ ಆಗಿದೆ. ಕೆಲವು ಪಕ್ಷಿಗಳ ಮೂಲಕ ನಮ್ಮ ಆಲೋಚನೆ ವಿಷಯವನ್ನು ಸರಳವಾಗಿ ಹೇಳಿದ್ದಾರೆ ಈ ಕಥೆಯಲ್ಲಿ.




ಒಂದು ಕಾಡಿನಲ್ಲಿ ಒಂದು ಕಾಗೆ ವಾಸವಾಗಿತ್ತು. ಅದರ ಜೀವನ ಸೊಗಸಾಗಿ ಸಾಗುತ್ತಿತ್ತು. ಆದರೆ ಪಕ್ಕದಲ್ಲೇ ಇದ್ದ ಕೊಳದಲ್ಲಿನ ಹಂಸವನ್ನು ನೋಡಿ ‘ಅದು ತುಂಬಾ ಬೆಳ್ಳಗೆ, ಸುಂದರವಾಗಿ ಇದೆ. ನಾನು ಕಪ್ಪಗಿದ್ದೇನೆ’ ಎಂದು ನೋವನುಭವಿಸುವುದನ್ನು ಆರಂಭಿಸಿತು. ಒಂದು ದಿನ ಹಂಸದ ಬಳಿ ಹೋಗಿ ‘ನೀನು ತುಂಬಾ ಸುಂದರವಾಗಿ ಇರುತ್ತೀಯ. ಆನಂದವಾಗಿಯೂ ಇರುತ್ತೀಯ ಅಲ್ಲವೇ’ ಎಂದಿತು. ಕಾಗೆ ಮಾತಿಗೆ ಹಂಸ ಉತ್ತರ ಕೊಡುತ್ತಾ, ‘ನಿಜ ನಾನು ಸುಂದರವಾಗಿರುತ್ತೇನೆ. ಆದರೆ ಗಿಳಿರಾಮ ನನಗಿಂತಲೂ ಎರಡು ಬಣ್ಣಗಳಲ್ಲಿ ಸುಂದರವಾಗಿರುತ್ತದೆ. ಅದರ ಜತೆ ಹೋಲಿಸಿದರೆ ನಾನೇನು ಅಲ್ಲ’ ಎಂದು ಬೇಸರಿಸಿಕೊಂಡಿತು. ಇದನ್ನು ಕೇಳಿದ ಕಾಗೆ ಗಿಳಿ ಬಳಿಗೆ ಹೋಗಿ, ‘ಹಂಸಕ್ಕಿಂತಲೂ ಸುಂದರವಾಗಿ ನೀನಿದ್ದೀಯ’ ಎಂದಿತು. ಈ ಮಾತಿಗೆ ಗಿಳಿ, ‘ನನ್ನದೇನಿದೆ ಕೇವಲ ಎರಡು ಬಣ್ಣಗಳು. ನವಿಲು ಬಣ್ಣಬಣ್ಣದ ಗರಿಗಳಿಂದ ತುಂಬಾ ಸುಂದರವಾಗಿರುತ್ತದೆ. ಅದನ್ನು ನೋಡಲು ಜನ ಪೈಪೋಟಿ ಬೀಳುತ್ತಿರುತ್ತಾರೆ. ‘ ಎಂದಿತು. ನವಿಲನ್ನು ನೋಡಲು ಕಾಗೆ ಜೂಗೆ ಹೋಯಿತು. ಅಲ್ಲಿ ಅದನ್ನು ನೋಡಲು ಜನ ಗುಂಪು ಗುಂಪಾಗಿದ್ದಾರೆ. ಅವರೆಲ್ಲಾ ಹೊರಟು ಹೋದ ಮೇಲೆ ನವಿಲಿನೊಂದಿಗೆ ಕಾಗೆ, ‘ನೀನು ಹಂಸ, ಗಿಳಿಗಿಂತಲೂ ತುಂಬಾ ಸುಂದರವಾಗಿದ್ದೀಯ. ನೀನು ಅದೃಷ್ಟವಂತೆ. ನಿನ್ನ ನೋಡಲು ಜನರೆಲ್ಲಾ ಬರುತ್ತಿದಾರೆ.’ ಇದರಿಂದ ನವಿಲು ಭಯದಿಂದ ‘ಹಾಂ ಏನು ಅದೃಷ್ಟ ಬಿಡಮ್ಮ…ಸುಂದರವಾಗಿದ್ದೀನಿ ಎಂದು ಈ ಜೂನಲ್ಲಿ ನನ್ನನ್ನು ತಂದು ಹಾಕಿದ್ದಾರೆ. ಇಲ್ಲಿ ಒಂದೇ ಒಂದು ಕಾಗೆ ಸಹ ಇಲ್ಲ. ಅವೆಲ್ಲಾ ಹಾಯಾಗಿ ಹೊರಗಿನ ಪ್ರಪಂಚದಲ್ಲಿ ಓಡಾಡಿಕೊಂಡಿವೆ. ನಾನು ಕಾಗೆಯಾಗಿ ಯಾಕೆ ಹುಟ್ಟಲಿಲ್ಲ ಎಂದು ಎಷ್ಟೋ ಸಲ ವ್ಯಥೆ ಪಟ್ಟಿದ್ದೇನೆ. ‘ ಎಂದು ನವಿಲು ಹೇಳಿದ ಬಳಿಕ ಕಾಗೆಗೆ ಜ್ಞಾನೋದಯವಾಯಿತು.




ಮನುಷ್ಯರಲ್ಲೂ ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವವರಿಗೇನು ಬರವಿಲ್ಲ. ಈ ರೀತಿ ಮಾಡುತ್ತಾ ತಮ್ಮಲ್ಲಿನ ಜ್ಞಾನವನ್ನು, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅವರವರ ವಿಶೇಷತೆ ಅವರಿಗೆ ಇದ್ದೇ ಇರುತ್ತದೆ. ಅವರವರ ಸಮಸ್ಯೆಗಳೂ ಅವರವರಿಗೆ ಇರುತ್ತವೆ. ನಮಗೆ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಸದ್ಭಳಕೆ ಮಾಡಿಕೊಂಡರೆ ಸಂತೃಪ್ತಿಯಾಗಿ ಜೀವಿಸಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ.




ಕೃಪೆ: kannada+.

ಸಂಗ್ರಹ :ವೀರೇಶ್ ಅರಸಿಕೆರೆ.
Share:

"Nirantar" 10th Question paper bank

Share:

ಮಕ್ಕಳ ದಿನಾಚರಣೆ



ಜವಾಹರ್ ಲಾಲ್ ನೆಹರು

ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ‘‘ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ’’ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ನವೆಂಬರ್ 14 ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ. ಅಂದು ಭಾರತದಲ್ಲೆಲ್ಲ ‘ಮಕ್ಕಳ ದಿನ’ ಎಂದು ಸಂಭ್ರಮದಿಂದ ಪ್ರತಿವರುಷ ಆಚರಿಸುತ್ತೇವೆ. ಜವಾಹರರನ್ನು ಮಕ್ಕಳು ‘ಚಾಚಾ ನೆಹರೂ’ ಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಾರೆ. ಚಾಚಾ ಎಂದರೆ ಚಿಕ್ಕಪ್ಪ.

ನೆಹರು ಅವರ ಪೂರ್ವಜರ ಹೆಸರು ‘ನೆಹರು’ ಆಗಿದ್ದಿರಲಿಲ್ಲ. ಅವರ ಪೂರ್ವಜರು ಕಾಶ್ಮೀರದಲ್ಲಿದ್ದರು. ಅವರಿಗೆ ‘ರಾಜಕೌಲ’ ಎಂಬ ಹೆಸರಿತ್ತು. ಪಂಡಿತ ರಾಜಕೌಲರು ಸಂಸ್ಕೃತ-ಫಾರಸೀ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಕ್ರಿ.ಶ. 1716ರಲ್ಲಿ ದಿಲ್ಲಿಯ ಮೊಗಲದೊರೆ ಫರುಕ್ಸಿಯರನು ಕಾಶ್ಮೀರಕ್ಕೆ ಭೆಟ್ಟಿ ಕೊಟ್ಟಾಗ ಪಂಡಿತ ರಾಜಕೌಲರನ್ನು ದಿಲ್ಲಿಗೆ ಕರೆತಂದು ನಗರದ ನಡುವೆ ಹರಿಯುತ್ತಿದ್ದ ಕಾಲುವೆಯ ಪಕ್ಕದಲ್ಲಿ ಮನೆ ಕಟ್ಟಿಸಿಕೊಟ್ಟನು. ಕಾಲುವೆಗೆ ಹಿಂದಿ ಭಾಷೆಯಲ್ಲಿ ‘ನಹರ್’ ಎನ್ನುತ್ತಾರೆ. ಹೀಗಾಗಿ ‘ನಹರ್’ ಪಕ್ಕದ ಮನೆಯವರು ‘ನೆಹರೂ’ ಆದರು.

ಬಾಲ್ಯ–ವಿದ್ಯಾಭ್ಯಾಸ

ಮೋತೀಲಾಲರು ಕಲಿತು ದೊಡ್ಡವರಾಗಿ ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಾರ ಕೀರ್ತಿ ಮತ್ತು ಹಣ ಗಳಿಸಿದರು. ಜವಾಹರರು ಹುಟ್ಟಿದ್ದು 1889ನೇ ನವಂಬರ 14 ರಂದು. ತಾಯಿ ಸ್ವರೂಪರಾಣಿ. ವೈಭವದ ಜೀವನ ಶ್ರೀಮಂತ ತಂದೆಯ ಒಬ್ಬನೇ ಮಗನಾದ ಜವಾಹರರು ರಾಜಕುಮಾರನಂತೆ ಅತ್ಯಂತ ಸುಖದಿಂದ ಬೆಳೆದರು. ಮೋತೀಲಾಲರು ಹೊಸದಾಗಿ ಕಟ್ಟಿಸಿದ ‘ಆನಂದಭವನ’ ವೆಂಬ ಹೆಸರಿನ ಮನೆಯು ಅರಮನೆಯಂತೆಯೇ ಇತ್ತು.

ಮೋತೀಲಾಲರು ಸಿಟ್ಟಿನ ಸ್ವಭಾವದವರು. ಜವಾಹರರಿಗೆ ಅವರ ಬಗ್ಗೆ ಹೆದರಿಕೆಯಿತ್ತು. ಒಮ್ಮೆ ಜವಾಹರರು ಚೆನ್ನಾಗಿ ಪೆಟ್ಟು ತಿಂದರು. ಆದದ್ದು ಇಷ್ಟೇ. ಮೋತೀಲಾಲರ ಕೋಣೆಯಲ್ಲಿ ಮೇಜಿನ ಮೇಲೆ ಎರಡು ಪೆನ್ನುಗಳಿದ್ದವು. ಅವನ್ನು ನೋಡಿದಾಗ ಬಾಲಕ ಜವಾಹರರು ‘‘ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ, ಒಂದನ್ನು ನಾನು ಇಟ್ಟುಕೊಂಡರೆ ತಪ್ಪೇನು?’’ ಎಂದು ಆಲೋಚಿಸಿ ಒಂದನ್ನು ತೆಗೆದುಕೊಂಡರು. ಆ ಬಳಿಕ ತಂದೆ ಪೆನ್ನು ಕಾಣದೆ ಎಲ್ಲರನ್ನು ಕೇಳಿದರು. ಮಗನನ್ನು ಕೇಳಿದಾಗ ತಾನು ತೆಗೆದುಕೊಂಡಿಲ್ಲವೆಂದ. ಆದರೆ ಹುಡುಕಿದಾಗ ಮಗನ ಬಳಿ ಸಿಕ್ಕಿಬಿಟ್ಟಿತು. ಮಗನಿಗೆ ಚೆನ್ನಾಗಿ ಏಟುಬಿದ್ದವು!

ಹೀಗೆ ಸಿಟ್ಟಿನ ಸ್ವಭಾವವಿದ್ದರೂ ತಂದೆಗೆ ಮಗನ ಮೇಲೆ ಬಹಳ ಪ್ರೇಮವಿತ್ತು. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂದು ಮನೆಯಲ್ಲಿಯೇ ಉತ್ತಮ ಶಿಕ್ಷಕರನ್ನಿಟ್ಟರು. ಆಗಿನ ಕಾಲದ ವಿದ್ಯಾವಂತರಂತೆ ಮೋತೀಲಾಲರಿಗೂ ಇಂಗ್ಲಿಷ್ ಭಾಷೆಯ ಬಗ್ಗೆ ಬಹಳ ಮೋಹವಿತ್ತು. ಅದಕ್ಕಾಗಿ ಮಗನಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲು ಫರ್ಡಿನೆಂಡ್ ಬ್ರುಕ್ಸ್ ಎಂಬುವನನ್ನು ನೇಮಿಸಿದ್ದರು. ಆತನು ಜವಾಹರರಲ್ಲಿ ಒಳ್ಳೊಳ್ಳೆಯ ಪುಸ್ತಕ ಓದುವ ರುಚಿ ಹುಟ್ಟಿಸಿದ. ಈ ರುಚಿಯು ಜವಾಹರರಿಗೆ ವಿದ್ಯಾರ್ಥಿಯಾಗಿದ್ದಾಗ ಮತ್ತು ಮುಂದೆಯೂ ಬಹಳ ಸಹಾಯಕವಾಯಿತು. ಚಿಕ್ಕಂದಿನಲ್ಲಿ ಜವಾಹರರೊಡನೆ ಆಟವಾಡಲು ‘ಆನಂದಭವನ’ ದಲ್ಲಿ ಸಣ್ಣ ಹುಡುಗರು ಇರಲಿಲ್ಲ. ಅವರ ತಂಗಿ ಸ್ವರೂಪಕುಮಾರಿ-ಮುಂದೆ ಶ್ರೀಮತಿ ವಿಜಯಲಕ್ಷಿ ಪಂಡಿತ್ ಎಂದು ಹೆಸರಾದರು – ಹುಟ್ಟದ್ದು 1900ರ ಆಗಸ್ಟ್ 18 ರಂದು. ಕಿರಿಯ ತಂಗಿ ಕೃಷ್ಣಾ-ಮುಂದೆ ಶ್ರೀಮತಿ ಕಷ್ಣಾ ಹಥೀಸಿಂಗ-ಹುಟ್ಟಿದ್ದು ೧೯೦೭ ರ ನವಂಬರ್ 2ರಂದು. ಆದರೆ ಜವಾಹರರಿಗೆ ಅವರ ಕಕ್ಕಿ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ, 1857ರ ಸ್ವಾತಂತ್ರ ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು. ಇದೆಲ್ಲ ಕೇಳಿದಾಗ ಬಾಲಕ ಜವಾಹರರಿಗೆ ಬ್ರಿಟಿಷರ ಮೇಲೆ ಸಿಟ್ಟು ಬರುತ್ತಿತ್ತು.

ಇಂಗ್ಲೆಂಡಿನಲ್ಲಿ

ಜವಾಹರರಿಗೆ 15 ವರುಷ ದಾಟಿದಾಗ ಮೋತಿಲಾಲರು ಅವರನ್ನು ಇಂಗ್ಲೆಂಡಿನಲ್ಲಿ ‘ಹ್ಯಾರೋ’ ಎಂಬ ಸಾರ್ವಜನಿಕ ಶಾಲೆಗೆ ಸೇರಿಸಿದರು. ಅಲ್ಲಿ ಜವಾಹರರು ಬೀಜಗಣಿತ, ರೇಖಾಗಣಿತ, ಇತಿಹಾಸ, ಸಾಹಿತ್ಯ ಮುಂತಾದ ಎಲ್ಲ ವಿಷಯಗಳಲ್ಲಿ ಉತ್ತಮ ವಿದ್ಯಾರ್ಥಿಯೆಂದು ಹೆಸರು ಪಡೆದು ಬಹುಮಾನ ಗಳಿಸಿದರು. ಜವಾಹರರು ಇಂಗ್ಲೆಂಡಿಗೆ ಹೋದರೂ ಭಾರತದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ತಿಳಿಯಲು ಉತ್ಸುಕರಾಗಿದ್ದರು ಮತ್ತು ಒಳ್ಳೊಳ್ಳೆಯ ಭಾರತೀಯ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಿದ್ದರು.

1912 ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಮರಳಿದ ಬಳಿಕ ಜವಾಹರರು ತಂದೆಯವರೊಡನೆ ವಕೀಲಿವೃತ್ತಿ ಪ್ರಾರಂಭಿಸಿದರು. ಅವರು ತೆಗೆದುಕೊಂಡ ಮೊದಲನೆಯ ಪ್ರಕರಣದಿಂದ ಅವರಿಗೆ ೫೦೦ ರೂಪಾಯಿ ಶುಲ್ಕ ಬಂದಿತು. 1916 ರ ಫೆಬ್ರವರಿ 8 ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು. ಜವಾಹರರಿಗೆ ಒಬ್ಬಳೇ ಮಗಳು, ಇಂದಿರಾ ಪ್ರಿಯದರ್ಶಿನಿ.

ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು. ಅವರು ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು.

ಭಾರತದ ಪ್ರಧಾನಿ

ಸ್ವತಂತ್ರ ಭಾರತಕ್ಕೆ ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಅವರು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ಈ ಕಾಲದಲ್ಲಿ ಅವರು ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಹೆಣಗಾಡಿದರು.

‘ಭಾರತ ರತ್ನ’

1955ರಲ್ಲಿ ದೇಶದ ಜನತೆಯ ಪರವಾಗಿ ರಾಷ್ಟ್ರಪತಿಯವರು ಜವಾಹರರಿಗೆ ‘ಭಾರತರತ್ನ’ ಪದವಿ ನೀಡಿ ಗೌರವಿಸಿದರು.

ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ ‘‘ಆರಾಮ್ ಹರಾಮ್ ಹೈ.’’ ನಾವು ಎಂದಿಗೂ ಸೋಮಾರಿಗಳಾಗಬಾರದೆಂಬುದೇ ಆ ಮಂತ್ರದ ಅರ್ಥ.

ಸಾಹಿತಿ ನೆಹರು

ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು. ಅವರಿಂದ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಮೂರು ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ. ಸಹಜವಾಗಿ ಅನುಕಂಪ ತೋರುವ ಹೃದಯ, ಯಾವ ಸಮಸ್ಯೆಯನ್ನೂ ವಿಶಾಲವಾದ ದೃಷ್ಟಿಯಿಂದ ಕಾಣುವ ವಿವೇಕ ಅವರ ಎಲ್ಲ ಪುಸ್ತಕಗಳಲ್ಲಿ ಕಾಣುತ್ತವೆ.

ದೀಪ ಆರಿತು

1964ರ ಮೇ 27
ರಂದು ನೆಹರು ನಿಧನರಾದರು. ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು.

ಅಪೂರ್ವ ದೇಶಭಕ್ತರು ಅಪೂರ್ವ ವ್ಯಕ್ತಿ

ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಹೊಸ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ನೆಹರೂ ಅವರು ಸಾರಿದರು. ಒಟ್ಟಿನಲ್ಲಿ ಅವರು ಅಪೂರ್ವ ದೇಶಭಕ್ತರು. ಅಪೂರ್ವ ಸ್ನೇಹಪರರಾದ, ಹೃದಯವಂತಿಕೆಯ ವ್ಯಕ್ತಿ.

ಕೃಪ
Share:
*Shiva Shakti S/O Ramesh Mudbool Sociology Lecturer* 🙏


•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ

•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ  ಆಗಮನ

•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)

•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)

•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.

•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)

•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)

•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )

•1784 – ಪಿಟ್ಸ್ ಇಂಡಿಯಾ ಶಾಸನ

•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )

•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )

•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )

•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ

•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )

•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

•1858 – ಬ್ರಿಟನ್ ರಾಣಿಯ ಘೋಷಣೆ

•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )

•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ

•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ

•1885 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )

•1905 – ಬಂಗಾಳ ವಿಭಜನೆ

•1906 – ಮುಸ್ಲಿಂ ಲೀಗ್ ಸ್ಥಾಪನೆ

•1920-1947 – ಗಾಂಧೀಯುಗ

•1920 - ಅಸಹಕಾರ ಚಳುವಳಿ

•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )

•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )

•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )

•1930 ಮೊದಲ ದುಂಡು ಮೇಜಿನ ಅಧಿವೇಶನ

•1931 – ಎರಡನೆಯ ದುಂಡು ಮೇಜಿನ ಅಧಿವೇಶನ

•1932 – ಮೂರನೆಯ ದುಂಡು ಮೇಜಿನ ಅಧಿವೇಶನ

•1942 ಕ್ವಿಟ್ ಇಂಡಿಯಾ ಚಳುವಳಿ

•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )

•1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )

•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ

•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )

•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ

•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ

•1914-18 – ಮೊದಲ ಮಹಾಯುದ್ಧ

•1917 – ರಷ್ಯಾ ಕ್ರಾಂತಿ•1939-45 – ಎರಡನೆಯ ಮಹಾಯುದ್ಧರಾಜ್ಯಶಾಸ್ತ್ರ

•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ

•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )

•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ

•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ

•1986 – ಲೋಕಾಯುಕ್ತ ಅದಿನಿಯಮ ಜಾರಿಗೆ

•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )

•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ

•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ

•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ

•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ

•1946 – ಯುನೆಸ್ಕೋ ಸ್ಥಾಪನೆ•1946 – ಯುನಿಸೆಫ್ ಸ್ಥಾಪನೆ

•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ

•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ

•1967 ಆಸಿಯನ್ ಸ್ಥಾಪನೆ

•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.ಸಮಾಜಶಾಸ್ತ್ರ

•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ

•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ

•1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ

•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )

•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ

•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ

•1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ ತಿದ್ದುಪಡಿ )

•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.ಅರ್ಥಶಾಸ್ತ್ರ

•1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )

•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುತ್ತದೆ )

•1951.ಏಪ್ರಿಲ್ 1 – ಮೊದಲ ಪಂಚವಾರ್ಷಿಕ ಯೋಜನೆ ಆರಂಭ•

1995.ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ ಬಂದಿತು.


ಉಪಯುಕ್ತ ಮಾಹಿತಿ ಒದಗಿಸುವ ಒಂದು ಸಣ್ಣ ಪ್ರಯತ್ನ : *ರಮೇಶ ಎಸ್ ಮುಡಬೂಳ ಸಮಾಜಶಾಸ್ತ್ರ ಉಪನ್ಯಾಸಕರು*🙏🙏
Share:

ಮೌಲಾನಾ ಅಬ್ದುಲ್ ಕಲಾಂ ಅಜಾದ್ ಜಯಂತಿ



ಮೌಲಾನಾ ಅಬ್ದುಲ್ ಕಲಾಂ ಅಜಾದ್ ಜಯಂತಿ

ವಿವಿಧತೆಯಲ್ಲಿ ಏಕತೆಯ ನೆಲೆಯಾದ ಭಾರತದಲ್ಲಿ ಹಿಂದೂ ಮುಸ್ಲಿಮರಿಬ್ಬರೂ ಸೌಹಾರ್ದತೆಯಿಂದ ಒಟ್ಟಿಗೆ ಬಾಳಬೇಕು. ಧರ್ಮಕ್ಕೂ, ಮನುಷ್ಯನು ಯಾವ ರಾಷ್ಟ್ರಕ್ಕೆ ಸೇರಿದವನು ಎಂಬುವುದಕ್ಕೂ ಯಾವುದೇ ಸಂಬಂಧವಿಲ್ಲವೆಂದು ನಂಬಿ ಆ ಆದರ್ಶಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದವರೇ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌.

ದೇಶದ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನೇ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ.

11 ನವೆಂಬರ್‌ 1888ರಲ್ಲಿ ಮೆಕ್ಕಾದಲ್ಲಿ ಜನಿಸಿದ ಮೌಲಾನಾ ಆಜಾದ್‌ರ ಪೂರ್ಣ ಹೆಸರು ಅಬ್ದುಲ್‌ ಕಲಾಂ ಘುಲಮ ಮಹಿಯುದ್ದಿನ್‌. ಇವರು ಅರೇಬಿಕ್‌, ಪರ್ಷಿಯನ್‌, ಉರ್ದು ಮತ್ತು ಇಸ್ಲಾಂ ತಾತ್ವಿಕ ಕ್ಷೇತ್ರದ ಮಹಾನ್‌ ವಿದ್ವಾಂಸರಾಗಿದ್ದರು. ಆಜಾದರ ತಂದೆ ತಾಯಿಗಳಿಬ್ಬರೂ ಅಸಾಧಾರಣ ವಿದ್ವಾಂಸರಾಗಿದ್ದವರು. ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಆಜಾದರು ಚಿಕ್ಕ ವಯಸ್ಸಿನಲ್ಲಿಯೇ ಇಸ್ಲಾಂ ಧರ್ಮದ ಅಧ್ಯಯನವನ್ನು ಶ್ರದ್ಧೆಯಿಂದ ಮಾಡಿದ್ದರು. ಆಜಾದರಿಗೆ ಪತ್ರಿಕೋದ್ಯಮದಲ್ಲಿಯೂ ಹೆಚ್ಚಿನ ಆಸಕ್ತಿಯಿತ್ತು. ತಮ್ಮ 16ನೇ ವಯಸ್ಸಿನಲ್ಲಿಯೇ ಆಜಾದ್‌ ಎಂಬ ಅಂಕಿತ ನಾಮವನ್ನಿಟ್ಟುಕೊಂಡು ಪತ್ರಿಕಾ ಪ್ರಪಂಚಕ್ಕಿಳಿದು ಅಲ್‌ ಸಿದ್ವಾ ಎಂಬ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.

ಮುಸ್ಲಿಮರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಒಂದು ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಸಾಧನ. ಹೀಗಾಗಿ ಅವರು ಶಿಕ್ಷಣ ಪಡೆದು, ಮೂಢನಂಬಿಕೆಗಳನ್ನು ಮೆಟ್ಟಿ ಸಮಾಜದ ಸುಧಾರಣೆ ಮಾಡಿಕೊಳ್ಳಬೇಕು ಮತ್ತು ಮುಸ್ಲಿಂ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಆಜಾದರ ಹಂಬಲವಾಗಿತ್ತು.

ಪತ್ರಿಕಾ ಅಸ್ತ್ರಕ್ಕೆ ಬ್ರಿಟಿಷ್‌ ಕೊಕ್ಕೆ

ತಮ್ಮ 24ನೇ ವಯಸ್ಸಿನಲ್ಲಿ ಅಲ್‌ ಹಿಲಾಲ್‌ ಎಂಬ ಉರ್ದು ಪತ್ರಿಕೆಯನ್ನು ಆಜಾದ್‌ ಪ್ರಾರಂಭಿಸಿದರು. ಹಿಂದು-ಮುಸ್ಲಿಮರು ನಾವೆಲ್ಲರೂ ಒಂದು ಎಂಬ ಭಾವದಿಂದ ಸಹೋದರರಾಗಿ ಬಾಳಬೇಕು ಎಂಬುದು ಇವರ ಮೂಲ ಮಂತ್ರವಾಗಿತ್ತು. ಹಿಂದು-ಮುಸ್ಲಿಮರು ಒಂದಾದರೆ ತಾವು ಗಂಟುಮೂಟೆ ಕಟ್ಟಿಕೊಂಡು ಹೊರಡಬೇಕಾಗುತ್ತದೆಂದು ಬ್ರಿಟಿಷರಿಗೆ ಅರ್ಥವಾಯಿತು. ಅವರು ಈ ಒಗ್ಗಟ್ಟನ್ನು ಮುರಿಯಲು ಸರ್ವಪ್ರಯತ್ನಗಳನ್ನು ಮಾಡಿದರು. ಹಿಂದು-ಮುಸ್ಲಿಮರು ಅನ್ಯೋನ್ಯವಾಗಿ ಇರಬೇಕೆಂದು ಸಾರುತ್ತಿದ್ದ ಆಜಾದರು ಬ್ರಿಟಿಷ್‌ ಸರ್ಕಾರದ ಹಾದಿಯಲ್ಲಿ ಮುಳ್ಳಾದರು. ಬ್ರಿಟಿಷರ ಜನ ವಿರೋಧಿ ನೀತಿ, ಭಾರತೀಯ ನಾಗರಿಕರಿಗೆ ನೀಡುತ್ತಿರುವ ಕಿರುಕುಳ ಮುಂತಾದ ಕ್ರಾಂತಿಕಾರಿ ವಿಚಾರಗಳನ್ನು ಅಲ್‌ ಹಿಲಾಲ್‌ ವಾರಪತ್ರಿಕೆಯ ಮೂಲಕ ಜನರಿಗೆ ಮುಟ್ಟಿಸುತ್ತಿದ್ದರು. ಈ ಪತ್ರಿಕೆಯ 26000 ಪ್ರತಿಗಳು ಮಾರಾಟವಾಗುತ್ತಿದ್ದವು. ಇದರಿಂದ ಕೆಂಡಾಮಂಡಲವಾದ ಬ್ರಿಟಿಷ್‌ ಸರ್ಕಾರ 1914ರಲ್ಲಿ ಅಲ್‌ ಹಿಲಾಲ್‌ ಪತ್ರಿಕೆಯ ಮೇಲೆ ನಿಷೇಧ ಹೇರಿತು. ಇದರಿಂದ ವಿಚಲಿತರಾಗದ ಆಜಾದರು ಕೆಲವೇ ತಿಂಗಳಲ್ಲಿ ಅಲ್‌ ಬಲಾಘ… ಎನ್ನುವ ಮತ್ತೂಂದು ವಾರಪತ್ರಿಕೆಯನ್ನು ಪ್ರಾರಂಭಿಸಿ ಮೊದಲಿನಂತೆಯೇ ಬ್ರಿಟಿಷ್‌ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದರು. ಸರ್ಕಾರವು ಇವರಿಗೆ ರಾಂಚಿಯನ್ನು ಬಿಟ್ಟು ಹೊರಹೋಗಕೂಡದೆಂದು ನಿರ್ಬಂಧ ವಿಧಿಸಿತು.

ಬ್ರಿಟಿಷ್‌ ಸರ್ಕಾರ ಭಾರತದ ಆಡಳಿತದಲ್ಲಿ ಕೆಲವು ಸುಧಾರಣೆಗಳನ್ನು ಘೋಷಿಸಿತು. ಆದರೆ ಇವು ಏನೂ ಸಾಲದು ಹಾಗೂ ಜನಪರ ಸುಧಾರಣೆಗಳಲ್ಲ ಎಂದು ಆಜಾದರು ವಿರೋಧಿಸಿದರು. ಸರ್ಕಾರ ಮತ್ತೆ ಇವರನ್ನು ಒಂದು ವರ್ಷಕಾಲ ಸೆರೆಮನೆಯಲ್ಲಿ ಬಂಧಿಸಿಡುತ್ತದೆ. ಸದಾ ರಾಷ್ಟ್ರದ ಏಕತೆಯನ್ನು ಪ್ರತಿಪಾದಿಸುತ್ತಿದ್ದ ಆಜಾದರು ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದರು. 1942ರ ಭಾರತ ಬಿಟ್ಟು ತೊಲಗಿ ಚಳವಳಿ ಪ್ರಾರಂಭವಾಗುತ್ತಲೇ ಸರ್ಕಾರ ಇವರನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿತು. 1945ರಲ್ಲಿ ಕಾಂಗ್ರೆಸ್‌ ನಾಯಕರ ಬಿಡುಗಡೆಯಾಯಿತು. ಅಲ್ಲಿಂದ ಸುಮಾರು ಒಂದು ವರ್ಷ ಕಾಲ ಬ್ರಿಟಿಷ್‌ ಸರ್ಕಾರದೊಂದಿಗೆ ಮಾತುಕತೆಗಳಾದವು. ಆಗ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಆಜಾದರು ಹಿಂದು-ಮುಸ್ಲಿಮರ ಸ್ನೇಹದ ತಮ್ಮ ನೀತಿಯನ್ನು ಪ್ರತಿಪಾದಿಸಿದರು. ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನದ ಬೇಡಿಕೆಯನ್ನಿಟ್ಟ ಮುಸ್ಲಿಮರೆಲ್ಲರೂ ಆಜಾದರನ್ನು ಮೂದಲಿಸಿದರು, ಅವಹೇಳನ ಮಾಡಿದರು. ಆದರೆ ಆಜಾದರು ಹಿಂದು-ಮುಸ್ಲಿಮರ ಏಕತೆಯ ತಮ್ಮ ದೃಢನಂಬಿಕೆಯನ್ನು ಬಿಟ್ಟುಕೊಡಲಿಲ್ಲ.

ದೇಶದ ಮೊದಲ ಶಿಕ್ಷಣ ಮಂತ್ರಿ

ಸ್ವತಂತ್ರ ಭಾರತದ ಜವಾಹರಲಾಲ್‌ ನೆಹರೂ ಮಂತ್ರಿ ಮಂಡಲದಲ್ಲಿ 1958ರ ಫೆಬ್ರುವರಿ 22ರವರೆಗೂ ಭಾರತ ಸರ್ಕಾರದ ಮೊಟ್ಟಮೊದಲ ವಿದ್ಯಾ ಮಂತ್ರಿಯಾಗಿ ಆಜಾದ್‌ ಕಾರ್ಯನಿರ್ವಹಿಸಿದರು. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಲವಾರು ಫ‌ಲಪ್ರದ ಯೋಜನೆಗಳನ್ನು ಜಾರಿಗೊಳಿಸಿದರು. ವೈಜಾnನಿಕ ಶಿಕ್ಷಣಕ್ಕೆ ಮಹತ್ವ ನೀಡಿದ್ದಲ್ಲದೆ, ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದರು. ಇಂದಿನ ವಿದ್ಯಾರ್ಥಿಗಳ ಪ್ರಥಮಾದ್ಯತೆಯ ಐಐಟಿ ಸಂಸ್ಥೆ ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸ್ಥಾಪನೆ ಮಾಡಿದ ಕೀರ್ತಿ ಆಜಾದರಿಗೆ ಸಲ್ಲುತ್ತದೆ. ಇವರ ಪ್ರಸಿದ್ಧ ಆತ್ಮಕಥನ "ಇಂಡಿಯಾ ವಿನ್ಸ್‌ ಫ್ರೀಡಂ' ಪ್ರಸಿದ್ಧಿಯ ಜೊತೆಗೆ ಚರ್ಚಾಸ್ಪದ ಕೃತಿಯಾಗಿದೆ. ಸರ್ಕಾರವು ಮೌಲಾನಾ ಆಜಾದ್‌ರ ಕೊಡುಗೆಗಳನ್ನು ಗಣಿಸಿ 1992ರಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಿ ಅವರ ಕೊಡುಗೆಗಳನ್ನು ಗೌರವಿಸಿದೆ.

ಆಜಾದ್‌ ಕನಸು ನನಸಾಗಿಸೋಣ

ರಾಷ್ಟ್ರಮಟ್ಟದಲ್ಲಿ ಈಗ ಶಿಕ್ಷಣ ಸಚಿವಾಲಯ ಇಲ್ಲ. ಅದೇ ಮಾನವ ಸಂಪನ್ಮೂಲ ಸಚಿವಾಲಯವಾಗಿದೆ. ಆಜಾದ್‌ರ ಕಾಲದಿಂದ ಇಲ್ಲಿಯವರಗೆ ದೇಶದ ಶಿಕ್ಷಣ ವ್ಯವಸ್ಥೆ ಹಲವು ಹಂತಗಳನ್ನು ದಾಟಿ ಮುಂದೆ ಬಂದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತ ಎಷ್ಟೇ ಸುಧಾರಿಸಿದೆ ಎಂದು ನಾವು ಹೇಳಿದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳು ಇನ್ನೂ ಉಳಿದುಕೊಂಡಿವೆ. ಮುಖ್ಯವಾಗಿ, ಮಕ್ಕಳಿಗೆ ಬದುಕುವ ಶಿಕ್ಷಣವನ್ನು ನಾವು ನೀಡುತ್ತಿಲ್ಲ. ಉದ್ಯೋಗ ಗಿಟ್ಟಿಸಿಕೊಳ್ಳುವ ಶಿಕ್ಷಣವನ್ನಷ್ಟೇ ನೀಡುತ್ತಿದ್ದೇವೆ.

ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ರ ಜನ್ಮದಿನವನ್ನು ಶಿಕ್ಷಣ ದಿನವನ್ನಾಗಿ ಆಚರಿಸುವ ನಾವು ಇದನ್ನು ಕೇವಲ ಸಾಂಕೇತಿಕ ಆಚರಣೆಗಷ್ಟೇ ಸೀಮಿತಗೊಳಿಸಬಾರದು. ಹಾಗೆ ಮಾಡಿದರೆ ಅದು ಆಜಾದ್‌ ಅವರ ವ್ಯಕ್ತಿತ್ವಕ್ಕೆ ಎಸಗುವ ಅಪಚಾರ. ದೇಶದ ಶಿಕ್ಷಣ ಕ್ಷೇತ್ರಕ್ಕೆ ಆರಂಭಿಕ ದಿನಗಳಲ್ಲಿ ಭದ್ರ ಬುನಾದಿ ಹಾಕಿದ ಆಜಾದ್‌ ಜನಿಸಿ ಇಂದಿಗೆ 126 ವರ್ಷಗಳಾದವು. ಈಗಲೂ ನಾವು ಶೈಕ್ಷಣಿಕ ಸುಧಾರಣೆಯ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ನಿಜವಾದ ಶ್ರಮ ಹಾಕಿ ಶಿಕ್ಷಣ ವ್ಯವಸ್ಥೆಯನ್ನು ಮೇಲೆತ್ತುತ್ತಿಲ್ಲ ಎಂಬುದು ವಿಪರ್ಯಾಸ.

"ಶಿಕ್ಷಣವೆಂಬುದು ಎಲ್ಲರ ಆಜನ್ಮ ಸಿದ್ಧ ಹಕ್ಕು. ಅದನ್ನು ಪಡೆಯದೆ ವ್ಯಕ್ತಿಯೊಬ್ಬ ಪರಿಪೂರ್ಣ ಪ್ರಜೆಯಾಗಲಾರ' ಎಂದು 50 ವರ್ಷಗಳ ಹಿಂದೆಯೇ ಆಜಾದ್‌ ಹೇಳಿದ್ದರು. ಇಂದಿಗೂ ನಮ್ಮಲ್ಲಿ ಶಿಕ್ಷಣದಿಂದ ವಂಚಿತರಾಗುವ ಲಕ್ಷಾಂತರ ಮಕ್ಕಳಿದ್ದಾರೆ. ಭಾರತ ಬೆಳೆಯುತ್ತಿದೆ ಎಂದು ಹೇಳಿಕೊಳ್ಳುವ ನಾವು, ಪ್ರತಿಯೊಂದು ಮಗುವಿಗೂ ಕನಿಷ್ಠ ಶಿಕ್ಷಣ ಸಿಗುವಂತೆ ಮಾಡುವಲ್ಲಿ ಎಲ್ಲಿಯವರೆಗೆ ಯಶಸ್ವಿಯಾಗುವುದಿಲ್ಲವೋ ಅಲ್ಲಿಯವರೆಗೆ ಆಜಾದ್‌ರ ಕನಸು ನನಸಾಗದು.

ಮಾಹಿತಿ ಕೃಪೆ : ಉದಯವಾಣಿ
Share:

Action plan 10th - Laxmikant Mamadapur


Share:

PADABANDH 6

DOWNLOAD
Share:

PADABANDHA 5

 DOWNLOAD
Share:

PADABANDHA4


DOWNLOAD
Share:

PADABANDHA 3


DOWNLOAD
Share:

PADABANDHA 2

DOWNLOAD

Share:

ಪದಬಂದ learning games 1

                                                               DOWNLOAD HERE
Share:

8th CSAS Notes


                               Download
Share:

9th CSAS CHANAKYA


                           Download Here
Share:

ಯುವ ಸಬಲೀಕರಣ ಮತ್ತು ಕ್ರೀಡೆ :

ಯುವ ಸಬಲೀಕರಣ ಮತ್ತು ಕ್ರೀಡೆ :

     ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು 1969 ರಲ್ಲಿ ಯುವಜನ ಸೇವಾ ನಿರ್ದೇಶನಾಲಯವನ್ನಾಗಿ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಲು ಸ್ಥಾಪಿಸಲಾಯಿತು. ಇಲಾಖೆಯನ್ನು ವಿಭಾಗ ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ಕಛೇರಿಗಳನ್ನು ತೆರೆಯುವ ಮೂಲಕ 1975 ರಲ್ಲಿ ಮತ್ತು ತಾಲೂಕು ಅಧಿಕಾರಿಗಳನ್ನು 1977 ರಲ್ಲಿ ನೇಮಿಸುವುದರ ಮೂಲಕ ಪುನರ್ ರಚಿಸಲಾಯಿತು. ಕರ್ನಾಟಕ ರಾಜ್ಯ ಸ್ಪೋರ್ಟ್ಸ್  ಕೌನ್ಸಿಲನ್ನು 1980 ರಲ್ಲಿ ಇಲಾಖೆಯಲ್ಲಿ ವಿಲೀನಗೊಳಿಸಿ ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ಯುವನೀತಿಯನ್ನು 2013 ರಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಯುವನೀತಿಯ ಶಿಫಾರಸ್ಸಿನಂತೆ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ನಿರ್ದೇಶಕರು/ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಮಹಾ ನಿರ್ದೇಶಕರು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ್ರಿಡಾಂಗಣ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿಗಳು ಆಗಿರುತ್ತಾರೆ.

ಧ್ಯೇಯೋದ್ದೇಶಗಳು:

1. ರಾಜ್ಯದ ಯುವಜನರನ್ನು ತಲುಪಲು ಎಲ್ಲ ಸ್ಥರಗಳಲ್ಲಿ ಅವಕಾಶ ಕಲ್ಪಿಸುವುದು.
ರಾಜ್ಯದ ಯುವಜನರ ಗುರಿ, ಆಶೋತ್ತರ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳವುದು.
2. ರಾಜ್ಯದ ವೈವಿಧ್ಯಮಯ ಸಾಂಸ್ಕøತಿಕ ಸಂರಚನೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗನುಗುಣವಾಗಿ ರಾಜ್ಯದೆಲ್ಲೆಡೆ ಹರಡಿಕೊಂಡಿರುವ ನಮ್ಮ ಯುವಜನರ ವಿವಿಧ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವುದು.
3. ಕರ್ನಾಟಕ ರಾಜ್ಯದ ಯುವಜನರನ್ನು ದೃಷ್ಠಿಯಲ್ಲಿರಿಸಿಕೊಂಡು ಅವರಿಗಾಗಿ ಅಲ್ಪಾವಧಿ ಹಾಗೂ ದೀಘಾವಧಿ ಯೋಜನೆಗಳನ್ನು ರೂಪಿಸುವುದು.
4. ಯುವಜನರ ಆಂತರಿಕ ಸಾಮಥ್ರ್ಯವನ್ನು ವೃದ್ದಿಗೊಳಿಸಲು ಅವಕಾಶಗಳನ್ನು ಕಲ್ಪಿಸಿ, ಅವರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುವುದು.
5. ರಾಜ್ಯದ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾಲುದಾರರಾಗಲು, ಜೊತೆಗೆ ಬಹುಮುಖಿ ವಲಯಗಳಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಯುವಜನರಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವುದು.
6. ಯುವಜನ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ಉದ್ದೇಶಿತ ಫಲಿತಾಂಶಗಳನ್ನು ಈಡೇರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು.

ದೃಷ್ಟಿಕೋನ : ನಮ್ಮ ಸಮಾಜ, ಕರ್ನಾಟಕ, ಭಾರತ ಮತ್ತು ವಿಶ್ವದ ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾಗುವಂತೆ ಯುವಜರನ್ನು ಪ್ರೇರೆಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು.

ಯೋಜನೆಗಳು :

1. ಗ್ರಾಮೀಣ ಕ್ರೀಡೋತ್ಸವ -  ಎಲ್ಲಾ 176 ತಾಲ್ಲೂಕುಗಳಲ್ಲಿ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ‘ಗ್ರಾಮೀಣ ಕ್ರೀಡೋತ್ಸವ’ ಆಯೋಜಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ವಾರ್ಷಿಕ ರೂ 1.50 ಲಕ್ಷಗಳನ್ನು ಒದಗಿಸಲಾಗುತ್ತಿದೆ.

2. ಕರ್ನಾಟಕ ಕ್ರೀಡಾ ರತ್ನ -  ಗ್ರಾಮೀಣ, ದೇಸೀ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ‘ಕರ್ನಾಟಕ ಕ್ರೀಡಾ ರತ್ನ’ ಎಂಬ ನೂತನ ಪ್ರಶಸ್ತಿಯನ್ನು 2014-15ನೇ ಸಾಲಿನಿಂದ ನೀಡುತ್ತಿದ್ದು, ಪ್ರಶಸ್ತಿಯು ರೂ 1.00 ಲಕ್ಷಗಳ ನಗದು ಬಹುಮಾನ, ಪ್ರಮಾಣ ಪತ್ರಗಳನ್ನೊಳಗೊಂಡಿರುತ್ತದೆ.

3. ಶೈಕ್ಷಣಿಕ ಶುಲ್ಕ ಮರುಪಾವತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾಗುತ್ತಿದೆ.  .

4. ಕ್ರೀಡಾ ವಿದ್ಯಾರ್ಥಿ ವೇತನ -  ರಾಜ್ಯ ಮಟ್ಟದಲ್ಲಿ ಪದಕ ವಿಜೇತರಾಗಿ ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000/- ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.  

5. ಯುವ ಕ್ರೀಡಾ ಸಂಜೀವಿನಿ -  ರಾಜ್ಯದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯ ಭದ್ರತೆ ಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆ ಅತಿವಿನೂತನ ‘ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ’ ಯನ್ನು ಪ್ರಾರಂಭಿಸಿದೆ.  ರಾಜ್ಯ, ರಾಷ್ಟ್ರ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

6. ಯುವ ಕ್ರೀಡಾ ಮಿತ್ರ - 2015-16ನೇ ಸಾಲಿನ ಆಯವ್ಯಯದಲ್ಲಿ ‘ಯುವ ಕ್ರೀಡಾ ಮಿತ್ರ’ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ ಪ್ರತಿ ಹೋಬಳಿಗೊಂದು ಯುವ ಕ್ರೀಡಾ ಸಂಘವನ್ನು ಗುರುತಿಸಿ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆ ನಿಲಯಗಳಿಗೆ ಕಳುಹಿಸಲು ಪ್ರೋತ್ಸಾಹಧನವಾಗಿ ವಾರ್ಷಿಕ ರೂ 25,000/-ಗಳನ್ನು ನೀಡಲಾಗುವುದು.

7. ನಗದು ಪುರಸ್ಕಾರ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಯೋಜನೆಯನ್ನು ಇಲಾಖೆಯು ಅನುಷ್ಥಾನಗೊಳಿಸುತ್ತಿದೆ.

8. ಏಕಲವ್ಯ ಪ್ರಶಸ್ತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯು ರೂ 2.00 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ.

9. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ - ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾ ಮೀಸಲಾತಿ ಅಡಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

10. ಕ್ರೀಡಾಕೂಟಗಳ ಸಂಘಟನೆ - ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರತಿ ವರ್ಷ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.  ಅದೇ ರೀತಿ, ಮಹಿಳಾ, ಗ್ರಾ

ಮೀಣ, ಮತ್ತಿತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.  

11. ಮಾಸಾಶನ ಯೋಜನೆ - 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ವಾರ್ಷಿಕ ಆದಾಯ ರೂ 20,000/- ಗಳಿಗಿಂತ ಕಡಿಮೆ ಇರುವ ಮಾಜಿ ಕುಸ್ತಿ/ಕ್ರೀಡಾಪಟುಗಳಿಗೆ ಮಾಸಾಶನವನ್ನು ನೀಡಲಾಗುತ್ತಿದೆ.
ರಾಜ್ಯ ಮಟ್ಟ-ರೂ 750/- ರಿಂದ 1,500/-,
ರಾಷ್ಟ್ರ ಮಟ್ಟ ರೂ 1,000/- ರಿಂದ ರೂ 2,000/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 3,000/- ರಂತೆ ಮಾಜಿ ಪೈಲ್ವಾನರುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ.

ರಾಜ್ಯ ಮಟ್ಟ-ರೂ 750/- ರಿಂದ ರೂ 1,000/-,
ರಾಷ್ಟ್ರ ಮಟ್ಟ ರೂ 1,000/-ರಿಂದ ರೂ 1,500/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 2,000/- ರಂತೆ ಮಾಜಿ ಕ್ರೀಡಾಪಟುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ. ಸದರಿ ಯೋಜನೆಯನ್ನು ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆ ಅಡಿಯಿಂದ ಅನುಷ್ಥಾನಗೊಳಿಸಲಾಗುತ್ತಿದೆ.

12. ರಾಜೀವ್ ಗಾಂಧಿ ಖೇಲ್ ಅಭಿಯಾನ್ - ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟವನ್ನು (16 ವರ್ಷ ಒಳಗಿನ ಬಾಲಕ-ಬಾಲಕಿಯರು) ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹಾಗೂ ಮಹಿಳಾ ಕ್ರೀಡಾಕೂಟವನ್ನು (25 ವರ್ಷದೊಳಗಿನ ಮಹಿಳೆಯರಿಗೆ) ಜಿಲ್ಲೆ ಮತ್ತು ರಾಜ್ಯಮಟ್ಟಗಳಲ್ಲಿ ಸಂಘಟಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ನಿಯೋಜಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಕ್ರೀಡಾ ಕಿಟ್ ಮತ್ತು ತರಬೇತಿಯನ್ನು ನೀಡಲಾಗುತ್ತಿದೆ.

13. ‘ನಮ್ಮೂರ ಶಾಲೆಗೆ ನಮ್ಮ ಯುವಜನರು’  ಕಾರ್ಯಕ್ರಮ - ತಮ್ಮೂರ ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲ್ಲೂಕಿಗೆ ಒಂದರಂತೆ ಗುರುತಿಸಿ ರೂ 1.00 ಲಕ್ಷ ನಗದು ಪುರಸ್ಕಾರ ನೀಡುವ ಯೋಜನೆ.  2015-16 ನೇ ಸಾಲಿನಲ್ಲಿ ಎಲ್ಲಾ 176 ತಾಲ್ಲೂಕುಗಳ ಉತ್ತಮ ಯುವ ಸಂಘಗಳಿಗೆ ತಲಾ ರೂ 2.00 ಲಕ್ಷ ವಿತರಿಸಲಾಗಿದೆ.

14. ‘ಯುವ ಸ್ಪಂದನ’ ಕಾರ್ಯಕ್ರಮ - ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಯುವಜನರಿಗೆ ಮತ್ತು ಪೋಷಕರಿಗೆ ಆಪ್ತ ಸಮಾಲೋಚನಾ ಸೌಲಭ್ಯ ಒದಗಿಸುವ ಮತ್ತು ಯುವಜನರನ್ನು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡುವ ಕಾರ್ಯಕ್ರಮ.

15. ‘ಯುವ ಶಕ್ತಿ ಕೇಂದ್ರ’: ರಾಜ್ಯದ 30 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಗುರುತಿಸಲಾಗಿದ್ದು.  30 ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಲಾ ರೂ. 15.00 ಲಕ್ಷಗಳ ವೆಚ್ಚದಲ್ಲಿ ಮಲ್ಟಿ ಜಿಮ್ ಸೌಲಭ್ಯಗಳನ್ನೊಳಗೊಂಡ ಯುವ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

16. ಯುವಜನೋತ್ಸವ- ಯುವಜನರ ಶಾಸ್ತ್ರೀಯ ಪ್ರತಿಭೆ ಅನಾವರಣಕ್ಕೆ ಜಿಲ್ಲೆಯಿಂದ ರಾಷ್ಟ್ರ ಮಟ್ಟದವರೆಗಿನ ಸ್ಪರ್ಧೆ.

17. ಯುವಜನ ಮೇಳ- ಯುವಜನರಲ್ಲಿನ ಜಾನಪದ ಪ್ರತಿಭೆ ಅನಾವರಣಕ್ಕೆ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆ.

18. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ- ಸಂಘಟಿತ ಚಟುವಟಿಕೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಯುವಜನರನ್ನು ಮತ್ತು ಯುವ ಸಂಘಗಳನ್ನು ಗುರುತಿಸಿ, ಗೌರವಿಸಲು ನೀಡುವ ವಾರ್ಷಿಕ ಪ್ರಶಸ್ತಿ.

19. ಕ್ರೀಡಾ ಮೂಲ ಸೌಕರ್ಯಗಳ ಸೃಜನೆ -  ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು, ಆಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ಗಳು, ಹಾಕಿ/ಫುಟ್ಬಾಲ್ ಟರ್ಫ್ಗಳು, ಗರಡಿ ಮನೆಗಳು ಸೇರಿದಂತೆ ಅಗತ್ಯ ಕ್ರೀಡಾ ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ.

20. ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕೆಳಕಾಣಿಸಿದ ಕ್ರಮ ಕೈಗೊಳ್ಳಲಾಗುತ್ತಿದೆ.

21. ಅಂತರ-ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿಯಮಾನುಸಾರ ವಿಮಾನ ಪ್ರಯಾಣ ವೆಚ್ಚ ಮರುಪಾವತಿ ಮಾಡಲಾಗುತ್ತಿದೆ.

22. ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ ಆಯೋಜಿಸಲು ಹಾಗೂ ರಾಷ್ಟ್ರ ಮಟ್ಟಕ್ಕೆ ತಂಡವನ್ನು ನಿಯೋಜಿಸಲು ಅನುದಾನ ಸಂಹಿತೆ ನಿಯಮಾವಳಿ ಅನುಸಾರ ಅನುದಾನ ನೀಡಲಾಗುತ್ತಿದೆ.

23. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ -  ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಭೂ ಸಾಹಸ, ಜಲಸಾಹಸ ಮತ್ತು ವಾಯು ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಯುವಜನರಿಗೆ ಆದ್ಯತೆ ನೀಡಲಾಗುತ್ತಿದೆ.

ಮಾಹಿತಿ ಮೂಲ: ಮೆಸೆಂಜರ್ ಗ್ರುಪ್ ಗಳು
Share:

ಕೆಲವು ಮಹತ್ವವಾದ ಸಂವಿಧಾನದ ವಿಧಿಗಳು


🔘 ಕೆಲವು ಮಹತ್ವವಾದ ಸಂವಿಧಾನದ ವಿಧಿಗಳು

* 17 ನೇ ವಿಧಿ : ಅಸ್ಪೃಶ್ಯತೆ ನಿರ್ಮೂಲನೆ

* 21 (ಎ) ವಿಧಿ : ಶಿಕ್ಷಣದ ಹಕ್ಕು

* 45 ನೇ ವಿಧಿ : ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ

* 51 (ಎ) ವಿಧಿ : ಮೂಲಭೂತ ಕರ್ತವ್ಯಗಳು

* 52 ನೇ ವಿಧಿ : ಭಾರತದ ರಾಷ್ಟ್ರಪತಿಗಳನೇಮಕ

* 63 ನೇ ವಿಧಿ : ಉಪರಾಷ್ಟ್ರಪತಿಗಳ ನೇಮಕ

* 72 ನೇ ವಿಧಿ : ರಾಷ್ಟ್ರಪತಿಗಳಿಗಿರುವ ಕ್ಷಮಾದಾನ ಅಧಿಕಾರ

* 112 ನೇ ವಿಧಿ : ಕೇಂದ್ರ ವಾರ್ಷಿಕ ಮುಂಗಡ ಪತ್ರ

* 124 ನೇ ವಿಧಿ : ಸರ್ವೋಚ್ಛ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ

* 202 ನೇ ವಿಧಿ : ರಾಜ್ಯ ವಾರ್ಷಿಕ ಮುಂಗಡ ಪತ್ರ

* 153 ನೇ ವಿಧಿ : ರಾಜ್ಯಪಾಲರ ನೇಮಕ

* 214 ನೇ ವಿಧಿ : ರಾಜ್ಯ ಉಚ್ಛ ನ್ಯಾಯಾಲಯಗಳ ಸ್ಥಾಪನೆ

* 280 ನೇ ವಿಧಿ : ಕೇಂದ್ರ ಹಣಕಾಸು ಆಯೋಗ

* 324 ನೇ ವಿಧಿ : ಚುನಾವಣಾ ಆಯೋಗ

* 352 ನೇ ವಿಧಿ : ರಾಷ್ಟ್ರೀಯ ತುರ್ತು ಪರಿಸ್ಥಿತಿ

* 356 ನೇ ವಿಧಿ : ರಾಜ್ಯ ತುರ್ತು ಪರಿಸ್ಥಿತಿ

* 360 ನೇ ವಿಧಿ : ಹಣಕಾಸಿನ ತುರ್ತು ಪರಿಸ್ಥಿತಿ

* 368 ನೇ ವಿಧಿ : ಸಂವಿಧಾನದ ತಿದ್ದುಪಡಿ

* 370 ನೇ ವಿಧಿ : ಜಮ್ಮು & ಕಾಶ್ಮೀರಕ್ಕೆ ವಿಶೇಷ ಉಪಬಂಧಗಳು.
Share:

📘ಭಾರತದ ಸಂವಿಧಾನ📘

📘ಭಾರತದ ಸಂವಿಧಾನ📘
1)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?
📖ಎಂ.ಎನ್.ರಾಯ್
2)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?
📖ಜವಹಾರ್ ಲಾಲ್ ನೆಹರು
3)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
📖1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ
4)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?
📖ಸಂವಿಧಾನದ ಭಾಗಗಳು - 22
ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8
5)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
📖ಭಾರತ ಸಂವಿಧಾನ
6)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
📖"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ
7)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?
📖1773 ರ ರೆಗ್ಯುಲೇಟಿಂಗ್ ಆಕ್ಟ್
8)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
📖1853ರ ಚಾರ್ಟರ್ ಆಕ್ಟ್
9) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?
📖1858 ರ ಮ್ಯಾಗ್ನಕಾರ್ಟ ನ್ನು.
9)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
📖1858ರ ಭಾರತ ಸರ್ಕಾರ ಕಾಯಿದೆ
10)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?
📖ಭಾರತ ಸರ್ಕಾರ ಕಾಯಿದೆಯ ಮೂಲಕ
11)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ
12)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
📖1909 ರ ಮಿಂಟೋ ಮ
 ಮಾರ್ಲೇ ಸುಧಾರಣೆ ಕಾಯ್ದೆ
13) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
📖1919.
14)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?
📖ಸಂವಿಧಾನ.
15)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
📖ಪ್ರಜೆಗಳ.
16)ಸಂವಿಧಾನದ ಹೃದಯ ಯಾವುದು?
📖ಪ್ರಸ್ತಾವನೆ.
17) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
📖ಭಾರತ.
18) ಭಾರತದ ಸಂವಿಧಾನದ ಆದರ್ಶವೇನು?
📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.
19) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
📖ನವೆಂಬರ್ 26.
20)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
📖ಕ್ಯಾಬಿನೆಟ್ ಆಯೋಗ
21)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
📖 1946 ರಲ್ಲಿ.
22)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
📖ಡಾ.ಬಾಬು ರಾಜೇಂದ್ರ ಪ್ರಸಾದ್
23)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
📖 1946, ಡಿಸೆಂಬರ್ 9.
24) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
📖ಡಾ.ಸಚ್ಚಿದಾನಂದ ಸಿನ್ಹಾ.
25) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
📖ಬಿ.ಎನ್.ರಾಯ್.
26) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
📖ಬೆನಗಲ್ ನರಸಿಂಹರಾವ್.
27) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
📖 ಪ್ರೊ.ಎಚ್.ಸಿ. ಮುಖರ್ಜಿ.
28) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
📖 22.
29)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು
30)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
📖ಡಾ.ಬಿ.ಆರ್.ಅಂಬೇಡ್ಕರ್
31) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?
📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್
32)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ
ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?
📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ
33) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
📖 2 ವರ್ಷ 11 ತಿಂಗಳು 18 ದಿನ.
34)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
📖1951 ರಲ್ಲಿ.
 35) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
📖ಸುಕುಮಾರ ಸೇನ್.
36) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
📖 26 ನವೆಂಬರ್ 2015.
37)ಭಾರತದ ಸಂವಿಧಾನವು
📖ದೀರ್ಘ ಕಾಲದ ಸಂವಿಧಾನ
38)ಭಾರತ ಸಂವಿಧಾನದ ಸ್ವರೂಪವು
📖ಸಂಸದೀಯ ಪದ್ದತಿ
39)ಭಾರತದ ಸಂವಿಧಾನವು ಒಂದು
📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ
40)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?
📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ
41) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
📖ಸರ್ವೋಚ್ಚ ನ್ಯಾಯಾಲಯ.
42) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?
📖 ಕಾನೂನುಗಳು.
43) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
📖ಭಾಗ-3
44)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
📖ಐರಿಷ್ ಸಂವಿಧಾನದಿಂದ
45) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
Share:

ದೀಪಾವಳಿ ಹಬ್ಬದ ಶುಭಾಶಯಗಳು














ಕಹಿ ನೆನಪುಗಳನ್ನ ಹಣತೆ ಹಚ್ಹೊದ್ರ ಮೂಲಕ ಸುಟ್ಟು ಹಾಕ್ಬಿಡಿ.
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ
ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ...



ದೀಪಾವಳಿ: ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.



ದೀಪಾವಳಿ ಅರ್ಥ ಏನು?

ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.



ಮೊದಲಾಗಿ ದೀಪಾವಳಿ ಆಚರಣೆ ಬಗ್ಗೆ ಬರೆಯುವುದಿದ್ದರೆ ಮೂಲವಾಗಿ ಪೌರಾಣಿಕವಾಗಿ ಅಂತಹಾ ಮಹತ್ವವಿಲ್ಲದಿದ್ದರೂ ಅಂದಾಜು ೩ ಸಾವಿರ ವರ್ಷದ ಅಧಿಕೃತ ಇತಿಹಾಸವಿದೆ. ಅದು ದೀಪಾವಳಿಯಾಗಿ ಆಚರಣೆಯಲ್ಲಿತ್ತು. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ದೀಪಗಳ ಸಾಲು ಸಾಲನ್ನೇ ಹಚ್ಚುವ ಉದ್ದೇಶವೇನು? ಅದರ ಹಿನ್ನೆಲೆಯೇನು? ನಂತರ ಅದರ ಹಿಂದೆ ಮುಂದೆ ಸೇರಿದ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲೀಂದ್ರಪೂಜಾ, ಲಕ್ಷ್ಮೀಪೂಜಾ, ಯಮದ್ವಿತೀಯ, ಗೋಪೂಜಾದಿಗಳು ಹೇಗೆ ಸೇರಿದವು ಎಂಬುದರ ಬಗ್ಗೆ ಕೂಡ ಚಿಂತಿಸಬೇಕಿದೆ.

ನೀರು ತುಂಬುವ ಹಬ್ಬ :-

ರೈತಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎಂದರು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಆಚರಣೆಗೂ ಧೈವೀಕ ಹಿನ್ನೆಲೆ ಕೊಡುವುದು ಶಿಷ್ಟಾಚಾರ. ಹಾಗಾಗಿನರಕಾಸುರ ವಧೆಯ ಶುದ್ಧ್ಯರ್ಥ ಸ್ನಾನವೆಂದರು. ನರಕಾಸುರ ಭೂಮಿಪುತ್ರ. ವರಾಹಸ್ವರೂಪಿ ನಾರಾಯಣನ ಮಗ. ಇಲ್ಲಿ ಜುಂಗುಗಳೂ ಭೂ ಉತ್ಪನ್ನಗಳೇ. ಕೃಷಿಯಿಂದ ಬಂದದ್ದಲ್ಲ. ಎಲ್ಲರಿಗೂ ತುರಿಕೆ ಒಂದು ವಿಚಿತ್ರ ಕಾಟವೇ. ಆಡಲಾರದ, ಅನುಭವಿಸಲಾರದ ಕಷ್ಟ. ಅದರ ನಾಶವೆಂದರೆ ಸತ್ಯವೇ ಅಲ್ಲವೆ? ಒಟ್ಟಾರೆ ಈ ಶರದೃತುವಿನಲ್ಲಿ ಹೆಚ್ಚಿನವರು ಚರ್ಮ ರೋಗಾದಿ ಬಾಧೆಗಳನ್ನು ಅನುಭವಿಸುವುದು ಸತ್ಯ. ಇನ್ನು ಶ್ರೀಕೃಷ್ಣನು ತನ್ನ ಸರಳ ಜೀವನದಲ್ಲಿಯೂ ಇದನ್ನು ಆಚರಿಸಿ ತೋರಿದ್ದರಿಂದ ಕೃಷ್ಣನಿಗೆ ಈ ದಿನವನ್ನು ಸಮರ್ಪಿಸಿ ಹಬ್ಬ ಆಚರಿಸುವುದು ಸಾಧುವಲ್ಲವೆ? ನಂತರ ಅಮಾವಾಸ್ಯೆಯಂದು ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ.

ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ, ಗೋಪೂಜೆ

ರೈತಾಪಿ ವರ್ಗ ತಾವು ಬೆಳೆದ ಧಾನ್ಯಗಳನ್ನು ಒಟ್ಟಾಗಿ ರಾಶಿ ಹಾಕಿ ಗೌರವಿಸುವುದು ಉತ್ತಮ ಸಂಪ್ರದಾಯ. ಹಾಗೇ ಬಲಿಚಕ್ರವರ್ತಿಯ ದಾನ ಪ್ರವೃತ್ತಿಯಿಂದಾಗಿ ಸೋಮಾರಿತನ ಹೆಚ್ಚಿಸಿಕೊಂಡ ಜನರಿಗೆ ಸದ್ಬುದ್ಧಿ ಬೋಧಿಸಿದ. ಕಾಯಕವೇ ಕೈಲಾಸವೆಂದು ಸಾರಿದ ಶುಭದಿನದ ಹಬ್ಬ ಆಚರಣೆಯೂ ಶುಭಪ್ರದವೇ. ಹಾಗೇ ಗೋಪೂಜಾ:- ಹಿಂದಿನ ಕಾಲದಲ್ಲಿ ಸಂಪತ್ತು ಎಂದರೆ ಗೋವುಗಳೇ. ಅವುಗಳ ವಿನಿಮಯವೇ ವ್ಯಾಪಾರವಾಗಿತ್ತು. ಹಾಗಾಗಿ ಧನಲಕ್ಷ್ಮೀಪೂಜೆ,ಭಗಿನೀ ದ್ವಿತೀಯಾ ಅಥವಾ ಯಮದ್ವಿತೀಯ. ಇದೂ ಕೂಡ ಅದರಲ್ಲಿ ಸೇರಿತು. ಧರ್ಮಮೂರ್ತಿಯಾದ ಯಮನಿಗೆ ನಾವೆಲ್ಲಾ ಧರ್ಮ ಆಚರಣೆ ಪೂರ್ವಕ ಭಾಗಿನೇಯತ್ವದಲ್ಲಿ ಭಗಿನಿಯರಾಗಿ ಆಚರಿಸುವ ಹಬ್ಬ ಅರ್ಥಪ್ರದವಲ್ಲವೇ? ನಾವು ತಿನ್ನುವ ಅನ್ನ, ಬಳಸುವ ಶಕ್ತಿ, ನಮಗೆ ಆದರ್ಶ ಪ್ರಾಯರಾದವರ ನೆನಪಿನ ಆಚರಣೆ ನೂರಾರು. ಆಗಿ ಹೋದ ಸತ್ಪುರುಷರು ದೇಶದ ಧರ್ಮದ ಕಣ್ಮಣಿಗಳು. ಹಲವಾರು ಜನ ಅವರ ಹೆಸರಿನಲ್ಲಿ ಒಂದೊಂದು ದೀಪ ಹಚ್ಚಿದರೂ ಸಾವಿರಾರು ಆಗುತ್ತದೆ. ಅದೇ “ದೀಪಾವಳಿ”.

ಇಂತಹಾ ದೇವರ, ಪುಣ್ಯಪುರುಷರ, ಆದರ್ಶ ವ್ಯಕ್ತಿಗಳನ್ನು ನೆನಪಿಸುವ ದಿನವಾಗಿ ಆಚರಿಸುತ್ತಾ ಅವರ ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ಸಂಸ್ಕೃತಿ ದೀಪಾವಳಿಯಾಯ್ತು. ನಿಧಾನವಾಗಿ ಯಾವುದು ಯಾವುದೋ ಕಾರಣಕ್ಕೆ ಪೌರಾಣಿಕ ಮಹತ್ವ ಪಡೆದುಕೊಂಡಿತು. ಅದು ಹಬ್ಬವಾಗಿ ಆಚರಣೆಗೆ ಬಂತು. ಆದರೆ ಆಗೆಲ್ಲಾ ಈ ಪಟಾಕಿಗಳಿರಲಿಲ್ಲ; ದೀಪಗಳೇ. ದೊಡ್ಡ ದೊಡ್ಡ ದೀಪ, ಎತ್ತರೆತ್ತರದ ದೀಪ ಇವೆಲ್ಲಾ ಇತ್ತು. ಅಂದಾಜು ೨೦೦೦ ವರ್ಷದ ಹಿಂದೆ ಲೋಹಶಾಸ್ತ್ರದಲ್ಲಿ ಉಂಟಾದ ಒಂದು ವಿಶಿಷ್ಟ ಆವಿಷ್ಕಾರದಿಂದ ಅಗ್ನಿದಂಡ = ಈಗಿನ ಮ್ಯಾಗ್ನೇಷಿಯಂ ಕಡ್ಡಿ ಆವಿಷ್ಕಾರಗೊಂಡಿತು. ಈ ವಿಶಿಷ್ಟವಾದ ಲೋಹವು ತನ್ನಲ್ಲಿ ಉಂಟಾದ ಉಷ್ಣತೆಯಿಂದ ತನಗೆ ತಾನೇ ಹತ್ತಿ ಉರಿಯುತ್ತಿತ್ತು. ಆಕರ್ಷಕವಾಗಿತ್ತು. ಅದನ್ನು ಆಗಿನ ಕಾಲದಲ್ಲಿ “ಅಗ್ನಿದಂಡ” ಎನ್ನುತ್ತಿದ್ದರು. ಅದನ್ನು ಉರಿಸುವುದರಿಂದ ಒಂದು ರೀತಿಯ ಪ್ರಖರ ಬೆಳಕು ಬರುತ್ತಿದ್ದುದರಿಂದ ಕೆಲ ರಾಜ ಮಹಾರಾಜರು ತಮ್ಮ ಅರಮನೆಯ ಗೋಪುರದ ಮೇಲೆ ಅದನ್ನು ಉರಿಯುವಂತೆ ಮಾಡಿ ತಮ್ಮ ಹೆಚ್ಚುಗಾರಿಕೆಯೆಂದು ಪ್ರಕಟಿಸುತ್ತಿದ್ದರು. ಆದರೆ ಅದು ಪಟಾಕಿಯಲ್ಲ, ಸ್ಫೋಟಕವಲ್ಲ, ವಿಚ್ಛಿದ್ರಕಾರಿಯೂ ಅಲ್ಲ.

ತೀರಾ ಇತ್ತೀಚೆಗೆ ಅಂದರೆ ೬೦೦ ವರ್ಷದಿಂದ ಈಚೆಗೆ ಈ ಸುಡುಮದ್ದು ತಂತ್ರಜ್ಞಾನ ಬೆಳಕಿಗೆ ಬಂದಿದೆ. ಇದು ಯುದ್ಧಾದಿಗಳಲ್ಲಿ ರಾಜರು ಮಾತ್ರಾ ಬಳಸುತ್ತಿದ್ದ ವಸ್ತು, ಸಾರ್ವಜನಿಕವಾಗಿ ಬಳಕೆಗೆ ಬಂದು ಹತ್ತಿರ ೨೫೦ ವರ್ಷವೂ ಆಗಿಲ್ಲ. ಆದರೆ ಈಗ ಅದು ದೇಶದ ಒಂದ ವಿಚ್ಛಿದ್ರಕಾರಿ ಶಕ್ತಿಯಾಗಿ, ವಾತಾವರಣ ಕೆಡಿಸುವ ದೂಷಿತವಾಗಿ, ವರ್ಷವರ್ಷವೂ ಸಾವಿರಾರು ಮಕ್ಕಳ ಮೃತ್ಯು ಸ್ವರೂಪವಾಗಿ ತೆರೆದುಕೊಂಡಿರುತ್ತದೆ. ಫ್ಯಾಕ್ಟರಿಗಳಲ್ಲಿ, ಸಾಗಾಟದಲ್ಲಿ, ಮಾರಾಟ ಕಾಲದಲ್ಲಿ, ಬಳಕೆಯಾಗುವ ಕಾಲದಲ್ಲಿ, ನಾನಾ ರೀತಿಯಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಇದನ್ನು ತಡೆಯುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ. ಆದ್ದರಿಂದ ಪ್ರಜೆಗಳೇ ಅದರ ಬಳಕೆ ಮಾಡದೇನೇ ವಾತಾವರಣವನ್ನೂ, ದೇಶವನ್ನೂ, ನಮ್ಮ ಮುಂದಿನ ಪ್ರಜೆಗಳನ್ನೂ ಉಳಿಸಬೇಕಾಗಿದೆ.

ಆಶ್ವೀಜ ಅಥವಾ ಅಶ್ವಯುಜ ಮಾಸದ ಕೃಷ್ಣಪಕ್ಷ (14 ನೇ) ನರಕ ಚತುರ್ದಶಿ ಎಂದೂ, ಅಮಾವಾಸ್ಯೆ ಮರುದಿನ ದೀಪಾವಳಿ ಎಂದೂ ಸನಾತನ ಹಿಂದೂ ಧರ್ಮದ ದೊಡ್ಡ ಹಬ್ಬವಾಗಿದೆ.




ಈ ನರಕ ಚತುರ್ದಶಿ ತಿಥಿ ಏನಿದೆ, ಅದರ ವಿಶೇಷವು ಶ್ರೀ ಕೃಷ್ಣಾವತಾರದ ನರಕಾಸುರ ಸಂಹಾರವನ್ನೂ, ಮರುದಿನದ ದೀಪಾವಳಿ ಅಮಾವಾಸ್ಯೆ ಲಕ್ಷ್ಮೀ ಉತ್ಥಾನ ಪೂಜೆಯನ್ನು ವಿಧಿವತ್ತಾಗಿ ಹೇಳಿರುವರು. ಮರು ದಿನವೇ ಬಲಿಪಾಡ್ಯಮಿ, ಕಾರ್ತಿಕ ಮಾಸದ ಮೊದಲ ದಿನ ವಾಮನ ತ್ರಿವಿಕ್ರಮನಾದ ನೆನವಿಗೆ ಬಲಿರಾಜನ ಪೂಜೆ, ಭೂಮಿ ಪೂಜೆ ಸಹಿತ, ಶ್ರೀ ಹರಿಗೆ ಅರ್ಪಿಸುವುದಾಗಿದೆ. ಹೀಗೆ ಚತುರ್ದಶಿಯಿಂದ ಬಲಿಪಾಡ್ಯದವರೆಗೆ ಮೂರು ದಿವಸ ಪರ್ಯಂತ ಭಗವಂತನ ಆರಾಧನೆ, ಅಯುರಾರೋಗ್ಯ, ಐಶ್ವರ್ಯ ಮತ್ತು ಸದ್‌ಬುದ್ಧಿ ತುರುವುದು. ಇನ್ನೂ ಒಂದು ವಿಶೇಷವೆಂದರೆ ಗಂಗಾ ಪೂಜೆ. ನರಕ ಚತುರ್ದಶಿಯ ಹಿಂದಿನ ದಿನ ನೀರು ತುಂಬುವ ಹಬ್ಬ. ಅದು ಗಂಗೆಯು ತ್ರಿವಿಕ್ರಮ ದೇವರ ಪಾದದಿಂದ ಜನಿಸಿದ ದಿನ, ಆ ಕಾರಣಕ್ಕೆ ಅಂದು ಗಂಗಾ ಸ್ಮರಣೆ.










ಇನ್ನು ನರಕ ಚತುರ್ದಶಿಯಂದು ಶ್ರೀ ಕೃಷ್ಣನು ಜರಾಸಂಧನೆಂಬ ನರಕಾಸುರನನ್ನು ಭೀಮಸೇನನ ಕೈಯಿಂದ ಕೊಲ್ಲಿಸಿ, ಅಲ್ಲಿ ಬಂಧಿತರಾದ ಕನ್ಯೆಯರಿಗೆ ಬಿಡುಗಡೆ ಮತ್ತು ಅವರಿಗೆ ತನ್ನ ಪತಿತ್ವ ನೀಡಿ ರಕ್ಷೆ ಮಾಡಿದ ದಿವಸ. ಇದು ಸ್ತ್ರೀ ಕುಲದ ಸಂರಕ್ಷಣೆ, ಅಸುರ ನಿಗ್ರಹದ ಸಂದೇಶ ಕೊಡುತ್ತದೆ.




ಸಂಕ್ಷಿಪ್ತ ಆಚರಣೆ

ಆಶ್ವೀಜದ ತ್ರಯೋದಶಿ ಸಂಜೆ ನೀರು ತುಂಬ ಬೇಕು. ಮನೆಯ ದಕ್ಷಿಣ ಭಾಗದಲ್ಲಿ ಜೋಡಿ ಎಳ್ಳಿನೆಣ್ಣೆ ದೀಪ ಹಚ್ಚಿ, ಆ ದಿಕ್ಕಿಗೆ ದಿನಕ್ಕೆ ಅಭಿಮಾನಿಯಾದ 'ಯಮ ದೇವ' ನಿಗೆ ಇಟ್ಟು ಈ ಕೆಳ ಶ್ಲೋಕ ಹೇಳಬೇಕು.




'ಮೃತ್ಯುನಾ ಪಾಶದಂಡಾಭ್ಯಾಂ ಕಾಲಃ

ಶ್ಯಾಮಲಯಾ ಸಹ1 ತ್ರಯೋದಶ್ಯಾಂ

ದೀಪದಾನಾತ್ ಸೂರ್ಯಜಃ

ಪ್ರಿಯತಾಂ ಮಮ11







'ಯಮಾಂತರ್ಗತ ಪ್ರಾಣಸ್ಥ ಶ್ರೀ ನರಸಿಂಹಾಯ ನಮಃ'ಎಂದು ಹೇಳಿ ಕೈ ಮುಗಿಯಬೇಕು. ನಂತರ ಕೈ ಕಾಲು ತೊಳೆದು ಗಂಗಾ ಪೂಜೆ (ನೀರು ತುಂಬುವನ್ನು ಪೂಜಿಸಿ) -ಈ ಆಚರಣೆಯಿಂದ ಜಾತಕನ ಚತುರ್ಥ ಮತ್ತು ಪಂಚಮಾರಿಷ್ಟ (ಚಂದ್ರ ಮತ್ತು ಶನಿ ದೋಷ) ನಿವಾರಣೆಯಾಗಿ ಆಯುಷ್ಯ ವರ್ಧಿಸುತ್ತದೆ.




ಮರು ದಿವಸದ ಚತುರ್ದಶಿ ಬೇಗನೆ ತೈಲ (ತಿಲ, ಕೊಬ್ಬರಿ ಎಣ್ಣೆ) ಅಭ್ಯಂಜನ (ಬಿಸಿ ನೀರಿನ ಜಳಕ) ಮಾಡಿ, ಸೂರ್ಯನಿಗೆ ಅರ್ಘ್ಯ ನೀಡಿ, ದರ್ಶಿಸಿ ಕೈ ಮುಗಿದು, ಮನೆ ದೇವರಿಗೂ, ಗುರುಗಳ ಪೂಜೆ ಮಾಡಬೇಕು. ಶ್ರೀ ಕೃಷ್ಣ ಅಷ್ಟೋತ್ತರ ಪಠಿಸಿ ದೀಪಾಲಂಕರಾದಿಂದ ಪೂಜಿಸಿ, (ಸಪರಿವಾರ ಅನ್ಯೂನ್ಯ ಕುಳಿತು) ನಂತರ ಭೋಜನಾದಿ ಕರ್ಮ. ಈ ಸಂಜೆ ನರಕಾಸುರ ಸಂಹಾರ ಕಥೆ ಓದಿ, ಶ್ರೀ ಕೃಷ್ಣನಿಗೂ, ಭೀಮಸೇನನಿಗೂ ಹೂ ತುಳಸೀ ನೀರು ಅರ್ಪಿಸಿ (ಅರ್ಘ್ಯ), ಮನೆಯ ಎಂಟು ದಿಕ್ಕುಗಳಿಗೂ ದೀಪಗಳನ್ನು ಬೆಳಗಬೇಕು.




ಈ ಆಚರಣೆಯಿಂದ ಜಾತಕನ ದಶಮಾರಿಷ್ಟ, ಅಂದರೆ ಶನಿದೋಷ ನಿವಾರಣೆ, ವ್ಯಾಪಾರದಲ್ಲಿ ಉನ್ನತಿ ಲಭಿಸುವುದು. ಮರುದಿನದ ದೀಪಾವಳಿ ಅಮಾವಾಸ್ಯೆ ಸಂಜೆ ವಿಶೇಷ. ಶ್ರೀ ಲಕ್ಷ್ಮೀದೇವಿಯು ವೈಕುಂಠದಲ್ಲಿ ಭಗವಂತನನ್ನು ಯೋಗ ನಿದ್ರೆಯಿಂದ ಎಬ್ಬಿಸುವ ದಿನ, (ಇದರ ಅಧ್ಯಾತ್ಮಿಕ ಮಹತ್ವ ಬಹಳ ಇದೆ). ಅಂದು ಸಂಜೆ ಶ್ರೀ ಸೂಕ್ತ, ಪುರುಷ ಸೂಕ್ತ ಪಾರಾಯಣ ಸಹಿತ ಲಕ್ಷ್ಮೀನಾರಾಯಣ ಪೂಜಿಸಿ, ಧನಧಾನ್ಯ ಸಂರಕ್ಷಣೆ ಆಗುವುದು.




ಈ ಆಚರಣೆಯಿಂದ ಜಾತಕನ ಶುಕ್ರ ದೋಷ ನಿವಾರಣೆ ಆಗಿ ಸಂತತಿ ಸುಖವಾಗುವುದು.




ಇನ್ನು ಬಲಿಪಾಡ್ಯದಂದು ಶುಭ ತೋರಣ, ತುಳಸಿ ಪೂಜೆ ಮಾಡಿ, ಭಕ್ತ ಪ್ರಹ್ಲಾದನ ಮೊಮ್ಮಗನಾದ ದಾನಶೂರ ಬಲಿರಾಜನಿಗೆ ಮತ್ತು ಪರಮಪ್ರಭು ವಾಮನ ತ್ರಿವಿಕ್ರಮ ಶ್ರೀ ಹರಿಯ ಪೂಜಿಸಿ, ಆ ಹೂತುಳಸಿಯನ್ನು ಗೋಗ್ರಾಸ ಪ್ರಸಾದವನ್ನು ನಾವು ಸ್ವೀಕರಿಸಬೇಕು. ಗೋವಿಗೆ, ಭೂಮಿಗೆ ಪುಣ್ಯಪ್ರದ ದಿನವಿದು. ಈ ಆಚರಣೆಯಿಂದ, ಜಾತಕನ ಕುಜಾರಿಷ್ಟ ನಿವಾರಣೆಯಾಗಿ, ಧನಯೋಗ ಉಂಟಾಗಿ, ಕುಟುಂಬದಲ್ಲಿನ ವೈಮನಸ್ಯ ದೂರಾಗುವುದು.




ಹೀಗೆ ನಮ್ಮ ಸನಾತನ ಧರ್ಮದ ಆಚರಣೆಗಳಿಗೂ ನಮ್ಮ ಜಾತಕ ಕರ್ಮಗಳಿಗೂ ನೇರಾನೇರ ಸಂಬಂಧಗಳಿವೆ. ಸಾವಧಾನ ಚಿಂತಿಸಿ, ಹಿರಿಯರೊಂದಿಗೆ ಬೆಸಗೊಂಡು ಆಚರಿಸಿದರೆ ಶುಭವಾಗುವುದರಲ್ಲಿ ಸಂದೇಹವಿಲ್ಲ.




ಇಂದಿನ ಯಾವ ತಂತ್ರ ಯಂತ್ರಗಳೂ ಇಲ್ಲದ ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದ ಗಣಿತಜ್ಞರು, ಮಹಾನ್ ತಪಸ್ಸಿನ ಋಷಿಗಳು ಕರಾರುವಾಕ್ಕಾದ ಈ ನಭ ವಿಸ್ಮಯವನ್ನು ಅನಾದೃಶ್ಯವಾಗಿ ಹೆಣೆದು ಇಂಥ ಪಾಡ್ಯಾದಿ ಹುಣ್ಣಿಮೆ, ಅಮಾವಾಸ್ಯೆಗಳಾಗುತ್ತದೆ ಎಂದು ನಿರ್ಣಯಿಸಿರುವರು! ಅದು ಋಷಿ ದೇವರ ಜ್ಞಾನಶಕ್ತಿ. ಇಂಥ ಕೃತಿಯನ್ನು ನಾವು ಹಬ್ಬ ಹರಿದಿನಗಳಾದಿಯಾಗಿ ಆಚರಿಸುತ್ತ, ಆ ದೇವತಾ ಶಕ್ತಿಗಳಿಗೆ ತೋರುವ ಕೃತಜ್ಞತೆಯೇ ಆಗಿದೆ ಹೊರತು, ಮತ್ತೇನೂ ಅಲ್ಲ.

ಮಾಹಿತಿ ಮೂಲ: what's up hike Facebook groups
Share:

ಸಾಮಾನ್ಯ ಜ್ಞಾನ

1.ಮೈಸೂರು ವಿಶ್ವ ವಿದ್ಯಾಲಯ ಮೊದಲ ಕುಲಪತಿ ಯಾರು
ಇದರ ಸಂಸ್ಥಾಪಕರು ಯಾರು.

ನಾಲ್ವಡಿ ಕೃಷ್ಣ ರಾಜ ಒಡೆಯರ್✔️✔️✔️

2.ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ದ ಮೊದಲ ಕುಲಪತಿ ಯಾರು

ನಾಲ್ವಡಿ ಕೃಷ್ಣ ರಾಜ ಒಡೆಯರ್✔️✔️

3.ಪಕುಯಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯದಲ್ಲಿ ಇದೆ

ಅರುಣಾಚಲ ಪ್ರದೇಶ✔️✔️

4.ಪಾಲವೋ ಹುಲಿ ಸಂರಕ್ಷಣಾ ತಾಣ ಇರುವ ರಾಜ್ಯ ಯಾವುದು

Jharkhand✔️✔️✔️

5.Namadapa ಹುಲಿ ಸಂರಕ್ಷಣಾ ತಾಣ ಎಲ್ಲಿದೆ.

ಅರುಣಚಲ ಪ್ರದೇಶ✔️✔️

6.ಮಕುಂದರ ಹುಲಿ ಸಂರಕ್ಷಣಾ  ಯಾವ ರಾಜ್ಯ ದಲ್ಲಿ ಇದೇ.

ರಾಜಸ್ಠಾನ✔️✔️✔️

7.ಉದಂತಿ ಮತ್ತು ಸಿತನಾದಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯ ದಲ್ಲಿದೆ.

ಛತ್ತೀಸಘಢ✔️✔️

8.ಸಹ್ಯಾದ್ರಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯದಲ್ಲಿದೆ.

ಮಹಾರಾಷ್ಟ✔️✔️

9.ನೊಕ್ರೆಕ್ ರಾಷ್ಟ್ರೀಯ ಉದ್ಯಾನವನ ವಿಶ್ವ ಪಾರಂಪರಿಕ ಪಟ್ಟಿಗೆ  ಸೇರಿರುವ ಈ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಇದೆ.

ಮೇಘಲಯ✔️✔️

10.ಡಾ. ಶಿವರಾಂ ಕಾರಂತ್ ಹೆಸರಿನ ಪಿಳಿಕುಲ biological ಪಾರ್ಕ್ ಯಾವ ಜಿಲ್ಲಿಯಲ್ಲಿದೆ .

ಮಂಗಳೂರು✔️✔️

1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?
— 1676 mm.
2) ಒಂದನೇ ಪಾಣಿಪಟ್ ಕದನದಲ್ಲಿ ಇಬ್ರಾಹೀಂ ಲೂದಿಯನ್ನು ಸೋಲಿಸಿದ ದೊರೆ ಯಾರು?
— ಬಾಬರ್
3) ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
—1951 ರಲ್ಲಿ.
4) 'ಮಾನವನ ಜೈವಿಕ ರಸಾಯನಿಕ ಪ್ರಯೋಗಾಲಯ' ಎಂದು ಕರೆಯಲ್ಪಡುವ ಅಂಗ ಯಾವುದು?
— ಲೀವರ್.
5) ಅಕ್ಬರನು ತನ್ನ ಸೇನಾವ್ಯವಸ್ಥೆಯಲ್ಲಿ ಅಳವಡಿಸಿಕೊಂಡ 'ಮನ್ಸಬ್ ದಾರಿ ಪದ್ಧತಿ'ಯು ಯಾವ ದೇಶದಿಂದ ಪಡೆಯಲಾಗಿತ್ತು?
— ಮಂಗೋಲಿಯಾ.
6) ಸತಿ ಕುಂಡವಿರುವ ಸ್ಥಳದ ಹೆಸರೇನು?
— ದಕ್ಷಬ್ರಹ್ಮ ಮಂದಿರ.
7) ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದವರು ಯಾರು?
— ಇಲ್ತಮಶ್.
8) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ ಯಾರು?
-ರಾಜಕುಮಾರಿ ಅಮೃತ್ ಕೌರ್.
9) ಇರಾನ್ ದೇಶದ ರಾಮಸರ್ (Ramsar Convention) ಸಮ್ಮೇಳನ ಯಾವುದಕ್ಕೆ ಸಂಬಂಧಿಸಿದೆ?
— ತೇವಾಂಶವುಳ್ಳ ಭೂ ಪ್ರದೇಶ (Wetland)
10) ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?
— ಅಥರ್ವಣ ವೇದ
11) ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
—ಆಲ್ಬೇನಿಯಾ
12) ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?
— ತರೈ.
13) ಡಿಸೆಂಬರ್ : 10 ವಿಶ್ವ ಮಾನವ ಹಕ್ಕುಗಳ ದಿನ
14) MOM ಮಂಗಳಯಾನದ ವಿಸ್ತೃತ ರೂಪ?
— The Mars Orbiter Mission.
15) ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು?
— ವ್ಯಾಸ.
16) ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ಧ ಮಾಡುವ ಪ್ರಾಣಿ ಯಾವುದು?
— ನೀಲಿ ತಿಮಿಂಗಲ (830 ಕಿ.ಮೀ ವರೆಗೆ ಇದರ ಶಬ್ಧ ಹರಡುತ್ತದೆ).
17) ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ?
— 24X60X60 = 86,400 ಸೆಕೆಂಡ್ ಗಳು
18) ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
— ರಾವಿ ನದಿ.
19) ಭಾರತದ ಮೊದಲ ವಕೀಲೆ ಯಾರು?
-ಕೊರ್ನೆಲಿಯಾ ಸೋರಾಬ್ಜಿ.
20) ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?
— ಕೆ.ಚಂದ್ರಶೇಖರ್ ರಾವ್.
21) ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು?
-ಪ್ರತಿಭಾ ಪಾಟೀಲ.
22) ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
— ಋಗ್ವೇದ.
23) ಹಾವಿನ ವಿಷದಲ್ಲಿರುವ ರಾಸಾಯನಿಕ ವಸ್ತು ಯಾವುದು?
— ಟಾಕ್ಸಿನ್.
24) ಪುಲಿಟ್ಜರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ?
— ಅಮೆರಿಕಾ

ರವಿಕುಮಾರ ಆರ್ ಎಸ್‌:
::ಸಾಮಾನ್ಯ ಜ್ಞಾನ::
ಗೋವಾದಲ್ಲಿ ಅಕ್ಟೋಬರ್ 15 ಹಾಗೂ 16ರಂದು ಬ್ರಿಕ್ಸ್ ರಾಷ್ಟ್ರಗಳ ಎಷ್ಟನೆಯ ಸಮೇಳನ ನಡೆಯಿತು?

A. 6ನೇ
B. 7ನೇ
C. 8ನೇ●
D. 9ನೇ

ವಿಶ್ವ ಆರ್ಥಿಕ ವೇದಿಕೆ (World Economic Forum) ವರದಿಯ ಪ್ರಕಾರ, ಜಗತ್ತಿನಲ್ಲಿಯೇ ಸುತ್ತಾಡಲು ಅತ್ಯಂತ ಸುರಕ್ಷಿತ ದೇಶ ಯಾವುದು?

A. ಫಿನ್ಲೆಂಡ್●
B. ಕತಾರ್
C. ಅರಬ್ ಒಕ್ಕೂಟ
D. ಗ್ರೀಸ್

43ನೇ ಇಂಟರ್'ನ್ಯಾಶನಲ್ ನಿಟ್ ಫೇರ್ (Knit fair) ಕೆಳಕಂಡ ಯಾವ ನಗರದಲ್ಲಿ ನಡೆಯಿತು?

A. ಚೆನ್ನೈ
B. ಕೊಯಮತ್ತೂರ
C. ತಿರುಪ್ಪುರ್●
D. ಹೈದರಾಬಾದ್

2016ನೇ ಸಾಲಿನ ಅಂತಾರಾಷ್ಟ್ರೀಯ ರೇಷ್ಮೆ ಸೀರೆ ಮೇಳ ಕೆಳಕಂಡ ಯಾವ ನಗರದಲ್ಲಿ ಆರಂಭವಾಗಿದೆ?

A. ಚೆನ್ನೈ
B. ಮುಂಬೈ
C. ನವದೆಹಲಿ●
D. ಬೆಂಗಳೂರು

ಕೆಳಕಂಡ ಯಾವ ರಾಜ್ಯ ಈಚೆಗೆ ತೋಟಗಾರಿಕೆ ಪ್ರವಾಸೋದ್ಯಮಕ್ಕೆ (Farm Tourism) ಚಾಲನೆ ನೀಡಿತು?

A. ರಾಜಸ್ಥಾನ
B. ಹರಿಯಾಣ●
C. ಪಂಜಾಬ್
D. ಮಹಾರಾಷ್ಟ್ರ

'ಹಾಫ್'ಮೆನ್ ಕಪ್' ಇದು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?

A. ಫುಟ್'ಬಾಲ್
B. ಕ್ರಿಕೆಟ್
C. ಟೆನಿಸ್ ●
D. ಹಾಕಿ

'ದಿ ಮೆನ್ ಹೂ ನ್ಯೂ ಇನ್'ಫಿನಿಟಿ' ಇದು ಯಾವ ಭಾರತೀಯ ಗಣಿತಜ್ಞನ ಕುರಿತಾದ ಚಲನಚಿತ್ರವಾಗಿದೆ?

A. ಆರ್ಯಭಟ
B. ಶ್ರೀನಿವಾಸ್ ರಾಮಾನುಜನ್●
C. ಸಿ. ರಾಧಾಕೃಷ್ಣನ್ ರಾವ್
D. ನರೇಂದ್ರ ಕರ್ಮರ್'ಕರ್

'ನ್ಯಾಶನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್' ಇದು ಭಾರತದ ಸಾರ್ವಜನಿಕ ವಲಯದ ಸಾಮಾನ್ಯ ವಿಮೆ ಕಂಪನಿಯಾಗಿದ್ದು, ಇದರ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?

A. ಚೆನ್ನೈ
B. ಹೈದರಾಬಾದ್
C. ನವದೆಹಲಿ
D. ಕೋಲ್ಕತ್ತಾ●

'ಯಸ್ ಬ್ಯಾಂಕ್' ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದ್ದು, ಇದರ ಪ್ರಧಾನ ಕಾರ್ಯಾಲಯ ಯಾವ ನಗರದಲ್ಲಿದೆ?

A. ಹೈದರಾಬಾದ್
B. ಮುಂಬೈ●
C. ಚೆನ್ನೈ
D. ಕೋಲ್ಕತ್ತಾ

10. 'ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು ಘೋಷಿಸಿತು?

A. ಗುಜರಾತ್
B. ಮಹಾರಾಷ್ಟ್ರ●
C. ಕೇರಳ
D. ಒರಿಸ್ಸಾ

ರಾಜ್ಯ ಶಾಸಕಾಂಗವನ್ನು ರಾಜ್ಯಪಾಲರು ಯಾವ ಸಂಧಭ೯ಗಳಲ್ಲಿ ಉದ್ದೇಶಿಸಿ ಮಾತಾನಾಡಬಹುದು?

ಎ) ಚುನಾವಣೆಯ ನಂತರದ ಮೊದಲ ಅಧಿವೇಶನ
ಬಿ) ಮಷ೯ದ ಮೊದಲ ಅಧಿವೇಶನ
ಸಿ) ವಿಶೇಷ ಮಾಹಿತಿಯನ್ನು ಸದನಕ್ಕೆ ಹೇಳುವ ಸಂದಭ೯ ಏಪ೯ಟ್ಟರೆ
ಡಿ) ಈ ಮೇಲಿನ ಮೂರು ಸಂದಭ೯ಗಳಲ್ಲಿ

D✅👌

ಸಂವಿಧಾನ ಯಾವ ರಾಜ್ಯಗಳಿಗೆ ಬುಡಕಟ್ಟು ಜನಾಂಗದ ಅಭಿವೃದ್ದಿ ಮಂತ್ರಿಯನ್ನು ಕಡ್ಡಯವಾಗಿ ನೇಮಿಸಬೇಕೆಂದು ಹೇಳುತ್ತದೆ

ಎ) ಮಧ್ಯ ಪ್ರದೇಶ.ಓರಿಸ್ಸ
ಬಿ) ಬಿಹಾರ: ಮಧ್ಯ ಪ್ರದೇಶ
ಸಿ) ಬಿಹಾರ: ಅರುಣಾಚಲ ಪ್ರದೇಶ
ಡಿ) ಕನಾ೯ಟಕ: ಬಿಹಾರ

A✅

ರಾಜ್ಯದಲ್ಲಿ ತುತು೯ ಪರಿಸ್ಥಿಯನ್ನ ಹೇರುವಂತೆ ರಾಷ್ಟ್ರಪತಿಗಳಿಗೆ ಯಾರು ಮನವಿ ಸಲ್ಲಿಸಿಸುತ್ತಾರೆ?

ಎ) ರಾಜ್ಯಪಾಲರು
ಬಿ) ಮುಖ್ಯಮಂತ್ರಿ
ಸಿ) ಸಭಾಪತಿ
ಡಿ) ಉಪಮುಖ್ಯಮಂತ್ರಿ

A✅

ರಾಜ್ಯಪಾಲರು ಮುಖ್ಯಮಂತ್ರಿಯಿಂದ ಯಾವ ಸಂದಭ೯ದಲ್ಲಿ ಮಾಹಿತಿಯನ್ನು ಯಾಚಿಸಬಹುದು ?

ಎ) ಮಂತ್ರಿಯ ನಿಧಾ೯ರವನ್ನು ಮಂತ್ರಿ ಮಂಡಳಿ ಒಪ್ಪದಿದ್ದಾಗ
ಬಿ) ಯಾವುದೂ ಮುಖ್ಯ ಮಸೂದೆ ಮಂಡನೆಯಾಗಿ ಅಂಕಿತ ಸಿಗದಿದ್ದಾಗ
ಸಿ) ಮೇಲಿನ ಎರಡೂ ಸಂದಭ೯ದಲ್ಲೂ ಸಾಧ್ಯವಿಲ್ಲ
ಡಿ)ಮೇಲಿನ ಎರಡೂ ಸಂದಭ೯ದಲ್ಲಿ ಸಾಧ್ಯವಿದೆ

D✅

ನ್ಯೂ ಡೆವಲೆಪಮೆಂಟ್ ಬ್ಯಾಂಕ್' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A. ಆಸಿಯಾನ.
B. ಜಿ-20.
C. ನ್ಯಾಟೋ.
D. ಬ್ರಿಕ್ಸ್

D✅

ಮೆರ್ಮಕಾಲಜಿ' (Myrmecology) ಇದು ಯಾವುದಕ್ಕೆ ಸಂಬಂಧಿಸಿದೆ?
A. ಆನೆಗಳ ಅಧ್ಯಯನ.
B. ಶ್ವಾನ ವಿಜ್ಞಾನ.
C. ಮತ್ಸ್ಯ ವಿಜ್ಞಾನ.
D. ಇರುವೆ ವಿಜ್ಞಾನ

D✅
Share:

ಯುವ ಸಬಲೀಕರಣ ಮತ್ತು ಕ್ರೀಡೆ :

ಯುವ ಸಬಲೀಕರಣ ಮತ್ತು ಕ್ರೀಡೆ :

     ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು 1969 ರಲ್ಲಿ ಯುವಜನ ಸೇವಾ ನಿರ್ದೇಶನಾಲಯವನ್ನಾಗಿ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಲು ಸ್ಥಾಪಿಸಲಾಯಿತು. ಇಲಾಖೆಯನ್ನು ವಿಭಾಗ ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ಕಛೇರಿಗಳನ್ನು ತೆರೆಯುವ ಮೂಲಕ 1975 ರಲ್ಲಿ ಮತ್ತು ತಾಲೂಕು ಅಧಿಕಾರಿಗಳನ್ನು 1977 ರಲ್ಲಿ ನೇಮಿಸುವುದರ ಮೂಲಕ ಪುನರ್ ರಚಿಸಲಾಯಿತು. ಕರ್ನಾಟಕ ರಾಜ್ಯ ಸ್ಪೋರ್ಟ್ಸ್  ಕೌನ್ಸಿಲನ್ನು 1980 ರಲ್ಲಿ ಇಲಾಖೆಯಲ್ಲಿ ವಿಲೀನಗೊಳಿಸಿ ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ಯುವನೀತಿಯನ್ನು 2013 ರಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಯುವನೀತಿಯ ಶಿಫಾರಸ್ಸಿನಂತೆ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ನಿರ್ದೇಶಕರು/ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಮಹಾ ನಿರ್ದೇಶಕರು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ್ರಿಡಾಂಗಣ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿಗಳು ಆಗಿರುತ್ತಾರೆ.

ಧ್ಯೇಯೋದ್ದೇಶಗಳು:

1. ರಾಜ್ಯದ ಯುವಜನರನ್ನು ತಲುಪಲು ಎಲ್ಲ ಸ್ಥರಗಳಲ್ಲಿ ಅವಕಾಶ ಕಲ್ಪಿಸುವುದು.
ರಾಜ್ಯದ ಯುವಜನರ ಗುರಿ, ಆಶೋತ್ತರ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳವುದು.
2. ರಾಜ್ಯದ ವೈವಿಧ್ಯಮಯ ಸಾಂಸ್ಕøತಿಕ ಸಂರಚನೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗನುಗುಣವಾಗಿ ರಾಜ್ಯದೆಲ್ಲೆಡೆ ಹರಡಿಕೊಂಡಿರುವ ನಮ್ಮ ಯುವಜನರ ವಿವಿಧ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವುದು.
3. ಕರ್ನಾಟಕ ರಾಜ್ಯದ ಯುವಜನರನ್ನು ದೃಷ್ಠಿಯಲ್ಲಿರಿಸಿಕೊಂಡು ಅವರಿಗಾಗಿ ಅಲ್ಪಾವಧಿ ಹಾಗೂ ದೀಘಾವಧಿ ಯೋಜನೆಗಳನ್ನು ರೂಪಿಸುವುದು.
4. ಯುವಜನರ ಆಂತರಿಕ ಸಾಮಥ್ರ್ಯವನ್ನು ವೃದ್ದಿಗೊಳಿಸಲು ಅವಕಾಶಗಳನ್ನು ಕಲ್ಪಿಸಿ, ಅವರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುವುದು.
5. ರಾಜ್ಯದ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾಲುದಾರರಾಗಲು, ಜೊತೆಗೆ ಬಹುಮುಖಿ ವಲಯಗಳಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಯುವಜನರಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವುದು.
6. ಯುವಜನ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ಉದ್ದೇಶಿತ ಫಲಿತಾಂಶಗಳನ್ನು ಈಡೇರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು.

ದೃಷ್ಟಿಕೋನ : ನಮ್ಮ ಸಮಾಜ, ಕರ್ನಾಟಕ, ಭಾರತ ಮತ್ತು ವಿಶ್ವದ ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾಗುವಂತೆ ಯುವಜರನ್ನು ಪ್ರೇರೆಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು.

ಯೋಜನೆಗಳು :

1. ಗ್ರಾಮೀಣ ಕ್ರೀಡೋತ್ಸವ -  ಎಲ್ಲಾ 176 ತಾಲ್ಲೂಕುಗಳಲ್ಲಿ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ‘ಗ್ರಾಮೀಣ ಕ್ರೀಡೋತ್ಸವ’ ಆಯೋಜಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ವಾರ್ಷಿಕ ರೂ 1.50 ಲಕ್ಷಗಳನ್ನು ಒದಗಿಸಲಾಗುತ್ತಿದೆ.

2. ಕರ್ನಾಟಕ ಕ್ರೀಡಾ ರತ್ನ -  ಗ್ರಾಮೀಣ, ದೇಸೀ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ‘ಕರ್ನಾಟಕ ಕ್ರೀಡಾ ರತ್ನ’ ಎಂಬ ನೂತನ ಪ್ರಶಸ್ತಿಯನ್ನು 2014-15ನೇ ಸಾಲಿನಿಂದ ನೀಡುತ್ತಿದ್ದು, ಪ್ರಶಸ್ತಿಯು ರೂ 1.00 ಲಕ್ಷಗಳ ನಗದು ಬಹುಮಾನ, ಪ್ರಮಾಣ ಪತ್ರಗಳನ್ನೊಳಗೊಂಡಿರುತ್ತದೆ.

3. ಶೈಕ್ಷಣಿಕ ಶುಲ್ಕ ಮರುಪಾವತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾಗುತ್ತಿದೆ.  .

4. ಕ್ರೀಡಾ ವಿದ್ಯಾರ್ಥಿ ವೇತನ -  ರಾಜ್ಯ ಮಟ್ಟದಲ್ಲಿ ಪದಕ ವಿಜೇತರಾಗಿ ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000/- ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.  

5. ಯುವ ಕ್ರೀಡಾ ಸಂಜೀವಿನಿ -  ರಾಜ್ಯದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯ ಭದ್ರತೆ ಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆ ಅತಿವಿನೂತನ ‘ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ’ ಯನ್ನು ಪ್ರಾರಂಭಿಸಿದೆ.  ರಾಜ್ಯ, ರಾಷ್ಟ್ರ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

6. ಯುವ ಕ್ರೀಡಾ ಮಿತ್ರ - 2015-16ನೇ ಸಾಲಿನ ಆಯವ್ಯಯದಲ್ಲಿ ‘ಯುವ ಕ್ರೀಡಾ ಮಿತ್ರ’ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ ಪ್ರತಿ ಹೋಬಳಿಗೊಂದು ಯುವ ಕ್ರೀಡಾ ಸಂಘವನ್ನು ಗುರುತಿಸಿ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆ ನಿಲಯಗಳಿಗೆ ಕಳುಹಿಸಲು ಪ್ರೋತ್ಸಾಹಧನವಾಗಿ ವಾರ್ಷಿಕ ರೂ 25,000/-ಗಳನ್ನು ನೀಡಲಾಗುವುದು.

7. ನಗದು ಪುರಸ್ಕಾರ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಯೋಜನೆಯನ್ನು ಇಲಾಖೆಯು ಅನುಷ್ಥಾನಗೊಳಿಸುತ್ತಿದೆ.

8. ಏಕಲವ್ಯ ಪ್ರಶಸ್ತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯು ರೂ 2.00 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ.

9. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ - ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾ ಮೀಸಲಾತಿ ಅಡಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

10. ಕ್ರೀಡಾಕೂಟಗಳ ಸಂಘಟನೆ - ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರತಿ ವರ್ಷ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.  ಅದೇ ರೀತಿ, ಮಹಿಳಾ, ಗ್ರಾ

ಮೀಣ, ಮತ್ತಿತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.  

11. ಮಾಸಾಶನ ಯೋಜನೆ - 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ವಾರ್ಷಿಕ ಆದಾಯ ರೂ 20,000/- ಗಳಿಗಿಂತ ಕಡಿಮೆ ಇರುವ ಮಾಜಿ ಕುಸ್ತಿ/ಕ್ರೀಡಾಪಟುಗಳಿಗೆ ಮಾಸಾಶನವನ್ನು ನೀಡಲಾಗುತ್ತಿದೆ.
ರಾಜ್ಯ ಮಟ್ಟ-ರೂ 750/- ರಿಂದ 1,500/-,
ರಾಷ್ಟ್ರ ಮಟ್ಟ ರೂ 1,000/- ರಿಂದ ರೂ 2,000/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 3,000/- ರಂತೆ ಮಾಜಿ ಪೈಲ್ವಾನರುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ.

ರಾಜ್ಯ ಮಟ್ಟ-ರೂ 750/- ರಿಂದ ರೂ 1,000/-,
ರಾಷ್ಟ್ರ ಮಟ್ಟ ರೂ 1,000/-ರಿಂದ ರೂ 1,500/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 2,000/- ರಂತೆ ಮಾಜಿ ಕ್ರೀಡಾಪಟುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ. ಸದರಿ ಯೋಜನೆಯನ್ನು ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆ ಅಡಿಯಿಂದ ಅನುಷ್ಥಾನಗೊಳಿಸಲಾಗುತ್ತಿದೆ.

12. ರಾಜೀವ್ ಗಾಂಧಿ ಖೇಲ್ ಅಭಿಯಾನ್ - ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟವನ್ನು (16 ವರ್ಷ ಒಳಗಿನ ಬಾಲಕ-ಬಾಲಕಿಯರು) ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹಾಗೂ ಮಹಿಳಾ ಕ್ರೀಡಾಕೂಟವನ್ನು (25 ವರ್ಷದೊಳಗಿನ ಮಹಿಳೆಯರಿಗೆ) ಜಿಲ್ಲೆ ಮತ್ತು ರಾಜ್ಯಮಟ್ಟಗಳಲ್ಲಿ ಸಂಘಟಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ನಿಯೋಜಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಕ್ರೀಡಾ ಕಿಟ್ ಮತ್ತು ತರಬೇತಿಯನ್ನು ನೀಡಲಾಗುತ್ತಿದೆ.

13. ‘ನಮ್ಮೂರ ಶಾಲೆಗೆ ನಮ್ಮ ಯುವಜನರು’  ಕಾರ್ಯಕ್ರಮ - ತಮ್ಮೂರ ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲ್ಲೂಕಿಗೆ ಒಂದರಂತೆ ಗುರುತಿಸಿ ರೂ 1.00 ಲಕ್ಷ ನಗದು ಪುರಸ್ಕಾರ ನೀಡುವ ಯೋಜನೆ.  2015-16 ನೇ ಸಾಲಿನಲ್ಲಿ ಎಲ್ಲಾ 176 ತಾಲ್ಲೂಕುಗಳ ಉತ್ತಮ ಯುವ ಸಂಘಗಳಿಗೆ ತಲಾ ರೂ 2.00 ಲಕ್ಷ ವಿತರಿಸಲಾಗಿದೆ.

14. ‘ಯುವ ಸ್ಪಂದನ’ ಕಾರ್ಯಕ್ರಮ - ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಯುವಜನರಿಗೆ ಮತ್ತು ಪೋಷಕರಿಗೆ ಆಪ್ತ ಸಮಾಲೋಚನಾ ಸೌಲಭ್ಯ ಒದಗಿಸುವ ಮತ್ತು ಯುವಜನರನ್ನು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡುವ ಕಾರ್ಯಕ್ರಮ.

15. ‘ಯುವ ಶಕ್ತಿ ಕೇಂದ್ರ’: ರಾಜ್ಯದ 30 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಗುರುತಿಸಲಾಗಿದ್ದು.  30 ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಲಾ ರೂ. 15.00 ಲಕ್ಷಗಳ ವೆಚ್ಚದಲ್ಲಿ ಮಲ್ಟಿ ಜಿಮ್ ಸೌಲಭ್ಯಗಳನ್ನೊಳಗೊಂಡ ಯುವ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

16. ಯುವಜನೋತ್ಸವ- ಯುವಜನರ ಶಾಸ್ತ್ರೀಯ ಪ್ರತಿಭೆ ಅನಾವರಣಕ್ಕೆ ಜಿಲ್ಲೆಯಿಂದ ರಾಷ್ಟ್ರ ಮಟ್ಟದವರೆಗಿನ ಸ್ಪರ್ಧೆ.

17. ಯುವಜನ ಮೇಳ- ಯುವಜನರಲ್ಲಿನ ಜಾನಪದ ಪ್ರತಿಭೆ ಅನಾವರಣಕ್ಕೆ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆ.

18. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ- ಸಂಘಟಿತ ಚಟುವಟಿಕೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಯುವಜನರನ್ನು ಮತ್ತು ಯುವ ಸಂಘಗಳನ್ನು ಗುರುತಿಸಿ, ಗೌರವಿಸಲು ನೀಡುವ ವಾರ್ಷಿಕ ಪ್ರಶಸ್ತಿ.

19. ಕ್ರೀಡಾ ಮೂಲ ಸೌಕರ್ಯಗಳ ಸೃಜನೆ -  ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು, ಆಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ಗಳು, ಹಾಕಿ/ಫುಟ್ಬಾಲ್ ಟರ್ಫ್ಗಳು, ಗರಡಿ ಮನೆಗಳು ಸೇರಿದಂತೆ ಅಗತ್ಯ ಕ್ರೀಡಾ ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ.

20. ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕೆಳಕಾಣಿಸಿದ ಕ್ರಮ ಕೈಗೊಳ್ಳಲಾಗುತ್ತಿದೆ.

21. ಅಂತರ-ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿಯಮಾನುಸಾರ ವಿಮಾನ ಪ್ರಯಾಣ ವೆಚ್ಚ ಮರುಪಾವತಿ ಮಾಡಲಾಗುತ್ತಿದೆ.

22. ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ ಆಯೋಜಿಸಲು ಹಾಗೂ ರಾಷ್ಟ್ರ ಮಟ್ಟಕ್ಕೆ ತಂಡವನ್ನು ನಿಯೋಜಿಸಲು ಅನುದಾನ ಸಂಹಿತೆ ನಿಯಮಾವಳಿ ಅನುಸಾರ ಅನುದಾನ ನೀಡಲಾಗುತ್ತಿದೆ.

23. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ -  ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಭೂ ಸಾಹಸ, ಜಲಸಾಹಸ ಮತ್ತು ವಾಯು ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಯುವಜನರಿಗೆ ಆದ್ಯತೆ ನೀಡಲಾಗುತ್ತಿದೆ.
Share:

ಸಾಮಾನ್ಯ ವಿಜ್ಞಾನ

1). ಕೆಂಪು ರಕ್ತ ಕಣಗಳು ಇಲ್ಲಿ ಉತ್ಪತ್ತಿಯಾಗುತ್ತವೆ.

a) ಯುಕೃತ್ತು
b) ಆಸ್ಥಿಮಜ್ಜೆ
c) ಮೂತ್ರಪಿಂಡಗಳು
d) ಹೃದಯ
B✅✅

2). ಶ್ರವಣಾತೀತ ( ಅಲ್ಟ್ರಾಸಾನಿಕ್ ) ತರಂಗಗಳೆಂದರೆ

a) ಶ್ರವ್ಯ ತರಂಗಗಳಿಗಿಂತ ಆವೃತ್ತಿ ಕಡಿಮೆಯಿರುವ ಶಬ್ದ ತರಂಗಗಳು
b) ನಿವಾ೯ತದಲ್ಲಿ ಉತ್ಪತ್ತಿಯಾದ ಶಬ್ದ ತರಂಗಗಳು
c) ಶ್ರವ್ಯ ಶಬ್ದದ ವ್ಯಾಪ್ತಿಗಿಂತ ಹೆಚ್ಚಿನ ಆವೃತ್ತಿಯನ್ನು ಹೊಂದಿರುವ ಶಬ್ದ ತರಂಗಗಳು
d) ಯಾವುದು ಅಲ್ಲ
C✅✅

3). ಒಂದು ವಸ್ತುವಿನ ಅಣುತೂಕವನ್ನು ಲೆಕ್ಕ ಮಾಡಲು ಇದನ್ನು ಅಳೆಯುತ್ತಾರೆ.

a) ದ್ರವ ರೂಪದಲ್ಲಿದ್ದಾಗಿನ ಸಾಂದ್ರತೆ
b) ಅನಿಲ ರೂಪದಲ್ಲಿದ್ದಾಗಿನ ಸಾಂದ್ರತೆ
c) ಘನೀಭವನ ಬಿಂದು
d) ಆವಿಯ ಒತ್ತಡ
D✅✅

4). ಸಿಂಹ, ಜಿರಾಫೆ , ಕಾಡೆಮ್ಮೆ ಮುಂತಾದ ವನ್ಯ ಪ್ರಾಣಿಗಳ ಆವಾಸ ಯಾವುದು?

a) ಪಣ೯ಪಾತಿ ಕಾಡುಗಳು
b) ಹುಲ್ಲುಗಾವಲುಗಳು
c) ಮರಭೂಮಿಗಳು
d) ಮೋನಿಫೆರಸ್  ಕಾಡುಗಳು
A✅✅

5). ಭೂಮಿಯ ಧ್ರುವೀಯ ವ್ಯಾಸವು ಅದರ ಸಮಭಾಜಕ ವೃತ್ತದ ವ್ಯಾಸಕ್ಕಿಂತ ಎಷ್ಟು ಕಡಿಮೆಯಿದೆ

a) 25 ಕಿ.ಮೀ
b) 80 ಕಿ.ಮೀ
c) 43 ಕಿ.ಮೀ
d) 30 ಕಿ.ಮೀ
A✅✅

6). ರಿಕ್ಟರ್ ಸ್ಕೇಲನ್ನು ಇದರ ತೀವ್ರತೆಯನ್ನು ಅಳೆಯಲು ಬಳಸುತ್ತಾರೆ.

a) ಸಾಗರ ಪ್ರವಾಹಗಳು
b) ಭೂಕಂಪಗಳು
c) ಭೂಮಿಯ ಭ್ರಮಣೆ
d) ಭೂಮಿಯ ಪರಿಭ್ರಮಣೆ
B✅✅

7). ಈ ಕೆಳಗಿನ ಯಾವುದನ್ನು ವಿಭಜಿಸಲು ಸಾಧ್ಯವಿಲ್ಲ.

a) ಅಣು
b) ಪರಮಾಣು
c) ಸಂಯುಕ್ತ
d) ಭೂಮಿಯ ಪರಿಭ್ರಮಣೆ
A✅✅

8). ಈ ಕೆಳಗಿನವುಗಳಲ್ಲಿ ಸಸ್ಯ ಜೀವಕೋಶದಲ್ಲಿ ಮಾತ್ರ ಕಂಡುಬರುವ ಕಣದ ಅಂಗ

a) ಸೈಟೋಪ್ಲಾಸಂ
b) ಕೋಶಪೊರೆ
c) ನ್ಯೂಕ್ಲಿಯಸ್
d) ಕ್ಲೋರೋಪ್ಲಾಸ್ಟ್
D✅✅

9). ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತದ ಕಣಗಳು

a) ಬಿಳಿ ರಕ್ತದಕಣ
b) ಕೆಂಪು ರಕ್ತಕಣ
c) ಕಿರುತಟ್ಟೆಗಳು( ಪ್ಲೇಟ್ ಲೆಟ್ಸ್ )
d) ಪ್ಲಾಸ್ಮಾ
C✅✅

10). ಹಿತ್ತಾಳೆಯು ಇವುಗಳ ಮಿಶ್ರಲೋಹ

a) ತಾಮ್ರ ಮತ್ತು ತವರ
b) ತಾಮ್ರ ಮತ್ತು ಸತು
c) ಸತು ಮತ್ತು ಅಲ್ಯೂಮಿನಿಯಂ
d) ಸೋಡಿಯಂ ಸಿಲಿಕೇಟ್
B✅✅

Q11. ಕ್ವಾಟ್ಸ್೯ನ ರಾಸಾಯನಿಕ ಹೆಸರು

a) ಕ್ಯಾಲ್ಸಿಯಂ ಆಕ್ಸೈಡ್
b) ಕ್ಯಾಲ್ಸಿಯಂ ಫಾಸ್ಪೇಟ್
c) ಸೋಡಿಯಂ ಫಾಸ್ಪೇಟ್
d) ಸೋಡಿಯಂ ಸಿಲಿಕೇಟ್
D✅✅

12). ಟಿಬಿಯಾ ಎಂಬ ಮೂಳೆ ಈ ಭಾಗದಲ್ಲಿದೆ.

a) ತಲೆಬುರುಡೆ
b) ಕೈ
c) ಕಾಲು
d) ತೊಡೆ
C✅✅

13). ಯಕೃತ್ತಿನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವುದು?

a) ವಿಟಮಿನ್ “ ಎ “
b) ವಿಟಮಿನ್ “ ಬಿ “
c) ವಿಟಮಿನ್ “ ಸಿ “´
d) ವಿಟಮಿನ್ “ ಡಿ “
A✅✅

14). ಉಪಗ್ರಹಗಳಲ್ಲಿ ಶಕ್ತಿಯ ಮೂಲವಾಗಿ ಇದನ್ನು ಬಳಸುತ್ತಾರೆ.

a) ದ್ಯುತಿಕೋಶ
b) ಸೌರಕೋಶ
c) ಶುಷ್ಕಕೋಶ
d) ಲೇಸರ್
A✅✅
15). ವಿದ್ಯುತ್ ಬಲ್ಬನಲ್ಲಿ ಬಳಸುವ ತಂತಿ

a) ತಾಮ್ರ
b) ಅಲ್ಯೂಮಿನಿಯಂ
c) ಕಬ್ಬಿಣ
d) ಟಂಗ್ ಸ್ಟನ್
D✅✅

16). ವ್ಯಾಸಲಿನ್ ಬಳಿದ ಸೂಜಿಯೊಂದನ್ನು ನೀರಿನ ಮೇಲೆ ಬಿಟ್ಟಾಗ ಅದು ತೇಲುತ್ತದೆ. ಈ ಕ್ರಿಯೆಯು ಇದಕ್ಕೆ ಉದಾಹರಣೆ ಆಗಿದೆ.

a) ಕೆಪಿಲರಿ ಕ್ರಿಯೆ
b) ಸಫೇ೯ಸ್ ಟೆನ್ ಷನ್
c) ಆಕಿ೯ಮಿಡಿಸ್ ನ ತತ್ವ
d) ಯಾವುದು ಅಲ್ಲ
B✅✅

17). ದೀಪದ ಬತ್ತಿಯಲ್ಲಿ ದೀಪದಲ್ಲಿರುವ ಎಣ್ಣೆಯ ಮೇಲೇರಲು ಕಾರಣ

a) ಒತ್ತಡದ ವ್ಯತ್ಯಾಸ
b) ಕೆಪಿಲರಿ ಕ್ರಿಯೆ
c) ಎಣ್ಣೆಯ ಸಾಂದ್ರತೆ ಕಡಿಮೆ ಇರುವುದು
d) ಗುರುತ್ವಾಕಷ೯ಣೆ
B✅✅

18). 1829 ರಲ್ಲಿ ಸತಿ ಪದ್ದತಿಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು

a) ಲಾಡ್೯ ಹೇಸ್ಟಿಂಗ್ಸ್
b) ಲಾಡ್೯ ರಿಪ್ಪನ್
c) ಲಾಡ್೯ ವಿಲಿಯಂ ಬೆಂಟಿಂಕ್
d) ಲಾಡ್೯ ಇವಿ೯ನ್
C✅✅

19). ಅಂತರಾಷ್ಟ್ರೀಯ ವ್ಯಾಪಾರದಲ್ಲಿ  ಡಂಪಿಂಗ್ ಎಂದರೆ

a) ಉತ್ಪಾದನಾ ವೆಚ್ಚಕ್ಕಿಂತ ಕಟ್ಟದೆ ವಸ್ತುಗಳನ್ನು ರಫ್ತು ಮಾಡುವುದು
b) ಸರಿಯಾದ ತೆರಿಯನ್ನು ಕಟ್ಟದೆ ರಫ್ತು ಮಾಡುವುದು
c) ಕಡಿಮೆ ಗುಣಮಟ್ಟದ  ವಸ್ತುಗಳ ರಫ್ತು
d) ಕಡಿಮೆ ಬೆಲೆಯಲ್ಲಿ ವಸ್ತುಗಳ ಮರುರಫ್ತು
A✅✅

20). ಸಂಸತ್ತಿನ ಎರಡೂ ಸದನಗಳು ಸಾಮಾನ್ಯ ಮಸೂದೆಯ ಬಗ್ಗೆ ಭಿನ್ನ ನಿಲುವನ್ನು ವ್ಯಕ್ತಪಡಿಸಿದಾಗ ಈ ಸಮಸ್ಯೆಯನ್ನು ಹೀಗೆ ಬಗೆಹರಿಸಬಹುದ

a) ಎರಡೂ ಸದನಗಳ ಜಂಟಿ ಅಧಿವೇಶನ
b) ಸುಪ್ರೀಂ ಕೋಟಿ೯ನ ಸಂವಿಧಾನಾತ್ಮಕ ಪೀಠ
c) ಭಾರತದ ರಾಷ್ಟ್ರಪತಿಯಿಂದ
d) ಲೋಕಸಭಾ ಅಧ್ಯಕ್ಷರಿಂದ
A✅✅

21). ಸಂವಿಧಾನದ IV ನೇ ಭಾಗವು ಇದರ ಬಗ್ಗೆ ವಿವರಿಸುತ್ತದೆ

a) ಮೂಲಭೂತ ಹಕ್ಕುಗಳು
b) ನಾಗರಿಕತ್ವ
c) ರಾಜ್ಯ ನಿದೇ೯ಶಕ ತತ್ವಗಳು
d) ಮೂಲಭೂತ ಕತ೯ವ್ಯಗಳು
C✅✅

22). ಈ ಕೆಳಗಿನ ಯಾವ ಸಭೆಯ ಅಧ್ಯಕ್ಷತೆಯಲ್ಲಿ ಅದರ ಸದಸ್ಯರಲ್ಲದವರು ವಹಿಸುತ್ತಾರೆ?

a) ಲೋಕಸಭೆ
b) ರಾಜ್ಯಸಭೆ
c) ವಿವಿಧ ರಾಜ್ಯಗಳ ವಿಧಾನಸಭೆ
d) ವಿವಿಧ ರಾಜ್ಯಗಳ ವಿಧಾನ ಪರಿಷತ್ತು
B✅✅

23). ಮಾನವನ ಜೀವಕೋಶದಲ್ಲಿರುವುದು

a) 44 ಕ್ರೋಮೋಸೋಮ್ ಗಳು
b) 48 ಕ್ರೋಮೋಸೋಮ್ ಗಳು
c) 46 ಕ್ರೋಮೋಸೋಮ್ ಗಳು
d) 23 ಕ್ರೋಮೋಸೋಮ್ ಗಳು
C✅✅

24). ಈ ಕೆಳಗಿನವುಗಳಲ್ಲಿ ವೈರಸ್ ನಿಂದ ಉಂಟಾಗುವ ರೋಗ ಯಾವುದು?

a) ಸಿಡುಬು ರೋಗ
b) ಕ್ಷಯ
c) ಮಲೇರಿಯಾ
d) ಕಾಲರಾ
A✅✅

25). ಭೂಮಿಯ ಮೇಲಿನ ಸಾಗರಗಳ ಪ್ರಮಾನ

a) 50%
b) 60%
c) 70%
d) 80%
A✅✅
Share:
ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅಥೈ೯ಸಿದವರು?

A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ

C

ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?

 A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ

C

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ

A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28

B

ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?

A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ

B


ವಾಂಚೊ ಸಮಿತಿ ಅಧ್ಯಯಯಿಸಿದ್ದು?

A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ


C


 ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ

A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ

ಸಂಕೇಗಳು

A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ

D

ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?

A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ


A

ದ್ವಿತೀಯ ಅಲೆಗ್ಸಾಂಡ್?

A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್

C

ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ

A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು

D

ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ


A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ


C


ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ

A ಜಿಲಾಟಿನ್
B ಜಿಯೋಲೈಟ್
C ಸೋಡಿಯಂ ಹೈಡ್ರಾಕ್ಸೈಡ್
D ಪೂಟ್ಯಾಶಿಯಂ ನೈಟ್ರೇಟ್

B



ಟಿಬೇಟ್ ಪ್ರಸ್ಥಭೂಮಿ ಹಾಗೂ ಹಿಮಾಲಯವನ್ನು ದಾಟಿ ಭಾರತಕ್ಕೆ ಬಂದು ಹಿಮಾಲಯದ ತಪ್ಪಲು ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗ ಯಾವುದು?

A ನಾಡಿ೯ಕ್
B ಎಸ್ಕಿಮೋ
C ನಿಗ್ರಿಟೋ
D ಟ್ಯಾಂಗ್ಲಾರು

A


ಅತಿಹೆಚ್ಚು ನೊಬೆಲ್ ಪ್ರಶಸ್ತಿ ಗೆದ್ದ ದೇಶ ಯಾವುದು?

A USA
B ಇಂಗ್ಲೆಂಡ್
C ಜಮ೯ನಿ
 D ಫ್ರಾನ್‌ಸ್


A

ನೊಬೆಲ್ ಪ್ರಶಸ್ತಿ ಗೆದ್ದ ಅತಿ ಹಿರಿಯ ವ್ಯಕ್ತಿ ಯಾರು?

A  ಜಾನ್ ಹಸಿ೯ನ್
B ಲಿಯೋನಿಡ್ ಹವಿ೯ಚ್
C ರೋನಾಲ್ಡ್ ರೋಸ್
D ರವಿಂದ್ರನಾಥ ಠಾಗೋರ್


B

ಇದುವರೆಗೆ ಎಷ್ಟು ಮಹಿಳೆಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ

A 55
B 47
C 49
D 32

C


1901 ರಿಂದ 2017 ಮರೆಗೆ ಒಟ್ಟು ಎಷ್ಟು ನೊಬೆಲ್ ಪ್ರಶಸ್ತಿ ಯನ್ನು ನೀಡಾಲಾಗಿದೆ

A 589
B 560
C 570
D 585

D



ನಕ್ಷತ್ರಗಳ ಹಟ್ಟಿಗೆ ಕಾರಣವಾದ ಅನಿಲ ಯಾವುದು?

A ಹೀಲಿಯಂ
B ನೈಟ್ರೋಜನ್
C ಹೈಡ್ರೋಜನ್
D ಆರ್ಗಾನ್


C


ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಗುರುತಿಸಿ?

A ಅಂದ್ರಬೃತ್ಯ ಎಂದರೆ  ಮೌಯ೯ರ ಸೇವಕರು

B ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು ಗೌತಮಿ ಪುತ್ರ ಶಾತಕಣಿ೯

C ಹಾಲನ ಆಸ್ಥಾನ ಕವಿ ಗಣಾಡ್ಯ

D ಶಾತವಾಹನರ ಸಂತತಿ ಸ್ಥಾಪಕ ಸಿಮುಖ

ಸಂಕೇತಗಳು
A) ಎಲ್ಲವೂ ಸರಿಯಾಗಿದೆ
B) A C ಮತ್ತು D ಮಾತ್ರ ಸರಿ
C) D ಮತ್ತು C ಮಾತ್ರ ಸರಿ
D) A B ಮತ್ತು D ಸರಿ

B
ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು 1ನೇ ಶಾತಕಣಿ೯


ಬ್ಯಾಕ್ಟೀರಿಯವನ್ನು ಇನ್ ಫೆಕ್ಷನ್ ಗೆ ಗುರಿ ಮಾಡುವ ವೈರಸ್ ಅನ್ನು ಏನನ್ನು ವರು?
A ಆಬೊ೯ವೈರಸ್
B ವೈರೆಮಿಯ
C ಬ್ಯಾಕ್ಟೀರಿಯೋ ಫೆಜ್
D ಬ್ಯಾಕ್ಟೊಫೆನ

C

ಭಾರತದ ನಾಗರೀಕರ ಮೂಲಭೂತ ಕತ೯ವ್ಯಗಳನ್ನು ಸಂವಿಧಾನದಲ್ಲಿ ಯಾವ ವಷ೯ ಅಳವಡಿಸಲಾಯಿತು?

A 1952
B 1976
C 1979
D 1981

C

ಸಸ್ಯಗಳ ಬೆಳವಣಿಗೆಯನ್ನು ಯಾವುದರಿಂದ ಅಳೆಯುತ್ತಾರೆ?

A ಪೋಟೋಮೀಟರ್
B ಅಕ್ವಾನೋಮೀಟರ್
C ಕ್ರೋಮೋ ಮೀಟರ್
D ಇದು ಯಾವುದು ಅಲ

B

ಆಹಾರದ ಪಿಷ್ಠ ಪದಾಥ೯ದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು?

A ಪ್ರೊಟೀನ್
B ಜೀವಸತ್ವ
C ಗ್ಲೀಸರೈಡ್ ಗಳು
D ಕಾಬೋ೯ಹೈಡ್ರೇಟ್ಗಳು

D



ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ

A 354D  - ಹಿಂಬಾಲಿಸುವುದುಸೆಕ್ಷನ್
B 341  - ಅಕ್ರಮವಾಗಿ ಕೂಡಿ ಹಾಕುವುದು ಸೆಕ್ಷನ್
C 365 ಮತ್ತು 511- ಅಪಹರಸಲು ಯತ್ನ ಸೆಕ್ಷನ್
D 498 'A' - ಕಿರುಕುಳ ಸೆಕ್ಷನ್

ಸಂಕೇತಗಳು

A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) B ಮತ್ತು D ಮಾತ್ರ ಸರಿ

B




ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ

A ವಿಶ್ವದ ಸುದೀಘ೯ ರಾಷ್ಟ್ರಗೀತೆಯಾಗಿರುವ ಗ್ರೀಕ್ ರಾಷ್ಟ್ರಗೀತೆಯಲ್ಲಿ 158 ಸಾಲುಗಳಿವೆ

B ವಿಶ್ವದ ಅತಿ ಕಡಿಮೆ ಸಾಲುಗಳಿರುವ ರಾಷ್ಟ್ರಗೀತೆ ನೇಪಾಳ

C ರಾಷ್ಟ್ರಗೀತೆ ಇಲ್ಲದ ವಿಶ್ವದ ಏಕೈಕ ರಾಷ್ಟ್ರ ಸೈಪ್ರಸ್

D ರವಿಂದ್ರನಾಥ ಟಾಗೋರ್ ಅವರು  ಬಾಂಗ್ಲಾದೇಶದ ರಾಷ್ಟ್ರಗೀತೆ ಯನ್ನು ರಚಿಸಿದರು


ಸಂಕೇತಗಳು

A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) C ಮತ್ತು D ಮಾತ್ರ ಸರಿ

C  ಜಪಾನ್



340 ನೇ ವಿಧಿ ಏನೆನ್ನು ಒಳಗೊಂಡಿದೆ

A ಅನುಸೂಚಿತ ಪ್ರದೇಶಗಳ ಮತ್ತು ರಾಜ್ಯಗಳ ಪರಿಶಿಷ್ಟ ಬಡಕಟ್ಟುಗಳ ಕಲ್ಯಾಣ ಸಮಿತಿ ನೇಮಕ

B ಪ.ಜಾತಿ ಮತ್ತು ಪ.ಪಂಗಡಗಳ ರಾಷ್ಟ್ರೀಯ ಆಯೋಗದ ನೇಮಕ

C ಕೇಂದ್ರ ಮತ್ತು ಜಂಟಿ ಲೋಕ ಸೇವಾ ಚುನಾವಣಾಧಿಕಾರಿಗಳ ನೇಮಕ

D ಸಮಾಜಿಕ ಮತ್ತು ಆಥಿ೯ಕವಾಗಿ ಹಿಂದುಳಿದ ವಗ೯ಗಳ ಅಧ್ಯಯನ ಸಮಿತಿ ನೇಮಕ

D


1955 ರ ಕಾಯ್ದೆ ಪ್ರಕಾರ ಎಷ್ಟು ವಿಧದಲ್ಲಿ ಪೌರತ್ವ ರದ್ದಾಗುವುದು

A 4
B 18
C 3
D 6

C


47 ವಿಧಿ?

A ಮಧ್ಯ ಪಾನ ನಿಷೇಧ
B ಗ್ರಾಮ ಪಂಚಾಯಿತಿಗಳ ಸಂಘಟನೆ
C ಗ್ರಾಮೀಣ ಕೈಗಾರಿಕೆಗಳನ್ನು ಬಳಸುವುದು
D ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ


A



ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ

A 44 ವಿಧಿ ನಾಗರೀಕರಿಗೆ ಏಕರೂಪದ ಸಿವಿಲ್ ಸಂಹಿತೆ

B 51 ವಿಧಿ ನ್ಯಾಯಾಂಗವನ್ನು ಕಾಯ೯ಂಗ ದಿಂದ
 ಪ್ರತ್ಯೇಕಿಸುವುದು

C 45 ವಿಧಿ ಮಕ್ಕಳಿಗೆ ಉಚಿತ ಮತ್ತು ಕಡ್ಡಯ ಶಿಕ್ಷಣ ಕೊಡುವುದು

D 49 ವಿಧಿ ರಾಷ್ಟ್ರೀಯ ಮಹತ್ವವುಳ್ಳ ಸ್ಮಾ ಕರಗಳ ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ ಮಾಡುವುದು

ಹೇಳಿಕೆಗಳು

A) A ಮತ್ತು B ಮಾತ್ರ ಸರಿ
B) A C ಮತ್ತು D ಮಾತ್ರ ಸರಿ
C) B ಮಾತ್ರ ತಪ್ಪು
D) D ಮತ್ತು C ಮಾತ್ರ ಸರಿ


B ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಯನ್ನು ವೃದ್ಧಿಗೊಳಿಸುವುದು


ವಿದೇಶಳಲ್ಲಿನ ಭಾರತೀಯ ಮೂಲದವರಿಗೆ ದ್ವಿಪೌರತ್ವ ನೀಡಲು ಯಾವಗ  ದ್ವಿಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿತು?

A 1978
B 1988
C 2004
D 2003

D



ಕಿಚನ್ ಕ್ಯಾಬಿನೆಟ್ ಎಂದರೆನು?

A ಮಂತ್ರಿ ಮಂಡಲ
B ಲೋಕಸಭೆ ನೇಮಕಾತಿ
C ಪ್ರಧಾನಿ ಆಪ್ತರಾದ ಸಚಿವರು
D ಅಧಿಕಾರ ಮತ್ತು ಕತ೯ವ್ಯಗಳು


C

ಉಪರಾಷ್ಟ್ರಪತಿ ಆಹ೯ತೆಗೆ ತಿಳಿಸುವ ವಿಧ

A 66 (3)
B 66 (1)
C 64
D 63


A

" ದೇಶದ ವಾರಂಟ್ ಆಫ್ ಪ್ರಿಸಿಡೆನ್ಸಿ" ಇವರಿಗೆ ಸಲ್ಲುತದೆ?

A ರಾಷ್ಟ್ರಪತಿ
B ಪ್ರಧಾನಿ
C ಸಂಸತ್ತು
D ಉಪ ರಾಷ್ಟ್ರಪತಿ

D


ಲೋಕಸಭೆಗೆ ಇದು ಒಂದು ಅಧಿಕಾರ

A ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲು ಮೊದಲು ಕ್ರಮ ಕೈಕೊಳ್ಳು ವ ಅಧಿಕಾರ

B ರಾಜ್ಯ ಪಟ್ಟಿಯಲ್ಲಿನ ಯಾವುದಾದರೂ ವಿಷಯ ಮೇಲೆ ಕಾನೂನು ಮಾಡುವಂತೆ
C ಮಂತ್ರಿ ಮಂಡಲದ ವಿರುದ್ಧ ಅವಿಶ್ವಾಸ ನಿಣ೯ಯ ಅಧಿಕಾರ

C


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇಮಕಗೊಂಡಿರುವ ಗಾಂಧೀವಾದಿ ಯಾರು?

A  ಜಯಚಾಮರಾಜೇಂದ್ರ
B ಕೆ.ಸಿ ಮುನಿ
C ಇದಿನಬ್ಬ
D ಎಸ್ ಎಂ ಕೃಷ್ಣ

C

ಸಮಾವೇಶಗಳ ನಗರ ಎಂದೇ ಖ್ಯಾತವಾಗಿರುವ ನಗರ ಯಾವುದು?

A ಬೆಂಗಳೂರು
B ಚಿಕ್ಕಮಗಳೂರು
Cದಾವಣೆಗೆರೆ
D ಹುಬ್ಬಳ್ಳಿ

C

ಅತಿವೃಷ್ಠಿ ಮತ್ತು ಅನಾವೃಷ್ಠಿಗಳೆರಡೆಕ್ಕೊ ತುತ್ತಾಗುವ ರಾಜ್ಯವೆಂದರೆ

A ರಾಜಸ್ಥಾನ
B ಜಯಪುರ
C ಸಿಕ್ಕಿಂ
D ಮಧ್ಯಪ್ರದೇಶ



D

ಕನಿಷ್ಠ ಪ್ರಮಾಣದ ಒತ್ತಡವನ್ನು ನಿರೂಪಿಸುವ ಜಲೈನ ಸಮಭಾರ ರೇಖೆ ಈ ದೇಶದ ಮೂಲಕ ಹಾದು ಹೋಗುತ್ತದೆ

A ನೇಪಾಳ
B ಅಫ್ಘಾನಿಸ್ಥಾನ
C ಬಾಂಗ್ಲಾ
D ಪಾಕಿಸ್ತಾನ

D

ಮಧುಮಲೈ ವನ್ಯಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

A KL
B KA
C TM
D AP


C


ಲಾನಾಸ್ ಉಷ್ಣವಲಯದ ಹುಲ್ಲುಗಾವಲು ಕಂಡು ಬರುವುದು?

A ಗಯಾನ
B ಬಲ್ಜಿಯಂ
C ರಷ್ಯಾ
D ಸುಡಾನ್

A

ಮರದ ತೆರಳನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ

A ಕೆನಡಾ
B ರಷ್ಯಾ
C ಜಪಾನ್
D USA
D


ಡಯಟಿಂ ಎಂಬುದು

A ಸಾವಯವ ಸಾಗರ ನಿಕ್ಷೇಪ
B ನಿರಯವ  ಸಾಗರ ನಿಕ್ಷೇಪ
C ಭೂಜನಿತ  ಸಾಗರ ನಿಕ್ಷೇಪ
D ಇದ್ಯಾವುದು ಅಲ್ಲ


A

ಅಟ್ಲಾಂಟಿಕ್ ಸಾಗರದ ಅತ್ಯಂತ ಅಳವಾದ ತಗ್ಗು

A ಕ್ಯೂರೆಲ್
B ಜಾವಾ
C ಅಲ್ಟ್ರಿಕ್
D ಬ್ಲೇಕ್

D


ಅತ್ಯಂತ ಎತ್ತರದಲ್ಲಿರುವ ಮೋಡಗಳು

A ಪದರುರಾ ಶಿಮೋಡಗಳು
B ಹಿಮಕಣಮೋಡ
C ರಾಶಿ ಮೋಡ
D ಪದರು ಮೋಡ


B

ಇತ್ತೀಚೆಗ ನಿಧನರಾದ ವಿಶ್ವದ ಅತೀ ಹೆಚ್ಚು ತೂಕದ ಮಹಿಳೆ ಇಮಾನ್ ಅಹಮ್ಮದ 504 ಕೆ.ಜಿ ಅವರು ಭಾರತಧ ಮುಂಬೈನ ಸೈಫಿ  ಆಸ್ಪತ್ರೆಯಲ್ಲಿ ತಮ್ಮ ಎಷ್ಟು ಕೆ.ಜಿ ತೂಕವನ್ನು  ಕಳೆದುಕೊಂಡಿದ್ದರು

A 120 KG
B 130 KG
C 105 KG
D 100 KG


D


ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ?

A ಸೆಪ್ಟೆಂಬರ್ 18
B ಸೆಪ್ಟೆಂಬರ್ 23
C ಸೆಪ್ಟೆಂಬರ್ 15
D ಸೆಪ್ಟೆಂಬರ್ 21

C



ಹೊಂದಿಸಿಬರೆಯಿರಿ

     ಪಟ್ಟಿ-1                             ಪಟ್ಟಿ-2
   ಸಂತರು                              ವೃತಿಗಳು
1 ಕಬೀರ್                             A) ಕೃಷಿಕ
2 ತುಕತಾಂ                            B) ದಜಿ೯
3 ನಾಮದೇವ                       C) ನೇಯ್ಗೆಯುವ
4 ರಾಯಿದಾಸ್‌                     D) ಚಮ್ಮಾರ

ಸಂಕೇತಗಳು
A) 1B,2A,3C,4D
B) 1A,2D,3B,4C
C) 1C,2A,3B,4D
D) 1D,2C,3B,4A


C

ವಿಶ್ವೇಶ್ವರಯ್ಯ   ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಯಾವಗ ಸ್ಥಾಪನೆ ಆಯಿತು

A 1920
B 1923
C 1928
D 1930


B


ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸರಿ ಹೊಂದಿಲ್ಲ

A ಡ್ರಾಕೆನ್ಸ್ ಬಗ೯ ಪವ೯ತಗಳು- ದಕ್ಷಿಣ ಆಫ್ರಿಕ
B ಎಲ್ಲಾನ ಪವ೯ತ - ಈಜಿಪ್ಟ
C ಮೌಂಟ್ ಕೆಮರೂನ-ಚಾಡ
D ಮೌಂಟ್ ಕಿಲಿಮಂಜಾರೋ-ತಾಂಜಾನಿಯಾ

B
ಮೌಂಟ್ ಸಿನಾಯಿ


"ನೇಫಾಲಜಿ' ಅಧ್ಯಯನ?

A ಜಲಗೋಳದ ಬಗ್ಗೆ ಅಧ್ಯಯನ
B ಖನಿಲಜಗಳ ಬಗ್ಗೆ ಅಧ್ಯಯನ
C ಮೋಡಗಳ ಬಗ್ಗೆ ಅಧ್ಯಯನ
D ಪವ೯ತಗಳ ಬಗ್ಗೆ ಅಧ್ಯಯನ


C



ಭೂಖಂಡಗಳ ಚಲನಾತ್ಮಕ ಸಿದ್ದಾಂತದ ಪ್ರತಿಪಾದಕ?

A ಡ್ಯಾಲಿ
B ಡೆವಿಸ್
C ಟೆನಸ್ಲೆ
D ಚಾಲಿ೯


A


ಗ್ರೋಥ್ ಪೋಲ್ ಮಾದರಿಯ ಪ್ರತಿಪಾದಕ

A ಡೆವಿಡ್ ಹಾವೆ೯
B ಉಲ್ಮನ್
C ಪೆರಾಕ್ಸ್‌
D ಪೀಟರ್ ಹೆಗೆಟ್


B

1⃣. ಕೆಳಗಿನ ಪಟ್ಟಿ ೧ನ್ನು ಸರೋವರಗಳು ಪಟ್ಟಿ ೨ ದೇಶಗಳುರೊಂದಿಗೆ ಸರಿಹೊಂದಿಸಿ ಹಾಗೂ ಸರಿಯಾದ ಉತ್ತರವನ್ನು ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ

ಪಟ್ಟಿ ೧ ಸರೋವರಗಳು ಪಟ್ಟಿ ೨ ದೇಶಗಳು

ಎ) ತುರ್ಕಾನ ಸರೋವರ (ರುಡಾಲ್ಪ್)
೧.ರಷ್ಯಾ

ಬಿ)ಒನೆಗಾ ಸರೋವರ
೨. ಕೀನ್ಯಾ

ಸಿ)ವಾನೆರ್ನ ಸರೋವರ
೩.ಕೆನಡಾ

ಡಿ) ರೈನಡೀರ ಸರೋವರ ೪.ಯು.ಎಸ್.ಎ

ಇ) ಮಿಚಿಗನ ಸರೋವರ ೫.ಸ್ವೀಡನ


1.೨ ೧ ೫ ೩ ೪✔️✔️✔️
2. ೪ ೩ ೧ ೨ ೫
3. ೧ ೨ ೩ ೫ ೪
4. ೩ ೧ ೪ ೫ ೨


2⃣. ಆಫ್ರಿಕಾದಲ್ಲಿ ೨೦ ಡಿಗ್ರಿ ಯಿಂದ ೩೦ ಪೂರ್ವ ರೇಖಾಂಶಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗಿ ಬಂದರೆ ನಿಮಗೆ ಕಂಡು ಬರುವ ವಿಶಾಲವಾದ ಸ್ವಾಭಾವಿಕ ಸಸ್ಯ ಸಂಪತ್ತನ್ನು ಸರಿಯಾದ ಅನುಕ್ರಮದಲ್ಲಿ ತಿಳಿಸಿ ?


1.ಸವನ್ನಾ- ಮರಭೂಮಿ ಮಾದರಿ - ಮಳೆಕಾಡುಗಳು ಮೇಡಿಟರೇನಿಯನ್ ಮಾದರಿ-ಸವನ್ನಾ-ಮರಭೂಮಿ ಮಾದರಿ.

2. ಮಳೆಕಾಡುಗಳು-ಸವನ್ನಾ-ಮರಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ-ಸವನ್ನಾ ಮರುಬೂಮಿಮಾದರಿ.

3.  ಮೆಡಿಟರೇನಿಯನ ಮಾದರಿ-ಮಳೆಕಾಡುಗಳು-ಮರುಬೂಮಿ ಮಾದರಿ-ಸವನ್ನಾ ಮರುಭೂಮಿಮಾದರಿ ಮೆಡಿಟರೇನಿಯನ್ ಮಾದರಿ.


4. ಮರುಭೂಮಿ ಮಾದರಿ-ಸವನ್ನಾ-ಮಳೆಕಾಡುಗಳು ಸವನ್ನಾ-ಮರುಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ✔️✔️✔️

3⃣. ಈ ಕೆಳಗಿನ ೧ನ್ನು ಪಟ್ಟಿ ೨ ರೊಂದಿಗೆ ಸರಿ ಹೊಂದಿಸಿ ಹಾಗೂ ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ ೧ ಪಟ್ಟಿ ೨


ಎ) ನದಿ
೧.ಇನಸೆಲ್ ಬರ್ಗ.

ಬಿ) ಹಿಮನದಿ
೨. ಸ್ವಾಭಾವಿಕ ಸೇತುವೆಗಳು.

ಸಿ) ಗಾಳೀ
೩. ಪ್ರಪಾತಗಳು.

ಡಿ)ಅಂತರ್ಜಲ.
೪. ಕೂಂಬ್ ಬ್ರಿಡ್ಜ.

ಇ) ಕಡಲ ಅಲೆಗಳು
೫.ಮೆಕ್ಕಲು ಸೋಪಾನಗಳು.

1. ೫ ೩ ೨ ೪ ೧
2. ೫ ೪ ೧ ೨ ೩✔️✔️✔️
3. ೫ ೩ ೨ ೧ ೪
4.  ೨ ೧ ೩ ೪ ೫

4⃣. ಭಾರತದ ರಾಷ್ಟ್ರೀಯ ಚಳುವಳಿಯ ಸಂವಿಧಾನತ್ಮಾಕ ಹಂತದ ಭಾಗವಾಗಿದ್ದ ಚಟುವಟಿಕೆಗಳು ಯಾವುವು ?

ಎ) ಖಾದಿಯ ಪ್ರವರ್ಧನೆ
ಬಿ ) ಅಸಹಕಾರ ಚಳುವಳಿ
ಸಿ ) ಉಪ್ಪಿನ ಸತ್ಯಾಗ್ರಹ
ಡಿ ) ಆಸ್ಪೃಶ್ಯತೆಯ ವಿರುದ್ದ ಹೋರಾಟ


1.ಎ ಮತ್ತು ಡಿ✔️✔️✔️
2. ಎ ಮತ್ತು ಸಿ
3. ಬಿ ಮತ್ತು ಡಿ
4. ಸಿ ಮತ್ತು ಡಿ

5⃣. ಹರಿಜನ್ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಯಾರು?

1. ಮಹಾದೇವ್ ದೇಸಾಯಿ
2. ಘನ ಶ್ಯಾಮ್ ದಾಸ್ ಬಿರ್ಲಾ✔️✔️✔️
3. ಬಿ.ಆರ್. ಅಂಬೇಡ್ಕರ್
4.ಅಮೃತ್ಲಾಲ್ ಠಾಕರ್


6⃣. ಪುಷ್ಪಗಿರಿ ಬೆಟ್ಟವು ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

1.ಶಿವಮೊಗ್ಗ
2.ಚಿಕ್ಕ ಮಂಗಳೂರು
3. ಕೊಡಗು✔️✔️✔️
4. ಹಾಸನ


7⃣. ಪಿಂಕ್ ಶಿಲೆಗಳಿಂದ ನಿರ್ಮಿತವಾದ ಬೆಟ್ಟಗಳು ಯಾವುವು?

1.ನರಗುಂದ ಬೆಟ್ಟಗಳು
2. ಶಹಪುರದ ಬೆಟ್ಟಗಳು
3. ನಂದಿದುರ್ಗ ಬೆಟ್ಟಗಳು
4. ಇಳಕಲ್ ಬೆಟ್ಟಗಳು✔️✔️✔️

8⃣. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನುಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯಬಜೆಟ್ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನುಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.


1. ಕೇವಲ 1
2. 2 ಮತ್ತು 3
3. 3 ಮಾತ್ರ✔️✔️✔️
4. 1,2 ಮತ್ತು 3

9⃣. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನುಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?

1. ಅಂಡಮಾನ್ ದ್ವೀಪ✔️✔️✔️
2. ಅಣ್ಣಾಮಲೈ ಅರಣ್ಯ
3. ಮೈಕೆಲಾ ಬೆಟ್ಟ
4. ಈಶಾನ್ಯದ ಉಷ್ಣವಲಯದ ಮಳೆ ಕಾಡು

21-07-17(kas Prelims)


🔟. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?


1. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲುಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವಸಾಧನವಾಗಿದೆ.✔️✔️✔️

2. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲುನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.

3. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರಒಪ್ಪಂದವಾಗಿದೆ.

4. ಇದು ಆರ್ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ಪ್ರಾಯೋಜಿತವಾಗಿದೆ.

ಚಂದನ್:
ಚಂದನ್:
ಪಲ್ಲವರ ವಾಸ್ತುಶಿಲ್ಪದ ತವರು ಮನೆ ಯಾವುದು.

A. ಕಂಚಿ
B.ಮದುರೈ.
C. ಬಾದಾಮಿ
D. ಅಜಂತಾ

A✅✅

ದಕ್ಷಿಣ ಭಾರತದ ವಾಸ್ತುಶಿಲ್ಪದ ತವರ ಮನೆ ಯಾವುದು?

A. ಮಹಾಬಲಿಪುರಂ
B. ಖುಜರಾಹೊ
C. ಮದುರೈ
D. ಕಲ್ಲತ್ತಾ

A✅✅

ಮೊಘಲ್ ಆಗಸ್ಟಸ್ ಎಂದು ಯಾರನ್ನು ಕರೆಯಲಾಗುತ್ತದೆ?

A.2ನೇ ಅಕ್ಬರ್
B.ಷಾಜಹಾನ್
C ಬಾಬರ್
D.ಹುಮಾಯೂನ್‌

B✅✅

ಸಾಧಕಗಳ ಸಾಮ್ರಾಟ ಎಂದು ಯಾರನ್ನು ಕರೆಯಲಾಗುತ್ತದೆ?

A. ಔರಂಗಜೇಬ
B. ಹುಮಾಯೂನ್‌
C. ಅಕ್ಬರ್
D. ಷಾಜಹಾನ್

D✅✅

ಮಯೂರ ಸಿಂಹಾಸನದ ಶಿಲ್ಪಿ ಯಾರು?

A. ಬಾದಲ್ ಖಾನ್
B. ಅಮನ್ ಖಾನ್
C. ಭಕ್ತ ಖಾನ್
D. ಸಂಗಮ್ ಖಾನ್

A✅✅

ಯಾವ ಅರಸರ ವಾಸ್ತುಶಿಲ್ಪವನ್ನು ಶಿಲೆಯಲ್ಲಿನ ಭಾವಗೀತೆ ಎಂದು ವರ್ಣಿಸಲಾಗಿದೆ?

A. ಮೊಘಲರು
B. ಹೊಯ್ಸಳರು
C. ಪಲ್ಲವರು.
 D. ವಿಜಯನಗರ ಸಾಮ್ರಾಜ್ಯ

A✅✅

ನಿಸರ್ಗ ಪ್ರೇಮಿಯಾದ ಮೊಘಲರ ಅರಸ ಯಾರು?

A. ಜಹಾಂಗೀರ್
B. ಹುಮಾಯೂನ್‌
C.ಬಾಬರ್
D.ಔರಂಗಜೇಬ

C✅✅

ಮೊಘಲರ ಯಾರ ಕಾಲದಲ್ಲಿ ಚಿತ್ರ ಕಲೆಗಳು ಇಂಡೋ ಪರ್ಶಿಯನ್ ಅಂಶಗಳಿಂದ ಮಿಶ್ರಣಗೊಂಡವು?

A. ಹುಮಾಯೂನ್‌
B.ಫರೂಕ್ಸಿಯರ್
C.ಅಕ್ಬರ್
D. ಷಾಜಹಾನ್

C✅✅

ಯಾರ ಕಾಲದಲ್ಲಿ ಮೊಗಲರ ಚಿತ್ರಕಲೆ ಸಂಪೂರ್ಣವಾಗಿ ನಿಂತಿತು?

A. ಧಾರಾಶುಕೋ
B. 2ನೇ ಷಾ ಆಲಂ
C. ಔರಂಗಜೇಬ
D. 2ನೇ ಅಕ್ಬರ್

C✅✅

ಸಂಗೀತದಲ್ಲಿ ಆಸಕ್ತಿ ಹೊಂದಿರದ ಮೊಗಲ್ ಅರಸ ಯಾರು?

A. ಜಹಾಂಗೀರ್
B. ಔರಂಗಜೇಬ
C. ಬಾಬರ್
D.ಅಕ್ಬರ್

B✅✅

ಮೊಗಲರ ಕಾಲದಲ್ಲಿ ಯಾವ ಸಂಗೀತಗಾರನಿಗೆ ಮಿರ್ಜಾ ಎಂಬ ಬಿರುದಿತ್ತು.?

A. ತಾನ್ ಸೇನ್
B. ಸೂರ್ ದಾಸ್
C. ಬಾಬಾರಾಮ್ ದಾಸ್
D. ಗುರು ಸಹಾಯ

A✅✅

ಸಂಗೀತ ದರ್ಪಣ ಕೃತಿಯನ್ನು ರಚಿಸಿದವರು ಯಾರು?

A.ದಾಮೋದರ ಮಿತ್ರ
B. ಅಹೋಬಲ
C.ಸೂರ್ ದಾಸ
D. ಗುಲ್ಬದನ್ ಬೇಗಂ

A✅✅

ಯಾರನ್ನು ಮೊಟ್ಟಮೊದಲ ಸರ್ವಧರ್ಮ ಸಮನ್ವಯಾಚಾರ್ಯ ಎಂದು ಕರೆಯಲಾಗಿದೆ?

A. ಬಸವಣ್ಣ
B. ದಯಾನಂದ ಸರಸ್ವತಿ
C. ರಾಜರಾಮ ಮೋಹನರಾಯರು
D. ಆತ್ಮರಾಂ ಪಾಂಡುರಂಗ

C✅✅

ಕೋಮುವಾದದ ಉಕ್ಕಿನ ಮನುಷ್ಯ ಎಂದು ಯಾರ‌ನ್ನು ಕರೆಯಲಾಗುತ್ತದೆ?

A. ಮಹಮ್ಮದ್ ಅಲಿ ಜಿನ್ನಾ
B. ಸರ್ ಸೈಯದ್ ಅಹಮದ್ ಖಾನ್
C.ಖಾನ್ ಗಫೂರ್ ಖಾನ್.
D.ಮೌಲನಾ ಅಬ್ದುಲ್ ಕಲಾಂ ಆಜಾದ್

B✅✅

ಯಾವ ದೇವಾಲಯ ಗಳನ್ನು" ದೇವಾಲಯ ವಾಸ್ತುಶೈಲಿಗಳ ಪ್ರಯೋಗಶಾಲೆ" ಎಂದು ಕರೆಯಲಾಗಿದೆ?

A. ಪಟ್ಟದ ಕಲ್ಲು.
B. ಅಜಂತಾ
C.ಐಹೊಳೆ
D. ಮಹಾಬಲಿ ಪುರ

A✅✅

ಯಾವ ಸಾಮ್ರಾಜ್ಯವನ್ನು "ದಕ್ಷಿಣ ಭಾರತದ ರಕ್ಷಣಾ ಗೋಡೆ "ಎಂದು ಕರೆಯಲಾಗುತ್ತದೆ?

A. ಕದಂಬರು
B. ಶಾತವಾಹನರು
C. ವಿಜಯನಗರ ಸಾಮ್ರಾಜ್ಯ
D. ಪಲ್ಲವರು

C✅
https://t.me/joinchat/CCJyvQ6bccG2kuFQupElYw

ಚರ್ಚಾಕೂಟ👆


https://t.me/joinchat/CCJyvQl23kT1PBJgMhLBYQ

ಗ್ರೂಪ್👆

ಭಾರತ  ಮತ್ತು ವಿಶ್ವ ನಡುವಿನ ಮುಖ್ಯ ರಕ್ಷಣಾ ಕಾರ್ಯಾಚರಣೆ
~~~~~~~~~~
👉ಗರುಡ: ಭಾರತ-ಫ್ರಾನ್ಸ್

👉ಹ್ಯಾಂಡ್-ಹ್ಯಾಂಡ್: ಭಾರತ-ಚೀನಾ

👉ಇಂದ್ರ: ಭಾರತ-ರಷ್ಯಾ

👉ಜಿಮೆಕ್ಸ್: ಇಂಡಿಯಾ-ಜಪಾನ್

👉ಮಲ್ಬಾರ್: ಅಸ್-ಇಂಡಿಯಾ

👉ಶೇಡ್: ನೌಕಾ ಪಡೆಗಳು ಭಾರತ, ಜಪಾನ್ ಮತ್ತು ಚೀನಾ

👉ಸೂರ್ಯ ಕಿರಣ್: ಭಾರತ ಮತ್ತು ನೇಪಾಳ

👉ವರುನಾ: ಫ್ರಾನ್ಸ್ & ಇಂಡಿಯಾ

👉ಸಿಂಬೆಕ್ಸ್: ರಿಪಬ್ಲಿಕ್ ಆಫ್ ಸಿಂಗಾಪುರ್ ನೌಕಾಪಡೆಯೊಂದಿಗೆ ಭಾರತೀಯ ನೌಕಾಪಡೆ

👉ಇಬ್ಸಮರ್: ಬ್ರೆಜಿಲ್ ಮತ್ತು ದಕ್ಷಿಣ
 ಆಫ್ರಿಕಾದ ನೌಕಾಪಡೆಯೊಂದಿಗೆ ಭಾರತ

👉ಕೊಂಕಣ: ಭಾರತೀಯ ನೌಕಾಪಡೆ ಮತ್ತು ರಾಯಲ್ ನೇವಿ ಬ್ರಿಟನ್

👉ಆಸಿಂಡೆಕ್ಸ್: ಇಂಡಿಯನ್ & ಆಸ್ಟ್ರೇಲಿಯನ್ ನೌಕಾಪಡೆ

👉ಇಂದ್ರಧನುಶ್ ಅಥವಾ ರೇನ್ಬೋ: ಇಂಡಿಯಾ-ಯುಕೆ ಏರ್ ಎಕ್ಸರ್ಸೈಸಸ್

👉ನೊಮಾಡಿಕ್ ಎಲಿಫೆಂಟ್: ಮಂಗೋಲಿಯಾದೊಂದಿಗೆ ಭಾರತೀಯ ಸೇನಾ ಪ್ರಯೋಗಗಳು

👉ಎಕುವೆರಿನ್: ಮಾಲ್ಡೀವ್ಸ್ ಮತ್ತು ಭಾರತ
ಗರುಡ ಶಕ್ತಿ: ಭಾರತ ಮತ್ತು ಇಂಡೋನೇಷ್ಯಾ

👉ಮಿತ್ರ ಶಕ್ತಿ: ಭಾರತ-ಶ್ರೀಲಂಕಾ
ನಸೀಮ್ ಅಲ್-ಬಹರ್: ಇಂಡಿಯಾ-ಓಮನ್

👉SLINEX: ಭಾರತ ಮತ್ತು ಶ್ರೀಲಂಕಾ ನಡುವೆ ನೌಕಾಪಡೆಯಲ್ಲಿ ಜಂಟಿ ವ್ಯಾಯಾಮ

👉ಸಹಯೋಗ್-ಕೈಜಿನ್ - ಕೋಸ್ಟ್ ಗಾರ್ಡ್ಸ್ ಆಫ್ ಇಂಡಿಯಾ & ಜಪಾನ್

👉ಮಲಬಾರ್: ಭಾರತ & ಯುಎಸ್
ಯುಧ್ Abhyas: ಭಾರತ & ಯುಎಸ್

👉ಕೆಂಪು ಧ್ವಜ: ಭಾರತ & ಯುಎಸ್
ನಿಭಾಯಿಸು: ಭಾರತ & ಯುಎಸ್
ಸ್ಯಾಂಪರಿ - ಭಾರತ ಮತ್ತು ಬಾಂಗ್ಲಾದೇಶ
Share:

General Knowledge

General Knowledge :
🌿ಕರ್ನಾಟಕದಲ್ಲಿರುವ ಪದ್ದತಿ ಯಾವುದು?
                 ದ್ವಿಸದನ ಪದ್ಧತಿ.
   
🌿ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
                ರಾಷ್ಟ್ರಪತಿ.

🌿ಅಶೋಕ ಚಕ್ರದ ಸಂಕೇತವೇನು?
               ನಿರಂತರ ಚಲನೆ.

🌿ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
                ಆಯತ.

🌿ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
           ಜನತ ನ್ಯಾಯಾಲಯ.

🌿ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
              ಮಂಡೋಕ ಉಪನಿಷತ್.

🌿ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
            ಚೈತ್ರಮಾಸ.

🌿ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
              01/02/1992.

🌿ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
             ರಾಷ್ಟ್ರಪತಿ.

🌿ಎಂ.ಪಿ. ವಿಸ್ತರಿಸಿರಿ?
               ಮೆಂಬರ್ ಆಫ್ ಪಾರ್ಲಿಮೆಂಟ್.

🌿ಭಾರತದ ಪ್ರಥಮ ಪ್ರಜೆ ಯಾರು?
                 ರಾಷ್ಟ್ರಪತಿ.

🌿ದೇಶದ ಅತೀ ಉನ್ನತ ನ್ಯಾಯಾಲಯಯಾವುದು?                  ಸರ್ವೋಚ್ಚನ್ಯಾಯಾಲಯ
(ಸುಪ್ರೀಂಕೊರ್ಟ್).

🌿ಸಂವಿಧಾನದ ಹೃದಯ ಯಾವುದು?
            ಪ್ರಸ್ತಾವನೆ/ಪೀಠಿಕೆ.

🌿ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
               5 ವರ್ಷಗಳು.

🌿ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
                 ಉಪ ರಾಷ್ಟ್ರಪತಿ.

🌿ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
                 ನವದೆಹಲಿ.

🌿ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
                  ದೆಹಲಿ.

🌿ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
         ಏರ್ ಚೀಫ್ ಮಾರ್ಷಲ್.

🌿ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
           ರಾಷ್ಟ್ರಪತಿ ಭವನ.

🌿ನೆಹರುರವರ ಪ್ರೀತಿಯ ಹೂ ಯಾವುದು?
               ಕೆಂಪು ಗುಲಾಬಿ.

🌿ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
             ಬೆಂಗಳೂರು.

🌿ಸಿಬರ್ಡ್ ನೌಕಾನೆಲೆ ಎಲ್ಲಿದೆ?
               ಕಾರವಾರ.

🌿ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
         ಭಾರತ.

🌿ಎನ್.ಸಿ.ಸಿ ವಿಸ್ತರಿಸಿರಿ?
           ನ್ಯಾಷನಲ್ ಕ್ಯಾಡೇಟ್ ಕೋರ್.

🌿ಸಂಸತ್ತಿನ ಕೆಳಮನೆ ಯಾವುದು?
              ಲೋಕಸಭೆ.

🌿ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
          25.

🌿ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
              35.

🌿ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
             6.

🌿ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
            ಜಮ್ಮು&ಕಾಶ್ಮೀರ.

🌿ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
              ದೆಹಲಿ.

🌿ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
              3:2.

🌿ಭಾರತೀಯ ಸಂಸ್ಕೃತಿಯ ನಿಲುವೇನು?
               ಬಾಳು,ಬಾಳುಗೊಡು.

🌿ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
        24.

🌿ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
             340.

🌿ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?  
          1929.

🌿ಎಮ್.ಎಲ್.ಸಿ ವಿಸ್ತರಿಸಿರಿ?
               ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

🌿ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
             ಭಾರತ.

🌿ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
              12.

🌿ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
             ಮೂಲಭೂತ ಕರ್ತವ್ಯ.

🌿ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
             ಡಾ.ಬಿ.ಆರ್.ಅಂಬೇಡ್ಕರ್.

🌿ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
          1964.

🌿ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
        5.

🌿ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
         ಮೇಘನಾದ ಸಹಾ.

🌿ನಮ್ಮ ದೇಶದ ಹಾಡು ಯಾವುದು?
           ವಂದೇ ಮಾತರಂ.

🌿"ವಂದೇ ಮಾತರಂ" ಗೀತೆ ರಚಿಸಿದವರು
ಯಾರು?
             ಬಂಕಿಮ ಚಂದ್ರ ಚಟರ್ಜಿ.

🌿ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ
ಯಾವುದು?
        ಸಂವಿಧಾನ ಸಭೆ.

🌿ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ
ಕೊಡಲ್ಪಟ್ಟ ಹಕ್ಕುಗಳೇ ------?
          ಮೂಲಭೂತ ಹಕ್ಕುಗಳು.

🌿ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?    
           97 ಬಾರಿ. { present 101}

🌿ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
        7 (ದ್ವಿಸದನ ಪದ್ದತಿ).

🌿ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?  
            30 ವರ್ಷಗಳು.

🌿ಎಮ್.ಎಲ್.ಎ ವಿಸ್ತರಿಸಿರಿ?
           ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

🌿ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
           ಆಡ್ಮಿರಲ್.

🌿ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
         ರಾಷ್ಟ್ರಪತಿ.

🌿ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
         26 ನವೆಂಬರ್ 1949.

🌿ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
               1946.
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com