For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಯುವ ಸಬಲೀಕರಣ ಮತ್ತು ಕ್ರೀಡೆ :

ಯುವ ಸಬಲೀಕರಣ ಮತ್ತು ಕ್ರೀಡೆ :

     ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು 1969 ರಲ್ಲಿ ಯುವಜನ ಸೇವಾ ನಿರ್ದೇಶನಾಲಯವನ್ನಾಗಿ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಲು ಸ್ಥಾಪಿಸಲಾಯಿತು. ಇಲಾಖೆಯನ್ನು ವಿಭಾಗ ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ಕಛೇರಿಗಳನ್ನು ತೆರೆಯುವ ಮೂಲಕ 1975 ರಲ್ಲಿ ಮತ್ತು ತಾಲೂಕು ಅಧಿಕಾರಿಗಳನ್ನು 1977 ರಲ್ಲಿ ನೇಮಿಸುವುದರ ಮೂಲಕ ಪುನರ್ ರಚಿಸಲಾಯಿತು. ಕರ್ನಾಟಕ ರಾಜ್ಯ ಸ್ಪೋರ್ಟ್ಸ್  ಕೌನ್ಸಿಲನ್ನು 1980 ರಲ್ಲಿ ಇಲಾಖೆಯಲ್ಲಿ ವಿಲೀನಗೊಳಿಸಿ ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ಯುವನೀತಿಯನ್ನು 2013 ರಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಯುವನೀತಿಯ ಶಿಫಾರಸ್ಸಿನಂತೆ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ನಿರ್ದೇಶಕರು/ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಮಹಾ ನಿರ್ದೇಶಕರು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ್ರಿಡಾಂಗಣ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿಗಳು ಆಗಿರುತ್ತಾರೆ.

ಧ್ಯೇಯೋದ್ದೇಶಗಳು:

1. ರಾಜ್ಯದ ಯುವಜನರನ್ನು ತಲುಪಲು ಎಲ್ಲ ಸ್ಥರಗಳಲ್ಲಿ ಅವಕಾಶ ಕಲ್ಪಿಸುವುದು.
ರಾಜ್ಯದ ಯುವಜನರ ಗುರಿ, ಆಶೋತ್ತರ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳವುದು.
2. ರಾಜ್ಯದ ವೈವಿಧ್ಯಮಯ ಸಾಂಸ್ಕøತಿಕ ಸಂರಚನೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗನುಗುಣವಾಗಿ ರಾಜ್ಯದೆಲ್ಲೆಡೆ ಹರಡಿಕೊಂಡಿರುವ ನಮ್ಮ ಯುವಜನರ ವಿವಿಧ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವುದು.
3. ಕರ್ನಾಟಕ ರಾಜ್ಯದ ಯುವಜನರನ್ನು ದೃಷ್ಠಿಯಲ್ಲಿರಿಸಿಕೊಂಡು ಅವರಿಗಾಗಿ ಅಲ್ಪಾವಧಿ ಹಾಗೂ ದೀಘಾವಧಿ ಯೋಜನೆಗಳನ್ನು ರೂಪಿಸುವುದು.
4. ಯುವಜನರ ಆಂತರಿಕ ಸಾಮಥ್ರ್ಯವನ್ನು ವೃದ್ದಿಗೊಳಿಸಲು ಅವಕಾಶಗಳನ್ನು ಕಲ್ಪಿಸಿ, ಅವರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುವುದು.
5. ರಾಜ್ಯದ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾಲುದಾರರಾಗಲು, ಜೊತೆಗೆ ಬಹುಮುಖಿ ವಲಯಗಳಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಯುವಜನರಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವುದು.
6. ಯುವಜನ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ಉದ್ದೇಶಿತ ಫಲಿತಾಂಶಗಳನ್ನು ಈಡೇರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು.

ದೃಷ್ಟಿಕೋನ : ನಮ್ಮ ಸಮಾಜ, ಕರ್ನಾಟಕ, ಭಾರತ ಮತ್ತು ವಿಶ್ವದ ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾಗುವಂತೆ ಯುವಜರನ್ನು ಪ್ರೇರೆಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು.

ಯೋಜನೆಗಳು :

1. ಗ್ರಾಮೀಣ ಕ್ರೀಡೋತ್ಸವ -  ಎಲ್ಲಾ 176 ತಾಲ್ಲೂಕುಗಳಲ್ಲಿ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ‘ಗ್ರಾಮೀಣ ಕ್ರೀಡೋತ್ಸವ’ ಆಯೋಜಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ವಾರ್ಷಿಕ ರೂ 1.50 ಲಕ್ಷಗಳನ್ನು ಒದಗಿಸಲಾಗುತ್ತಿದೆ.

2. ಕರ್ನಾಟಕ ಕ್ರೀಡಾ ರತ್ನ -  ಗ್ರಾಮೀಣ, ದೇಸೀ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ‘ಕರ್ನಾಟಕ ಕ್ರೀಡಾ ರತ್ನ’ ಎಂಬ ನೂತನ ಪ್ರಶಸ್ತಿಯನ್ನು 2014-15ನೇ ಸಾಲಿನಿಂದ ನೀಡುತ್ತಿದ್ದು, ಪ್ರಶಸ್ತಿಯು ರೂ 1.00 ಲಕ್ಷಗಳ ನಗದು ಬಹುಮಾನ, ಪ್ರಮಾಣ ಪತ್ರಗಳನ್ನೊಳಗೊಂಡಿರುತ್ತದೆ.

3. ಶೈಕ್ಷಣಿಕ ಶುಲ್ಕ ಮರುಪಾವತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾಗುತ್ತಿದೆ.  .

4. ಕ್ರೀಡಾ ವಿದ್ಯಾರ್ಥಿ ವೇತನ -  ರಾಜ್ಯ ಮಟ್ಟದಲ್ಲಿ ಪದಕ ವಿಜೇತರಾಗಿ ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000/- ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.  

5. ಯುವ ಕ್ರೀಡಾ ಸಂಜೀವಿನಿ -  ರಾಜ್ಯದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯ ಭದ್ರತೆ ಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆ ಅತಿವಿನೂತನ ‘ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ’ ಯನ್ನು ಪ್ರಾರಂಭಿಸಿದೆ.  ರಾಜ್ಯ, ರಾಷ್ಟ್ರ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

6. ಯುವ ಕ್ರೀಡಾ ಮಿತ್ರ - 2015-16ನೇ ಸಾಲಿನ ಆಯವ್ಯಯದಲ್ಲಿ ‘ಯುವ ಕ್ರೀಡಾ ಮಿತ್ರ’ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ ಪ್ರತಿ ಹೋಬಳಿಗೊಂದು ಯುವ ಕ್ರೀಡಾ ಸಂಘವನ್ನು ಗುರುತಿಸಿ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆ ನಿಲಯಗಳಿಗೆ ಕಳುಹಿಸಲು ಪ್ರೋತ್ಸಾಹಧನವಾಗಿ ವಾರ್ಷಿಕ ರೂ 25,000/-ಗಳನ್ನು ನೀಡಲಾಗುವುದು.

7. ನಗದು ಪುರಸ್ಕಾರ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಯೋಜನೆಯನ್ನು ಇಲಾಖೆಯು ಅನುಷ್ಥಾನಗೊಳಿಸುತ್ತಿದೆ.

8. ಏಕಲವ್ಯ ಪ್ರಶಸ್ತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯು ರೂ 2.00 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ.

9. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ - ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾ ಮೀಸಲಾತಿ ಅಡಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

10. ಕ್ರೀಡಾಕೂಟಗಳ ಸಂಘಟನೆ - ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರತಿ ವರ್ಷ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.  ಅದೇ ರೀತಿ, ಮಹಿಳಾ, ಗ್ರಾ

ಮೀಣ, ಮತ್ತಿತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.  

11. ಮಾಸಾಶನ ಯೋಜನೆ - 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ವಾರ್ಷಿಕ ಆದಾಯ ರೂ 20,000/- ಗಳಿಗಿಂತ ಕಡಿಮೆ ಇರುವ ಮಾಜಿ ಕುಸ್ತಿ/ಕ್ರೀಡಾಪಟುಗಳಿಗೆ ಮಾಸಾಶನವನ್ನು ನೀಡಲಾಗುತ್ತಿದೆ.
ರಾಜ್ಯ ಮಟ್ಟ-ರೂ 750/- ರಿಂದ 1,500/-,
ರಾಷ್ಟ್ರ ಮಟ್ಟ ರೂ 1,000/- ರಿಂದ ರೂ 2,000/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 3,000/- ರಂತೆ ಮಾಜಿ ಪೈಲ್ವಾನರುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ.

ರಾಜ್ಯ ಮಟ್ಟ-ರೂ 750/- ರಿಂದ ರೂ 1,000/-,
ರಾಷ್ಟ್ರ ಮಟ್ಟ ರೂ 1,000/-ರಿಂದ ರೂ 1,500/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 2,000/- ರಂತೆ ಮಾಜಿ ಕ್ರೀಡಾಪಟುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ. ಸದರಿ ಯೋಜನೆಯನ್ನು ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆ ಅಡಿಯಿಂದ ಅನುಷ್ಥಾನಗೊಳಿಸಲಾಗುತ್ತಿದೆ.

12. ರಾಜೀವ್ ಗಾಂಧಿ ಖೇಲ್ ಅಭಿಯಾನ್ - ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟವನ್ನು (16 ವರ್ಷ ಒಳಗಿನ ಬಾಲಕ-ಬಾಲಕಿಯರು) ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹಾಗೂ ಮಹಿಳಾ ಕ್ರೀಡಾಕೂಟವನ್ನು (25 ವರ್ಷದೊಳಗಿನ ಮಹಿಳೆಯರಿಗೆ) ಜಿಲ್ಲೆ ಮತ್ತು ರಾಜ್ಯಮಟ್ಟಗಳಲ್ಲಿ ಸಂಘಟಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ನಿಯೋಜಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಕ್ರೀಡಾ ಕಿಟ್ ಮತ್ತು ತರಬೇತಿಯನ್ನು ನೀಡಲಾಗುತ್ತಿದೆ.

13. ‘ನಮ್ಮೂರ ಶಾಲೆಗೆ ನಮ್ಮ ಯುವಜನರು’  ಕಾರ್ಯಕ್ರಮ - ತಮ್ಮೂರ ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲ್ಲೂಕಿಗೆ ಒಂದರಂತೆ ಗುರುತಿಸಿ ರೂ 1.00 ಲಕ್ಷ ನಗದು ಪುರಸ್ಕಾರ ನೀಡುವ ಯೋಜನೆ.  2015-16 ನೇ ಸಾಲಿನಲ್ಲಿ ಎಲ್ಲಾ 176 ತಾಲ್ಲೂಕುಗಳ ಉತ್ತಮ ಯುವ ಸಂಘಗಳಿಗೆ ತಲಾ ರೂ 2.00 ಲಕ್ಷ ವಿತರಿಸಲಾಗಿದೆ.

14. ‘ಯುವ ಸ್ಪಂದನ’ ಕಾರ್ಯಕ್ರಮ - ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಯುವಜನರಿಗೆ ಮತ್ತು ಪೋಷಕರಿಗೆ ಆಪ್ತ ಸಮಾಲೋಚನಾ ಸೌಲಭ್ಯ ಒದಗಿಸುವ ಮತ್ತು ಯುವಜನರನ್ನು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡುವ ಕಾರ್ಯಕ್ರಮ.

15. ‘ಯುವ ಶಕ್ತಿ ಕೇಂದ್ರ’: ರಾಜ್ಯದ 30 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಗುರುತಿಸಲಾಗಿದ್ದು.  30 ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಲಾ ರೂ. 15.00 ಲಕ್ಷಗಳ ವೆಚ್ಚದಲ್ಲಿ ಮಲ್ಟಿ ಜಿಮ್ ಸೌಲಭ್ಯಗಳನ್ನೊಳಗೊಂಡ ಯುವ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

16. ಯುವಜನೋತ್ಸವ- ಯುವಜನರ ಶಾಸ್ತ್ರೀಯ ಪ್ರತಿಭೆ ಅನಾವರಣಕ್ಕೆ ಜಿಲ್ಲೆಯಿಂದ ರಾಷ್ಟ್ರ ಮಟ್ಟದವರೆಗಿನ ಸ್ಪರ್ಧೆ.

17. ಯುವಜನ ಮೇಳ- ಯುವಜನರಲ್ಲಿನ ಜಾನಪದ ಪ್ರತಿಭೆ ಅನಾವರಣಕ್ಕೆ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆ.

18. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ- ಸಂಘಟಿತ ಚಟುವಟಿಕೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಯುವಜನರನ್ನು ಮತ್ತು ಯುವ ಸಂಘಗಳನ್ನು ಗುರುತಿಸಿ, ಗೌರವಿಸಲು ನೀಡುವ ವಾರ್ಷಿಕ ಪ್ರಶಸ್ತಿ.

19. ಕ್ರೀಡಾ ಮೂಲ ಸೌಕರ್ಯಗಳ ಸೃಜನೆ -  ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು, ಆಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ಗಳು, ಹಾಕಿ/ಫುಟ್ಬಾಲ್ ಟರ್ಫ್ಗಳು, ಗರಡಿ ಮನೆಗಳು ಸೇರಿದಂತೆ ಅಗತ್ಯ ಕ್ರೀಡಾ ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ.

20. ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕೆಳಕಾಣಿಸಿದ ಕ್ರಮ ಕೈಗೊಳ್ಳಲಾಗುತ್ತಿದೆ.

21. ಅಂತರ-ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿಯಮಾನುಸಾರ ವಿಮಾನ ಪ್ರಯಾಣ ವೆಚ್ಚ ಮರುಪಾವತಿ ಮಾಡಲಾಗುತ್ತಿದೆ.

22. ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ ಆಯೋಜಿಸಲು ಹಾಗೂ ರಾಷ್ಟ್ರ ಮಟ್ಟಕ್ಕೆ ತಂಡವನ್ನು ನಿಯೋಜಿಸಲು ಅನುದಾನ ಸಂಹಿತೆ ನಿಯಮಾವಳಿ ಅನುಸಾರ ಅನುದಾನ ನೀಡಲಾಗುತ್ತಿದೆ.

23. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ -  ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಭೂ ಸಾಹಸ, ಜಲಸಾಹಸ ಮತ್ತು ವಾಯು ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಯುವಜನರಿಗೆ ಆದ್ಯತೆ ನೀಡಲಾಗುತ್ತಿದೆ.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com