For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಪ್ರಪಂಚದ ಉದ್ದ ಮತ್ತು ದೊಡ್ಡ ಭೌಗೋಳಿಕ ಅಂಶಗಳು

🌏 *ಭೊಗೋಳಶಾಸ್ತ್ರ*🌏



*೧) ಭಾರತದ ಉದ್ದವಾದ ನದಿ*
  👉🏼  *ಗಂಗಾನದಿ*

*೨) ಭಾರತದ ದೊಡ್ಡ ನದಿ*
 👉🏼 *ಗಂಗಾನದಿ*

*೩) ಕರ್ನಾಟಕದ ಉದ್ದವಾದ ನದಿ*
 👉🏼 *ಕಾವೇರಿ  ನದಿ*

*೪) ಕರ್ನಾಟಕದ ದೊಡ್ಡ ನದಿ*
 👉🏼 *ಕೃಷ್ಣಾ ನದಿ*

*೫) ಪ್ರಪಂಚದ ಉದ್ದವಾದ ನದಿ*
 👉🏼 *ನೈಲ್ ನದಿ*

*೬) ಪ್ರಪಂಚದ ದೊಡ್ಡ ನದಿ*
 👉🏼 *ಅಮೇಜಾನ್ ನದಿ*

*೭) ಪ್ರಪಂಚದ ದೊಡ್ಡ ಸಿಹಿ ನೀರಿನ ಸರೋವರ*
👉🏼 *ಸೊಪಿರಿಯರ್ ಸರೋವರ( ಅಮೆರಿಕ)*

*೮) ಪ್ರಪಂಚದ ದೊಡ್ಡ ಸರೋವರ*
 👉🏼 *ಕ್ಯಾಪ್ಸಿಯನ್ ಸರೋವರ*

*೯) ಪ್ರಪಂಚದ ದೊಡ್ಡ ಉಪ್ಪು ನೀರಿನ ಸರೋಬರ*
 👉🏼  *ಕ್ಯಾಪ್ಸಿಯನ್ ಸರೋವರ*

*೧೦) ಪ್ರಪಂಚದ ಆಳವಾದ ಸರೋವರ*
 👉🏼 *ಬೈಕಲ್ ಸರೋವರ*

*೧೧) ಭಾರತದ ಸಹಿ ನೀರಿನ ಸರೋವರ*
 👉🏼  *ಊಲಾರ್ ಸರೋವರ*

*೧೨) ಭಾರತದ ಉಪ್ಪು ನೀರಿನ ಸರೋವರ*
 👉🏼 *ಸಾಂಬರ್ ಸರೋವರ*
Share:

5ಇ ಮಾದರಿಯ ಪಾಠಯೋಜನೆಯನ್ನು ರಚಿಸುವುದು ಹೇಗೆ?

5ಇ ಮಾದರಿಯ ಪಾಠಯೋಜನೆಯನ್ನು ರಚಿಸುವುದು ಹೇಗೆ?




ರಷ್ಯಾ ದೇಶದ ಮನೋವಿಜ್ಞಾನಿ ಲೇವಾ ವೈಗೋಟಕ್ಸಿ ಅವರ ಜ್ಞಾನ ಸಂರಚನಾವಾದದ ವಿಚಾರಗಳನ್ನು ಆಧರಿಸಿ 5ಇ
ಮಾದರಿಯ ಪಾಠಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂ ಕಲಿಕೆಗೆ ಹಾಗೂ ಕ್ರಿಯಾತ್ಮಕ ಜ್ಞಾನದ ನಿರ್ಮಾಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಶಿಕ್ಷಕರಿಗೆ ಸಹಾಯಕವಾಗುತ್ತದೆ. ಮಕ್ಕಳು ತಮ್ಮ ಅನುಭವದ ನೆಲೆಯಲ್ಲಿ ಹೊಸ ಜ್ಞಾನವನ್ನು ಸೃಷ್ಟಿಸಿಕೊಳ್ಳಲು ಹಾಗೂ ಅನ್ವೇಷಿಸಲು ಶಿಕ್ಷಕರು ನೆರವಾಗಬೇಕು. ಶಿಕ್ಷಕರು ದೀರ್ಘ ಉಪನ್ಯಾಸ ನೀಡುವ ಬದಲು ಮಕ್ಕಳ ಕಲಿಕೆಯನ್ನು ಅನುಕೂಲಿಸುವ, ಉತ್ತೇಜಿಸುವ, ಮಾರ್ಗದರ್ಶಿಸುವ ಚಟುವಟಿಕೆಗಳನ್ನು ತರಗತಿಯಲ್ಲಿ ಆಯೋಜಿಸಬೇಕು. ಇದು
ಸಂತಸದ ಕಲಿಕೆಗೆ ಹೆಚ್ಚು ಗಮನ ನೀಡುತ್ತದೆ. ಪಾಠವನ್ನು ಯೋಜಿಸುವಾಗ 5ಇ ಹಂತಗಳನ್ನು ಜಾಜೂ ತಪ್ಪದೆ ಅನುಸರಿಸಬೇಕು.
ಅವುಗಳೆಂದರೆ,
  1.  ತೊಡಗಿಸು 
  2.  ಅನ್ವೇಷಿಸು/ಶೋಧಿಸು (), 
  3. ವಿವರಿಸು 
  4. ವಿಸ್ತರಿಸು  ಮತ್ತು
  5. ಮೌಲ್ಯಮಾಪಿಸು 
1. ತೊಡಗಿಸು Engage
ದಿನದ ಕಲಿಕೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು, ಕುತೂಹಲವನ್ನು ಹೆಚ್ಚಿಸುವುದು, ಗಮನವನ್ನು ಕೇಂದ್ರೀಕರಿಸುವ ಕೆಲಸ ಈ ಹಂತದಲ್ಲಿ ಆಗಬೇಕು. ಮಕ್ಕಳನ್ನು ಕಲಿಕೆಗೆ ಒತ್ತಾಯಿಸುವುದರ ಬದಲಿಗೆ ಅವರಲ್ಲಿ ಕಲಿಯುವ ಆಸಕ್ತಿ ಬರುವಂತಹ ವಾತಾವರಣವನ್ನು ಸೃಷ್ಟಿಸಿ, ವಿವಿಧ ಚಟುವಟಿಕೆಗಳನ್ನು ನೀಡಬೇಕು. ಈ ಸಂದರ್ಭದಲ್ಲಿ ಮಕ್ಕಳ ಪೂರ್ವಜ್ಞಾನವನ್ನು ಶಿಕ್ಷಕ ಸಮರ್ಥವಾಗಿ ಬಳಸಿಕೊಳ್ಳಬೇಕು. ಇದಕ್ಕಾಗಿ ಕಥೆ, ಉದಾಹರಣೆ, ಹೋಲಿಕೆ, ಪ್ರಶ್ನೆಗಳು, ಪ್ರಚಲಿತ ಅಂಶಗಳು, ಪಾತ್ರಾಭಿನಯ, ಆಟಗಳು, ತಂತ್ರಜ್ಞಾನ ಮುಂತಾದ ಶಾಬ್ದಿಕ ಹಾಗೂ ಅಶಾಬ್ದಿಕ ಸಾಧನ, ತಂತ್ರಗಳನ್ನು ಬಳಸಿಕೊಳ್ಳಬಹುದಾಗಿದೆ. ದಿನದ ಪಾಠದ ಕಲಿಕೆಗೆ ಮಕ್ಕಳನ್ನು ಮಾನಸಿಕವಾಗಿ ಹಾಗೂ ಭೌತಿಕವಾಗಿ ತೊಡಗಿಸುವುದು / ಸಿದ್ಧಗೊಳಿಸುವುದು ಈ ಹಂತದ ಮುಖ್ಯ ಉದ್ದೇಶವಾಗಿದೆ.

2. ಅನ್ವೇಷಿಸು/ಶೋಧಿಸು Explore
ಈ ಹಂತದಲ್ಲಿ ಶಿಕ್ಷಕರು ಪಾಠಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಮಕ್ಕಳ ಮುಂದಿರಿಸಿ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಬೇಕು. ಅವರು ಪರಸ್ಪರ ಚರ್ಚಿಸಿ, ಅವಲೋಕಿಸಿ ತಮ್ಮ ಅನುಭವದ ನೆಲೆಯಲ್ಲಿ ಜ್ಞಾನವನ್ನು ಅನ್ವೇಷಿಸುತ್ತಾರೆ. ಮಕ್ಕಳು ಪ್ರಶ್ನೆಗಳನ್ನು ಕೇಳಲು ಬೇಕಾದ ವಾತಾವರಣವನ್ನು ಶಿಕ್ಷಕರು ನಿರ್ಮಿಸಬೇಕು. ಈ ಸಮಯದಲ್ಲಿ ಮಕ್ಕಳು ಗೊಂದಲಗಳಿಗೆ ಒಳಗಾಗುವುದು ಸಹಜ. ಏಕೆಂದರೆ, ಅವರ ಚಿಂತನೆಗಳಲ್ಲಿ, ಅಭಿಪ್ರಾಯಗಳಲ್ಲಿ ಒಮ್ಮತವಿರುವುದಿಲ್ಲ. ಈ ಅವಕಾಶವನ್ನೇ ಮಕ್ಕಳು ಬಳಸಿಕೊಂಡು ತಮ್ಮ
ಕಲ್ಪನೆಗಳನ್ನು, ಚಿಂತನೆಗಳನ್ನು, ಅಭಿಪ್ರಾಯಗಳನ್ನು ಸಹಪಾಠಿಗಳೊಂದಿಗೆ ಚರ್ಚಿಸಿ, ತುಲನೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಬೇಕು. ಈ ಹಂತದಲ್ಲಿ ಶಿಕ್ಷಕರು ಮಾರ್ಗದರ್ಶಕರಾಗಿ ಇಲ್ಲವೇ ವೀಕ್ಷಕರಾಗಿ ಕೆಲಸಮಾಡಬೇಕು. ಭಾಷಾ ಪಾಠಗಳಲ್ಲಿ ಶಿಕ್ಷಕರು ಮೊದಲು ಆಯ್ದ ಗದ್ಯ ಭಾಗವನ್ನು ಮಾದರಿಯಾಗಿ ಓದಬೇಕು, ನಂತರ ಮಕ್ಕಳಿಗೆ ಅದೇ ವಿಷಯವನ್ನು ಮೌನವಾಗಿ ಓದಲು ಮಾರ್ಗದರ್ಶಿಸಬೇಕು. ಮಕ್ಕಳು ಪಠ್ಯದಲ್ಲಿರುವ ವಿಷಯವನ್ನು ತಮ್ಮ ಅನುಭವಗಳ ನೆಲೆಯಲ್ಲಿ ಗ್ರಹಿಸುತ್ತಾರೆ. ಮೌನ ಓದಿನ ಪೂರ್ವದಲ್ಲಿ ಮಕ್ಕಳ ಅರ್ಥಗ್ರಹಿಕೆಗೆ ಸಾಧ್ಯವಿಲ್ಲದಿರುವ ಪದಗಳು ಗದ್ಯ ಭಾಗದಲ್ಲಿ ಇದ್ದಲ್ಲಿ ಮಾತ್ರ ಅಂತಹ ಪದಗಳನ್ನು ಪರಿಚಯಿಸಬೇಕು. ಇಲ್ಲದಿದ್ದಲ್ಲಿ ಪದಗಳ ಪರಿಚಯ ಬೇಕಾಗುವುದಿಲ್ಲ. ಏಕೆಂದರೆ ವಿಷಯ ಸಂದರ್ಭದ ಹಿನ್ನೆಲೆಯಲ್ಲಿಯೇ ಮಕ್ಕಳು ಪದಗಳ ಅರ್ಥವನ್ನು ಕಂಡುಕೊಳ್ಳುವುದಕ್ಕೆ ಈ ಹಂತದಲ್ಲಿ ಅವಕಾಶ ನೀಡಬೇಕು.


3. ವಿವರಿಸು (Express)
ಮಕ್ಕಳು ತಮ್ಮ ಸಹಪಾಠಿಗಳೊಂದಿಗೆ ಚರ್ಚಿಸಿ, ಅಂತಿಮವಾಗಿ ಗ್ರಹಿಸಿದ ಕಂಡುಕೊಂಡ ವಿಚಾರಗಳನ್ನು, ಅಭಿಪ್ರಾಯಗಳನ್ನು ತಮ್ಮದೇ ದಾಟಿಯಲ್ಲಿ, ಸ್ವಂತ ಪದಗಳನ್ನು ಬಳಸಿಕೊಂಡು ವಿವರಿಸುವುದಕ್ಕೆ ಮುಕ್ತ ಅವಕಾಶ ಹಾಗೂ ಉತ್ತೇಜನವನ್ನು ನೀಡಬೇಕು. ವಿದ್ಯಾರ್ಥಿ ವಿವರಿಸುವ ಸಂದರ್ಭದಲ್ಲಿ ಇತರ ವಿದ್ಯಾರ್ಥಿಗಳು ಗಮನವಿಟ್ಟು ಆಲಿಸಬೇಕು. ವಿವರಣೆಗೆ ಪೂರಕವಾದ ಆಧಾರಗಳನ್ನು ಹಾಗೂ ಸ್ಪಷ್ಟನೆಗಳನ್ನು ಆಯಾ ಸಂದರ್ಭದಲ್ಲಿ ಎಲ್ಲರೂ ಕೇಳಬಹುದು ಇಲ್ಲವೇ ಒದಗಿಸಬಹುದು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿಚಾರಗಳಿಗೆ ಪೂರಕವಾಗಿ ನಿಯಮಗಳನ್ನು, ವ್ಯಾಖ್ಯಾನಗಳನ್ನು ಹಾಗೂ ಸ್ಪಷ್ಟನೆಗಳನ್ನು ನೀಡಬಹುದಾಗಿದೆ. ಮಕ್ಕಳ ತಪ್ಪು ಗ್ರಹಿಕೆಗಳನ್ನು
ಸರಿಪಡಿಸಬಹುದಾಗಿದೆ. ವಿಷಯವನ್ನು ಅಥೈಸುವ ಪ್ರಯತ್ನ ಈ ಹಂತದಲ್ಲಿ ಪ್ರಧಾನವಾದುದು. ಮಕ್ಕಳಿಗೆ ಪ್ರಶ್ನೆ, ಹೋಲಿಕೆ, ಉದಾಹರಣೆ, ಪ್ರಾತ್ಯಕ್ಷಿಕೆ ಮುಂತಾದವುಗಳ ಮೂಲಕ ಸೂಕ್ತ ಬೋಧನಾ ವಿಧಾನವನ್ನು ಅನುಸರಿಸಿ ಕಲಿಸಬೇಕು. ಮಕ್ಕಳಲ್ಲಿ ಅಂತರ್ಗತಾವಗಿರುವ ವಿಚಾರಗಳನ್ನು ಹೊರಗೆಳೆಯುವ ಪ್ರಯತ್ನ ಇಲ್ಲಿ ಸಾಗಬೇಕಿದೆ.

4. ವಿಸ್ತರಿಸು Expand
ವಿದ್ಯಾರ್ಥಿಗಳು ತಾವು ಕಂಡುಕೊಂಡ, ಗ್ರಹಿಸಿದ ವಿಚಾರಗಳನ್ನು ಹೊಸ ಸನ್ನಿವೇಶಗಳಿಗೆ ಅನ್ವಯಿಸುವುದಕ್ಕೆ ಪೂರಕ ವಾತಾವರಣವನ್ನು ಈ ಹಂತದಲ್ಲಿ ಸೃಷ್ಟಿಸಬೇಕು. ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಅವರ ಕಲ್ಪನೆಯನ್ನು ವಿಕಾಸಗೊಳಿಸುವುದು, ಹೊಸ ರೀತಿಯ ಪ್ರಶ್ನೆಗಳನ್ನು ಮಕ್ಕಳು ಕೇಳುವ ಸ್ಥಿತಿಯನ್ನು ನಿರ್ಮಿಸುವ ಕೆಲಸ ಈ ಹಂತದಲ್ಲಿ ಆಗಬೇಕು.ಪಠ್ಯವನ್ನು ಮೀರಿದ ಚಿಂತನೆಗಳು, ಚರ್ಚೆಗಳು ಇಲ್ಲಿ ಆಗಬೇಕು.

5. ಮೌಲ್ಯಮಾಪಿಸು Evaluate
ಪಾಠದ ಆರಂಭದಿಂದ ಅಂತ್ಯದವರೆಗೂ ಎಲ್ಲಾ ಹಂತದಲ್ಲೂ ಮೌಲ್ಯಮಾಪನ ಪ್ರಕ್ರಿಯೆ ನಿರಂತರವಾಗಿರಬೇಕು. ಮಕ್ಕಳ ಜ್ಞಾನ, ಚಿಂತನೆ, ಕೌಶಲ್ಯ, ಅನ್ವಯಿಕತೆ ಹಾಗೂ ಕಲಿಕೆಯಲ್ಲಿ
ಉಂಟಾಗುತ್ತಿರುವ ಬದಲಾವಣೆಗಳನ್ನು ಶಿಕ್ಷಕರು ನಿರಂತರವಾಗಿ ಅವಲೋಕಿಸಬೇಕು, ದಾಖಲಿಸಬೇಕು.
ಈ ಸಂಬಂಧ ಮಕ್ಕಳ ಕಲಿಕೆಯನ್ನು ದೃಢಪಡಿಸುವ ಪ್ರಶ್ನೆಗಳನ್ನು ಹಾಗೂ ಚಟುವಟಿಕೆಗಳನ್ನು ಶಿಕ್ಷಕರು ನೀಡಬಹುದಾಗಿದೆ. ಮುಖ್ಯವಾಗಿ ಬೋಧನಾ ಉದ್ದೇಶಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ಹಾಗೂ ಯೋಜಿತ ಕಲಿಕಾ ಚಟುವಟಿಕೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿವೆ,
ಅರ್ಥಪೂರ್ಣವಾಗಿವೆ ಎಂಬುದನ್ನು ಮೌಲ್ಯಮಾಪನದ ಹಂತದಲ್ಲಿ ಶಿಕ್ಷಕರು ಸಮಗ್ರವಾಗಿ ಕಂಡುಕೊಳ್ಳುವುದಾಗಬೇಕು.

Share:

ಪ್ರಪಂಚದ ಪ್ರಮುಖ ನಗರಗಳು ನದಿಯ ತೀರ ಪ್ರದೇಶಗಳು

✳ಪ್ರಪಂಚದ ಪ್ರಮುಖ ನಗರಗಳು ನದಿಯ ತೀರ ಪ್ರದೇಶಗಳು ✳
==============

★ಅಡಿಲೇಡ್ - ಆಸ್ಟ್ರೇಲಿಯಾ -ಟೋರಾನ್ಸ್.

★ಅಮ್ ಸ್ಟಾರ್ ಡಾಂ - ನೆದರ್‌ಲ್ಯಾಂಡ್ - ಅಮ್ಸೆಲ್

★ಅಲೆಕ್ಸಾಂಡ್ರಿಯಾ - ಈಜಿಪ್ಟ್ - ನೈಲ್

★ಅಂಕಾರಾ - ಟರ್ಕಿ- ಕಾಝಿಲ್

★ ಅಲಹಾಬಾದ್ - ಭಾರತ - ಗಂಗಾ

★ಆಗ್ರಾ - ಭಾರತ - ಯಮುನಾ

★ಅಯೋಧ್ಯ - ಭಾರತ - ಸರಯೂ

★ಅಹಮದಾಬಾದ್ - ಭಾರತ - ಸಬರಮತಿ

★ಬದ್ರೀನಾಥ್ - ಭಾರತ - ಅಲಕಾನಂದ

★ಬರೇಲಿ - ಭಾರತ - ರಾಮ್ ಗಂಗಾ

★ಬ್ಯಾಂಕಾಕ್ -ಥಾಯ್ಲೆಂಡ್ -ಚಾವೋಪ್ರಾಯ

★ಬಾಸ್ರಾ- ಇರಾಕ್ - ಯುಪ್ರಟಿಸ್&ಟೈಗ್ರಿಸ್

★ಬಾಗ್ದಾದ್ - ಇರಾಕ್ - ಟೈಗ್ರಿಸ್

★ಬರ್ಲಿನ್ - ಜರ್ಮನಿ- ಸ್ಫ್ರೀ

★ಬಾನ್ - ಜರ್ಮನಿ - ರೈನ್

★ಬುಡಾಪೆಸ್ಟ್ - ಹಂಗೇರಿ - ಡ್ಯಾನುಬೆ

★ಬ್ರಿಸ್ಟಲ್ - ಇಂಗ್ಲೆಂಡ್ - ಅವೋನ್

★ಬ್ಯೂನಸ್ ಐರಿಸ್ - ಅರ್ಜೆಂಟೈನಾ - ಲಾಪ್ಲಾಟ

★ಕಟಕ್ - ಭಾರತ - ಮಹಾನದಿ

★ಕರ್ನೂಲ್ - ಭಾರತ - ತುಂಗಭದ್ರಾ

★ಚಿತ್ತಗಾಂಗ್ - ಬಾಂಗ್ಲಾದೇಶ - ಮಜ್ಯಾನಿ

★ಕಾನ್ಟೋನ್ - ಚೀನಾ - ಸಿಕಿಯಾಂಗ್

★ಕೈರೋ - ಈಜಿಪ್ಟ್ -ನೈಲ್

★ಚುಂಗ್ ಕಿಂಗ್ - ಚೀನಾ - ಯಾಂಗ್ ತ್ಸಿ - ಕಿಯಾಂಗ್

★ಕೊಲೊಗ್ನೆ - ಜರ್ಮನಿ - ರೈನ್

★ದೆಹಲಿ - ಭಾರತ - ಯಮುನಾ

★ಡ್ಯಾಂಡ್ಜಿಂಗ್ - ಜರ್ಮನಿ - ವಿಸ್ಟುಲಾ

★ಡ್ರಸ್ಡೆನ್ - ಜರ್ಮನಿ - ಎಲ್ವ್

★ದಿಬ್ರೂಘರ್ - ಭಾರತ - ಬ್ರಹ್ಮಪುತ್ರ

★ಡಬ್ಲಿನ್ - ಐರ್ಲೆಂಡ್ - ಲಿಫ್ಫಿ

★ಫಿರೋಜಪುರ್ - ಭಾರತ - ಸಟ್ಲೇಜ್

★ಹರಿದ್ವಾರ - ಭಾರತ - ಗಂಗಾ

★ಹೈದ್ರಾಬಾದ್ - ಭಾರತ - ಮೂಸಿ

★ಹಂಬರ್ಗ್ - ಜರ್ಮನಿ - ಎಲ್ವ್

★ಜಬಲ್ಪುರ - ಭಾರತ - ನರ್ಮದಾ

★ಜೆಮ್ಷೆಡ್ ಪುರ - ಭಾರತ - ಸ್ವರ್ಣರೇಖ

★ಜೌನ್ಪುರ - ಭಾರತ - ಗೋಮತಿ

★ಕಾಬುಲ್ - ಅಫ್ಘಾನಿಸ್ತಾನ - ಕಾಬೂಲ್

★ಕರಾಚಿ - ಪಾಕಿಸ್ತಾನ - ಸಿಂಧೂ

★ಕಾನ್ಪುರ - ಭಾರತ - ಗಂಗಾ

★ಕೋಟಾ - ಭಾರತ - ಚಂಬಲ್

★ಕೋಲ್ಕತಾ - ಭಾರತ - ಹೂಗ್ಲಿ

★ಖಾರುಟೌಮ್ - ಸುಡಾನ್ - ನೈಲ್

★ಲಾಹೋರ್ - ಪಾಕಿಸ್ತಾನ - ರಾವಿ

★ಲೆನಿನ್ ಗ್ರಾಡ್ - ರಷ್ಯಾ - ನೇವಾ

★ಲಕ್ನೋ - ಭಾರತ - ಗೋಮತಿ

★ಲಿಸ್ಬನ್ - ಪೋರ್ಚುಗಲ್ - ಟಾಗೌಸ್

★ಲಿವರ್ ಪೂಲ್ - ಇಂಗ್ಲೆಂಡ್ - ಮೆಸ್ಸಿ

★ಲೂಧಿಯಾನಾ - ಭಾರತ - ಸಟ್ಲೇಜ್

★ಲಂಡನ್ - ಇಂಗ್ಲೆಂಡ್ - ಥೇಮ್ಸ್

★ ಮಥುರಾ - ಭಾರತ - ಯಮುನಾ

★ಮಾಸ್ಕೋ - ರಷ್ಯಾ - ಮಾಸ್ಕ್ವಾ

★ಮಾಂಟ್ರಯಲ್ - ಕೆನಡಾ- ಸೈಂಟ್.ಲಾರೆನ್ಸ್

★ನಾನ್ ಕಂಗ್ - ಚೀನಾ - ಯಾಂಗ್-ತ್ಸಿ -ಕಿಯಾಂಗ್

★ನ್ಯೂ ಒರ್ಲಿಯಾನ್ಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ

★ನಾಸಿಕ್ - ಭಾರತ - ಗೋದಾವರಿ

★ನ್ಯೂಯಾರ್ಕ್ - ಯು.ಎಸ್.ಎ - ಹಡ್ಸನ್

★ಒಟ್ಟಾವ - ಕೆನಡಾ - ಒಟ್ಟಾವ

★ಪಾಟ್ನಾ - ಭಾರತ - ಗಂಗಾ

★ಪ್ಯಾರಿಸ್ - ಫ್ರಾನ್ಸ್ - ಸೀನ್

★ಫಿಲೆಡೆಲ್ಪಿಯಾ - ಯು.ಎಸ್.ಎ - ಡೆಲಾವೇರ್

★ಪರ್ಥ್ -ಆಸ್ಟ್ರೇಲಿಯಾ - ಸ್ವಾನ್

★ಪಣಜಿ - ಭಾರತ - ಮಾಂಡೋವಿ

★ಪ್ರೇಗ್ - ಜೆಕ್ ಗಣರಾಜ್ಯ - ವಿಟಾವ

★ಕ್ಯೂಬೆಕ್ - ಕೆನಡಾ - ಸೈಂಟ್ ಲಾರೆನ್ಸ್

★ರೋಮ್ - ಇಟಲಿ - ಟೈಬರ್

★ಸ್ಟಾಲಿನ್ ಗ್ರಾಡ್ - ರಷ್ಯಾ - ವೋಲ್ಗಾ

★ಶಾಂಘೈ - ಚೀನಾ - ಯಾಂಗ್ - ತ್ಸಿ -ಕಿಯಾಂಗ್

★ಸಿಡ್ನಿ - ಆಸ್ಟ್ರೇಲಿಯಾ - ಡಾರ್ಲಿಂಗ್

★ಶ್ರೀನಗರ್ - ಭಾರತ - ಝೇಲಂ

★ಸೂರತ್ - ಭಾರತ - ತಪತಿ

★ಸಂಬಲ್ಪುರ್ - ಭಾರತ - ಮಹಾನದಿ

★ಶ್ರೀರಂಗಪಟ್ಟಣ - ಭಾರತ - ಕಾವೇರಿ

★ಸೈಂಟ್ ಲೂಯಿಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ

★ತಿರುಚಿನಾಪಳ್ಳಿ - ಭಾರತ - ಕಾವೇರಿ

★ಟೋಕಿಯೋ - ಜಪಾನ್ - ಸುಮಿದಾ

★ವಿಜಯವಾಡ - ಭಾರತ - ಕೃಷ್ಣಾ

★ವಾರಾಣಾಸಿ - ಭಾರತ - ಗಂಗಾ

★ವಿಯೆನ್ನಾ - ಆಸ್ಟ್ರಿಯಾ - ಡ್ಯಾನೂಬ್

★ವಾರ್ಸಾ - ಪೋಲೆಂಡ್ - ವಿಸ್ಟುಲಾ

★ವಾಷಿಂಗ್‌ಟನ್ - ಯು.ಎಸ್.ಎ.-
ಪೋಟೋಮಾಕ

★ಯಾಂಗೂನ್ - ಮಯನ್ಮಾರ್ -ಇರ್ರಾವಾಡ್ಡಿ

🌷🌷🌷🌷🌷🌷🌷
Share:

ವಿಶ್ವ ಶಿಕ್ಷಕರ ದಿನಾಚರಣೆ



1994ರಿಂದ ಅಕ್ಟೋಬರ್‌ 5 ರಂದು ವಿಶ್ವ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರಿಗೆ ಬೆಂಬಲ ನೀಡುವುದೇ ಇದರ ಹಿಂದಿನ ಉದ್ದೇಶ ಹಾಗೂ ಭವಿಷ್ಯದ ಪೀಳಿಗೆಗೆ ಕೂಡ ಶಿಕ್ಷಕರ ಅಗತ್ಯವಿರುವುದನ್ನು ತಿಳಿಯಪಡಿಸುವುದಕ್ಕಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಯುನೆಸ್ಕೋ ಪ್ರಕಾರ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರ ಈ ಸೇವೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ವಿಶ್ವ ಶಿಕ್ಷಕರ ದಿನದ ಆಚರಣೆಯ ಉದ್ದೇಶವಾಗಿದೆ. ವಿಶ್ವ ಶಿಕ್ಷಕರ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗುತ್ತದೆ ಹಾಗೂ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ವಿಶ್ವ ಶಿಕ್ಷಕರ ದಿನಾಚರಣೆಯ ಬಗ್ಗೆ ಎಜುಕೇಷನ್‌ ಇಂಟರ್‌ನ್ಯಾಷನಲ್‌ಗೆ ಬಲವಾದ ನಂಬಿಕೆ ಇದೆ. ಶಿಕ್ಷಕರ ದಿನವು ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಲ್ಪಡಬೇಕು ಹಾಗೂ ಜಗತ್ತಿನಾದ್ಯಂತ ಆಚರಣೆ ಮಾಡಬೇಕೆಂಬುದು ಎಜುಕೇಷನ್‌ ಇಂಟರ್‌ನ್ಯಾಷನಲ್‌ ಬಯಕೆಯಾಗಿದೆ.

ಭವಿಷ್ಯದ ಪೀಳಿಗೆಗೆ ಶಿಕ್ಷಣ ನೀಡುವ ಜವಾಬ್ದಾರಿಯು ಸಾಮಾನ್ಯವಾದುದಲ್ಲ. ಆದ್ದರಿಂದ ಇಂಥ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿರುವ ಶಿಕ್ಷಕರನ್ನು ವಿಶ್ವ ಶಿಕ್ಷಕರ ದಿನಾಚರಣೆಯಂದು ಮಾತ್ರ ಸ್ಮರಿಸುವುದಲ್ಲ. ವರ್ಷ ಪೂರ್ತಿ ನೆನಪಿಸಿಕೊಳ್ಳಬೇಕು.
Share:

ಗಂಡುಗಲಿ ಕುಮಾರರಾಮ



ವಿಜಯನಗರ ಸಾಮ್ರಾಜ್ಯ ಸ್ಥಾಪಿಸುವ ಕನಸು ಕಂಡಿದ್ದ ಗಂಡುಗಲಿ ಕುಮಾರರಾಮ

ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ
Share:

ಸ್ಟಿಚ್ ಜಾಬ್ಸ್ ಕಟ್ಟಕಡೆಯ ಮಾತು


ಸ್ಟಿಚ್ ಜಾಬ್ಸ್ ಕಟ್ಟಕಡೆಯ ಮಾತು

ಸಾಯೋ ಮುಂಚೆ ಸ್ಟೀವ್ ಜಾಬ್ಸ್ ಹೇಳಿದ ಈ ಕಟ್ಟಕಡೆಯ ಮಾತು ಉಪಯೋಗಕ್ಕೆ ಬರುತ್ತೆ
ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಮೇಲೆ ಮಲಗಿದ್ದಾಗ
Apple ಸಂಸ್ಥೆಯ ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಅವರ ಸಾಧನೆ-ಸಂಪತ್ತು ನೋಡಿ "ಅಬ್ಬಾ, ಈ ಮನುಷ್ಯ ಯಶಸ್ಸಿಗೆ ಇನ್ನೊಂದು ಹೆಸರು" ಅನ್ನುವಷ್ಟರ ಮಟ್ಟಿಗೆ ಕೊಂಡಾಡುವವರಿದ್ದಾರೆ. ಆದರೆ ತಮ್ಮ ಕೊನೆಯ ದಿನಗಳಲ್ಲಿ ಜಾಬ್ಸ್ ಅವರ ಮನದಾಳದ ಮಾತು ಬಿಸಿನೆಸ್, ದುಡಿಮೆ, ಆಸ್ತಿ, ಸಂಪತ್ತು ಇವುಗಳಿಗಿಂತ ಬೇರೆಯೇ ಆಗಿತ್ತು. ಸಾವಿನಂಚಿನಲ್ಲಿ ನಿಂತ ಸ್ಟೀವ್ ಜಾಬ್ಸ್ ಆಡಿದ ಮಾತುಗಳನ್ನು ನಿಜೆಲ್ ಡಂಕನ್ ಸ್ಮಿತ್ ಎನ್ನುವವರು ಫ಼ೇಸ್ಬುಕ್ಕಿನಲ್ಲಿ ಹಂಚಿಕೊಂಡರು. ಅದನ್ನು ಓದಿದಾಗ ಜಗತ್ತನ್ನೇ ಬೆರಗಾಗಿಸಿದ ಒಬ್ಬ ಸಾಧಕನ ಮನದಲ್ಲಿ ಏನಿತ್ತು ಅನ್ನುವುದು ತಿಳಿಯುತ್ತದೆ. ಮುಂದೆ ಓದಿ:

"ನಾನು ನನ್ನ ಬಿಸಿನೆಸ್ಸಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದೇನೆ. ಜಗತ್ತಿನ ಕಣ್ಣಿಗೆ ನನ್ನ ಜೀವನವು ಒಂದು ಯಶಸ್ಸಿನ ಯಶೋಗಾಥೆಯಂತೆ ಕಾಣುತ್ತದೆ. ಆದರೆ, ನನ್ನ ಉದ್ಯೋಗದ ಪರಿಮಿತಿಯ ಹೊರಗೆ ನನ್ನ ಬಾಳಿನಲ್ಲಿ ಅಷ್ಟೇನೂ ನಲಿವಿಲ್ಲ. ಕೊನೆಗೆ, ನನ್ನ ಸಂಪತ್ತಿನೊಂದಿಗೇ ನನ್ನ ಜೀವನವನ್ನು ಗುರುತಿಸಿಕೊಳ್ಳುವುದು ರೂಡಿಯಾಗಿಹೋಗಿದೆ. ನನ್ನ ಜೀವನದ ಕೊನೆಯ ಕ್ಷಣಗಳನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಕಳೆಯುತ್ತಿರುವ ನನಗೆ, ನನ್ನ ಬಾಳಿನುದ್ದಕ್ಕೂ ನಾನು ಯಾವುದನ್ನು ಸಂಪತ್ತು, ಸಾಧನೆಯೆಂದುಕೊಂಡು ಬೀಗುತ್ತಿದ್ದೆನೋ, ಅವೆಲ್ಲಾ ಏನೂ ಅಲ್ಲವೇನೋ ಅನ್ನಿಸುತ್ತಿದೆ."

"ಈ ಕತ್ತಲ ಹೊತ್ತಿನಲ್ಲಿ, ಕೃತಕ ಉಸಿರಾಟದ ಈ ಮಶೀನುಗಳಿಂದ ಬರೋ ಹಸಿರು ದೀಪ ಮತ್ತು ಗುಂಯ್ಗುಟ್ಟುವ ಸದ್ದಿನಿಂದ, ನನಗೆ ನನ್ನ ಸಾವು ನನ್ನನ್ನು ಆವರಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ನನಗೀಗನ್ನಿಸುತ್ತಿದೆ, ಒಬ್ಬ ಮನುಷ್ಯ ಒಮ್ಮೆ ಜೀವನಕ್ಕೆಲ್ಲಾ ಆಗುವಷ್ಟು ದುಡ್ಡು ದುಡಿದಿಟ್ಟುಕೊಂಡ ಮೇಲೆ, ಹಣದ ಸಂಪಾದನೆಗೂ ಮೀರಿದ ಸಾಧನೆಗೆ ಇಳಿಯಬೇಕು. ಹಣಕ್ಕಿಂತ ತುಂಬಾ ಮುಖ್ಯವಾದುದಾಗಿರಬೇಕು ಆ ಸಾಧನೆ: ಉದಾಹರಣೆಗೆ, ಪ್ರೇಮ ಕಥೆಗಳು, ಕಲೆ, ಬಾಲ್ಯದ ಕನಸುಗಳನ್ನು ಮೆಲುಕು ಹಾಕುವುದು."

"ಕೇವಲ ಹಣದ ಸಂಪಾದನೆಯ ಹಿಂದೆ ಬೀಳಬೇಡಿ. ಅದರಿಂದ ನೀವೂ ನನ್ನಂತೆ ಕೆಲಸಕ್ಕೆ ಬಾರದವರಂತೆ ಆಗುತ್ತೀರಿ. ದೇವರು ನಮ್ಮೆಲ್ಲರನ್ನೂ ಯಾವುದೋ ಒಂದು ಬಗೆಯಲ್ಲಿ ಮಾಡಿದ್ದಾನೆ. ನಾವು ಒಬ್ಬರೆದೆಯಲ್ಲಿನ್ನೊಬ್ಬರು ಒಲವನ್ನು ಕಾಣಬಹುದೇ ಹೊರೆತು ನಾನು ಮಾಡಿದಂತೆ ಹೆಸರು, ದುಡ್ಡು ಇವುಗಳಿಂದ ಯಾರದೇ ಮನಸಿನಲ್ಲೂ ನೆಲೆಸಲು ಆಗುವುದಿಲ್ಲ. ಆ ಸಂಪತ್ತನ್ನು ನಾನು ಹೋಗುವಾಗ ನನ್ನೊಡನೆ ಕೊಂಡುಹೋಗಲೂ ಆಗದು. ನಾನು ನನ್ನೊಂದಿಗೇನಾದರೂ ಕೊಂಡುಹೋದರೆ ಅದು ಕೇವಲ ಒಲವಿನಿಂದ ಬೆಸೆದ ನೆನಪುಗಳನ್ನು ಮಾತ್ರ. ನಮ್ಮನ್ನು ಹಿಂಬಾಲಿಸುವ ಸಂಪತ್ತೂ ಅದೇ... ನಮ್ಮೊಡನೆ ಸದಾ ಇರುವಂಥದ್ದು, ನಮಗೆ ಶಕ್ತಿ ತುಂಬುವಂಥದ್ದು... ದಾರಿ ದೀಪವಾಗುವಂಥದ್ದು."

"ಪ್ರೇಮವೆನ್ನುವುದು ಸಾವಿರಾರು ಮೈಲಿ ಸಾಗಬಲ್ಲದು, ಬಾಳಲ್ಲಿ ಪ್ರೇಮವನ್ನು ತುಂಬಿಕೊಂಡಾಗ ಬಂಧನಗಳಿಂದ ಮುಕ್ತಿ ಸಿಗುತ್ತದೆ. ನಿಮಗೆ ಹೋಗಬೇಕೆನಿಸಿದಲ್ಲಿ ಹೋಗಿ. ನೀವು ಸಾಧಿಸಬೇಕೆನಿಸಿದ್ದನ್ನು ಸಾಧಿಸಿ. ಎಲ್ಲವೂ ನಿಮ್ಮೊಳಗೇ ಇದೆ... ನಿಮ್ಮ ಕೈಯ್ಯಲ್ಲೇ ಇದೆ."

ಈ ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಯಾವುದು ಗೊತ್ತೇ? ಅದು ಆಸ್ಪತ್ರೆಯ ಹಾಸಿಗೆ. ನಿಮ್ಮ ಬಳಿ ಹಣವಿದ್ದರೆ ಅದರಿಂದ ನಿಮ್ಮ ಕಾರಿಗೆ ಒಬ್ಬ ಡ್ರೈವರನ್ನು ನೇಮಿಸಬಹುದು, ಆದರೆ ನಿಮ್ಮ ಅನಾರೋಗ್ಯವನ್ನು ಎರವಲು ಪಡೆಯಲು ಯಾರಾದರೂ ಮುಂದೆ ಬರುತ್ತಾರೆಯೆ? ವಸ್ತುಗಳು ಒಮ್ಮೆ ಕಳೆದು ಹೋದರೆ ಮತ್ತೆ ಪಡೆದುಕೊಳ್ಳಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಹಿಂಪಡೆಯಲಾಗದ್ದು ಯಾವುದಾದರೂ ಇದ್ದರೆ ಅದು "ಜೀವನ" ಮಾತ್ರ.

"ನಾವು ಈಗ ಜೀವನದ ಯಾವುದೇ ಘಟ್ಟದಲ್ಲಿದ್ದರೂ ಮುಂದೊಂದು ದಿನ ತೆರೆಯು ಮುಚ್ಚಿ ಆಟ ಮುಗಿಯುವ ದಿನವನ್ನು ಎದುರಿಸಲೇಬೇಕು. ನಿಮ್ಮ ಮನೆಯವರ ಪ್ರೀತಿ, ಗಂಡ/ಹೆಂಡತಿಯ ಪ್ರೀತಿ, ಗೆಳೆಯರ ಪ್ರೀತಿ ಇವೆಲ್ಲವೂ ಅಮೂಲ್ಯವಾದುವು. ಅವನ್ನು ಕಾಪಾಡಿಕೊಳ್ಳಿ. ಎಲ್ಲರೊಡನೆ ಸಜ್ಜನಿಕೆಯಿಂದ ನಡೆದುಕೊಳ್ಳಿ, ನಿಮ್ಮ ಸುತ್ತಲ ಜನರೊಂದಿಗೆ ಒಳ್ಳೆಯ ಸಂಬಂಧವಿರಲಿ."

ಎಂಥಾ ಮಹಾನುಭಾವಿಯ ಮಾತುಗಳು! ಎಲ್ಲರ ಜೀವನದಲ್ಲೂ ಇದು ಉಪಯೋಗಕ್ಕೆ ಬರುತ್ತೆ ಅಂತ ನಮ್ಮ ಅನಿಸಿಕೆ....
Share:

ಆ ಮಗು ಬೇಕೆಂದೇ ತಪ್ಪು ಮಾಡಿತ್ತು...


ಆ ಮಗು ಬೇಕೆಂದೇ ತಪ್ಪು ಮಾಡಿತ್ತು...

ಆ ಟೀಚರ್ ಗೆ ಮಕ್ಕಳನ್ನು ಶಿಕ್ಷಿಸುವುದೇ ಗೊತ್ತಿರಲಿಲ್ಲ. ಇಪ್ಪತೈದು ವರ್ಷಗಳಿಂದಲೂ ಶಿಕ್ಷಕ ವೃತ್ತಿಯಲ್ಲಿದ್ದ ಅವಳು, ಮಕ್ಕಳನ್ನು ಪ್ರೀತಿಯಿಂದ ಮಾತ್ರವೇ ಗೆಲ್ಲಲು ಸಾಧ್ಯ ಎಂಬುದನ್ನು ಕಂಡುಕೊಂಡಿದ್ದಳು.

ಅವಳಿಗೆ ಹೊಸ ಶಾಲೆಗೆ ವರ್ಗವಾಗಿತ್ತು. ಭಯಂಕರ ಶಿಸ್ತಿಗೆ ಹೆಸರಾದ ಶಾಲೆಯದು. ಮಕ್ಕಳೆಲ್ಲರೂ ಜೈಲಿನಲ್ಲಿದ್ದಂತೆ ಕೂತಿದ್ದರು. ಅದು ಶಾಲೆಯಲ್ಲವಳ ಮೊದಲ ದಿನ. ಮಕ್ಕಳೇ..." ಜೇನಿನಲ್ಲದ್ದಿ ತೆಗೆದ ದನಿ ಅವಳದು! ".... ಹೋದ ವರ್ಷ ನೀವು ಏನೇನು ಕಲಿತಿದ್ದೀರಿ ಅನ್ನೋದನ್ನ ಈಗ ಸ್ವಲ್ಪ ಪರೀಕ್ಷೆ ಮಾಡೋಣ..." ಅಂದವಳು ಬೋರ್ಡಿನ ಮೇಲೆ ಎರಡು ಪ್ರಶ್ನೆ ಬರೆದಳು.

ಹತ್ತು ನಿಮಿಷದ ನಂತರ ಒಂದೊಂದೇ ಮಗುವನ್ನು ಕರೆದು, ಅದು ಬರೆದಿದ್ದ ಉತ್ತರ ನೋಡಿದಳು. ಎರಡೂ ಪ್ರಶ್ನೆಗಳಿಗೂ ಸರಿಯಾದ ಉತ್ತರ ಬರೆದವರಿಗೆ ಎರಡೆರಡು ಚಾಕ್ಲೇಟ್ ಕೊಟ್ಟಳು. ತಪ್ಪುತ್ತರ ಬರೆದಿದ್ದ ನಾಲ್ಕು ಮಕ್ಕಳನ್ನು ಒಂದು ಕಡೆ ನಿಲ್ಲಿಸಿ, ಅವುಗಳ ಬಳಿಗೆ ಬಂದಳು. ಏನು ಶಿಕ್ಷೆ ಕಾದಿದೆಯೋ ಎಂಬಂತೆ ನಡುಗುತ್ತಿದ್ದವು ಅವು.

ಅವರೆದುರು ಮಂಡಿಯೂರಿ ಕುಳಿತ ಟೀಚರ್, ನಿಧಾನವಾಗಿ ಒಂದೊಂದೇ ಮಗುವನ್ನು ಹಿಡಿದು ಅಪ್ಪಿಕೊಂಡು ತಲೆ ಸವರಿದಳು. "ಡೋಂಟ್ ವರಿ... ಚೆನ್ನಾಗಿ ಓದಿದರೆ ನೀವೂ ಸರಿಯಾದ ಉತ್ತರ ಬರೆಯಬಲ್ಲಿರಿ!" ಎಂದಳು.

ಮರುದಿನ ಅಂಥದ್ದೇ ಮತ್ತೊಂದು ಪರೀಕ್ಷೆ. ಮತ್ತೆ ಎಲ್ಲರ ಉತ್ತರಗಳನ್ನೂ ಪರೀಕ್ಷಿಸಿದಳು. ಒಬ್ಬ ಹುಡುಗ, ಮೊದಲು ಸರಿಯುತ್ತರ ಬರೆದು, ಅದನ್ನು ಹೊಡೆದು ಹಾಕಿ, ಅದರ ಕೆಳಗೆ ತಪ್ಪುತ್ತರ ಬರೆದಿದ್ದ. ಟೀಚರ್ ಗೆ ಆಶ್ಚರ್ಯವಾಯಿತು.

"ಯಾಕೆ ಪುಟ್ಟಾ...?" ಅವಳದು ಎಂದಿನ ಅನುನಯದ ದನಿ. "...ಸರಿಯಾದ ಉತ್ತರ ಬರೆದು ಅದನ್ನು ಹೊಡೆದು ಹಾಕಿ ಬಿಟ್ಟಿದ್ದೀಯಲ್ಲಾ?"

ಹುಡುಗ ತಲೆ ತಗ್ಗಿಸಿದ. ಅವನ ಕಣ್ಣಾಲಿಗಳು ತುಂಬಿದ್ದವು. "ಟೀಚರ್..." ನಿಧಾನವಾಗಿ ಹೇಳಿದ; "... ನಂಗೆ ಚಾಕ್ಲೇಟ್ ಮನೇಲೂ ಬೇಕಾದಷ್ಟು ಸಿಗುತ್ತೆ ಟೀಚರ್... ಆದ್ರೆ .. ನನಗೆ ಅಪ್ಪುಗೆ ಬೇಕು..."
ನಾ ಹುಡುಕ್ತಾ ಇದ್ದದ್ದು ಅದನ್ನಲ್ಲ ಪುಟ್ಟಾ...

ಅಂಗಳದಲ್ಲಿ ಎಲ್ಲರ ಜೊತೆ ಮಣ್ಣಾಟ ಆಡ್ತಾ ಇದ್ದ ಪುಟ್ಟ ಹುಡುಗ ಇದ್ದಕ್ಕಿದ್ದಂತೆ ಸಪ್ಪೆ ಮುಖ ಮಾಡಿಕೊಂಡು ಅಮ್ಮನ ಬಳಿಗೆ ಓಡಿಬಂದ. ಮುದ್ದು ಮೂತೀನ ಚೂಪು ಮಾಡಿಕೊಂಡು ಅಳು ಬರುವುದನ್ನು ತಡೆದುಕೊಳ್ತಾ, ಅಮ್ಮ ಹೊಡಿತಾಳೀಗ ಅನ್ನೋ ಭಯದಲ್ಲೇ ಮೆಲ್ಲಗೆ ಹೇಳಿದ: "ಅಮ್ಮಾ, ಆಟ ಆಡ್ತಾ ಇರಬೇಕಾದ್ರೆ ನನ್ನ ಕಣ್ಣಿನ ಕಾಂಟ್ಯಾಕ್ಟ್ ಲೆನ್ಸ್ ಬಿದ್ ಹೋಯ್ತು, ಎಲ್ರೂ ಸೇರಿ ಹುಡುಕಿದ್ವಿ, ಆದ್ರೂ ಸಿಗ್ಲಿಲ್ಲ."

ಅಮ್ಮ ಕೊಂಚ ರೇಗಿ "ಹೋಗು ವಾಪಸ್ಸು, ಸರಿಯಾಗಿ ಎಲ್ಲೆಲ್ಲಿ ಓಡಾಡಿದ್ಯೋ, ಆಟ ಆಡಿದ್ಯೋ ಅಲ್ಲೆಲ್ಲಾ ಇನ್ನೊಮ್ಮೆ ಹುಡುಕು ನಡಿ" ಅಂತ ಮಗೂನ್ನ ವಾಪಸ್ ಕಳಿಸಿದ್ಲು.

ಸಪ್ಪೆ ಮುಖ ಮಾಡಿಕೊಂಡು ಅಲ್ಲೇ ಇನ್ನೊಂದು ಕ್ಷಣ ನಿಂತ್ರೆ ಅಮ್ಮನ ಕೈಲಿ ಪೆಟ್ಟು ತಿನ್ನಬೇಕಾಗುತ್ತೆ ಅಂತ ಮಗು ಅಂಗಳಕ್ಕೆ ಓಡಿತು. ಹೆಚ್ಚೂ ಕಮ್ಮಿ ಅರ್ಧ ಗಂಟೆ ಲೆನ್ಸ್ ಗೋಸ್ಕರ ಹುಡುಕೀ ಹುಡುಕೀ, ಕೊನೆಗೂ ಸಿಗದೇ ಏಟು ಖಾತ್ರಿ ಅಂತ ಅಳ್ತಾನೇ ಅಮ್ಮನ ಬಳಿ ಬಂದು "ಅಮ್ಮ ಹೊಡಿಬೇಡ ಪ್ಲೀಸ್, ಇಷ್ಟೊತ್ತು ಹುಡುಕಿದೆ ಸಿಕ್ಲಿಲ್ಲ. ಇನ್ನೊಂದ್ಸಲ ಕಳ್ಕೊಳಲ್ಲ ಅಮ್ಮಾ..." ಅಂದಿತು ಮಗು.

ಅಮ್ಮ ಹೊಡೆಯಲಿಲ್ಲ, ರೇಗಲಿಲ್ಲ. ತುಂಬ ಶಾಂತವಾಗೇ ಹೇಳಿದಳು. "ಸಿಗಲಿಲ್ವಾ.. ಪರ್ವಾಗಿಲ್ಲ. ಅಳಬೇಡ, ನಾ ಹೋಗಿ ಹುಡುಕಿ ತರ್ತೀನಿ." ಹಾಗೆ ಹೇಳಿದವಳೇ ಸೀದಾ ಅಂಗಳಕ್ಕೆ ನಡೆದಳು‌. ಐದು ನಿಮಿಷ ಅಷ್ಟೇ. ತಿರುಗಿ ಮನೆಯೊಳಗೆ ಬರುವಾಗ ಅವಳ ಕೈಲಿ ಕಳೆದು ಹೋಗಿದ್ದ ಲೆನ್ಸ್ ಇತ್ತು. ಮಗುವಿಗೆ ತುಂಬಾ ಆಶ್ಚರ್ಯವಾಯ್ತು! ನಾನು ಅಷ್ಟು ಹುಡುಕಿದ್ರೂ, ನನ್ನ ಗೆಳೆಯ ಗೆಳತಿಯರೆಲ್ಲ ಸೇರಿ ಜಾಲಾಡಿದ್ರೂ ಕಾಣಿಸದ ವಸ್ತು ಅಮ್ಮನಿಗೆ ಇಷ್ಟು ಸಲೀಸಾಗಿ ಸಿಕ್ಕಿದ್ದಾದ್ರೂ ಹೇಗೆ? ಇದನ್ನೇ ಅಮ್ಮನ ಬಳಿ ಕೇಳಿತು ಮೆಲ್ಲಗೆ.

ಅಮ್ಮ ಮಗೂನ ಕೂರಿಸ್ಕೊಂಡು ಹೇಳಿದಳು... ಪುಟ್ಟಾ, ನಾವಿಬ್ರೂ ಹುಡುಕ್ತಾ ಇದ್ದದ್ದು ಬೇರೆ ಬೇರೆ ವಸ್ತುಗಳನ್ನು!" ಮಗುವಿಗೆ ಅರ್ಥವಾಗಲಿಲ್ಲ. ಅಮ್ಮ ಮತ್ತೆ ಹೇಳಿದಳು. "ಹೌದು ಪುಟ್ಟಾ... ನೀನು ಬರೀ ಎರಡು ಪುಟ್ಟ ಪ್ಲಾಸ್ಟಿಕ್ ತುಂಡುಗಳನ್ನು ಹುಡುಕ್ತಿದ್ದಿ. ಅದು ನಿನ್ನ ಮಟ್ಟಿಗೆ ಬರೀ ಲೆನ್ಸ್ ಅಷ್ಟೇ. ನಾ ಹುಡುಕ್ತಾ ಇದ್ದದ್ದು ಕಳೆದುಹೋಗಿದ್ದ ಐದು ಸಾವಿರ ರೂಪಾಯಿಗಳನ್ನು. ನಾನು ಬೆವರು ಸುರಿಸಿ ಸಂಪಾದಿಸಿದ್ದ ಐದು ಸಾವಿರ ರೂಪಾಯಿಯಲ್ಲಿ ನಿಂಗೆ ಲೆನ್ಸ್ ಕೊಡಿಸಿದ್ದೆ. ಹಾಗಾಗಿ ಹುಡುಕುವಾಗ ನಿನಗಿಂತಲೂ ಹೆಚ್ಚು ಶ್ರಮ-ಶ್ರದ್ದೆ ನನ್ನಲ್ಲಿತ್ತು."

ಹುಡುಗನಿಗೆ ಅಮ್ಮನ ಮಾತುಗಳು ಮನ ತಟ್ಟಿದವು. ಕ್ಷಮೆ ಕೋರುವ ಭಾವದಲ್ಲಿ ಅಮ್ಮನ ಮಡಿಲೇರಿದ.
Share:

ವ್ಯಕ್ತಿ ಯ ಮನ್ನಣೆ

ವ್ಯಕ್ತಿಯ ಮಣ್ಣನೆ

ಸರಕಾರಿ ರಂಗದ ಇಲ್ಲವೇ ಖಾಸಗಿ ಸೇವಾ ರಂಗದ ಉದ್ಯೋಗಗಳಿಗೆ ಸುಯೋಗ್ಯ ವ್ಯಕ್ತಿಗಳನ್ನು ಆರಿಸಿಕೊಳ್ಳುವುದಕ್ಕಾಗಿ ನಾಡಿನಾದ್ಯಂತ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿ ಅರ್ಜಿಗಳನ್ನು ಆಹ್ವಾನಿಸುತ್ತಾರೆ. ಆಗ ನಿರುದ್ಯೋಗಿಗಳೂ, ಉತ್ತಮ-ಉದ್ಯೋಗಾಕಾಂಕ್ಷಿಗಳೂ ಸಾಕಷ್ಟು ಅರ್ಜಿಗಳನ್ನು ಹಾಕುತ್ತಾರೆ. ಅಂತಹ ಉಮೇದುವಾರರನ್ನು ಆಯ್ಕೆ ಮಾಡುವುದಕ್ಕಾಗಿ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಗಳೆರಡನ್ನೂ ನಡೆಸಲಾಗುತ್ತದೆ. ಹಾಗೆ ಪರೀಕ್ಷೆಗಳನ್ನು ನಡೆಸುವಾಗ, ಸುಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅರ್ಹತೆಗಳೇನು? ಎಂಬುದನ್ನು ನಿರೂಪಿಸುವ ಒಂದು ಉದಾಹರಣೆಯ ಪ್ರಸಂಗ ಇಲ್ಲಿದೆ. ಒಂದು ಸುಪ್ರಸಿದ್ಧ ಖಾಸಗಿ ರಂಗದ ವಾಣಿಜ್ಯ ಸಂಸ್ಥೆಯಲ್ಲಿ ಉನ್ನತ ಹುದ್ದೆಗಾಗಿ ಸುಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಲೆಂದು ಲಿಖಿತ ಪರೀಕ್ಷೆಯ ಬಳಿಕ, ಅಂತಿಮ ಸಂದರ್ಶನದ ಪರೀಕ್ಷೆಗಾಗಿ 50 ಮಂದಿಯನ್ನು ಕರೆಯಲಾಗಿತ್ತು. ಸ್ವತಃ ಕಂಪನಿಯ ಅಧ್ಯಕ್ಷ ರು ಮತ್ತು ಆಡಳಿತ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮಿತ್ರರೊಬ್ಬರು ಪರೀಕ್ಷ ಕರಾಗಿದ್ದರು. ಅನೇಕ ಮಂದಿ ಸಂದರ್ಶನದ ಸಂದರ್ಭ ದೊಡ್ಡ-ದೊಡ್ಡ ತಜ್ಞ ಅಧಿಕಾರಿಗಳಿಂದ, ರಾಜಕೀಯ ಪುಢಾರಿಗಳಿಂದ ಶಿಫಾರಸು ಪತ್ರಗಳನ್ನು ತಂದು ಪ್ರಭಾವ ಬೀರಲೆಂದು ಪ್ರಯತ್ನ ನಡೆಸಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಸಂದರ್ಶನ, ಪರೀಕ್ಷೆಯ ಬಳಿಕ ಒಬ್ಬ ಸರಳ, ಸಜ್ಜನಿಕೆಯ ಕ್ರಿಯಾಶೀಲ ತರುಣನ ಆಯ್ಕೆ ನಡೆಯಿತು. ವೈಭವ, ಆಡಂಬರದ ವೇಷಭೂಷಣ, ಶಿಫಾರಸು ಪತ್ರದವರನ್ನು ತಿರಸ್ಕರಿಸಲಾಯಿತು. ಕಾರಣವೇನೆಂದು ವಿಚಾರಿಸಿದಾಗ ಕಂಪನಿಯ ಅಧ್ಯಕ್ಷ ರು ಸ್ವತಃ ಆಡಳಿತ ವಿಜ್ಞಾನದ ತಜ್ಞರಾಗಿದ್ದು, ಕಾರಣ ವಿಷದಪಡಿಸಿದರು. 'ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸುವಾಗ ಅಲ್ಲಿದ್ದ ಡೋರ್‌ ಮ್ಯಾಟ್‌ನಲ್ಲಿ ಕಾಲು ಒರೆಸಿಕೊಂಡು ಆತ ಒಳಗೆ ಬಂದ. ಇನ್ನೊಬ್ಬ ಉಮೇದುವಾರನಿಗೆ ತನ್ನ ಪಕ್ಕದಲ್ಲೇ ಕುಳಿತುಕೊಳ್ಳಲು ಅವಕಾಶವಿತ್ತ. ಫ್ಯಾನಿನ ಗಾಳಿಗೆ ಮೇಜಿನ ಮೇಲಿನ ಹೂದಾನಿ ಕೆಳಗೆ ಬಿದ್ದಾಗ, ಉಳಿದವರೆಲ್ಲರೂ ಸುಮ್ಮನಿದ್ದರೆ, ಈತ ಅದನ್ನೆತ್ತಿ ಮೇಜಿನ ಮೇಲಿರಿಸಿದ. ನೂರಾರು ಶಿಫಾರಸು ಪತ್ರ ತಂದವರೆಲ್ಲರೂ ಸುಮ್ಮನಿದ್ದರು. ಅವನ ಸಭ್ಯತೆ, ಸದಾಚಾರ ಅವನ ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ಹತ್ತೇ ಮಿನಿಟುಗಳಲ್ಲಿ ಗುರುತಿಸಿಬಿಟ್ಟಿದ್ದೆ. ಹಾಗಾಗಿ ಆತನೇ ಆಯ್ಕೆಗೆ ಅರ್ಹನೆನಿಸಿದ್ದ' ಎಂದು ನುಡಿದರು. ಪದವಿ, ಪಾಂಡಿತ್ಯ, ವಿದ್ವತ್ತು, ಶಿಫಾರಸು ಪತ್ರಗಳಿದ್ದರೂ ಸರಳತೆ, ಸೌಜನ್ಯ, ಮಾನವೀಯತೆಗಳ ಅಭಾವದಿಂದಾಗಿ ಕೆಲವೊಮ್ಮೆ ಜನರು ಹಿಂದೆ ಬೀಳುತ್ತಾರೆ. ಸಾಕಷ್ಟು ಪ್ರತಿಭೆ, ಕ್ರಿಯಾಶೀಲತೆ, ಪಾಂಡಿತ್ಯಗಳ ಜತೆಗೆ ಮಾನವೀಯತೆ, ಸೌಜನ್ಯಗಳಿದ್ದರೆ ಸುಂದರ ಕುಸುಮಕ್ಕೆ ಸುಗಂಧ ಬಂದಂತೆ ವ್ಯಕ್ತಿಯು ಮನ್ನಣೆ ಪಡೆಯುತ್ತಾನೆ. -ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ.
Share:

ವಾಲ್ಮೀಕಿ ಜಯಂತಿ


ವಾಲ್ಮೀಕಿಯಾದ ಕಿರಾತ ರತ್ನಾಕರ




ವೈವಿಧ್ಯ ಕಿರಾತ ಅಂದರೆ ಬೇಡ ಜಾತಿಯ ರತ್ನಾಕರ ಚ್ಯವನ ಋಷಿಯ ಮಗನಾಗಿದ್ದ. ಗಂಗಾ ತೀರದ ಕ್ರೌಂಚವೆಂಬ ದಟ್ಟಾರಣ್ಯದಲ್ಲಿ ತನ್ನ ಕುಟುಂಬದವರೊಂದಿಗೆ ಇವನು ವಾಸವಾಗಿದ್ದ. ಈ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಬೇಟೆಯಾಡುವುದು ದಾರಿಹೋಕರನ್ನು ಕಾಡಿಸಿ ಪೀಡಿಸಿ ಅವರ ತಲೆ ಹೊಡೆದು ಅವರಲ್ಲಿದ್ದುದೆಲ್ಲವನ್ನು ಸುಲಿಗೆ ಮಾಡುವುದು, ವಿರೋಧಿಸಿದರೇ ಹತ್ಯೆ ಮಾಡುವುದು ಈ ಬೇಡನ ನಿತ್ಯದ ಕಾರ್ಯಕ್ರಮಾವಾಗಿತ್ತು. ಇವನ ಧೈರ್ಯ ಸಾಹಸ ಎಂತವರ ಗುಂಡುಗೆಯನ್ನು ಗಡಗಡ ನಡುಗುವಂತೆ ಮಾಡಿತ್ತು. ಈ ಕಾಯಕದಿಂದಲೇ ತನ್ನ ಸಂಸಾರದ ಬಂಡಿ ಸುಖವಾಗಿ ಸಾಗುತಿತ್ತು.

ಅದೊಂದು ದಿನ ಈ ಕಿರಾತ ಬೇಟೆಗಾಗಿ ಕಾಡಿಗೆ ಹೊರಟನು. ಅರಣ್ಯದಲ್ಲೆಲ್ಲ ತಿರುಗಾಡಿದರೂ ಒಂದು ಬೇಟೆಯೂ ಇವನಿಗೆ ಸಿಗಲಿಲ್ಲ. ಅಗ ದಟ್ಟಾರಣ್ಯದ ದಾರಿಯಲ್ಲಿ ಸಪ್ತರ್ಷಿಗಳ ಗುಂಪಿನ ದರ್ಶನವಾಯಿತು. ಅವರಲ್ಲಿರುವ ವಸ್ತುಗಳನ್ನು ಕೊಡುವಂತೆ ಪೀಡಿಸಿದ ಕಿರಾತ. ನೋಡು ಕಿರಾತ ಕುಟುಂಬದ ಪೋಷಣೆ ಮಾಡುವುದು ಗೃಹಸ್ಥನ ಕರ್ತವ್ಯವೆಂಬುದೇನೋ ನಿಜ.

ಆದರೆ ಮುಗ್ದ ಜನರನ್ನು ಹಿಂಸಿಸಿ ಅವರ ಕೊಲೆ ಸುಲಿಗೆ ಮಾಡಿ ನೀನು ದ್ರವ್ಯಾರ್ಜನೆ ಮಾಡುವುದು ಮಹಾ ಪಾಪಕರ ಕೆಲಸ ಪರರನ್ನು ಹಿಂಸಿಸದೇ ಸತ್ಯದ ಹಾದಿಯಲ್ಲಿ ನಡೆದು ದುಡಿತದ ಶ್ರಮದಿಂದ ಉಪ ಜೀವನ ನಡೆಸಿದರೆ ನಿನಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಕೆಟ್ಟ ಕೆಲಸ ಮಾಡುವುದನ್ನು ಬಿಟ್ಟು ಪುಣ್ಯದ ಹಾದಿಯಲ್ಲಿ ಇಂದಿನಿಂದಲೇ ನೀನು ಸಾಗು. ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳು ಇವರ್ಯಾರೂ ನಿನ್ನ ಪಾಪದಲ್ಲಿ ಪಾಲುದಾರರಾಗುವುದಿಲ್ಲ ಎಂದು ಸಪ್ತರ್ಷಿಗಳು ಬುದ್ದಿವಾದ ಹೇಳಿದರು. ನಮ್ಮ ಬಳಿ ಪವಿತ್ರಗೊಳಿಸುವ ರಾಮನಾಮವಿದೆ. ಈ ರಾಮನಾಮ-ತೀರ್ಥಗಳು, ಬೆಳ್ಳಿ-ಬಂಗಾರದ ಒಡವೆಗಳಲ್ಲಿ . ನಿನ್ನ ಪಾಪದ ರಾಶಿಯನ್ನು ನಾಶ ಮಾಡುವಂತಹ ಅಮೋಘ ಸಾಧನಗಳಿವು. ಇವುಗಳನ್ನು ನಮ್ಮಿಂದ ಸ್ವೀಕರಿಸಿದರೇ ಮಾತ್ರ ನೀನು ಪಾಪದಿಂದ ಮುಕ್ತಿ ಹೊಂದಿ ಉದ್ದಾರವಾಗುವೆ. ಈಗ ನೀನು ಪಕ್ಕದ ಗಂಗೆಯಲ್ಲಿ ಮಿಂದು ಬಾ ಹೋಗು ಎಂದರು ಸಪ್ತರ್ಷಿಗಳು. ಭಕ್ತಿ ಭಾವದಿಂದ ಸಪ್ತರ್ಷಿಗಳ ಸ್ಮರಣೆ ಮಾಡುತ್ತಾ ಗಂಗೆ ಕಡೆಗೆ ಕಿರಾತನಿಗೆ ಕಮಂಡಲದೊಲಗಿನ ತೀರ್ಥ ಕೊಟ್ಟು ಪಾವನಕರವಾದ ರಾಮನಾಮವನ್ನು ಉಪದೇಶಿಸಿದರು.

ನೋಡು ಕಿರಾತ ನೀನು ಪಾಪವನ್ನು ನಾಶಗೊಳಿಸುವಂಥ ಪಾವನಕರ ರಾಮನಾಮವನ್ನು ಜಪಿಸುತ್ತ ಕುಳಿತುಕೋ. ಮನಸ್ಸನ್ನು ಅತ್ತಿತ್ತ ಹರಿದಾಡಗೊಡಗಬೇಡ. ತಂದೆ-ತಾಯಿ, ಹೆಂಡತಿ-ಮಕ್ಕಳ ವ್ಯಾಮೋಹಕ್ಕೆ ಒಳಗಾಗಬೇಡ. ನೀನು ನಮ್ಮಂತೆ ರಾಮನಾಮದ ತಪಸ್ಸನ್ನಾಚರಿಸಿದರೆ ನಿನ್ನ ಪಾಪರಾಶಿಯು ನಾಶವಾಗಿ ನಮ್ಮಂತೆ ತಪಸ್ವಿಯಾಗುವೆ. ಇವರ ಉಪದೇಶ, ಆಶೀರ್ವಾದ ಪಡೆದು ಕಿರಾತ ಹರ್ಷಿತನಾದ ಅಲ್ಲಿಯೇ ಮರದಡಿಯಲ್ಲಿ ಕುಳಿತು ಏಕಚಿತ್ತದಿಂದ ರಾಮ-ರಾಮ ಎಂದು ಪರಮಾತ್ಮನ ನಾಮಸ್ಮರಣೆ ಮಾಡತೊಡಗಿದನು.

ಹಗಲು ರಾತ್ರಿ ಕೆವಲ ರಾಮನಾಮ ಜಪದಲ್ಲಿ ನಿರತನಾದ ಕಿರಾತ ಧ್ಯಾನದಲ್ಲಿ ಮೈಮರೆತ ಇವನ ಮೇಲೆ ದೊಡ್ಡ ಹುತ್ತವೇ ಬೆಳೆಯಿತು. ಆನೇಕ ವರ್ಷಗಳ ನಂತರ ಸಪ್ತರ್ಷಿಗಳು ಮತ್ತೇ ಅದೇ ಅರಣ್ಯದ ಮಾರ್ಗದಲ್ಲಿಯೇ ಬಂದಾಗ ಹಿಂದೆ ತಾವು ಉಪದೇಶಿಸಿದ್ದ ಕಿರಾತನ (ಬೇಡ) ನೆನಪಾಯಿತು. ಸಪ್ತರ್ಷಿಗಳು ಏ ಕಿರಾತ ಎಂದು ಜೋರಗಿ ಕೂಗಿದರು. ಇವರ ಕೂಗನ್ನು ಕೇಳಿ ಧ್ಯಾನದಿಂದ ಎಚ್ಚರಗೊಂಡ ಕಿರಾತ ಹುತ್ತವನ್ನು ಒಡೆದುಕೊಂಡು ಹೊರ ಬಂದನು. ಇವನನ್ನು ಕಂಡ ಸಪ್ತರ್ಷಿಗಳು ಹರ್ಷಗೊಂಡು ನಿಂತು ಕೈಗಳನ್ನೆತ್ತಿ ಆಶೀರ್ವದಿಸಿದರು. ಕಿರಾತನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈ ಜೋಡಿಸಿ ಪ್ರಾರ್ಥಿಸತೊಡಗಿದನು. ಸಪ್ತರ್ಷಿಗಳು ಪರಮಾನಂದದಿಂದ ನೀನು ಮೈಮೇಲೆ ವಲ್ಮೀಕ ಬೆಳೆಯುವವರೆಗೂ ತಪಶ್ಚರ್ಯ ಮಾಡಿದ್ದರಿಂದ ನಿನಗೆ ಲೋಕದಲ್ಲಿ ವಾಲ್ಮೀಕಿ ಎಂಬ ಹೆಸರಿನಿಂದ ನಾಮಕರಣ ಮಾಡಿರುವೆವು, ನಿನ್ನ ಪರ್ವತಪ್ರಾಯವದ ಪಾಪರಾಶಿಯೆಲ್ಲವೂ ರಾಮಮಂತ್ರ ಜಪದಿಂದ ನಾಶವಾಗಿ ಅಮೋಘವಾದ ಪುಣ್ಯ ಸಂಚಯ ಮಾಡಿಕೊಂಡಿರುವೆ ನೀನು ಪರಮಜ್ಞಾನಿಯಾದ ಮಹರ್ಷಿಯಾಗುವೆ. ನಿನ್ನಿಂದ ಲೋಕಕಲ್ಯಾಣವಾದ ಕಾರ್ಯವಾಗಲಿ. ವಾಲ್ಮೀಕಿ ಮಹರ್ಷಿಯೇ ನೀನು ವಿಧಿವಸದಿಂದ ಕಿರಾತನಾಗಿ ಜನಿಸಿ ಅದೇ ಸಂಸ್ಕಾರದಿಂದ ಕುಕರ್ಮವನ್ನಾಚರಿಸಿದೆ. ಅದರೆ ಪರಿಪಕ್ವ ಕಾವೊದಗಿದೊಡನೆಯೇ ನಿನಗೆ ನಮ್ಮ ದರ್ಶನವಾಯಿತು. ನೀನು ವಿದ್ಯಾದಾನ ಮಾಡು ಮುಂದೆ ನಿನಗೆ ನಾರದ ಮಹರ್ಷಿಗಳು ಭೇಟಿಯಾಗುವರು ಅವರ ಆಜ್ಞೆಯಂತೆ ನೀನು ನಡೆಯಬೇಕು ಎಂದು ಆಶೀರ್ವದಿಸಿದರು. ಸಪ್ತರ್ಷಿಗಳ ಆಶೀರ್ವಚನದಿಂದ ವಾಲ್ಮೀಕಿ ಋಷಿಯು ಸಂತುಷ್ಠನಾದನು. ಭಕ್ತಿ ವಿನಯದಿಂದ ಸಪ್ತರ್ಷಿಗಳು ಕುರಿತು ಮಹಾತ್ಮರೇ ನಿಮ್ಮಂದಲೇ ನಾನು ಪುನರ್ಜನ್ಮ ಪಡೆದಿರುವೆ ದುಷ್ಟನಾಗಿದ್ದ ನನ್ನನ್ನು ನೀವು ಉದ್ದರಿಸಿದಿರಿ ನಿಮ್ಮ ಉಪಕರವನ್ನು ನಾನೆಂದು ಮರೆಯಲಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ವಾಲ್ಮೀಕಿ ಮಹರ್ಷಿಯೇ ನಾವು ನಿಮಿತ್ತ ಮಾತ್ರರು. ನಿನ್ನನ್ನು ನೀನೇ ಉದ್ದರಿಸಿಕೊಂಡೆ ಏಕನಿಷ್ಠಿಯಿಂದ ರಾಮ ಮಂತ್ರ ಪುರಸ್ಚರನ ಮಾಡಿ ಪಾವನನಾದೆ, ಸರ್ವಸಂಗ ಪರಿತ್ಯಾಗ ಮಾಡಿ ಮನೋನಿಗ್ರಹಗಳಿಂದ ಯೋಗರುಢನಾಗಿ ಮೈಮೇಲೆ ವಲ್ಮೀಕಿ (ಹುತ್ತ) ಬೆಳೆಯುವವರೆಗೆ ಮಾಡಿದ ತಪಸ್ಸು ಸಾಮನ್ಯವಾದುದಲ್ಲ ನಿನ್ನ ನಿಷ್ಠೆಯೇ ನಿನ್ನನ್ನು ಉದ್ದರಿಸಿದೆ. ನೀನು ಪುರಸ್ಚರಣ ಮಾಡಿದ ರಾಮಮಂತ್ರದ ಮಹಿಮೆಯನ್ನು ಚೆನ್ನಾಗಿ ಅರಿತಿರುವೆ ಮುಂದೆ ದೇವರ್ಷಿ ನಾರದರು ಮಹಾಮಹಿಮನಾದ ರಾಮನ ಚರಿತ್ರೆಯನ್ನು ನಿನಗೆ ತಿಳಿಸುವರು ಶ್ರೀ ರಾಮ ಚರಿತೆಯ ಶ್ರವಣದಿಂದ ನಿನಗೆ ಒಳ್ಳೆಯ ಪ್ರಯೋಜನವಾಗುವುದೆಂದು ಶುಭಾಶೀರ್ವದಿಸಿದರು.

ಸಪ್ತಷಿಗಳ ಅದೇಶದಂತೆ ನಾರದಮುನಿಗಳು ವಾಲ್ಮಿಕಿ ಮಹರ್ಷಿಯ ಆಶ್ರಮಕ್ಕೆ ಭೇಟಿ ಕೊಟ್ಟರು. ಸಜ್ಜನರ ರಕ್ಷಣೆಗೆ ಮತ್ತು ದುರ್ಜನರ ನಾಶಕ್ಕಾಗಿ ಈ ಭೂಮಿಯಲ್ಲಿ ಅವತರಿಸಿದ ಶ್ರೀರಾಮ ಚರಿತ್ರೆಯನ್ನು ಬರೆಯುವಂತೆ ನಾರದಮುನಿಗಳು ತಿಳಿಸಿದರು. ಒಮ್ಮೆ ಶಿಷ್ಯನೊಂದಿಗೆ ಗಂಗಾ ಸ್ನಾನಕ್ಕೆ ಹೊರಟ ವಾಲ್ಮೀಕಿಗೆ ಸರಸಸಲ್ಲಾಪದಲ್ಲಿದ್ದ ಕ್ರೌಂಚ ಪಕ್ಷಿ ದಂಪತಿಯನ್ನು ನೋಡಿದರು. ಅವರ ಕಣ್ಣಿದುರಿಗೆ ಬೇಡನ ಬಾಣಕ್ಕೆ ಬಲಿಯಾದ ಗಂಡು ಕ್ರೌಂಚ ಪಕ್ಷಿ ಕಂಡು ಮರುಗಿದ ವಾಲ್ಮೀಕಿ ಈ ಪಕ್ಷಿಯ ಸಾವಿಗೆ ಕಾರಣನಾದ ಬೇಡನಿಗೆ ಎಂದು ಏಳಿಗೆಯಾಗದಿರಲೆಂದು ಶಾಪ ಕೊಟ್ಟರು. ನಂತರ ಬೇಡ ತನ್ನ ಕಾಯಕದ ಬಗ್ಗೆ ವಾಲ್ಮೀಕಿಗೆ ಮನವರಿಕೆ ಮಾಡಿಕೊಟ್ಟಾಗ ಸತ್ಯ ತಿಳಿಯದೇ ಶಾಪ ಕೊಟ್ಟದ್ದು ತಪ್ಪಾಯಿತೆಂದು ವಾಲ್ಮೀಕಿ ಋಷಿಯೂ ಪಶ್ಚಾತ್ತಾಪ ಪಟ್ಟು ಮನಶಾಂತಿಗಾಗಿ ಪರಮಾತ್ಮನ ದರ್ಶನಕ್ಕೆ ತಪಶ್ಚರ್ಯ ಮಾಡಿದರು. ತಪಸ್ಸಿಗೆ ಲೋಕಕರ್ತನಾದ ಬ್ರಹ್ಮದೇವನು ಮೆಚ್ಚಿ ಇವನ ತಪೋವನಕ್ಕೆ ದರ್ಶನವಿತ್ತನು.

ಆಗ ಪರಮಾತ್ಮನು ವಾಲ್ಮೀಕಿಯನ್ನು ಕುರಿತು ಪುಣ್ಯ ಶ್ಲೋಕಿಯಾದ ಮಹರ್ಷಿಯೇ ನಿನ್ನಿಂದ ಲೋಕಕಲ್ಯಾಣ ಮಹಾಕಾರ್ಯವು ಜರುಗಬೇಕಾಗಿದೆ. ಅದಕ್ಕಾಗಿಯೇ ಕ್ರೌಂಚವಧೆಯ ಘಟನೆಯು ನಿನ್ನ ಕಣ್ಮಂದೆ ನಡೆಯಿತು. ದೇವರ್ಷಿ ನಾರದರು ಕೇಳಿದ ಶ್ರೀರಾಮ ಚರಿತೆಯು ನಿನಗೆ ಪೂರ್ಣವಾಗಿ ಕರಗತವಾಗಿದೆ. ಈ ಪುಣ್ಯಪುರುಷನ ಚರಿತ್ರೆಯನ್ನು ನೀನು ಕಾವ್ಯರೂಪದಲ್ಲಿ ಬರೆಯಬೇಕು ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿಶಿಖರಗಳು, ನದಿ ಸಮುದ್ರಗಳಿರುವವೋ ಅಲ್ಲಿಯವರೆಗೆ ಈ ಲೋಕದಲ್ಲಿ ರಾಮಾಯನ ಕಥೆಯು ಪ್ರಚಲಿತವಾಗಿರುತ್ತದೆ. ನಿನ್ನ ಶ್ರೀರಾಮಚರಿತ ಮಹಾಕಾವ್ಯದ ದಿವ್ಯಕೃತಿಯಿಂದ ಲೋಕೋಪಕಾರವಾಗುವುದು. ನಿನ್ನ ಕಾವ್ಯವು ತನ್ನ ಘನತೆಯಿಂದ ವೇದ ಪಟ್ಟಕ್ಕೇರುವುದು, ಕಾವ್ಯ ರಚನೆಯ ಕಾರ್ಯದಲ್ಲಿ ನೀನೇ ಮೊದಲಿಗನಾಗುವುದರಿಂದ ಆದಿಕವಿ ಎಂಬ ಖ್ಯಾತಿ ಕೂಡ ನಿನಗೆ ಸಲ್ಲತ್ತದೆ ಎಂದ ಬ್ರಹ್ಮದೇವ ವಾಲ್ಮೀಕಿ ಮಹರ್ಷಿಯೇ ಉಪದೇಶ ಮಾಡಿ ಕಣ್ಮರೆ ಹೊಂದಿದನು. ಮರು ಕ್ಷಣವೇ ಮಹರ್ಷಿಯಲ್ಲಿ ರಾಮಾಯಣ ಕಾವ್ಯ ರಚನೆಯ ಸ್ಪೂರ್ತಿಯ ಉದಯವಾಯಿತು.

ವಾಲ್ಮೀಕಿ ಮಹರ್ಷಿ ಪಾವನಕರವಾದ ಶ್ರೀರಾಮಚರಿತೆಯನ್ನು ಕಾವ್ಯರೂಪದಲ್ಲಿ ಶ್ರೀರಾಮ ಜನನದಿಂದ ಹಿಡಿದು ಅವನ ಪಟ್ಟಾಭೀಷೇಕದವರೆಗೆ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ದಕಾಂಡಗಳೆಂಬ ಆರು ಕಾಂಡಗಲಲ್ಲಿ ಶ್ರೀರಾಮ ಚರಿತೆಯನ್ನು ರಚಿಸಿ ಹಾಡಿದ್ದಾನೆ. ಇದನ್ನೇ ನಾವು ವಾಲ್ಮೀಕಿ ವಿರಚಿರ ರಾಮಾಯಣವೆಮದು ಕರೆಯುತ್ತೇವೆ.

ಆದಿಕವಿ ಮಹರ್ಷಿ ವಾಲ್ಮೀಕಿ ಕೇವಲ ವಾಲ್ಮೀಕಿ ನಾಯಕ ಜನಾಂಗದ ಸ್ವತ್ತಲ್ಲ. ಅವರೊಬ್ಬ ಪುಣ್ಯಪುರುಷರಾಗಿದ್ದಾರೆ. ಬೇಟೆಗಾರ, ದರೋಡೆಕೋರ ಪರಾವಲಂಬಿಯಾಗಿದ್ದ ಕಿರಾತ ರತ್ನಾಕರ ಸಪ್ತರ್ಷಿಗಳ ಉಪದೇಶದಿಂದ ಜ್ಞಾನೋದಯವಾಗಿ ರಾಮನಾಮ ಜಪಿಸಿ ಮಹರ್ಷಿ ವಾಲ್ಮೀಕಿಯಾಗಿ ಜಗತ್ಪ್ರಸಿದ್ದ ರಾಮಾಯಾಣ ರಚಿಸಿ ಆದಿಕವಿಯಾದ. ಇವರ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ದಾರಿದೀಪವಾಗಿದೆ ಎವರ ವಿಚಾರಧಾರೆಗಳು ಇಂದಿನ ತಪ್ಪು ದಾರಿ ತುಳಿಉವ ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು. ಇವರ ಚಿಂತನೆಗಳು ಜನ ಸಾಮಾನ್ಯರ ಮನ ತಲುಪಿ ಸನ್ಮಾರ್ಗದಲ್ಲಿ ನಡೆಯಬೇಕು.

ಸಮಾಜದ ಕೆಳ ವರ್ಗದಲ್ಲಿ ಜನಿಸಿದ ಎಷ್ಟೋ ವ್ಯಕ್ತಿಗಳು ಅವರ ಸಾಧನೆಯಿಂದ ಉತ್ತುಂಗಕ್ಕೇರಿ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. ಯಾವುದೇ ವ್ಯಕ್ತಿಯನ್ನು ಅವನ ಹುಟ್ಟಿನ ಜಾತಿಯಿಂದ, ಉದ್ಯೋಗದಿಂದ, ನಡುವಳಿಕೆಯಿಂದ, ಪರಿಸರದಿಂದ, ಅಳೆಯುವುದು ಕಷ್ಟವೆನಿಸುತ್ತದೆ. ಯಾವ ಜಾತಿಯವನೆ ಇರಲಿ, ಅವನಿಗೆ ಸತ್ಯದ ಹಾದಿಯಲ್ಲಿ ಕೊಂಡೊಯ್ಯುವ ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ, ವಿದ್ಯೆ ಬುದ್ದಿ, ಗುರು ದೀಕ್ಷೆ, ಮಾರ್ಗದರ್ಶನ ಸಿಕ್ಕಿದ್ದೇಯಾದರೆ ಅವನು ಏನೆಲ್ಲ ಸಾಧಿಸಿ ತೋರಿಸುವುದರೊಂದಿಗೆ ಜನಮನದಲ್ಲಿ ಅಚ್ಚಳಿಯದೇ ಶಾಶ್ವತವಾಗಿ ಉಳಿಯಬಲ್ಲ ಎನ್ನುವುದಕ್ಕೆ ಬೇಡರ ಜಾತಿಯಲ್ಲಿ ಹುಟ್ಟಿದ ಕಿರಾತ ರತ್ನಾಕರ ಅಂದರೆ ವಾಲ್ಮೀಕಿ ಮಹರ್ಷಿಯೇ ನಿದರ್ಶನರಾಗಿದ್ದಾರೆ.

ಪೌರಾಣಿಕ ಕಥೆಗಳು – ರತ್ನಾಕರನು ವಾಲ್ಮೀಕಿ ಆಗಿ ರೂಪಾಂತರಗೊಂಡ ಕಥೆ





ಪವಿತ್ರ ಮಹಾಕಾವ್ಯವಾದ ರಾಮಾಯಣದ ಲೇಖಕ, ವಾಲ್ಮೀಕಿ. ಇವರು ಮಹರ್ಷಿಯಾದ ಕಥೆ, ಇವರೇ ರಚಿಸಿದ ಮಹಾಕಾವ್ಯದಷ್ಟೆ ಕುತೂಹಲಕಾರಿ ಆಗಿದೆ.

ವಾಲ್ಮೀಕಿ, ಪ್ರಚೇತಸ ಎಂಬ ಋಷಿಯ ಮಗನಾಗಿ ಜನಿಸಿದರು. ಆಗ ಆ ಬಾಲಕನ ಹೆಸರು ರತ್ನಾಕರ ಎಂದಾಗಿತ್ತು. ಈ ಚಿಕ್ಕ ಹುಡುಗನಾದ ರತ್ನಾಕರ ಒಮ್ಮೆ ದಟ್ಟ ಅರಣ್ಯದಲ್ಲಿ ಹೊಕ್ಕಿ ದಾರಿ ತಪ್ಪಿದನು. ಒಬ್ಬ ಬೇಟೆಗಾರ ಈ ಬಾಲಕನನ್ನು ಕಂಡು ತನ್ನಡಿ ಆಶ್ರಯ ನೀಡಿದನು. ಸಾಕು ತಂದೆ-ತಾಯಿಯ ಪ್ರೀತಿ ಮತ್ತು ವಾತ್ಸಲ್ಯದಲ್ಲಿ, ರತ್ನಾಕರ ಶೀಘ್ರದಲ್ಲೇ ತನ್ನ ಹೆತ್ತವರನ್ನು ಮರೆತುಹೋದ. ನಂತರ ರತ್ನಾಕರನು ಅತ್ಯುತ್ತಮ ಬೇಟೆಗಾರನಾಗಿ ಬೆಳೆದನು. ಮದುವೆಯಾಗಬಲ್ಲ ವಯಸ್ಸು ಸಮೀಪಿಸುತ್ತಿದ್ದಂತೆ, ಅಲ್ಲೇ ಒಂದು ಬೇಟೆಗಾರರ ಕುಟುಂಬದ ಸುಂದರ ಯುವತಿಯೊಂದಿಗೆ ವಿವಾಹವಾದನು.

ರತ್ನಾಕರನ ಕುಟುಂಬ ದೊಡ್ಡದಾಗಿ ಬೆಳೆಯುತ್ತಾ ಹೋದಂತೆ ಎಲ್ಲರಿಗೂ ಆಹಾರ ಒದಗಿಸುವುದು ಆತನಿಗೆ ಕಷ್ಟವಾಯಿತು. ಬೇಸತ್ತು ಆತನು ಅಂತಿಮವಾಗಿ ಕಾಡಿನಲ್ಲಿ ಹಾದುಹೋಗುವ ಜನರನ್ನು ಲೂಟಿ ಮಾಡಿ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಆರಂಭಿಸಿದ.

ಒಂದು ದಿನ, ನಾರದ ಮುನಿ ಈ ಕಾಡಿನಲ್ಲಿ ಹಾದು ಹೋಗುವಾಗ ರತ್ನಾಕರನ ದಾಳಿಗೆ ಒಳಪಟ್ಟರು. ನಾರದ ಭಯ ಪಡದೆ, ತನ್ನ ವೀಣೆ ಹಿಡಿದು ದೇವರ ಗುಣಗಾನ ಮಾಡಿ ಹಾಡುತ್ತಿರುವುದನ್ನು ಕಂಡು ಒಂದು ಗೋಚರವಾದ ಪರಿವರ್ತನೆ ರತ್ನಾಕರನಲ್ಲಿ ಆಗ ತೊಡಗಿತು. ನಾರದ ಅವರಿಗೆ ‘ರಾಮ’ ನಾಮದ ಪವಿತ್ರ ಹೆಸರು ಕಲಿಸಿದರು. ಅವರು ಮರಳಿ ಬರುವ ತನಕ ಆ ಹೆಸರನ್ನು ಪಠಣ ಮಾಡುತ್ತ ಧ್ಯಾನ ಮಾಡುವಂತೆ ಕೇಳಿಕೊಂಡರು. ರತ್ನಾಕರ ಇದನ್ನು ಪಾಲಿಸಿದರು. ತನ್ನ ಇಡೀ ದೇಹ ಹುತ್ತದೊಳಗೆ ಮುಳುಗಿದರೂ ರತ್ನಾಕರ ಧ್ಯಾನದಲ್ಲಿ ತಲ್ಲೀನನಾಗಿದ್ದ. ವರ್ಷಗಳು ಕಳೆದ ನಂತರ ನಾರದ ಮುನಿ ಮರಳಿದರು. ಆತನ ದೇಹದ ಸುತ್ತಾ ಇದ್ದ ಹುತ್ತ ತೆಗೆದುಹಾಕಿದರು. ಆತನ ತಪಸ್ಸನ್ನು ಮೆಚ್ಚಿದ ಬ್ರಹ್ಮರ್ಷಿ, ಗೌರವಾರ್ಥವಾಗಿ ದಯಪಾಲಿಸಲ್ಪಟ್ಟ ಹೆಸರೇ, ವಾಲ್ಮೀಕಿ. ಇದರ ಮೂಲ ‘ವಾಲ್ಮೀಕ’ವಾಗಿದ್ದು, ಅದರ ಅರ್ಥ ಹುತ್ತ ಎಂದಾಗಿದೆ.

ಬ್ರಹ್ಮರ್ಷಿ ವಾಲ್ಮೀಕಿ ನಂತರ ಗಂಗಾ ನದಿಯ ತೀರದಲ್ಲಿ ತಮ್ಮ ಆಶ್ರಮವನ್ನು ನಿರ್ಮಿಸಿದರು. ಹಾಗೆ ಒಂದು ದಿನ ನಾರದ ಮುನಿಗಳು ಅವರ ಆಶ್ರಮಕ್ಕೆ ಭೇಟಿ ನೀಡಿ ಅವರಿಗೆ ಶ್ರೀ ರಾಮನ ಕಥೆಯನ್ನು ತಿಳಿಸಿದರು. ನಂತರ, ವಾಲ್ಮೀಕಿ ಬ್ರಹ್ಮ ದೇವನಿಂದ ದಿವ್ಯ ದೃಷ್ಟಿ ಪಡೆದು, ರಾಮಾಯಣದ ಕಥೆಯನ್ನು ತಿಳಿಸತೊಡಗಿದರು, ಇದನ್ನು ಪರಿಪಾಲಿಸುತ್ತ ವಾಲ್ಮೀಕಿ ಪ್ರೇರಣೆ ಪಡೆದು ಸುಲಭವಾಗಿ ಶ್ಲೋಕಗಳನ್ನು ರಚಿಸುತ್ತ, ನಮಗೆಲ್ಲಾ ರಾಮಾಯಣವನ್ನು ನೀಡಿದರು.
Share:

ಅಂಬಾರಿ ಹೊತ್ತ ಆನೆಗಳ ಇತಿಹಾಸ


🐘🐘🐘🐘🐘🐘🐘🐘🐘
ಅಂಬಾರಿ ಹೊತ್ತ ಆನೆಗಳ ಇತಿಹಾಸ

ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿ

ಮೈಸೂರು ದಸರಾ ಅಂದರೆ
ನೆನಪಾಗುವುದು ಅಂಬಾರಿ ಮತ್ತು ಆನೆ.
ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ
ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ
ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ
ಮೊದಲು ಅಂಬಾರಿ ಹೊತ್ತ ಆನೆಯಾಗಿದೆ.
ಒಡೆಯರ್ ಕಾಲದಲ್ಲಿ ಪ್ರಾರಂಭವಾದ
ವಿಜಯದಶಮಿಯಿಂದ ಅಂದಾಜು 45 ವರ್ಷಗಳ
ಕಾಲ ಚಿನ್ನದ ಅಂಬಾರಿಯನ್ನು ಹೊತ್ತ
ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ
ಪಾತ್ರವಾಗಿತ್ತು. ಅರಮನೆಯ
ಮಹಾದ್ವಾರಗಳಲ್ಲೊಂದಾದ ಜಯಮಾರ್ತಾಂಡ
ದ್ವಾರಕ್ಕೆ ಈ ಆನೆ ಹೆಸರು ಇಡಲಾಗಿದೆ.
1902 ರಿಂದ ಅಂಬಾರಿ ಹೊತ್ತ ಆನೆಗಳೆಂದರೆ
🐘ವಿಜಯಬಹದ್ದೂರ್
🐘ನಂಜುಂಡ
🐘ರಾಮಪ್ರಸಾದ್
🐘ಮೋತಿಲಾಲ್
🐘ಸುಂದರ್ ರಾಜ್
🐘ಐರಾವತ
1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್
ಚಿತ್ರ 'ದಿ ಎಲಿಫೆಂಟ್ ಬಾಯ್'ಗೆ
ಬಳಸಿಕೊಳ್ಳಲಾಯಿತು ಆನೆಯ ಮಾವುತನೆ
ಚಿತ್ರದ ನಾಯಕ,ಚಿತ್ರ ಜಗತ್ತಿನಾದ್ಯಂತ
ಪ್ರದರ್ಶನಗೊಂಡಿತು. ಆ ಮಾವುತ
ಮತ್ಯಾರು ಅಲ್ಲ 7 ವರ್ಷದ ಹುಡುಗ
ಮೈಸೂರು ಸಾಬು.

🐘ಗಜೇಂದ್ರ
🐘ಬಿಳಿಗಿರಿ
ಇದು ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ
ದೈತ್ಯ ಆನೆಯಾಗಿದ್ದು ಇದರ ಎತ್ತರ 10.5
ಅಡಿ. ಸುಮಾರು 7 ಸಾವಿರ ಕೆ.ಜಿ. ಇತ್ತಂತೆ.
1975ರಲ್ಲಿ ಇದು ಮರಣ ಹೊಂದಿತ್ತು. ಇದರ
ಮಾವುತ ಗೌಸ್ ಅಂತ. ಬಿಳಿಗಿರಿ ಹೆಗ್ಗಳಿಕೆ ಏನೆಂದರೆ
ಇದೇ ಮಹಾರಾಜರನ್ನು ಹೊತ್ತೂಯ್ದು ಕೊನೇ ಆನೆ.

🐘ರಾಜೇಂದ್ರ,
ಗಂಧದ ಗುಡಿ' ಚಿತ್ರದಲ್ಲಿ ಡಾ. ರಾಜ್ ಆನೆಯ
ದಂತದ ಮೇಲೆ ಕುಳಿತು ಹಾಡುವ ಹಾಡುವ
ಹಾಡು ಯಾರಿಗೆ ತಾನೆ ನೆನಪಿಲ್ಲ.ಈ ಆನೆಯ
ಹೆಸರು ರಾಜೇಂದ್ರ.
ಚಿತ್ರದುದ್ದಕ್ಕೂ ಇದು ಭಾಗವಹಿಸಿದೆ. ಡಾ.
ರಾಜ್ಗೆ ಅಚ್ಚುಮೆಚ್ಚಿನ ಆನೆ ಕೂಡ.

🐘ದ್ರೋಣ
ದ್ರೋಣ 10.25 ಎತ್ತರದ ಆನೆ ದ್ರೋಣ.
ಅದು ಸುಮಾರು 6,400 ಕೆ.ಜಿ ತೂಕ
ಇತ್ತು.ದ್ರೋಣ ಆನೆ 18 ವರ್ಷ ಸತತವಾಗಿ
ಅಂಬಾರಿಗೆ ಬೆನ್ನುಕೊಟ್ಟ ಖ್ಯಾತಿ,
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ
ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್
ಟಿಪ್ಪುಸುಲ್ತಾನ್'ನ
ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದೂ ಇದೇ ದ್ರೋಣ,
1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಗುಲಿ
ದ್ರೋಣ ಸಾವನ್ನಪ್ಪಿತು.

🐘ಅರ್ಜುನ
ದ್ರೋಣ ನ ನಂತರ ಅರ್ಜುನ ಒಮ್ಮೆ ಅಂಬಾರಿ
ಹೊತ್ತಿದ್ದ ಆದರೆ ನಂತರದ ದಿನಗಳಲ್ಲಿ
ಮಾವುತನನ್ನು ಕೊಂದ ಆರೋಪದಲ್ಲಿ
ಅರ್ಜುನನನ್ನು ಉತ್ಸವದಿಂದ
ಹೊರಗುಳಿಸಲಾಯಿತು.

🐘ಬಲರಾಮ
ಅರ್ಜುನನ ನಂತರ ಬಲರಾಮನಿಗೆ ಅಂಬಾರಿ
ಹೊರಿಸಲಾಯಿತು,ಬಲರಾಮ ಶಾಂತ ಸ್ವಭಾವದ
ಆನೆ ಆಗಿದ್ದು 1987ರಲ್ಲಿ ಕಟ್ಟೆಪುರದಲ್ಲಿ
ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ,
ಪ್ರಶಾಂತ ಈ ಐದೂ ಆನೆಗಳನ್ನು ಹಿಡಿದಿದ್ದರು.
ಹನ್ನೊಂದು ವರ್ಷಗಳ ಕಾಲ ಅಂಬಾರಿ ಹೊತ್ತ
ಬಲರಾಮನಿಗೆ ಕಳೆದ ವರ್ಷ ನಿವೃತ್ತಿ ದೊರೆತಿದೆ.

🐘ಅರ್ಜುನ
ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ
ಹೊತ್ತಿದ್ದ ಅರ್ಜುನನ ಗುಣದಲ್ಲಿ ಸ್ವಲ್ಪ
ಕೀಟಲೆ ಸ್ವಭಾವವಿರುವ ಅರ್ಜುನನ ಮೇಲೆ
ಸಾಕಷ್ಟು ಟೀಕೆಗಳು ಬಂದಿತ್ತು ಆದರೂ ಬಲರಾಮನಿಗೆ
ವಯಸ್ಸಾದ ಕಾರಣ ಕಳೆದವರ್ಷದಿಂದ ಅಂಬಾರಿ
ಹೊರುವ ಜವಾಬ್ದಾರಿ ಅರ್ಜುನನಿಗೆ ನೀಡಲಾಗಿದೆ.
ಅರ್ಜನ ಬರೋಬ್ಬರಿ 5,535 ಕೆಜಿ
ತೂಕವನ್ನು ಹೊಂದುವ ಮೂಲಕ ತಂಡದ
ಎಲ್ಲಾ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ.

🐘🐘🐘🐘🐘🐘🐘🐘🐘
Share:

ಸ್ಮಾರ್ಟ್ interactive ವೈಟ್ ಬೋರ್ಡ್ teaching..





Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com