For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ
​
Showing posts with label HISTORY. Show all posts
Showing posts with label HISTORY. Show all posts

ವಿಶ್ವದ ಹೊಸ 7 ಅಧಿಕೃತ ಅದ್ಭುತಗಳು

ವಿಶ್ವದ ಹೊಸ 7 ಅಧಿಕೃತ ಅದ್ಭುತಗಳು

ಪಿರಮಿಡ್
ಕ್ರಿಸ್ಟ್ ದಿ ರಿಡೀಮರ್
ಕೊಲೊಸಿಯಮ್
ತಾಜ್ ಮಹಲ್
ಮಹಾ ಗೋಡೆ
ಮಾಚು ಪಿಚ್ಚು
ಪೆಟ್ರಾ

ಪಿರಮಿಡ್

ಚಿಚಿನ್ ಇಟ್ಜಾದಲ್ಲಿನ ಪಿರಮಿಡ್ (ಕ್ರಿ.ಪೂ.800 ಮುನ್ನ) ಯುಕಾಟನ್ ಪರ್ಯಾಯದ್ವೀಪ, ಮೆಕ್ಸಿಕೊ




ಚಿಚಿನ್ ಇಟ್ಜಾವು, ಅತ್ಯಂತ ಜನಪ್ರಿಯ ಮಾಯನ್ ದೇವಾಲಯ ನಗರ, ಇದು ಮಾಯನ್ ನಾಗರಿಕತೆಯ ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿ ಸೇವೆ ಸಲ್ಲಿಸಿದೆ. ಇದರ ವಿವಿಧ ನಿರ್ಮಾಣಗಳು- ಕುಕುಲ್ಕನ್‌ನ ಪಿರಮಿಡ್, ಚಾಕ್ ಮೂಲ್‌ನ ದೇವಾಲಯ, ಸಾವಿರ ಸ್ತಂಬಗಳ ಹಜಾರ, ಮತ್ತು ಕೈದಿಗಳ ಆಟವಾಡುವ ಮೈದಾನ- ಇವುಗಳನ್ನು ಇಂದಿಗೂ ಕಾಣಬಹುದು ಮತ್ತು ಇವುಗಳು ವಾಸ್ತುಶಾಸ್ತ್ರದ ಅವಕಾಶ ಮತ್ತು ಸಂಯೋಜನೆಗೆ ಒಂದು ಅಸಾಮಾನ್ಯವಾದ ಬದ್ಧತೆಯ ಪ್ರದರ್ಶಕವಾಗಿದೆ. ಎಲ್ಲಾ ಮಾಯನ್ ದೇವಾಲಯಗಳಲ್ಲಿ, ಅಂತಿಮವಾದ ಮತ್ತು ಬಹುಮಟ್ಟಿಗೆ ಉತ್ಕೃಷ್ಟವಾಗಿರುವುದು ಪಿರಮಿಡ್‌ ಆಗಿದೆ.

ಕ್ರಿಸ್ಟ್ ದಿ ರಿಡೀಮರ್



ಕ್ರಿಸ್ಟ್ ದಿ ರಿಡೀಮರ್ (1931) ರಿಯೊ ಡಿ ಜನೇರೋ, ಬ್ರೆಜಿಲ್

ಏಸು ಕ್ರಿಸ್ತನ ಈ ವಿಗ್ರಹವು ಸುಮಾರು 38 ಮೀಟರ್ ಎತ್ತರವಾಗಿದೆ, ಕೊರ್ಕೊವಾಡೊ ಪರ್ವತದ ಶಿಖರದ ಮೇಲಿದ್ದು ರಿಯೊ ಡಿ ಜನೇರೋವನ್ನು ಮೇಲಿನಿಂದ ಗಮನಿಸುವಂತಿದೆ. ಇದನ್ನು ಬ್ರೆಜಿಲ್‌ನ ಹೆಯಿಟರ್ ಡಾ ಸಿಲ್ವ ಕೊಸ್ಟಾ ವಿನ್ಯಾಸಗೊಳಿಸಿದರು ಮತ್ತು ಪ್ರೆಂಚ್ ಶಿಲ್ಪಿ ಪೌಲ್ ಲಾಂಡೊವ್ಸ್‌ಕಿ ರಚಿಸಿದರು, ಇದು ಪ್ರಪಂಚದ ಅತ್ಯಂತ ಜನಪ್ರಿಯ ಸ್ಮಾರಕಗಳಲ್ಲಿ ಒಂದಾಗಿದೆ. ಈ ವಿಗ್ರಹವನ್ನು ನಿರ್ಮಿಸಲು ಐದು ವರ್ಷಗಳ ಕಾಲ ತೆಗೆದುಕೊಳ್ಳಲಾಯಿತು ಮತ್ತು ಆಕ್ಟೋಬರ್, 12, 1931ರಲ್ಲಿ ಉದ್ಘಾಟಿಸಲಾಯಿತು. ಇದು ನಗರದ ಮತ್ತು ತೆರೆದ ಬಾಹುಗಳಿಂದ ಪ್ರವಾಸಿಗರನ್ನು ಸ್ವೀಕರಿಸುವ, ಬ್ರೆಜಿಲಿನ ಜನರ ಪ್ರೀತಿಯ ಒಂದು ಲಾಂಛನವಾಗಿದೆ.

ಕೊಲೊಸಿಯಮ್

ರೋಮ್‌ನ ಕೊಲೊಸಿಯಮ್ (70 - 82 ಕ್ರಿ.ಶ) ರೋಮ್, ಇಟಲಿ

ರೋಮ್‌ನ ಮಧ್ಯಭಾಗದಲ್ಲಿ ಈ ಪ್ರಸಿದ್ಧ ಬಯಲು ರಂಗ ಮಂದಿರವನ್ನು ಯಶಸ್ವಿ ಸೈನಿಕದಳಗಳಿಗೆ ಪ್ರಶಸ್ತಿ ನೀಡಲು ಮತ್ತು ರೋಮ್ ಸಾಮ್ರಾಜ್ಯದ ವೈಭವವನ್ನು ಪ್ರದರ್ಶೀಸಲು ನಿರ್ಮಿಸಲಾಯಿತು. ಇದರ ವಿನ್ಯಾಸದ ಪರಿಕಲ್ಪನೆಯೂ ಇಂದಿಗೂ ಪ್ರಸ್ತುತವಾಗಿದೆ ಮತ್ತು ಪ್ರತಿ ಅಧುನಿಕ ಕ್ರೀಡಾ ಮೈದಾನವು ಸುಮಾರು 2000 ವರ್ಷಗಳ ನಂತರವೂ ಅಂತಿಮವಾಗಿ ಕೊಲೊಸಿಯಮ್‌ನ ಮೂಲ ವಿನ್ಯಾಸದ ಸಮ್ಮೋಹಕ ಮುದ್ರೆಯನ್ನು ಹೊಂದಿರುತ್ತದೆ. ವೀಕ್ಷಕರ ಸಂತೋಷಕ್ಕಾಗಿ, ಈ ಅಂಗಣದಲ್ಲಿ ನೆಡೆದ ಕ್ರೂರ ಹೋರಾಟ ಮತ್ತು ಪಂದ್ಯಾಟಗಳ ಬಗ್ಗೆ ಚಲನಚಿತ್ರ ಮತ್ತು ಇತಿಹಾಸದ ಪುಸ್ತಕಗಳ ಮೂಲಕ ಇಂದು,ನಾವು ಇನ್ನೂ ಹೆಚ್ಚು ಅರಿವನ್ನು ಹೊಂದಿದ್ದೇವೆ.

ತಾಜ್ ಮಹಲ್

ತಾಜ್ ಮಹಲ್ (1630 ಕ್ರಿ.ಶ) ಅಗ್ರಾ, ಭಾರತ

ಈ ಅಗಾದ ಭವ್ಯ ಸಮಾಧಿಯನ್ನು, ಐದನೆ ಮುಸ್ಲಿಂ ಮೊಘಲ್ ರಾಜ, ಷಹಾ ಜಹಾನ್‌ನ ಆದೇಶದ ಮೇರೆಗೆ, ಆತನ ಪ್ರೀತಿಯ ಮಡದಿಯ ನೆನಪಿಗಾಗಿ ಕಟ್ಟಲಾಯಿತು. ಬಿಳಿಯ ಅಮೃತ ಶಿಲೆಯಿಂದ ಕಟ್ಟಲಾಗಿದೆ ಮತ್ತು ಸಾಂಪ್ರದಾಯಿಕವಾಗಿ ನಿರ್ಮಿಸಿದ ಉದ್ಯಾನದ ಆವರಣದಲ್ಲಿ ನಿಂತಿದೆ. ತಾಜ್ ಮಹಲ್ ಅನ್ನು ಭಾರತದಲ್ಲಿ ಮುಸ್ಲಿಂ ಕಲೆಯ ಅತಿಶ್ರೇಷ್ಠ ಆಭರಣ ಎಂದು ಪರಿಗಣಿಸಲಾಗುತ್ತದೆ. ನಂತರ ರಾಜನನ್ನು ಕಾರ ಗೃಹದಲ್ಲಿಡಲಾಯಿತು ಮತ್ತು ಆತ ಆತನ ಜೈಲಿನ ಸಣ್ಣ ಕಿಟಿಕಿಯಿಂದ ಮಾತ್ರ ತಾಜ್ ಮಹಲ್‌ ಅನ್ನು ನೋಡಲು ಸಾಧ್ಯವಾಗುತ್ತಿತ್ತು ಎಂದು ಹೇಳಲಾಗುತ್ತದೆ.

ಮಹಾ ಗೋಡೆ

ಚೀನಾದ ಮಹಾ ಗೋಡೆ (220 ಕ್ರಿ.ಪೂ ಮತ್ತು 1368 - 1644 ಕ್ರಿ.ಶ) ಚೀನಾ

ಚೀನಾದ ಮಹಾ ಗೋಡೆಯನ್ನು ಅಸ್ತಿತ್ವದಲ್ಲಿರುವ ರಕ್ಷಣಾ ವ್ಯವಸ್ಥೆಯನ್ನು ಒಂದು ಸಂಯುಕ್ತ ರಕ್ಷಣಾ ವ್ಯವಸ್ಥೆಗೆ ಸಂಪರ್ಕಿಸಲು ಮತ್ತು ಆಕ್ರಮಣಮಾಡುವ ಮಂಘೋಲಿಯನ್ ಜನಾಂಗವನ್ನು ಚೀನಾದಿಂದ ಹೊರಗಿಡಲು ಕಟ್ಟಲಾಯಿತು. ಇದು ಇದುವರೆಗೂ ಕಟ್ಟಿರುವ ಅತ್ಯಂತ ದೊಡ್ಡ ಮಾನವ ನಿರ್ಮಿತ ಸ್ಮಾರಕವಾಗಿದೆ ಮತ್ತು ಇದು ಅಂತರಿಕ್ಷದಿಂದ ಕಾಣುವ ಏಕ ಮಾತ್ರ ಸಂರಚನೆಯಾಗಿದೆ ಎಂಬ ಬಗ್ಗೆ ಭಿನ್ನಭಿಪ್ರಾಯವಿದೆ. ಈ ಭಾರಿ ಗಾತ್ರದ ನಿರ್ಮಾಣವನ್ನು ಕಟ್ಟಿ ಮುಗಿಸಲು ಹಲವು ಸಾವಿರ ಜನರು ತಮ್ಮ ಜೀವನವನ್ನೆ ನೀಡಿರಬೇಕು.

ಮಾಚು ಪಿಚ್ಚು

ಮಾಚು ಪಿಚ್ಚು (1460-1470), ಪೆರು



15ನೆ ಶತಮಾನದಲ್ಲಿ ಇಂಕಾನ್ ಚಕ್ರವರ್ತಿ ಪಚಾಕ್ಯುಟೆಕ್ ಮಾಚು ಪಿಚ್ಚು ("ಪುರಾತನ ಪರ್ವತ") ಎಂಬ ಹೆಸರಿನ ಪರ್ವತದ ಮೇಲೆ ಮೋಡಗಳ ನಡುವೆ ಒಂದು ನಗರವನ್ನು ಕಟ್ಟಿದನು. ಈ ಅಸಾಮಾನ್ಯವಾದ ನಿವಾಸ ಸ್ಥಳವು ಅಮೆಜಾನ್‌ ಕಾಡಿನ ನಡುವೆ, ಅಂಡೆಸ್ ಪ್ರಸ್ಥಭೂಮಿ ಮಧ್ಯಬಾಗದಲ್ಲಿ ಮತ್ತು ಉರುಬಾಂಬ ನದಿಯ ಮೇಲ್ಭಾಗದಲ್ಲಿ ಹರಡಿದೆ. ಸಿಡಿಬು ರೋಗದ ತೀವ್ರತೆಯಿಂದ ಇದನ್ನು ಬಹುಶಃ ಇಂಕಾಸ್‌ ಗಳು ತೊರೆದಿರಬಹುದು.ಮತ್ತು, ಇಂಕಾನ್‌ ಸಾಮ್ರಾಜ್ಯವನ್ನು ಸ್ಪ್ಯಾನಿಷ್ ಸೋಲಿಸಿದ ನಂತರ, ನಗರವು ಸುಮಾರು ಮೂರು ಶತಮಾನಗಳ ವರೆಗೆ ’ಗೋಚರವಾಗದೆ’ಉಳಿದಿತ್ತು. ಇದನ್ನು 1911ರಲ್ಲಿ ಹಿರಾಮ್ ಬಿಂಗಹಂ ಮೂಲಕ ಪುನಃ ಶೋಧಿಸಲಾಯಿತು.

ಪೆಟ್ರಾ

ಪೆಟ್ರಾ (9 ಕ್ರಿ.ಪೂ - 40 ಕ್ರಿ.ಶ.) ಜೋರ್ಡಾನ್

ಅರೆಬಿಯನ್ ಮರುಭೂಮಿಯ ಅಂಚಿನಲ್ಲಿ, ಪೆಟ್ರಾವು ನಾಬಾಟಿಯನ್ ಸಾಮ್ರಾಜ್ಯದ ರಾಜ ಅರೆಟಾಸ್‌ IV ನ (9 ಕ್ರಿ.ಪೂ - 40 ಕ್ರಿ.ಶ.) ಮಿನುಗುವ ರಾಜಧಾನಿಯಾಗಿತ್ತು. ಜಲ ತಂತ್ರಜ್ಞಾನದ ಪ್ರವೀಣರಾದ, ನಾಬಾಟಿಯನರು ಶ್ರೇಷ್ಠ ಸುರಂಗ/ಕಾಲುವೆಗಳ ನಿರ್ಮಾಣಗಳ ಮತ್ತು ನೀರು ಕೋಣೆಗಳ ಮೂಲಕ ನಗರಕ್ಕೆ ಒದಗಿಸಿದ್ದರು. ಗ್ರೀಕ್-ರೋಮನ್ ಮಾದರಿಯಲ್ಲಿ ಒಂದು ರಂಗಭೂಮಿಯನ್ನು ವಿನ್ಯಾಸಗೊಳಿಸಲಾಗಿದೆ, ಅದು 4,000 ವೀಕ್ಷರರಿಗೆ ಸ್ಥಳವನ್ನು ಒದಗಿಸುತ್ತದೆ. ಇಂದು ಪೆಟ್ರಾದ ಎಲ್-ಡೆಯರ್ ಮೊನಸ್ಟೆರಿ ಮೇಲೆ ಮುಖಭಾಗದ 42 ಮೀಟರ್ ಎತ್ತರ ಹೆಲ್ಲೆನಿಸ್ಟಿಕ್ ದೇವಾಲಯ ಹೊಂದಿದ ಪ್ಯಾಲೇಸ್ ಟೊಂಬ್ಸ್ ಮಧ್ಯ ಪೂರ್ವದ ಸಂಸ್ಕೃತಿಯ ಹೃದಯಸ್ಪರ್ಶಿ ಉದಾಹರಣೆಗಳು.
Share:

ಮೊಘಲರ ವಿಶೇಷತೆಗಳು


1. ಯಾರ ಕಾಲವನ್ನು ದೆಹಲಿಯ ಕಲೆ ಮತ್ತು ವಾಸ್ತುಶಿಲ್ಪದ ಸುವರ್ಣ ಯುಗ ಎಂದು ಕರೆಯುತ್ತಾರೆ?
*ಷಹಜಹಾನ್*
_______________________________
2. ಷಹಜಹಾನ್ ಮೂಲ ಹೆಸರು?
*ಖುರಂ*
_______________________________
3. ಷಹಜಹಾನ್ ಆತನನ್ನು ತನ್ನನ್ನು ತಾನು ಎನೇಂದು ಘೋಷಿಸಿಕೊಂಡನು?
*ಬಾದ್ ಷಾ*
_______________________________
4. ಷಹಜಹಾನ್ ನೂರ್ ಜಹಾನ್ ಗೆ ವಾರ್ಷಿಕವಾಗಿ ಎಷ್ಟು ವೇತನ ನೀಡುತ್ತಿದ್ದನು?
*ಎರಡು ಲಕ್ಷ*
_______________________________
5. ಷಹಜಹಾನ್ ಮತ್ತು ಯಾವ ಸಿಖ್ ಗುರುವಿನ ನಡುವೆ ಸಂಘರ್ಷ ಇತ್ತು?
*ಸಿಖ್ ಆರನೇ ಗುರು ಹರ ಗೋವಿಂದ*
_______________________________
6. ಷಹಜಹಾನ್ ಪ್ರೀತಿಯ ಮಡದಿ ಮಮ್ತಾಜ್ ಮೊದಲ ಹೆಸರು?
*ಅರ್ಜುದಂ ಬಾನು ಬೇಗಂ*
_______________________________
7. ತಾಜ್ ಮಹಲ್ ನಿರ್ಮಿಸಿದ ವರ್ಷ?
*1632-1653*
_______________________________
8. ದೆಹಲಿಯ ಕೆಂಪು ಕೋಟೆ ನಿರ್ಮಿಸಿದವರು?
*ಷಹಜಹಾನ್*
_______________________________
9. ದೆಹಲಿಯ ಕೆಂಪು ಕೋಟೆಯ ಎರಡು ಗೇಟ್ ಗಳು ಯಾವುವು?
*ಪೂರ್ವ ದೆಹಲಿ ಗೇಟ್, ಪಶ್ಚಿಮ ಲಾಹೋರ್ ಗೇಟ್*
_______________________________
10. ದೆಹಲಿಯ ದೊಡ್ಡ ಮಸೀದಿ ಯಾವುದು ಇದನ್ನು ನಿರ್ಮಿಸಿದ ವರು ಯಾರು?
*ಜಾಮೀಯಾ ಮಸೀದಿ , ಷಹಜಹಾನ್*
_______________________________
11. ಮಯೂರ ಸಿಂಹಾಸನ ಎಷ್ಟು ವೆಚ್ಚದಲ್ಲಿ ನಿರ್ಮಿಸಲಾಗಿದೆ?
*ಒಂದು ಕೋಟಿ*
_______________________________
12. ಷಹಜಹಾನ್ ಬಾದ್ ನಗರವನ್ನು ನಿರ್ಮಿಸಿದವರು?
*ಷಹಜಹಾನ್*
_______________________________
13. ಉಪನಿಷತ್ತು ಗಳನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದ ಷಹಜಹಾನ್ ಮಗ ಯಾರು?
*ದಾರಾಷುಕೋ*
_______________________________
14. ತಾಜ್ ಮಹಲ್ ಗೆ ಇರುವ ಇನ್ನಿತರ ಹೆಸರುಗಳು ಯಾವುವು?
*ಬೆಳದಿಂಗಳ ಸ್ಮಾರಕ ( ಮೂನ್ ಲೈಟ್ ಮ್ಯಾನೂಮೆಂಟ್), ಲೆರಿಕನ್ ಸ್ಟೋನ್ ( ಶಿಲೆಯಲ್ಲಿನ ಭಾವಗೀತೆ), ವಾಸ್ತುಶಿಲ್ಪ ದ ರಾಣಿ*
_______________________________
15. ತಾಜ್ ಮಹಲ್ ನ ವಿನ್ಯಾಸಕಾರ ಮತ್ತು ನೀಲಿನಕ್ಷೆಗಾರ ಯಾರು?
*ಉಸ್ತಾದ್ ಇಸ್ಸಾ ಅಥವಾ ಉಸ್ತಾದ್ ಅಹಮದ್ ಲಾಹೋರಿ*
_______________________________
16. ದೆಹಲಿ ಆಡಳಿತ ಮಾಡುವ ಹಂಬಲದಿಂದ ಔರಂಗಜೇಬ್ ಮಾಡಿದ ಕದನ ಯಾವುದು?
*ಷೂಜ್ ಗಡ್ ಅಥವಾ ಸಮೂಹರ್ ಘರ್ ಕದನ 1658*
_______________________________
17. ದೆಹಲಿ ಸಿಂಹಾಸನ ಏರಿದ ಔರಂಗಜೇಬ್ ನಿಗೆ ಯಾವ ಬಿರುದು ನೀಡಲಾಯಿತು?
*ಅಲಂಗೀರ್*
_______________________________
18. ಷಹಜಹಾನ್ ಸಮಾಧಿ ಎಲ್ಲಿದೆ?
*ಅಗ್ತಾ*
_______________________________
19. ತಂಬಾಕು ಮತ್ತು ಸಂಗೀತ ನಿಷೇಧ ಮಾಡಿದ ಮೊಘಲ್ ದೊರೆ ಯಾರು?
*ಔರಂಗಜೇಬ್*
_______________________________
20. ಯಾವ ಮೊಘಲ ದೊರೆ ಪ್ರೇಂಚರುಗೆ ವಸಾಹತುವಿನ ಅನುಮತಿ ನೀಡಿದನು?
*ಔರಂಗಜೇಬ್*
_______________________________
21. 1665 ರಲ್ಲಿ ಶಿವಾಜಿಯ ಬಳಿ ಯಾವ ಹಿಂದೂ ಸೇನಾಧಿಪತಿಯನ್ನು ಔರಂಗಜೇಬ್ ‌ಕಳುಹಿಸಿದನು?
*ಜೈಸಿಂಗ್*
_______________________________
22. ಔರಂಗಜೇಬ್ ಯಾವ ಸಿಖ್ ಗುರುವನ್ನು ಕೊಲೆ ಮಾಡಿದನು?
*ಸಿಖ್ 9ನೇ ಗುರು ತೇಜ್ ಬಹದ್ದೂರ್*
_______________________________
23. ಔರಂಗಜೇಬ್ ನ ಪ್ರಸಿದ್ಧ ಸೇನಾಧಿಪತಿ?
*ಕಷಿಖಾನ್*
_______________________________
24. ಜಿಂದಾಪೀರ್ , ಬಹದ್ದೂರ್ ಎಂಬ ಬಿರುದು ಇದ್ದು ಮೊಘಲ್ ದೊರೆ ಯಾರು?
*ಔರಂಗಜೇಬ್*
_______________________________
25. ಜಿಂದಾಪೀರ್ ಎಂದರೇನು?
*ಜೀವಂತ ಸಂತ*
_______________________________
26. ಔರಂಗಜೇಬ್ ಸ್ವರಚಿತ ಆತ್ಮ ಕಥನ ಯಾವುದು?
*ತುಝಕಿ-ಇ-ಆಲಂಗೀರ್*
_______________________________
27. ಔರಂಗಜೇಬ್ ಸಮಾಧಿ ಎಲ್ಲಿದೆ?
*ದೌಲತ್ ಬಾದ್*
_______________________________
28. ಬಂದನಲ್ಲಿದ್ದ ಸಾಂಭಾಜಿಯ ಮಗನಾದ ಸಾಹುವನ್ನು ಬಿಡುಗಡೆ ಮಾಡಿದವರು ಯಾರು?
*ಒಂದನೇ ಬಹದ್ದೂರ್ ಷಾ*
_______________________________
29. ಬಂಗಾಳದಲ್ಲಿ ಬ್ರಿಟಿಷರಿಗೆ ತೆರಿಗೆ ರಹಿತ ವ್ಯಾಪಾರ ಕ್ಕೆ ಅನುಮೋದನೆ ಕೊಟ್ಟವರು ಯಾರು?
*ಫರೂಕ್ಸಿಯಾರ್*
_______________________________
30. ಫರೂಕ್ಸಿಯಾರ್ ನ ರೋಗ ವನ್ನು ಗುಣ ಪಡಿಸಿದ ಬ್ರಿಟಿಷ್ ವೈದ್ಯ ಯಾರು
*ವೈದ್ಯ ಹ್ಯಾಮಿಲ್ಟನ್*
_______________________________
31. ಮಯೂರ ಸಿಂಹಾಸನ ವನ್ನು ಪರ್ಶಿಯಾಗೆ ಕೊಂಡೋಯ್ದವನು ಯಾರು?
*ಪರ್ಷಿಯನ್ ದೊರೆ ನಾದಿರ್ ಷಾ*
_______________________________
32. ಮಯೂರ ಸಿಂಹಾಸನದ ಮೇಲೆ ಕುಳಿತ ಕೊನೆಯ ಮೊಘಲ್ ದೊರೆ?
*ಮಹಮದ್ ಷಾ 1739*
_______________________________
33. ಬಕ್ಸಾರ್ ಕದನದಲ್ಲಿ ಭಾಗಿಯಾದ ಮೊಘಲ್ ದೊರೆ ಯಾರು?
*ಎರಡನೇ ಆಲಂ ಷಾ* 1764 ಅಕ್ಟೋಬರ್22
_______________________________
34. ರಾಜಾರಾಂ ಮೋಹನ್ ರಾಯ್ ಗೆ ರಾಜ್ ಬಿರುದು ನೀಡಿದ ಮೊಘಲ್ ದೊರೆ ಯಾರು?
*ಎರಡನೇ ಅಕ್ಬರ್*
_______________________________
35. ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ?
*ಎರಡನೇ ಬಹದ್ದೂರ್ ಷಾ*
_______________________________
36. ಎರಡನೇ ಬಹದ್ದೂರ್ ಷಾ ನನ್ನು ಬಂಧಿಸಿದ ಬ್ರಿಟೀಷ್ ಅಧಿಕಾರಿ ಯಾರು?
*ಜಾನ್ ನಿಕೋಲಸ್*
_______________________________
37. ಎರಡನೇ ಬಹದ್ದೂರ್ ಷಾ ನನ್ನು ಯಾವ ಪ್ರದೇಶ ಕ್ಕೆ ಗಡಿಪಾರು ಮಾಡಲಾಯಿತು?
*ರಂಗೂನ್ (ಮಯನ್ಮಾರ್)*
_______________________________
38. ಮೊಘಲ್ ಸಾಮ್ರಾಜ್ಯದಲ್ಲಿ ಯಾವ ಬೆಳೆ ಪ್ರಸಿದ್ಧಿ

ಪಡೆದಿತು?
*ನೀಲಿ ಬೆಳೆ*
_______________________________
39. ಸುಭಾ ಎಂದರೇನು?
*ಮೊಘಲ್ ಕಾಲದಲ್ಲಿ ಪ್ರಾಂತ್ಯಗಳು*
_______________________________
40. ಮೊಘಲ್ ಸಾಮ್ರಾಜ್ಯದ ಪ್ರಧಾನ ಟಂಕಶಾಲೆ ಎಲ್ಲಿ ಸ್ಥಾಪಿಸಿದರು?
*ದೆಹಲಿ*
Share:

ರಜಪೂತರು

6) ರಜಪೂತರ ಕೊನೆಯ ದೊರೆ ಯಾರು?
A). ಮೊದಲನೇ ಪೃಥ್ವಿರಾಜ್ ಚೌಹಾಣ
B). ಬೋಜರಾಜ
C). ಗುಹದತ್ತ
D). ಮೂರನೇ ಪೃಥ್ವಿರಾಜ್ ಚೌಹಾಣ

orrect Ans: (D)


ಇತಿಹಾಸ ಪ್ರಸಿದ್ಧ ಕಾಳಗವಾದ ಎರಡನೇ ತರೈನ್ ಯುದ್ದದಲ್ಲಿ ಪೃಥ್ವಿರಾಜನ ಮರಣದೊಂದಿಗೆ ರಜಪೂತರ ಆಳ್ವಿಕೆ ಮುಕ್ತಾಯವಾಯಿತು. ರಜಪೂತರ ಕೊನೆಯ ದೊರೆ 3 ನೆ ಪೃಥ್ವಿರಾಜ್ ಚೌಹಾಣನಾಗಿದ್ದಾನೆ.


7) ಎರಡನೇಯ ತರೈನ್ ಯುದ್ಧದಲ್ಲಿ ಜಯಶಾಲಿಯಾದವರು ಯಾರು?
A). ಪೃಥ್ವಿರಾಜ್ ಚೌಹಾಣ್
B). ಮಹ್ಮದ್ ಘೋರಿ
C). ಮಹ್ಮದ್ ಘಜ್ನಿ
D). ಯಾರೂ ಅಲ್ಲ


Correct Ans: (B)


ಕ್ರಿ.ಶ 1192 ರಲ್ಲಿ ಪೃಥ್ವಿರಾಜ್ ಚೌಹಾಣ್ ಮತ್ತು ಘೋರಿಯ ನಡುವೆ ಈ ಯುದ್ಧವು ನಡೆಯಿತು. ಇಲ್ಲಿ ಈ ಯುದ್ಧದಲ್ಲಿ ಚೌಹಾಣನು ಸೋತು ಕೊಲ್ಲಲ್ಪಟ್ಟನು. ಹೀಗಾಗಿ ಮಹದ್ ಘೋರಿಯು ಜಯಶಾಲಿಯಾದನು.


8) ಮೊದಲನೆ ತರೈನ್ ಯುದ್ಧವು ಯಾರ ಮಧ್ಯೆ ನಡೆಯಿತು?
A). ಜಾಮೂರಿನ್ ಮತ್ತು ಮಹ್ಮದ್ ಘೋರಿಯ ನಡುವೆ
B). ಬಾಬರ್ ಮತ್ತು ಮಹ್ಮದ್ ಘೋರಿಯ ನಡುವೆ
C). ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘಜ್ನಿಯ ನಡುವೆ
D). ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ


Correct Ans: (D)


ಇದು ಕ್ರಿ.ಶ 1191 ರಲ್ಲಿ 3 ನೇ ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ ನಡೆಯಿತು. ಈ ಯುದ್ಧದಲ್ಲಿ ದೆಹಲಿ ಮತ್ತು ಅಜ್ಮಿರ್ ರಾಜ್ಯಗಳ ದೊರೆಯಾಗಿದ್ದ ಪೃಥ್ವಿರಾಜ್ ಚೌಹಾಣ್ ನು ಘೋರಿಯನ್ನು ಸೋಲಿಸಿದನು.


9) ಪರ್ಷಿಯನ್ ಹೂಮರ್ ಎಂದು ಯಾರನ್ನು ಕರೆಯಲಾಗಿದೆ?
A). ಅಲ್ಬೆರೋನಿ
B). ಪಿರ್ದೌಸಿ
C). ಬಲ್ಬನ್
D). ಸೆಲ್ಯುಕಸ್


Correct Ans: (B)


ಪಿರ್ದೌಸಿಯ ಕೃತಿ "ಷಹನಾಮ" ಘಜ್ನಿ ಮಹ್ಮದ್ ನ ದಾಳಿಯ ಬಗ್ಗೆ ಮಾಹಿತಿ ನೀಡುತ್ತದೆ. ಪಿರ್ದೌಸಿಯನ್ನು ಪರ್ಷಿಯನ್ ಹೂಮರ್ ಎಂದು ಕರೆಯಲಾಗಿದೆ.


10) "ತಹ್ಕೀಕ್ ಇ ಹಿಂದ್" ಇದು ಯಾರ ಪ್ರಸಿದ್ಧ ಕೃತಿಯಾಗಿದೆ?
A). ಅಲ್ಬೆರೋನಿ
B). ಬಲ್ಬನ್
C). ಘಜ್ನಿ ಮಹ್ಮದ್
D). ಘೋರಿ ಮಹ್ಮದ್


Correct Ans: (A)


ಮಹ್ಮದ್ ಘಜ್ನಿಯು ಸೌರಾಷ್ಟ್ರ (ಗುಜರಾತ್)ದ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣ ನಾಶಮಾಡಿ ಅಪಾರ ಸಂಪತ್ತು ದೋಚಿ ಅಪಘಾನಿಸ್ತಾನದ ತನ್ನ ರಾಜ್ಯಕ್ಕೆ ಅಂದರೇ ಘಜ್ನಿಗೆ ಹೋದನು. ಇದರ ಬಗ್ಗೆ ಇತಿಹಾಸಕಾರ ಅಲ್ಬೆರೋನಿಯು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಅಲ್ಬೆರೋನಿಯ ಪ್ರಸಿದ್ಧ ಕೃತಿ "ತಹ್ಕೀಕ್ ಇ ಹಿಂದ್" ಇದು ಘಜ್ನಿಯ ದಾಳಿಯ ಬಗ್ಗೆ ನಮಗೆ ತಿಳಿಸಿಕೊಡುತ್ತದೆ.


11) ಮಹ್ಮದ್ ಘೋರಿಯು ಯಾವ ಯುದ್ಧದಲ್ಲಿ ಸೋತನು?
A). ಮೊದಲನೇ ತರೈನ್ ಯುದ್ಧ
B). ಎರಡನೇ ತರೈನ್ ಯುದ್ಧ
C). ಮೂರನೇ ತರೈನ್ ಯುದ್ಧ
D). ಸೋತೇ ಇಲ್ಲ

Correct Ans: (A)

ಮೊದಲನೇ ತರೈನ್ ಯುದ್ಧದಲ್ಲಿ ಮಹ್ಮದ್ ಘೋರಿಯು ಕ್ರಿ.ಶ 1191 ರಲ್ಲಿ ಪೃಥ್ವಿರಾಜನಿಂದ ಸೋತನು. ನಂತರ ಕ್ರಿ.ಶ 1192 ರಲ್ಲಿ ಎರಡನೇ ತರೈನ್ ಯುದ್ಧದಲ್ಲಿ ಮಹ್ಮದ್ ಘೋರಿಯು ಪೃಥ್ವಿರಾಜನನ್ನು ಕೊಲೆ ಮಾಡಿದನು.


12) ಭಾರತದ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದ ವಿದೇಶಿಗ ಯಾರು?
A). ಮಹ್ಮದ್ ಘೋರಿ
B). ಮಹ್ಮದ್ ಘಜ್ನಿ
C). ಅಲ್ಬುಕರ್ಕ್
D). ಅಮೀರ್ ಹಸನ್

Correct Ans: (B)

ಮಹ್ಮದ್ ಘಜ್ನಿ ಅಫಘಾನಿಸ್ತಾನದ ನಾಯಕ. ಇವನು ಕ್ರಿ.ಶ 1000 ದಿಂದ 1026 ರವರೆಗೆ ಭಾರತದ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದನು. ಇವನು 1025 ರಲ್ಲಿ ಭಾರತದ ಮೇಲೆ ಹದಿನಾರನೆಯ ದಾಳಿ ನಡೆಸಿದ್ದು ಗುಜರಾತಿನ ಸೋಮನಾಥ ದೇವಾಲಯದ ಮೇಲೆ.
Share:

🔘ಭಾರತದ ಮೇಲೆ ವಿದೇಶಿಯರ ದಾಳಿ

🔘ಭಾರತದ ಮೇಲೆ ವಿದೇಶಿಯರ ದಾಳಿ

ಭಾರತದ ಮೇಲೆ ಮುಸ್ಲಿಂ ರು ದಾಳಿ ಮಾಡಿದರು. ಇವರಲ್ಲಿ ಮೊದಲಿಗೆ ಅರಬ್ಬರು. ಎರಡನೆಯದಾಗಿ ತುರ್ಕರು, ಮತ್ತು ಮೂರನೆಯದಾಗಿ ಅಪ್ಘನ್ನರು ದಾಳಿ ಮಾಡಿದರು.



ಅರಬ್ಬರು:-


# ಭಾರತದ ಮೇಲೆ ಮೊಟ್ಟಮೊದಲು ದಾಳಿ ಮಾಡಿದ ಮುಸ್ಲಿಂ ದಾಳಿಗಾರ ಎಂದರೇ ಅದು ’ಮಹ್ಮದ್ ಬಿನ್ ಖಾಸಿಂ’ ಆಗಿದ್ದಾನೆ.


# ಮಹ್ಮದ್ ಬಿನ್ ಖಾಸಿಂನು ಕ್ರಿ.ಶ 712 ರಲ್ಲಿ ಭಾರತದ ಸಿಂಧ್ ಪ್ರಾಂತ್ಯ (ಈಗಿನ ಪಾಕಿಸ್ತಾನ)ದ ಮೇಲೆ ದಾಳಿ ಮಾಡಿದನು. ಆಗ ಅಲ್ಲಿದ್ದ ಹಿಂದೂ ದೊರೆ ’ದಾಹಿರ್’ ಆಗಿದ್ದನು. ಖಾಸಿಂ ನು ’ದಾಹಿರ್’ ನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಸೋತ ದಾಹಿರ್ ಮುಲ್ತಾನ್ ಗೆ ಓಡಿ ಹೋಗುತ್ತಾನೆ. ಮಹ್ಮದ್ ಬಿನ್ ಖಾಸಿಂ ಸಿಂಧ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಾನೆ.


# ಕ್ರಿ.ಶ 713 ರಲ್ಲಿ ಮಹ್ಮದ್ ಬಿನ್ ಖಾಸಿಂ ಮುಲ್ತಾನ್ ಮೇಲೆ ದಾಳಿ ಮಾಡಿ ಮತ್ತೆ ದಾಹಿರ್ ನನ್ನು ಕೊಂದು ಮುಲ್ತಾನ್ ನನ್ನು ಗೆಲ್ಲುತ್ತಾನೆ. ಅರಬ್ಬರ ನಂತರ ತುರ್ಕರು ಭಾರತಕ್ಕೆ ಭೇಟಿ ನೀಡುತ್ತಾರೆ.


ತುರ್ಕರು:-


# ತುರ್ಕರ ದಾಳಿಗಾರ ಮಹ್ಮದ್ ಘಜ್ನಿಯು ಭಾರತದ ಅಪಾರ ಸಂಪತ್ತನ್ನು ದೋಚಲು ಭಾರತದ ಮೇಲೆ ದಾಳಿ ಮಾಡಿದನು.


# ಇವನು ಕ್ರಿ.ಶ 1000 ದಿಂದ 1027 ರಲ್ಲಿ ಭಾರತದ ಮೇಲೆ 17 ಬಾರಿ ದಾಳಿ ಮಾಡಿದನು.


# ಮಹ್ಮದ್ ಘಜ್ನಿಯ 17 ದಾಳಿಗಳಲ್ಲಿ ಇತಿಹಾಸ ಪ್ರಸಿದ್ಧ ದಾಳಿ ಎಂದರೇ ಅದು 16 ನೇ ದಾಳಿಯಾಗಿದೆ. ಇದು ಕ್ರಿ.ಪೂ 1025-26 ರ ಮಧ್ಯದಲ್ಲಿ ನಡೆಯಿತು.


# ಸೌರಾಷ್ಟ್ರ (ಗುಜರಾತ್)ದ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣ ನಾಶಮಾಡಿ ಅಪಾರ ಸಂಪತ್ತು ದೋಚಿ ಅಪಘಾನಿಸ್ತಾನದ ತನ್ನ ರಾಜ್ಯಕ್ಕೆ ಅಂದರೇ ಘಜ್ನಿಗೆ ಹೋದನು.


# ಇದರ ಬಗ್ಗೆ ಇತಿಹಾಸಕಾರ ಅಲ್ಬೆರೋನಿಯು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಅಲ್ಬೆರೋನಿಯ ಪ್ರಸಿದ್ಧ ಕೃತಿ "ತಹ್ಕೀಕ್ ಇ ಹಿಂದ್" ಇದು ಘಜ್ನಿಯ ದಾಳಿಯ ಬಗ್ಗೆ ನಮಗೆ ತಿಳಿಸಿಕೊಡುತ್ತದೆ.


# ಅಲ್ಲದೇ ಪಿರ್ದೌಸಿಯ ಕೃತಿ "ಷಹನಾಮ" ಕೂಡ ಇವನ ಬಗ್ಗೆ ಮಾಹಿತಿ ನೀಡುತ್ತದೆ. ಪಿರ್ದೌಸಿಯನ್ನು ಪರ್ಷಿಯನ್ ಹೂಮರ್ ಎಂದು ಕರೆಯಲಾಗಿದೆ.


ಮಹ್ಮದ್ ಘೋರಿ:-


# ಇವನು ಒಬ್ಬ ಮುಸ್ಲಿಂ ದಾಳಿಗಾರನಾಗಿದ್ದು, ಭಾರತದಲ್ಲಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸಬೇಕೆಂಬ ಆಶಯವನ್ನು ಹೊಂದಿದ್ದನು. ಅದಕ್ಕಾಗಿ ಭಾರತದ ಮೇಲೆ ದಾಳಿ ಮಾಡಿದನು.


ಒಂದನೇ ತರೈನ್ ಯುದ್ಧ:-

ಇದು ಕ್ರಿ.ಶ 1191 ರಲ್ಲಿ 3 ನೇ ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ ನಡೆಯಿತು. ಈ ಯುದ್ಧದಲ್ಲಿ ದೆಹಲಿ ಮತ್ತು ಅಜ್ಮಿರ್ ರಾಜ್ಯಗಳ ದೊರೆಯಾಗಿದ್ದ ಪೃಥ್ವಿರಾಜ್ ಚೌಹಾಣ್ ನು ಘೋರಿಯನ್ನು ಸೋಲಿಸಿದನು.


ಎರಡನೇ ತರೈನ್ ಯುದ್ಧ:-


# ಕ್ರಿ.ಶ 1192 ರಲ್ಲಿ ಪೃಥ್ವಿರಾಜ್ ಚೌಹಾಣ್ ಮತ್ತು ಘೋರಿಯ ನಡುವೆ ಈ ಯುದ್ಧವು ನಡೆಯಿತು. ಇಲ್ಲಿ ಈ ಯುದ್ಧದಲ್ಲಿ ಚೌಹಾಣನು ಸೋತು ಕೊಲ್ಲಲ್ಪಟ್ಟನು. ಹೀಗಾಗಿ ಮಹ್ಮದ್ ಘೋರಿಯು ಜಯಶಾಲಿಯಾದನು.


# ಇತಿಹಾಸ ಪ್ರಸಿದ್ಧ ಕಾಳಗ ಇದಾಗಿದ್ದು ಇದರಲ್ಲಿ ಪೃಥ್ವಿರಾಜನ ಮರಣದೊಂದಿಗೆ ರಜಪೂತರ ಆಳ್ವಿಕೆ ಮುಕ್ತಾಯವಾಯಿತು.


# ರಜಪೂತರ ಕೊನೆಯ ದೊರೆ 3 ನೆ ಪೃಥ್ವಿರಾಜ್ ಚೌಹಾಣನಾಗಿದ್ದಾನೆ.


# 1196 ರಲ್ಲಿ ಮಹ್ಮದ್ ಘೋರಿಯು ಚಾಂದವಾರ್ ಕದನದಲ್ಲಿ ರಾಜಾ ಜಯಚಂದ್ರನನ್ನು ಎದುರಿಸಿದನು. ಇವನು ಪೃಥ್ವಿರಾಜ್ ನ ಮಾವನಾಗಿದ್ದನು. ರಜಪೂತ ವಂಶದ ಈ ದೊರೆಯು ಯುದ್ಧದಲ್ಲಿ ಸಾವನ್ನಪ್ಪಿದನು.


# ನಂತರ ದೆಹಲಿ, ಅಜ್ಮೀರ, ಕನೌಜ್ ರಾಜ್ಯಗಳನ್ನು ಗೆದ್ದುಕೊಂಡನು. ಘೋರಿಯು ಕುತುಬುದ್ದೀನ್ ಐಬಕ್ ನನ್ನು ನೇಮಕ ಮಾಡಿ ತನ್ನ ಘೋರ್ ರಾಜ್ಯಕ್ಕೆ ಹಿಂದಿರುಗಿ 1206 ರಲ್ಲಿ ಸಾವನ್ನಪ್ಪಿದನು.


# ಭಾರತದಲ್ಲಿ ಮುಸ್ಲಿಂ ರ ಆಳ್ವಿಕೆಯನ್ನು ಪ್ರಾರಂಭಿಸಿದವನು

"ಕುತುಬುದ್ದೀನ್ ಐಬಕ್" . ಇವನು ದೆಹಲಿ ಸುಲ್ತಾನ್ ರಾಜ್ಯವನ್ನು ಸ್ಥಾಪಿಸಿದನು.


ಪ್ರಶ್ನೆಗಳು👇👇👇


1) ಘೋರಿಯು ಭಾರತದಲ್ಲಿ ಯಾರನ್ನು ತನ್ನ ರಾಜ ಪ್ರತಿನಿಧಿಗಳನ್ನಾಗಿ ನೇಮಿಸಿದನು?
A). ಬಾಬರ್
B). ಜಹಾಂಗೀರ್
C). ಕುತುಬುದ್ದೀನ್ ಐಬಕ್
D). ಸೆಲ್ಯುಕಸ್


Correct Ans: (C)


ಮಹ್ಮದ್ ಘೋರಿಯು ಭಾರತದಲ್ಲಿ ನೇಮಿಸಿದ ರಾಜ್ಯ ಪ್ರತಿನಿಧಿಗಳೆಂದರೇ ಕುತುಬುದ್ದೀನ್ ಐಬಕ್ ಮತ್ತು ಭಕ್ತಿಯಾರ್ ಖಿಲ್ಜಿಯಾಗಿದ್ದಾರೆ.


2) ಮಹ್ಮದ್ ಘೋರಿಯು ಯಾವಾಗ ಸಾವನ್ನಪ್ಪಿದನು?
A). ಕ್ರಿ.ಶ 1205
B). ಕ್ರಿ.ಶ 1206
C). ಕ್ರಿ.ಶ 1204
D). ಕ್ರಿ.ಶ 1203


Correct Ans: (B)


1196 ರಲ್ಲಿ ಮಹ್ಮದ್ ಘೋರಿಯು ಚಾಂದವಾರ್ ಕದನದಲ್ಲಿ ರಾಜಾ ಜಯಚಂದ್ರನನ್ನು ಎದುರಿಸಿದನು. ಇವನು ಪೃಥ್ವಿರಾಜ್ ನ ಮಾವನಾಗಿದ್ದನು. ರಜಪೂತ ವಂಶದ ಈ ದೊರೆಯು ಯುದ್ಧದಲ್ಲಿ ಸಾವನ್ನಪ್ಪಿದನು. ನಂತರ ದೆಹಲಿ, ಅಜ್ಮೀರ, ಕನೌಜ್ ರಾಜ್ಯಗಳನ್ನು ಗೆದ್ದುಕೊಂಡನು. ಘೋರಿಯು ಕುತುಬುದ್ದೀನ್ ಐಬಕ್ ನನ್ನು ನೇಮಕ ಮಾಡಿ ತನ್ನ ಘೋರ್ ರಾಜ್ಯಕ್ಕೆ ಹಿಂದಿರುಗಿ 1206 ರಲ್ಲಿ ಸಾವನ್ನಪ್ಪಿದನು.


3) ದೆಹಲಿ ಸುಲ್ತಾನ್ ರಾಜ್ಯವನ್ನು ಸ್ಥಾಪಿಸಿದವನು ಯಾರು?
A). ಬಾಬರ್
B). ಹುಮಾಯೂನ್
C). ಕುತುಬುದ್ದೀನ್ ಐಬಕ್
D). ಮಹ್ಮದ್ ಘೋರಿ


Correct Ans: (C)


ಭಾರತದಲ್ಲಿ ಮುಸ್ಲಿಂ ರ ಆಳ್ವಿಕೆಯನ್ನು ಪ್ರಾರಂಭಿಸಿದವನು "ಕುತುಬುದ್ದೀನ್ ಐಬಕ್" . ಇವನು ದೆಹಲಿ ಸುಲ್ತಾನ್ ರಾಜ್ಯವನ್ನು ಸ್ಥಾಪಿಸಿದನು.


4) ಯಾವ ರಾಜ್ಯವನ್ನು ಹಿಂದೆ ಗೂರ್ಜ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು?
A). ರಾಜಸ್ಥಾನ
B). ಪಂಜಾಬ್
C). ಗುಜರಾತ್
D). ಅರುಣಾಚಲಪ್ರದೇಶ


Correct Ans: (A)

ಈಗಿನ ರಾಜಸ್ಥಾನವನ್ನು ರಜಪೂತರ ಕಾಲದಲ್ಲಿ ಗೂರ್ಜ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು.


5) ಮಹ್ಮದ್ ಘೋರಿಯ ನಿಜವಾದ ಹೆಸರೇನು?
A). ಮೈನುದ್ದೀನ್ ಮಹ್ಮದ್
B). ಮೈನುದ್ದೀನ್ ಪಾಷಾ
C). ಅಕ್ಬರ್ ಅನ್ವರುದ್ದೀನ್
D). ಅಹ್ಮದ್ ಬರ್ಕದಾರ್ ಮಹ್ಮದ್


Correct Ans: (A)


ಮಹ್ಮದ್ ಘೋರಿಯ ನಿಜವಾದ ಹೆಸರು ಮೈನುದ್ದೀನ್ ಮಹ್ಮದ್ ಆಗಿದೆ. ಇವನ ಕೊನೆಯ ದಂಡೆಯಾತ್ರೆ ಪಂಜಾಬಿನ ಜಾಟರ ಮೇಲೆ ಆಯಿತು. ಇವನನ್ನು ಷಹಾಬುದ್ದೀನ್ ಎಂತಲೂ ಕರೆಯಲಾಗುತ್ತಿತ್ತು.
Share:

ಭಾರತದಲ್ಲಿ ಸಾಮ್ರಾಜ್ಯಗಳ ಉಗಮ





ಭಾರತದಲ್ಲಿ ಸಾಮ್ರಾಜ್ಯಗಳ ಉಗಮ

ಶುಂಗ ವಂಶ
ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ
ಶುಂಗ ವಂಶದ ಧರ್ಮ - ವೈದಿಕ ಧರ್ಮ
ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥದ ಹೆಸರು - ಮಾಳವಿಕಾಗ್ನಿ ಮಿತ್ರ
ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ
ಶುಂಗ ವಂಶದ ಗೋತ್ರ - ಭಾರಧ್ವಾಜ
ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಬಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್
ಶುಂಗರ ಕೊನೆಯ ಅರಸ - ದೇವಭೂತಿ
ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ
ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ
ಬೌದ್ಧ ಧರ್ಮ ಪೀಡನೆ ಧರ್ಮ ವಿಧಾನವನ್ನು ಅನುಸರಿಸಿದ ಶುಂಗ ದೊರೆ - ಪುಷ್ಯ ಮಿತ್ರ
ಅಂತಃ ಪುರದಲ್ಲಿ ಹತ್ಯೆಗೊಳದಗಾದ ಶುಂಗ ದೊರೆ - ವಸುಮಿತ್ರ
ಚಕ್ರವರ್ತಿ ಎಂದು ಬಿರುದಾಂಕಿತ ಶುಂಗ ದೊರೆ - ಪುಷ್ಯ ಮಿತ್ರ
ಮಾಳವಿಕಾಗ್ನಿ ಮಿತ್ರ ಕೃತಿಯ ಕರ್ತೃ - ಕಾಳಿದಾಸ
ಕಣ್ವ ವಂಶ
ಶುಂಗರ ಕೊನೆಯ ದೊರೆ ದೇವಭೂತಿಯನ್ನು ಕೊಲೆಗೈದು ಕಣ್ವ ವಂಶವನ್ನು ಸ್ಥಾಪಿಸಿದವನು - ವಾಸುದೇವ ಕಣ್ವ
ಕರ್ಮಾಚಾರಿಗಳೆಂದರೆ - ಕೂಲಿಕಾರ್ಮಿಕರ
ಪುರಾಣಗಳ ಪ್ರಕಾರ ಕಣ್ವರು - 45 ವರ್ಷ ರಾಜ್ಯವನ್ನಾಳಿದ
ವಾಸುದೇವ ಕಣ್ವ ನಂತರ ಅಧಿಕಾರಕ್ಕೆ ಬಂದವರು - ಭೂಮಿಮಿತ್ರ
ಕಣ್ವರ ಕಾಲದಲ್ಲಿ ಮಗಧವನ್ನು ಆಕ್ರಮಿಸಿದವರು - - ಶಾತವಾಹನರು
ಮೌರ್ಯಯುಗದ ನಂತರ ವಿಸ್ತೃತವಾಗಿ ಬಳಕೆಯಲ್ಲಿದ್ದ ನಾಣ್ಯ - ಫಣ
ಸುಶರ್ಮನ ಮುಂಚೆ ಕಮ್ವ ದೊರೆ - ನಾರಾಯಣ
ಕಣ್ವರ ಕೊನೆಯ ದೊರೆ - ಸುಶರ್ಮ
ಸುಶರ್ಮನನ್ನು ಕೊಂದವರು - ಶಾತವಾಹನರು
3 ನೇ ಬ್ಯಾಕ್ಟ್ರಿಯನ್ ಗ್ರೀಕರು
ಕ್ರಿ.ಪೂ.2 ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರು - ಬ್ಯಾಕ್ಟ್ರಿಯಾನ್ ಪಾಲಕರಾದ ಗ್ರೀಕರು
ಬ್ಯಾಕ್ಟ್ರಿಯಾನ್ ಗ್ರೀಕರು ಈ ಮೂಲದವರು - ಇಂಡೋಗ್ರಾಕರು
ಕ್ರಿ.ಪೂ. 2 ನೇ ಶತಮಾನದಲ್ಲಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್ ದೊರೆ - ಡೆಮಟ್ರಿಯನ್
ಡೆಮಟ್ರಿಯನ್ ನ ರಾಜಧಾನಿ - ಪಂಜಾಬ್ ನ ಸಕಾಲ ( ಸಿಯಲ್ ಕೋಟ್ )
ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಚಿನ್ನದ ನಾಣ್ಯಗಳನ್ನು ಪ್ರವೇಶಗೊಳಿಸಿದವರು - ಇಂಡೋ ಗ್ರೀಕರು
ಗ್ರೀಕರ ಪ್ರಭಾವದಿಂದ ಭಾರತದಲ್ಲಿ ಆವಿಷ್ಕಾರಗೊಂಡ ಶಿಲ್ಪಕಲೆ - ಗಾಂಧಾರ
ಹಿಂದೂ - ಗ್ರೀಕರ ಶಿಲ್ಪಕಲೆಯ ಮಿಶ್ರಮ - ಗಾಂಧಾರ ಶಿಲ್ಪ
ವಾಯುವ್ಯ ಭಾರತದ ಮೇಲೆ ಪ್ರಥಮವಾಗಿ ದಂಡೆತ್ತಿ ಆಳ್ವಿಕೆ ನಡೆಸಿದ ವಿದೇಶಿಯರು - ಬ್ಯಾಕ್ಟ್ರಿಯನ್ ಗ್ರೀಕರು
ಡೆಮಿಟ್ರಿಯನ್ ನ ಸೇನಾಧಿಪತಿ - ಮಿನಾಂಧರ್
ಭಾರತದಲ್ಲಿ ಸ್ವತಂತ್ರ್ಯ ಬ್ಯಾಕ್ಟ್ರಿಯಾ ರಾಜ್ಯವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಡಿಯೋಡೋಟಸ್
ಯೂಕ್ರೆಟೈಟ್ಸ್ ನ ರಾಜಧಾನಿ - ಸಂಗ್ಲಾ
ಗ್ರೀಕರ ಕ್ಯಾಲೆಂಡರನ್ನು ಬಾರತದಲ್ಲಿ ಪ್ರವೇಶಗೊಳಿಸಿದವನು - ಡೆಮಿಟ್ರಿಯನ್
ಯವನಿಕ ಪದದ ಅರ್ಥ - ಪರದೆ ಅಥವಾ ತೆರೆ
ಶಕರು / ಸಿಥಿಯನ್ನರು
ಶಕರನ್ನು ಪರಿಶುದ್ದ ಶೂದ್ರರೆಂದು ಬಣ್ಣಿಸಿದ ಗ್ರಂಥ - ಮಹಾಭಾಷ್ಯ
ಶಕರನ್ನು ಕ್ಷತ್ರಿಯರನ್ನಾಗಿ ವ್ಯಾಖ್ಯಾನಿಸಲಾದ ಸಾಹಿತ್ಯ - ಮನುಸಂಹಿತೆ
ಶಕರು ಪ್ರಾರಂಭದಲ್ಲಿ - ಪಾರ್ಥಿಯನ್ನರ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು
ರಾಜನಾಥ ನಂತರ ಶಕರು ಧರಿಸಿದ ಬಿರುದು - ಸತ್ರಪ
ಶಕರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡ ಪ್ರಾಂತ್ಯ - ಸಿಂಧೂ ಪ್ರಾಂತ್ಯ
ಶಕರ ಮತ್ತೋಂದು ಹೆಸರು - ತೋಚಾರಯನ್ಸ್
ಮಹಾರಾಜ ಮಹಾತ್ಮ ಎಂಬ ಬಿರುದು ಹೊಂದಿದ್ದ ಶಕ ದೊರೆ - ಮಾವುಸ್
ಶಕರ ಪ್ರಥಮ ವೈರಿಗಳು - ಕುಶಾನರು
ಶಕರ ಪ್ರಸಿದ್ದ ಅರಸ - ಮೊದಲನೇ ರುದ್ರಧಮನ
ರುದ್ರಧಮನ ತಂದೆಯ ಹೆಸರು - ಜಯಧಮನ
ಶಕರ ಕಾಲದ ಸಣ್ಣ ನಗರವನ್ನು ಈ ಹೆಸರಿನಿಂದ ಕರೆಯುವರು - ನಿಗಮ್
ಶಕ ವರ್ಷ ಯಾವುದು - ಕ್ರಿ.ಶ. 78
ಬಾರತದಲ್ಲಿ ಟೋಪಿ ಮತ್ತು ಪಾದರಕ್ಷೆಯನ್ನು ಪ್ರವೇಶಗೊಳಿಸಿದವರು ಮಧ್ಯ ಏಷ್ಯಾದವರು
ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರಧಮನ
ಮಾಳ್ವ ರಾಜ್ಯದ ರಾಜಧಾನಿ - ಉಜ್ಜಯಿನಿ
ವಿಕ್ರಮಶಕೆ ಪ್ರಾರಂಭವಾದುದು - ಕ್ರಿ..ಪೂ.58 ರಲ್ಲಿ
ಪಾರ್ಥಿಯನ್ನರು
ಪ್ರಥಮ ಪಾರ್ಥಿಯನ್ ರಾಜ - ವನೋನ್
ಗ್ರೀಕರು ದಕ್ಷಿಣ ಅಫ್ಘಾನಿಸ್ತಾನವನ್ನು ಈ ಹೆಸರಿನಿಂದ ಕರೆದಿದ್ದಾರೆ - ಅರ್ಕೋಸಿಯಾ
ಪಾರ್ಥಿಯನ್ನರ ಕಾಲದಲ್ಲಿ ಜಿಲ್ಲಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ - ಮೆರಿಡಾರ್ಕ್
ವಿದೇಶಿ ಭೂಭಾಗದ ಮೇಲೆ ಯುದ್ಧದಲ್ಲಿ ಪಾಲ್ಗೋಂಡ ಮೊಟ್ಟ ಮೊದಲ ಭಾರತೀಯ ಸೇನಾಪಡೆ - ಕ್ರೆರೆಕ್ಸಸ್ ನ ಸೇನಾಪಡೆ
ಶಕರ ನಂತರ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿದ ವಿದೇಶಿಯರು - ಪಾರ್ಥಿಯನ್ನರು
ಪಾರ್ಥಿಯನ್ನರ ಜನ್ಮಸ್ಥಳ - ಇರಾನ್
ವಾಯುವ್ಯ ಭಾರತದಲ್ಲಿ ಪಾರ್ಥಿಯನ್ನರ ಸ್ಥಾನವನ್ನು ಆಕ್ರಮಿಸಿದವರು - ಕುಶಾನರು


ಥಾನೇಶ್ವರದ ವರ್ಧನರು

ಸ್ಥಾನೇಶ್ವರದ ವರ್ಧನರು

ಗುಪ್ತರ ಪತನಾ ನಂತರ ಉತ್ತರ ಭಾರತದಲ್ಲಿ ಅನೇಕ ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡವು ಅವಗಳೆಂದರೇa. ವಲ್ಲಭಿಯಲ್ಲಿ - ಮೈತ್ರಕರು
b. ಕನೌಜಿನಲ್ಲಿ - ಮೌಖಾರಿಗಳು
c. ಥಾಣೇಶ್ವರದಲ್ಲಿ - ವರ್ಧನರು
d. ಮಾಳವದಲ್ಲಿ - ಮಂಡಸೋರ್ ನ ಯಶೋವರ್ಮನ್
e. ಕಾಶ್ಮೀರದಲ್ಲಿ - ಕಾರ್ಕೋಟಕರು
f. ಕಾಮರೂಪದಲ್ಲಿ - ವರ್ಮರು
g. ಬಂಗಾಳದಲ್ಲಿ - ಗೌಡಪಾದರು
Share:

ಕದಂಬರು


ಕದಂಬರು

  • ಕರ್ನಾಟಕದಲ್ಲಿ ಮೊದಲು ಹುಟ್ಟು ಹಾಕಿದ ಕನ್ನಡ ಸಾಮ್ರಾಜ್ಯ - ಕದಂಬರು .
  • ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ
  • ಕದಂಬರ ರಾಜಧಾನಿ - ಬನವಾಸಿ .
  • ಬನವಾಸಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಉತ್ತರ ಕನ್ನಡ .
  • ಕದಂಬರ ವಂಶದ ಸ್ಥಾಪಕ ದೊರೆ - ಮಯೂರ ವರ್ಮ .
  • ಕದಂಬರ ಲಾಂಛನ - ಸಿಂಹ .
  • ಕದಂಬರ ಧ್ವಜ - ವಾನರ .
  • ಮಹಾಭಾರತ ಕಾಲದಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ವೈಜಯಂತಿ ಅಥವಾ ವನವಾಸಿ .
  • ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ - ಬೈಜಾಂಟಿಯನ್ .


ಕದಂಬರ ಮೂಲ


  1. ದೈವಾಂಶ ಸಿದ್ದಾಂತ
  2. ನಾಗ ಸಿದ್ದಾಂತ
  3. ಜೈನ ಸಿದ್ದಾಂತ
  4. ನಂದಾ ಮೂಲ
  5. ತಮಿಳು ಮೂಲ
  6. ಕನ್ನಡ ಮೂಲ





  • ಕದಂಬರ ಮೂಲ ಪುರುಷ - ಮಯೂರ ವರ್ಮ .
  • ಮಯೂರವರ್ಮನ ತಂದೆಯ ಹೆಸರು - ವೀರಶರ್ಮ .
  • ಮಯೂರವರ್ಮನ ಗುರುವಿನ ಹೆಸರು - ವೀರಶರ್ಮ .
  • ಮಯೂರವರ್ಮನನ್ನ ಅವಮಾನಿಸಿದ ಕಂಚಿಯ ಪಲ್ಲವ ದೊರೆ - ಶಿವಸ್ಕಂದ ವರ್ಮ .
  • ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ
  • ಚಂದ್ರವಳ್ಳಿಯ ಬಳಿ ಕೆರೆಯನ್ನು ನಿರ್ಮಿಸಿದ ಕದಂಬ ದೊರೆ - ಮಯೂರವರ್ಮ
  • ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ .
  • ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ
  • ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ .
  • ಧರ್ಮರಾಜ , ಧರ್ಮಮಹಾರಾಜ ಎಂಬ ಬಿರುದನ್ನು ಧರಿಸಿದ್ದ ಕದಂಬ ದೊರೆ - ಕಾಕುಸ್ಥವರ್ಮ .
  • ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ .
  • ಹಲ್ಮಿಡಿ ಶಾಸನದ ಕರ್ತೃ - ಕಾಕುಸ್ಥವರ್ಮ .
  • ತಾಳಗುಂದ ಶಾಸನದ ಕರ್ತೃ - ಕಾಕುಸ್ಥವರ್ಮ .
  • ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು - ಪಂಚಪ್ರಧಾನರು .
  • ಪ್ರಧಾನ ಮಂತ್ರಿ - ಪ್ರಧಾನ
  • ಅರಮನೆಯ ವ್ಯವಹಾರಗಳ ಮಂತ್ರಿ - ಮನೆಸೇರ್ಗಡೆ .
  • ವಿದೇಶಾಂಗ ವ್ಯವಹಾರಗಳ ಮಂತ್ರಿ - ತಂತ್ರ ಪಾಲ .
  • ತಾಂಬೂಲ ಪಾರು ಪತ್ಯಗಾರ - ಕ್ರಮುಖ ಪಾಲ .
  • ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ - ಸಭಾಕಾರ್ಯ ಸಚಿವ .
  • ಕದಂಬರ ಆಡಳಿತದಲ್ಲಿ ಜಿಲ್ಲೆಯ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮನ್ನೇಯ .
  • ಪಟ್ಟಣ್ಣದ ಾಡಳಿತ ನೋಡಿಕೊಳ್ಳುತ್ತಿದ್ದವನು - ಪಟ್ಟಣ್ಣ ಸ್ವಾಮಿ .
  • ಕದಂಬರು ಹೊರೆಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರ್ಜುಂಕ .
  • ವ್ಯಾಪಾರ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬಿಲ್ ಕೊಡೆ .
  • ಸಾರಿಗೆ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕಿರುಕುಳ .
  • ಗೆರಿಲ್ಲಾಯುದ್ಧ ತಂತ್ರಕ್ಕೆ ಹೆಸರಾಗಿದ್ದ ದಕ್ಷಿಣ ಭಾರತದ ಮನೆತನ - ಕದಂಬರು .
  • ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗೆರಿಲ್ಲಾ .
  • ಕದಂಬರ ಸಮಾಜದಲ್ಲಿದ್ದ ಕುಟುಂಬ ಪದ್ದತಿ - ಮಾತೃ ಪ್ರಧಾನ , ಅವಿಭಕ್ತ ಕುಟುಂಬ ಪದ್ದತಿ .
  • ಕದಂಬ ಸಾಮ್ರಾಜ್ಯವು ಈ ಲಕ್ಷಮಗಳನ್ನು ಹೊಂದಿತ್ತು - ಭಾರತೀಕರಣ .
  • ಕದಂಬರು ಈ ಧರ್ಮದ ಅವಲಂಬಿಗಳು - ವೈದಿಕ ಧರ್ಮ .
  • ಕದಂಬರ ಕುಲದೇವರು - ತಾಳಗುಂದದ ಪ್ರಾಣೇಶ್ವರ .
  • ಕದಂಬರ ಮನೆಯ ದೇವರು - ಬನವಾಸಿಯ ಮಧಕೇಶ್ವರ .
  • ಕದಂಬರ ಕಾಲದಲ್ಲಿ ಬನವಾಸಿಗೆ ಆಗಮಿಸಿದ ಚೀನೀಯಾತ್ರಿಕ - ಹ್ಯೂಯನ್ ತ್ಸಾಂಗ್ .
  • ಕದಂಬರ ಮುಖ್ಯ ವೃತ್ತಿ - ವ್ಯವಸಾಯ .
  • ಕದಂಬರ ಕಾಲದ ಭ ಕಂದಾಯ ಪದ್ದತಿ - ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.
  • ಕದಂಬರ ರೇವು ಪಟ್ಟಣ್ಣಗಳು - ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ
  • ಕದಂಬರ ವಿಶಿಷ್ಠ ಕೊಡುಗೆಗಳು - ನಾಣ್ಯ ಪದ್ದತಿ .
  • ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು - ಪದ್ಮಟಂಕ .
  • ಕದಂಬರ ಪ್ರಮುಖ ನಾಣ್ಯಗಳು - ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,
  • ಕದಂಬರ ಕಾಲದ ಶಿಕ್ಷಣ ಪದ್ದತಿ - ಗುರುಕುಲ ಶಿಕ್ಷಮ ಪದ್ದತಿ ,
  • “ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು - ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ .
  • ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು - ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ .
  • ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ - ಕಂಚಿ .
  • ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ - ಪ್ರಾಕೃತ .
  • ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ ( ಶಾಂತಿ ವರ್ಮ ಬರೆಯಿಸಿದ )
  • “ ಮದನ ತಿಲಕ ” ಕೃತಿಯ ಕರ್ತೃ - ಚಂದ್ರರಾಜ .
  • ಚಂದ್ರ ಚೂಡಾ ಮಣಿ ಕೃತಿಯ ಕರ್ತೃ - ನಾಗವರ್ಮ .
  • “ ಸುಕುಮಾರ ಚರಿತೆ ” ಯ ಕರ್ತೃ - ಶಾಂತಿನಾಥ
  • “ ಕೌಂತಳೇಶ್ವರ ದೌತ್ಯಂ ” ಕೃತಿಯ ಕರ್ತೃ - ಎರಡನೇ ಕಾಳಿದಾಸ .
  • “ ಕದಂಬ ಶೈಲಿ ” ಎಂಬ ವಾಸ್ತುಶಿಲ್ಪ ಶೈಲಿಯನ್ನು ಸೃಷ್ಠಿಸಿದವರು - ಕದಂಬರು .
  • ಕದಂಬರ ಆರಂಭದ ರಚನೆ - ಮೃಗೇಶ ವರ್ಮನು ರಚಿಸಿದ ಜೈನ ಬಸದಿ .
  • ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ - ತಾಳಗುಂದದ ಪ್ರಣವೇಶ್ವರ ದೇವಾಲಯ .
  • ಹಲ್ಮಿಡಿ ಶಾಸನ ಈ ಜಿಲ್ಲೆಯಲ್ಲಿ ದೊರೆಯುತ್ತದೆ - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ .
  • ಮಯೂರ ವರ್ಮನನ್ನು “ ದ್ವೀಜೋತಮ ” ನೆಂದು ತಿಳಿಸಿರುವ ಶಾಸನದ ಹೆಸರು - ಮಳವಳ್ಳಿ ಶಾಸನ .
  • ಕಂಚಿಯಿಂದ ಹೊರನಡೆದ ಮಯೂರವರ್ಮನು ಮೊದಲು ಶಸ್ತ್ರಸ್ತ್ರ ಪಡೆಯನ್ನು ಕಟ್ಟಿದ ಪ್ರದೇಶ - ಶ್ರೀ ಶೈಲ
  • “ಧರ್ಮ ಮಹಾರಾಜಾಧಿರಾಜ ” ಎಂಬ ಬಿರದ್ದನ್ನು ಹೊಂದಿದ್ದ ಕದಂಬರ ಅರಸ - ಕಂಗವರ್ಮ ಅಥಾವ ಕೊಂಗುಣಿ ವರ್ಮ .
  • ತಾಳಗುಂದ ಶಾಸನ ಈ ಜಿಲ್ಲೆಯಲ್ಲಿ ದೊರಕಿದೆ - ಶಿವಮೊಗ್ಗ .
  • ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಕದಂಬ ದೊರೆ - ಕಾಕುಸ್ಥವರ್ಮ .
  • ಮೃಗೇಶನ ಮತ್ತೊಂದು ರಾಜಧಾನಿ - ಹಲಸಿ .
  • ಕದಂಬರ ಪ್ರಾಂತ್ಯದ ಘಟಕಗಳು - ಕಂಪಣ .
  • ಟಂಕ ಹಾಗೂ ಗಧ್ಯಾಣ ಎಂಬ ನಾಣ್ಯಗಳನ್ನು ಚಲಾವಣಿಗೆ ತಂದ ಮೊದಲಿಗರು - ಕದಂಬರು .
  • ಚಂದ್ರವಳ್ಳಿಯ ಶಾಸನ ಈ ಜಿಲ್ಲೆಯಲ್ಲಿ ದೊರೆತಿದೆ - ಚಿತ್ರದುರ್ಗ .
  • ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ .
  • ಮಹಾಭಾರತದಲ್ಲಿ ಬನವಾಸಿಯನ್ನು ಈ ಹೆಸರಿನಿಂದಲೂ ಕರೆದ್ದಿದ್ದಾರೆ - ಕುಂತಲ ದೇಶ .
  • ಪ್ರಣವೇಶ್ವರನ ಹೆಸರಿನಲ್ಲಿ ಕೆರೆಯನ್ನ ಕಟ್ಟಿಸಿದ ದೊರೆ - ಕಾಕುಸ್ಥವರ್ಮ .
  • ಕದಂಬರು ಈ ನದಿಯ ದಡದಲ್ಲಿ ತಮ್ಮ ರಾಜ್ಯವನ್ನ ಸ್ಥಾಪಿಸಿದರು - ವರದಾ ನದಿ .
  • ತಾಳಗುಂದದ ಪ್ರಾಚೀನ ಹೆಸರು - ಸ್ಥಣ ಕುಂದೂರು
  • ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ
  • ಮಯೂರವರ್ಮನು ವಿಧ್ಯಾಭ್ಯಾಸಕ್ಕಾಗಿ ಹೋದ ವಿದ್ಯಾಕೇಂದ್ರ - ಕಂಚಿ
  • ಕದಂಬರ ಈ ದೊರೆಯನ್ನು ಕುಂತಳ ರಾಜ್ಯದ ಏಕಮಾತ್ರ ದೊರೆ ಎಂದು ಹೇಳಲಾಗಿದೆ - ಭಗೀರಥ ವರ್ಮ
  • ಗುಪ್ತರೊಂದಿಗೆ ವೈವೈಹಿಕ ಸಂಬಂಧ ಹೊಂದಿದ್ದ ಕದಂಬ ದೊರೆ - ಕಾಕುಸ್ಥ ವರ್ಮ
  • ಕದಂಬರ ಕೊನೆಯ ದೊರೆ - ಹರಿವರ್ಮ -
  • ಕದಂಬರ ಆಳ್ವಿಕೆಯನ್ನು ಕೊನೆಗಾಣಿಸಿದ ಸಾಮ್ರಾಜ್ಯ - ಬಾದಾಮಿ ಚಾಲುಕ್ಯರು
  • ತಾಳಗುಂದ ಶಾಸನವು ಈ ಅರಸರನ್ನು “ ಆಬರಣ ” ಎಂದು ಬಣ್ಣಿಸಿದೆ - ಕಾಕುಸ್ಥ ವರ್ಮ
  • ಹಲ್ಮಿಡಿ ಶಾಸನದ ಕಾಲ - ಕ್ರ.ಶ.450
Share:

ಕಲಚೂರಿಗಳು



ಕಲಚೂರಿಗಳು

ಇವರ ಮೂಲ ಪುರುಷ - ಬಿಜ್ಜಳ
ಇವನ ಆಸ್ಥಾನದ ಮಂತ್ರಿ - ಬಸವಣ್ಣ
ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದೆ
ಇವರು ಮೂಲತಃ ಬುಂದೇಲ್ ಖಂಡದವರು
ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ
ಸೋಮೇಶ್ವರ - ಬಿಜ್ಜಳನ ಮೊದಲ ಮಗ
ಈತನ ಇನ್ನೋಂದು ಹೆಸರು - ಸೋಮದೇವ
ಸೋಮೇಶ್ವರನ ಬಿರುದು - ರಾಯಮುರಾರಿ
ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ
ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ
ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ
ಕಲಚೂರಿಗಳ ಲಾಂಛನ - ನಂದಿ ( ವೃಷಭ )
ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡಿ
ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ
ಬಸವಣ್ಣನ ಅಂಕಿತ - ಕೂಡಲ ಸಂಗಮದೇವ
ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ
ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ
ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ
ಅನುಭವ ಮಂಟಪದ ಸ್ಥಾಪಕರು - ಬಸವಣ್ಣ
ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು
ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ
ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ
ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ
ಕಲಚೂರಿಗಳ ಕೊನೆಯ ಅರಸ - ಸಿಂಘಣ



ಚೀನಿ ಪ್ರವಾಸಿಗರ ಬರವಣಿಗೆಗಳು

ಚೀನೀ ಪ್ರವಾಸಿಗರ ಬರವಣಿಗಳು

ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗನಾದವನು- ಫಾಹಿಯಾನ್.
ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು
ಫಾಹಿಯಾನ್ ಕೃತಿ- ಘೋಕೋಕಿ
ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.
ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್
ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.
ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.
ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ
ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ
ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ
ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ
ರಘು ವಂಶ ನಾಟಕದ ಕರ್ತು- ಕಾಳಿದಾಸ.



ಸಾಹಿತ್ಯ ಆಧಾರಗಳು

ಆರ್ಯರ ಜೀವನ ಹಾಗೂ ಸಂಸ್ಕೃತಿಯ ಬಗೆಗೆ ಬೆಳಕು ಚೆಲ್ಲುವ ಗ್ರಂಥ- ವೇದಗಳು.
ಭಾರತದ ಎರಡು ಮಹಾಕಾವ್ಯಗಳು - ರಾಮಾಯಣ ಮತ್ತು ಮಹಾಭಾರತ
ಬೌದ್ದರ ಪ್ರಮುಖ ಕಾವ್ಯಗಳು - ದೀಪ ವಂಶ ಹಾಗೂ ಮಹಾವಂಶ.
ಆರ್ಯರ ಆಡಳಿತ ಕುರಿತು ಬೆಳಕು ಚೆಲ್ಲುವ ಕೃತಿ- ಅರ್ಥಶಾಸ್ತ್ರ.
ಅರ್ಥಶಾಸ್ತ್ರ ಕೃತಿಯ ಕರ್ತು- ಕೌಟಿಲ್ಯ
ನಂದರ ಪತನದ ಬಗೆಗೆ ತಿಳಿಸುವ ಕೃತಿ - ಮುದ್ರಾರಾಕ್ಷಸ
ಮುದ್ರಾರಾಕ್ಷಸದ ಕರ್ತು- ವಿಶಾಖದತ್ತ.
ಹರ್ಷವರ್ಧನನ ಕುರಿತು ತಿಳಿಸುವ ಕೃತಿ-ಹರ್ಷ ಚರಿತೆ
ಹರ್ಷಚರಿತೆಯ ಕರ್ತು - ಬಾಣಕವಿ
ಅಷ್ಟಾಧ್ಯಾಯಿ ಕೃತಿಯ ಕರ್ತು- - ಪಾಣಿನಿ
ಮಹಾಬಾಷ್ಯಾ ವನ್ನು ಬರೆದವರು - ಪತಂಜಲಿ
ಅಭಿಜ್ಞಾನ ಶಾಕುಂತಳದ ಕರ್ತು-ಕಾಳಿದಾಸ
ಕಾಶ್ಮೀರದ ದೊರೆಗಳ ಐಹಿತ್ಯ ತಿಳಿಸುವ ಕೃತಿ- ರಾಜತರಂಗಿಣಿ.
ರಾಜ ತರಂಗಿಣಿಯ ಕರ್ತು- ಕಲ್ಹಣ
ವಿಕ್ರಮಾಂತ ದೇವ ಚರಿತ ಕೃತಿಯ ಕರ್ತು-ಬಿಲ್ಹಣ
ಗೌಡಮಹೋ ಕೃತಿಯ ಕರ್ತು - ವಾಕ್ವತಿ
ರಾಮಪಾಲ ಚರಿತ ಕೃತಿಯ ಕರ್ತು- ಸಂಧ್ಯಾಕರನಂದಿ
ಚರತ ಸಂಹಿತೆಯ ಕರ್ತು- ಚರಕ


ವಿದೇಶಿ ಬರವಣಿಗೆಗಳು.
1. 1 ವಾಯುವ್ಯ ಭಾರತವನ್ನು ಪರ್ಶಿಯನ್ನರು ಗೆದ್ದ ಪ್ರಸಂಗವನ್ನು ತಿಳಿಸುವ ಗ್ರಂಥ - ಹೆರಡೊಟಸ್ ನ Historia.
2. ಅಲೆಗ್ಸಾಂಡರನ ದಂಡಯಾತ್ರೆಯನ್ನು ವರ್ಣಿಸಿದವರು -ಏರಿಯಾನ್ .
3. ತಾರೀಕ್-ಇ-ಹಿಂದ್ ಅಥವಾ ತೆಂತಕಿಕ್ - ಇ- ಯಾನ್- ಕೃರ್ತು-ಅಲ್ಪೆರೋನಿ.
4. ಪ್ರಾಚೀನ ಭಾರತದ ಇತಿಹಾಸಕ್ಕೆ ಒಳ್ಳೆಯ ಆಧಾರಗಳು - ಶಾಸನಗಳು.
5. ಇಂಡೋಗ್ರೀಕರ ಇತಿಹಾಸ ತಿಳಿಯಲು ಇರುವ ಏಕಮಾತ್ರ ಮೂಲ ಆಧಾರಗಳು- ನಾಣ್ಯಗಳು.
6. ನಾಣ್ಯಗಳ ಅಧ್ಯಯನವನ್ನು ಈ ಹೆಸರಿನಿಂದ ಕರೆಯವರು-ನ್ಯೂಮಿನ್ ಮ್ಯಾಟಿಕ್ಸ್.
7. ಶಿಲಪ್ಪಾವಿಗಾರಂ ಕರ್ತು- ಇಳಂಗೋ ಅಡಿಗಲ್
8. ಮಣಿ ಮೇಖಲೈ- ಸಾತ್ತನಾರ್.
9. ಯಾತ್ರಿಕ ಪ್ರಭು ಎಂದು ಕರೆಯಲ್ಪಟ್ಟವನ್ನು-ಹ್ಯೂಯೆನ್ ತ್ಸಾಂಗ್ .
10. ಶಿಲಾಶಾಸನದ ಪಿತಾಮಹಾ-ಅಶೋಕ.

ಪ್ರಕ್ತಾನ ಆಧಾರಗಳು.
1. ಪ್ರಕ್ತಾನ ಶಾಸ್ತ್ರ ಎಂದರೆ - ಶಾಸನಗಳು ಹಾಗೂ ಸ್ಮಾರಕಗಳಿಗೆ ಸಂಬಂಧಿಸಿದ ಮೂಲಾಧಾರಗಳು.
2. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಸೂಕ್ತ ಮೂಲಾಧಾರಗಳು-ಶಾಸನಗಳು.
3. ಹಾತಿಗುಂಪ ಶಾಸನದ ಕರ್ತು-ಖಾರವೇಲ.
4. ತಾಳಗುಂದ ಶಾಸನದ ಕರ್ತು-ಶಾಕುಸ್ಥವರ್ಮ.
5. ಶಾಸನಗಳ ಅಧ್ಯಯನವನ್ನು -ಎಫಿಗ್ರಫಿ ಎಂದು ಕರೆಯುವರು.
6. ನಾಣ್ಯಗಳ ಅಧ್ಯಯನಕ್ಕೆ ಈ ಹೆಸರಿದೆ- ನಾಣ್ಯಶಾಸ್ತ್ರ.
7. ಸಮುದ್ರ ಗುಪ್ತನ ಆಡಳಿತದ ಬಗೆಗೆ ಬೆಕು ಚೆಲುವ ಶಾಸನದ ಹೆಸರು-ಅಲಹಾಬಾದ್ ಸ್ತಂಭ ಶಾಸನ.
8. ಚೀನೀ ಪ್ರವಾಸಿಗರು ಭಾರತಕ್ಕೆ ಬಂದ ಉದ್ದೇಶ - ಬೌದ್ದ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಲು .
9. ಪುರಾಣಗಳು ಇತಿಹಾಸಕಾರನಿಗೆ ಸಹಾ.ಕವಾಗಿರುವುದು ಈ ವಿಷಯಕ್ಕೆ - ರಾಜಕೀಯ ಇತಿಹಾಸ ತಿಳಿಯಲು.
10. ಜಾತಕಗಳು ಇದಕ್ಕೆ ಸಂಬಂಧಿಸಿದೆ - ಬುದ್ದನ ಹಿಂದಿನ ಜನ್ಮ ತಿಳಿಯಲು
11. ಕುಮಾರ ಸಂಭವದ ಕವಿ-ಕಾಳಿದಾಸ.
12. ನೀತಿಸಾರದ ಲೇಖಕರು - ಕಾಮುಂದಕ
13. ಶಕಯುಗ ಪ್ರಾರಂಭಗೊಂಡ ವರ್ಷ-ಕ್ರಿ.ಶ.78.
14. ಸಂಧಿ ವಿಗ್ರಹ ಮಹಾದಂಡನಾಯಕ ಕುಮಾರಮಾತ್ಯ ಎಂಬ ಬಿರುದುಗಳ ಅರಸ- ಹರಿಷೇಣ.
15. ಆರ್ಯಭಟನಿಗೆ ಆಶ್ರಯ ನೀಡಿದವರು- ಗುಪ್ತರು.
16. ಭಾರತಕ್ಕೆ ಬಂದ ಮೊದಲ ಮುಸ್ಲಿಂ ಆಕ್ರಮಣಕಾರರು-ತುರ್ಕರು.
17. ತಾರಿಕ್ - ಇ-ಅಲಯ್ ಕೃತಿಯ ಕರ್ತು-ಅಮೀರ್ ಖುಸ್ರು.
18. ಪುರಾಣಗಳು ಎಷ್ಟಿವೆ-ಹದಿನೆಂಟು.
19. ಮೊಟ್ಟಮೊದಲು ಶಾಸನಗಳನ್ನು ಬರೆಯಿಸಿದ ಅರಸ - ಅಶೋಕ.
20. ವಿಕ್ರಮಾಂಕ ದೇವ ಚರಿತೆಯು- 6 ನೇ ವಿಕ್ರಮಾದಿತ್ಯನ ಜೀವನ ಚರಿತ್ರೆ.
21. ಮುದ್ರಾರಾಕ್ಷಸ- ಚಂದ್ರಗುಪ್ತ ಮೌರ್ಯನ ಇತಿಹಾಸಕ್ಕೆ ಸಂಬಂಧಿಸಿದೆ.
22. ಪೃಥ್ವಿರಾಜ ರಾಸೋ ಕೃತಿಯನ್ನು ಬರೆದವರು-ಝೀಯಾ ವುದ್ದೀನ್ ಬರಣಿ.
23. ಕಾಳಿದಾಸನಿಗೆ ಆಶ್ರಯ ಕೊಟ್ಟ ಮನೆತನ - ಗುಪ್ತರು.
24. ಗಾಥಶಪ್ತಪತಿ- ಪ್ರಾಕೃತ ಭಾಷೆಯಲ್ಲಿದೆ.

ಭಾರತದ ಭೌಗೋಳಿಕ ಲಕ್ಷಣಗಳು.
1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ .
2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.
3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.
4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.
5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .
6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.
7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.
8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.
9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.
10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.
11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.
12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.
13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.
14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.
15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ,ಗಂಗಾ,ಬ್ರಹ್ಮಪುತ್ರ.
Share:

ಕಲ್ಯಾಣಿ ಚಾಲುಕ್ಯರು


ಕಲ್ಯಾಣಿ ಚಾಲುಕ್ಯರು

ಕಲ್ಯಾಣಿ ಚಾಲುಕ್ಯರು

ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
ಇವರ ಪ್ರಾರಂಭದ ರಾಜಧಾನಿ - ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
ಇವರ ಲಾಂಛನ - ವರಾಹ
ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ - ಈ ಮನೆತನದ ಮೂಲ ಪುರುಷ
ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಜ್ಯಾಕ್ಕೆ ತಳಹದಿ ಹಾಕಿದನು


ಆಧಾರಗಳು

ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
ಮೂರನೇ ಸೋಮೇಶ್ವರನ - ಮಾನಸೋಲ್ಲಾಸ
ಬಿಲ್ಹಣನ - ವಿಕ್ರಮಾಂಕದೇವ ಚರಿತಾ
ವಿಜ್ಞಾನೇಶ್ವರನ - ಮಿತಾಕ್ಷರ


ರಾಜಕೀಯ ಇತಿಹಾಸ

ಎರಡನೇ ತೈಲಪ
ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ
ಮಾನ್ಯಖೇಟ ಈತನ ರಾಜಧಾನಿ
ಕ್ರಿ.ಶ.997 ರಲ್ಲಿ ಮರಣ ಹೊಂದಿದ


ಆರನೇ ವಿಕ್ರಮಾಧಿತ್ಯ

ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
ಈತ 09/03/1076 ರಲ್ಲಿ “ ಚಾಲುಕ್ಯ ವಿಕ್ರಮ ಶಕೆ ” ಎಂಬ ಹೊಸ ಶಕೆಯನ್ನ ಸ್ಥಾಪಿಸಿದ
ಈತನಿಗೆ ಭವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ ಎಂಬ ಬಿರುದಿತ್ತು
ಈತನ ದಂಡ ನಾಯಕನ ಹೆಸರು - ಅಚ್ಚುಗಿ
ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು - ಚಂದ್ರಲಾದೇವಿ
ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದ ನು
“ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” .
“ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ - ಮಹಾದೇವಾ ( ದಂಡಾದೀಶ )
ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು


ಮೂರನೇ ಸೋಮೇಶ್ವರ :-

6 ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು
ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು
ಮಾನಸೋಲ್ಲಾಸದ ಇನ್ನೊಂದು ಹೆಸರು - “ಅಭಿಲಾಷಿತಾರ್ಥ ಚಿಂತಾಮಣಿ ”
“ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”
ಈತನ ಬಿರುದ - “ಸರ್ವಜ್ಞ ಚಕ್ರವರ್ತಿ ”
ಈತನ ಇತರೆ ಬಿರುದುಗಳು - ಭೂಲೋಕಮಲ್ಲ , ತ್ರಿಭುವನ ಮಲ್ಲ

ಕಲ್ಯಾಣಿ ಚಾಲುಕ್ಯರ ಆಡಳಿತ

ಮಂತ್ರಿಗಳ ವಿಧಗಳು - “ ಪ್ರಧಾನ ” ಮತ್ತು “ ಮಹಾಪ್ರಧಾನ ”
ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”
ಸ್ಥಳೀಯ ಆಡಳಿತ ವರ್ಗಗಳು - ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು
ಆಡಳಿತದ ಕೊನೆಯ ಘಟಕ - ಗ್ರಾಮ
ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
ವೈಶ್ಯರನ್ನು - ನಬರ ಎಂದು ಕರೆಯುತ್ತಿದ್ದರು
ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು - ಕಡಿತವರ್ಗಡೆ
ಸೈನ್ಯದ ಪ್ರಮುಖ ಕೇಂದ್ರ ಕೋಟೆಗಳು
ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ - ಶಕ್ತಿ ಪೂಜೆಯ ಕೇಂದ್ರವಾಗಿತ್ತು
ರನ್ನನಿಗೆ ಆಶ್ರಯ ನೀಡಿದವರು - ಸತ್ಯಶ್ರಾಯ ಹಾಗೂ 2 ನೇ ತೈಲಪ
ಇವರ ಕಾಲದಲ್ಲಿದ್ದ ಸುಪ್ರಸಿದ್ದ ಜೈನ ಭಕ್ತೆ - ಅತ್ತಿಮಬ್ಬೆ
ಅತ್ತಿಮಬ್ಬೆಗೆ ಇದ್ದ ಬಿರುದು - ದಾನ ಚಿಂತಾಮಣಿ
ಬಳ್ಳಿಗಾಂವೆ , ಕೋಳಿವಾಡ ಮತ್ತು ಡಂಬಳ - ಮಹಾಯಾನ ಬೌಧ್ಧರ ಕೇಂದ್ರ


ಸಾಹಿತ್ಯ ( ಕನ್ನಡ )

ರನ್ನ - ಗದಾಯುದ್ಧ ಮತ್ತು ಅಜಿತನಾಥಪುರಾಣ ( ಕವಿಚಕ್ರವರ್ತಿ ಬಿರುದು )
ಎರಡನೇ ಚಾವುಂಡರಾಯ - ಲೋಕೋಪಕಾರ
ನಾಗವರ್ಮ - ಕರ್ನಾಟಕ ಕದಂಬರಿ ಮತ್ತು ಛಂದೋಬದಿ
ಚಂದ್ರರಾಜ - ಮದನ ತಿಲಕ
ಶ್ರೀಧರಚಾರ್ಯ - ಜಾತಕ ತಿಲಕ
ಕೀರ್ತಿವರ್ಮ - ಗೋವೈದ್ಯ
ಶಾಂತಿನಾಥ - ಸುಕುಮಾರ ಚರಿತ್ರೆ
ಮಾದವರ್ಮಾಚಾರ್ಯ - ಚಂದ್ರ ಚೂಡ ಮಣಿ
ನಯನ ಸೇನ - ಧರ್ಮಾಮೃತ
ದುರ್ಗಸಿಂಹ - ಪಂಚತಂತ್ರ
ಸಂಸ್ಕೃತ ಸಾಹಿತ್ಯ
ಜಗದೇಕ ಮಲ್ಲನ ಆಸ್ಥಾನ ಕವಿ - ವಾದಿರಾಜ
6 ನೇ ವಿಕ್ರಮಾಧಿತ್ಯನ ಅಶ್ರಿತ ಕವಿ - ಬಿಲ್ಹಣ
ವಾದಿರಾಜ - ಯಶೋಧರ ಚರಿತೆ ಮತ್ತು ಪಾರ್ಶ್ವನಾಥ ಚರಿತೆ
ಬಿಲ್ಹಣ - ವಿಕ್ರಮಾಂಕ ದೇವಚರಿತ
ವಿಜ್ಞಾನೇಶ್ವರ - ಮಿತಾಕ್ಷರ ಸಂಹಿತೆ
ಮೂರನೇ ಸೋಮೇಶ್ವರ - ಮಾನಸೋಲ್ಲಾಸ
ಜಗದೇಕ ಮಲ್ಲನ - ಸಂಗೀತ ಚೂಡಾಮಣಿ
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ
ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ
ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / ವಿಷ್ಣುವರ್ಧನ
ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವಿ
ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
ಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ
ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ
ಅರಿಕೇಸರಿಯ ಆಸ್ಥಾನದ ಕವಿ - ಪಂಪ
ಸಾಹಸ ಭೀಮ ವಿಜಯ - ರನ್ನ
ಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
ಎರಡನೇ ತೈಲಪನ ದಂಡ ನಾಯಕ - ಬರ್ಫೆ
6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ
ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳ
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ
6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ
Share:

ಭಾರತದ ಇತಿಹಾಸ ತಿಳಿಯಲಿರುವ ಆಧಾರಗಳು


  • ಭಾರತದ ಇತಿಹಾಸದ ಪರಿಚಯಗಳು

  • ಭಾರತದ ಇತಿಹಾಸ ತಿಳಿಯಲಿರುವ ಆಧಾರಗಳು

  • ಜುನಾಗಡ್ ಶಾಸನದ ಕರ್ತು- ರುದ್ರದಾಮ
  • ಉತ್ತರ ಮೆರೂರು ಶಾಸನದ ಕರ್ತು- ಪರಾಂತರ ಚೋಳ
  • ಅಲಹಾಬಾದ್ ಸ್ತಂಭ ಶಾಸನದ ಕರ್ತು- ಸಮುದ್ರ ಗುಪ್ತ
  • ಐಹೊಳೆ ಶಾಸನದ ಕರ್ತು-ರವಿವರ್ಮ
  • ಅಶ್ವ ಮೇಧ ಎಂಬ ನಾಣ್ಯವನ್ನು ಜಾರಿಗೆ ತಂದವನು - ಸಮುದ್ರ ಗುಪ್ತ
  • ಭಾರತದ ಹಾಗೂ ಇರಾನ್ ನಡುವಿನ ಸಂಬಂಧದ ಕುರಿತು ತಿಳಿಸುವ
  • ಹೆರಡೋಟಸ್ ನ ಕೃತಿ-Historia.
  • ಇರಾನ್ ನ ಪ್ರಾಚೀನ ಹೆಸರು- ಪರ್ಶಿಯಾ.
  • ಮೆಗಾಸ್ತನಿಸ್ ಈ ಆಸ್ಥಾನದ ರಾಜಧೂತ - ಚಂದ್ರಗುಪ್ತಮೌರ್ಯ.
  • ಇಂಡಿಕಾ ಕೃತಿಯ ಕರ್ತು- ಮೆಗಾಸ್ತನೀಸ್.
  • principle of the Exithrian Seen ಕೃತಿಯ ಕರ್ತು- ಗ್ರೀಕ್ ದೇಶದವನು.
  • The geography ಕೃತಿಯ ಕರ್ತು-ಟಾಲೆಮಿ.


  • ಗ್ರೀಕರ ಬರವಣಿಗೆಗಳು 

  • ಹೆರಡೋಟಸ್ - Historia
  • ಅಲೆಗ್ಸಾಂಡರನ ಭಾರತ ಆಕ್ರಮಣದ ವಿವರಗಳು
  • ಇಂಡಿಕಾ ಕೃತಿಯ ಕರ್ತು-ಮೆಗಾಸ್ತಲೀಸ್.
  • ಮೌರ್ಯರ ಆಡಳಿತ ಬಗೆಗೆ ಬೆಳಕು ಚೆಲ್ಲುವ ಗ್ರಂಥ - ಇಂಡಿಕಾ



  • ಭಾರತದ ಇತಿಹಾಸದಲ್ಲಿ ಭೂಗೋಳ

  • ಭಾರತದ ಇತಿಹಾಸ ಪರಿಚಯ

  • ಭೂಗೋಳದಲ್ಲಿ ಭಾರತದ ಸ್ಥಾನ.
  • ಉತ್ತರ ಗೋಳಾರ್ಧ ಉತ್ತರ ಅಕ್ಷಾಂಶ 8 ಡಿಗ್ರಿ ಯಿಂದ 37 ಡಿಗ್ರಿವರೆಗೆ
  • ಪೂರ್ವ ರೇಖಾಂಶ 70 ಡಿಗ್ರಿ ಯಿಂದ 93 ಡಿಗ್ರಿ ವರೆಗೆ ಹೊಂದಿದೆ.


  • ಭಾರತದ ವಿವಿಧ ಹೆಸರುಗಳು.

  • ಭರತ ವರ್ಷ, ಭರತ ಖಂಡ, ಜಂಬೂದ್ವೀಪ, ಇಂಡಿಯಾ ಹಾಗೂ ಹಿಂದೂಸ್ಥಾನ್.


  • ಭಾರತದ ಪ್ರಮುಖ ಗಡಿಗಳು

  • ಉತ್ತರದಲ್ಲಿ ಹಿಮಾಲಯ ಪರ್ವತ
  • ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ ಹಿಂದೂ ಮಹಾಸಾಗರ
  • ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ
  • ಪಶ್ಚಿಮದಲ್ಲಿ ಪಾಕಿಸ್ತಾನ ಹಾಗೂ ಅರಬ್ಬೀ ಸಮುದ್ರ


  • ಭಾರತದ ಇತಿಹಾಸದ ಕಾಲಮಾನಗಳು

  • ಇತಿಹಾಸದ ಪೂರ್ವಯುಗ (ಕ್ರಿ.ಪೂ.20000-5000)
  • ಪ್ರಾಚೀನ ಯುಗ(ಕ್ರಿ.ಪೂ 600 ರಿಂದ ಕ್ರಿ.ಶ 1200)
  • ಮಧ್ಯಯುಗ (ಕ್ರಿ.ಶ 1200-1700)
  • ಆಧುನಿಕ ಯುಗ(ಕ್ರಿ.ಶ. 1700-ಇಂದಿನವರೆಗೆ)



  • ಪ್ರಾಚೀನ ಭಾರತದ ಇತಿಹಾಸವು 1921 ರವರೆಗೆ ಹಾಗೂ ಅರ್ಯರು ಆರಂಭಿಸಿದ ವೇದಕಾಲದ ನಾರರೀಕತೆಯಿಂದ ಆರಂಭವಾಗುತ್ತದೆ.
  • ಭಾರತ ಸಂಪೂರ್ಣವಾಗಿ - ಉತ್ತರಾರ್ಧಗೋಳದಲ್ಲಿದೆ.
  • ಜನ ಸಂಖ್ಯೆಯಲ್ಲಿ ಭಾರತ - ಎರಡನೇಯ ಸ್ಥಾನದಲ್ಲಿದೆ.
  • ಭಾರತ - ಏಷ್ಯಾ ಖಂಡದಲ್ಲಿದೆ.


  • ಸರಹದ್ದುಗಳು

  • ಪೂರ್ವದಲ್ಲಿ - ಬಂಗಾಳಕೊಲ್ಲಿ
  • ಪಶ್ಚಿಮದಲ್ಲಿ- ಅರಬ್ಬೀ ಸಮುದ್ರ
  • ಉತ್ತರದಲ್ಲಿ- ಹಿಮಾಲಯ ಪರ್ವತ
  • ದಕ್ಷಿಣದಲ್ಲಿ - ಹಿಂದೂಮಹಾಸಾಗರ



  • ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ

  • ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ.

  • History ಎಂಬ ಪದವು ಗ್ರೀಕ್ ಭಾಷೆಯ Historia ದಿಂದ ಉಗಮವಾಗಿದೆ.
  • History ಎಂದರೆ ವಿಚಾರಣೆ ಅಥವಾ ತನಿಖೆ ಮಾಡು ಎಂದರ್ಥ.
  • ಇತಿಹಾಸವು ಸಂಸ್ಕೃತದ ಪದವಾಗಿದೆ.
  • ಇತಿಹಾಸವನ್ನು ಬರೆದವರಲ್ಲಿ ಗ್ರೀಕರು ಮೊದಲಿಗರು.
  • ಇತಿಹಾಸದ ಪಿತಾಮಹಾ - ಹೆರಡೊಟಸ್ .
  • Parshion war ಕೃತಿಯ ಕರ್ತೃ - ಹೆರಡೊಟಸ್ .
  • City of God ಕೃತಿಯ ಕರ್ತೃ-ಸಂತ ಅಗಸ್ಚನ್.
  • ಚರ್ಚು ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಪ್ರಥಮವಾಗಿ ಚಿಂತಿಸಿದವರು - ಸಂತ ಅಗಸ್ಚನ್.



  • ಪ್ರಮುಖ ಹೇಳಿಕೆಗಳು.

  • ಭೂತ ಕಾಲದ ರಾಜಕೀಯವೇ ವರ್ತಮಾನ ಕಾಲದ ಇತಿಹಾಸ, ಇಂದಿನ ರಾಜಕೀಯವೇ ಭವಿಷ್ಯತ್ತಿನ ಇತಿಹಾಸ- Freeman.
  • ವ್ಯಕ್ತಿಗಳ ಜೀವನ ಚರಿತ್ರೆಯೇ ಇತಿಹಾಸ - ಥಾಮಸ್ ಕಾರ್ಲೈಲ್ .
  • ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟವೇ ಇತಿಹಾಸ - ಕಾರ್ಲ್ ಮಾರ್ಕ್ಸ್ . Das Capital ಈತನ ಕೃತಿ.
  • ಜದುನಾಥ್ ಸರ್ಕಾರರವರ ಪ್ರಮುಖ ಕೃತಿಗಳು .
  • Declaine and Fall of the Maghal Empire
  • Shivaji and His Times.
  • India Through the ages.



  • ಇತಿಹಾಸದ ಎಂದರೆ ನಾಗರೀಕತೆಗಳ ಏಳು ಬೀಳಿನ ಕತೆ- ಆರ್ನಾಲ್ಡ್ ಟಾಯ್ನ್ ಬಿ.
  • A study of History- ಕೃತಿಯ ಕರ್ತೃ- Arnald Toynbi.
  • ವಿಶ್ವದ 26 ನಾಗರೀಕತೆಗಳ ಸಮಗ್ರ ಅಧ್ಯಯನ ಕೃತಿಯೇ Taynbi ವಿರಚಿತ A study of History.
  • ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದ ಮಾನವನ ಕತೆಯೇ ಇತಿಹಾಸ- ಜವಾಹರಲಾಲ್ ನೆಹರೂ ರವರು.
  • ಮಾನವ ಕುಲದ ಕತೆಯೇ ಇತಿಹಾಸ - ಹೆನ್ನಿಕ್ ವಾನ್ ಲೂನ್
  • ಯುಗ ಯುಗದಲ್ಲಿ ನಡೆದ ಮಾನವನ ಹೋರಾಟವೇ ಇತಿಹಾಸ ಪಿಯರ್ಸ್.
  • ಇತಿಹಾಸ ಲೇಖನಾ ಕಲೆಯ ತವರು ಮನೆ- ಗ್ರೀಕ್.
  • ಹೆರೋಡೋಟಸ್ ನು - ಪೆಲಿಕ್ಲಿಸ್ ನ ಆಸ್ಥಾನದಲ್ಲಿದ್ದನು.
  • Historia ಎಂಬ ಕೃತಿಯ ಕರ್ತು - ಹೆರೋಡೋಟಸ್ .
  • Felopanedian war ಕೃತಿಯ ಕರ್ತು- ಥುಸಿಡೈಡಸ್.
  • ಜರ್ಮನ್ನರು ಇತಿಹಾಸವನ್ನು - ಗೆಸ್ ಚಿಸ್ಟೆ-ಎನ್ನುತ್ತಿದ್ದರು.
  • ಇತಿಹಾಸವು ಒಂದು ಅನ್ವೇಷಣೆ ಅಥವಾ ಮಹಾನ್ ವೀರರ ಕಥಾನಕ್ ಎಂದವರು- ಹೆರೋಡೋಟಸ್ .
  • ಇತಿಹಾಸ ಬದಲಾಗದ ಗತಕಾಲ ಎಂದವರು- ಅರಿಸ್ಟಾಟಲ್.
  • ದಾಸ್ ಕ್ಯಾಪಿಟಲ್ ಹಾಗೂ ಕಮ್ಯೂನಿಸ್ಟ್ ಮ್ಯಾಸಿಪ್ಯಾಸ್ಟ್ರೋ ಕೃತಿಗಳ ಕರ್ತು- ಕಾರ್ಲ್ ಮಾರ್ಕ್ಸ್.
  • ಜಗತ್ ಕಥಾವಲ್ಲರಿ- ಕೃತಿಯ ಕರ್ತು ಜವಾಹರಲಾಲ್ ನೆಹರು.
  • ಇತಿಹಾಸವು ಸಮಾಜಗಳ ನೆನಪುಗಳು ಎಂದವರು - ರೀನಿಯರ್.
  • ಇತಿಹಾಸ ಜಯಭೇರಿ ಹೊಡೆದ ಯುದ್ದಗಳ ವರ್ಣನೆ- ಎಂದವರು ಹಿಟ್ಲರ್.
  • ಸದ್ಗುಣ ಹಾಗೂ ದುರ್ಗುಣಗಳ ನಡುವಿನ ಹೋರಾಟ ಇತಿಹಾಸ ಎಂದವರು- ಅಗಸ್ಟೆನ್.
  • ಎಲ್ಲಾ ಸಮಾಜ ವಿಜ್ಞಾನಗಳ ಪಿತೃ ಅಥವಾ ಮಾತೃ-ಇತಿಹಾಸ
  • ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎಂದವರು - ಡಾ. ಬಿ.ಆರ್.ಅಂಬೇಡ್ಕರ್.
  • ಸಿಂಧೂ ಬಯಲಿನ ನಾಗರೀಕತೆಯನ್ನು ಪತ್ತೆ ಹಚ್ಚಲಾದ ವರ್ಷ-1921.
  • ಇತಿಹಾಸದ ಅರ್ಥವನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸಿದವರು- Freeman
  • ಇತಿಹಾಸವನ್ನು ವ್ಯಕ್ತಿಗಳಿಗೆ ಹೋಲಿಸಿದವರು ಕಾರ್ಲೈಲ್ ರವರು.
  • ಇತಿಹಾಸವನ್ನು ಆರ್ಥಿಕ ವಿಶ್ಲೇಷಣೆಗೆ ಸೀಮಿತಗೊಳಿಸಿದವರು ಕಾರ್ಲ್ ಮಾರ್ಕ್ಸ್.
  • ಪ್ರಾಚೀನ ಕಾಲದಲ್ಲಿ ಇತಿಹಾಸ ಕೇವಲ - ದಂತಕತೆಗಳಿಗೆ ಸೀಮಿತವಾಗಿತ್ತು.
  • 19 ನೇ ಶತಮಾನದವರೆಗೆ-ರಾಜಕೀಯ ಅಂಶಗಳು ಪ್ರಧಾನವಾಗಿತ್ತು.ಇತಿಹಾಸ ಸತ್ತವರ ಮೇಲೆ ಹೆಣೆದ ಸುಳ್ಳಿನ ಕಂತೆ ಎಂದವರು-ನೆಪೋಲಿಯನ್
Share:

ಇತಿಹಾಸ



9) ಶ್ರೀರಂಗಪಟ್ಟಣ ಒಪ್ಪಂದವಾದದ್ದು
ಯಾವಾಗ?




* 1792 ರಲ್ಲಿ.




10) ಯಾವ ಒಡೆಯರ ಕಾಲದಲ್ಲಿ ಮೈಸೂರು
ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ
ಪಾತ್ರವಾಯಿತು?




* ನಾಲ್ವಡಿ ಕೃಷ್ಣರಾಜ ಒಡೆಯರ್.




11) "ಹಲಗಲಿ" ಬಾಗಲಕೋಟೆ ಜಿಲ್ಲೆಯ ಯಾವ
ತಾಲ್ಲೂಕಿನಲ್ಲಿದೆ?




* ಮುಧೋಳ.




12) 1836 ರಲ್ಲಿ ----- ದಿಂದ
ಬೆಳಗಾವಿಯನ್ನು ಬೇರ್ಪಡಿಸಲಾಯಿತು?




* ಧಾರವಾಡ.




13) ಕನ್ನಡ ಮಾತನಾಡುವ ಬಳ್ಳಾರಿ,
ದಕ್ಷಿಣಕನ್ನಡ ಪ್ರದೇಶಗಳು 19 ನೇ
ಶತಮಾನದಲ್ಲಿ ಯಾವ ಪ್ರಾಂತದ ಆಳ್ವಿಕೆಗೆ
ಒಳಪಟ್ಟಿದ್ದವು?




* ಮದ್ರಾಸ್.




14) ಸುಮಾರು 8 ಶತಮಾನಗಳ ಕಾಲ
ಕೊಡಗನ್ನು ಆಳ್ವಿಕೆ ಮಾಡಿದವರು ಯಾರು?




* ಚೆಂಗಾಳ್ವರು.




15) ಯಾವ ಶಾಸನ ಜಾರಿಗೆ ಬರುವುದರ
ಮೂಲಕ ದ್ವಿಮುಖ ಸರ್ಕಾರ ರದ್ದಾಯಿತು?




* 1773 ರ ರೆಗ್ಯುಲೇಟಿಂಗ್ ಶಾಸನ.




16) ಭಾರತದ ಮೊದಲನೆಯ ಗವರ್ನರ್ ಜನರಲ್
ಯಾರು?




* ವಾರನ್ ಹೆಸ್ಟಿಂಗ್ಸ್.




17) ಪಿಟ್ಸ್ ಇಂಡಿಯಾ ಶಾಸನ ಜಾರಿಗೆ
ಬಂದದ್ದು ಯಾವಾಗ?




* 1784 ರಲ್ಲಿ.




18) ಭಾರತದ ಇತಿಹಾಸದಲ್ಲಿ ಯಾವ
ಶತಮಾನವನ್ನು "ಭಾರತೀಯ ನವೋದಯ"
ಕಾಲವೆಂದು ಕರೆಯಲಾಗಿದೆ?




* 19 ನೇ.




19) "ವೇದಗಳಿಗೆ ಹಿಂದಿರುಗಿ" ಎನ್ನುವ ಘೋಷಣೆ
ಮಾಡಿದವರು ಯಾರು?




* ಸ್ವಾಮಿ ದಯಾನಂದ ಸರಸ್ವತಿ.




20) ಜ್ಯೋತಿಬಾ ಪುಲೇಯವರು ಯಾವ
ಸಮಾಜವನ್ನು ಸ್ಥಾಪಿಸಿದರು?




* ಸತ್ಯಶೋಧಕ ಸಮಾಜ.




21) "ಪ್ರಾರ್ಥನಾ ಸಮಾಜ"ವನ್ನು
ಆತ್ಮಾರಾಂ ಪಾಂಡುರಂಗರವರು ಎಲ್ಲಿ
ಸ್ಥಾಪಿಸಿದರು?




* ಮುಂಬೈನಲ್ಲಿ.




22) "ಶುದ್ಧಿ ಚಳುವಳಿ"ಯನ್ನು
ಪ್ರಾರಂಭಿಸಿದವರು ಯಾರು?




* ಸ್ವಾಮಿ ದಯಾನಂದ ಸರಸ್ವತಿ.




23) ಪುಲೇಯವರು ಶೋಷಣೆಯ ಬಗ್ಗೆ ಯಾವ
ಪುಸ್ತಕದಲ್ಲಿ ತಿಳಿಸಿದ್ದಾರೆ?




* ಗುಲಾಮಗಿರಿ.




24) ರಾಮಕೃಷ್ಣ ಪರಮಹಂಸರು
ದಕ್ಷಿಣೇಶ್ವರದಲ್ಲಿನ ಯಾವ ದೇವಾಲಯದ
ಅರ್ಚಕರಾಗಿದ್ದರು?




* ಕಾಳಿ.




25) ರಾಮಕೃಷ್ಣ ಮಿಷನ್ ನ್ನು ಸ್ಥಾಪಿಸಿದವರು
ಯಾರು?




* ಸ್ವಾಮಿ ವಿವೇಕಾನಂದರು.




26) ಸ್ವಾಮಿ ವಿವೇಕಾನಂದರು ಚಿಕಾಗೋ
ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು
ಯಾವಾಗ?




* 1893 ರಲ್ಲಿ.




27) ಥಿಯಾಸಾಫಿಕಲ್ ಸೊಸೈಟಿಯ ಮೂಲ
ಸ್ಥಾಪಕರು ಯಾರಾರು?




* ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್
ಎಚ್. ಎಸ್.ಅಲ್ಕಾಟ್.




28) 1916 ರಲ್ಲಿ ಹೋಂರೂಲ್
ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
* ಆನಿ ಬೆಸೆಂಟ್.




29) ಕಾನ್ಪುರ್ ದಲ್ಲಿ ಸಿಡಿದೆದ್ದವನು ಯಾರು?




* ನಾನಾ ಸಾಹೇಬ್.




30) ಝಾನ್ಸೀಯಲ್ಲಿ ಯಾರ ನಾಯಕತ್ವದಲ್ಲಿ
ದಂಗೆ ಉಂಟಾಯಿತು?




* ರಾಣಿ ಲಕ್ಷ್ಮೀ ಬಾಯಿ.




31) 'ನಾನಾ ಸಾಹೇಬ್'ನ ಸಹಾಯಕ ಯಾರು?
* ತಾತ್ಯಾಟೋಪೆ.




32) ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ್ದು
ಯಾವಾಗ?




* 1858 ರಲ್ಲಿ.




33) "ಟೈಮ್ಸ್ ಆಫ್ ಇಂಡಿಯಾ" ಪ್ರಕಟಗೊಂಡ
ಸ್ಥಳ ಯಾವುದು?




* ಮುಂಬೈ.




34) "ಸೋಮೆ ಪ್ರಕಾಶ" ಎಂಬ ಬಂಗಾಳ
ಪತ್ರಿಕೆಯ ಸಂಪಾದಕರು ಯಾರು?




* ಈಶ್ವರಚಂದ್ರವಿದ್ಯಾಸಾಗರ.




35) "ದಿ ಬೆಂಗಾಲ್ ಗೆಜೆಟ್" ಆರಂಭಿಸಿದವರು
ಯಾರು?




* ಆಗಸ್ಟ್ ಹಿಕಿ.




36) "ಇಲ್ಬರ್ಟ್ ಮಸೂದೆ"ಯನ್ನು ಜಾರಿಗೆ
ತಂದವನು ಯಾರು?




* ಲಾರ್ಡ್ ರಿಪ್ಪನ್.




37) ಬಂಗಾಳದ ವಿಭಜನೆಯನ್ನು ಬ್ರಿಟಿಷ್
ಸರ್ಕಾರವು ಹಿಂಪಡೆದದ್ದು ಯಾವಾಗ?




* 1911 ರಲ್ಲಿ.




38) "ವರ್ತಮಾನ ರಣನೀತಿ" ಪುಸ್ತಕದ ಕರ್ತೃ
ಯಾರು?




* ಅರವಿಂದ್ ಘೋಷ್.




39) "ಹಿಂದ್ ಸ್ವರಾಜ್" ಪತ್ರಿಕೆಯ ಸಂಪಾದಕರು
ಯಾರು?




* ಮಹಾತ್ಮ ಗಾಂಧೀಜಿ.




40) 1919 ರ ರೌಲತ್ ಕಾಯ್ದೆಯು ಯಾವ
ತಿಂಗಳಲ್ಲಿ ಜಾರಿಗೆ ಬಂದಿತು?




* ಫೆಬ್ರವರಿ.




41) "ಗಾಂಧಿಯುಗದ" ಅವಧಿಯನ್ನು ತಿಳಿಸಿರಿ?




* 1920-1947.




42) "ಸ್ವರಾಜ್ ಪಕ್ಷ" ಸ್ಥಾಪನೆಯಾದದ್ದು
ಯಾವಾಗ?




* 1922 ರಲ್ಲಿ.




43) "ಕ್ವಿಟ್ ಇಂಡಿಯಾ ಚಳುವಳಿ" ನಡೆದದ್ದು
ಯಾವಾಗ?




* 1942 ರಲ್ಲಿ.




44) ಕಾರ್ಮಿಕರ ಹೋರಾಟವು 1827 ರಲ್ಲಿ
ಎಲ್ಲಿ ಆರಂಭವಾಯಿತು?




* ಕಲ್ಕತ್ತಾದಲ್ಲಿ.




45) ಬ್ರಿಟಿಷರು ಜಾರಿಗೆ ತಂದ ಖಾಯಂ
ಜಮೀನ್ದಾರಿ ಪದ್ದತಿಯಿಂದ ಯಾವ ಬುಡಕಟ್ಟು
ಜನರು ನಿರ್ಗತಿಕರಾದರು?




* ಸಂತಾಲ.




46) 1938 ರ ಕಾಂಗ್ರೆಸ್ ಅಧಿವೇಶನ ಎಲ್ಲಿ
ನಡೆಯಿತು?




* ತ್ರಿಪುರದಲ್ಲಿ.




47) "ಫಾರ್ವರ್ಡ್ ಬ್ಲಾಕ್" ಎಂಬುವದೊಂದು
-----.
* ಹೊಸ ಪಕ್ಷ.




48) "ಫಾರ್ವರ್ಡ್ ಬ್ಲಾಕ್" ಎಂಬ ಹೊಸ ಪಕ್ಷ
ಕಟ್ಟಿದವರು ಯಾರು?




* ಸುಭಾಷ್ ಚಂದ್ರಬೋಸ್.




49) "ದೆಹಲಿ ಚಲೋ"ಗೆ ಕರೆ ನೀಡಿದವರು
ಯಾರು?




* ಸುಭಾಷ್ ಚಂದ್ರಬೋಸ್.




50) 'ಮಹದ್' ಮತ್ತು 'ಕಾಲಾರಾಂ'
ದೇವಾಲಯ ಚಳುವಳಿಗಳನ್ನು ಆರಂಭಿಸಿದವರು
ಯಾರು?




* ಡಾ.ಬಿ.ಆರ್.ಅಂಬೇಡ್ಕರ್.
💐💐 PRAKASH TEGGINAMATH💐💐
Share:

ಇತಿಹಾಸದ ಪ್ರಮುಖ ವಿಷಯಗಳು

🙏ಇತಿಹಾಸದ ಪ್ರಮುಖ ವಿಷಯಗಳು🙏

👉ಪ್ರಮುಖ ಕೃತಿಗಳು
◾ಕಾಳಿದಾಸ- ಮೇಘದೂತ
◾ಹರ್ಷವರ್ಧನ- ರತ್ನಾವಳಿ
◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ
◾ವಿಷ್ಣುಶರ್ಮ- ಪಂಚತಂತ್ರ
◾ಮೆಗಾಸ್ತನೀಸ್‌- ಇಂಡಿಕಾ
◾ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ
◾ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌
◾ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌
◾ಹರ್ಷವರ್ಧನ- ನಾಗಾನಂದ
◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ
◾3ನೇ ಸೋಮೇಶ್ವರ- ಮಾನಸೋಲ್ಲಾಸ
◾2ನೇ ಶಿವಮಾರ- ಸೇತುಬಂಧ

👉ಪ್ರಮುಖ ಶಾಸನಗಳು
◾ಸಮುದ್ರಗುಪ್ತ- ಅಲಹಾಬಾದ್‌ ಶಾಸನ
◾2ನೇ ಪುಲಿಕೇಶಿ- ಐಹೊಳೆ ಶಾಸನ
◾ದಂತಿದುರ್ಗ- ಎಲ್ಲೋರಾ ಶಾಸನ
◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ

👉ಪ್ರಮುಖ ಬಿರುದುಗಳು
◾ಅಶೋಕ- ದೇವನಾಂ ಪ್ರಿಯದರ್ಶಿಕಾ
◾ಸಮುದ್ರಗುಪ್ತ- ಭಾರತದ ನೆಪೋಲಿಯನ್‌
◾ಬಲಬನ್‌- ಜಿಲ್‌ ಎ ಇಲಾಯಿ
◾ಔರಂಗಜೇಬ್‌- ಜಿಂದಾ ಪೀರ

👉ಪ್ರಮುಖ ರಾಜಧಾನಿಗಳು
◾ಶುಂಗರು- ಪಾಟಲಿಪುತ್ರ
◾ಮೌಖಾರಿ- ಕನೌಜ್‌
◾ಕುಶಾನರು- ಪುರುಷಪುರ
◾ಪಲ್ಲವರು- ಕಂಚಿ

👉ಪ್ರಮುಖ ಗರ್ವನರ್‌ ಯುದ್ದಗಳು
◾ವಾರನ್‌ ಹೇಸ್ಟಿಂಗ್ಸ್‌- ರೋಹಿಲ್ಲಾ ಯುದ್ಧ
◾ಕಾರ್ನವಾಲಿಸ್‌- 3ನೇ ಆಂಗ್ಲೋ ಮೈಸೂರ ಕದನ
◾ಡಾಲ್‌ಹೌಸಿ- 2ನೇ ಆಂಗ್ಲೋ ಸಿಖ್‌ ಕದನ
◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ

👉ಪ್ರಮುಖ ಚಳುವಳಿ ಮತ್ತು ನಾಯಕರು
◾ಸ್ವದೇಶಿ ಚ- 1905
◾ಅಸಹಕಾರ- 1920
◾ಕಾಯ್ದೆಭಂಗ- 1930
◾ಕ್ವಿಟ್‌ ಇಂಡಿಯಾ- 1942
◾ವಂಗಭಂಗ ಚ- ಸುರೇಂದ್ರನಾಥ ಬ್ಯಾನರ್ಜಿ
◾ಹೋಮ್‌ರೂಲ್‌ ಚ- ಬಿ.ಜಿ.ತಿಲಕ್‌
◾ಖಿಲಾಪತ್‌ ಚ- ಅಲಿ ಸಹೋದರು
◾ಕಾಯ್ದೆಭಂಗ ಚ- ಎಮ್‌.ಕೆ.ಗಾಂಧಿ

👉ಪ್ರಮುಖ ಘೋಷಣೆಗಳು
◾ಜೈ ಹಿಂದ್‌- ಸುಭಾಸಚಂದ್ರ ಭೋಸ್‌
◾ಇನ್‌ ಕ್ವಿಲಾಬ್‌ ಜಿಂದಾಬಾದ್‌- ಭಗತ್‌ಸಿಂಗ್‌
◾ಜೈಜವಾನ ಜೈ ಕಿಸಾನ್‌- ಲಾಲ ಬಹಾದ್ದೂರ್‌ ಶಾಸ್ತ್ರಿ

👉ಪ್ರಮುಖ ರಾಜರು & ಪ್ರವಾಸಿಗರು
◾ಅಮೋಘ ವರ್ಷ- ಸುಲೇಮಾನ
◾1ನೇ ದೇವರಾಯ- ನಿಕೊಲೋ ಕೊಂಟಿ
◾ವಿರುಪಾಕ್ಷ- ನಿಕಿಟಿನ್‌
◾ಕೃಷ್ಣದೇವರಾಯ- ಡೊಮಿಂಗೋ ಪಯಾಸ್‌
Share:

ರಸಪ್ರಶ್ನೆಗಳು ಇತಿಹಾಸ

1.ಪೇಂಟಿಂಗ್ ಕಲೆಗೆ ಆಶ್ರಯ ನೀಡಿದ ಮೊಘಲ್ ದೊರೆ....
1.ಜಹಂಗೀರ್
2.ಬಾಬರ್
3.ಅಕ್ಬರ್
4. ಷಹಜಹಾನ್
1 ✅
2. ಈಶಾನ್ಯ ರೇಲ್ವೆ ಕೇಂದ್ರ ಕಛೇರಿ ಎಲ್ಲಿದೆ?
1.ಗೋರಕ್ ಪುರ
2.ಜಯಪುರ್
3.ನಾಗಪುರ
4.ಬೆಂಗಳೂರು
1.✅
3. The Great Derangement ಯಾರ ಕೃತಿ
1.A.P.ಕಲಾಂ
2.ಅಮಿತಾವ್ ಘೋಷ್
3.ಜವಾಹರಲಾಲ್ ನೆಹರು
4.ಅಟಲ್ ಬಿಹಾರಿ ವಾಜಪೇಯಿ
2.✅
4.ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ
ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್
2. ದೋ-ಅಬ್
3. ದ್ರಿಯನ್
4. ತೆರಾಯಿ
1✅
5.ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಭಾರತೀಯ ಯಾರು ?
1. ಜೆ,ಕೆ,ಬಜಾವ್
2. ರಾಕೇಶ್ ಶರ್ಮ
3. ಕಲ್ಪನಾ ಚಾವ್ಲಾ
4. ಮೇಲಿನ ಯಾರು ಅಲ್ಲ
B✅
6.ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು?
1.ತುಘಲಕ್
2. ಗುಲಾಮಿ (ಸ್ಲೇವ್)
3. ಖಿಲ್ಜಿ
4.ಲೋದಿ
B✅
7. ಮನ್ಸಬ್ದಾರಿ ಪದ್ಧತಿ ಜಾರಿಗೆ ತಂದವರು. ....
1. ಅಕ್ಬರ್
2.ಬಾಬರ್
3.ಔರಂಗಜೇಬ
4.ಷಹಜಹಾನ್
1. ✅
9. ಮನ್ಸಬ್ದಾರಿ ಪದ್ಧತಿ ಯಾವ ದೇಶದಿಂದ ಆಯ್ದುಕೊಳ್ಳಲಾಯಿತು.
1.ಇಟಲಿ
2.ಮಂಗೋಲಿಯ
3.ಟರ್ಕಿ
4.ಅಫ್ಘಾನಿಸ್ಥಾನ
3.✅
10.ದೀನ್ ಇ ಇಲಾಹಿ ಧರ್ಮ ಘೋಷಿಸಿದ ನಿಖರವಾದ ಸ್ಥಳ?
1.ಆಗ್ರಾಕೋಟೆ
2. ಇಬಾದತ್ ಖಾನಾ
3.ದೆಹಲಿ ಕೋಟೆ
4. ಫತೇಪುರ್ ಸಿಕ್ರಿ
B✅
11."ರಾಜತ್ವ ದೈವ ದತ್ತ" ವಾದುದು ಎಂಬ ಸಿದ್ದಾಂತವನ್ನು ಪ್ರತಿಪಾದಿಸಿದ ದೆಹಲಿ ಸುಲ್ತಾನ ಯಾರು?
1. ಕುತ್ಬುದ್ದಿನ-ಐಬಕ
2. ಅಲ್ತಮಷ್
3. ಬಲ್ಬನ್
4. ಫಿರೋಜ್ ಷಾ
3.✅
12. ಅರಬ್ ನಾಣ್ಯಗಳಿಂದ; ಠಂಕ ಮತ್ತು ಜಿತಲ್;ಗಳನ್ನು ಚಲಾವಣೆಗೆ ತಂದವನು ಯಾರು ?
1. ಕುತ್ಬುದ್ದೀನ್ ಐಬಕ್
2. ಅಲ್ತಮಷ್
3. ಸುಲ್ತಾನ ರಜಿಯಾ ಬೇಗಂ
4. ಬಲ್ಬನ್
2.✅
13.ಈ ಕೆಳಕಂಡ ಯಾವ ದೆಹಲಿ ಸುಲ್ತಾನ ಬ್ರಾಹ್ಮಣರಿಂದಲೂ ;ಜೆಸಿಯಾ; ತಲೆಗಂದಾಯವನ್ನು ವಸೂಲಿ ಮಾಡಿದನು ?
1. ಅಲ್ಲಾ ಉದ್ದೀನ ಖಿಲ್ಜಿ
2. ಮಹಮ್ಮದ್ ಬಿನ್ ತೊಘಲಕ್
3. ಫಿರೋಜ್ ಷಾ ತೊಘಲಕ
4. ಇಬ್ರಾಹಿಂ ಲೂದಿ
3. ✅
14.ಖಾನ್ ದೇಶವನ್ನು ಆಕ್ರಮಿಸಿದ ಮೊಗಲ್ ಸಾಮ್ರಾಟನಾರು ?
1. ಬಾಬರ್
2. ಹುಮಾಯೂನ್
3. ಅಕ್ಬರ್
4.ಷಹಜಹಾನ್
3.✅
15.ಟಿಪ್ಪು ಸುಲ್ತಾನ ಫ್ರೆಂಚ್ ಜಾಕೋಬಿನ್ ಕ್ಲಬ್ ಗೆ ಸದಸ್ಯನಾಗಿದ್ದುದರಿಂದ ಅವನು ಸ್ವಯಂ ಘೋಷಿತವಾಗಿ ಹೀಗೆ ಕರೆದುಕೊಳ್ಳುತ್ತಿದ್ದನು...
a) ಸಿಟಿಜನ್ ಟಿಪ್ಪು
b) ಮಾರ್ಕ್ವೆಸ್
c) ಮೈಸೂರಿನ ಹುಲಿ
d) ಬೆಸ್ಟ್ ಸಿಟಿಜನ್
A✅
16. ಸ್ವಾಮಿ ವಿವೇಕಾನಂದರು ಮೈಸೂರಿಗೆ ಯಾವಗ ಭೇಟಿ ನೀಡಿದರು?
1.೧೮೮೨
2.೧೮೮೭
3. ೧೮೯೨
4. ೧೮೯೭
3. ✅
17.ದುಳಹಸ್ತಿ ಆಣೆಕಟ್ಟನ್ನು ಯಾವ ರಾಜ್ಯದಲ್ಲಿ ಕಟ್ಟಲಾಗಿದೆ?
1. ಪಂಜಾಬ್
2. ಜಮ್ಮು ಮತ್ತು ಕಾಶ್ಮೀರ
3. ರಾಜಸ್ತಾನ್
4.ಆಂಧ್ರಪ್ರದೇಶ
B✅
18.ಉದಾರತೆಯ ಯುಗ ಎಂದು ಯಾವ ವೈಸರಾಯನ
ಕಾಲವನ್ನು ಕರೆಯುತ್ತಿದ್ದರು?
1.ಲಾರ್ಡ್ ಕ್ಯಾನಿಂಗ್
2. ಲಾರ್ಡ್ ಢಫರಿನ್
3.ಲಾರ್ಡ್ ಲಿಟ್ಟನ್
4. ಲಾರ್ಡ್ ರಿಪ್ಪನ್
D✅
19.ಚಂಪಯ್ಯ ಗಿರಿಧಾಮವು ಈ ಕೆಳಗಿನ ಯಾವ
ರಾಜ್ಯದಲ್ಲಿ ಕಂಡು ಬರುತ್ತದೆ?
1. ಮಿಜೋರಾಂ
2. ಹಿಮಾಚಲ ಪ್ರದೇಶ
3. ಉತ್ತರಾಖಂಡ
4. ಸಿಕ್ಕಿಂ
1. ✅
20. ಮರಂಜಮ್ ಮರಭೂಮಿಯು ಯಾವ ದೇಶದಲ್ಲಿ ಕಂಡು
ಬರುತ್ತದೆ?
1. ಇರಾನ್
2. ಇಟಲಿ
3. ಇರಾಕ್
4. ಆಸ್ಟ್ರೇಲಿಯಾ
1. ✅
21. ಡಂಕನ್ ಪ್ಯಾಸೇಜ್ ಗಡಿರೇಖೆಯು ಈ ಕೆಳಗಿನವುಗಳಲ್ಲಿ
ಯಾವದಕ್ಕೆ ಸಂಬಂಧಪಟ್ಟಿದೇ?
1. ಮಿನಿಕಾಯ್ ಮತ್ತು ಕವರತ್ತಿ
2. ಮಿನಿಕಾಯ್ ಮತ್ತು ಮಾಲ್ಡೀವ್ಸ್
3. ದಕ್ಷಿಣ ಅಂಡಮಾನ್ ಮತ್ತು ಮದ್ಯ ಅಂಡಮಾನ್
4. ಲಕ್ಷದ್ವೀಪ್ ಮತ್ತು ಕವರತ್ತಿ
C✅
22.ಈ ಕೆಳಗಿನವುಗಳಲ್ಲಿ ಎಕ್ಸ್ - ಲಾ - ಚಾಪೆಲ್ ನಿವೇಶನ
ಕಂಡು ಬರುವದು ಎಲ್ಲಿ?
1. ಪ್ರಾನ್ಸ್
2. ಕಾಂಬೋಡಿಯಾ
3. ಬೆಲ್ಜಿಯಂ
4. ಬರ್ಲಿನ್
A✅
23. ಬರಹೇಪಾಣಿ ಜಲಪಾತವು ಯಾವ ರಾಜ್ಯದಲ್ಲಿ ಕಂಡು
ಬರುತ್ತದೆ?
1. ತಮಿಳುನಾಡು
2. ಒರಿಸ್ಸಾ
3. ಗೋವಾ
4. ಮೇಘಾಲಯ
2✅
24. ಗ್ವಾಲ್ಲಟರಿ ಎಂಬ ಜ್ವಾಲಾಮುಖಿಯು ಯಾವ ದೇಶದಲ್ಲಿ
ಕಂಡು ಬರುತ್ತದೆ?
1. ಚಿಲಿ
2. ಪೆರು
3. ಈಕ್ವೇಡಾರ್
4. ರಷ್ಯಾ
1✅
25.ಲೆನಿನ್ ತೀರಿಕೊಂಡಾಗ ರಷ್ಯಾದಲ್ಲಿ
ಸರ್ವಾಧಿಕಾರಿ ಆದರು?
1.ಮುಸಲೋನಿ
2. ಝಾರ್
3.ಕಮ್ಯೂನಿಸ್ಟ್ ರು
4. ಸ್ಟ್ಯಾಲಿನ್
D✅
26. 19 ನೇ ಶತಮಾನದಲ್ಲಿ ರಷ್ಯಾವನ್ನು ಅಳುತ್ತಿದ್ದವರು .....
1.ಮುಂಚೂರಾಜರು
2.ಝಾರ್
3. ಐರೋಪ್ಯರು
4. ಅಮೆರಿಕಾನ್ನರು
2✅
27. ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ್ದ ದೇಶ.....
1.ಜಪಾನ್
2.ಇಂಗ್ಲೆಂಡ್
3.ರಷ್ಯಾ
4.ಚೀನಾ
D✅
28. ಚೀನಾದಲ್ಲಿ ಗಣರಾಜ್ಯ ಸ್ಥಾಪಿಸಿದವರು .....
1. ಸನ್ ಯೂತ್ ಸೇನ್
2.ಮಾವೊ
3.ಮ್ಯಾಂಚು
4. ಚಿಯಾಂಗ್ ಕೈಶಕ್
A .✅
29. ಟೂಕುಗಾವಾ ಎಂದರೆ ....
1. ಸಂಸತ್ತು
2. ಮನೆತನ
3. ಸಂವಿಧಾನ
4. ಚಕ್ರವರ್ತಿಯ ಪ್ರತಿನಿಧಿಯಾಗಿದ್ದ ಮನೆತನ
D✅
30. ಜಪಾನ್ ಅಮೆರಿಕಾ "parlharbar " ಮೇಲೆ ದಾಳಿ ಮಾಡಿದ್ದು.....
1. 1914
2.1940
3. 1937
4.1941
D✅
31. ಚೀನಾ ಭಾರತದ ಗಡಿಯನ್ನು ಉಲ್ಲಂಘಿಸಿದ್ದು......
1. 1962
2. 1926
3.1949
4.1965
A✅
32. ಆಸ್ಟ್ರೀಯಾದ ರಾಜಕುಮಾರ ಕೊಲೆಯಾದದ್ದು ಯಾವಾಗ. ..
1.1915
2. 1918
3.1916
4.1914
D✅
33. ರಷ್ಯಾದಲ್ಲಿ ಕ್ರಾಂತಿಯಾದ ಯಾವಾಗ. ...
1. 1914
2.1917
3. 1918
4.1920
B✅
34.1944 , ಜೂನ್ 'ರಲ್ಲಿ ಫ್ರಾನ್ಸ್ ಗೆ ಬಂದು ಇಂಗ್ಲೆಂಡ್ ಗೆ ನೆರವಾದ ಸೇನಾನಿ. .
1. ಐಸೇನ್ ಹೊವರ್
2. ಐಸಾಕ್ ಹೋಮ್
3. ಟ್ರೂಮನ್
4. ಡಿಗಾಲ್
A✅
35. ಅಮೆರಿಕಾ ಜಪಾನ್ ಮೇಲೆ ಅಣುಬಾಂಬ್ ದಾಳಿ ಮಾಡಿದ್ದು?
1. Agu 1945
2.May 1945
3.Dec 1944
4.June 1943
A✅
36.ಮುಸಲೋನಿ ಕಟ್ಟಿದ ಸೇನಾಪಡೆ ?
1. ಪ್ಯೂರರ್
2. ಕಂದು ಅಂಗಿ
3. ಕಪ್ಪಂಗಿ
4. ಪ್ಯಾಸಿಸ್ಟ್
C✅
37.ದ್ವಿತೀಯ ಮಹಾಯುಧ್ಧದಲ್ಲಿ ಸತ್ತವರ ಸಂಖ್ಯೆ ಸುಮಾರು. ....
1. ಐವತ್ತು ಲಕ್ಷ
2. ಹತ್ತು ಕೋಟಿ
3. ಐದು ಕೋಟಿ
4. ಐವತ್ತು ಸಾವಿರ
C✅
38. ಉತ್ತರ ಅಟ್ಲಾಂಟಿಕ್ ರಕ್ಷಣಾ ಕೂಟ ರೂಪ ತಾಳಿದ್ದು ....... ರಲ್ಲಿ
1. 1954
2.1945
3. 1949
4. 1994
C✅
Share:

ಈ ಹಾಡಿನ ಹಿಂದಿನ ಅಸಲಿ ಸತ್ಯ - ಆನೆ ಬಂತೋಂದು ಆನೆ


ಈ ಹಾಡಿನ ಹಿಂದಿನ ಅಸಲಿ ಸತ್ಯ ಗೊತ್ತಾ..!  ಆನೆ ಬಂತೊಂದು ಆನೆ..'  ಹಾಡು ಹುಟ್ಟಿದ್ದು ಹೇಗೆ..?’

ಆನೆ ಬಂತೊಂದಾನೆ…
ಯಾವೂರ ಆನೆ..?
ಬಿಜಾಪುರ ಆನೆ…
ಇಲ್ಲಿಗ್ಯಾಕ ಬಂತು..?
ಹಾದಿ ತಪ್ಪಿ ಬತ್ತು…
ಹಾದಿಗೊಂದು ದುಡ್ಡು…
ಬೀದಿಗೊಂದು ದುಡ್ಡು…
ಚಿಕ್ಕ ಆನೆ ಬೇಕಾ… ದೊಡ್ಡ ಆನೆ ಬೇಕಾ… ಹೀಗೆ ಸಾಗುವ ಈ ಹಾಡು ಶಿಶುಗೀತೆ’ಯಲ್ಲ ಅನ್ನೋದು ನಿಮಗೆ ಗೊತ್ತಾ..? ಅಳುತ್ತಿರುವ ಮಕ್ಕಳನ್ನ ಸಮಾಧಾನ ಪಡಿಸಲು’ ಶತಮಾನಗಳಿಂದ ನಮ್ಮ ಹಿರಿಯರು ಹಾಡುತ್ತಾ ಬಂದಿದ್ದಾರೆ. ನೀವೂ ಕೂಡಾ ನಿಮ್ಮ ಮಕ್ಕಳನ್ನು ಮೊಳಕಾಲ ಮೇಲೆ ಕೂಡಿಸಿಕೊಂಡು ಈ ಗೀತೆಯನ್ನ ಹಾಡಿರ್ತಿರಿ.  ಅಸಲು ಈ ಹಾಡು ಹೇಗೆ ಹುಟ್ಟಿತು ಅಂತ ಗೊತ್ತಾದರೆ ಮುಂದ್ಯಾವತ್ತೂ ಈ ಗೀತೆಯನ್ನು ನೀವು ಮಕ್ಕಳ ಮುಂದೆ ಹೇಳಲ್ಲ..! ಹಾಗಾದರೆ ಏನಿದೆ ಈ ಹಾಡಿನ ಅಸಲಿ ಇತಿಹಾಸ..? ಇಲ್ಲಿದೆ ಓದಿ…

ಬಿಜಾಪುರದಲ್ಲಿದ್ದವಾ ಆನೆಗಳು..?

ಈ ಹಾಡನ್ನು ಹಾಡಿದವರಿಗೆ ಹಾಗೂ ಕೇಳಿದವರಿಗೆ ಥಟ್ ಅಂತ ಮೂಡೋ ಪ್ರಶ್ನೆಯೆಂದರೆ ಬಿಜಾಪುರದಲ್ಲಿ ಆನೆಗಳಿದ್ದವಾ..? ಅನ್ನೋದು. ಹೌದು, ಈ ಗೀತೆಯಲ್ಲಿ ಬಿಜಾಪುರದ ಆನೆ’ ಅಂತಲೇ ಯಾಕೆ ಬಳಸಲಾಯ್ತ ಅನ್ನೋದು ಈವರೆಗೆ ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಅಷ್ಟೆಅಲ್ಲ, ಈ ಹಾಡು ಬರೆದವರ್ಯಾರು..? ಇದು ಜಾನಪದವಾ..? ಕಾಲ್ಪನಿಕ ಗೀತೆಯಾ..? ಹೀಗೆ ಹಲವಾರು ಪ್ರಶ್ನೆಗಳು ಈ ಗೀತೆಯ ಬಗ್ಗೆ ಎಲ್ಲರನ್ನೂ ಕಾಡುತ್ತಲೇ ಬಂದಿದ್ದಾವೆ.

ಇತಿಹಾಸಕಾರರು ಹೇಳೊದೇನು..?

ಜನಮಾನಸದಲ್ಲಿ ಶಿಶುಗೀತೆಯಾಗಿಯೇ ಉಳಿದಿರೋ ಈ ಹಾಡು ಶಿಶುಗೀತೆ’ ಅಲ್ಲವಂತೆ. ಈ ಹಾಡಿಗೆ ಸುಮಾರು 450 ವರ್ಷಗಳ ಇತಿಹಾಸವಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. 16ನೇ ಶತಮಾನದಲ್ಲಿ ಬಿಜಾಪುರ, ಬೀದರ ಮತ್ತು ಗೋಲ್ಕೊಂಡದಲ್ಲಿ ಬಹುಮನಿ ಸುಲ್ತಾನರ ಆಡಳಿತವಿತ್ತು. ಆ ವೇಳೆ ವಿಜಯನಗರ ಸಾಮ್ರಾಜ್ಯವೂ ವೈಭವದಿಂದ ಮೇರೆಯುತ್ತಿತ್ತು. ಶ್ರೀಕೃಷ್ಣದೇವರಾಯರ ಕಾಲದಲ್ಲಿ ವಿಜಯನಗರ ಸಮ್ರಾಜ್ಯ ಭಾರತದಲ್ಲಿಯೇ ಅತ್ಯಂತ ಸಂಪತ್ಭರಿತ ರಾಜ್ಯವಾಗಿತ್ತು. ಕೃಷ್ಣದೇವರಾಯರ ಕಾಲಾನಂತರ ಅಧಿಕಾರಕ್ಕೆ ಬಂದ ರಾಮರಾಯರ ಆಡಳಿತದಲ್ಲೂ ವಿಜಯನಗರ ಸಾಮ್ರಾಜ್ಯ ತನ್ನ ವೈಭವವನ್ನು ಮುಂದುವರೆಸಿಕೊಂಡು ಹೋಗುತ್ತಿತ್ತು.

ಹೀಗಿರುವಾಗ ಬಿಜಾಪುರದ ಸುಲ್ತಾನರು ಸೇರಿದಂತೆ ಬೀದರ್ ಹಾಗೂ ಗೋಲ್ಕೊಂಡಗಳ ಬಹುಮನಿ ಸುಲ್ತಾನರ ಕಣ್ಣು ವಿಜಯನಗರ ಸಾಮ್ರಾಜ್ಯದ ಸಂಪತ್ತಿನ ಮೇಲೆ ಬೀಳುತ್ತೆ. ವಿಜಯನಗರದ ಸಂಪತ್ತನ್ನು ಲೂಟಿ ಹೊಡೆಯಲು ತಿರ್ಮಾನಿಸೋ ಬಹುಮನಿ ಸುಲ್ತಾನರುಗಳ ಒಕ್ಕೂಟ, 1565ರಲ್ಲಿ ರಕ್ಕಸ ಮತ್ತು ತಂಗಡಿ’ ಎಂಬ ಹಳ್ಳಿಗಳ ನಡುವಿನಲ್ಲಿದ್ದ ತಾಳೀಕೋಟೆ ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಗೆಲ್ಲುತ್ತಾರೆ. ಅಲ್ಲಿಗೆ ಭಾರತದಲ್ಲಿದ್ದ  ಕೊನೆಯ ಹಿಂದೂ ಸಾಮ್ರಾಜ್ಯ ಅವನತಿಯಾಗುತ್ತೆ.

ವಿಜಯನಗರವನ್ನು ಗೆದ್ದ ಬಹುಮನಿ ಸುಲ್ತಾನರು ಅಲ್ಲಿಯ ಪ್ರಜೆಗಳನ್ನು ಹಿಂಸಿಸಿ ಕೊಲ್ಲುತ್ತಾರೆ. ಜೊತೆಗೆ ಅಲ್ಲಿದ್ದ ಸಂಪತ್ತನ್ನು ಆನೆಗಳ ಮೇಲೆ ಬಿಜಾಪುರಕ್ಕೆ ಸಾಗೀಸುತ್ತಾರೆ. ಹೀಗೆ ಅಪಾರ ಪ್ರಮಾಣದ ಸಂಪತ್ತನ್ನು ಹೊತ್ತುಕೊಂಡು ಆನೆಗಳು ಹೋಗುತ್ತಿರುವಾಗ ದಾರಿಯುದ್ದಕ್ಕೂ ಮುತ್ತು, ರತ್ನ, ವಜ್ರಗಳು ಬೀಳುತ್ತವೆ.

ಸಾಮ್ರಾಜ್ಯವೊಂದರ ಚರಮಗೀತೆಯಾ..?

ಬಹುಮನಿ ಸುಲ್ತಾರಿಂದ ವಿಜಯನಗರ ಸಾಮ್ರಾಜ್ಯದ ಅವನತಿ ಆಗಿತ್ತು. ಅಲ್ಲಿನ ಅಪಾರ ಸಂಪತ್ತನ್ನ ಆನೆಗಳ ಮೂಲಕ ಸುಲ್ತಾನರು ಲೂಟಿ ಮಾಡಿದ್ದರು. ಅದನ್ನು ಕಣ್ಣಾರೆ ಕಂಡ ಅಲ್ಲಿನ ಪ್ರಜೆಗಳು ಮುಂದೆ ವಿಜಯನಗರವೆಂಬ ಮಹಾನ್ ಸಾಮ್ರಾಜ್ಯದ ಅವನತಿ ಹೇಗಾಯಿತು..’ ಎಂದು ಕೇಳಿದ ತಮ್ಮ ಮಕ್ಕಳಿಗೆ ಈ ಹಾಡಿನ ಮೂಲಕ ಹೇಳುತ್ತಾರೆ. ನೀವು ಗಮನಿಸಬೇಕು…ಈ ಹಾಡಲ್ಲಿ ಪ್ರಶ್ನೆಗಳೂ ಇವೆ ಉತ್ತರಗಳೂ ಇವೆ.
ಆನೆ ಬಂತೊಂದು ಆನೆ’..
ಯಾವೂರ ಆನೆ…’
ಬಿಜಾಪುರದ ಆನೆ…’
ಇಲ್ಲಿಗೇಕೆ ಬಂತು…’
ಹಾದಿ ತಪ್ಪಿ (ಮತಿಗೆಟ್ಟು) ಬಂತು…’
ಶಿರ ಕೊಬ್ರಿಯಂಗೆ ಲಟ ಲಟ ಮುರಿದು…’ (ಸುಲ್ತಾನರ ಸೈನ್ಯ ವಿಜಯನಗರದ ಸೈನಿಕರ ಹಾಗೂ ಪ್ರಜೆಗಳ ಶಿರವನ್ನು        ಕೊಬ್ಬರಿಯಂತೆ ಛೇದನ ಮಾಡಿತ್ತು.)
ಹಾದಿಗೊಂದು ದುಡ್ಡು…’
ಬೀದಿಗೊಂದು ದುಡ್ಡು…’ (ಆನೆಗಳ ಮೇಲೆ ಸಂಪತ್ತು ಹೊತ್ತೊಯ್ಯುವಾಗ ಬಿದ್ದ ಸಂಪತ್ತು)
ಹೀಗೆ ತಮ್ಮ ಮಕ್ಕಳಿಗೆ ವಿಜಯನಗರದ ಸಮ್ರಾಜ್ಯದ ಅವನತಿಯ ಕಥೆಯನ್ನು ಹೇಳಿದ ಹಿರಿಯರು ಕೊನೆಗೆ ಕೇಳ್ತಾರೆ…
`ದೊಡ್ಡ ಆನೆಬೇಕಾ…ಚಿಕ್ಕ ಆನೆಬೇಕಾ..?
Share:

ವಿಜ್ಞಾನ ದ ಪಾಠ ಹೇಳುವ ಹಂಪಿ...!

*🌻ಒಂದೋಳ್ಳೆ ಮಾಹಿತಿ🌻                                 ವಿಜ್ಞಾನದ ಪಾಠ ಹೇಳುವ ಹಂಪಿ*

*ಕೃಪೆ:ಆರ್.ಬಿ. ಗುರುಬಸವರಾಜ.ಶಿಕ್ಷಕರು. ಹೊಳಗುಂದಿ*

ಹಂಪಿ ಎಂದಾಕ್ಷಣ ಹಾಳಾದ ಕಲ್ಲಿನ ಕೆತ್ತನೆಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ. ಹಂಪಿ ಅದೆಷ್ಟೇ ಹಾಳಾಗಿದ್ದರೂ ಅಳಿದುಳಿದ ಶಿಲ್ಪಗಳನ್ನು ನೋಡುವುದೇ ಸೊಗಸು. ಏಕೆಂದರೆ ಹಂಪೆಯ ಶಿಲ್ಪಕಲೆಯೊಳಗೆ ಅಡಗಿದ ವಿಜ್ಞಾನ ಮತ್ತು ತಂತ್ರಜ್ಞಾನ ಎಂಥವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ. ಈ ಕಾರಣಕ್ಕೆ ಇಂದಿಗೂ ಪ್ರವಾಸಿಗರ ಆಕರ್ಷಣೆಯ ತಾಣ. ಇತ್ತೀಚೆಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ. ಹಾಗಾದರೆ ಹಂಪಿಯೊಳಗಿನ ವಿಜ್ಞಾನ ಮತ್ತು ತಂತ್ರಜ್ಞಾನ ಯಾವುದು ಎಂದು ತಿಳಿಯುವ ಬನ್ನಿ.

*ತಲೆ ಕೆಳಗಾದ ಗೋಪುರ*

ಇದೇನಿದು? ಗೋಪುರ ಎಲ್ಲಾದರೂ ತಲೆ ಕೆಳಗಾಗಲು ಸಾಧ್ಯವೇ? ಎಂದು ಹುಬ್ಬೇರಿಸಬೇಡಿ. ಇಂತಹ ಒಂದು ವಿಜ್ಞಾನದ ಮಾದರಿ ಹಂಪಿಯಲ್ಲಿದೆ. ಹಂಪಿಯ ವಿರುಪಾಕ್ಷ ದೇವಾಲಯದ ಆವರಣದಲ್ಲಿ ಇಂತಹ ಒಂದು ಚಮತ್ಕಾರ ಅಡಗಿದೆ. ದೇವಾಲಯದ ಹಿಂಭಾಗದಲ್ಲಿ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಹಿಂದಿನ ಬಾಗಿಲನ್ನು ತಲುಪುವ ಮೊದಲೇ ಬಲಭಾಗದಲ್ಲಿ ಕತ್ತಲೆಯ ಕಟ್ಟೆಯೊಂದು ಕಾಣುತ್ತದೆ. ಅಲ್ಲಿಗೆ ನೀವು ಹೋದರೆ ಗೋಡೆಯ ಮೇಲೆ ಗೋಪುರದ ತಲೆ ಕೆಳಗಾದ ನೆರಳನ್ನು ಕಾಣಬಹುದು. ಆ ನೆರಳಿಗೆ ಎದುರಾದ ಗೋಡೆಯ ಮೇಲೆ ಕಿಂಡಿಯೊಂದಿದೆ. ಆ ಕಿಂಡಿಯಿಂದ ಹಾಯ್ದುಬಂದ ಸೂರ್ಯನ ಕಿರಣ ದೂರದ ರಾಯಗೋಪುರದ ನೆರಳನ್ನು ತಲೆ ಕೆಳಗಾಗಿ ಬೀಳುವಂತೆ ಮಾಡುತ್ತದೆ. ಇಂದಿನ ಪಿನ್ ಹೋಲ್ ಕ್ಯಾಮರಾದಲ್ಲಿರುವ ತಂತ್ರಜ್ಞಾನವನ್ನು ಅಂದಿನವರು ತಿಳಿದಿದ್ದರು ಎಂಬುದಕ್ಕೆ ಸಾಕ್ಷಿ. 1685ರಲ್ಲಿ ಪಿನ್ ಹೋಲ್ ಕ್ಯಾಮರಾ ಆವಿಷ್ಕರಿಸಲಾಯಿತು. ಆದರೆ ಇದಕ್ಕೂ ಮೊದಲೇ ದೇವಸ್ಥಾನ ನಿರ್ವಣದಲ್ಲಿ ಈ ತಂತ್ರಜ್ಞಾನ ಬಳಸಿರುವುದು ಅಚ್ಚರಿಯಲ್ಲವೇ? 165 ಅಡಿ ಎತ್ತರವಿರುವ ರಾಯ ಗೋಪುರದ ನೆರಳು 300 ಅಡಿ ದೂರದಲ್ಲಿರುವ ಸಣ್ಣ ರಂಧ್ರದ ಮೂಲಕ ಹಾಯ್ದು ನೆರಳನ್ನು ಉಂಟುಮಾಡುವ ಪ್ರಕ್ರಿಯೆ ವಿಸ್ಮಯವೇ ಸರಿ. ಇದನ್ನು ಹಗಲಿನ ಎಲ್ಲಾ ಸಮಯದಲ್ಲೂ ನೋಡಬಹುದು.

*ಕಲ್ಲಿನ ರಥವೂ… ಶಿಲೆಗಳ ಸಂಗೀತವೂ….*

ಕಟ್ಟಿಗೆ ಅಥವಾ ಲೋಹದ ರಥಗಳು ನೋಡಲು ಸಾಕಷ್ಟು ದೊರೆಯುತ್ತವೆ. ಆದರೆ ಕಲ್ಲಿನ ರಥ ನೋಡಲು ನೀವು ಹಂಪಿಗೆ ಬರಬೇಕು. ಇದೇ ಹಂಪಿಯ ಹೆಗ್ಗುರುತು. ಹೌದು ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಆವರಣದಲ್ಲಿನ ಕಲ್ಲಿನ ತೇರನ್ನು ಕೋನಾರ್ಕದ ಸೂರ್ಯ ದೇವಾಲಯದಲ್ಲಿನ ಕಲ್ಲಿನ ರಥವನ್ನು ಹೋಲುವಂತೆ ಏಕಶಿಲೆಯಿಂದ ಕೆತ್ತಿರುವುದೇ ವಿಶೇಷ. ಪ್ರಾರಂಭದಲ್ಲಿ ಇದಕ್ಕೆ ಕಲ್ಲಿನ ಗೋಪುರ ಇತ್ತೆಂದು ತಿಳಿದು ಬರುತ್ತದೆ. ಆದರೆ ವಿದೇಶಿಗರ ದಾಳಿ ಹಾಗೂ ಇನ್ನಿತರೇ ಕಾರಣಗಳಿಂದ ಅದು ಹಾಳಾಗಿದೆ. ಈ ಕಲ್ಲಿನ ರಥದಲ್ಲಿನ ವಿಜ್ಞಾನ ಎಂದರೆ ಇದಕ್ಕೆ ಬಳಸಿದ ಬಣ್ಣ. ಇದನ್ನು ಕೆತ್ತಿದಾಗ ಇದರ ಹೊರಮೈಗೆ ನೈಸರ್ಗಿಕ ಬಣ್ಣ ಬಳಿಯಲಾಗಿತ್ತು. ಅದು ಮಳೆ, ಗಾಳಿ, ಬಿಸಿಲುಗಳಿಗೆ ಮಾಸಿ ಹೋಗಿದೆ. ಆದರೆ ಬಿಸಿಲು ಮತ್ತು ಮಳೆ ನೀರು ಬೀಳದ ಸ್ಥಳಗಳಲ್ಲಿ ಈಗಲೂ ನೈಸರ್ಗಿಕ ಬಣ್ಣವನ್ನು ಕಾಣಬಹುದು. 500 ವರ್ಷಗಳ ಹಿಂದೆ ಬಳಿದ ಬಣ್ಣ ಇಂದಿಗೂ ಉಳಿದಿರುವುದು ಅಂದಿನವರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಕ್ಷಿ.

ಕಲ್ಲಿನ ಸಂಗೀತ ಕಂಬಗಳು ಒಟ್ಟು 56 ಇದ್ದು, ಎಲ್ಲ ಕಂಬಗಳು ಸಂಗೀತದ ನಾದ ಹೊರಡಿಸುತ್ತಿವೆ. ಈ ಕಂಬಗಳು ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಕಲ್ಲಿನಿಂದ ಬಂಧಿಸಿದ್ದು, ಮಧ್ಯಭಾಗದ ಮೂರ್ನಾಲ್ಕು ಅಡಿ ಉದ್ದ ಮತ್ತು 8-10 ಇಂಚು ದಪ್ಪದ ಕಲ್ಲಿನ ಕಂಬದಿಂದ ಸಂಗೀತನಾದ ಹೊಮ್ಮುತ್ತದೆ. ಇವು ಗಟ್ಟಿ ಶಿಲೆಯ ಕಲ್ಲುಗಳಾಗಿದ್ದು ಮಧ್ಯಭಾಗವನ್ನು ಕೈಬೆರಳಿನಿಂದ ಬಾರಿಸಿದಾಗ ಸಂಗೀತದ ನಾದ ಹೊರಹೊಮ್ಮುತ್ತದೆ. ಅಂದರೆ ಶಿಲೆಯಲ್ಲಿ ಉಂಟಾದ ಕಂಪನವು ನಾದದ ರೀತಿಯಲ್ಲಿ ಕೇಳಿಸುತ್ತದೆ. ಬೆರಳಿನಿಂದ ಬಾರಿಸಲು ಬೆರಳು ಗಟ್ಟಿಯಾಗಿರಬೇಕು ಮತ್ತು ಬಾರಿಸುವ ಕಲೆ ತಿಳಿದಿರಬೇಕು. ಇತ್ತೀಚೆಗೆ ಪ್ರವಾಸಿಗರ ಹಾವಳಿ ಹೆಚ್ಚಾಗಿದ್ದರಿಂದ ಇದಕ್ಕೆ ನಿರ್ಭಂದವಿದೆ.

*ಹವಾಮಹಲ್*

ಇಡೀ ಹಂಪಿ ಪ್ರದೇಶವು ವರ್ಷವಿಡೀ ಹೆಚ್ಚುಕಾಲ ಬಿಸಿಲಿನಿಂದ ಕೂಡಿರುತ್ತದೆ. ತಮ್ಮ ಕುಟುಂಬವನ್ನು ಇಂತಹ ಬಿಸಿಲ ಬೇಗೆಯಿಂದ ರಕ್ಷಿಸಲು ಅಂದಿನ ರಾಜರು ವಿಶೇಷ ಮಹಲ್ ಕಟ್ಟಿಸಿದರು. ಇದೇ ಕಮಲ್​ವುಹಲ್ ಎಂದು ಹೆಸರುವಾಸಿಯಾದ ಹವಾಮಹಲ್. ಎಲ್ಲ ದಿಕ್ಕಿನಿಂದಲೂ ಗಾಳಿ ಬರುವಂತೆ ಇದನ್ನು ನಿರ್ವಿುಸಲಾಗಿದೆ. ಇದರ ಮೇಲಂತಸ್ತಿನ ಕಟ್ಟಡದ ಒಳಗೋಡೆಗಳಲ್ಲಿ ಸದಾ ನೀರು ಸಂಚರಿಸಲು ನಳಿಕೆಗಳನ್ನು ಅಳವಡಿಸಲಾಗಿದೆ. ಬೇಸಿಗೆಯಲ್ಲಿ ಈ ನಳಿಕೆಗಳಿಗೆ ನೀರು ತುಂಬಿಸಲಾಗುತ್ತದೆ. ಗಾಳಿ ಬೀಸಿದಾಗ ನೀರ ನಳಿಕೆಗಳು ತಂಪುಗೊಂಡು ಇಡೀ ಕಟ್ಟಡ ತಂಪಾಗಿರುತ್ತದೆ. ಇದು ಇಂದಿನ ಹವಾನಿಯಂತ್ರಿತ ಕೊಠಡಿ ತಂತ್ರಗಾರಿಕೆಯ ದ್ಯೋತಕ. ಇಡೀ ಕಟ್ಟಡವನ್ನು ಕಮಲದ ಆಕಾರದ ಕಮಾನುಗಳಿಂದ ಕಟ್ಟಲಾಗಿದೆ. ಆದ್ದರಿಂದ ಇದಕ್ಕೆ ಕಮಲಮಹಲ್ ಎಂಬ ಹೆಸರು ಬಂದಿದೆ.

*ಜಲ ಸಂಗ್ರಾಹಕ ಪುಷ್ಕರಣಿ*

ವಿಜಯನಗರ ಅರಸರು 600 ವರ್ಷಗಳ ಹಿಂದೆಯೇ ಜಲ ಸಂರಕ್ಷಣೆ ಬಗ್ಗೆ ತಿಳಿದಿದ್ದರು ಎಂಬುದಕ್ಕೆ ಪುಷ್ಕರಣಿಯೇ ಸಾಕ್ಷಿ. ವರ್ಷವಿಡೀ ನೀರಿನ ಕೊರತೆಯಾಗದಂತೆ ತುಂಗಭದ್ರಾ ನದಿಯಿಂದ ಕಾಲುವೆಗಳ ಮೂಲಕ ನೀರನ್ನು ತಂದು ಈ ಪುಷ್ಕರಣಿಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಬಳಸಲು ಅನುಕೂಲವಾಗುವಂತೆ ಕಲ್ಲಿನ ಕಾಲುವೆಗಳನ್ನು ನಿರ್ವಿುಸಿರುವುದು ಜಲ ಸಂರಕ್ಷಣೆ ಮತ್ತು ಸದ್ಬಳಕೆ ಬಗ್ಗೆ ಅವರಿಗಿದ್ದ ಕಾಳಜಿ ತೋರಿಸುತ್ತದೆ.

*ಸ್ವಿಮ್ಮಿಂಗ್ ಫೂಲ್ ಮಾದರಿಯ ಸ್ನಾನಗೃಹ*

ಆಧುನಿಕ ತಂತ್ರಜ್ಞಾನ ಮಾದರಿಯ ಸ್ವಿಮ್ಮಿಂಗ್ ಫೂಲನ್ನು ಅಂದೇ ವ್ಯವಸ್ಥಿತವಾಗಿ ಕಟ್ಟಲಾಗಿತ್ತು. ಅದಕ್ಕೆ ರಾಣಿಯರ ಸ್ನಾನಗೃಹ ಎಂದು ನಾಮಕರಣ ಮಾಡಲಾಗಿದೆ. ಈ ಸ್ನಾನಗೃಹಕ್ಕೆ ಕಾಲುವೆಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಕಲುಷಿತ ನೀರು ಹೊರಹೋಗಲು ಮತ್ತು ಶುದ್ಧ ನೀರನ್ನು ಒಳಗೆ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಕಟ್ಟಡದ ಒಳಭಾಗದ ಪ್ರಾಂಗಣದಲ್ಲಿ ರಾಣಿಯರು ಬಟ್ಟೆ ಬದಲಾಯಿಸಿಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಕಮಾನು ಕಟ್ಟೆಗಳನ್ನು ಕಟ್ಟಲಾಗಿದೆ. ಇದು ಇಂದಿನ ಸ್ವಿಮ್ಮಿಂಗ್ ಫೂಲ್​ಗಳ ತಂತ್ರಗಾರಿಕೆಯ ಕುಶಲತೆಯ ಪ್ರತೀಕ.

*ಶೌಚಗೃಹ*

ಶೌಚಗೃಹದ ಬಳಕೆ ವಿಜಯನಗರ ಕಾಲದಲ್ಲೇ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಮಹಾನವಮಿ ದಿಬ್ಬದ ಬಳಿಯ ಪ್ರಾಂಗಣದಲ್ಲಿ ದೊರೆತ ಶೌಚಗೃಹಗಳೇ ಸಾಕ್ಷಿ. ಅವರು ನೈರ್ಮಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು ಎಂಬುದು ತಿಳಿಯುತ್ತದೆ.

*ರಕ್ಷಣೆಗಾಗಿ ಕಾವಲು ಗೋಪುರಗಳು*

ನಮ್ಮ ಇಂದಿನ ರಕ್ಷಣಾ ವ್ಯವಸ್ಥೆಗಿಂತ ಉತ್ತಮವಾದ ರಕ್ಷಣಾ ತಂತ್ರಗಾರಿಕೆ ವ್ಯವಸ್ಥೆಯನ್ನು ವಿಜಯನಗರ ಅರಸರು ಅಳವಡಿಸಿಕೊಂಡಿರುವುದಕ್ಕೆ ಅನೇಕ ಸಾಕ್ಷ್ಯಗಳು ದೊರೆಯುತ್ತವೆ. ವಿದೇಶಿಗರ ದಾಳಿ ತಿಳಿಯಲು ಹಾಗೂ ವಿವಿಧ ಭಾಗಗಳಿಂದ ಕೋಟೆಯೊಳಗೆ ಆಗಮಿಸುವವರ ಬಗ್ಗೆ ತಿಳಿಯಲು ಹಂಪಿಯ ಪ್ರದೇಶಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ವಿುಸಲಾಗಿತ್ತು. ಒಟ್ಟು 520 ವೀಕ್ಷಣಾ ಗೋಪುರಗಳನ್ನು ನಿರ್ವಿುಸಿದ್ದರೆಂದು ತಿಳಿದು ಬರುತ್ತದೆ. ಈ ಗೋಪುರಗಳಲ್ಲಿ ಕಾವಲುಗಾರರು ಹಗಲು ರಾತ್ರಿ ಕಾವಲು ಕಾಯ್ದು ದೇಶ ರಕ್ಷಿಸುತ್ತಿದ್ದರು.

*ಶಿಲೆಗಳ ಸರಬರಾಜು*

ಹಂಪಿಯಲ್ಲಿ ಕಲ್ಲು ಬಂಡೆಗಳನ್ನು ಒಡೆಯುವಲ್ಲಿಯೂ ವಿಜ್ಞಾನದ ತಂತ್ರಗಾರಿಕೆ ಅನುಸರಿಸಲಾಗಿದೆ. ಕಲ್ಲು ಬಂಡೆಗಳಲ್ಲಿ ನೇರವಾದ ಸಾಲಿನಲ್ಲಿ ಅಲ್ಲಲ್ಲಿ ರಂಧ್ರ ಹಾಕುತ್ತಿದ್ದರು. ಅದಕ್ಕೆ ಸರಿಯಾಗುವಂತೆ ಒಣ ಕಟ್ಟಿಗೆಯ ತುಂಡನ್ನು ಕೆತ್ತಿ ರಂದ್ರ ಮುಚ್ಚುತ್ತಿದ್ದರು ಮತ್ತು ಅದಕ್ಕೆ ಆಗಾಗ್ಗೆ ನೀರನ್ನು ತುಂಬುತ್ತಿದ್ದರು. ಕಾಲಕ್ರಮೇಣ ಕಟ್ಟಿಗೆಯ ತುಂಡು ವಿಸ್ತರಿಸಿ ಕಲ್ಲುಗಳನ್ನು ಸೀಳುವಂತೆ ಮಾಡುತ್ತಿತ್ತು. ಹೀಗೆ ಕಲ್ಲುಗಳನ್ನು ಸೀಳಿ ಆನೆಗಳ ಸಹಾಯದಿಂದ ದೇಗುಲಗಳ ಬಳಿ ಸಾಗಿಸುತ್ತಿದ್ದರು. ಹಂಪಿಯ ಹೊರಭಾಗದಲ್ಲಿನ ಪರ್ವತಗಳ ಕಲ್ಲನ್ನು ನೋಡಿದರೆ ಕಲ್ಲುಗಳನ್ನು ಹೇಗೆ ಸೀಳಿದ್ದರು ಎಂಬುದನ್ನು ಗಮನಿಸಬಹುದು.

*ಗಾರೆಯ ಸಂಬಂಧ*

ಹಂಪಿಯ ಬಹುತೇಕ ದೇವಾಲಯಗಳ ನಿರ್ಮಣದಲ್ಲಿ ಸುಟ್ಟ ಇಟ್ಟಿಗೆ ಮತ್ತು ಗಾರೆ ಬಳಸಲಾಗಿದೆ. ಒಂದು ಭಾಗ ಸುಣ್ಣ, ಎರಡು ಭಾಗ ಮರಳು, ಒಂದು ಭಾಗ ಬೆಲ್ಲ ಮತ್ತು ಅರ್ಧಭಾಗ ಅಂಟುವಾಳಕಾಯಿ ಮಿಶ್ರಣಗಳನ್ನು ನುಣ್ಣಗೆ ಅರೆದು ಗಾರೆ ತಯಾರಿಸಲಾಗುತ್ತದೆ. ಇದು ಇಂದಿನ ಸಿಮೆಂಟಿಗಿಂತಲೂ ಗಟ್ಟಿ ಹಾಗೂ ಬಹುಕಾಲ ಬಾಳಿಕೆ ಬರುತ್ತದೆ. ರಾಣಿಯರ ಸ್ನಾನಗೃಹ, ಕಮಲಮಹಲು, ಕಾವಲು ಗೋಪುರಗಳ ಗೋಡೆಗಳಿಗೆ ಹಾಗೂ ಆನೆಲಾಯ, ಮಾಲ್ಯವಂತ ರಘುನಾಥ ದೇವಾಲಯ, ವಿಠ್ಠಲ ದೇವಸ್ಥಾನ, ಅಚ್ಯುತರಾಯ ದೇವಾಲಯ, ಪಟ್ಟಾಭಿರಾಮ ದೇವಾಲಯಗಳಲ್ಲಿನ ಶಿಖರ(ಗೋಪುರ)ಗಳಲ್ಲಿ ಗಾರೆಯನ್ನು ಬಳಸಲಾಗಿದೆ.
Share:

ಯಾರು ? ಎಲ್ಲಿ ? ಯಾಕೆ ? ಯಾವಾಗ ?

HISTORY ..........🌹
✍
ಮಾಹಿತಿ ವೇದಿಕೆ ..

 1)ಜುಮಾ ಮಸೀದಿ ಎಲ್ಲಿದೆ?
* ವಿಜಯಪುರ.
2) ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು?
* ಪಶ್ಚಿಮ ಬಂಗಾಳ.
3) 'ಸೂರ್ ಸಾಗರ' ರಚಿಸಿದರು ಯಾರು?
* ಸೂರ್ ದಾಸ್.
4) ವಿದ್ಯಾಶಂಕರ ದೇವಾಲಯ ಎಲ್ಲಿದೆ?
* ಶೃಂಗೇರಿ.
5) ಮದ್ರಸಾ ಸ್ಥಾಪನೆಯಾದದ್ದು ಯಾವಾಗ?
* 1461.
6) "ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು
ಯಾರು?
* ಕಬೀರ್ ದಾಸ್.
7) ಸಾವಿರ ಕಂಬದ ಬಸದಿ ಎಲ್ಲಿದೆ?
* ಮೂಡಬಿದರೆ.
8) ಕುಮಾರವ್ಯಾಸನ ಮೊದಲ ಹೆಸರೇನು?
* ನಾರಣಪ್ಪ.
9) ಅಸಾರ್ ಮಹಲ್ ಎಲ್ಲಿದೆ?
* ವಿಜಯಪುರ.
10) ಕೃಷ್ಣದೇವರಾಯ ಯಾವ ವಂಶದವನು?
* ತುಳುವ.
11) ಬಂದೇನವಾಜರ ದರ್ಗಾ ಎಲ್ಲಿದೆ?
* ಗುಲ್ಬರ್ಗ.
12) ಬಹಮನಿ ವಂಶದಲ್ಲೇ ಶ್ರೇಷ್ಟ ಅರಸ ಯಾರು?
* ಫಿರೋಜ್ ಷಾ.
13) ಬಹಮನಿಗಳ ಮೊದಲ ರಚನೆ ಯಾವುದು?
* ಗುಲ್ಬರ್ಗದ ಜಾಮೀ ಮಸೀದಿ.
14) ಪಾಂಡ್ಯ : ತಮಿಳುನಾಡು :: ಕಾಕತೀಯ : -----.
* ಆಂಧ್ರಪ್ರದೇಶ.
15) "ಭರತೇಶ ವೈಭವ" ಕೃತಿಯ ಕರ್ತೃ ಯಾರು?
* ರತ್ನಾಕರ ವರ್ಣಿಯ.
16) ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ
ಎಷ್ಟನೇಯದು?
* ನಾಲ್ಕನೇಯದು.
17) ವಿಜಯನಗರದ ಮೊದಲ ಇಬ್ಬರು ಅರಸರು
ಯಾರು?
* ಹರಿಹರ ಮತ್ತು ಬುಕ್ಕ.
18) ಪ್ರೌಢ ದೇವರಾಯ ಯಾವ ವಂಶದವನು?
* ಸಂಗಮ.
19) "ಮುಕ್ತಿಗೆ ಭಕ್ತಿಯೊಂದೇ ದಾರಿ"
ಎಂದವರು ಯಾರು?
* ಶ್ರೀ ಚೈತನ್ಯರು.
20) ತುಲಸೀದಾಸರ ಪ್ರಸಿದ್ಧ ಕಾವ್ಯ ಯಾವುದು?
* ರಾಮಚರಿತಮಾನಸ.
21) ಸಿಖ್ಖರ ಪವಿತ್ರ ಗ್ರಂಥ ಯಾವುದು?
* ಗ್ರಂಥ ಸಾಹೇಬ್.
ರಕ್ಕಸ ತಂಗಡಿ ಕದನ ನಡೆದ ದಿನಾಂಕ ಯಾವುದು?
* ಜನವರಿ 23, 1565.
23) ಪರ್ಷಿಯ ದೇಶದ ಭಾಷೆ ಯಾವುದು?
* ಪಾರಸಿ.
24) ಮಾಲಿಕ್-ಇ-ಮೈದಾನ್ ಫಿರಂಗಿ ಎಲ್ಲಿದೆ?
* ವಿಜಯಪುರ.
25) ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದದ್ದು ಯಾವಾಗ?
* 1336 ರಲ್ಲಿ.
26) ಸಲೀಮ್ ಚಿಸ್ತಿಯ ಗೋರಿ ಎಲ್ಲಿದೆ?
* ಆಗ್ರಾ.
27) ರತನ್ ಸಿಂಗನ ಒಬ್ಬಳೇ ಮಗಳು ಯಾರು?
* ಮೀರಾಬಾಯಿ.
28) 'ಆಮುಕ್ತ ಮೌಲ್ಯದ' ಯಾವ ಭಾಷೆಯಲ್ಲಿದೆ?
* ತೆಲುಗು.
29) 'ಜಾಂಬವತಿ ಕಲ್ಯಾಣ' ಯಾವ ಭಾಷೆಯಲ್ಲಿದೆ?
* ಸಂಸ್ಕೃತ.
30) ಅಬ್ದುಲ್ ರಜಾಕ್ ಯಾವ ದೇಶದ ಪ್ರವಾಸಿಗ?
* ಪರ್ಶಿಯಾ (ಇರಾನ್).
31) ಬಹಮನಿ ರಾಜ್ಯವು ಉದಯಿಸಿದ್ದು ಯಾವಾಗ?
* 1347 ರಲ್ಲಿ.
32) 'ಸೋಲಾಖಾಂಬ್ ಮಸೀದಿ' ಎಲ್ಲಿದೆ?
* ಬೀದರ್.
33) "ಇಬ್ರಾಹಿಂ ರೋಜಾ" ಎಲ್ಲಿದೆ?
* ವಿಜಯಪುರ.
34) 'ಕಲಿಯುಗದ ರಾಧಾ' ಯಾರು?
* ಮೀರಾಬಾಯಿ.
35) ಯಾವ ದೇವಾಲಯದ ಮುಂಭಾಗದಲ್ಲಿ ಏಕಶಿಲಾರಥವಿದೆ?
* ವಿಠ್ಠಲಸ್ವಾಮಿ ದೇವಾಲಯ.
36) ಮದರಸಾದ ಉದ್ದವೇಷ್ಟು?
* 76 ಮೀ.( 250 ಅಡಿ).
37) ಝರಾ ಎಂದರೆ -----.
* ಸಿಹಿನೀರಿನ ಬುಗ್ಗೆ.
38) ಮೀರಬಾಯಿಯ ಆರಾಧ್ಯದೈವನಾರು?
* ಕೃಷ್ಣ.
39) "ಕನ್ನಡರಾಜ್ಯರಮಾರಮಣ" ಇದು ಯಾರ ಬಿರುದು?
* ಕೃಷ್ಣದೇವರಾಯ.
40) ಡೋಮಿಂಗೋ ಪಾಯಸ್ ಯಾವ ದೇಶದ ಪ್ರವಾಸಿಗ?
* ಪೋರ್ಚಗೀಸ್.
41) ಚಾಮರಸನ ಪ್ರಮುಖ ಕೃತಿ ಯಾವುದು?
* ಪ್ರಭುಲಿಂಗಲೀಲೆ.
42) 'ಪ್ರಭುಲಿಂಗಲೀಲೆ' ಯಾರ ಚರಿತ್ರೆಯಾಗಿದೆ?
* ಅಲ್ಲಮಪ್ರಭು.
43) ಸೂಫಿ ಪಂಥದ ಸ್ಥಾಪಕ ಯಾರು?
* ಮುಯಿನುದ್ದೀನ್ ಚಿಸ್ತಿಯ.
44) ಮೀರಬಾಯಿಯು ಪೂಜಿಸುತ್ತಿದ್ದ ದೇವರ ಹೆಸರೇನು?
* ಗಿರಿಧರ ಗೋಪಾಲ.
45) ಸೂಫಿ ಪಂಥದಲ್ಲಿ ಯಾವ ಪಂಗಡ
ಪ್ರಮುಖವಾದದ್ದು?
* ಚಿಸ್ತಿಯ.
46) ಹೊಯ್ಸಳ : ಕರ್ನಾಟಕ :: ಸೇವುಣ :-----.
* ಮಹಾರಾಷ್ಟ್ರ.
47) ಕೃಷ್ಣದೇವರಾಯನ ಆಳ್ವಿಕೆಯ ಕಾಲ ತಿಳಿಸಿ?
* 1509-1529.
48) ಬಹಮನಿ ಆಳ್ವಿಕೆ ಮಾಡಿದ ಬಿಜಾಪುರದ ರಾಜ್ಯ ಯಾವುದು?
* ಆದಿಲ್ ಷಾಹಿ.
49) 'ಗಗನ ಮಹಲ್' ಎಲ್ಲಿದೆ?
* ವಿಜಯಪುರ.
50) ಗೋಲಗುಂಬಜ ರಚನೆಯಾದದ್ದು ಯಾವಾಗ?
* ಸುಮಾರು 1650 ರಲ್ಲಿ.
51) "ಕಿತಾಬ್-ಇ-ನವರಸ್" ಪುಸ್ತಕ ಯಾವ ಭಾಷೆಯಲ್ಲಿದೆ?
* ಉರ್ದು.
52) ಬಿಜಾಪುರದ ಸುಲ್ತಾನರಲ್ಲಿ ಶ್ರೇಷ್ಠನಾದವನು ಯಾರು?
* ಎರಡನೇ ಇಬ್ರಾಹಿಂ.
53) "ಕರ್ನಾಟಕ ಸಂಗೀತ ಪಿತಾಮಹ" ಯಾರು?
* ಪುರಂದರದಾಸರು.
54) "ನಳಚರಿತ್ರೆ" ಬರೆದವರು ಯಾರು?
* ಕನಕದಾಸರು.
55) "ಇಡೀ ಭಾರತದಲ್ಲಿ ಪ್ರೌಢ ದೇವರಾಯನಂತಹ
ಅರಸನಿಲ್ಲ" ಎಂದವನು ಯಾರು?
* ಅಬ್ದುಲ್ ರಜಾಕ್.
56) ವಿಜಯನಗರದ ರಾಜಲಾಂಛನ ಯಾವ
ವರಾಹ.
57) ವಿಜಯನಗರದ ಕುಲ ದೇವರು ಯಾರು?
* ಶ್ರೀ ವಿರೂಪಾಕ್ಷ.
58) "ಗದುಗಿನ ಭಾರತ" ಇದು ಯಾರ ಕೃತಿ?
* ಕುಮಾರವ್ಯಾಸ.
59) ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲ ತಿಳಿಸಿ?
* 1336-1646.
60) ದಖನ್ ಎಂದರೆ -----.
* ದಕ್ಷಿಣ ಭಾರತದ ಪ್ರದೇಶ.
61) ಗುರುನಾನಕ್ ರು ಬೀದರ್ ನಲ್ಲಿ ತಂಗಿದ್ದ
ಸ್ಥಳವನ್ನು ------ ಎಂದು ಕರೆಯುತ್ತಾರೆ?
* ನಾನಕ್ ಝರಾ

ಕೃಪೆ : what's up group
Share:

ಗಂಡುಗಲಿ ಕುಮಾರರಾಮ



ವಿಜಯನಗರ ಸಾಮ್ರಾಜ್ಯ ಸ್ಥಾಪಿಸುವ ಕನಸು ಕಂಡಿದ್ದ ಗಂಡುಗಲಿ ಕುಮಾರರಾಮ

ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ
Share:

ಅಂಬಾರಿ ಹೊತ್ತ ಆನೆಗಳ ಇತಿಹಾಸ


🐘🐘🐘🐘🐘🐘🐘🐘🐘
ಅಂಬಾರಿ ಹೊತ್ತ ಆನೆಗಳ ಇತಿಹಾಸ

ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿ

ಮೈಸೂರು ದಸರಾ ಅಂದರೆ
ನೆನಪಾಗುವುದು ಅಂಬಾರಿ ಮತ್ತು ಆನೆ.
ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ
ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ
ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ
ಮೊದಲು ಅಂಬಾರಿ ಹೊತ್ತ ಆನೆಯಾಗಿದೆ.
ಒಡೆಯರ್ ಕಾಲದಲ್ಲಿ ಪ್ರಾರಂಭವಾದ
ವಿಜಯದಶಮಿಯಿಂದ ಅಂದಾಜು 45 ವರ್ಷಗಳ
ಕಾಲ ಚಿನ್ನದ ಅಂಬಾರಿಯನ್ನು ಹೊತ್ತ
ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ
ಪಾತ್ರವಾಗಿತ್ತು. ಅರಮನೆಯ
ಮಹಾದ್ವಾರಗಳಲ್ಲೊಂದಾದ ಜಯಮಾರ್ತಾಂಡ
ದ್ವಾರಕ್ಕೆ ಈ ಆನೆ ಹೆಸರು ಇಡಲಾಗಿದೆ.
1902 ರಿಂದ ಅಂಬಾರಿ ಹೊತ್ತ ಆನೆಗಳೆಂದರೆ
🐘ವಿಜಯಬಹದ್ದೂರ್
🐘ನಂಜುಂಡ
🐘ರಾಮಪ್ರಸಾದ್
🐘ಮೋತಿಲಾಲ್
🐘ಸುಂದರ್ ರಾಜ್
🐘ಐರಾವತ
1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್
ಚಿತ್ರ 'ದಿ ಎಲಿಫೆಂಟ್ ಬಾಯ್'ಗೆ
ಬಳಸಿಕೊಳ್ಳಲಾಯಿತು ಆನೆಯ ಮಾವುತನೆ
ಚಿತ್ರದ ನಾಯಕ,ಚಿತ್ರ ಜಗತ್ತಿನಾದ್ಯಂತ
ಪ್ರದರ್ಶನಗೊಂಡಿತು. ಆ ಮಾವುತ
ಮತ್ಯಾರು ಅಲ್ಲ 7 ವರ್ಷದ ಹುಡುಗ
ಮೈಸೂರು ಸಾಬು.

🐘ಗಜೇಂದ್ರ
🐘ಬಿಳಿಗಿರಿ
ಇದು ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ
ದೈತ್ಯ ಆನೆಯಾಗಿದ್ದು ಇದರ ಎತ್ತರ 10.5
ಅಡಿ. ಸುಮಾರು 7 ಸಾವಿರ ಕೆ.ಜಿ. ಇತ್ತಂತೆ.
1975ರಲ್ಲಿ ಇದು ಮರಣ ಹೊಂದಿತ್ತು. ಇದರ
ಮಾವುತ ಗೌಸ್ ಅಂತ. ಬಿಳಿಗಿರಿ ಹೆಗ್ಗಳಿಕೆ ಏನೆಂದರೆ
ಇದೇ ಮಹಾರಾಜರನ್ನು ಹೊತ್ತೂಯ್ದು ಕೊನೇ ಆನೆ.

🐘ರಾಜೇಂದ್ರ,
ಗಂಧದ ಗುಡಿ' ಚಿತ್ರದಲ್ಲಿ ಡಾ. ರಾಜ್ ಆನೆಯ
ದಂತದ ಮೇಲೆ ಕುಳಿತು ಹಾಡುವ ಹಾಡುವ
ಹಾಡು ಯಾರಿಗೆ ತಾನೆ ನೆನಪಿಲ್ಲ.ಈ ಆನೆಯ
ಹೆಸರು ರಾಜೇಂದ್ರ.
ಚಿತ್ರದುದ್ದಕ್ಕೂ ಇದು ಭಾಗವಹಿಸಿದೆ. ಡಾ.
ರಾಜ್ಗೆ ಅಚ್ಚುಮೆಚ್ಚಿನ ಆನೆ ಕೂಡ.

🐘ದ್ರೋಣ
ದ್ರೋಣ 10.25 ಎತ್ತರದ ಆನೆ ದ್ರೋಣ.
ಅದು ಸುಮಾರು 6,400 ಕೆ.ಜಿ ತೂಕ
ಇತ್ತು.ದ್ರೋಣ ಆನೆ 18 ವರ್ಷ ಸತತವಾಗಿ
ಅಂಬಾರಿಗೆ ಬೆನ್ನುಕೊಟ್ಟ ಖ್ಯಾತಿ,
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ
ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್
ಟಿಪ್ಪುಸುಲ್ತಾನ್'ನ
ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದೂ ಇದೇ ದ್ರೋಣ,
1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಗುಲಿ
ದ್ರೋಣ ಸಾವನ್ನಪ್ಪಿತು.

🐘ಅರ್ಜುನ
ದ್ರೋಣ ನ ನಂತರ ಅರ್ಜುನ ಒಮ್ಮೆ ಅಂಬಾರಿ
ಹೊತ್ತಿದ್ದ ಆದರೆ ನಂತರದ ದಿನಗಳಲ್ಲಿ
ಮಾವುತನನ್ನು ಕೊಂದ ಆರೋಪದಲ್ಲಿ
ಅರ್ಜುನನನ್ನು ಉತ್ಸವದಿಂದ
ಹೊರಗುಳಿಸಲಾಯಿತು.

🐘ಬಲರಾಮ
ಅರ್ಜುನನ ನಂತರ ಬಲರಾಮನಿಗೆ ಅಂಬಾರಿ
ಹೊರಿಸಲಾಯಿತು,ಬಲರಾಮ ಶಾಂತ ಸ್ವಭಾವದ
ಆನೆ ಆಗಿದ್ದು 1987ರಲ್ಲಿ ಕಟ್ಟೆಪುರದಲ್ಲಿ
ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ,
ಪ್ರಶಾಂತ ಈ ಐದೂ ಆನೆಗಳನ್ನು ಹಿಡಿದಿದ್ದರು.
ಹನ್ನೊಂದು ವರ್ಷಗಳ ಕಾಲ ಅಂಬಾರಿ ಹೊತ್ತ
ಬಲರಾಮನಿಗೆ ಕಳೆದ ವರ್ಷ ನಿವೃತ್ತಿ ದೊರೆತಿದೆ.

🐘ಅರ್ಜುನ
ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ
ಹೊತ್ತಿದ್ದ ಅರ್ಜುನನ ಗುಣದಲ್ಲಿ ಸ್ವಲ್ಪ
ಕೀಟಲೆ ಸ್ವಭಾವವಿರುವ ಅರ್ಜುನನ ಮೇಲೆ
ಸಾಕಷ್ಟು ಟೀಕೆಗಳು ಬಂದಿತ್ತು ಆದರೂ ಬಲರಾಮನಿಗೆ
ವಯಸ್ಸಾದ ಕಾರಣ ಕಳೆದವರ್ಷದಿಂದ ಅಂಬಾರಿ
ಹೊರುವ ಜವಾಬ್ದಾರಿ ಅರ್ಜುನನಿಗೆ ನೀಡಲಾಗಿದೆ.
ಅರ್ಜನ ಬರೋಬ್ಬರಿ 5,535 ಕೆಜಿ
ತೂಕವನ್ನು ಹೊಂದುವ ಮೂಲಕ ತಂಡದ
ಎಲ್ಲಾ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ.

🐘🐘🐘🐘🐘🐘🐘🐘🐘
Share:

8th CSAS Chanakya (ಇತಿಹಾಸ)


Share:

ಪ್ರಮುಖ ಇಸ್ವಿಗಳು

🌹ಇತಿಹಾಸ

•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ  (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ
•1885 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 – ಗಾಂಧೀಯುಗ
•1920  - ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )
•1930 ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )
•1948  - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್  ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )
•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ
•1914-18 – ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ

       🌹 ರಾಜ್ಯಶಾಸ್ತ್ರ

•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ
•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )
•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ
•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ
•1986 – ಲೋಕಾಯುಕ್ತ ಅದಿನಿಯಮ ಜಾರಿಗೆ
•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )
•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ
•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ
•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ
•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ
•1946 – ಯುನೆಸ್ಕೋ ಸ್ಥಾಪನೆ
•1946 – ಯುನಿಸೆಫ್ ಸ್ಥಾಪನೆ
•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ
•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ
•1967 ಆಸಿಯನ್ ಸ್ಥಾಪನೆ
•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.

      🌹ಸಮಾಜಶಾಸ್ತ್ರ

•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ
•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ
•1989 (ಕಾಯ್ದೆ) -  ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ
•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )
•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ
•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ
•1961 – ವರದಕ್ಷಿಣೆ ನಿಷೇದ ಕಾಯ್ದೆ  ( 1986 ರಲ್ಲಿ ತಿದ್ದುಪಡಿ )
•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.

       🌹 ಅರ್ಥಶಾಸ್ತ್ರ

•1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )
•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುತ್ತದೆ )
•1951.ಏಪ್ರಿಲ್ 1 – ಮೊದಲ ಪಂಚವಾರ್ಷಿಕ ಯೋಜನೆ ಆರಂಭ
•1995.ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ ಬಂದಿತು.

ಸಮಾಜಶಾಸ್ತ್ರ
👆👆👆👆👆👆
ಸತಿ ಸಹಗಮನ ನಿಷೇಧ ಕಾಯ್ದೆ 1829

ವಿಧವ ಪುನರ್ ವಿವಾಹ ಕಾಯ್ದೆ 1856

ಅವಿವಾಹಿತ ಸ್ತ್ರೀ ಆಸ್ತಿ ಹಕ್ಕು ಕಾಯ್ದೆ 1874

ಬಾಲ್ಯ ವಿವಾಹ ನಿಷೇಧ ಕಾಯ್ದೆ 1929

ಹಿಂದು ವಿವಾಹ ಕಾಯ್ದೆ 1955

ಹಿಂದು ಉತ್ತರಾಧಿಕಾರ ಕಾಯ್ದೆ 1956

ಹಿಂದು ದತ್ತು ಮತ್ತು ಜೀವಾನಂಶ ಕಾಯ್ದೆ 1956

ಮಹಿಳೆ ಅನೈತಿಕ ವ್ಯಾಪಾರ ಕಾಯ್ದೆ 1956

ವರದಕ್ಷಿಣೆ ನಿಷೇಧ ಕಾಯ್ದೆ 1961

ಮಾತೃ ಸೌಲಭ್ಯ ಕಾಯ್ದೆ 1961

ಬಾಲ್ಯ ವಿವಾಹ ಪ್ರತಿಬಂಧಕ ಕಾಯ್ದೆ 1978

ಕುಟುಂಬ ನ್ಯಾಯಲಯದ ಕಾಯ್ದೆ 1984

ಸಮಾನ ವೇತನ ಕಾಯ್ದೆ 1976

ಗುಲಾಮಗಿರಿ ಕಾಯ್ದೆ 1843

ಶಿಶು ಹತ್ಯೆ ನಿಷೇಧ ಕಾಯ್ದೆ 1870

ವರದಕ್ಷಿಣೆ ತಿದ್ದುಪಡಿ ಕಾಯ್ದೆ 1986

ಮಧುವೆ ತಿದ್ದುಪಡಿ ಕಾಯ್ದೆ 2003

ವೇಶ್ಯಾವಾಟಿಕೆ ನಿಷೇಧ ಕಾಯ್ದೆ 1986

ಕೃಪೆ : what's up group

Share:

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು

🌷ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು 
👉ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ - ಹರಿಷೇಣ
👉 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ - ಅಲಹಾ ಬಾದ್ ಸ್ತಂಭ ಶಾಸನ
👉ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ - ಕೌಸಂಬಿ
👉 ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ - ಫೀರೋಜ್ ಷಾ ತುಘಲಕ್
👉 ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ - ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
👉 ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು - - ಮಿರತ್ ಶಾಸನ ಹಾಗೂ ತೋಪ್ರ ಶಾಸನ
👉ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ -ಕಂದಾಹಾರ್
👉ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ -ರುದ್ರದಾಮನ್
👉ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು - ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
👉 ತೆಲುಗಿನ ಪ್ರಥಮ ಶಾಸನ - ಕಲಿಮಲ್ಲ ಶಾಸನ
👉ತಮಿಳಿನ ಪ್ರಥಮ ಶಾಸನ - ಮಾಂಗುಳಂ ಶಾಸನ
👉 ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ - ಅಶೋಕ
👉ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ - ಬ್ರಾಹ್ಮಿ ಹಾಗೂ ಖರೋಷ್ಠಿ
👉. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ - 13 ನೇ ಶಿಲಾ ಶಾಸನ
👉. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು - •1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
👉 ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ - ಮಸ್ಕಿ ಶಾಸನ
👉 ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಕೊಪ್ಪಳ
👉. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ - ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
👉. ನಿಟ್ಟೂರಿನ ಶಾಸನದ ರಚನಾಕಾರ -  ಉಪಗುಪ್ತ
👉 ನಿಟ್ಟೂರಿನ ಶಾಸನದ ಲಿಪಿಕಾರ - ಚಡಪ
👉 ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ - 1950ರಲ್ಲಿ
👉. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ - ದೇವನಾಗರಿ
👉. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ - ಬಬ್ರುಶಾಸನ
👉. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ -  ಶಕರ ಪ್ರಸಿದ್ದ ಅರಸ ರುದ್ರಧಮನ
👉. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ -  ಸಂಜಾನ್ ದತ್ತಿ ಶಾಸನ
👉. ದಂತಿದುರ್ಗ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
👉 ಒಂದನೇ ಕೃಷ್ಣ - ಭಾಂಡ್ಕ ಮತ್ತು ತಾಳೇಗಾಂ ಶಾಸನ
👉. ಧೃವ - ಜೆಟ್ಟಾಯಿ ಶಾಸನ
👉ಅಮೋಘವರ್ಷ - ಸಂಜಾನ್ ತಾಮ್ರ ಶಾಸನ
👉 ಬಾದಾಮಿ ಶಾಸನದ ಕರ್ತೃ - 1 ನೇ ಪುಲಿಕೇಶಿ
👉. ಮಹಾಕೂಟ ಸ್ತಂಭ ಶಾಸನದ ಕರ್ತೃ - ಮಂಗಳೇಶ
👉ಮಹಾಕೂಟ ಸ್ತಂಭ ಶಾಸನ -  ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
👉ರವಿ ಕೀರ್ತೀ - ಐಹೋಳೆ ಶಾಸನ
👉 ಐಹೋಳೆ ಶಾಸನ -  ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
👉 ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ (ಚಿತ್ರದುರ್ಗ)
👉 ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ.
👉. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ
👉. ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ.
👉. ಹಲ್ಮಿಡಿ ಶಾಸನ ಇಲ್ಲಿ ಇರುವುದು - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
👉. ಹಲ್ಮಿಡಿ ಶಾಸನದ ಕರ್ತೃ -  ಕಾಕುಸ್ಥವರ್ಮ
👉 ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ
👉. ತಾಳಗುಂದ ಶಾಸನವನ್ನು ಬರೆಯಿಸಿದವರು  - ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
👉 ಮಹಿಪವೊಲು ತಾಮ್ರ ಶಾಸನದ ಕರ್ತೃ -ಶಿವಸ್ಕಂದ ವರ್ಮ .
👉 ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ .
👉. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
👉. ನಾನಾ ಘಾಟ್ ಶಾಸನದ ಕರ್ತೃ - ನಾಗನೀಕ .
👉. ಗುಹಾಂತರ ನಾಸಿಕ್ ಶಾಸನದ ಕರ್ತೃ - ಗೌತಮೀ ಬಾಲಾಶ್ರೀ
👉. ವೆಳ್ವಕುಡಿ ತಾಮ್ರ ಶಾಸನದ ಕರ್ತೃ - ಪರಾಂತಕ ಚೋಳ
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com