*🌻ಒಂದೋಳ್ಳೆ ಮಾಹಿತಿ🌻 ವಿಜ್ಞಾನದ ಪಾಠ ಹೇಳುವ ಹಂಪಿ*
*ಕೃಪೆ:ಆರ್.ಬಿ. ಗುರುಬಸವರಾಜ.ಶಿಕ್ಷಕರು. ಹೊಳಗುಂದಿ*
ಹಂಪಿ ಎಂದಾಕ್ಷಣ ಹಾಳಾದ ಕಲ್ಲಿನ ಕೆತ್ತನೆಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ. ಹಂಪಿ ಅದೆಷ್ಟೇ ಹಾಳಾಗಿದ್ದರೂ ಅಳಿದುಳಿದ ಶಿಲ್ಪಗಳನ್ನು ನೋಡುವುದೇ ಸೊಗಸು. ಏಕೆಂದರೆ ಹಂಪೆಯ ಶಿಲ್ಪಕಲೆಯೊಳಗೆ ಅಡಗಿದ ವಿಜ್ಞಾನ ಮತ್ತು ತಂತ್ರಜ್ಞಾನ ಎಂಥವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ. ಈ ಕಾರಣಕ್ಕೆ ಇಂದಿಗೂ ಪ್ರವಾಸಿಗರ ಆಕರ್ಷಣೆಯ ತಾಣ. ಇತ್ತೀಚೆಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ. ಹಾಗಾದರೆ ಹಂಪಿಯೊಳಗಿನ ವಿಜ್ಞಾನ ಮತ್ತು ತಂತ್ರಜ್ಞಾನ ಯಾವುದು ಎಂದು ತಿಳಿಯುವ ಬನ್ನಿ.
*ತಲೆ ಕೆಳಗಾದ ಗೋಪುರ*
ಇದೇನಿದು? ಗೋಪುರ ಎಲ್ಲಾದರೂ ತಲೆ ಕೆಳಗಾಗಲು ಸಾಧ್ಯವೇ? ಎಂದು ಹುಬ್ಬೇರಿಸಬೇಡಿ. ಇಂತಹ ಒಂದು ವಿಜ್ಞಾನದ ಮಾದರಿ ಹಂಪಿಯಲ್ಲಿದೆ. ಹಂಪಿಯ ವಿರುಪಾಕ್ಷ ದೇವಾಲಯದ ಆವರಣದಲ್ಲಿ ಇಂತಹ ಒಂದು ಚಮತ್ಕಾರ ಅಡಗಿದೆ. ದೇವಾಲಯದ ಹಿಂಭಾಗದಲ್ಲಿ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಹಿಂದಿನ ಬಾಗಿಲನ್ನು ತಲುಪುವ ಮೊದಲೇ ಬಲಭಾಗದಲ್ಲಿ ಕತ್ತಲೆಯ ಕಟ್ಟೆಯೊಂದು ಕಾಣುತ್ತದೆ. ಅಲ್ಲಿಗೆ ನೀವು ಹೋದರೆ ಗೋಡೆಯ ಮೇಲೆ ಗೋಪುರದ ತಲೆ ಕೆಳಗಾದ ನೆರಳನ್ನು ಕಾಣಬಹುದು. ಆ ನೆರಳಿಗೆ ಎದುರಾದ ಗೋಡೆಯ ಮೇಲೆ ಕಿಂಡಿಯೊಂದಿದೆ. ಆ ಕಿಂಡಿಯಿಂದ ಹಾಯ್ದುಬಂದ ಸೂರ್ಯನ ಕಿರಣ ದೂರದ ರಾಯಗೋಪುರದ ನೆರಳನ್ನು ತಲೆ ಕೆಳಗಾಗಿ ಬೀಳುವಂತೆ ಮಾಡುತ್ತದೆ. ಇಂದಿನ ಪಿನ್ ಹೋಲ್ ಕ್ಯಾಮರಾದಲ್ಲಿರುವ ತಂತ್ರಜ್ಞಾನವನ್ನು ಅಂದಿನವರು ತಿಳಿದಿದ್ದರು ಎಂಬುದಕ್ಕೆ ಸಾಕ್ಷಿ. 1685ರಲ್ಲಿ ಪಿನ್ ಹೋಲ್ ಕ್ಯಾಮರಾ ಆವಿಷ್ಕರಿಸಲಾಯಿತು. ಆದರೆ ಇದಕ್ಕೂ ಮೊದಲೇ ದೇವಸ್ಥಾನ ನಿರ್ವಣದಲ್ಲಿ ಈ ತಂತ್ರಜ್ಞಾನ ಬಳಸಿರುವುದು ಅಚ್ಚರಿಯಲ್ಲವೇ? 165 ಅಡಿ ಎತ್ತರವಿರುವ ರಾಯ ಗೋಪುರದ ನೆರಳು 300 ಅಡಿ ದೂರದಲ್ಲಿರುವ ಸಣ್ಣ ರಂಧ್ರದ ಮೂಲಕ ಹಾಯ್ದು ನೆರಳನ್ನು ಉಂಟುಮಾಡುವ ಪ್ರಕ್ರಿಯೆ ವಿಸ್ಮಯವೇ ಸರಿ. ಇದನ್ನು ಹಗಲಿನ ಎಲ್ಲಾ ಸಮಯದಲ್ಲೂ ನೋಡಬಹುದು.
*ಕಲ್ಲಿನ ರಥವೂ… ಶಿಲೆಗಳ ಸಂಗೀತವೂ….*
ಕಟ್ಟಿಗೆ ಅಥವಾ ಲೋಹದ ರಥಗಳು ನೋಡಲು ಸಾಕಷ್ಟು ದೊರೆಯುತ್ತವೆ. ಆದರೆ ಕಲ್ಲಿನ ರಥ ನೋಡಲು ನೀವು ಹಂಪಿಗೆ ಬರಬೇಕು. ಇದೇ ಹಂಪಿಯ ಹೆಗ್ಗುರುತು. ಹೌದು ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಆವರಣದಲ್ಲಿನ ಕಲ್ಲಿನ ತೇರನ್ನು ಕೋನಾರ್ಕದ ಸೂರ್ಯ ದೇವಾಲಯದಲ್ಲಿನ ಕಲ್ಲಿನ ರಥವನ್ನು ಹೋಲುವಂತೆ ಏಕಶಿಲೆಯಿಂದ ಕೆತ್ತಿರುವುದೇ ವಿಶೇಷ. ಪ್ರಾರಂಭದಲ್ಲಿ ಇದಕ್ಕೆ ಕಲ್ಲಿನ ಗೋಪುರ ಇತ್ತೆಂದು ತಿಳಿದು ಬರುತ್ತದೆ. ಆದರೆ ವಿದೇಶಿಗರ ದಾಳಿ ಹಾಗೂ ಇನ್ನಿತರೇ ಕಾರಣಗಳಿಂದ ಅದು ಹಾಳಾಗಿದೆ. ಈ ಕಲ್ಲಿನ ರಥದಲ್ಲಿನ ವಿಜ್ಞಾನ ಎಂದರೆ ಇದಕ್ಕೆ ಬಳಸಿದ ಬಣ್ಣ. ಇದನ್ನು ಕೆತ್ತಿದಾಗ ಇದರ ಹೊರಮೈಗೆ ನೈಸರ್ಗಿಕ ಬಣ್ಣ ಬಳಿಯಲಾಗಿತ್ತು. ಅದು ಮಳೆ, ಗಾಳಿ, ಬಿಸಿಲುಗಳಿಗೆ ಮಾಸಿ ಹೋಗಿದೆ. ಆದರೆ ಬಿಸಿಲು ಮತ್ತು ಮಳೆ ನೀರು ಬೀಳದ ಸ್ಥಳಗಳಲ್ಲಿ ಈಗಲೂ ನೈಸರ್ಗಿಕ ಬಣ್ಣವನ್ನು ಕಾಣಬಹುದು. 500 ವರ್ಷಗಳ ಹಿಂದೆ ಬಳಿದ ಬಣ್ಣ ಇಂದಿಗೂ ಉಳಿದಿರುವುದು ಅಂದಿನವರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಕ್ಷಿ.
ಕಲ್ಲಿನ ಸಂಗೀತ ಕಂಬಗಳು ಒಟ್ಟು 56 ಇದ್ದು, ಎಲ್ಲ ಕಂಬಗಳು ಸಂಗೀತದ ನಾದ ಹೊರಡಿಸುತ್ತಿವೆ. ಈ ಕಂಬಗಳು ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಕಲ್ಲಿನಿಂದ ಬಂಧಿಸಿದ್ದು, ಮಧ್ಯಭಾಗದ ಮೂರ್ನಾಲ್ಕು ಅಡಿ ಉದ್ದ ಮತ್ತು 8-10 ಇಂಚು ದಪ್ಪದ ಕಲ್ಲಿನ ಕಂಬದಿಂದ ಸಂಗೀತನಾದ ಹೊಮ್ಮುತ್ತದೆ. ಇವು ಗಟ್ಟಿ ಶಿಲೆಯ ಕಲ್ಲುಗಳಾಗಿದ್ದು ಮಧ್ಯಭಾಗವನ್ನು ಕೈಬೆರಳಿನಿಂದ ಬಾರಿಸಿದಾಗ ಸಂಗೀತದ ನಾದ ಹೊರಹೊಮ್ಮುತ್ತದೆ. ಅಂದರೆ ಶಿಲೆಯಲ್ಲಿ ಉಂಟಾದ ಕಂಪನವು ನಾದದ ರೀತಿಯಲ್ಲಿ ಕೇಳಿಸುತ್ತದೆ. ಬೆರಳಿನಿಂದ ಬಾರಿಸಲು ಬೆರಳು ಗಟ್ಟಿಯಾಗಿರಬೇಕು ಮತ್ತು ಬಾರಿಸುವ ಕಲೆ ತಿಳಿದಿರಬೇಕು. ಇತ್ತೀಚೆಗೆ ಪ್ರವಾಸಿಗರ ಹಾವಳಿ ಹೆಚ್ಚಾಗಿದ್ದರಿಂದ ಇದಕ್ಕೆ ನಿರ್ಭಂದವಿದೆ.
*ಹವಾಮಹಲ್*
ಇಡೀ ಹಂಪಿ ಪ್ರದೇಶವು ವರ್ಷವಿಡೀ ಹೆಚ್ಚುಕಾಲ ಬಿಸಿಲಿನಿಂದ ಕೂಡಿರುತ್ತದೆ. ತಮ್ಮ ಕುಟುಂಬವನ್ನು ಇಂತಹ ಬಿಸಿಲ ಬೇಗೆಯಿಂದ ರಕ್ಷಿಸಲು ಅಂದಿನ ರಾಜರು ವಿಶೇಷ ಮಹಲ್ ಕಟ್ಟಿಸಿದರು. ಇದೇ ಕಮಲ್ವುಹಲ್ ಎಂದು ಹೆಸರುವಾಸಿಯಾದ ಹವಾಮಹಲ್. ಎಲ್ಲ ದಿಕ್ಕಿನಿಂದಲೂ ಗಾಳಿ ಬರುವಂತೆ ಇದನ್ನು ನಿರ್ವಿುಸಲಾಗಿದೆ. ಇದರ ಮೇಲಂತಸ್ತಿನ ಕಟ್ಟಡದ ಒಳಗೋಡೆಗಳಲ್ಲಿ ಸದಾ ನೀರು ಸಂಚರಿಸಲು ನಳಿಕೆಗಳನ್ನು ಅಳವಡಿಸಲಾಗಿದೆ. ಬೇಸಿಗೆಯಲ್ಲಿ ಈ ನಳಿಕೆಗಳಿಗೆ ನೀರು ತುಂಬಿಸಲಾಗುತ್ತದೆ. ಗಾಳಿ ಬೀಸಿದಾಗ ನೀರ ನಳಿಕೆಗಳು ತಂಪುಗೊಂಡು ಇಡೀ ಕಟ್ಟಡ ತಂಪಾಗಿರುತ್ತದೆ. ಇದು ಇಂದಿನ ಹವಾನಿಯಂತ್ರಿತ ಕೊಠಡಿ ತಂತ್ರಗಾರಿಕೆಯ ದ್ಯೋತಕ. ಇಡೀ ಕಟ್ಟಡವನ್ನು ಕಮಲದ ಆಕಾರದ ಕಮಾನುಗಳಿಂದ ಕಟ್ಟಲಾಗಿದೆ. ಆದ್ದರಿಂದ ಇದಕ್ಕೆ ಕಮಲಮಹಲ್ ಎಂಬ ಹೆಸರು ಬಂದಿದೆ.
*ಜಲ ಸಂಗ್ರಾಹಕ ಪುಷ್ಕರಣಿ*
ವಿಜಯನಗರ ಅರಸರು 600 ವರ್ಷಗಳ ಹಿಂದೆಯೇ ಜಲ ಸಂರಕ್ಷಣೆ ಬಗ್ಗೆ ತಿಳಿದಿದ್ದರು ಎಂಬುದಕ್ಕೆ ಪುಷ್ಕರಣಿಯೇ ಸಾಕ್ಷಿ. ವರ್ಷವಿಡೀ ನೀರಿನ ಕೊರತೆಯಾಗದಂತೆ ತುಂಗಭದ್ರಾ ನದಿಯಿಂದ ಕಾಲುವೆಗಳ ಮೂಲಕ ನೀರನ್ನು ತಂದು ಈ ಪುಷ್ಕರಣಿಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಬಳಸಲು ಅನುಕೂಲವಾಗುವಂತೆ ಕಲ್ಲಿನ ಕಾಲುವೆಗಳನ್ನು ನಿರ್ವಿುಸಿರುವುದು ಜಲ ಸಂರಕ್ಷಣೆ ಮತ್ತು ಸದ್ಬಳಕೆ ಬಗ್ಗೆ ಅವರಿಗಿದ್ದ ಕಾಳಜಿ ತೋರಿಸುತ್ತದೆ.
*ಸ್ವಿಮ್ಮಿಂಗ್ ಫೂಲ್ ಮಾದರಿಯ ಸ್ನಾನಗೃಹ*
ಆಧುನಿಕ ತಂತ್ರಜ್ಞಾನ ಮಾದರಿಯ ಸ್ವಿಮ್ಮಿಂಗ್ ಫೂಲನ್ನು ಅಂದೇ ವ್ಯವಸ್ಥಿತವಾಗಿ ಕಟ್ಟಲಾಗಿತ್ತು. ಅದಕ್ಕೆ ರಾಣಿಯರ ಸ್ನಾನಗೃಹ ಎಂದು ನಾಮಕರಣ ಮಾಡಲಾಗಿದೆ. ಈ ಸ್ನಾನಗೃಹಕ್ಕೆ ಕಾಲುವೆಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಕಲುಷಿತ ನೀರು ಹೊರಹೋಗಲು ಮತ್ತು ಶುದ್ಧ ನೀರನ್ನು ಒಳಗೆ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಕಟ್ಟಡದ ಒಳಭಾಗದ ಪ್ರಾಂಗಣದಲ್ಲಿ ರಾಣಿಯರು ಬಟ್ಟೆ ಬದಲಾಯಿಸಿಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಕಮಾನು ಕಟ್ಟೆಗಳನ್ನು ಕಟ್ಟಲಾಗಿದೆ. ಇದು ಇಂದಿನ ಸ್ವಿಮ್ಮಿಂಗ್ ಫೂಲ್ಗಳ ತಂತ್ರಗಾರಿಕೆಯ ಕುಶಲತೆಯ ಪ್ರತೀಕ.
*ಶೌಚಗೃಹ*
ಶೌಚಗೃಹದ ಬಳಕೆ ವಿಜಯನಗರ ಕಾಲದಲ್ಲೇ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಮಹಾನವಮಿ ದಿಬ್ಬದ ಬಳಿಯ ಪ್ರಾಂಗಣದಲ್ಲಿ ದೊರೆತ ಶೌಚಗೃಹಗಳೇ ಸಾಕ್ಷಿ. ಅವರು ನೈರ್ಮಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು ಎಂಬುದು ತಿಳಿಯುತ್ತದೆ.
*ರಕ್ಷಣೆಗಾಗಿ ಕಾವಲು ಗೋಪುರಗಳು*
ನಮ್ಮ ಇಂದಿನ ರಕ್ಷಣಾ ವ್ಯವಸ್ಥೆಗಿಂತ ಉತ್ತಮವಾದ ರಕ್ಷಣಾ ತಂತ್ರಗಾರಿಕೆ ವ್ಯವಸ್ಥೆಯನ್ನು ವಿಜಯನಗರ ಅರಸರು ಅಳವಡಿಸಿಕೊಂಡಿರುವುದಕ್ಕೆ ಅನೇಕ ಸಾಕ್ಷ್ಯಗಳು ದೊರೆಯುತ್ತವೆ. ವಿದೇಶಿಗರ ದಾಳಿ ತಿಳಿಯಲು ಹಾಗೂ ವಿವಿಧ ಭಾಗಗಳಿಂದ ಕೋಟೆಯೊಳಗೆ ಆಗಮಿಸುವವರ ಬಗ್ಗೆ ತಿಳಿಯಲು ಹಂಪಿಯ ಪ್ರದೇಶಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ವಿುಸಲಾಗಿತ್ತು. ಒಟ್ಟು 520 ವೀಕ್ಷಣಾ ಗೋಪುರಗಳನ್ನು ನಿರ್ವಿುಸಿದ್ದರೆಂದು ತಿಳಿದು ಬರುತ್ತದೆ. ಈ ಗೋಪುರಗಳಲ್ಲಿ ಕಾವಲುಗಾರರು ಹಗಲು ರಾತ್ರಿ ಕಾವಲು ಕಾಯ್ದು ದೇಶ ರಕ್ಷಿಸುತ್ತಿದ್ದರು.
*ಶಿಲೆಗಳ ಸರಬರಾಜು*
ಹಂಪಿಯಲ್ಲಿ ಕಲ್ಲು ಬಂಡೆಗಳನ್ನು ಒಡೆಯುವಲ್ಲಿಯೂ ವಿಜ್ಞಾನದ ತಂತ್ರಗಾರಿಕೆ ಅನುಸರಿಸಲಾಗಿದೆ. ಕಲ್ಲು ಬಂಡೆಗಳಲ್ಲಿ ನೇರವಾದ ಸಾಲಿನಲ್ಲಿ ಅಲ್ಲಲ್ಲಿ ರಂಧ್ರ ಹಾಕುತ್ತಿದ್ದರು. ಅದಕ್ಕೆ ಸರಿಯಾಗುವಂತೆ ಒಣ ಕಟ್ಟಿಗೆಯ ತುಂಡನ್ನು ಕೆತ್ತಿ ರಂದ್ರ ಮುಚ್ಚುತ್ತಿದ್ದರು ಮತ್ತು ಅದಕ್ಕೆ ಆಗಾಗ್ಗೆ ನೀರನ್ನು ತುಂಬುತ್ತಿದ್ದರು. ಕಾಲಕ್ರಮೇಣ ಕಟ್ಟಿಗೆಯ ತುಂಡು ವಿಸ್ತರಿಸಿ ಕಲ್ಲುಗಳನ್ನು ಸೀಳುವಂತೆ ಮಾಡುತ್ತಿತ್ತು. ಹೀಗೆ ಕಲ್ಲುಗಳನ್ನು ಸೀಳಿ ಆನೆಗಳ ಸಹಾಯದಿಂದ ದೇಗುಲಗಳ ಬಳಿ ಸಾಗಿಸುತ್ತಿದ್ದರು. ಹಂಪಿಯ ಹೊರಭಾಗದಲ್ಲಿನ ಪರ್ವತಗಳ ಕಲ್ಲನ್ನು ನೋಡಿದರೆ ಕಲ್ಲುಗಳನ್ನು ಹೇಗೆ ಸೀಳಿದ್ದರು ಎಂಬುದನ್ನು ಗಮನಿಸಬಹುದು.
*ಗಾರೆಯ ಸಂಬಂಧ*
ಹಂಪಿಯ ಬಹುತೇಕ ದೇವಾಲಯಗಳ ನಿರ್ಮಣದಲ್ಲಿ ಸುಟ್ಟ ಇಟ್ಟಿಗೆ ಮತ್ತು ಗಾರೆ ಬಳಸಲಾಗಿದೆ. ಒಂದು ಭಾಗ ಸುಣ್ಣ, ಎರಡು ಭಾಗ ಮರಳು, ಒಂದು ಭಾಗ ಬೆಲ್ಲ ಮತ್ತು ಅರ್ಧಭಾಗ ಅಂಟುವಾಳಕಾಯಿ ಮಿಶ್ರಣಗಳನ್ನು ನುಣ್ಣಗೆ ಅರೆದು ಗಾರೆ ತಯಾರಿಸಲಾಗುತ್ತದೆ. ಇದು ಇಂದಿನ ಸಿಮೆಂಟಿಗಿಂತಲೂ ಗಟ್ಟಿ ಹಾಗೂ ಬಹುಕಾಲ ಬಾಳಿಕೆ ಬರುತ್ತದೆ. ರಾಣಿಯರ ಸ್ನಾನಗೃಹ, ಕಮಲಮಹಲು, ಕಾವಲು ಗೋಪುರಗಳ ಗೋಡೆಗಳಿಗೆ ಹಾಗೂ ಆನೆಲಾಯ, ಮಾಲ್ಯವಂತ ರಘುನಾಥ ದೇವಾಲಯ, ವಿಠ್ಠಲ ದೇವಸ್ಥಾನ, ಅಚ್ಯುತರಾಯ ದೇವಾಲಯ, ಪಟ್ಟಾಭಿರಾಮ ದೇವಾಲಯಗಳಲ್ಲಿನ ಶಿಖರ(ಗೋಪುರ)ಗಳಲ್ಲಿ ಗಾರೆಯನ್ನು ಬಳಸಲಾಗಿದೆ.

No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you