For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು.


ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರು

1. ದುರ್ಗಾದೇವಿ - 1907 ರಲ್ಲಿ ಅಲಹಾಬಾದ್ ನಲ್ಲಿ ಜನಿಸಿದ ಇವರು ವಿವಾಹದ ನಂತರ ತಮ್ಮ ಪತಿ ಮೋತಿಲಾಲ್ ವೋರಾ ರವರೊಂದಿಗೆ ಕ್ರಾಂತಿಕಾರಿ ಚಳುವಳಿಗೆ ಧುಮುಕಿದರು. ಪೋಲಿಸರ ಕಣ್ಣಿಗೆ ಬೀಳದಿರಲು ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆಯಾಗಿ ಸೇರಿಕೊಂಡರು. ಎಚ್‍ಎಸ್‍ಆರ್‍ಎ ನಲ್ಲಿ ಗುಪ್ತಚಾರಳಾಗಿ ಕೆಲಸ ಮಾಡಿದರು. ಪತಿಯ ಮರಣದ ನಂತರವೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ ಇವರು ಸಾಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್‍ರವರನ್ನು ಪೋಲಿಸರ ಕಣ್ಣಿನಿಂದ ತಪ್ಪಿಸಿ ಲಾಹೋರಿನಿಂದ ಹೊರಕಳಿಸಲು ಅವರ ಪತ್ನಿಯಾಗಿ ನಟಿಸಿದರು. ಭಗತ್ ಸಿಂಗ್‍ರ ಬಂಧನದ ನಂತರವೂ ಆಜಾದ್‍ರೊಂದಿಗೆ ಕೆಲಸ ಮಾಡುತ್ತಾ ಬಂಧನಕ್ಕೊಳಗಾದರು. 1 ವರ್ಷದ ಶಿಕ್ಷೆಯ ಜೊತೆಗೆ ಅವರ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಜೈಲಿನಿಂದ ಹೊರಬಂದ ಮೇಲೂ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳೊಂದಿಗೆ ಲಕ್ನೋದಲ್ಲಿ ಶಾಲೆಯನ್ನು ತೆರೆದರು. 1999ರ ಅಕ್ಟೋಬರ್ 14ರಂದು ಮರಣ ಹೊಂದಿದರು.

2. ನವಾಬ್ ಫೈಜುನ್ನೀಸಾ ಚೌಧುರಾಣಿ – 1834 -1903 – ತ್ರಿಪುರಾದ ಕೊಮಿಲ್ಲಾ ಜಿಲ್ಲೆಯ ಪಶ್ಚಿಮ ಗ್ರಾಮದಲ್ಲಿ ಜನಿಸಿದರು. ಇವರು ಸಾಂಪ್ರದಾಯಿಕ ಶಾಲೆಯೊಂದನ್ನು, 11 ಪ್ರಾಥಮಿಕ ಶಾಲೆಗಳನ್ನು, ಒಂದು ಮಾಧ್ಯಮಿಕ ಇಂಗ್ಲಿಷ್ ಶಾಲೆಯನ್ನು ಮತ್ತು ಹೆಣ್ಣುಮಕ್ಕಳಿಗಾಗಿ ಹೈಸ್ಕೂಅನ್ನು ಕೊಮಿಲ್ಲಾ ಮತ್ತು ಬಂಗಾಲದ ಕೃಷ್ಣನಗರದಲ್ಲಿ ಸ್ಥಾಪಿಸಿದರು. ಇವರು ಬರಹಗಾರ್ತಿಯಾಗಿದ್ದರು. ಎರಡು ಉಚಿತ ಆಸ್ಪತ್ರೆಗಳನ್ನು ತೆರೆದರು. ತಮ್ಮ ಮರಣದ ಮುಂಚೆ ತಮ್ಮ ಇಡೀ ಆಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

3. ಪ್ರೀತಿಲತಾ ವೇದದ್ದಾರ್- ಬಂಗಾಳದ ಚಟಗಾವ್‍ನಲ್ಲಿ 1911ರಲ್ಲಿ ಜನಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ದೀಪಾಲಿ ಸಂಘವನ್ನು ಸೇರಿದರು ಮತ್ತು ನಂತರ ಸೂರ್ಯಸೇನ್ ರ ಕ್ರಾಂತಿದಳವನ್ನು ಸೇರಿದರು.ಅವರು ಬರಹಗಾರ್ತಿಯೂ ಆಗಿದ್ದರು. 1930 ಮತ್ತು 32ರಲ್ಲಿ ಪೋಲಿಸ್ ಠಾಣೆಗಳ ಮೇಲೆ ನಡೆದ ಆಕ್ರಮಣದಲ್ಲಿ ಭಾಗಿಯಾಗಿದ್ದರು. ಅವರ ಸಾಮರ್ಥ್ಯವನ್ನು ಕಂಡು ಸೂರ್ಯ ಸೇನರು ಚಿತ್ತಗಾಂಗ್‍ನ ಯೂರೋಪಿಯನ್ ಕ್ಲಬ್‍ನ ಮೇಲಿನ ದಾಳಿಯ ನೇತೃತ್ವವನ್ನು ಅವರಿಗೆ ವಹಿಸಿದರು. ಆಕ್ರಮಣದಲ್ಲಿ ತಮ್ಮ ಕೆಲಸವನ್ನು ಮುಗಿಸಿದ ನಂತರ ಅವರಿಗೆ ಅಲ್ಲಿಂದ ಪರಾರಿಯಾಗಲು ಅವಕಾಶವಿರಲಿಲ್ಲ. ಆದ್ದರಿಂದ ಅವರು ವಿಷವನ್ನು ಸೇವಿಸಿ ಹುತಾತ್ಮರಾದರು.

4. ರೊಕೆಯ ಖಾತುನ್- 1882-1932- ರಂಗಪುರದ ಪೈರಾವಾಡ್‍ನಲ್ಲಿ ಜನನ (ಈಗ ಬಾಂಗ್ಲಾ ದೇಶನಲ್ಲಿದೆ) 1909 ರಲ್ಲಿ ಬಾಗಲ್‍ಪುರ್‍ನಲ್ಲಿ 1911 ರಲ್ಲಿ ಕಲ್ಕತ್ತಾದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿದರು. ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆಂದು ಅವರನ್ನು ದೂಷಿಸಲಾಯಿತು. ಅವರು ಬರಹಗಾರ್ತಿಯೂ ಆಗಿದ್ದರು. ಮಹಿಳೆಯರ ಮೇಲಿನ ಅತ್ಯಾಚಾರಗಳ ವಿರುದ್ಧ ದನಿ ಎತ್ತಿದರು. 1916ರಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ಮತ್ತು ಅವರಲ್ಲಿ ಜಾಗೃತಿಯನ್ನು ಮೂಡಿಸಲು ‘ ಅಂಜುಮಾನೆ ಖವಾತಿನೆ ಇಸ್ಲಾಮ್’ ಎನ್ನುವ ಸಂಘಟನೆಯನ್ನು ಆರಂಭಿಸಿದರು. 1932 ರ ಡಿಸೆಂಬರ್ 9 ರಂದು ಮರಣ ಹೊಂದಿದರು.

5. ಸಾವಿತ್ರಿಬಾಯಿ ಫುಲೆ- 1831 ರ ಜನವರಿ 3 ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಸಾಮಾಜಿಕ ಸುಧಾರಕರಾಗಿದ್ದ ಜ್ಯೋತಿಭಾ ಫುಲೆಯವರನ್ನು ವಿವಾಹವಾದರು. ಅವರಿಂದ ಶಿಕ್ಷಣವನ್ನು ಪಡೆದು, ತಾವೇ ಆರಂಭಿಸಿದ ಶಾಲೆಯಲ್ಲಿ ಶಿಕ್ಷಕಿಯಾದರು. ಅದಕ್ಕಾಗಿ ಅವರನ್ನು ದೂಷಿಸಲಾಯಿತು ಮತ್ತು ಅಪಮಾನ ಮಾಡಲಾಯಿತು. ಆದರೆ ಅವರು ಹಿಂಜರಿಯದೆ ಇನ್ನಷ್ಟು ಶಾಲೆಗಳನ್ನು ಆರಂಭಿಸಿದರು. ಜೊತೆಗೆ ‘ಬಾಲ ಹತ್ಯಾ ಪ್ರತಿಬಂಧಕ ಗೃಹ’ವನ್ನು ತೆರೆದು ಅತ್ಯಾಚಾರಕ್ಕೆ ಒಳಗಾಗಿ ಮನೆಗಳಿಂದ ಹೊರದೂಡಲ್ಪಟ್ಟ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದರು. ತಮ್ಮ ಪತಿಯೊಡಗೂಡಿ ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು. ಪತಿಯ ಮರಣಾನಂತರ ಅವರು ಸ್ಥಾಪಿಸಿದ್ದ ಸತ್ಯ ಶೋಧಕ ಸಮಾಜದ ಜವಾಬ್ದಾರಿಯನ್ನು ಹೊತ್ತುಕೊಂಡರು. 1897ರಲ್ಲಿ ಪ್ಲೇಗ್ ಪೀಡಿತರ ಸೇವೆ ಮಾಡುತ್ತಾ ತಾವೂ ಆ ರೋಗಕ್ಕೆ ಬಲಿಯಾಗಿ ಮಾರ್ಚ್ 10ರಂದು ಮರಣ ಹೊಂದಿದರು.

6. ಲೀಲಾ ರಾಯ್ - ಲೀಲಾವತಿ ನಾಗ್‍ರವರು 1900 ಅಕ್ಟೋಬರ್ 2ರಂದು ಢಾಕಾದಲ್ಲಿ ಜನಿಸಿದರು. ಶಾಲಾ ದಿನಗಳಿಂದಲೇ ಬ್ರಿಟಿಷರ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದರು. 1923ರಲ್ಲಿ ದೀಪಾಲಿ ಸಂಘವನ್ನು ಢಾಕಾದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸ್ಥಾಪಿಸಿದರು. ಈ ಸಂಘ ಮಹಿಳೆಯರ ವಿವಿಧ ಚಟುವಟಿಕೆಗಳ ಕೇಂದ್ರವಾಯಿತು. ಮಹಿಳೆಯರ ಗುಪ್ತಚಾರಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಢಾಕಾ ಮತ್ತು ಕಲ್ಕತ್ತಾದಲ್ಲಿ ಛಾತ್ರಿ ಸಂಘ ಮತ್ತು ಛಾತ್ರಿ ಭವನವನ್ನು ತೆರೆದರು. 1931ರಲ್ಲಿ ಬಂಧಿತರಾದ ಇವರನ್ನು ವಿಚಾರಣೆಯಿಲ್ಲದೆ 6 ವರ್ಷಗಳ ಕಾಲ ಜೈಲಿನಲ್ಲಿಡಲಾಯಿತು. ಬಿಡುಗಡೆಯಾದ ನಂತರ ನೇತಾಜಿಯವರೊಂದಿಗೆ ಕೆಲಸ ಮಾಡಿದರು. 1942ರಲ್ಲಿ ಬಂಧನಕ್ಕೊಳಗಾದ ಇವರನ್ನು 1946ರವರೆಗೂ ಜೈಲಿನಲ್ಲೇ ಇಡಲಾಯಿತು. ಬಿಡುಗಡೆಯಾದ ನಂತರ ನೌಕಾಲಿಯಲ್ಲಿ ಕೋಮುಗಲಭೆ ಪೀಡಿತರಿಗೆ ನೆರವನ್ನು ನೀಡಲು ಧಾವಿಸಿದರು. ಸ್ವತಂತ್ರ ಭಾರತದಲ್ಲಿ, ಮಹಿಳಾ ನಿರಾಶ್ರಿತರ ಪುನರ್ವಸತಿಗಾಗಿ ಶ್ರಮಿಸಿದರು. 1970ರ ಜೂನ್ 12ರಂದು ನಿಧನರಾದರು.

7. ಕುಲ್ಸಮ್ ಸಯಾನಿ -1900-1987 – ಇವರು ಮುಂಬೈ ಯಲ್ಲಿ 21 ಅಕ್ಟೋಬರ್ 1900ರಲ್ಲಿ ಜನಿಸಿದರು. ಇವರು ಗಾಢವಾದ ದೇಶಭಕ್ತರು, ಪ್ರಖ್ಯಾತ ಕ್ರಿಯಾಶೀಲ ಕೆಲಸಗಾರರು, ವಯಸ್ಕರ ಶಿಕ್ಷಣಕ್ಕಾಗಿ ಜೀವನದಾದ್ಯಂತ ಶ್ರಮಿಸಿದರು. ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾದ ಇವರು, ಬಡತನ ಮತ್ತು ಅನಾರೋಗ್ಯಗಳಿಗೆ ಅನಕ್ಷರತೆ ಕಾರಣವೆಂದು ತಿಳಿದಿದ್ದರು. ತನ್ನ ಮನೆಯಲ್ಲಿ ಸಾಕ್ಷರತಾ ಕಾರ್ಯವನ್ನು ಪ್ರಾರಂಬಿಸಿದ ಇವರು, ನಂತರ ರಾಹ್‍ಬರ್(ದಾರಿದೀಪಕರು) ಎಂಬ ಪತ್ರಿಕೆಯನ್ನು ಉರ್ದು, ಗುಜರಾತಿ ಹಾಗು ದೇವನಾಗರಿ ಭಾಷೆಗಳಲ್ಲಿ ಪ್ರಕಟಿಸಿದರು. ಅಖಿಲ ಭಾರತ ಮಹಿಳಾ ಸಮ್ಮೇಳನದ ಗೌರವಾಧ್ಯಕ್ಷರಾದರು. 1969ರಲ್ಲಿ ಇವರಿಗೆ “ನೆಹರು ಸಾಕ್ಷರತಾ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು. ಇವರು 1987ರಲ್ಲಿ ಮರಣಹೊಂದಿದರು.

8. ಮೇಡಮ್ ಭಿಕಾಜಿ ಕಾಮಾ – 1861-1936- ಮುಂಬೈನಲ್ಲಿ 1861ರಲ್ಲಿ ಜನಿಸಿದ ಇವರು ಅಲೆಕ್ಸಾಂಡ್ರಿಯಾ ಬಾಲಕಿಯರ ಶಾಲೆಯಲ್ಲಿ ಓದಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇವರನ್ನು ಭಾರತದಿಂದ ಗಡೀಪಾರು ಮಾಡಿದರು. ಇವರು “ವಂದೇಮಾತರಂ” ಎಂಬ ಪತ್ರಿಕೆಯನ್ನು ಪ್ರಕಟಿಸಿದರು. 1936ರ ಆಗಸ್ಟ್ 30ರಂದು ನಿಧನಹೊಂದಿದರು.

9. ನಾನಿ ಬಾಲ ದೇವಿ - 1888-1987 - ಪಶ್ಚಿಮ ಬಂಗಾಳದ ಒಂದು ಹಳ್ಳಿಯಲ್ಲಿ 1888ರಲ್ಲಿ ಜನಿಸಿದ ಇವರು ‘ಯುಗಾಂತರ’ ಎಂಬ ಕ್ರಾಂತಿಕಾರಿ ಸಂಘಟನೆಯ ನಾಯಕಿಯಾಗಿದ್ದರು. ಕ್ರಾಂತಿಕಾರಿಗಳಿಗೆ ಅನೇಕ ರೀತಿಯ ಸಹಾಯ ಮಾಡಿದರು. ಇವರನ್ನು ಬಂಧಿಸಿ ಎರಡು ವರ್ಷಗಳ ಕಾಲ ಹಿಂಸಿಸಿದರು. ಇವರು 1987ರಲ್ಲಿ ಮರಣಹೊಂದಿದರು.

10. ಪಂಡಿತ ರಮಾಬಾಯಿ ಸರಸ್ವತಿ - 1858-1922 – ಇವರು ಮಹಿಳಾ ವಿಮೋಚನಾ ಚಳುವಳಿಗೆ ಅಡಿಪಾಯ ಹಾಕಿದರು. ಮಧ್ಯಪ್ರದೇಶ ಮತ್ತು ಗುಜರಾತಿನ ಬರಗಾಲಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡರು. ಅವರಲ್ಲಿನ ಸಂಸ್ಕೃತ ಗ್ರಂಥಗಳ ಬಗೆಗಿನ ಜ್ಞಾನದಿಂದ ಇವರಿಗೆ ಪಂಡಿತ ಮತ್ತು ಸರಸ್ವತಿ ಎಂ¨ ಬಿರುದುಗಳಿವೆ. ಸಾಂಪ್ರದಾಯಿಕ ಬ್ರಾಹ್ಮಣರು ಅವರನ್ನು ತೀವ್ರವಾಗಿ ಖಂಡಿಸಿದರು ಹಾಗೂ ಮಹಿಳೆಯರಲ್ಲಿ ಬಂಡಾಯವನ್ನು ಸೃಷ್ಟಿಸುತ್ತಿದ್ದಾರೆಂದು ಆಪಾದಿಸಿದರು. ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರಿಗಾಗಿ ಶಾರದ ಸದನವನ್ನು ಆರಂಭಿಸಿದರು. ಇವರು 1922ರಲ್ಲಿ ನಿಧನರಾದರು.
Share:

8ನೇ ತರಗತಿ ಸೇತುಬಂಧ ಅಭ್ಯಾಸ ಹಾಳೆಗಳು - 2021-22

 8ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ

ಈ ಕ್ರಿಯಾ ಯೋಜನೆಯು ನಮ್ಮ ಶಾಲೆಯ ಮಕ್ಕಳ ಮಟ್ಟಕ್ಕೆ ಮತ್ತು ಸ್ಥಳೀಯ ಸಂಪನ್ಮೂಲದ ಲಭ್ಯತೆಯ ಆಧಾರದ ಮೇಲೆ ರಚಿತವಾಗಿದ್ದು, ಇದುವೇ ಅಂತಿಮವಲ್ಲ.

DOWNLOAD HERE 










Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com