For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಪಕ್ವತೆ ಉನ್ನತಿಯ ಲಕ್ಷಣ




ಪಕ್ವತೆ ಉನ್ನತಿಯ ಲಕ್ಷಣ ಒಮ್ಮೆ ಒಬ್ಬ ರಾಜ ಬೇಟೆಯಾಡಲು ಹೊರಟ. ಕಾಡಿನಲ್ಲಿ ನುಗ್ಗಿದ. ಉತ್ಸಾಹದಲ್ಲಿ ತುಂಬ ದೂರ ಹೋದದ್ದೇ ತಿಳಿಯಲಿಲ್ಲ. ಸಾಯಂಕಾಲವಾಗುತ್ತ ಬಂದಿತು. ಹಸಿವೆ, ನೀರಡಿಕೆಗಳು ಬಾಧಿಸುತ್ತಿವೆ. ಮರಳಿ ಪಟ್ಟಣಕ್ಕೆ ಹೋಗಬೇಕಾದರೆ ದಾರಿ ತಿಳಿಯುತ್ತಿಲ್ಲ. ಅಷ್ಟರಲ್ಲಿ ರಾಜನನ್ನು ಹುಡುಕಿಕೊಂಡು ಸೈನಿಕನೊಬ್ಬ ಬಂದ. ಇಬ್ಬರೂ ಮುಂದೆ ಬರುವಾಗ ಮಂತ್ರಿಯೂ ಸೇರಿಕೊಂಡ. ಮೂವರೂ ಸೇರಿ ತಮ್ಮ ಪಟ್ಟಣದ ಮಾರ್ಗ ಅರಸುತ್ತಿದ್ದರು.
 ಕೊನೆಗೆ ಕಾಡಿನ ಕೊನೆಗೆ ಬಂದು ಒಂದು ಪುಟ್ಟ ಹಳ್ಳಿ ಪ್ರವೇಶಿಸಿದರು. ದಾರಿಯನ್ನು ಕೇಳಲು ಮೂವರೂ ಮೂರು ದಿಕ್ಕಿಗೆ ನಡೆದರು. ರಾಜನಿಗೆ ಒಂದು ದಾರಿ ಸಿಕ್ಕಿತು, ಆದರೆ ದಾರಿಯಲ್ಲಿ ಯಾರೂ ಇರಲಿಲ್ಲ. ಮುಂದೆ ರಸ್ತೆ ಎರಡು ಭಾಗವಾಗುತ್ತಿತ್ತು. ಆ ಸ್ಥಳದಲ್ಲೇ ಮರದ ಕೆಳಗೆ ಒಬ್ಬ ಸನ್ಯಾಸಿ ಕುಳಿತಿದ್ದ. ಅವನನ್ನು ನೋಡಿದರೆ ಪೂರ್ಣ ಅಂಧನಂತೆ ತೋರುತ್ತಿತ್ತು. ರಾಜ ಹೋಗಿ, `ಪೂಜ್ಯ ಸನ್ಯಾಸಿಗಳೇ ವಂದನೆಗಳು. ನಾನು ದಾರಿ ತಪ್ಪಿಸಿಕೊಂಡಿದ್ದೇನೆ. ನನಗೆ ಪಟ್ಟಣ ಸೇರಬೇಕಾಗಿದೆ. ಮುಂದಿರುವ ಎರಡು ದಾರಿಗಳಲ್ಲಿ ಯಾವುದು ಸರಿ ಎಂದು ಮಾರ್ಗದರ್ಶನ ನೀಡಬಲ್ಲಿರಾ` ಎಂದು ಕೇಳಿದ. ಆಗ ಅಂಧ ಸನ್ಯಾಸಿ, `ದಯವಿಟ್ಟು ಎಡಗಡೆಯ ರಸ್ತೆಯಲ್ಲೇ ಹೋಗಿ ಅದು ನಿಮ್ಮನ್ನು ಪಟ್ಟಣಕ್ಕೇ ತಲುಪಿಸುತ್ತದೆ` ಎಂದ. ಮಂತ್ರಿಯೂ ಅಲ್ಲಲ್ಲಿ ತಿರುಗಾಡಿ ಮತ್ತೆ ಅಲ್ಲಿಗೇ ಬಂದ. ಅವನೂ ಸನ್ಯಾಸಿಯನ್ನು ಅದೇ ಪ್ರಶ್ನೆ ಕೇಳಿ ಅದೇ ಉತ್ತರ ಪಡೆದುಕೊಂಡ. ಆದರೆ ಸನ್ಯಾಸಿ ದಾರಿ ತೋರುವಾಗ, `ಇದೇ ತಾನೇ ತಮ್ಮ ರಾಜರು ಹೀಗೆಯೇ ಹೋದರು` ಎಂದ. ಕೆಲ ಸಮಯದ ನಂತರ ಸೈನಿಕ ಅಲ್ಲಿಗೇ ಬಂದ. ಸನ್ಯಾಸಿಯನ್ನು ದಾರಿ ಕೇಳಿದ. ಆಗ ಸನ್ಯಾಸಿ `ಹೌದಪ್ಪ, ಎಡಗಡೆಯ ದಾರಿಯನ್ನೇ ಹಿಡಿದು ಹೋಗು. ಅದೇ ಮಾರ್ಗವಾಗಿ ಇದೀಗ ನಿಮ್ಮ ರಾಜರು ಮತ್ತು ಮಂತ್ರಿಗಳು ಹೋಗಿದ್ದಾರೆ` ಎಂದ. ನಂತರ ಮೂವರೂ ದಾರಿಯಲ್ಲಿ ಸೇರಿಕೊಂಡಾಗ ಸನ್ಯಾಸಿ ಮಾರ್ಗದರ್ಶನ ಮಾಡಿದ ವಿಷಯ ಚರ್ಚೆಗೆ ಬಂತು. ರಾಜನಿಗೆ ಒಂದು ಸಂದೇಹ ಬಂತು. ತಾನು ಸನ್ಯಾಸಿಯನ್ನು ಕೇವಲ ದಾರಿ ಕೇಳಿದೆನೇ ಹೊರತು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದರೂ ತಾನು ರಾಜ ಎಂದು ಅವನಿಗೆ ಹೇಗೆ ಗೊತ್ತಾಯಿತು. ಹಾಗಾದರೆ ಆತ ಅಂಧತ್ವದ ನಾಟಕ ಮಾಡುತ್ತಿದ್ದಾನೆಯೇ. ಮಂತ್ರಿಗೂ, ಸೈನಿಕನಿಗೂ ಇದೇ ಪ್ರಶ್ನೆ ಬಂದಿತು. ಮೂವರೂ ಮರಳಿ ಸನ್ಯಾಸಿಯ ಕಡೆಗೆ ನಡೆದರು. ಆತ ನಿಜವಾಗಿಯೂ ಅಂಧನೇ. ನಮ್ಮ ಪರಿಚಯ ತಮಗೆ ಹೇಗೆ ಆಯಿತು ಎಂದು ಕೇಳಿದಾಗ ಆತ ಹೇಳಿದ, `ತಾವು ದಾರಿ ಕೇಳುವಾಗ ಪೂಜ್ಯ ಸನ್ಯಾಸಿಗಳೇ ಎಂದು ಕರೆದಿರಿ. ತಮ್ಮ ಧ್ವನಿಯಲ್ಲಿದ್ದ ವಿನಯ, ಗಾಂಭೀರ್ಯ ತಾವು ರಾಜರೇ ಇರಬೇಕೆಂದು ತಿಳಿಸಿತು. ನಂತರ ಬಂದ ಮಂತ್ರಿಗಳು ಸಾಧುಗಳೇ ಎಂದು ಕರೆದರು. ಆಮೇಲೆ ಬಂದ ಸೈನಿಕ ಏ ಕುರುಡ ಬಾಬಾ ಎಂದು ಕೂಗಿದ. ನೀವು ಮೂವರೂ ಬಳಸಿದ ಭಾಷೆ ಮತ್ತು ಧ್ವನಿಯಿಂದ ನಿಮ್ಮ ಸ್ಥಾನಗಳನ್ನು ಊಹಿಸಿದೆ`. 
ಯಾವಾಗಲೂ ನಮ್ಮ ನಾಲಿಗೆ ನಮ್ಮ ಮಟ್ಟ ಸಾರುತ್ತದೆ. ಅಂತೆಯೇ ಉನ್ನತಸ್ಥಾನಕ್ಕೇರಿದವರು ತಮ್ಮ ಭಾಷೆಯನ್ನೂ, ಧ್ವನಿಯನ್ನು ಮೃದುಗೊಳಿಸಿಕೊಳ್ಳಬೇಕು. ಮೃದುತ್ವ ಪರಿಪಕ್ವವಾದದ್ದರ ಲಕ್ಷಣ. ಮರ ಎತ್ತರವಾದಷ್ಟೂ ಬಾಗುತ್ತದೆ, ಹಣ್ಣು ತುಂಬಿದ ಮರವೂ ಬಾಗುತ್ತದೆ. ಒಗರು, ಹುಳಿಯಾಗಿದ್ದ ಬಿರುಸು ಕಾಯಿ ಮಾಗಿದ ಹಾಗೆ ಮೃದುವಾಗಿ, ಸಿಹಿಯಾಗುತ್ತದೆ. ಈ ಪಕ್ವತೆಯೇ ಉನ್ನತಿಯ ಲಕ್ಷಣ.
Share:

ಲಾಲ ಬಹಾದ್ದೂರ ಶಾಸ್ತ್ರಿ ಜನ್ಮ ದಿನಾಚರಣೆ

ಉತ್ತರ ಪ್ರದೇಶದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1901ರಂದು ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂಡರು. ಆಗ ಇಪ್ಪತ್ತು ವಯಸ್ಸಿನ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತವರು ಮನೆ ಸೇರಿ ಅಲ್ಲೇ ಉಳಿದರು.
ಲಾಲ್ ಬಹಾದ್ದೂರ್ ಅವರ ಪುಟ್ಟ ಹಳ್ಳಿಯ ಶಿಕ್ಷಣ ಯಾವ ರೀತಿಯಲ್ಲೂ ಗಮನಾರ್ಹವಾಗಿಲಿಲ್ಲ. ಕಿತ್ತು ತಿನ್ನುವ ಬಡತನವೊಂದÀನ್ನು ಬಿಟ್ಟರೆ ಅವರ ಬಾಲ್ಯ ಸಂತಸಮಯವಾಗಿತ್ತು.
ಪ್ರೌಢ ಶಾಲೆಗೆ ದಾಖಲಿಸಲುಲಾಲ್ ಬಹಾದ್ದೂರ್ ಅವರನ್ನು ಅವರ ಮಾವನೊಡನೆ ವಾರಾಣಸಿಗೆ ಕಳುಹಿಸಲಾಯಿತು. ಅವರನ್ನು ಮನೆಯಲ್ಲಿ ನನ್ಹೆ ( ಪುಟ್ಟ) ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಉರಿ ಬಿಸಿಲಲ್ಲಿ ಕಾದ ರಸ್ತೆ ಮೇಲೆ ಚಪ್ಪಲಿಗಳಿಲ್ಲದೆ ಮೈಲುಗಟ್ಟಲೆ ನಡೆದು ಲಾಲ್ ಬಹಾದ್ದೂರ್ ಶಾಲೆ ಸೇರಬೇಕಾಗಿತ್ತು.
ಬೆಳೆಯುತ್ತಿದ್ದಂತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಆಸಕ್ತಿ ಹೆಚ್ಚತೊಡಗಿತು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ ಅವರ ಖಂಡನೆಯಿಂದ ಲಾಲ್ ಬಹಾದ್ದೂರ್ ಅತ್ಯಂತ ಪ್ರಭಾವಿತರಾದರು. ಈ ವೇಳೆ ಲಾಲ್ ಬಹಾದ್ದೂರ್ ಕೇವಲ ಹನ್ನೊಂದು ವರುಷ ವಯಸ್ಸಿನವರಾಗಿದ್ದರು.
ಗಾಂಧೀಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಸೇರಲು ಕರೆ ನೀಡಿದ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರುಷ ವಯಸ್ಸು. ಮಹಾತ್ಮಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ತನ್ನ ಓದನ್ನು ಬಿಟ್ಟು ಚಳುವಳಿಗೆ ಸೇರಲು ಶಾಸ್ತ್ರಿ ಅವರು ಒಂದೇ ಬಾರಿಗೆ ನಿರ್ಧರಿಸಿದರು. ಅವರ ನಿರ್ಧಾರ ತಾಯಿಯ ನಿರೀಕ್ಷೆಗಳನ್ನು ನುಚ್ಚುನೂರಾಗಿಸಿತು. ಲಾಲ್ ಬಹಾದ್ದೂರ್ ತನ್ನ ನಿರ್ಣಯವನ್ನು ತೆಗೆದುಕೊಂಡಿದ್ದರು. ಶಾಸ್ತ್ರಿ ಅವರಿಗೆ ಆತ್ಮೀಯರಾದವರಿಗೆಲ್ಲ ಅವರು ಒಮ್ಮೆ ನಿರ್ಣಯ ತೆಗೆದುಕೊಂಡ ಬಳಿಕ ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ, ಅವರ ಮೃದು ಬಾಹ್ಯದ ಒಳಗಿರುವುದು ಕಲ್ಲಿನಂತಹ ದೃಢ ಮನಸ್ಸು ಎಂಬುದರ ಅರಿವಿತ್ತು.
ಬ್ರಿಟಷ್ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ಹಲವಾರು ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಣಾಸಿಯ ಕಾಶಿ ವಿದ್ಯಾ ಪೀಠವನ್ನು ಲಾಲ್ ಬಹಾದ್ದೂರ ಶಾಸ್ತ್ರಿ ಸೇರಿದರು. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ಧೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿದ ಪದವಿ. ಆದರೆ, ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿದುಕೊಂಡಿದೆ.
1927ರಲ್ಲಿ ಅವರು ವಿವಾಹವಾದರು. ಅವರ ಪತ್ನಿ ಅವರ ಹಳ್ಳಿಯ ಪಕ್ಕದ ಮಿರ್ಜಾಪುರದ ಲಲಿತಾ ದೇವಿ. ಒಂದು ವಿಚಾರವನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ವಿವಾಹ ಸಾಂಪ್ರದಾಯಿಕವಾಗಿತ್ತು. ಅದೇನೆಂದರೆ ವರದಕ್ಷಿಣೆಯಾಗಿ ಕೈಮಗ್ಗದ ಕೆಲವು ಬಟ್ಟೆ ಮತ್ತು ಚರಕವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ವರ ಇದಕ್ಕಿಂತ ಹೆಚ್ಚಿನದೇನನ್ನು ಸ್ವೀಕರಿಸಲಿಲ್ಲ
1930ರಲ್ಲಿ ಮಹಾತ್ಮಾ ಗಾಂಧಿ ದಂಡಿ ಸಮುದ್ರ ತೀರದಲ್ಲಿ ನಡೆದು sಉಪ್ಪಿನ ಸಾರ್ವಭೌಮ ಕಾನೂನನ್ನು ಮುರಿದರು. ಈ ಸಾಂಕೇತಿಕ ಕಾರ್ಯ ಇಡೀ ದೇಶವನ್ನೇ ಬೆರಗುಗೊಳಿಸಿತು. ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಅಗಾಧ ಶಕ್ತಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರು ಹಲವಾರು ಬ್ರಿಟಿಷ್ ವಿರೋಧಿ ಆಂದೋಲನಗಳ ನಾಯಕತ್ವ ವಹಿಸಿ ಒಟ್ಟು ಏಳು ವರುಷಗಳನ್ನು ಬ್ರಿಟಷ್ ಕಾರಾಗೃಹಗಳಲ್ಲಿ ಕಳೆದರು. ಹೋರಾಟದ ಉರಿಯಲ್ಲಿ ಬೆಂದು ಇನ್ನಷ್ಟು ಪ್ರೌಢರಾದರು.
ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ, ಸೌಮ್ಯ ಮತ್ತು ನಿರ್ಗವಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಂದ ಅದಾಗಲೇ ಗುರುತಿಸಿಕೊಳ್ಳಲು ಶುರುವಾದರು. 1946ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಈ ‘ಡೈನಮೊ ವ್ಯಕ್ತಿ’ಯನ್ನು ಆಡಳಿತದಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಲು ಕರೆಸಲಾಯಿತು. ಶಾಸ್ತ್ರಿ ಅವರನ್ನು ಅವರ ಸ್ಥಳಿಯ ರಾಜ್ಯ ಉತ್ತರ ಪ್ರದೇಶದ ಸಂಸದೀಯ ಕಾಯದರ್ಶಿಯಾಗಿ ನೇಮಿಸಲಾಯಿತು. ಶೀಘ್ರದಲ್ಲೇ ಅವರು ಗೃಹ ಸಚಿವ ಸ್ಥಾನಕ್ಕೇರಿದರು. ಅವರ ಸಾಮಥ್ರ್ಯ ಮತ್ತು ಕಠಿಣ ಪರಿಶ್ರಮ ಉತ್ತರ ಪ್ರದೇಶದಲ್ಲಿ ಮನೆಮಾತಾಯಿತು. 1951ರಲ್ಲಿ ಅವರು ನವದೆಹಲಿಗೆ ತೆರಳಿದರು. ಕೇಂದ್ರ ಮಂತ್ರಿಮಂಡಲದ ವಿವಿಧ ಖಾತೆಗಳಲ್ಲಿ ಅಧಿಕಾರ ವಹಿಸಿಕೊಂಡರು- ರೈಲ್ವೆ ಸಚಿವ, ಸಾರಿಗೆ ಮತ್ತು ಸಂಪರ್ಕ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗೃಹ ಸಚಿವ-ನೆಹರು ಅವರ ಅನಾರೋಗ್ಯದ ಸಂದರ್ಭದಲ್ಲಿ ಖಾತೆಯಿಲ್ಲದೆ ಸಚಿವರಾಗಿದ್ದರು. ಶಾಸ್ತ್ರಿ ಅವರು ನಿರಂತರವಾಗಿ ಜನಪ್ರಿಯರಾಗುತ್ತಿದ್ದರು. ಹಲವಾರು ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ಅಪಘಾತವೊಂದ್ಕಕೆ ತಾನು ಜವಾಬ್ಧಾರಿಯೆಂದು ಅನಿಸಿದ್ದರಿಂದ ಅವರು ತಮ್ಮ ರೈಲೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಅವರ ಈ ನಿರ್ಧಾರ ಸಂಸತ್ತು ಮತ್ತು ಇಡೀ ರಾಷ್ಟ್ರದಲ್ಲೇ ಪ್ರಶಂಸೆಗೆ ಪಾತ್ರವಾಯಿತು. ಆಗಿನ ಪ್ರಧಾನಮಂತ್ರಿ ಶ್ರೀ ಜವಾಹರ್ ಲಾಲ್ ನೆಹರು ಘಟನೆಯ ಕುರಿತು ಸಂಸತ್ತಿನಲ್ಲಿ ಮಾತನಾಡುತ್ತಾ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಉನ್ನತ ಆದರ್ಶಗಳು ಮತ್ತು ದೃಢನಿಷ್ಠೆಯನ್ನು ಪ್ರಶಂಸಿಸಿದರು. ರಾಜಿನಾಮೆಯನ್ನು ಸ್ವೀಕರಿಸಿದ ನೆಹರು ಅವರು ತಾನು ಈ ರಾಜೀನಾಮೆಯನ್ನು ಸ್ವೀಕರಿಸುತ್ತಿರುವುದು ಏಕೆಂದರೆ ಈ ರಾಜೀನಾಮೆ ಸಾಂವಿಧಾನಿಕ ಔಚಿತ್ಯಕ್ಕೆ ಉದಾಹರಣೆಯಾಗಲಿದೆ ಎಂದು ವಿನಹಃ ಶಾಸ್ತ್ರಿ ಅವರು ಈ ಅವಘಢಕ್ಕೆ ಜವಾಬ್ಧಾರರೆಂದಲ್ಲ ಎಂದು ಆ ಸಂದರ್ಭದಲ್ಲಿ ಹೇಳಿದರು. ರೈಲು ದುರಂತದ ಕುರಿತು ನಡದ ದೀರ್ಘ ಚರ್ಚೆಗೆ ಪ್ರತಿಕ್ರಿಯಿಸಿದ ಶಾಸ್ತ್ರಿ ಅವರು ” ನಾನು ಗಾತ್ರದಲ್ಲಿ ಸಣ್ಣ ಮತ್ತು ಮೃದು ನಾಲಿಗೆ ಉಳ್ಳವನಾದುದರಿಂದ ಜನರು ನನಗೆ ಸ್ಥಿರವಾಗಿರಲು ಸಾಧ್ಯವಾಗುತ್ತಿಲ್ಲ ಎಂದು ನಂಬಿದ್ದಾರೆ. ದೈಹಿಕವಾಗಿ ನಾನು ಸದೃಢನಲ್ಲದಿದ್ದರೂ, ಆಂತರಿಕವಾಗಿ ಅಷ್ಟೊಂದು ನಿಶಕ್ತನಲ್ಲ ಅಂದೊಕೊಂಡಿದ್ದೇನೆ’. ಎಂದರು.
ಮೂವತ್ತು ವರುಷಗಳ ಸಮರ್ಪಣಾ ಸೇವೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಿಂದಿತ್ತು. ಈ ಅವಧಿಯಲ್ಲಿ ಅವರೊಬ್ಬ ಪ್ರಮಾಣಿಕ ಮತ್ತು ಅತ್ಯಂತ ಸಾಮಥ್ರ್ಯವಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಶಾಸ್ತ್ರಿ ಅವರು ವಿನಮ್ರತೆ, ಸಹಿಷ್ಣುತೆ, ಮಹಾನ್ ಆಂತರಿಕ ಶಕ್ತಿಯುಳ್ಳ ಮತ್ತು ದೃಢನಿಶ್ಚಯವುಳ್ಳ, ಜನರ ಭಾಷೆಯನ್ನು ಅರ್ಥೈಸಿಕೊಂಡ ಜನರ ವ್ಯಕ್ತಿಯಾದರು. ಪ್ರಗತಿಯೆಡೆಗೆ ರಾಷ್ಟ್ರವನ್ನು ಮುನ್ನಡೆಸಿದ ದೂರದೃಷ್ಠಿಯುಳ್ಳ ವ್ಯಕ್ತಿ ಅವರಾಗಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಮಹಾತ್ಮಾ ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ‘ ಕಠಿಣ ಪರಿಶ್ರಮ ಪ್ರಾರ್ಥನೆಗೆ ಸಮನಾದುದು’ ಎಂದು ಒಮ್ಮೆ ಅವರು ತಮ್ಮ ಗುರುವನ್ನು ಸ್ಮರಿಸುತ್ತಾ ಹೇಳಿದರು. ಮಹಾತ್ಮಾ ಗಾಂಧಿ ಅವರ ನೇರ ಸಂಪ್ರದಾಯದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಭಾರತೀಯ ಸಂಸ್ಕøತಿಯನ್ನು ಪ್ರಾತಿನಿಧಿಸಿದರು.
Share:

🌻ವಿಜಯ ದಶಮಿ🌻*



*🌻ವಿಜಯ ದಶಮಿ🌻*                             *9 ದಿನ ತಾಯಿ ಬಳಿ ಇರಬೇಕೆಂದು “ದುರ್ಗೆ”ಗೆ ಶಿವನ ವರ”ದಸರಾ ನವರಾತ್ರಿ” ಹಿಂದಿನ ಕುತೂಹಲ ಕಥೆ*

ದಸರಾ ಹಬ್ಬ ಎಂದರೆ ಎಲ್ಲರಿಗೂ ಗೊತ್ತಿರುವುದೇ. ಕೆಟ್ಟದರ ಮೇಲೆ ಗೆಲುವು ಸಾಧಿಸಿದರ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ. ದುರ್ಗಾ ಮಾತೆ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನ. ಹಾಗಾಗಿ ಆ ಕ್ಷಣಗಳನ್ನು ನೆನಪಿಸಿಕೊಳ್ಳಲು ಜನ ಹಬ್ಬ ಮಾಡಿಕೊಳ್ಳುತ್ತಾರೆ. ದುರ್ಗೆಯನ್ನು ನವರಾತ್ರಿಗಳ ಕಾಲ ವಿವಿಧ ರೂಪಗಳಲ್ಲಿ ಭಕ್ತರು ಪೂಜಿಸುತ್ತಾರೆ. ಆ ಬಳಿಕ ಕೊನೆಯ ದಿನ ವಿಜಯದಶಮಿ ಬರುತ್ತದೆ. ಆ ದಿನ ಉತ್ಸವಗಳನ್ನು ವೈಭವದಿಂದ ಮಾಡುತ್ತಾರೆ. ಅನೇಕ ಕಡೆ ದಸರಾ ಉತ್ಸವಗಳು ವೈಭವವಾಗಿ ನಡೆಯುತ್ತವೆ. ಆದರೆ ಅದೇ ದಿನ ಬಹಳಷ್ಟು ಮಂದಿ ಆಯುಧ ಪೂಜೆ ಸಹ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ದಸರಾ ಹಬ್ಬದ ಬಗ್ಗೆ ಕೆಲವೊಂದು ಕುತೂಹಲಕರವಾದ ವಿಷಯಗಳನ್ನು ಈಗ ತಿಳಿದುಕೊಳ್ಳೋಣ.

ಪೂರ್ವದಲ್ಲಿ ಮಹಿಷಾಸುರ ಎಂಬ ರಾಕ್ಷಸ ಜನರನ್ನು ಹಿಂಸಿಸುತ್ತಿದ್ದ. ದೇವತೆಗಳನ್ನೂ ಹಿಂಸಿಸುತ್ತಿದ್ದ. ಆದರೆ ಹೆಸರಿಗೆ ತಕ್ಕಂತೆ ಮಹಿಷ ಎಂದರೆ (ಕೋಣ), ಅವನ ತಲೆ ಕೋಣದಂತೆ ಇತ್ತು. ಈ ಹಿನ್ನೆಲೆಯಲ್ಲಿ ಅವನನ್ನು ಸಂಹರಿಸಲು ದೇವತೆಗಳು ದುರ್ಗಾದೇವಿಯನ್ನು ಸೃಷ್ಟಿಸಿದರು. ಆದರೆ ದುರ್ಗೆಯನ್ನು ನೋಡಿದ ಮಹಿಷಾಸುರ ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಮದುವೆಯಾಗುವಂತೆ ಕೋರುತ್ತಾರೆ. ಆದರೆ ದುರ್ಗಾಮಾತೆ ಆತನಿಗೆ ಷರತ್ತುಗಳನ್ನು ವಿಧಿಸುತ್ತಾಳೆ. ತನ್ನ ಜತೆಗೆ ಯುದ್ದ ಮಾಡಿ ಗೆದ್ದರೆ ಮದುವೆಯಾಗುತ್ತೇನೆಂದು ದುರ್ಗೆ ಹೇಳುತ್ತಾಳೆ. ಹಾಗಾಗಿ ಮಹಿಷಾಸುರ ದುರ್ಗೆಯ ಜತೆ ಯುದ್ಧ ಮಾಡುತ್ತಾನೆ. ಅದು 9 ದಿನಗಳ ಕಾಲ ನಡೆಯುತ್ತದೆ. ಕೊನೆಗೆ 9ನೇ ದಿನ ದುರ್ಗಾಮಾತೆ ಮಹಿಷಾಸುರನನ್ನು ಸಂಹರಿಸುತ್ತಾಳೆ. ಆತನ ತಲೆ ಛೇದಿಸುತ್ತಾಳೆ. ಹಾಗಾಗಿ ಜನ ಸಂಭ್ರಮ ಆಚರಿಸಿಕೊಳ್ಳುತ್ತಾರೆ. ಅಂದಿನಿಂದ ವಿಜಯ ದಶಮಿ ಹಬ್ಬವನ್ನು ಜನ ಆಚರಿಸುತ್ತಿದ್ದಾರೆ. ಆ ರಾಕ್ಷಸನ ಕೋಣದ ತಲೆಯನ್ನು ದೇವಿ ಛೇದಿಸುತ್ತಾಳಾದ್ದರಿಂದ ಇನ್ನೂ ಕೆಲವು ಕಡೆ ಕೋಣವನ್ನು ಕಡಿಯುವ ಸಂಪ್ರದಾಯ ಇದೆ.

ಇನ್ನು ದುರ್ಗಾಮಾತೆ 9 ದಿನಗಳ ಕಾಲ 9 ರೂಪಗಳಲ್ಲಿ ದರ್ಶನ ನೀಡುತ್ತಾರೆ ಎಂಬುದು ಗೊತ್ತು. ಆದರೆ ಮೊದಲ ಮೂರು ದಿನ ದುರ್ಗಾ ದೇವಿ ರೂಪದಲ್ಲಿ, ಬಳಿಕ 3 ದಿನ ಲಕ್ಷ್ಮಿ ದೇವಿ ರೂಪದಲ್ಲಿ, ಆ ಬಳಿಕ ಕೊನೆಯ ಮೂರು ದಿನ ಸರಸ್ವತಿ ದೇವಿ ರೂಪದಲ್ಲಿ ನಮಗೆ ದರ್ಶನ ನೀಡುತ್ತಾರೆ. ಹಾಗಾಗಿ 9 ದಿನಗಳ ಕಾಲ ಒಂದೊಂದು ದಿನ ಒಂದೊಂದು ರೂಪದಲ್ಲಿ ಮಾತೆ ಭಕ್ತರಿಗೆ ದರ್ಶನ ನೀಡುತ್ತಾರೆ. ಆದರೆ ಪೂರ್ವದಲ್ಲಿ ಶ್ರೀರಾಮನು ದುರ್ಗಾದೇವಿಯನ್ನು 9 ದಿನಗಳ ಕಾಲ ಪೂಜಿಸಿದನಂತೆ. ಹಾಗಾಗಿ ರಾಮನು ರಾವಣನನ್ನು ಸುಲಭವಾಗಿ ಸಂಹರಿಸಲು ಸಾಧ್ಯವಾಯಿತು. ಇನ್ನು ದುರ್ಗಾಮಾತೆಯ ನವರಾತ್ರಿಗೆ ಸಂಬಂಧಿಸಿದಂತೆ ಇನ್ನೊಂದು ವಿಷಯವೂ ಇದೆ. ಅದೇನೆಂದರೆ.. ಪ್ರತಿ ವರ್ಷ 9 ದಿನಗಳ ಕಾಲ ತನ್ನ ತಾಯಿ ಬಳಿ ಇರುವ ವರವನ್ನು ಶಿವನ ಬಳಿ ಪಡೆದಿದ್ದಾಳೆ. ಇದರ ಪ್ರಕಾರ ತನ್ನ ತಾಯಿಯಾದ ಭೂದೇವಿ ಬಳಿ ದುರ್ಗೆ ಪ್ರತಿವರ್ಷ 9 ದಿನಗಳ ಕಾಲ ಬರುತ್ತಾಳೆ. ಹಾಗಾಗಿ ಆ ದಿನಗಳಲ್ಲಿ ನಾವು ನವರಾತ್ರಿಗಳನ್ನು ಆಚರಿಸುತ್ತೇವೆ. ಕೊನೆಯ ದಿನ ದಸರಾ ಆಚರಿಸುತ್ತಿದ್ದೇವೆ.

ಬಹಳಷ್ಟು ಪ್ರದೇಶಗಳಲ್ಲಿ ಆಯುಧ ಪೂಜೆ ಮಾಡುತ್ತಾರೆ ಅಲ್ಲವೇ. ಕಬ್ಬಿಣದ ಸಲಕರಣೆಗಳು, ಕೆಲಸದ ಸಾಮಗ್ರಿಗೆ ಪೂಜೆ ಮಾಡುತ್ತಾರೆ. ಆದರೆ ಬೆಂಗಳೂರಿನ ಕೆಲವು ಕಡೆ ಕಂಪ್ಯೂಟರ್‌ಗಳು, ಸಿಡಿಯಂಥ ಎಲೆಕ್ಟ್ರಾನಿಕ್ ಪರಿಕರಗಳಿಗೂ ಪೂಜೆ ಮಾಡಲಾಗುತ್ತದೆ. ಇದೂ ಸಹ ಒಂದು ವಿಧವಾದ ಆಯುಧ ಪೂಜೆ ಎಂಬುದು ನಂಬಿಕೆ. ಇನ್ನು ಕೆಲವು ಕಡೆ ದಸರಾ ಹಬ್ಬದ ನಿಮಿತ್ತ ರಾವಣ ದಹನ ಕಾರ್ಯಕ್ರಮ ನಡೆಯುತ್ತದೆ. ಇವಿಷ್ಟು ದಸರಾಗೆ ಸಂಬಂಧಿಸಿದ ಕೆಲವು ಆಸಕ್ತಿಕರ ವಿಷಯಗಳು..!      

ಕೃಪೆ: Facebook

ದಸರಾ ಎನ್ನುವುದು 'ದಶಂ ಹರ' ಎಂಬ ಸಂಸ್ಕೃತ ಶಬ್ಧದ ಅಪಭ್ರಂಶವಾಗಿದೆ. 'ದಶ' ಎಂದರೆ ಹತ್ತು. 'ಹರ' ಎಂದರೆ ನಿರ್ಮೂಲನೆ ಮಾಡುವುದು... ನಮ್ಮಲ್ಲಿರುವ ಹತ್ತು ವಿಧವಾದ ದುರ್ಗುಣಗಳನ್ನು ನಿರ್ಮೂಲನೆ ಮಾಡುವುದು ದಸರಾ ಹಬ್ಬದ ಹಿಂದಿರುವ ತತ್ವ.

ಆ ದಶ ಗುಣಗಳು:

💠 ಕಾಮ,
💠 ಕ್ರೋಧ,
💠 ಮೋಹ,
💠 ಲೋಭ,
💠 ಮದ,
💠 ಮತ್ಸರ,
💠 ಸ್ವಾರ್ಥ,
💠 ಅನ್ಯಾಯ,
💠 ಅಮಾನವೀಯತೆ,
💠 ಅಹಂಕಾರ...

ನಮಲ್ಲಿರುವ ಈ ಹತ್ತು ರಕ್ಕಸರ ಕೊಂದು ವಿಜಯ ಸಾಧಿಸುವ ದಿನವೇ ನಾವೆಲ್ಲರೂ ವಿಜೃಂಭಣೆಯಿಂದ ವಿಜಯ ದಶಮಿ ಆಚರಿಸೋಣ.

ಮಿತ್ರರೇ, ಇನ್ನೊಂದು ಕಿವಿಮಾತು.
ಈ ಹತ್ತು ದಿನಗಲ್ಲಿ ಯಾವುದೇ ಒಳ್ಳೆಯ ಕೆಲಸ ಆರಂಭಿಸಲು ಪಂಚಾಂಗ ನೋಡುವ ಅಗತ್ಯವಿಲ್ಲ.

ಎಲ್ಲರಿಗೂ ದಸರಾ ಹಬ್ಬದ ಹೃತ್ಪೂರ್ವಕ ಶುಭಾಶಯಗಳು...                                                                                                                              ನಿಮ್ಮೆಲ್ಲರನ್ನೂ ಆ ಜಗದೀಶ್ವರೀಯಾದ ದುರ್ಗಾ ಪರಮೇಶ್ವರಿಯು ಅನುಗ್ರಹಿಸಲಿ ಎಂದು ತಾಯಿಯ ಚರಣ ಕಮಲಗಳಲ್ಲಿ ಸವಿನಯ ಪ್ರಾರ್ಥನೆ...

Share:

ಶಮೀವೃತ




ಬನ್ನಿ ಬಂಗಾರ

ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, 'ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ' ಎನ್ನುತ್ತಿದ್ದ.
ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, 'ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ' ಎಂದು ಹೇಳಿದರು.
ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ.
ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ.
ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. 'ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ' ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ.
ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷ ಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು.
ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು.🌴🌴🌴


  
Share:

ನವೀನ ಬೋಧನಾ ವಿಧಾನಗಳು




ಶಿಕ್ಷಕರು ತಮ್ಮ ಬೋಧನಾ ವಿಧಾನಗಳನ್ನು ಮರುಶೋಧಿಸಲು ಮತ್ತು ಅವರ ವರ್ಗಗಳನ್ನು ಆಸಕ್ತಿದಾಯಕವಾಗಿಸಲು ಸಹಾಯ ಮಾಡುವ ಕೆಲವು ನವೀನ ಪರಿಕಲ್ಪನೆಗಳು ಇಲ್ಲಿವೆ.
1. ಸೃಜನಾತ್ಮಕ ಬೋಧನೆ:
  • ಸೃಜನಾತ್ಮಕತೆಯನ್ನು ಉತ್ತೇಜಿಸಲು ಸೃಜನಾತ್ಮಕ ಸಾಧನಗಳ ಸಹಾಯವನ್ನು ತೆಗೆದುಕೊಳ್ಳಿ.
  • ಕಿರಿಯ ಮನಸ್ಸನ್ನು ಪ್ರಚೋದಿಸಲು ಮತ್ತು ಅವರ ಆಸಕ್ತಿಯನ್ನು ಸೆರೆಹಿಡಿಯುವ ತಮಾಷೆಯ ಆಟಗಳನ್ನು ಅಥವಾ ದೃಷ್ಟಿಗೋಚರ ವ್ಯಾಯಾಮಗಳನ್ನು ಸೇರಿಸಿ. 
  • ಇದು ಯುವ ವಿದ್ಯಾರ್ಥಿಯ ಸೃಜನಶೀಲ ಸಾಮರ್ಥ್ಯಗಳನ್ನು ಗುರುತಿಸಲು ಮತ್ತು ಸೃಜನಾತ್ಮಕ ಕೊಡುಗೆಗಳನ್ನು ಪ್ರೋತ್ಸಾಹಿಸಲು ಸಮಯ ಪರೀಕ್ಷಿತ ವಿಧಾನವಾಗಿದೆ.
  • ನಿಮ್ಮ ಎಲ್ಲಾ ವಿಷಯಗಳಲ್ಲಿ ಸೃಜನಾತ್ಮಕತೆಯ ಅಂಶಗಳನ್ನು ತರಲು, ಇದು ಗಣಿತ, ವಿಜ್ಞಾನ, ಅಥವಾ ಇತಿಹಾಸ ದಲ್ಲಿ ತಮ್ಮ ಸೃಜನಾತ್ಮಕ ಕಲ್ಪನೆಗಳನ್ನು ಅಭಿವೃದ್ಧಿಪಡಿಸುವ ಮಾರ್ಗಗಳ ಬಗ್ಗೆ ಯೋಚಿಸಿ. 
  • ವಿಭಿನ್ನ ವಿಚಾರಗಳನ್ನು ಉತ್ತೇಜಿಸಿ, ಅವುಗಳನ್ನು ಅನ್ವೇಷಿಸಲು ಸ್ವಾತಂತ್ರ್ಯ ನೀಡಿ


2. ಆಡಿಯೋ ಮತ್ತು ವೀಡಿಯೊ ಪರಿಕರಗಳು:
  • ನಿಮ್ಮ ಸೆಷನ್ನಲ್ಲಿ ಆಡಿಯೊ-ದೃಶ್ಯ ವಸ್ತುಗಳನ್ನು ಅಳವಡಿಸಿ. 
  • ಮಾದರಿಗಳು, ಫಿಲ್ಮ್ಸ್ಟ್ರಿಪ್ಗಳು, ಸಿನೆಮಾ ಮತ್ತು ಚಿತ್ರಾತ್ಮಕ ವಸ್ತುಗಳೊಂದಿಗೆ ಪಠ್ಯಪುಸ್ತಕಗಳನ್ನು ಪೂರಕವಾಗಿ. 
  • ಮಾಹಿತಿಯ ಗ್ರಾಫಿಕ್ಸ್ ಅಥವಾ ಇತರ ಮನಸ್ಸಿನ ಮ್ಯಾಪಿಂಗ್ ಮತ್ತು ಮೆದುಳಿನ ಮ್ಯಾಪಿಂಗ್ ಉಪಕರಣಗಳನ್ನು ಬಳಸಿ ಅದು ಅವರ ಕಲ್ಪನೆಯು ಹೆಚ್ಚಾಗಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ. 
  • ಈ ವಿಧಾನಗಳು ಕೇಳುವ ಸಾಮರ್ಥ್ಯವನ್ನು ಮಾತ್ರ ಅಭಿವೃದ್ಧಿಪಡಿಸುವುದಿಲ್ಲ, ಆದರೆ ಪರಿಕಲ್ಪನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹ ಅವರಿಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಕೆಲವು ಮೌಖಿಕ ಇತಿಹಾಸ ಸಾಮಗ್ರಿಗಳನ್ನು ಪಡೆಯಬಹುದು, ಸಾರ್ವಜನಿಕ ಉಪನ್ಯಾಸಗಳ ನೇರ ಆನ್ಲೈನ್ ​​ಚರ್ಚೆಗಳನ್ನು ಅಥವಾ ಪ್ಲೇಬ್ಯಾಕ್ ರೆಕಾರ್ಡಿಂಗ್ಗಳನ್ನು ನಡೆಸಬಹುದು. 
  • ವಿಸ್ಮಯಕರ ಸ್ಲೈಡ್ಶೋಗಳು ಅಥವಾ ಪ್ರಸ್ತುತಿಗಳನ್ನು ರಚಿಸಲು ನೀವು ಬಳಸಿಕೊಳ್ಳಬಹುದಾದ ಶಾಲಾಪೂರ್ವ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಸ್ಮಾರ್ಟ್ ಅಪ್ಲಿಕೇಶನ್ಗಳಿವೆ.
3. "ನೈಜ ಪ್ರಪಂಚದ ಅನುಕಲಿಕೆಲಿಕೆ"
  • ನೈಜ ಪ್ರಪಂಚದ ಅನುಭವಗಳನ್ನು ನಿಮ್ಮ ಸೂಚನೆಗಳಾಗಿ ಸೇರಿಸಿಕೊಳ್ಳುವುದು ಕ್ಷಣಗಳನ್ನು ಕಲಿಸುವುದು ಮತ್ತು ತರಗತಿ ಕಲಿಕೆಗಳನ್ನು ಉತ್ಕೃಷ್ಟಗೊಳಿಸುತ್ತದೆ.
  • ನೈಜ ಜೀವನದ ಸಂದರ್ಭಗಳಲ್ಲಿ ಸಂಬಂಧಿಸಿರುವ ಮತ್ತು ಪ್ರದರ್ಶಿಸುವ ಮೂಲಕ, ವಸ್ತುಗಳನ್ನು ಅರ್ಥಮಾಡಿಕೊಳ್ಳುವುದು ಸುಲಭ ಮತ್ತು ತಿಳಿದುಕೊಳ್ಳಲು ಸುಲಭವಾಗುತ್ತದೆ. 
  • ಇದು ಅವರ ಆಸಕ್ತಿಯನ್ನು ಕಿಡಿ ಮತ್ತು ಮಕ್ಕಳನ್ನು ಉತ್ಸುಕನಾಗಿಸುತ್ತದೆ ಮತ್ತು ತೊಡಗಿಸಿಕೊಳ್ಳುತ್ತದೆ. 
  • ಈ ಸೆಷನ್ನನ್ನು ಹೆಚ್ಚು ಆಸಕ್ತಿದಾಯಕವಾಗಿ ಮಾಡಲು preschoolers ಗಾಗಿ ನೀವು ಸ್ಮಾರ್ಟ್ ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳಬಹುದು
4. ಬುದ್ದಿಮತ್ತೆ
  • ನಿಮ್ಮ ತರಗತಿಗಳಿಗೆ  ಬುದ್ಧಿಮತ್ತೆ  ಅವಧಿಯ ಸಮಯವನ್ನು ಮಾಡಿ. 
  • ಈ ಅವಧಿಗಳು ಸೃಜನಶೀಲ ರಸವನ್ನು ಹರಿಯುವ ಉತ್ತಮ ಮಾರ್ಗವಾಗಿದೆ. 
  • ಒಂದೇ ಕಲ್ಪನೆಯ ಮೇಲೆ ಕೇಂದ್ರೀಕರಿಸುವ ಅನೇಕ ಮಿದುಳುಗಳನ್ನು ನೀವು ಹೊಂದಿರುವಾಗ, 
  • ನೀವು ಹಲವಾರು ಆಲೋಚನೆಗಳನ್ನು ಪಡೆಯಲು ಖಚಿತವಾಗಿರುತ್ತೀರಿ ಮತ್ತು ಪ್ರತಿಯೊಬ್ಬರೂ ಚರ್ಚೆಯಲ್ಲಿ ತೊಡಗುತ್ತಾರೆ. 
  • ಸರಿಯಾದ ಅಥವಾ ತಪ್ಪುಗಳ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಧ್ವನಿಮುದ್ರಿಸಲು ಈ ಅವಧಿಗಳು ಉತ್ತಮ ವೇದಿಕೆಯಾಗಿರುತ್ತದೆ.
  •  ನೀವು ಪ್ರಾರಂಭಿಸುವ ಮೊದಲು ಕೆಲವು ಮೂಲ ನಿಯಮಗಳನ್ನು ಹೊಂದಿಸಿ.
  •  ನೀವು ಸರಳ ಮಿದುಳುದಾಳಿ ಅಥವಾ ಗುಂಪಿನ ಮಿದುಳುದಾಳಿ ಅಥವಾ ಮಿದುಳುದಾಳಿಗಳ ಜೊತೆಯಲ್ಲಿ ಹೋಗಬಹುದು
5.ತರಗತಿ ಹೊರಗೆ ತರಗತಿಗಳು
  • ತರಗತಿಯ ಹೊರಗೆ ಹೊರಗೆ ಕಲಿಸಲ್ಪಡುತ್ತಿರುವಾಗ ಕೆಲವು ಪಾಠಗಳನ್ನು ಕಲಿಯಲಾಗುತ್ತದೆ. 
  • ಪಾಠಗಳಿಗೆ ಸಂಬಂಧಿಸಿದ ಕ್ಷೇತ್ರ ಪ್ರವಾಸಗಳನ್ನು ಆಯೋಜಿಸಿ ಅಥವಾ ತರಗತಿ ಹೊರಗೆ ಹೊರಗೆ ನಡೆದುಕೊಳ್ಳಲು ಕೇವಲ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಿ.
  •  ಮಕ್ಕಳು ಈ ಹೊಸ ಮತ್ತು ಉತ್ತೇಜಕವನ್ನು ಕಂಡುಕೊಳ್ಳುತ್ತಾರೆ ಮತ್ತು ವಿಷಯಗಳನ್ನು ವೇಗವಾಗಿ ಕಲಿಸುವ ವಿಷಯಗಳನ್ನು ಕಲಿಯುತ್ತಾರೆ ಮತ್ತು ನೆನಪಿಸಿಕೊಳ್ಳುತ್ತಾರೆ. 
  • ಬಹುತೇಕ ಯಾವುದೇ ವಯಸ್ಸಿನ ವಿದ್ಯಾರ್ಥಿಗಳಿಗೆ ಆಟದ ಪಾತ್ರವು ಹೆಚ್ಚು ಪರಿಣಾಮಕಾರಿಯಾಗಿದೆ. 
  • ವಯಸ್ಸಿಗೆ ಅನುಗುಣವಾಗಿ ನೀವು ಕಸ್ಟಮೈಸ್ ಮಾಡಬೇಕಾಗಿದೆ. 
  • ನೀವು ಶಾಲಾಪೂರ್ವ ವಿದ್ಯಾರ್ಥಿಗಳಿಗೆ ಬೋಧಿಸಲು ಈ ವಿಧಾನವನ್ನು ಸಹ ಬಳಸಬಹುದು; ಅವರ ಸೀಮಿತ ಗಮನವನ್ನು ಸೆಳೆದುಕೊಳ್ಳಲು ಸಾಕಷ್ಟು ಸರಳವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ
6. ರೋಲ್ ಪ್ಲೇ
  • ರೋಲ್ ಪ್ಲೇಯಿಂಗ್ ಮೂಲಕ ಬೋಧಿಸುವುದು ಮಕ್ಕಳು ತಮ್ಮ ಸೌಕರ್ಯ ವಲಯದಿಂದ ಹೊರಬರಲು ಮತ್ತು ಅವರ ವೈಯಕ್ತಿಕ ಕೌಶಲ್ಯಗಳನ್ನು ಬೆಳೆಸಲು ಉತ್ತಮ ಮಾರ್ಗವಾಗಿದೆ. 
  • ಈ ವಿಧಾನವು ಉಪಯುಕ್ತವಾಗಿದೆ, ವಿಶೇಷವಾಗಿ ನೀವು ಸಾಹಿತ್ಯ, ಇತಿಹಾಸ ಅಥವಾ ಪ್ರಸ್ತುತ ಘಟನೆಗಳನ್ನು ಬೋಧಿಸುತ್ತಿದ್ದರೆ. 
  • ಪಾತ್ರ ವಹಿಸುವ ಪಾತ್ರವು ವಿದ್ಯಾರ್ಥಿಯು ತನ್ನ ದೈನಂದಿನ ಕಾರ್ಯಗಳಿಗೆ ಹೇಗೆ ಸಂಬಂಧಪಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ
7. ಸ್ಟೋರಿಬೋರ್ಡ್ ಬೋಧನೆ:
  • "ಇತಿಹಾಸವನ್ನು ಕಥೆಗಳ ರೂಪದಲ್ಲಿ ಕಲಿಸಲಾಗಿದ್ದರೆ, ಅದನ್ನು ಎಂದಿಗೂ ಮರೆಯಲಾಗುವುದಿಲ್ಲ" ಎಂದು ರುಡ್ಯಾರ್ಡ್ ಕಿಪ್ಲಿಂಗ್ ಸರಿಯಾಗಿ ಹೇಳಿದನು. ಸ್ಟೋರ್ಬೋರ್ಡಿಂಗ್ ಎನ್ನುವುದು ಯಾವುದೇ ವಿಷಯದ ಬಗ್ಗೆ ಕಲಿಸುವ ಒಂದು ಉತ್ತಮ ವಿಧಾನವಾಗಿದೆ, 
  • ಇದು ಹಂತ-ಹಂತದ ಸ್ಮರಣಿಕೆ ಅಥವಾ ದೃಶ್ಯೀಕರಣವನ್ನು ಹೆಚ್ಚು-ಪರಿಕಲ್ಪನೆಯ ವಿಚಾರಗಳ ಅಗತ್ಯವಿದೆ.
  • ಪ್ರಸಿದ್ಧ ಈವೆಂಟ್ ಅನ್ನು ಪುನಃ ರಚಿಸಲು ಇತಿಹಾಸ ಶಿಕ್ಷಕರು ಒಂದು ಸ್ಟೋರಿಬೋರ್ಡ್ ಅನ್ನು ಬಳಸಬಹುದು. 
  • ಇಂತಹ ದೃಷ್ಟಿಕೋನದಿಂದ ಉತ್ತೇಜಿಸುವ ಚಟುವಟಿಕೆಗಳು ಸಹ ಸಂಕೀರ್ಣವಾದ ವಿಚಾರಗಳನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. 
  • ಕಥಾಫಲಕಗಳ ಬಳಕೆಯನ್ನು ಸಂವಹನ ರೂಪವೆಂದು ಸಹ ನೀವು ಪ್ರೋತ್ಸಾಹಿಸಬಹುದು ಮತ್ತು ವಿದ್ಯಾರ್ಥಿಗಳು ಅವರ ಕಲ್ಪನೆಯ ಮೂಲಕ ಚಿತ್ರಗಳಲ್ಲಿ ಕಥೆಯನ್ನು ಹೇಳಲು ಅವಕಾಶ ನೀಡಬಹು8

  • 8.ತರಗತಿಯ ಪರಿಸರವನ್ನು ಉತ್ತೇಜಿಸುವದು
  • ಉತ್ತಮವಾಗಿ ಅಲಂಕರಿಸಲ್ಪಟ್ಟ, ವಿನೋದ ಮತ್ತು ಆಕರ್ಷಕವಾಗಿರುವ ಒಂದು ತರಗತಿಯ ಪರಿಸರವು ವಿದ್ಯಾರ್ಥಿಯ ಮನಸ್ಸನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮವಾದ ಯೋಚನೆಯನ್ನು ಮತ್ತು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. 
  • ಮಕ್ಕಳು, ವಿಶೇಷವಾಗಿ ಯುವಕರನ್ನು ದಿನವಿಡೀ ಕುಳಿತು ಕಲಿಯಲು ನಿರೀಕ್ಷಿಸಲಾಗುವುದಿಲ್ಲ. 
  • ಅಂತಹ ಸೃಜನಾತ್ಮಕ ಮತ್ತು ಉತ್ತೇಜಿಸುವ ಪರಿಸರವು ಅವುಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಮತ್ತು ವಿಷಯದ ಬಗ್ಗೆ ತಿಳಿದುಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ. 
  • ಮಕ್ಕಳನ್ನು ಧನಾತ್ಮಕವಾಗಿ ಪರಿಣಾಮ ಬೀರುವ ಪರಿಸರವು ಶಿಕ್ಷಕರಿಗೆ ಅನುಕೂಲಕರವಾಗಿರುತ್ತದೆ. 
  • ಆರಂಭಿಕ ಇಯರ್ಸ್ ಫೌಂಡೇಷನ್ ಸ್ಟೇಜ್ (ಇವೈಎಫ್ಎಸ್) ಗೆ ಸಂಬಂಧಿಸಿರುವ ಶಾಲೆಗಳು ಕಲಿಕೆ ಪರಿಸರದಲ್ಲಿ ಕಲಿಕೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬ ಅಂಶಕ್ಕೆ ದೃಢಪಡಿಸುತ್ತದೆ.

Share:

ಭೂಗೋಳದ ಮಾಪನಗಳು - ಸಾಮಾನ್ಯ ಭೂಗೋಳ

★ಭೂಗೋಳದ ಮಾಪನಗಳು★

■.ಐಸೋಬಾತ್️ ━━━━━━━► ️ಸಮಾನ ಪ್ರಮಾಣದ ಸಮುದ್ರ ಆಳದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಥರ್ಮ ━━━━━━━► ️️ಸಮಾನ ಪ್ರಮಾಣದ ಉಷ್ಣತೆಯ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊಕೇಮ್ ━━━━━━━►  ಸಮಾನ ಪ್ರಮಾಣದ ಚಳಿಗಾಲದ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊನೆಫ್️ ━━━━━━━► ಸಮಾನ ಪ್ರಮಾಣದ ಮೋಡಗಳ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಐಪ್️ ━━━━━━━► ️ಸಮಾನ ಪ್ರಮಾಣದ ಸಮುದ್ರ ಮಟ್ಟದಿಂದ ಎತ್ತರದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಗೋನಿಕ್️ ━━━━━━━► ️ಕಾಂತೀಯ ಕೋನವು ಸಮಾನವಾಗಿರುವ ಸ್ಥಳಗಳ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಹೆಲನ್ ━━━━━━━► ️ಸಮಾನ ಪ್ರಮಾಣದ ಸಮುದ್ರ ಲವಣಾಂಶದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊಬ್ರಾಂಡ್ಸ್ ━━━━━━━► ️ಗುಡುಗು ಸಿಡಿಲು ಸಮೇತ ಮಳೆಯಾಗುವ ಪ್ರದೇಶದ ಬಿಂದುಗಳನ್ನು ಸೇರಿಸುವ ರೇಖೆ.

■.ಐಸೋ ಹೆಲ್ ━━━━━━━► ️ಸಮಾನ ಪ್ರಮಾಣದ ಸೌರ ಪ್ರಕಾಶ / ️ಬಿಸಿಲಿನ ಅವಧಿಯ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಬಾರ್ ━━━━━━━► ಸಮಾನ ಪ್ರಮಾಣದ ವಾತಾವರಣದ ಒತ್ತಡದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋದೇರ್ ━━━━━━━► ಸಮಾನ ಪ್ರಮಾಣದ ️ಬೇಸಿಗೆಯ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಟ್ಯಾಚ್️ ━━━━━━━► ️ಸಮಾನ ಪ್ರಮಾಣದ ಗಾಳಿ / ಮಾರುತಗಳ ವೇಗದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊಹೈಟ್️ ━━━━━━━► ಸಮಾನ ಪ್ರಮಾಣದ ಮಳೆಯ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋ ನಿಫ್ ━━━━━━━► ️ಸಮಾನ ಪ್ರಮಾಣದ ಹಿಮದ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊಸಿಸ್ಮಲ್ ━━━━━━━► ️️ಭೂಕಂಪನ ತೀವ್ರತೆಯ ಬಿಂದುಗಳನ್ನು ಸೇರಿಸುವ ರೇಖೆ.

■.ಐಸೋರೈಮ್️ ━━━━━━━► ️ಸಮಾನ ಪ್ರಮಾಣದ ಹಿಮಗಡ್ಡೆಯ ಪ್ರಮಾಣ/ಮಂಜು  ಬಿಂದುಗಳನ್ನು ಸೇರಿಸುವ ರೇಖೆ

ಭೂಗೋಳಶಾಸ್ತ್ರ.
₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹
1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
 * ಮೃತ ಸಮುದ್ರ.

2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
 * ಏಷ್ಯಾ.

3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
 * 48.

4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
 * ಸೂಯೇಜ್ ಕಾಲುವೆ.

5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು ಕರೆಯುತ್ತಾರೆ?
 * ಏಷ್ಯಾ.

6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
 * ಮಾಸಿನ್ ರಾಮ್. (ಮೇಘಾಲಯ).

7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು ಸೆಂ.ಮೀ ಪಡೆಯುತ್ತದೆ?
 * 1187 ಸೆಂ.ಮೀ.

8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು ----- ಮಿಲಿಯನ್ ಚ.ಕಿ.ಮೀ.ಗಳು?
 * 44.

9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ ----- ಭಾಗದಷ್ಟಾಗಿದೆ?
 * ಶೇ.33.

10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
 * ಯೂರೆಷ್ಯ.

11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ ------- ಭಾಗದಿಂದಾವರಿಸಿದೆ?
 * ಸಾಗರಗಳು & ಭೂಭಾಗ.

12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
 * ಆಕ್ಟಿರ್ಕ್.

13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
 * ಪೆಸಿಫಿಕ್.

14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
 * ಹಿಂದೂ ಮಹಾಸಾಗರ.

15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
 * ಯುರೋಪ್.

16) ಬಾಕ್ಸೈಟ್ ------ ಲೋಹ.
 * ಕಬ್ಬಿಣೇತರ.

17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಷ್ಟ್ರ ಯಾವುದು?
 * ಚೀನಾ.

18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ ಯಾವುದು?
 * ಮಾಲ್ಡೀವ್ಸ್.

19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
 * ಚೀನಾ.

20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ ಯಾವುದು?
 * ಸೌದಿ ಅರೇಬಿಯ.

21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್ ಜನಸಂಖ್ಯೆಯಿದೆ?
 * 4.2.

22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ -------- ಎನ್ನುವರು.
 * ಕೈಗಾರಿಕಾ ಪ್ರದೇಶ.

23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
 * ಜಪಾನ್.

24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
 * ಪುಣೆ ಪ್ರದೇಶ.

25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
 * ಟಿಬೆಟ್.
By RBS

26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ ಯಾವುದು?
 * ಕ್ಯಾಸ್ಪಿಯನ್ ಸಮುದ್ರ.

27) Petra ಎಂದರೆ ------.
 * ಕಲ್ಲು.

28) Oleum ಎಂದರೆ -----.
 * ತೈಲ.

29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
 * ಚೀನಾ.

30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
 * ಬೈಕಲ್ ಸರೋವರ.

31) "ಬೈಕಲ್ ಸರೋವರ" ಎಲ್ಲಿದೆ?
 * ದಕ್ಷಿಣ ಸೈಬೀರಿಯಾ.

32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
 * ಟಿಬೆಟ್.

33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
 * ಮೌಂಟ್ ಎವರೆಸ್ಟ್.

34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
 * 8848 ಮೀ.

35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ ಪರ್ವತ ಸರಣಿಗಳಲ್ಲಿವೆ?
 * ಕಾರಾಕೊರಂ.

36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
 * ಜಪಾನ್.

37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ ಸಂಯೋಜಿತವಾದದ್ದು?
 * ಲ್ಯಾಟಿನ್.

38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು ------- ಎನ್ನುವರು?
 * ಸ್ಟೆಪ್ಪಿ.

39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ ಭಾಗದಲ್ಲಿ ಕಂಡು ಬರುತ್ತದೆ?
 * ಆಕ್ಟಿರ್ಕ್.

40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ ಹೆಚ್ಚು ಮಳೆಯಾಗುತ್ತದೆ?
 * ನೈರುತ್ಯ ಮಾನ್ಸೂನ್.

41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
 * ವ್ಯವಸಾಯ.

42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
 * ಯುನ್ನಾನ್.

43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
 * ಮಯನ್ಮಾರ್.

44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
 * ಭಾರತ.

45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
 * ರಷ್ಯಾ.

46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು ಬರುವುದು?
 * ಚೀನಾ.

47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
 * ಭತ್ತ ಮತ್ತು ಗೋಧಿ.

48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು ಯಾವು?
 * ಚೀನಾ ಮತ್ತು ಭಾರತ.

49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ ರಾಷ್ಟ್ರ ಯಾವುದು?
 * ಭಾರತ.

50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
 * ಚೀನಾ.

51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
 * ಜಪಾನ್.
 .....

🌹ಭೂಗೋಳಶಾಸ್ತ್ರ🌹

1) ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು? * ಇಂಡೋನೇಷಿಯಾ.

2) "ಪ್ಯಾಥಮ್" ಎಂದರೇ------.
* ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆ ಮಾನ.

3) "ಐಯೋ" ಇದು ಯಾವ ಗ್ರಹದ ಉಪಗ್ರಹ?
* ಗುರು.

4) ಪೂರ್ವ ಕರಾವಳಿಯನ್ನು----- ತೀರ ಎನ್ನುವರು.
* ಕೋರಮಂಡಲ.

5) "ಮುರ್ರೆ" ನದಿ ಯಾವ ಖಂಡದಲ್ಲಿದೆ?
* ಆಸ್ಟ್ರೇಲಿಯಾ.

6) ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?
* ಚಿಲಿ.

7) "ಸಿಲೇರು" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
* ಆಂಧ್ರಪ್ರದೇಶ.

8) ಉಷ್ಣವಲಯದಲ್ಲಿರದ ಖಂಡ ಯಾವುದು?
* ಯುರೋಪ್.

9) ಟ್ರೈಟಾನ್ ಯಾವ ಗ್ರಹದ ಉಪಗ್ರಹ?
* ನೆಪ್ಚೂನ್.

10) ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?
* ಆರ್ಕ್ ಟಿಕ್.

11) "ಕೋಸಿ" ಯಾವ ನದಿಯ ಉಪನದಿ?
* ಗಂಗಾ ನದಿಯ.

12) "ಹಣ್ಣುಗಳ ನಾಡು" ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?
* ಮೆಡಿಟರೇನಿಯನ್.

13) "ಕಿಕುಯಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?
* ಕೀನ್ಯಾ.

14) "ವೆಸುವಿಯನ್" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?
* ಇಟಲಿ.

15) ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
* ಸುಪೀರಿಯರ್.

15) "ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
* ಕರ್ನಾಟಕ.

16) 'ಕೆಂಪುಮಣ್ಣು' ಕೆಂಪಾಗಿರಲು ಕಾರಣವೇನು?
* ಕಬ್ಬಿಣದ ಆಕ್ಸೈಡ್.

17) ಜಗತ್ತಿನಲ್ಲಿ ಅತಿದೊಡ್ಡ ಮತ್ತು ಆಳವುಳ್ಳ ಸಾಗರ ಯಾವುದು?
* ಫೆಸಿಫಿಕ್ ಸಾಗರ.

18) ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣು ಯಾವುದು?
* ಕಪ್ಪುಮಣ್ಣು.

19) ಬಹಳ ದಟ್ಟವಾದ ಕಾಡುಗಳು ಯಾವು?
* ನಿತ್ಯ ಹರಿದ್ವರ್ಣ ಕಾಡುಗಳು.

20) "ಒಬೆರಾನ್" ಯಾವ ಗ್ರಹದ ಉಪಗ್ರಹ?
* ಯುರೇನಸ್.

21) "ಮೌಂಟ್ ಪೀಲಿ" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುವುದು?
* ವೆಸ್ಟ್ಇಂಡೀಸ್.

22) ಸುನಾಮಿಗಳು ಸಾಮಾನ್ಯವಾಗಿ ಹುಟ್ಟುವ ಸ್ಥಳ ಯಾವುದು?
* ಸಾಗರದ ಆಳ.

23) ಭಾರತದ ಟರ್ಮಿನಲ್ ಬಂದರು ಯಾವುದು?
* ಕೊಲ್ಕತ್ತಾ.

24) "ತೆಹರಿ ಅಣೆಕಟ್ಟು" ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
* ಭಾಗೀರಥಿ.

25) "ಕಾಮರಾಜ್" ಬಂದರು ಯಾವ ರಾಜ್ಯದಲ್ಲಿದೆ?

* ತಮಿಳುನಾಡು ( ಇನ್ನೊಂದು ಹೆಸರು ಎನ್ನೋರ್).

10 ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ ಪ್ರಮುಖ ಇಸ್ವಿಗಳು

      ಇತಿಹಾಸ

•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ

•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ

•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)

•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)

•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.

•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)

•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)

•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )

•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )

•1784 – ಪಿಟ್ಸ್ ಇಂಡಿಯಾ ಶಾಸನ

•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )

•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )

•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ  (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )

•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ

•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )

•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

•1858 – ಬ್ರಿಟನ್ ರಾಣಿಯ ಘೋಷಣೆ

•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )

•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ

•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ

•1885 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )

•1905 – ಬಂಗಾಳ ವಿಭಜನೆ

•1906 – ಮುಸ್ಲಿಂ ಲೀಗ್ ಸ್ಥಾಪನೆ

•1920-1947 – ಗಾಂಧೀಯುಗ

•1920  - ಅಸಹಕಾರ ಚಳುವಳಿ

•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )

•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )

•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )

•1930 ಮೊದಲ ದುಂಡು ಮೇಜಿನ ಅಧಿವೇಶನ

•1931 – ಎರಡನೆಯ ದುಂಡು ಮೇಜಿನ ಅಧಿವೇಶನ

•1932 – ಮೂರನೆಯ ದುಂಡು ಮೇಜಿನ ಅಧಿವೇಶನ

•1942 ಕ್ವಿಟ್ ಇಂಡಿಯಾ ಚಳುವಳಿ

•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )

•1948  - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್  ಗೂಡ್ಸೆಯಿಂದ )

•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ

•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )

•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ

•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ

•1914-18 – ಮೊದಲ ಮಹಾಯುದ್ಧ

•1917 – ರಷ್ಯಾ ಕ್ರಾಂತಿ

•1939-45 – ಎರಡನೆಯ ಮಹಾಯುದ್ಧ

10 ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ ಪ್ರಮುಖ ಇಸ್ವಿಗಳು

        ರಾಜ್ಯಶಾಸ್ತ್ರ

•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ

•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )

•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ

•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ

•1986 – ಲೋಕಾಯುಕ್ತ ಅದಿನಿಯಮ ಜಾರಿಗೆ

•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )

•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ

•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ

•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ

•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ

•1946 – ಯುನೆಸ್ಕೋ ಸ್ಥಾಪನೆ

•1946 – ಯುನಿಸೆಫ್ ಸ್ಥಾಪನೆ

•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ

•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ

•1967 ಆಸಿಯನ್ ಸ್ಥಾಪನೆ

•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.

10 ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ ಪ್ರಮುಖ ಇಸ್ವಿಗಳು

      ಸಮಾಜಶಾಸ್ತ್ರ

•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ

•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ

•1989 (ಕಾಯ್ದೆ) -  ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ

•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )

•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ

•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ

•1961 – ವರದಕ್ಷಿಣೆ ನಿಷೇದ ಕಾಯ್ದೆ  ( 1986 ರಲ್ಲಿ ತಿದ್ದುಪಡಿ )

•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.
Share:

8th CSAS Chanakya (ಇತಿಹಾಸ)


Share:

My smartphone as laptop remote

ಶುಭೋದಯ..
Welcome to
"SaVi digital teaching "

ನಾನು ಇತ್ತೀಚಿಗೆ ಮಾಡಿದ pptಯಲ್ಲಿ ಪ್ರತಿ ಇಮೇಜ ಮತ್ತು ಸಾಲುಗಳು animation ನಿಂದ ಕೂಡಿರುತ್ತವೆ. ಇದು ಪ್ರತಿ ಸಲ ಕ್ಲಿಕ್ ಮಾಡಬೇಕಾಗುತ್ತದೆ.

ಇಲ್ಲಿ ಒಂದೇ ಸ್ಥಳದಲ್ಲಿ laptop ಮುಂದೆ ಕುಳಿತು ಪಾಠ ಮಾಡಬೇಕಾಗುತ್ತದೆ ಇದು ಸ್ವಲ್ಪ ಶಿಕ್ಷಕನಿಗೆ ಬೋರಾಗಬಹುದು..

ತರಗತಿಯ ಕೋಣೆಯಲ್ಲಿ ಮಕ್ಕಳ ಮಧ್ಯ ನಿಂತು, ಪ್ರತಿ ವಿದ್ಯಾರ್ಥಿ ಬಳಿ ಸಾಗುತ್ತಾ ಅವರನ್ನು ಪಾಠದ ಕಡೆ ಗಮನ ಸೇಳೆಯುತ್ತಾ ಪಾಠ ಮಾಡಬಹುದು ಮತ್ತು ನಮ್ಮ laptopನ್ನು ನಾವು ಇದ್ದ ಸ್ಥಳದಲ್ಲಿಯೇ ನಿಯಂತ್ರಿಸಬಹುದು..!

ಅದಕ್ಕಾಗಿ ನಾನು ನನ್ನ android mobile ನ್ನು laptop remote ಆಗಿ ಬಳಸುತ್ತೇನೆ.

ನಿಮ್ಮ laptopನ್ನು ನಿಮ್ಮ android mobile ನಿಂದ ನಿಯಂತ್ರಿಸಿ..
ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ
Step 1
Play store ನಿಂದ Asus remote control App download ಮಾಡಿಕೊಳ್ಳಿ

Take a look at "Remote Link (PC Remote)"
https://play.google.com/store/apps/details?id=com.asus.remotelink.full

Step 2
ನಿಮ್ಮ laptop ನಲ್ಲಿ remote link download ಮಾಡಿಕೊಳ್ಳಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ http://remotelink.asus.com

Step 3
ನಿಮ್ಮ mobile ನಲ್ಲಿ remote app open ಮಾಡಿ Bluetooth ನಲ್ಲಿ ನಿಮ್ಮ laptop search ಮಾಡಿ connect ಮಾಡಿ..

Enjoy...

ಶುಭದಿನ
By Ravi Aheri
From group SVDT
Share:

ಪ್ರಮುಖ ಇಸ್ವಿಗಳು

🌹ಇತಿಹಾಸ

•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ  (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ
•1885 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 – ಗಾಂಧೀಯುಗ
•1920  - ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )
•1930 ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )
•1948  - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್  ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )
•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ
•1914-18 – ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ

       🌹 ರಾಜ್ಯಶಾಸ್ತ್ರ

•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ
•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )
•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ
•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ
•1986 – ಲೋಕಾಯುಕ್ತ ಅದಿನಿಯಮ ಜಾರಿಗೆ
•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )
•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ
•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ
•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ
•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ
•1946 – ಯುನೆಸ್ಕೋ ಸ್ಥಾಪನೆ
•1946 – ಯುನಿಸೆಫ್ ಸ್ಥಾಪನೆ
•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ
•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ
•1967 ಆಸಿಯನ್ ಸ್ಥಾಪನೆ
•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.

      🌹ಸಮಾಜಶಾಸ್ತ್ರ

•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ
•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ
•1989 (ಕಾಯ್ದೆ) -  ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ
•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )
•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ
•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ
•1961 – ವರದಕ್ಷಿಣೆ ನಿಷೇದ ಕಾಯ್ದೆ  ( 1986 ರಲ್ಲಿ ತಿದ್ದುಪಡಿ )
•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.

       🌹 ಅರ್ಥಶಾಸ್ತ್ರ

•1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )
•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುತ್ತದೆ )
•1951.ಏಪ್ರಿಲ್ 1 – ಮೊದಲ ಪಂಚವಾರ್ಷಿಕ ಯೋಜನೆ ಆರಂಭ
•1995.ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ ಬಂದಿತು.

ಸಮಾಜಶಾಸ್ತ್ರ
👆👆👆👆👆👆
ಸತಿ ಸಹಗಮನ ನಿಷೇಧ ಕಾಯ್ದೆ 1829

ವಿಧವ ಪುನರ್ ವಿವಾಹ ಕಾಯ್ದೆ 1856

ಅವಿವಾಹಿತ ಸ್ತ್ರೀ ಆಸ್ತಿ ಹಕ್ಕು ಕಾಯ್ದೆ 1874

ಬಾಲ್ಯ ವಿವಾಹ ನಿಷೇಧ ಕಾಯ್ದೆ 1929

ಹಿಂದು ವಿವಾಹ ಕಾಯ್ದೆ 1955

ಹಿಂದು ಉತ್ತರಾಧಿಕಾರ ಕಾಯ್ದೆ 1956

ಹಿಂದು ದತ್ತು ಮತ್ತು ಜೀವಾನಂಶ ಕಾಯ್ದೆ 1956

ಮಹಿಳೆ ಅನೈತಿಕ ವ್ಯಾಪಾರ ಕಾಯ್ದೆ 1956

ವರದಕ್ಷಿಣೆ ನಿಷೇಧ ಕಾಯ್ದೆ 1961

ಮಾತೃ ಸೌಲಭ್ಯ ಕಾಯ್ದೆ 1961

ಬಾಲ್ಯ ವಿವಾಹ ಪ್ರತಿಬಂಧಕ ಕಾಯ್ದೆ 1978

ಕುಟುಂಬ ನ್ಯಾಯಲಯದ ಕಾಯ್ದೆ 1984

ಸಮಾನ ವೇತನ ಕಾಯ್ದೆ 1976

ಗುಲಾಮಗಿರಿ ಕಾಯ್ದೆ 1843

ಶಿಶು ಹತ್ಯೆ ನಿಷೇಧ ಕಾಯ್ದೆ 1870

ವರದಕ್ಷಿಣೆ ತಿದ್ದುಪಡಿ ಕಾಯ್ದೆ 1986

ಮಧುವೆ ತಿದ್ದುಪಡಿ ಕಾಯ್ದೆ 2003

ವೇಶ್ಯಾವಾಟಿಕೆ ನಿಷೇಧ ಕಾಯ್ದೆ 1986

ಕೃಪೆ : what's up group

Share:

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು

🌷ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು 
👉ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ - ಹರಿಷೇಣ
👉 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ - ಅಲಹಾ ಬಾದ್ ಸ್ತಂಭ ಶಾಸನ
👉ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ - ಕೌಸಂಬಿ
👉 ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ - ಫೀರೋಜ್ ಷಾ ತುಘಲಕ್
👉 ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ - ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
👉 ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು - - ಮಿರತ್ ಶಾಸನ ಹಾಗೂ ತೋಪ್ರ ಶಾಸನ
👉ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ -ಕಂದಾಹಾರ್
👉ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ -ರುದ್ರದಾಮನ್
👉ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು - ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
👉 ತೆಲುಗಿನ ಪ್ರಥಮ ಶಾಸನ - ಕಲಿಮಲ್ಲ ಶಾಸನ
👉ತಮಿಳಿನ ಪ್ರಥಮ ಶಾಸನ - ಮಾಂಗುಳಂ ಶಾಸನ
👉 ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ - ಅಶೋಕ
👉ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ - ಬ್ರಾಹ್ಮಿ ಹಾಗೂ ಖರೋಷ್ಠಿ
👉. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ - 13 ನೇ ಶಿಲಾ ಶಾಸನ
👉. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು - •1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
👉 ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ - ಮಸ್ಕಿ ಶಾಸನ
👉 ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಕೊಪ್ಪಳ
👉. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ - ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
👉. ನಿಟ್ಟೂರಿನ ಶಾಸನದ ರಚನಾಕಾರ -  ಉಪಗುಪ್ತ
👉 ನಿಟ್ಟೂರಿನ ಶಾಸನದ ಲಿಪಿಕಾರ - ಚಡಪ
👉 ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ - 1950ರಲ್ಲಿ
👉. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ - ದೇವನಾಗರಿ
👉. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ - ಬಬ್ರುಶಾಸನ
👉. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ -  ಶಕರ ಪ್ರಸಿದ್ದ ಅರಸ ರುದ್ರಧಮನ
👉. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ -  ಸಂಜಾನ್ ದತ್ತಿ ಶಾಸನ
👉. ದಂತಿದುರ್ಗ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
👉 ಒಂದನೇ ಕೃಷ್ಣ - ಭಾಂಡ್ಕ ಮತ್ತು ತಾಳೇಗಾಂ ಶಾಸನ
👉. ಧೃವ - ಜೆಟ್ಟಾಯಿ ಶಾಸನ
👉ಅಮೋಘವರ್ಷ - ಸಂಜಾನ್ ತಾಮ್ರ ಶಾಸನ
👉 ಬಾದಾಮಿ ಶಾಸನದ ಕರ್ತೃ - 1 ನೇ ಪುಲಿಕೇಶಿ
👉. ಮಹಾಕೂಟ ಸ್ತಂಭ ಶಾಸನದ ಕರ್ತೃ - ಮಂಗಳೇಶ
👉ಮಹಾಕೂಟ ಸ್ತಂಭ ಶಾಸನ -  ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
👉ರವಿ ಕೀರ್ತೀ - ಐಹೋಳೆ ಶಾಸನ
👉 ಐಹೋಳೆ ಶಾಸನ -  ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
👉 ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ (ಚಿತ್ರದುರ್ಗ)
👉 ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ.
👉. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ
👉. ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ.
👉. ಹಲ್ಮಿಡಿ ಶಾಸನ ಇಲ್ಲಿ ಇರುವುದು - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
👉. ಹಲ್ಮಿಡಿ ಶಾಸನದ ಕರ್ತೃ -  ಕಾಕುಸ್ಥವರ್ಮ
👉 ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ
👉. ತಾಳಗುಂದ ಶಾಸನವನ್ನು ಬರೆಯಿಸಿದವರು  - ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
👉 ಮಹಿಪವೊಲು ತಾಮ್ರ ಶಾಸನದ ಕರ್ತೃ -ಶಿವಸ್ಕಂದ ವರ್ಮ .
👉 ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ .
👉. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
👉. ನಾನಾ ಘಾಟ್ ಶಾಸನದ ಕರ್ತೃ - ನಾಗನೀಕ .
👉. ಗುಹಾಂತರ ನಾಸಿಕ್ ಶಾಸನದ ಕರ್ತೃ - ಗೌತಮೀ ಬಾಲಾಶ್ರೀ
👉. ವೆಳ್ವಕುಡಿ ತಾಮ್ರ ಶಾಸನದ ಕರ್ತೃ - ಪರಾಂತಕ ಚೋಳ
Share:

ಪ್ರಮುಖ ಅಣೆಕಟ್ಟುಗಳು

ಪ್ರಮುಖ ಅಣೆಕಟ್ಟುಗಳು 
1)ಭಾಕ್ರನOಗಲ್ ಅಣೆಕಟ್ಟು
.ಸ್ತಳ -ಬಿಲಸಪೂರ(ಹಿಮಾಚಲ ಪ್ರದೇಶ )
.ನದಿ -ಸಟ್ಲೇಜ 
.ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ
2)ಹಿರಾಕುಡ್ ಅಣೆಕಟ್ಟು 
.ಸ್ತಳ -ಸಂಬಲಪುರ (ಒಡಿಶಾ )
.ನದಿ -ಮಹಾನದಿ
3)ಮೇಟ್ಟುರು ಅಣೆಕಟ್ಟು 
.ಸ್ತಳ -ಮೇಟ್ಟುರು (ಸೇಲಮ ) ತಮಿಳುನಾಡು 
.ನದಿ -ಕಾವೇರಿ 
.ಜಲಶಯದ ಹೆಸರು -ಸ್ಟೇನ್ಲಿ ಜಲಶಯ
4)ನಾಗಾರ್ಜುನ ಅಣೆಕಟ್ಟು 
.ಸ್ತಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
.ನದಿ -ಕೃಷ್ಣ
5)ಇಡುಕ್ಕಿ ಆಣೇಕಟ್ಟು 
.ಸ್ತಳ -ಇಡುಕ್ಕಿ (ಕೇರಳ )
.ನದಿ -ಪೆರಿಯಾರ್
6)ರಾಮ ಗಂಗಾ ಅಣೆಕಟ್ಟು 
.ಸ್ತಳ -ಕಲಾಗಡ (ಉತ್ತರಾಖಂಡ )
.ನದಿ -ರಾಮಗOಗಾ
7)ಪೋಡOಪಾಡು ಅಣೆಕಟ್ಟು 
.ಸ್ತಳ -ನೀಜಮಾಬಾದ (ತೆಲಂಗಾಣ )
.ನದಿ -ಗೋದಾವರಿ
8)ಊಕ್ಕೈ ಅಣೆಕಟ್ಟು 
ಸ್ತಳ -ಊಕ್ಕೈ (ಗುಜರಾತ್ )
.ಜಲಶಯದ ಹೆಸರು -ವಲ್ಲಭ ಸಾಗರ್ 
ನದಿ -ತಪತಿ
9)ಪೋಂಗ ಅಣೆಕಟ್ಟು 
.ಸ್ತಳ -ತಲವಾರ ( ಹಿಮಾಚಲ ಪ್ರದೇಶ )
.ನದಿ -ಬಿಯಾಸ್
10) ಗಾಂಧಿ ಸಾಗರ್ ಅಣೆಕಟ್ಟು 
.ಸ್ತಳ -ಮ್ಯಂಡ್ ಸಾರ್ 
ನದಿ - ಚೇಂಬಲ ಯಮೂನ ನದಿ
11)ಕೋಯನ್ನ ಅಣೆಕಟ್ಟು 
.ಸ್ತಳ -ಕೊಯ್ನ (ಮಹರಾಷ್ಟ)
.ನದಿ -ಕೋಯನ್ 
.ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ
12)ಅಲಮಟ್ಟಿ ಅಣೆಕಟ್ಟು 
.ಸ್ತಳ -ಅಲಮಟ್ಟಿ ( ಕರ್ನಾಟಕ )
.ನದಿ -ಕೃಷ್ಣ 
.ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ
13)ತವಾ ಅಣೆಕಟ್ಟು
.ಸ್ತಳ -ಹೊಸಂಗಾಬಾದ 
( ಮಧ್ಯ ಪ್ರದೇಶ )
.ನದಿ -ತವಾ
14)ಜಯಕವಡಿ ಅಣೆಕಟ್ಟು 
.ಸ್ತಳ -ಜಯಕವಡಿ (ಮಹರಸ್ಟ್ರ )
.ನದಿ -ಗೋದವರೀ 
.ಜಲಶಯದ ಹೆಸರು -ನಾಥಸಾಗರ್ ಜಲಶಯ
15)ರಿಹಂದ ಅಣೆಕಟ್ಟು 
.ಸ್ತಳ -ಸೂನಭದ್ರ
( ಉತ್ತರ ಪ್ರದೇಶ )
.ನದಿ -ರಿಹಂದ
16)ಸರ್ದರ ಸರೋವರ ಅಣೆಕಟ್ಟು
.ಸ್ತಳ -ನವಗO (ಗುಜರಾತ್)
.ನದಿ - ನರ್ಮದಾ
17)ರಣ ಪ್ರತಾಪ್ ಸಾಗರ್ ಅಣೆಕಟ್ಟು
.ಸ್ತಳ -ರವಬತ (ರಾಜಸ್ತಾನ್ )
.ನದಿ -ಚೇಂಬಲ
Source: what's up group
Share:

ಭೂಗೋಳಶಾಸ್ತ್ರ ಮಾಹಿತಿ ಕಣಜ

ಭೂಗೋಳಶಾಸ್ತ್ರ ಮಾಹಿತಿ ಕಣಜ
💡ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ
💡ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ
💡ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು
💡 ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ
💡ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ
ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)
💡ಪಕ್ಷಿಪಾದದ ಆಕಾರದಲ್ಲಿ ತನ್ನ  ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ
💡 ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು
💡ಭೂಕಂಪದ  ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು
ಅಥವಾ ರೇಲೈ ಅಲೆಗಳು (Rayleigh wave)
💡ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ
💡 ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ
💡 ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)
💡 ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)
💡 ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ -  ಸೋಸೆಕೋರು ಸರೋವರ (ಟಿಬೆಟ)
💡 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)
💡 ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)
💡 ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್
💡 ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)
💡ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.
💡 ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ -  ಓವೇನ್ ಫಾಲ್ ಸರೋವರ(ಉಗಾಂಡಾ)
💡 ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)
💡 ಪ್ರಪಂಚದ ಅತ್ಯಂತ ಆಳವಾದ  ಸರೋವರ-  ಬೈಕಲ್ ಸರೋವರ(ರಷ್ಯಾ)
💡 ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು  ಪರಿಚಯಿಸಿದರು- ಟಾಲಮಿ
ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.
💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ
💡 ಸಾರಜನಕ ಇದು ಜಡವಾದ ಅನಿಲ.
🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ
💡 ಆಮ್ಲಜನಕವನ್ನು ಶೋಧಿಸಿದವರು - ಜೋಸೆಫ್ ಪ್ರಿಸ್ಲೆ
🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..
💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ - ಆರ್ಗಾನ
🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.
💡 ಅತಿ ಹಗುರವಾದ ಅನಿಲ-ಜಲಜನಕ
🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.
💡 ಅತಿ ಭಾರವಾದ ಅನಿಲ- ಸಾರಜನಕ
💡 ನಗಿಸುವ ಅನಿಲ - ನೈಟ್ರೇಟ್ ಆಕ್ಸೈಡ್
💡  ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .
🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ
💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ -  ಕಾರ್ಬನ್ ಡೈ ಆಕ್ಸೈಡ
🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು  ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.
💡ಓಝೋನ ಪದರನ್ನು  ಶೋಧಿಸಿದವರು -  ಚಾರ್ಲ್ಸ್‌ ಪ್ಯಾಬ್ರೆ
🔸ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.
💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ
💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.
💡 ಉಲ್ಕೆಗಳು ವಾಯುಮಂಡಲದ
ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.
💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು
💡 ಓಜೋನ ವಲಯವು ಕಂಡುಬರುವ  ವಾಯುಮಂಡಲದ  ಸ್ತರ- ಸಮೊಷ್ಣ ಮಂಡಲ
💡  ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ  ಸ್ತರ - ಸಮೊಷ್ಣ ಮಂಡಲ
💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.
💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ
💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ
ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.
💡ಅತ್ಯಂತ ದೊಡ್ಡ ಸಾಗರ - ಫೆಸಿಪಿಕ ಸಾಗರ
💡 S ಆಕಾರದಲ್ಲಿರುವ  ಸಾಗರ - ಅಟ್ಲಾಂಟಿಕ್  ಸಾಗರ
💡 ಬರ್ಮುಡಾ ಟ್ರಯಾಂಗಲ್  ಕಂಡು ಬರುವುದು - ಅಟ್ಲಾಂಟಿಕ್  ಸಾಗರ
🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ
💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ - ಆರ್ಟಿಕ್ ಮಹಾ ಸಾಗರ
💡 "ರತ್ನಾಕರ" ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ
💡  ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ
💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ
💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು  ಕಂಡು ಬರುವ ಖಂಡ- ಉ.ಅಮೆರಿಕ
💡  ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ - ಅಂಟಾರ್ಕಟಿಕ್
ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು
💡ಜಗತ್ತಿನ ಅತಿ ಚಿಕ್ಕ ನದಿ - ರೊಯಿ ಇದು ಉ.ಅಮೆರಿಕ

ಮಾಹಿತಿ ಮೂಲ: Online what's up group
Share:

ಮಹಾತ್ಮ ಗಾಂಧಿ ಜನ್ಮ ದಿನಾಚರಣೆ





ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.

ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಾ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಿಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ . 19 ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿ ಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಕ್ಕೆ ಕೆಲಸದ ಮೇಲೆ ತೆರಳಿದರು.ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕನ್ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ – ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. 1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.”ಭಾರತ ಬಿಟ್ಟು ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು. ತತ್ವಗಳು: ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು. ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಬನ್ನಿ ಅವರ ಹಾದಿಯಲ್ಲಿ ನಾವೂ ಸಹ ಸಾಗಲು ಪ್ರಯತ್ನಿಸೋಣ.
Share:

ಭಾರತಕ್ಕೆ ಯೂರೋಪಿಯನ್ನರ ಆಗಮನ ಭಾಗ 4


Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com