For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ವಿಶ್ವ ಪರಿಸರ ಸಂರಕ್ಷಣಾ ದಿನ

e ಇಂದು ಜುಲೈ 28, ವಿಶ್ವ ಪ್ರಕೃತಿ ಸಂರಕ್ಷಣಾ ದಿನ. ಪರಿಸರ ಸಂಪನ್ಮೂಲಗಳನ್ನು ಉಳಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು, ಮರುಬಳಕೆ ಮಾಡಲು, ಅದನ್ನು ಸಂರಕ್ಷಿಸಲು ಮತ್ತು ಅದನ್ನು ಹಾನಿಗೊಳಿಸುವುದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಪ್ರಪಂಚದಾದ್ಯಂತ ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಬನ್ನಿ ಜೊತೆಯಾಗಿ ಪರಿಸರ ಸಂರಕ್ಷಣೆ ಮಾಡೋಣ. ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜುಲೈ 28ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳನ್ನು ರಕ್ಷಿಸಲು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು ಅವಶ್ಯಕ. ಜುಲೈ 28ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಎಂದರೆ ಎಲ್ಲರೂ ಜೊತೆಯಾಗಿ ಪ್ರಕೃತಿಯನ್ನು ಉಳಿಸೋಣ ಮತ್ತು ಬೆಳೆಸೋಣ ಎಂಬುದಾಗಿದೆ. ಎಲ್ಲರೂ ಪ್ರಕೃತಿ ಸಂರಕ್ಷಣೆಯ ಪಣ ತೊಡೋಣ ಪ್ರಕೃತಿಯ ಸಂರಕ್ಷಣೆ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಬುದ್ಧಿವಂತಿಕೆಯ ನಿರ್ವಹಣೆ ಮತ್ತು ಬಳಕೆ. ನೈಸರ್ಗಿಕ ಅಸಮತೋಲನದಿಂದಾಗಿ, ನಾವು ಜಾಗತಿಕ ತಾಪಮಾನ ಏರಿಕೆ, ವಿವಿಧ ರೋಗಗಳು, ನೈಸರ್ಗಿಕ ವಿಪತ್ತುಗಳು, ಹೆಚ್ಚಿದ ತಾಪಮಾನ ಮುಂತಾದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ನಮಗೆ ತಿಳಿದಿದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸುವುದು ಅವಶ್ಯಕ. ಪರಿಸರವನ್ನು ಬುದ್ದಿವಂತಿಕೆಯಿಂದ ಉಪಯೋಗಿಸೋಣ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿ ಸಾಕಷ್ಟು ಒದಗಿಸುತ್ತದೆ. ಆದರೆ ಮನುಷ್ಯ ಅದಕ್ಕಾಗಿ ದುರಾಸೆ ಪಡಬಾರದು ಎಂದು ಮಹಾತ್ಮ ಗಾಂಧಿಯವರೇ ಹೇಳುತ್ತಾರೆ. ಸ್ಥಿರ ಸಮಾಜಕ್ಕೆ ಅಡಿಪಾಯ ಹಾಕಲು ಆರೋಗ್ಯಕರ ಪರಿಸರ ಮುಖ್ಯ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಮತ್ತು ಸಂರಕ್ಷಿಸುವ ಸಲುವಾಗಿ ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ದೈನಂದಿನ ಜೀವನಕ್ಕೆ ಬೇಕಾದ ನೀರು, ಗಾಳಿ, ಮಣ್ಣು, ಖನಿಜಗಳು, ಮರಗಳು, ಪ್ರಾಣಿಗಳು, ಆಹಾರ ಮತ್ತು ಅನಿಲಗಳಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಎಲ್ಲರೂ ಅವಲಂಬಿಸಿದ್ದೇವೆ. ಇದನ್ನೆಲ್ಲಾ ಪ್ರಕೃತಿ ನಮಗೆ ನಿಸ್ವಾರ್ಥದಿಂದ ಕೊಡುತ್ತಿದೆ. ಆದರೂ ಮನುಷ್ಯ ಅದನ್ನು ಉಳಿಸಿಕೊಳ್ಳದೆ ನಾಶ ಮಾಡುತ್ತಿದ್ದಾನೆ. ಭೂಮಿಯ ಸಂರಕ್ಷಣೆ ಎಂದರೆ ಭೂಮಿಯನ್ನು ಮತ್ತು ಸಂಪನ್ಮೂಲಗಳನ್ನು ಮನುಷ್ಯರ ಶಾಶ್ವತ ಒಳಿತಿಗಾಗಿ ಬುದ್ಧಿವಂತಿಕೆಯಿಂದ ಬಳಸುವುದು ಎಂದು ಗಿಫೋರ್ಡ್ ಪಿಂಚೋಟ್ ರವರು ಹೇಳುತ್ತಾರೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಪ್ರಕೃತಿಯ ಸಂರಕ್ಷಣೆ ಬಹಳ ಅವಶ್ಯಕ, ವಿಜ್ಞಾನಿಗಳು ಸಹ ಮುಂದಿನ ದಿನಗಳಲ್ಲಿ ಪ್ರಕೃತಿಯ ಅಳಿವಿನ ಬಗ್ಗೆ ನಮಗೆ ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ತಾಪಮಾನ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. “ಸಂರಕ್ಷಣೆ ಕೇವಲ ನೈತಿಕತೆಯ ಪ್ರಶ್ನೆಯಲ್ಲ, ಅದು ನಮ್ಮದೇ ಉಳಿವಿನ ಪ್ರಶ್ನೆಯಾಗಿದೆ”ಎನ್ನುತ್ತಾರೆ ದಲೈ ಲಾಮಾ. ಏರುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ, ನಗರೀಕರಣ, ಕೈಗಾರಿಕರಣ, ಅರಣ್ಯನಾಶದಿಂದ ತಾಪಮಾನ ಏರುತ್ತಿದೆ, ಮಳೆ ಇಳಿಮುಖವಾಗುತ್ತಿದೆ. ಪರಿಸರ ಮಾಲಿನ್ಯ, ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಇಂಥ ಸಮಸ್ಯೆಗಳನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಭಾರತ ಹೆಮ್ಮೆ ಪಡಬೇಕು ನಮ್ಮಲ್ಲಿ ಉತ್ತಮ ಪರಿಸರ, ಅರಣ್ಯ, ಪ್ರಾಣಿ ಸಂಪತ್ತುಗಳಿವೆ ಅದನ್ನು ಉಳಿಸಿಕೊಂಡು, ಜಾಗೃತೆಯಿಂದ ಕಾಪಾಡಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿಶ್ವದ ಒಟ್ಟು ಹುಲಿ ಗಣತಿಗೆ ಹೋಲಿಸಿದರೆ ಶೇ.70ರಷ್ಟು ಹುಲಿ ಸಂತತಿ ಭಾರತದಲ್ಲೇ ಇದೆ.. ಭಾರತ ಈ ಕುರಿತಾಗಿ ಹೆಮ್ಮೆ ಪಡಬೇಕು. ನಮ್ಮಲ್ಲಿ 30,000 ಆನೆಗಳು, 3000 ಖಡ್ಗಮೃಗಗಳು ಮತ್ತು 500 ಕ್ಕೂ ಹೆಚ್ಚು ಸಿಂಹಗಳಿವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಪರಿಸರವನ್ನು ನಾವು ಸಂರಕ್ಷಿಸಲು ಹಲವಾರು ಮಾರ್ಗಗಳಿವೆ.. ಮರುಬಳಕೆ ಮಾಡಬಹುದಾದ ಮತ್ತು ಜೈವಿಕ ವಿಘಟನೀಯ ಉತ್ಪನ್ನಗಳನ್ನು ಸಾಧ್ಯವಾದಷ್ಟು ಖರೀದಿಸಲು ಪ್ರಯತ್ನಿಸಿ. ಸಾಧ್ಯವಾದರೆ ಎಲ್ಲವನ್ನೂ ಮರುಬಳಕೆ ಮಾಡಿ. ನೀರಿನ ಬಳಕೆಯನ್ನು ಕಡಿಮೆ ಮಾಡುವುದು ಅವಶ್ಯಕ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿ. ನಿಮ್ಮ ಕೆಲಸವನ್ನು ವಿದ್ಯುತ್ ಉಪಕರಣದಿಂದ ಮಾಡಿದ ನಂತರ ಅದನ್ನು ಆಫ್ ಮಾಡಿ. ಈ ರೀತಿಯಾಗಿ ಮಾಡಿದರೆ ವಿದ್ಯುತ್ ಶಕ್ತಿ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಮರಗಳನ್ನು ನೆಟ್ಟು ಭೂಮಿಯನ್ನು ಹಸಿರು ಮಾಡಿ. ತರಕಾರಿಗಳನ್ನು ಬೆಳೆಯಿರಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಗಳು ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬೆರೆಸಿರಲಾಗಿರುತ್ತದೆ. ಆದ್ದರಿಂದ, ತರಕಾರಿಗಳನ್ನು ನೆಡುವುದು ಮತ್ತು ಸಾವಯವ ಆಹಾರವನ್ನು ಸೇವಿಸುವುದು ಉತ್ತಮ. ಬ್ಯಾಟರಿಗಳು ಪರಿಸರಕ್ಕೆ ಅಪಾಯಕಾರಿ ಎಂದು ನಮಗೆ ತಿಳಿದಿರುವಂತೆ, ಪುನರ್ ಬಳಕೆ ಮಾಡಬಹುದಾದ ಬ್ಯಾಟರಿಗಳನ್ನು ಬಳಸುವುದು ಉತ್ತಮ. ಮಾಲಿನ್ಯವನ್ನು ಕಡಿಮೆ ಮಾಡಿ. ಪ್ರಕೃತಿ, ಪರಿಸರ ಮತ್ತು ಶಕ್ತಿಯ ಸಂರಕ್ಷಣೆಯ ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಿ. ಪರಿಸರ ಸಂರಕ್ಷಣೆಯ ಬಗ್ಗೆ ಮೂರು ಅಗತ್ಯ ಪದಗಳಿವೆ, ಅದು ಕಡಿಮೆ, ಬಳಕೆ ಮತ್ತು ಮರುಬಳಕೆ ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಮಳೆ ನೀರು ಸಂಗ್ರಹ, ಶಕ್ತಿ ಸಂಪನ್ಮೂಲಗಳ ಮಿತ ಬಳಕೆ, ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸುವುದು. ಕ್ರಿಮಿನಾಶಕ ಬಳಕೆ ಕಡಿಮೆ ಮಾಡುವುದು ಇನ್ನಿತರ ಪರಿಸರ ಸಂರಕ್ಷಣಾ ವಿಷಯದ ಬಗ್ಗೆ ಗಮನ ಹರಿಸುವುದು ಜೊತೆಯಾಗಿ ಪರಿಸರ ಸಂರಕ್ಷಣೆ ಮಾಡೋಣ ಬನ್ನಿ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ಚತುಷ್ಪಥ ರಸ್ತೆಗಳು, ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ವೃಕ್ಷಗಳ ಮಾರಣ ಹೋಮ ಮೊದಲಾದ ಕಾರಣಗಳಿಂದಾಗಿ ಪರಿಸರ ನಾಶ, ಹವಾಮಾನ ವೈಪರೀತ್ಯಗಳೂ ಉಂಟಾಗುತ್ತಿವೆ. ಅಲ್ಲದೆ, ಹೆಚ್ಚುತ್ತಿರುವ ಜನಸಂಖ್ಯೆ, ವಸತಿ ಸಮುಚ್ಚಯಗಳು, ಹೊಗೆ ಉಗುಳುವ ವಾಹನಗಳ ಸಂದಣಿ, ಪ್ಲಾಸ್ಟಿಕ್ ಇತ್ಯಾದಿಗಳಿಂದಾಗಿ ನಮ್ಮ ಪರಿಸರವು ಇಂದು ನಾಶವಾಗುತ್ತಿದೆ. ಮುಂದಿನ ಪೀಳಿಗೆಗೆ ಹಸಿರನ್ನು ನೀಡೋಣ.. ಪರಿಸರ ಸಂರಕ್ಷಣೆ ಕುರಿತಾಗಿ ಸಾಲು ಮರದ ತಿಮ್ಮಕ್ಕ ನಮಗೆ ಮಾದರಿ. ಪರಿಸರ ಸಂರಕ್ಷಣೆ ಕುರಿತಾಗಿ ಎಲ್ಲರೂ ಜಾಗೃತರಾಗಬೇಕು. ಪರಿಸರ ದಿನಾಚರಣೆ ಮಾತ್ರ ಸೀಮಿತವಾಗಿರಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ಸಂರಕ್ಷಣೆಯ ದಿನವಾಗಬೇಕು. ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ನಮ್ಮ ಜೀವನ ಶೈಲಿ ಮುಂದೊಂದು ದಿನ ನಮಗೆ ಮಾರಕವಾಗಬಹುದು, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ ಬನ್ನಿ. ಮಾಹಿತಿ ಮೂಲ - ಕೃಪೆ : what'sup
Share:

ಭಾರತಕ್ಕೆ ಯುರೋಪಿಯನ್ನರ ಆಗಮನ

ರಷ್ಯಾ ದೇಶದ ಮನೋವಿಜ್ಞಾನಿ ಲೇವಾ ವೈಗೋಟಕ್ಸಿ ಅವರ ಜ್ಞಾನ ಸಂರಚನಾವಾದದ ವಿಚಾರಗಳನ್ನು ಆಧರಿಸಿ 5ಇ ಮಾದರಿಯ ಪಾಠಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂ ಕಲಿಕೆಗೆ ಹಾಗೂ ಕ್ರಿಯಾತ್ಮಕ ಜ್ಞಾನದ ನಿರ್ಮಾಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಶಿಕ್ಷಕರಿಗೆ ಸಹಾಯಕವಾಗುತ್ತದೆ. ಮಕ್ಕಳು ತಮ್ಮ ಅನುಭವದ ನೆಲೆಯಲ್ಲಿ ಹೊಸ ಜ್ಞಾನವನ್ನು ಸೃಷ್ಟಿಸಿಕೊಳ್ಳಲು ಹಾಗೂ ಅನ್ವೇಷಿಸಲು ಶಿಕ್ಷಕರು ನೆರವಾಗಬೇಕು. ಶಿಕ್ಷಕರು ದೀರ್ಘ ಉಪನ್ಯಾಸ ನೀಡುವ ಬದಲು ಮಕ್ಕಳ ಕಲಿಕೆಯನ್ನು ಅನುಕೂಲಿಸುವ, ಉತ್ತೇಜಿಸುವ, ಮಾರ್ಗದರ್ಶಿಸುವ ಚಟುವಟಿಕೆಗಳನ್ನು ತರಗತಿಯಲ್ಲಿ ಆಯೋಜಿಸಬೇಕು. ಇದು ಸಂತಸದ ಕಲಿಕೆಗೆ ಹೆಚ್ಚು ಗಮನ ನೀಡುತ್ತದೆ. ಪಾಠವನ್ನು ಯೋಜಿಸುವಾಗ 5ಇ ಹಂತಗಳನ್ನು ಜಾಜೂ ತಪ್ಪದೆ ಅನುಸರಿಸಬೇಕು.

"ಪಾಠಯೋಜನೆ

A ಕಲಿಕಾಂಶಗಳು:

ಭಾರತದ ನಕಾಶೆ

B.ಬೋಧನಾ ಹಂತಗಳು:

ಕಾಯಕ

ಅನುಕೂಲಿಸುವ ವಿಧಾನ ಚಟುವಟಿಕೆಗಳು ಕಲಿಕೋಪಕರಣಗಳು ಮೌಲ್ಯಮಾಪನ
# # # #

ರವೀಂದ್ರ

ಾಹೇರಿ

ಾಹೇರಿ

ಾಹೇರಿ

Share:
Share:

OMR SHEETನಲ್ಲಿ ಉತ್ತರಗಳನ್ನು ಗುರುತು (ಶೇಡ್)‌ ಮಾಡುವದು ಹೇಗೆ ?

Share:

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು.


ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರು

1. ದುರ್ಗಾದೇವಿ - 1907 ರಲ್ಲಿ ಅಲಹಾಬಾದ್ ನಲ್ಲಿ ಜನಿಸಿದ ಇವರು ವಿವಾಹದ ನಂತರ ತಮ್ಮ ಪತಿ ಮೋತಿಲಾಲ್ ವೋರಾ ರವರೊಂದಿಗೆ ಕ್ರಾಂತಿಕಾರಿ ಚಳುವಳಿಗೆ ಧುಮುಕಿದರು. ಪೋಲಿಸರ ಕಣ್ಣಿಗೆ ಬೀಳದಿರಲು ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆಯಾಗಿ ಸೇರಿಕೊಂಡರು. ಎಚ್‍ಎಸ್‍ಆರ್‍ಎ ನಲ್ಲಿ ಗುಪ್ತಚಾರಳಾಗಿ ಕೆಲಸ ಮಾಡಿದರು. ಪತಿಯ ಮರಣದ ನಂತರವೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ ಇವರು ಸಾಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್‍ರವರನ್ನು ಪೋಲಿಸರ ಕಣ್ಣಿನಿಂದ ತಪ್ಪಿಸಿ ಲಾಹೋರಿನಿಂದ ಹೊರಕಳಿಸಲು ಅವರ ಪತ್ನಿಯಾಗಿ ನಟಿಸಿದರು. ಭಗತ್ ಸಿಂಗ್‍ರ ಬಂಧನದ ನಂತರವೂ ಆಜಾದ್‍ರೊಂದಿಗೆ ಕೆಲಸ ಮಾಡುತ್ತಾ ಬಂಧನಕ್ಕೊಳಗಾದರು. 1 ವರ್ಷದ ಶಿಕ್ಷೆಯ ಜೊತೆಗೆ ಅವರ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಜೈಲಿನಿಂದ ಹೊರಬಂದ ಮೇಲೂ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳೊಂದಿಗೆ ಲಕ್ನೋದಲ್ಲಿ ಶಾಲೆಯನ್ನು ತೆರೆದರು. 1999ರ ಅಕ್ಟೋಬರ್ 14ರಂದು ಮರಣ ಹೊಂದಿದರು.

2. ನವಾಬ್ ಫೈಜುನ್ನೀಸಾ ಚೌಧುರಾಣಿ – 1834 -1903 – ತ್ರಿಪುರಾದ ಕೊಮಿಲ್ಲಾ ಜಿಲ್ಲೆಯ ಪಶ್ಚಿಮ ಗ್ರಾಮದಲ್ಲಿ ಜನಿಸಿದರು. ಇವರು ಸಾಂಪ್ರದಾಯಿಕ ಶಾಲೆಯೊಂದನ್ನು, 11 ಪ್ರಾಥಮಿಕ ಶಾಲೆಗಳನ್ನು, ಒಂದು ಮಾಧ್ಯಮಿಕ ಇಂಗ್ಲಿಷ್ ಶಾಲೆಯನ್ನು ಮತ್ತು ಹೆಣ್ಣುಮಕ್ಕಳಿಗಾಗಿ ಹೈಸ್ಕೂಅನ್ನು ಕೊಮಿಲ್ಲಾ ಮತ್ತು ಬಂಗಾಲದ ಕೃಷ್ಣನಗರದಲ್ಲಿ ಸ್ಥಾಪಿಸಿದರು. ಇವರು ಬರಹಗಾರ್ತಿಯಾಗಿದ್ದರು. ಎರಡು ಉಚಿತ ಆಸ್ಪತ್ರೆಗಳನ್ನು ತೆರೆದರು. ತಮ್ಮ ಮರಣದ ಮುಂಚೆ ತಮ್ಮ ಇಡೀ ಆಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

3. ಪ್ರೀತಿಲತಾ ವೇದದ್ದಾರ್- ಬಂಗಾಳದ ಚಟಗಾವ್‍ನಲ್ಲಿ 1911ರಲ್ಲಿ ಜನಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ದೀಪಾಲಿ ಸಂಘವನ್ನು ಸೇರಿದರು ಮತ್ತು ನಂತರ ಸೂರ್ಯಸೇನ್ ರ ಕ್ರಾಂತಿದಳವನ್ನು ಸೇರಿದರು.ಅವರು ಬರಹಗಾರ್ತಿಯೂ ಆಗಿದ್ದರು. 1930 ಮತ್ತು 32ರಲ್ಲಿ ಪೋಲಿಸ್ ಠಾಣೆಗಳ ಮೇಲೆ ನಡೆದ ಆಕ್ರಮಣದಲ್ಲಿ ಭಾಗಿಯಾಗಿದ್ದರು. ಅವರ ಸಾಮರ್ಥ್ಯವನ್ನು ಕಂಡು ಸೂರ್ಯ ಸೇನರು ಚಿತ್ತಗಾಂಗ್‍ನ ಯೂರೋಪಿಯನ್ ಕ್ಲಬ್‍ನ ಮೇಲಿನ ದಾಳಿಯ ನೇತೃತ್ವವನ್ನು ಅವರಿಗೆ ವಹಿಸಿದರು. ಆಕ್ರಮಣದಲ್ಲಿ ತಮ್ಮ ಕೆಲಸವನ್ನು ಮುಗಿಸಿದ ನಂತರ ಅವರಿಗೆ ಅಲ್ಲಿಂದ ಪರಾರಿಯಾಗಲು ಅವಕಾಶವಿರಲಿಲ್ಲ. ಆದ್ದರಿಂದ ಅವರು ವಿಷವನ್ನು ಸೇವಿಸಿ ಹುತಾತ್ಮರಾದರು.

4. ರೊಕೆಯ ಖಾತುನ್- 1882-1932- ರಂಗಪುರದ ಪೈರಾವಾಡ್‍ನಲ್ಲಿ ಜನನ (ಈಗ ಬಾಂಗ್ಲಾ ದೇಶನಲ್ಲಿದೆ) 1909 ರಲ್ಲಿ ಬಾಗಲ್‍ಪುರ್‍ನಲ್ಲಿ 1911 ರಲ್ಲಿ ಕಲ್ಕತ್ತಾದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿದರು. ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆಂದು ಅವರನ್ನು ದೂಷಿಸಲಾಯಿತು. ಅವರು ಬರಹಗಾರ್ತಿಯೂ ಆಗಿದ್ದರು. ಮಹಿಳೆಯರ ಮೇಲಿನ ಅತ್ಯಾಚಾರಗಳ ವಿರುದ್ಧ ದನಿ ಎತ್ತಿದರು. 1916ರಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ಮತ್ತು ಅವರಲ್ಲಿ ಜಾಗೃತಿಯನ್ನು ಮೂಡಿಸಲು ‘ ಅಂಜುಮಾನೆ ಖವಾತಿನೆ ಇಸ್ಲಾಮ್’ ಎನ್ನುವ ಸಂಘಟನೆಯನ್ನು ಆರಂಭಿಸಿದರು. 1932 ರ ಡಿಸೆಂಬರ್ 9 ರಂದು ಮರಣ ಹೊಂದಿದರು.

5. ಸಾವಿತ್ರಿಬಾಯಿ ಫುಲೆ- 1831 ರ ಜನವರಿ 3 ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಸಾಮಾಜಿಕ ಸುಧಾರಕರಾಗಿದ್ದ ಜ್ಯೋತಿಭಾ ಫುಲೆಯವರನ್ನು ವಿವಾಹವಾದರು. ಅವರಿಂದ ಶಿಕ್ಷಣವನ್ನು ಪಡೆದು, ತಾವೇ ಆರಂಭಿಸಿದ ಶಾಲೆಯಲ್ಲಿ ಶಿಕ್ಷಕಿಯಾದರು. ಅದಕ್ಕಾಗಿ ಅವರನ್ನು ದೂಷಿಸಲಾಯಿತು ಮತ್ತು ಅಪಮಾನ ಮಾಡಲಾಯಿತು. ಆದರೆ ಅವರು ಹಿಂಜರಿಯದೆ ಇನ್ನಷ್ಟು ಶಾಲೆಗಳನ್ನು ಆರಂಭಿಸಿದರು. ಜೊತೆಗೆ ‘ಬಾಲ ಹತ್ಯಾ ಪ್ರತಿಬಂಧಕ ಗೃಹ’ವನ್ನು ತೆರೆದು ಅತ್ಯಾಚಾರಕ್ಕೆ ಒಳಗಾಗಿ ಮನೆಗಳಿಂದ ಹೊರದೂಡಲ್ಪಟ್ಟ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದರು. ತಮ್ಮ ಪತಿಯೊಡಗೂಡಿ ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು. ಪತಿಯ ಮರಣಾನಂತರ ಅವರು ಸ್ಥಾಪಿಸಿದ್ದ ಸತ್ಯ ಶೋಧಕ ಸಮಾಜದ ಜವಾಬ್ದಾರಿಯನ್ನು ಹೊತ್ತುಕೊಂಡರು. 1897ರಲ್ಲಿ ಪ್ಲೇಗ್ ಪೀಡಿತರ ಸೇವೆ ಮಾಡುತ್ತಾ ತಾವೂ ಆ ರೋಗಕ್ಕೆ ಬಲಿಯಾಗಿ ಮಾರ್ಚ್ 10ರಂದು ಮರಣ ಹೊಂದಿದರು.

6. ಲೀಲಾ ರಾಯ್ - ಲೀಲಾವತಿ ನಾಗ್‍ರವರು 1900 ಅಕ್ಟೋಬರ್ 2ರಂದು ಢಾಕಾದಲ್ಲಿ ಜನಿಸಿದರು. ಶಾಲಾ ದಿನಗಳಿಂದಲೇ ಬ್ರಿಟಿಷರ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದರು. 1923ರಲ್ಲಿ ದೀಪಾಲಿ ಸಂಘವನ್ನು ಢಾಕಾದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸ್ಥಾಪಿಸಿದರು. ಈ ಸಂಘ ಮಹಿಳೆಯರ ವಿವಿಧ ಚಟುವಟಿಕೆಗಳ ಕೇಂದ್ರವಾಯಿತು. ಮಹಿಳೆಯರ ಗುಪ್ತಚಾರಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಢಾಕಾ ಮತ್ತು ಕಲ್ಕತ್ತಾದಲ್ಲಿ ಛಾತ್ರಿ ಸಂಘ ಮತ್ತು ಛಾತ್ರಿ ಭವನವನ್ನು ತೆರೆದರು. 1931ರಲ್ಲಿ ಬಂಧಿತರಾದ ಇವರನ್ನು ವಿಚಾರಣೆಯಿಲ್ಲದೆ 6 ವರ್ಷಗಳ ಕಾಲ ಜೈಲಿನಲ್ಲಿಡಲಾಯಿತು. ಬಿಡುಗಡೆಯಾದ ನಂತರ ನೇತಾಜಿಯವರೊಂದಿಗೆ ಕೆಲಸ ಮಾಡಿದರು. 1942ರಲ್ಲಿ ಬಂಧನಕ್ಕೊಳಗಾದ ಇವರನ್ನು 1946ರವರೆಗೂ ಜೈಲಿನಲ್ಲೇ ಇಡಲಾಯಿತು. ಬಿಡುಗಡೆಯಾದ ನಂತರ ನೌಕಾಲಿಯಲ್ಲಿ ಕೋಮುಗಲಭೆ ಪೀಡಿತರಿಗೆ ನೆರವನ್ನು ನೀಡಲು ಧಾವಿಸಿದರು. ಸ್ವತಂತ್ರ ಭಾರತದಲ್ಲಿ, ಮಹಿಳಾ ನಿರಾಶ್ರಿತರ ಪುನರ್ವಸತಿಗಾಗಿ ಶ್ರಮಿಸಿದರು. 1970ರ ಜೂನ್ 12ರಂದು ನಿಧನರಾದರು.

7. ಕುಲ್ಸಮ್ ಸಯಾನಿ -1900-1987 – ಇವರು ಮುಂಬೈ ಯಲ್ಲಿ 21 ಅಕ್ಟೋಬರ್ 1900ರಲ್ಲಿ ಜನಿಸಿದರು. ಇವರು ಗಾಢವಾದ ದೇಶಭಕ್ತರು, ಪ್ರಖ್ಯಾತ ಕ್ರಿಯಾಶೀಲ ಕೆಲಸಗಾರರು, ವಯಸ್ಕರ ಶಿಕ್ಷಣಕ್ಕಾಗಿ ಜೀವನದಾದ್ಯಂತ ಶ್ರಮಿಸಿದರು. ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾದ ಇವರು, ಬಡತನ ಮತ್ತು ಅನಾರೋಗ್ಯಗಳಿಗೆ ಅನಕ್ಷರತೆ ಕಾರಣವೆಂದು ತಿಳಿದಿದ್ದರು. ತನ್ನ ಮನೆಯಲ್ಲಿ ಸಾಕ್ಷರತಾ ಕಾರ್ಯವನ್ನು ಪ್ರಾರಂಬಿಸಿದ ಇವರು, ನಂತರ ರಾಹ್‍ಬರ್(ದಾರಿದೀಪಕರು) ಎಂಬ ಪತ್ರಿಕೆಯನ್ನು ಉರ್ದು, ಗುಜರಾತಿ ಹಾಗು ದೇವನಾಗರಿ ಭಾಷೆಗಳಲ್ಲಿ ಪ್ರಕಟಿಸಿದರು. ಅಖಿಲ ಭಾರತ ಮಹಿಳಾ ಸಮ್ಮೇಳನದ ಗೌರವಾಧ್ಯಕ್ಷರಾದರು. 1969ರಲ್ಲಿ ಇವರಿಗೆ “ನೆಹರು ಸಾಕ್ಷರತಾ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು. ಇವರು 1987ರಲ್ಲಿ ಮರಣಹೊಂದಿದರು.

8. ಮೇಡಮ್ ಭಿಕಾಜಿ ಕಾಮಾ – 1861-1936- ಮುಂಬೈನಲ್ಲಿ 1861ರಲ್ಲಿ ಜನಿಸಿದ ಇವರು ಅಲೆಕ್ಸಾಂಡ್ರಿಯಾ ಬಾಲಕಿಯರ ಶಾಲೆಯಲ್ಲಿ ಓದಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇವರನ್ನು ಭಾರತದಿಂದ ಗಡೀಪಾರು ಮಾಡಿದರು. ಇವರು “ವಂದೇಮಾತರಂ” ಎಂಬ ಪತ್ರಿಕೆಯನ್ನು ಪ್ರಕಟಿಸಿದರು. 1936ರ ಆಗಸ್ಟ್ 30ರಂದು ನಿಧನಹೊಂದಿದರು.

9. ನಾನಿ ಬಾಲ ದೇವಿ - 1888-1987 - ಪಶ್ಚಿಮ ಬಂಗಾಳದ ಒಂದು ಹಳ್ಳಿಯಲ್ಲಿ 1888ರಲ್ಲಿ ಜನಿಸಿದ ಇವರು ‘ಯುಗಾಂತರ’ ಎಂಬ ಕ್ರಾಂತಿಕಾರಿ ಸಂಘಟನೆಯ ನಾಯಕಿಯಾಗಿದ್ದರು. ಕ್ರಾಂತಿಕಾರಿಗಳಿಗೆ ಅನೇಕ ರೀತಿಯ ಸಹಾಯ ಮಾಡಿದರು. ಇವರನ್ನು ಬಂಧಿಸಿ ಎರಡು ವರ್ಷಗಳ ಕಾಲ ಹಿಂಸಿಸಿದರು. ಇವರು 1987ರಲ್ಲಿ ಮರಣಹೊಂದಿದರು.

10. ಪಂಡಿತ ರಮಾಬಾಯಿ ಸರಸ್ವತಿ - 1858-1922 – ಇವರು ಮಹಿಳಾ ವಿಮೋಚನಾ ಚಳುವಳಿಗೆ ಅಡಿಪಾಯ ಹಾಕಿದರು. ಮಧ್ಯಪ್ರದೇಶ ಮತ್ತು ಗುಜರಾತಿನ ಬರಗಾಲಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡರು. ಅವರಲ್ಲಿನ ಸಂಸ್ಕೃತ ಗ್ರಂಥಗಳ ಬಗೆಗಿನ ಜ್ಞಾನದಿಂದ ಇವರಿಗೆ ಪಂಡಿತ ಮತ್ತು ಸರಸ್ವತಿ ಎಂ¨ ಬಿರುದುಗಳಿವೆ. ಸಾಂಪ್ರದಾಯಿಕ ಬ್ರಾಹ್ಮಣರು ಅವರನ್ನು ತೀವ್ರವಾಗಿ ಖಂಡಿಸಿದರು ಹಾಗೂ ಮಹಿಳೆಯರಲ್ಲಿ ಬಂಡಾಯವನ್ನು ಸೃಷ್ಟಿಸುತ್ತಿದ್ದಾರೆಂದು ಆಪಾದಿಸಿದರು. ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರಿಗಾಗಿ ಶಾರದ ಸದನವನ್ನು ಆರಂಭಿಸಿದರು. ಇವರು 1922ರಲ್ಲಿ ನಿಧನರಾದರು.
Share:

8ನೇ ತರಗತಿ ಸೇತುಬಂಧ ಅಭ್ಯಾಸ ಹಾಳೆಗಳು - 2021-22

 8ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ

ಈ ಕ್ರಿಯಾ ಯೋಜನೆಯು ನಮ್ಮ ಶಾಲೆಯ ಮಕ್ಕಳ ಮಟ್ಟಕ್ಕೆ ಮತ್ತು ಸ್ಥಳೀಯ ಸಂಪನ್ಮೂಲದ ಲಭ್ಯತೆಯ ಆಧಾರದ ಮೇಲೆ ರಚಿತವಾಗಿದ್ದು, ಇದುವೇ ಅಂತಿಮವಲ್ಲ.

DOWNLOAD HERE 










Share:

ಸಮಾಜಶಾಸ್ತ್ರದ 2 ರಿಂದ 4 ಅಧ್ಯಾಯ ಹಾಗೂ ಭೂಗೋಳಶಾಸ್ತ್ರ 1ನೇ ಅದ್ಯಾಯ- "ಸವಿ ಸಮಯ"

ಸಮಾಜಶಾಸ್ತ್ರದ 2 ರಿಂದ 4 ಅಧ್ಯಾಯ ಹಾಗೂ ಭೂಗೋಳಶಾಸ್ತ್ರ 1ನೇ ಅದ್ಯಾಯ- "ಸವಿ ಸಮಯ"
Share:

ವಾರ್ಷಿಕ ಅಂದಾಜು ಪತ್ರಿಕೆ - 2021-22

Share:

ರಾಜ್ಯಶಾಸ್ತ್ರ ಅಧ್ಯಾಯ - 4 ಮತ್ತು 5 ಹಾಗೂ ಸಮಾಜಶಾಸ್ತ್ರದ 1ನೇ ಅಧ್ಯಾಯ "ಸವಿ ಸಮಯ"


 

Share:

ರಾಜ್ಯಶಾಸ್ತ್ರ ಅಧ್ಯಾಯ - 1 ರಿಂದ 3 "ಸವಿ ಸಮಯ"

Share:

8ನೇ ತರಗತಿ ಸವಿ ದಾಖಲೆಗಳು

 8ನೇ ತರಗತಿ ಸವಿ ದಾಖಲೆಗಳು

ಸವಿ ಶಿಕ್ಷಕ ನಿರ್ವಹಿಸಬೇಕಾದ ದಾಖಲೆಗಳು
ಕ್ರ.ಸಂCCE ದಾಖಲೆಗಳುVIEW & DOWNLOAD
1ವಾರ್ಷಿಕ ಅಂದಾಜು ಪತ್ರಿಕೆ ( ಕ್ರಿಯಾ ಯೋಜನೆ)VIEW & DOWNLOAD
2ಘಟಕ ಯೋಜನೆ (ಪಾಠ ಯೋಜನೆ)VIEW & DOWNLOAD
3ಚಟುವಟಿಕೆ ಪುಸ್ತಕ (ತಪಶೀಲು ಪಟ್ಟಿ. ದರ್ಜಾಮಾಪನ, ಅಭಿಪ್ರಾಯ ಸಂಗ್ರಹ ಪಟ್ಟಿ, ಪ್ರಶ್ನೆ ಪತ್ರಿಕೆಗಳು)VIEW & DOWNLOAD
4ಶಿಕ್ಷಕರ ವಯಕ್ತಿಕ ಅಂಕ ದಾಖಲಾತಿ ವಹಿVIEW & DOWNLOAD
5ಶಿಕ್ಷಕರ ಡೈರಿVIEW & DOWNLOAD
6ಮಗುವಿನ ಸಾಂಧರ್ಭಿಕ ದಾಖಲೆ ವVIEW & DOWNLOAD
7ಕೃತಿ ಸಂಪುಟVIEW & DOWNLOAD
8ಕ್ರೋಢೀಕೃತ ಅಂಕವಹಿ ( ತರಗತಿ ಶಿಕ್ಷಕರಿಗೆ)VIEW & DOWNLOAD
9ಅಂಕಪಟ್ಟಿಗಳು (ತರಗತಿ ಶಿಕ್ಷಕರಿಗೆ)VIEW & DOWNLOAD
Share:

ಇತಿಹಾಸ ಅಧ್ಯಾಯ - 8 ರಿಂದ9"ಸವಿ ಸಮಯ"

 


Share:

ಸೇತುಬಂಧ 8, 9 ಹಾಗೂ 10ನೇ ತರಗತಿ.

 8ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ

ಈ ಕ್ರಿಯಾ ಯೋಜನೆಯು ನಮ್ಮ ಶಾಲೆಯ ಮಕ್ಕಳ ಮಟ್ಟಕ್ಕೆ ಮತ್ತು ಸ್ಥಳೀಯ ಸಂಪನ್ಮೂಲದ ಲಭ್ಯತೆಯ ಆಧಾರದ ಮೇಲೆ ರಚಿತವಾಗಿದ್ದು, ಇದುವೇ ಅಂತಿಮವಲ್ಲ.

DOWNLOAD HERE 






9ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ
 


10ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ

 
Share:

ಇತಿಹಾಸ ಅಧ್ಯಾಯ - 6 ರಿಂದ 7 "ಸವಿ ಸಮಯ"

Share:

SSLC HISTORY - ONLINE TEST - LESSON 3 TO 5

COURTESY : KREIS, Bangalore Multiple Choice Questions – 2020-2021


 

Share:

ಇತಿಹಾಸ ಅಧ್ಯಾಯ 4 ರಿಂದ 6 : "ಸವಿ ಸಮಯ‌"


 

Share:

ಸಮಾಜ ವಿಜ್ಞಾನ ಸುಲಭವಾಗಿಸಿಕೊಳ್ಳುವದು ಹೇಗೆ ?



ಸಮಾಜ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಕಲಿಯುವುದು ಮತ್ತು ಓದುವದು ಹೇಗೆ?

    ಅನೇಕ ವಿದ್ಯಾರ್ಥಿಗಳಿಗೆ, ಸಮಾಜ ವಿಜ್ಞಾನವು ಒಂದು ಬೋರಿಂಗ್ ವಿಷಯವಾಗಿದೆ. ಹೆಚ್ಚಿನ ಪಠ್ಯಕ್ರಮದದಿಂದಾಗಿ ಇದು ಕಷ್ಟಕರವೆಂದು ಅನೇಕರು ಭಯಭೀತರಾಗುತ್ತಾರೆ. ಅಲ್ಲದೆ ಈ ವಿಷಯವನ್ನು ನೀರಸವಾಗಿ ನೋಡುತ್ತಾರೆ. ನಿರಾಸಕ್ತಿಯಿಂದ ಓದದೇ ಬಿಡುತ್ತಾರೆ. ಆದರೆ ಸಮಾಜ ವಿಜ್ಞಾನವು ಒಂದು ಪ್ರಮುಖ ವಿಷಯವಾಗಿದೆ. ವಿದ್ಯಾರ್ಥಿಗಳು ವಿಷಯವನ್ನು ನಿಜ ಜೀವನಕ್ಕೆ ಹೋಲಿಸಿಕೊಂಡು ಮತ್ತು ಸಂಬಂಧಿಕರಿಸುತ್ತ ಓದಿದರೆ ಅದು ಆಸಕ್ತಿದಾಯಕವಾಗಿರುತ್ತದೆ. ಸಮಾಜ ವಿಜ್ಞಾನ ಕಲಿಕೆಯನ್ನು ಆಸಕ್ತಿದಾಯಕವಾಗಿಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

1. ಸಮಾಜ ವಿಜ್ಞಾನದ ಪ್ರಾಮುಖ್ಯತೆಯನ್ನು ತಿಳಿಯಿರಿ.
    ಸಮಾಜ ವಿಜ್ಞಾನವು ವಿದ್ಯಾರ್ಥಿಗಳಿಗೆ ತಮ್ಮ ದೇಶ ಮತ್ತು ಪ್ರಪಂಚದ ಬಗ್ಗೆ ಜ್ಞಾನವನ್ನು ನೀಡುತ್ತದೆ. ಇದು 6 ವಿಭಾಗಗಳನ್ನು ಒಳಗೊಂಡಿದೆ , ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ. ವ್ಯವಹಾರ ಅಧ್ಯನ.ಇತಿಹಾಸವು ವಿದ್ಯಾರ್ಥಿಗಳಿಗೆ ವಿವಿಧ ನಾಗರಿಕತೆಗಳು, ರಾಜರು, ಸಾಮ್ರಾಜ್ಯಗಳು, ಯುದ್ಧಗಳು, ಸ್ವಾತಂತ್ರ್ಯ ಹೋರಾಟ ಇತ್ಯಾದಿಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.ಭೂಗೋಳಶಾಸ್ತ್ರ - ಭೂದೃಶ್ಯಗಳು, ಅಕ್ಷಾಂಶ, ರೇಖಾಂಶ, ಸ್ಥಳಗಳು, ನೈಸರ್ಗಿಕ ಸಂಪನ್ಮೂಲಗಳು, ಖನಿಜ ಸಂಪತ್ತು, ಹವಾಮಾನ ಪರಿಸ್ಥಿತಿಗಳು, ಇತ್ಯಾದಿಗಳ ಬಗ್ಗೆ ಕಲಿಸಿದರೆ, ರಾಜ್ಯಶಾಸ್ತ್ರ - ಸರ್ಕಾರದ ರಚನೆ, ಕಾರ್ಯಗಳು, ಸಂವಿಧಾನ, ಹಕ್ಕುಗಳು / ಕರ್ತವ್ಯಗಳು, ಜಾಗತಿಕ ಸಂಸ್ಥೆಗಳು, ಚುನಾವಣೆಗಳು ಬಗ್ಗೆ ಕಲಿಸುತ್ತದೆ. ಸಮಾಜಶಾಸ್ತ್ರವು - ನಮ್ಮ ಸುತ್ತಮುತ್ತಲಿನ ಸಮಾಜ ಸಂಸ್ಕೃತಿ, ಕುಟುಂಬ, ಸಮುದಾಯದ, ಸಾಮಾಜಿಕ ಸಮಸ್ಯೆಗಳು, ಮುಡನಂಬಿಕೆ - ಮೌಡ್ಯಗಳ ಬಗ್ಗೆ ಹೊಗಲಾಡಿಸುವ ಕ್ರಮಗಳ ಬಗ್ಗೆ ಕಲಿದುತ್ತದೆ. ಅರ್ಥಶಾಸ್ತ್ರವು - ಹಣಕಾಸು, ದೇಶದ ಬೆಳವಣಿಗೆ, ಆದಾಯ, ಉತ್ಪಾದನಾ ಅಂಗಗಳು- ಪ್ರತಿಫಲಗಳು, ಕೃಷಿ, ಕೈಗಾರಿಕೆಯ, ಸೇವಾವಲಯಗಳ ಬಗ್ಗೆ ಕಲಿಸುತ್ತದೆ.ವ್ಯವಹಾರ ಅಧ್ಯಯನ - ವ್ಯವಹಾರ, ವ್ಯಾಪಾರ, ಉದ್ದಿಮೆಗಾರಿಕೆ, ಬ್ಯಾಂಕ್ ವ್ಯವಹಾರ, ಲೆಕ್ಕಶಾಸ್ತ್ರ, ಗ್ರಾಹಕರ ಹಕ್ಕುಗಳ ಬಗ್ಗೆ ಕಲಿಸುತ್ತದೆ

2: ವಿಷಯದ ಬಗ್ಗೆ ಆಸಕ್ತಿ ಬೆಳಸಿಕೊಳ್ಳಲು ವಿಷಯವನ್ನು ಪ್ರೀತಿಸಿ.
    ಸಮಾಜ ವಿಜ್ಞಾನದ ಮೌಲ್ಯವನ್ನು ಅರ್ಥಮಾಡಿಕೊಳ್ಳುವದು. ಆಳವಾಗಿ ಅಧ್ಯಯನ ಮಾಡುವುದು ಮತ್ತು ಬೇಸರವನ್ನು ನಿವಾರಿಸಿಕೊಳ್ಳಲು ಸವಿ ವಿಷಯವನ್ನು ಪ್ರೀತಿಸಿ ಮತ್ತು ನಿರಂತರವಾಗಿ ಓದಿ. ಆಸಕ್ತಿಯನ್ನು ಬೆಳೆಸಲು ವಿಷಯದ ಮಹತ್ವವನ್ನು ಅರ್ಥಮಾಡಿಕೊಳ್ಳಿ. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಶೇಷವಾಗಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸವಿ ವಿಷಯಗಳು ಬಹಳ ಮಹತ್ವ ಪಡೆದುಕೊಂಡಿವೆ. ಈ ಸೇವಾ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ವಿಷಯದ ಮೇಲೆ ಆಸಕ್ತಿ ಬೆಳಸಿಕೊಳ್ಳುವದು ಬಹಳ ಅವಶ್ಯಕತೆ ಇದೆ
3. ಸಮಾಜ ವಿಜ್ಞಾನದ ಅಧ್ಯಯನಗಳನ್ನು ಕಲಿಯಲು ತಂತ್ರಜ್ಞಾನ ಮತ್ತು ಇಂಟರ್ನೆಟ್ ಅನ್ನು ಬಳಸಿಕೊಳ್ಳಿ.
    ಸಮಾಜ ವಿಜ್ಞಾನವನ್ನು ಆಸಕ್ತಿದಾಯಕ ರೀತಿಯಲ್ಲಿ ಕಲಿಯಲು ವಿದ್ಯಾರ್ಥಿಗಳು ತಂತ್ರಜ್ಞಾನ ಮತ್ತು ಇಂಟರ್ನೆಟ್ ಅನ್ನು ಬಳಸಿಕೊಳ್ಳಬಹುದು.ಅವರು ಭೌಗೋಳಿಕತೆ, ಇತಿಹಾಸ, ನಾಗರಿಕತೆ ಮತ್ತು ಅರ್ಥಶಾಸ್ತ್ರದ ಬಗ್ಗೆ ಕಲಿಯುವ ಪಾಠಗಳ ಕುರಿತು ವೀಡಿಯೊಗಳನ್ನು ವೀಕ್ಷಿಸಬಹುದು. ಉತ್ತಮ ತಿಳುವಳಿಕೆಗಾಗಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹೆಚ್ಚಿನ ಮಾಹಿತಿಗಾಗಿ ಹುಡುಕಬಹುದು. ಸಮಾಜ ವಿಜ್ಞಾನಗಳನ್ನು ಕಲಿಯುವುದನ್ನು ಮೋಜು ಮಾಡಲು ಅನೇಕ ಶೈಕ್ಷಣಿಕ ಸಂಪನ್ಮೂಲಗಳು, ರಸಪ್ರಶ್ನೆಗಳು, ಮೋಜಿನ ಆಟಗಳು ಇತ್ಯಾದಿಗಳನ್ನು ನೀಡುವ ಅನೇಕ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿವೆ. ಅವುಗಳನ್ನು ಬಳಸಿಕೊಳ್ಳಬಹಿದು.Wikipedia, quizzes, h5p, YouTube, Google... ಹೀಗೆ ಹಲವಾರು Online ಮಾಹಿತಿ ತಾಣಗಳಿವೆ.ಅನೇಕ ಶಿಕ್ಷಕರು ಚಿತ್ರ ಮತ್ತು ವಿಡಿಯೋ ಸಮೇತ ಪಿಪಿಟಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, Bloggerಗಳಲ್ಲಿ ಹಂಚಿಕೊಂಡದ್ದನ್ನು ಬಳಸಿಕೊಳ್ಳಬಹುದು.

4. ವಿಷಯದ ಮೇಲೆ ಪ್ರಭುತ್ವ ಸಾಧಿಸಲು, ವಿದ್ಯಾರ್ಥಿಗಳು ಗುಂಪುಗಳಲ್ಲಿ ಅಧ್ಯಯನ ಮಾಡಲು ಪ್ರಯತ್ನಿಸಬಹುದು.
    ಸಮಾಜ ವಿಜ್ಞಾನವನ್ನು ಆಸಕ್ತಿದಾಯಕವಾಗಿಸಲು, ವಿದ್ಯಾರ್ಥಿಗಳು ಗುಂಪಿನಲ್ಲಿ ಕಲಿಯಲು / ಅಧ್ಯಯನ ಮಾಡಲು ಸಹ ಪ್ರಯತ್ನಿಸಬಹುದು. ಇದು ಅವರ ಕಲಿಕೆಯ ಅನುಭವವನ್ನು ಹೆಚ್ಚಿಸಲು ಮಾತ್ರವಲ್ಲದೆ ಅದನ್ನು ಮೋಜು ಮಾಡಲು ಸಹಕಾರಿಯಾಗುತ್ತದೆ.ಅವರು ಸ್ನೇಹಿತರೊಂದಿಗೆ ಸಂವಹನ ನಡೆಸಬಹುದು, ಅಂಶಗಳನ್ನು ಚರ್ಚಿಸಬಹುದು ಮತ್ತು ಪರಸ್ಪರ ರಸಪ್ರಶ್ನೆ ಮಾಡಬಹುದು. ಅವರು ತಮ್ಮ ಸ್ನೇಹಿತರಿಗೆ ಸಹಾಯ ಮಾಡಲು ವಿಷಯಗಳನ್ನು ಕಲಿಸಬಹುದು ಅಥವಾ ವಿವರಿಸಬಹುದು; ಇದು ಮಾಹಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

5 : ಆಸಕ್ತಿದಾಯಕ ಚಾರ್ಟ್ಗಳನ್ನು ಮಾಡಿ ಮತ್ತು ಬುಲೆಟ್ ಪಾಯಿಂಟ್ ಟಿಪ್ಪಣಿಗಳನ್ನು ತಯಾರಿಸಿ
    ಪ್ರಮುಖ ಘಟನೆಗಳು, ಸಂಗತಿಗಳು ಮತ್ತು ಅಂಕಿಅಂಶಗಳು, ಪ್ರಮುಖ ದಿನಾಂಕಗಳು, ವ್ಯಾಖ್ಯಾನಗಳು, ದತ್ತಾಂಶ ಇತ್ಯಾದಿಗಳಿಗೆ ಚಾರ್ಟ್‌ಗಳು ಮತ್ತು ಪೋಸ್ಟರ್‌ಗಳನ್ನು ಸಿದ್ಧಪಡಿಸುವ ಮೂಲಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನವನ್ನು ಕಲಿಯುವುದನ್ನು ಮೋಜು ಮಾಡಬಹುದು. ಅವರು ನಕ್ಷೆಯ ಪ್ರಶ್ನೆಗಳನ್ನು ಬಿಡುವಿನ ಸಮಯದಲ್ಲಿ ಅಭ್ಯಾಸ ಮಾಡಬಹುದು. ಬುಲೆಟ್ ಪಾಯಿಂಟ್ ಟಿಪ್ಪಣಿಗಳನ್ನು ಅಧ್ಯಾಯವಾರು ಸಿದ್ಧಪಡಿಸಬಹುದು ಮತ್ತು ಅದನ್ನು ಅವರು ದಿನಾಲೂ ಕಣ್ಣಾಹಿಸಲು ಸಹಕಾರಿಯಾಗಬಹುದು. ವಸ್ತು ನಿಷ್ಠ ವಿಷಯ ಟಿಪ್ಪಣಿಯು ಎಂತಹ ಕಠಿಣ ಪ್ರಶ್ನೆಗಳನ್ನು ಉತ್ತರಿಸಲು ಸಹಾಯ ಮಾಡುತ್ತವೆ.

6. ತರಗತಿಯಲ್ಲಿ ಸವಿ ಶಿಕ್ಷಕರು ಬೋಧಿಸುವಾಗ ಆಸಕ್ತಿಯಿಂದ ಆಲಿಸಿ, ತಿಳಿಯದ ವಿಷಯದ ಬಗ್ಗೆ ಪ್ರಶ್ನಿಸಿ.
     ಶಿಕ್ಷಕರು ಬೋಧಿಸುವಾಗ ಟಿಪ್ಪಣಿಗಳು ಮಾಡಿಕೊಳ್ಳಿ, ಅರ್ಥವಾಗದ ವಿಷಯವನ್ನು ಪ್ರಶ್ನೆ ಕೇಳುವದರ ಮೂಲಕ ತಿಳಿದುಕೊಳ್ಳಿ. ಮನೆಯಲ್ಲಿ ಇಂದಿನ ಸವಿಪಾಠದ ಟಿಪ್ಪಣಿಗಳನ್ನು ನೋಡಿ ಮತ್ತು ಅರ್ಥವತ್ತಾಗಿ ಮತ್ತೋಮ್ಮೆ ಟಿಪ್ಪಣಿ ಮಾಡಿಕೊಳ್ಳಿ ಪಠ್ಯಪುಸ್ತಕ ವನ್ನು ಸರಿಯಾಗಿ ಎಲ್ಲಾ ಪಠ್ಯವನ್ನು ಓದಿ ಮನನ ಮಾಡಿಕೊಳ್ಳಿ.

    ಈ ರೀತಿಯಲ್ಲಿ ಮಾಡುವದರಿಂದ ಸಮಾಜ ವಿಜ್ಞಾನ ವಿಷಯದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಮಾಜ ವಿಜ್ಞಾನ ಇದು ಕೇವಲ ಸತ್ತವರ ಇತಿಹಾಸವಲ್ಲ ಬದಲಿಗೆ ನಿತ್ಯಜೀವನಕ್ಕೆ ಬೇಕಾದ ಮಾಹಿತಿ , ಗತ ಘಟನೆಗಳ ಮೇಲೆ ಉತ್ತಮ ಭವಿಷ್ಯ ರೂಪಿಸಿಕೊಳ್ಳವ ಮಾರ್ಗ ನೀಡುತ್ತದೆ ಎಂದು ತಿಳಿದರೆ ನಿಮಗೆ ಸಮಾಜ ವಿಜ್ಞಾನ ಯಾವಾಗಲೂ ಸವಿ ಸಿಹಿಯಾಗಿ ಕಾಣುವದು.
Share:

SSLC HISTORY - ONLINE TEST - LESSON 1 TO 3


  COURTESY : KREIS, Bangalore Multiple Choice Questions – 2020-2021

Share:

ಸವಿ ಶಬ್ದಾರ್ಥ - ಸಮಾಜ ವಿಜ್ಞಾನದಲ್ಲಿನ ಪ್ರಮುಖ ಪದಗಳ ಅರ್ಥ


1. ಸಮಾಜವಾದದ ಅರ್ಥ :
👉 ಸಮಾಜದ ಹಿತರಕ್ಷಣೆಯೇ ಸಮಾಜವಾದ
👉ಉತ್ಪಾದನಾಂಗಗಳು(ಭೂಮಿ, ಶ್ರಮ, ಬಂಡವಾಳ, ಸಂಘಟನೆ) ಮತ್ತು ವಿತರಣೆಯ ಮೇಲೆ ಸರಕಾರದ ಹತೋಟಿ ಹೊಂದುವ ವ್ಯವಸ್ಥೆ ಯೇ ಸಮಾಜವಾದ.

2. ಬಂಡವಾಳಶಾಹಿ ಅರ್ಥ :
👉 ಉತ್ಪಾದನೆ ಮತ್ತು ವಿತರಣೆ ಖಾಸಗಿ ಒಡೆತನದಲ್ಲಿರುವ ಅರ್ಥವ್ಯವಸ್ಥೆಯನ್ನು ಬಂಡವಾಳ ಶಾಹಿ ಎನ್ನುವರು.
👉 ಸಮಾಜವಾದದ ವಿರುದ್ಧ ವ್ಯವಸ್ಥೆ.

3. ಸಾಲ್ಟ್ - ಪ್ರಭಲ ಅಸ್ತ್ರಗಳ ಮಿತಗೊಳಿಸುವ ಮಾತುಕತೆ(Strategic Arms Limitation Talks)
👉ಅಮೇರಿಕಾ ಮತ್ತು ರಷ್ಯಾ ದೇಶಗಳ ನಡುವಿನ ಮಾತುಕತೆ.(1972)
👉ಉದ್ದೇಶ - ನಿಷೇಧಾತ್ಮಕ ಅಣ್ವಸ್ತ್ರಗಳ ಬಳಕೆಯ ಮಿತಿಗೊಳಿಸಲಾಯಿತು.
👉ಖಂಡಾಂತರ ವಿರೋಧಿ ಕ್ಷಿಪಣಿಗಳ ಮಿತಿ 100ಕ್ಕೆ ಇಳಿಕೆ.
👉 ಇಂಗ್ಲೆಂಡ್, ಅಮೇರಿಕ, ರಷ್ಯಾ ರಾಷ್ಟ್ರಗಳು ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಮಿತಿಗೊಳಿಸುವ ವಿಚಾರ ವಿನಿಮಯ
👉ಅಂತಿಮವಾಗಿ 1979ರಲ್ಲಿ ಎರಡೂ ಅಮೆರಿಕ ಮತ್ತು ರಷ್ಯಾ ಸಹಿ.
👉ಚಂದ್ರನ ಮೇಲೂ ಅಣ್ವಸ್ತ್ರ ಪ್ರಯೋಗ ನಿಷೇಧ.

4. ಪಾಕ್ಷಿಕ ಪ್ರಯೋಗ ನಿಷೇಧ ಒಪ್ಪಂದ :
👉ಇದನ್ನು PTBT,LTBT,NTBT ಎಂದು ಕರೆಯುವರು
Ptbt-Partial test ban treaty
Ltbt-Limited test ban treaty
NTBT-Nuclear test ban treaty
👉 1963ರಲ್ಲಿ ಅಮೆರಿಕ, ರಷ್ಯಾ, ಬ್ರಿಟನ್ ಸಹಿ ಹಾಕಿದವು.
👉ಅಣ್ವಸ್ತ್ರ ಪರೀಕ್ಷೆಯನ್ನು ವಾಯುಮಂಡಲ, ಬಾಹ್ಯಾಕಾಶ, ಸಾಗರದಡಿಯಲ್ಲಿ, ಅಂತರವಲಯದಲ್ಲಿ ನಿಷೇಧ ಮಾಡಲಾಯಿತು.
👉ಆದರೆ ಭೂಗರ್ಭದಲ್ಲಿ ಪರೀಕ್ಷೆ ಮಾಡಬಹುದು.

5. ಸಮಗ್ರ ಪರೀಕ್ಷಾ ನಿಷೇಧ ಒಪ್ಪಂದ (CTBT)
👉199 6ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (160ರಾಷ್ಟ್ರಗಳು) ಅಂಗೀಕಾರ. 1998ರಲ್ಲಿ ಜಾರಿಯಾಯಿತು.
👉ಅಣ್ವಸ್ತ್ರ ಪರೀಕ್ಷೆಯನ್ನು ಸಂಪೂರ್ಣ ನಿಷೇಧ ಮಾಡಲಾಯಿತು.

6. ಫಲಿಕೆ ನಿಷೇಧ ಒಪ್ಪಂದ - ಸಾಲ್ಟ್ - ಪ್ರಭಲ ಅಸ್ತ್ರಗಳ ಮಿತಗೊಳಿಸುವ ಮಾತುಕತೆ(Strategic Arms Limitation Talks)
👉ಅಮೇರಿಕಾ ಮತ್ತು ರಷ್ಯಾ ದೇಶಗಳ ನಡುವಿನ ಮಾತುಕತೆ.(1972)
👉ಉದ್ದೇಶ - ನಿಷೇಧಾತ್ಮಕ ಅಣ್ವಸ್ತ್ರಗಳ ಬಳಕೆಯ ಮಿತಿಗೊಳಿಸಲಾಯಿತು.
👉ಖಂಡಾಂತರ ವಿರೋಧಿ ಕ್ಷಿಪಣಿಗಳ ಮಿತಿ 100ಕ್ಕೆ ಇಳಿಕೆ.
👉 ಇಂಗ್ಲೆಂಡ್, ಅಮೇರಿಕ, ರಷ್ಯಾ ರಾಷ್ಟ್ರಗಳು ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಮಿತಿಗೊಳಿಸುವ ವಿಚಾರ ವಿನಿಮಯ
👉ಅಂತಿಮವಾಗಿ 1979ರಲ್ಲಿ ಎರಡೂ ಅಮೆರಿಕ ಮತ್ತು ರಷ್ಯಾ ಸಹಿ.
👉ಚಂದ್ರನ ಮೇಲೂ ಅಣ್ವಸ್ತ್ರ ಪ್ರಯೋಗ ನಿಷೇಧ.

7. ಸಾಂಸ್ಕೃತಿಕ ಕ್ರಾಂತಿ:
👉ಚಿನಾದ ಕಮ್ಯುನಿಸ್ಟ್ ಪಕ್ಷದ ನಾಯಕರಲ್ಲಿ ಉನ್ನತ ಅಧಿಕಾರಕ್ಕಾಗಿ ನಡೆದ ಪೈಪೋಟಿಯೇ ಸಾಂಸ್ಕೃತಿಕ ಕ್ರಾಂತಿ.
👉 ಇದನ್ನು ಲಿನ್ಪಿಯಾವೋ ವಿರೋಧಿ ಗುಂಪು ಸದೆಬಡೆಯಲು1966ರಲ್ಲಿ ಮಾವೋ ಆರಂಭಿಸಿದನು.
👉ಉದ್ದೇಶ- ಮಾವೋನ ತತ್ವ ಗಳನ್ನು ಉನ್ನತಿಕರಿಸುವದು ಮತ್ತು ಶ್ರೇಷ್ಠ ತೆಯನ್ನು ಎತ್ತಿ ಹಿಡಿಯುವದು.

8. ವ್ಯೋಮ ಸಮರ -
ಬಾಹ್ಯಾಕಾಶ (ವ್ಯೋಮ ಸಮರ) ಯುದ್ಧವು ಬಾಹ್ಯಾಕಾಶದಲ್ಲಿ ನಡೆಯುವ ಯುದ್ಧವಾಗಿರುತ್ತದೆ . 
ಆದ್ದರಿಂದ ಬಾಹ್ಯಾಕಾಶ ಯುದ್ಧದ ವ್ಯಾಪ್ತಿಯು ಭೂಮಿಯಿಂದ ಉಪಗ್ರಹಗಳ ಮೇಲೆ ಆಕ್ರಮಣ ಮಾಡುವಂತಹ ನೆಲದಿಂದ ಬಾಹ್ಯಾಕಾಶ ಯುದ್ಧವನ್ನು ಒಳಗೊಂಡಿದೆ ; 
ಉಪಗ್ರಹಗಳು ಉಪಗ್ರಹಗಳ ಮೇಲೆ ದಾಳಿ ಮಾಡುವಂತಹ ಬಾಹ್ಯಾಕಾಶದಿಂದ ಬಾಹ್ಯಾಕಾಶ ಯುದ್ಧ ; ಮತ್ತು ಭೂಮಿಯ ಆಧಾರಿತ ಗುರಿಗಳ ಮೇಲೆ ಉಪಗ್ರಹಗಳು ದಾಳಿ ಮಾಡುವಂತಹ ಬಾಹ್ಯಾಕಾಶದಿಂದ ನೆಲಕ್ಕೆ ಯುದ್ಧ .

9. ಸಾಮ್ರಾಜ್ಯಶಾಹಿತ್ವ ಅರ್ಥ:
👉ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸೈನಿಕವಾಗಿ ಪ್ರಬಲವಾದ ರಾಷ್ಟ್ರಗಳು ದುರ್ಬಲ ವಾದ ರಾಷ್ಟ್ರಗಳನ್ನು ಗೆದ್ದು ಅಲ್ಲಿ ತಮ್ಮ ರಾಜಕೀಯ ಹಾಗೂ ಆರ್ಥಿಕ ಪರಮಾಧಿಕಾರ ಸ್ಥಾಪಿಸುವದು.

10. ವಸಹಾತುಶಾಹಿತ್ವ ಅರ್ಥ:
👉ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಲ್ಲಿ ತನ್ನ ಅಗತ್ಯ ಬೇಡಿಕೆಗಳ ಈಡೇರಿಕೆಗೆ ಗಾಗಿ ನೆಲೆಸುವ ನಾಡುಗಳನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲೆ ನಿಲ್ಲುವಿಕೆಯನ್ನು ವಸಹಾತುಶಾಹಿತ್ವ ಎನ್ನುವರು.

11. ಜೆಸೂಟ್ : ಇಗ್ನೇಶಿಯಸ್ ಲಯೊಲ ಎಂಬಾತನು ಸಾ.ಶ 1534ರಲ್ಲಿ ಪ್ಯಾರಿಸ್‌ನಲ್ಲಿ ‘ಜೀಸಸ್ ಸಂಘ’ವನ್ನು ಕಟ್ಟಿದನು. ಇದು ಪುರುಷ ಕ್ಯಾಥೋಲಿಕ್ ಪಂಥಿಯ ಧರ್ಮಾಸಕ್ತರ ಸಭೆಯಾಗಿತ್ತು. ಈ ಜೀಸಸ್ ಸಂಘದ ಸದಸ್ಯರೇ ಜೆಸೂಟ್‌ಗಳು.
12. ಮಿಷನರಿ : ವಿದೇಶಗಳಲ್ಲಿ ಕ್ರೈಸ್ತ್ ಧರ್ಮದ ಪ್ರಚಾರಕ್ಕಾಗಿ ಕಳುಹಿಸಲ್ಪಡುವ ಧರ್ಮ ಪ್ರಚಾರಕರು.
13. ಭಾರತೀಯಶಾಸ್ತ್ರ : ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತ  ಅಧ್ಯಯನ ನಡೆಸುವ ಶಾಸ್ತç.
14. ಪೌರಾತ್ಯವಾದಿ : ಪೂರ್ವ ದೇಶಗಳ ಇತಿಹಾಸ, ಸಂಸ್ಕೃತಿ, ಆಧ್ಯಾತ್ಮ ಮುಂತಾದವುಗಳ ಬಗೆಗೆ ಒಲವುಳ್ಳ ಯುರೋಪಿನ ವಿದ್ವಾಂಸರು.
15. ನಾಗರಿಕತೆ - ನಗರ ಜೀವನ, ವಾಣಿಜ್ಯದ ಬೆಳವಣಿಗೆ, ಬರವಣಿಗೆಯ ಕಲೆ, ಲೋಹಗಳ ಬಳಕೆ ಇವೆಲ್ಲವೂ ನಾಗರಿಕತೆಯನ್ನು ಸೂಚಿಸುತ್ತದೆ.
16. ನೆಲೆಗಳು - ಪ್ರಾಚೀನ ಕಾಲದ ವಾಸಸ್ಥಳಗಳು,
17. ಡುಬ್ಬ- ಗೂಳಿ ಮೊದಲಾದವುಗಳ ಹಿಣಿಲು.
Share:

SSLC HISTORY - MCQ PDF BOOK

 PDF BOOK ನೋಡಲು ಮತ್ತು DOWN LOAD ಕ್ಲಿಕ್ ಮಾಡಿ

HISTORY PDF BOOK

Share:

ಇತಿಹಾಸ ಅಧ್ಯಾಯ - 1 ರಿಂದ 3 : "ಸವಿ ಸಮಯ 50 ನಿಮಿಷ"

ಈ Online ಪರೀಕ್ಷೆಯ ಉದ್ದೇಶಗಳು: 1. SSLC ವಾರ್ಷಿಕ ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯ ಮಹತ್ವ ತಿಳಿಸುವದು. 2. ಸಮಾಜ ವಿಜ್ಞಾನ ವಿಷಯ ಪ್ರಬುತ್ವ ಹೆಚ್ಚಿಸುವದು. 3. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವದು. 4. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವದು 5. ನಿಗಧಿತ ಸಮಯದಲ್ಲಿಯೇ ಉತ್ತರಿಸುವ ಕೌಶ್ಯ ಬೆಳೆಸುವದು.

TEST ಆರಂಭಿಸಲು ಕೆಳಗಿನ  ಕೆಳಗೆ ಕ್ಲಿಕ್‌ ಮಾಡಿ
 



Share:

SSLC VIDEO LESSONS - SOCIAL SCIENCE

Subscribe ಆಗಲು ಕ್ಲಿಕ್‌ ಮಾಡಿ

ಭೂಗೋಳಶಾಸ್ತ್ರದ ಸವಿ ವಿಡಿಯೋ ಪಾಠಗಳು

Subscribe ಆಗಲು ಕ್ಲಿಕ್‌ ಮಾಡಿ
Share:

8ನೇ ತರಗತಿಯ ಸೇತುಬಂಧ ಕಲಿಕಾ ಸಾಮರ್ಥ್ಯಗಳು ಹಾಗೂ ಪರಿಹಾರ ಬೋಧನಾ ಸಾಮಗ್ರಿಗಳು

 

8ನೇ ತರಗತಿಯ ಸೇತುಬಂಧ ಕಲಿಕಾ ಸಾಮರ್ಥ್ಯಗಳು ಹಾಗೂ 

ಪರಿಹಾರ ಬೋಧನೆಯ  SOFT  ಕಲಿಕೋಪಕರಣಗಳು

ಕ್ರ.ಸಂ

ಕಲಿಕಾ ಸಾಮರ್ಥ್ಯಗಳು

PDF  VIEW

You Tube 

 

ಪೂರ್ವ ಪರೀಕ್ಷೆ

PDF  

ONLIN TEST

1

ಇತಹಾಸ ರಚನೆಯ ಕಲ್ಪನೆ 

PDF

You Tube  

2

ಇತಿಹಾಸದ ವರ್ಗೀಕರಣ ಮತ್ತು ಪ್ರಾಚೀನ ನಾಗರಿಕತೆಗಳು 


PDF 


You Tube 

3

 

 

 

4

 

 

 

5

 

 

 

6

 

 

 

7

 

 

 

8

 

 

 

9

 

 

 

10

 

 

 

11

 

 

 

12

 

 

 

13

 

 

 

14

 

 

 

15

 

 

 

16

 

 

 

17

 

 

 

18

 

 

 

19

 

 

 

20

 

 

 

Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com