For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸವಿ ಶಬ್ದಾರ್ಥ - ಸಮಾಜ ವಿಜ್ಞಾನದಲ್ಲಿನ ಪ್ರಮುಖ ಪದಗಳ ಅರ್ಥ


1. ಸಮಾಜವಾದದ ಅರ್ಥ :
👉 ಸಮಾಜದ ಹಿತರಕ್ಷಣೆಯೇ ಸಮಾಜವಾದ
👉ಉತ್ಪಾದನಾಂಗಗಳು(ಭೂಮಿ, ಶ್ರಮ, ಬಂಡವಾಳ, ಸಂಘಟನೆ) ಮತ್ತು ವಿತರಣೆಯ ಮೇಲೆ ಸರಕಾರದ ಹತೋಟಿ ಹೊಂದುವ ವ್ಯವಸ್ಥೆ ಯೇ ಸಮಾಜವಾದ.

2. ಬಂಡವಾಳಶಾಹಿ ಅರ್ಥ :
👉 ಉತ್ಪಾದನೆ ಮತ್ತು ವಿತರಣೆ ಖಾಸಗಿ ಒಡೆತನದಲ್ಲಿರುವ ಅರ್ಥವ್ಯವಸ್ಥೆಯನ್ನು ಬಂಡವಾಳ ಶಾಹಿ ಎನ್ನುವರು.
👉 ಸಮಾಜವಾದದ ವಿರುದ್ಧ ವ್ಯವಸ್ಥೆ.

3. ಸಾಲ್ಟ್ - ಪ್ರಭಲ ಅಸ್ತ್ರಗಳ ಮಿತಗೊಳಿಸುವ ಮಾತುಕತೆ(Strategic Arms Limitation Talks)
👉ಅಮೇರಿಕಾ ಮತ್ತು ರಷ್ಯಾ ದೇಶಗಳ ನಡುವಿನ ಮಾತುಕತೆ.(1972)
👉ಉದ್ದೇಶ - ನಿಷೇಧಾತ್ಮಕ ಅಣ್ವಸ್ತ್ರಗಳ ಬಳಕೆಯ ಮಿತಿಗೊಳಿಸಲಾಯಿತು.
👉ಖಂಡಾಂತರ ವಿರೋಧಿ ಕ್ಷಿಪಣಿಗಳ ಮಿತಿ 100ಕ್ಕೆ ಇಳಿಕೆ.
👉 ಇಂಗ್ಲೆಂಡ್, ಅಮೇರಿಕ, ರಷ್ಯಾ ರಾಷ್ಟ್ರಗಳು ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಮಿತಿಗೊಳಿಸುವ ವಿಚಾರ ವಿನಿಮಯ
👉ಅಂತಿಮವಾಗಿ 1979ರಲ್ಲಿ ಎರಡೂ ಅಮೆರಿಕ ಮತ್ತು ರಷ್ಯಾ ಸಹಿ.
👉ಚಂದ್ರನ ಮೇಲೂ ಅಣ್ವಸ್ತ್ರ ಪ್ರಯೋಗ ನಿಷೇಧ.

4. ಪಾಕ್ಷಿಕ ಪ್ರಯೋಗ ನಿಷೇಧ ಒಪ್ಪಂದ :
👉ಇದನ್ನು PTBT,LTBT,NTBT ಎಂದು ಕರೆಯುವರು
Ptbt-Partial test ban treaty
Ltbt-Limited test ban treaty
NTBT-Nuclear test ban treaty
👉 1963ರಲ್ಲಿ ಅಮೆರಿಕ, ರಷ್ಯಾ, ಬ್ರಿಟನ್ ಸಹಿ ಹಾಕಿದವು.
👉ಅಣ್ವಸ್ತ್ರ ಪರೀಕ್ಷೆಯನ್ನು ವಾಯುಮಂಡಲ, ಬಾಹ್ಯಾಕಾಶ, ಸಾಗರದಡಿಯಲ್ಲಿ, ಅಂತರವಲಯದಲ್ಲಿ ನಿಷೇಧ ಮಾಡಲಾಯಿತು.
👉ಆದರೆ ಭೂಗರ್ಭದಲ್ಲಿ ಪರೀಕ್ಷೆ ಮಾಡಬಹುದು.

5. ಸಮಗ್ರ ಪರೀಕ್ಷಾ ನಿಷೇಧ ಒಪ್ಪಂದ (CTBT)
👉199 6ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (160ರಾಷ್ಟ್ರಗಳು) ಅಂಗೀಕಾರ. 1998ರಲ್ಲಿ ಜಾರಿಯಾಯಿತು.
👉ಅಣ್ವಸ್ತ್ರ ಪರೀಕ್ಷೆಯನ್ನು ಸಂಪೂರ್ಣ ನಿಷೇಧ ಮಾಡಲಾಯಿತು.

6. ಫಲಿಕೆ ನಿಷೇಧ ಒಪ್ಪಂದ - ಸಾಲ್ಟ್ - ಪ್ರಭಲ ಅಸ್ತ್ರಗಳ ಮಿತಗೊಳಿಸುವ ಮಾತುಕತೆ(Strategic Arms Limitation Talks)
👉ಅಮೇರಿಕಾ ಮತ್ತು ರಷ್ಯಾ ದೇಶಗಳ ನಡುವಿನ ಮಾತುಕತೆ.(1972)
👉ಉದ್ದೇಶ - ನಿಷೇಧಾತ್ಮಕ ಅಣ್ವಸ್ತ್ರಗಳ ಬಳಕೆಯ ಮಿತಿಗೊಳಿಸಲಾಯಿತು.
👉ಖಂಡಾಂತರ ವಿರೋಧಿ ಕ್ಷಿಪಣಿಗಳ ಮಿತಿ 100ಕ್ಕೆ ಇಳಿಕೆ.
👉 ಇಂಗ್ಲೆಂಡ್, ಅಮೇರಿಕ, ರಷ್ಯಾ ರಾಷ್ಟ್ರಗಳು ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಮಿತಿಗೊಳಿಸುವ ವಿಚಾರ ವಿನಿಮಯ
👉ಅಂತಿಮವಾಗಿ 1979ರಲ್ಲಿ ಎರಡೂ ಅಮೆರಿಕ ಮತ್ತು ರಷ್ಯಾ ಸಹಿ.
👉ಚಂದ್ರನ ಮೇಲೂ ಅಣ್ವಸ್ತ್ರ ಪ್ರಯೋಗ ನಿಷೇಧ.

7. ಸಾಂಸ್ಕೃತಿಕ ಕ್ರಾಂತಿ:
👉ಚಿನಾದ ಕಮ್ಯುನಿಸ್ಟ್ ಪಕ್ಷದ ನಾಯಕರಲ್ಲಿ ಉನ್ನತ ಅಧಿಕಾರಕ್ಕಾಗಿ ನಡೆದ ಪೈಪೋಟಿಯೇ ಸಾಂಸ್ಕೃತಿಕ ಕ್ರಾಂತಿ.
👉 ಇದನ್ನು ಲಿನ್ಪಿಯಾವೋ ವಿರೋಧಿ ಗುಂಪು ಸದೆಬಡೆಯಲು1966ರಲ್ಲಿ ಮಾವೋ ಆರಂಭಿಸಿದನು.
👉ಉದ್ದೇಶ- ಮಾವೋನ ತತ್ವ ಗಳನ್ನು ಉನ್ನತಿಕರಿಸುವದು ಮತ್ತು ಶ್ರೇಷ್ಠ ತೆಯನ್ನು ಎತ್ತಿ ಹಿಡಿಯುವದು.

8. ವ್ಯೋಮ ಸಮರ -
ಬಾಹ್ಯಾಕಾಶ (ವ್ಯೋಮ ಸಮರ) ಯುದ್ಧವು ಬಾಹ್ಯಾಕಾಶದಲ್ಲಿ ನಡೆಯುವ ಯುದ್ಧವಾಗಿರುತ್ತದೆ . 
ಆದ್ದರಿಂದ ಬಾಹ್ಯಾಕಾಶ ಯುದ್ಧದ ವ್ಯಾಪ್ತಿಯು ಭೂಮಿಯಿಂದ ಉಪಗ್ರಹಗಳ ಮೇಲೆ ಆಕ್ರಮಣ ಮಾಡುವಂತಹ ನೆಲದಿಂದ ಬಾಹ್ಯಾಕಾಶ ಯುದ್ಧವನ್ನು ಒಳಗೊಂಡಿದೆ ; 
ಉಪಗ್ರಹಗಳು ಉಪಗ್ರಹಗಳ ಮೇಲೆ ದಾಳಿ ಮಾಡುವಂತಹ ಬಾಹ್ಯಾಕಾಶದಿಂದ ಬಾಹ್ಯಾಕಾಶ ಯುದ್ಧ ; ಮತ್ತು ಭೂಮಿಯ ಆಧಾರಿತ ಗುರಿಗಳ ಮೇಲೆ ಉಪಗ್ರಹಗಳು ದಾಳಿ ಮಾಡುವಂತಹ ಬಾಹ್ಯಾಕಾಶದಿಂದ ನೆಲಕ್ಕೆ ಯುದ್ಧ .

9. ಸಾಮ್ರಾಜ್ಯಶಾಹಿತ್ವ ಅರ್ಥ:
👉ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸೈನಿಕವಾಗಿ ಪ್ರಬಲವಾದ ರಾಷ್ಟ್ರಗಳು ದುರ್ಬಲ ವಾದ ರಾಷ್ಟ್ರಗಳನ್ನು ಗೆದ್ದು ಅಲ್ಲಿ ತಮ್ಮ ರಾಜಕೀಯ ಹಾಗೂ ಆರ್ಥಿಕ ಪರಮಾಧಿಕಾರ ಸ್ಥಾಪಿಸುವದು.

10. ವಸಹಾತುಶಾಹಿತ್ವ ಅರ್ಥ:
👉ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಲ್ಲಿ ತನ್ನ ಅಗತ್ಯ ಬೇಡಿಕೆಗಳ ಈಡೇರಿಕೆಗೆ ಗಾಗಿ ನೆಲೆಸುವ ನಾಡುಗಳನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲೆ ನಿಲ್ಲುವಿಕೆಯನ್ನು ವಸಹಾತುಶಾಹಿತ್ವ ಎನ್ನುವರು.

11. ಜೆಸೂಟ್ : ಇಗ್ನೇಶಿಯಸ್ ಲಯೊಲ ಎಂಬಾತನು ಸಾ.ಶ 1534ರಲ್ಲಿ ಪ್ಯಾರಿಸ್‌ನಲ್ಲಿ ‘ಜೀಸಸ್ ಸಂಘ’ವನ್ನು ಕಟ್ಟಿದನು. ಇದು ಪುರುಷ ಕ್ಯಾಥೋಲಿಕ್ ಪಂಥಿಯ ಧರ್ಮಾಸಕ್ತರ ಸಭೆಯಾಗಿತ್ತು. ಈ ಜೀಸಸ್ ಸಂಘದ ಸದಸ್ಯರೇ ಜೆಸೂಟ್‌ಗಳು.
12. ಮಿಷನರಿ : ವಿದೇಶಗಳಲ್ಲಿ ಕ್ರೈಸ್ತ್ ಧರ್ಮದ ಪ್ರಚಾರಕ್ಕಾಗಿ ಕಳುಹಿಸಲ್ಪಡುವ ಧರ್ಮ ಪ್ರಚಾರಕರು.
13. ಭಾರತೀಯಶಾಸ್ತ್ರ : ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತ  ಅಧ್ಯಯನ ನಡೆಸುವ ಶಾಸ್ತç.
14. ಪೌರಾತ್ಯವಾದಿ : ಪೂರ್ವ ದೇಶಗಳ ಇತಿಹಾಸ, ಸಂಸ್ಕೃತಿ, ಆಧ್ಯಾತ್ಮ ಮುಂತಾದವುಗಳ ಬಗೆಗೆ ಒಲವುಳ್ಳ ಯುರೋಪಿನ ವಿದ್ವಾಂಸರು.
15. ನಾಗರಿಕತೆ - ನಗರ ಜೀವನ, ವಾಣಿಜ್ಯದ ಬೆಳವಣಿಗೆ, ಬರವಣಿಗೆಯ ಕಲೆ, ಲೋಹಗಳ ಬಳಕೆ ಇವೆಲ್ಲವೂ ನಾಗರಿಕತೆಯನ್ನು ಸೂಚಿಸುತ್ತದೆ.
16. ನೆಲೆಗಳು - ಪ್ರಾಚೀನ ಕಾಲದ ವಾಸಸ್ಥಳಗಳು,
17. ಡುಬ್ಬ- ಗೂಳಿ ಮೊದಲಾದವುಗಳ ಹಿಣಿಲು.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com