For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸಮಾಜಶಾಸ್ತ್ರದ 2 ರಿಂದ 4 ಅಧ್ಯಾಯ ಹಾಗೂ ಭೂಗೋಳಶಾಸ್ತ್ರ 1ನೇ ಅದ್ಯಾಯ- "ಸವಿ ಸಮಯ"

ಸಮಾಜಶಾಸ್ತ್ರದ 2 ರಿಂದ 4 ಅಧ್ಯಾಯ ಹಾಗೂ ಭೂಗೋಳಶಾಸ್ತ್ರ 1ನೇ ಅದ್ಯಾಯ- "ಸವಿ ಸಮಯ"
Share:

ವಾರ್ಷಿಕ ಅಂದಾಜು ಪತ್ರಿಕೆ - 2021-22

Share:

ರಾಜ್ಯಶಾಸ್ತ್ರ ಅಧ್ಯಾಯ - 4 ಮತ್ತು 5 ಹಾಗೂ ಸಮಾಜಶಾಸ್ತ್ರದ 1ನೇ ಅಧ್ಯಾಯ "ಸವಿ ಸಮಯ"


 

Share:

ರಾಜ್ಯಶಾಸ್ತ್ರ ಅಧ್ಯಾಯ - 1 ರಿಂದ 3 "ಸವಿ ಸಮಯ"

Share:

8ನೇ ತರಗತಿ ಸವಿ ದಾಖಲೆಗಳು

 8ನೇ ತರಗತಿ ಸವಿ ದಾಖಲೆಗಳು

ಸವಿ ಶಿಕ್ಷಕ ನಿರ್ವಹಿಸಬೇಕಾದ ದಾಖಲೆಗಳು
ಕ್ರ.ಸಂCCE ದಾಖಲೆಗಳುVIEW & DOWNLOAD
1ವಾರ್ಷಿಕ ಅಂದಾಜು ಪತ್ರಿಕೆ ( ಕ್ರಿಯಾ ಯೋಜನೆ)VIEW & DOWNLOAD
2ಘಟಕ ಯೋಜನೆ (ಪಾಠ ಯೋಜನೆ)VIEW & DOWNLOAD
3ಚಟುವಟಿಕೆ ಪುಸ್ತಕ (ತಪಶೀಲು ಪಟ್ಟಿ. ದರ್ಜಾಮಾಪನ, ಅಭಿಪ್ರಾಯ ಸಂಗ್ರಹ ಪಟ್ಟಿ, ಪ್ರಶ್ನೆ ಪತ್ರಿಕೆಗಳು)VIEW & DOWNLOAD
4ಶಿಕ್ಷಕರ ವಯಕ್ತಿಕ ಅಂಕ ದಾಖಲಾತಿ ವಹಿVIEW & DOWNLOAD
5ಶಿಕ್ಷಕರ ಡೈರಿVIEW & DOWNLOAD
6ಮಗುವಿನ ಸಾಂಧರ್ಭಿಕ ದಾಖಲೆ ವVIEW & DOWNLOAD
7ಕೃತಿ ಸಂಪುಟVIEW & DOWNLOAD
8ಕ್ರೋಢೀಕೃತ ಅಂಕವಹಿ ( ತರಗತಿ ಶಿಕ್ಷಕರಿಗೆ)VIEW & DOWNLOAD
9ಅಂಕಪಟ್ಟಿಗಳು (ತರಗತಿ ಶಿಕ್ಷಕರಿಗೆ)VIEW & DOWNLOAD
Share:

ಇತಿಹಾಸ ಅಧ್ಯಾಯ - 8 ರಿಂದ9"ಸವಿ ಸಮಯ"

 


Share:

ಸೇತುಬಂಧ 8, 9 ಹಾಗೂ 10ನೇ ತರಗತಿ.

 8ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ

ಈ ಕ್ರಿಯಾ ಯೋಜನೆಯು ನಮ್ಮ ಶಾಲೆಯ ಮಕ್ಕಳ ಮಟ್ಟಕ್ಕೆ ಮತ್ತು ಸ್ಥಳೀಯ ಸಂಪನ್ಮೂಲದ ಲಭ್ಯತೆಯ ಆಧಾರದ ಮೇಲೆ ರಚಿತವಾಗಿದ್ದು, ಇದುವೇ ಅಂತಿಮವಲ್ಲ.

DOWNLOAD HERE 






9ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ
 


10ನೇ ತರಗತಿ - ಸೇತುಬಂಧ ಕ್ರಿಯಾ ಯೋಜನೆ

 
Share:

ಇತಿಹಾಸ ಅಧ್ಯಾಯ - 6 ರಿಂದ 7 "ಸವಿ ಸಮಯ"

Share:

SSLC HISTORY - ONLINE TEST - LESSON 3 TO 5

COURTESY : KREIS, Bangalore Multiple Choice Questions – 2020-2021


 

Share:

ಇತಿಹಾಸ ಅಧ್ಯಾಯ 4 ರಿಂದ 6 : "ಸವಿ ಸಮಯ‌"


 

Share:

ಸಮಾಜ ವಿಜ್ಞಾನ ಸುಲಭವಾಗಿಸಿಕೊಳ್ಳುವದು ಹೇಗೆ ?



ಸಮಾಜ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಕಲಿಯುವುದು ಮತ್ತು ಓದುವದು ಹೇಗೆ?

    ಅನೇಕ ವಿದ್ಯಾರ್ಥಿಗಳಿಗೆ, ಸಮಾಜ ವಿಜ್ಞಾನವು ಒಂದು ಬೋರಿಂಗ್ ವಿಷಯವಾಗಿದೆ. ಹೆಚ್ಚಿನ ಪಠ್ಯಕ್ರಮದದಿಂದಾಗಿ ಇದು ಕಷ್ಟಕರವೆಂದು ಅನೇಕರು ಭಯಭೀತರಾಗುತ್ತಾರೆ. ಅಲ್ಲದೆ ಈ ವಿಷಯವನ್ನು ನೀರಸವಾಗಿ ನೋಡುತ್ತಾರೆ. ನಿರಾಸಕ್ತಿಯಿಂದ ಓದದೇ ಬಿಡುತ್ತಾರೆ. ಆದರೆ ಸಮಾಜ ವಿಜ್ಞಾನವು ಒಂದು ಪ್ರಮುಖ ವಿಷಯವಾಗಿದೆ. ವಿದ್ಯಾರ್ಥಿಗಳು ವಿಷಯವನ್ನು ನಿಜ ಜೀವನಕ್ಕೆ ಹೋಲಿಸಿಕೊಂಡು ಮತ್ತು ಸಂಬಂಧಿಕರಿಸುತ್ತ ಓದಿದರೆ ಅದು ಆಸಕ್ತಿದಾಯಕವಾಗಿರುತ್ತದೆ. ಸಮಾಜ ವಿಜ್ಞಾನ ಕಲಿಕೆಯನ್ನು ಆಸಕ್ತಿದಾಯಕವಾಗಿಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

1. ಸಮಾಜ ವಿಜ್ಞಾನದ ಪ್ರಾಮುಖ್ಯತೆಯನ್ನು ತಿಳಿಯಿರಿ.
    ಸಮಾಜ ವಿಜ್ಞಾನವು ವಿದ್ಯಾರ್ಥಿಗಳಿಗೆ ತಮ್ಮ ದೇಶ ಮತ್ತು ಪ್ರಪಂಚದ ಬಗ್ಗೆ ಜ್ಞಾನವನ್ನು ನೀಡುತ್ತದೆ. ಇದು 6 ವಿಭಾಗಗಳನ್ನು ಒಳಗೊಂಡಿದೆ , ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ. ವ್ಯವಹಾರ ಅಧ್ಯನ.ಇತಿಹಾಸವು ವಿದ್ಯಾರ್ಥಿಗಳಿಗೆ ವಿವಿಧ ನಾಗರಿಕತೆಗಳು, ರಾಜರು, ಸಾಮ್ರಾಜ್ಯಗಳು, ಯುದ್ಧಗಳು, ಸ್ವಾತಂತ್ರ್ಯ ಹೋರಾಟ ಇತ್ಯಾದಿಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.ಭೂಗೋಳಶಾಸ್ತ್ರ - ಭೂದೃಶ್ಯಗಳು, ಅಕ್ಷಾಂಶ, ರೇಖಾಂಶ, ಸ್ಥಳಗಳು, ನೈಸರ್ಗಿಕ ಸಂಪನ್ಮೂಲಗಳು, ಖನಿಜ ಸಂಪತ್ತು, ಹವಾಮಾನ ಪರಿಸ್ಥಿತಿಗಳು, ಇತ್ಯಾದಿಗಳ ಬಗ್ಗೆ ಕಲಿಸಿದರೆ, ರಾಜ್ಯಶಾಸ್ತ್ರ - ಸರ್ಕಾರದ ರಚನೆ, ಕಾರ್ಯಗಳು, ಸಂವಿಧಾನ, ಹಕ್ಕುಗಳು / ಕರ್ತವ್ಯಗಳು, ಜಾಗತಿಕ ಸಂಸ್ಥೆಗಳು, ಚುನಾವಣೆಗಳು ಬಗ್ಗೆ ಕಲಿಸುತ್ತದೆ. ಸಮಾಜಶಾಸ್ತ್ರವು - ನಮ್ಮ ಸುತ್ತಮುತ್ತಲಿನ ಸಮಾಜ ಸಂಸ್ಕೃತಿ, ಕುಟುಂಬ, ಸಮುದಾಯದ, ಸಾಮಾಜಿಕ ಸಮಸ್ಯೆಗಳು, ಮುಡನಂಬಿಕೆ - ಮೌಡ್ಯಗಳ ಬಗ್ಗೆ ಹೊಗಲಾಡಿಸುವ ಕ್ರಮಗಳ ಬಗ್ಗೆ ಕಲಿದುತ್ತದೆ. ಅರ್ಥಶಾಸ್ತ್ರವು - ಹಣಕಾಸು, ದೇಶದ ಬೆಳವಣಿಗೆ, ಆದಾಯ, ಉತ್ಪಾದನಾ ಅಂಗಗಳು- ಪ್ರತಿಫಲಗಳು, ಕೃಷಿ, ಕೈಗಾರಿಕೆಯ, ಸೇವಾವಲಯಗಳ ಬಗ್ಗೆ ಕಲಿಸುತ್ತದೆ.ವ್ಯವಹಾರ ಅಧ್ಯಯನ - ವ್ಯವಹಾರ, ವ್ಯಾಪಾರ, ಉದ್ದಿಮೆಗಾರಿಕೆ, ಬ್ಯಾಂಕ್ ವ್ಯವಹಾರ, ಲೆಕ್ಕಶಾಸ್ತ್ರ, ಗ್ರಾಹಕರ ಹಕ್ಕುಗಳ ಬಗ್ಗೆ ಕಲಿಸುತ್ತದೆ

2: ವಿಷಯದ ಬಗ್ಗೆ ಆಸಕ್ತಿ ಬೆಳಸಿಕೊಳ್ಳಲು ವಿಷಯವನ್ನು ಪ್ರೀತಿಸಿ.
    ಸಮಾಜ ವಿಜ್ಞಾನದ ಮೌಲ್ಯವನ್ನು ಅರ್ಥಮಾಡಿಕೊಳ್ಳುವದು. ಆಳವಾಗಿ ಅಧ್ಯಯನ ಮಾಡುವುದು ಮತ್ತು ಬೇಸರವನ್ನು ನಿವಾರಿಸಿಕೊಳ್ಳಲು ಸವಿ ವಿಷಯವನ್ನು ಪ್ರೀತಿಸಿ ಮತ್ತು ನಿರಂತರವಾಗಿ ಓದಿ. ಆಸಕ್ತಿಯನ್ನು ಬೆಳೆಸಲು ವಿಷಯದ ಮಹತ್ವವನ್ನು ಅರ್ಥಮಾಡಿಕೊಳ್ಳಿ. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಶೇಷವಾಗಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸವಿ ವಿಷಯಗಳು ಬಹಳ ಮಹತ್ವ ಪಡೆದುಕೊಂಡಿವೆ. ಈ ಸೇವಾ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ವಿಷಯದ ಮೇಲೆ ಆಸಕ್ತಿ ಬೆಳಸಿಕೊಳ್ಳುವದು ಬಹಳ ಅವಶ್ಯಕತೆ ಇದೆ
3. ಸಮಾಜ ವಿಜ್ಞಾನದ ಅಧ್ಯಯನಗಳನ್ನು ಕಲಿಯಲು ತಂತ್ರಜ್ಞಾನ ಮತ್ತು ಇಂಟರ್ನೆಟ್ ಅನ್ನು ಬಳಸಿಕೊಳ್ಳಿ.
    ಸಮಾಜ ವಿಜ್ಞಾನವನ್ನು ಆಸಕ್ತಿದಾಯಕ ರೀತಿಯಲ್ಲಿ ಕಲಿಯಲು ವಿದ್ಯಾರ್ಥಿಗಳು ತಂತ್ರಜ್ಞಾನ ಮತ್ತು ಇಂಟರ್ನೆಟ್ ಅನ್ನು ಬಳಸಿಕೊಳ್ಳಬಹುದು.ಅವರು ಭೌಗೋಳಿಕತೆ, ಇತಿಹಾಸ, ನಾಗರಿಕತೆ ಮತ್ತು ಅರ್ಥಶಾಸ್ತ್ರದ ಬಗ್ಗೆ ಕಲಿಯುವ ಪಾಠಗಳ ಕುರಿತು ವೀಡಿಯೊಗಳನ್ನು ವೀಕ್ಷಿಸಬಹುದು. ಉತ್ತಮ ತಿಳುವಳಿಕೆಗಾಗಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹೆಚ್ಚಿನ ಮಾಹಿತಿಗಾಗಿ ಹುಡುಕಬಹುದು. ಸಮಾಜ ವಿಜ್ಞಾನಗಳನ್ನು ಕಲಿಯುವುದನ್ನು ಮೋಜು ಮಾಡಲು ಅನೇಕ ಶೈಕ್ಷಣಿಕ ಸಂಪನ್ಮೂಲಗಳು, ರಸಪ್ರಶ್ನೆಗಳು, ಮೋಜಿನ ಆಟಗಳು ಇತ್ಯಾದಿಗಳನ್ನು ನೀಡುವ ಅನೇಕ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿವೆ. ಅವುಗಳನ್ನು ಬಳಸಿಕೊಳ್ಳಬಹಿದು.Wikipedia, quizzes, h5p, YouTube, Google... ಹೀಗೆ ಹಲವಾರು Online ಮಾಹಿತಿ ತಾಣಗಳಿವೆ.ಅನೇಕ ಶಿಕ್ಷಕರು ಚಿತ್ರ ಮತ್ತು ವಿಡಿಯೋ ಸಮೇತ ಪಿಪಿಟಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, Bloggerಗಳಲ್ಲಿ ಹಂಚಿಕೊಂಡದ್ದನ್ನು ಬಳಸಿಕೊಳ್ಳಬಹುದು.

4. ವಿಷಯದ ಮೇಲೆ ಪ್ರಭುತ್ವ ಸಾಧಿಸಲು, ವಿದ್ಯಾರ್ಥಿಗಳು ಗುಂಪುಗಳಲ್ಲಿ ಅಧ್ಯಯನ ಮಾಡಲು ಪ್ರಯತ್ನಿಸಬಹುದು.
    ಸಮಾಜ ವಿಜ್ಞಾನವನ್ನು ಆಸಕ್ತಿದಾಯಕವಾಗಿಸಲು, ವಿದ್ಯಾರ್ಥಿಗಳು ಗುಂಪಿನಲ್ಲಿ ಕಲಿಯಲು / ಅಧ್ಯಯನ ಮಾಡಲು ಸಹ ಪ್ರಯತ್ನಿಸಬಹುದು. ಇದು ಅವರ ಕಲಿಕೆಯ ಅನುಭವವನ್ನು ಹೆಚ್ಚಿಸಲು ಮಾತ್ರವಲ್ಲದೆ ಅದನ್ನು ಮೋಜು ಮಾಡಲು ಸಹಕಾರಿಯಾಗುತ್ತದೆ.ಅವರು ಸ್ನೇಹಿತರೊಂದಿಗೆ ಸಂವಹನ ನಡೆಸಬಹುದು, ಅಂಶಗಳನ್ನು ಚರ್ಚಿಸಬಹುದು ಮತ್ತು ಪರಸ್ಪರ ರಸಪ್ರಶ್ನೆ ಮಾಡಬಹುದು. ಅವರು ತಮ್ಮ ಸ್ನೇಹಿತರಿಗೆ ಸಹಾಯ ಮಾಡಲು ವಿಷಯಗಳನ್ನು ಕಲಿಸಬಹುದು ಅಥವಾ ವಿವರಿಸಬಹುದು; ಇದು ಮಾಹಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

5 : ಆಸಕ್ತಿದಾಯಕ ಚಾರ್ಟ್ಗಳನ್ನು ಮಾಡಿ ಮತ್ತು ಬುಲೆಟ್ ಪಾಯಿಂಟ್ ಟಿಪ್ಪಣಿಗಳನ್ನು ತಯಾರಿಸಿ
    ಪ್ರಮುಖ ಘಟನೆಗಳು, ಸಂಗತಿಗಳು ಮತ್ತು ಅಂಕಿಅಂಶಗಳು, ಪ್ರಮುಖ ದಿನಾಂಕಗಳು, ವ್ಯಾಖ್ಯಾನಗಳು, ದತ್ತಾಂಶ ಇತ್ಯಾದಿಗಳಿಗೆ ಚಾರ್ಟ್‌ಗಳು ಮತ್ತು ಪೋಸ್ಟರ್‌ಗಳನ್ನು ಸಿದ್ಧಪಡಿಸುವ ಮೂಲಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನವನ್ನು ಕಲಿಯುವುದನ್ನು ಮೋಜು ಮಾಡಬಹುದು. ಅವರು ನಕ್ಷೆಯ ಪ್ರಶ್ನೆಗಳನ್ನು ಬಿಡುವಿನ ಸಮಯದಲ್ಲಿ ಅಭ್ಯಾಸ ಮಾಡಬಹುದು. ಬುಲೆಟ್ ಪಾಯಿಂಟ್ ಟಿಪ್ಪಣಿಗಳನ್ನು ಅಧ್ಯಾಯವಾರು ಸಿದ್ಧಪಡಿಸಬಹುದು ಮತ್ತು ಅದನ್ನು ಅವರು ದಿನಾಲೂ ಕಣ್ಣಾಹಿಸಲು ಸಹಕಾರಿಯಾಗಬಹುದು. ವಸ್ತು ನಿಷ್ಠ ವಿಷಯ ಟಿಪ್ಪಣಿಯು ಎಂತಹ ಕಠಿಣ ಪ್ರಶ್ನೆಗಳನ್ನು ಉತ್ತರಿಸಲು ಸಹಾಯ ಮಾಡುತ್ತವೆ.

6. ತರಗತಿಯಲ್ಲಿ ಸವಿ ಶಿಕ್ಷಕರು ಬೋಧಿಸುವಾಗ ಆಸಕ್ತಿಯಿಂದ ಆಲಿಸಿ, ತಿಳಿಯದ ವಿಷಯದ ಬಗ್ಗೆ ಪ್ರಶ್ನಿಸಿ.
     ಶಿಕ್ಷಕರು ಬೋಧಿಸುವಾಗ ಟಿಪ್ಪಣಿಗಳು ಮಾಡಿಕೊಳ್ಳಿ, ಅರ್ಥವಾಗದ ವಿಷಯವನ್ನು ಪ್ರಶ್ನೆ ಕೇಳುವದರ ಮೂಲಕ ತಿಳಿದುಕೊಳ್ಳಿ. ಮನೆಯಲ್ಲಿ ಇಂದಿನ ಸವಿಪಾಠದ ಟಿಪ್ಪಣಿಗಳನ್ನು ನೋಡಿ ಮತ್ತು ಅರ್ಥವತ್ತಾಗಿ ಮತ್ತೋಮ್ಮೆ ಟಿಪ್ಪಣಿ ಮಾಡಿಕೊಳ್ಳಿ ಪಠ್ಯಪುಸ್ತಕ ವನ್ನು ಸರಿಯಾಗಿ ಎಲ್ಲಾ ಪಠ್ಯವನ್ನು ಓದಿ ಮನನ ಮಾಡಿಕೊಳ್ಳಿ.

    ಈ ರೀತಿಯಲ್ಲಿ ಮಾಡುವದರಿಂದ ಸಮಾಜ ವಿಜ್ಞಾನ ವಿಷಯದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಮಾಜ ವಿಜ್ಞಾನ ಇದು ಕೇವಲ ಸತ್ತವರ ಇತಿಹಾಸವಲ್ಲ ಬದಲಿಗೆ ನಿತ್ಯಜೀವನಕ್ಕೆ ಬೇಕಾದ ಮಾಹಿತಿ , ಗತ ಘಟನೆಗಳ ಮೇಲೆ ಉತ್ತಮ ಭವಿಷ್ಯ ರೂಪಿಸಿಕೊಳ್ಳವ ಮಾರ್ಗ ನೀಡುತ್ತದೆ ಎಂದು ತಿಳಿದರೆ ನಿಮಗೆ ಸಮಾಜ ವಿಜ್ಞಾನ ಯಾವಾಗಲೂ ಸವಿ ಸಿಹಿಯಾಗಿ ಕಾಣುವದು.
Share:

SSLC HISTORY - ONLINE TEST - LESSON 1 TO 3


  COURTESY : KREIS, Bangalore Multiple Choice Questions – 2020-2021

Share:

ಸವಿ ಶಬ್ದಾರ್ಥ - ಸಮಾಜ ವಿಜ್ಞಾನದಲ್ಲಿನ ಪ್ರಮುಖ ಪದಗಳ ಅರ್ಥ


1. ಸಮಾಜವಾದದ ಅರ್ಥ :
👉 ಸಮಾಜದ ಹಿತರಕ್ಷಣೆಯೇ ಸಮಾಜವಾದ
👉ಉತ್ಪಾದನಾಂಗಗಳು(ಭೂಮಿ, ಶ್ರಮ, ಬಂಡವಾಳ, ಸಂಘಟನೆ) ಮತ್ತು ವಿತರಣೆಯ ಮೇಲೆ ಸರಕಾರದ ಹತೋಟಿ ಹೊಂದುವ ವ್ಯವಸ್ಥೆ ಯೇ ಸಮಾಜವಾದ.

2. ಬಂಡವಾಳಶಾಹಿ ಅರ್ಥ :
👉 ಉತ್ಪಾದನೆ ಮತ್ತು ವಿತರಣೆ ಖಾಸಗಿ ಒಡೆತನದಲ್ಲಿರುವ ಅರ್ಥವ್ಯವಸ್ಥೆಯನ್ನು ಬಂಡವಾಳ ಶಾಹಿ ಎನ್ನುವರು.
👉 ಸಮಾಜವಾದದ ವಿರುದ್ಧ ವ್ಯವಸ್ಥೆ.

3. ಸಾಲ್ಟ್ - ಪ್ರಭಲ ಅಸ್ತ್ರಗಳ ಮಿತಗೊಳಿಸುವ ಮಾತುಕತೆ(Strategic Arms Limitation Talks)
👉ಅಮೇರಿಕಾ ಮತ್ತು ರಷ್ಯಾ ದೇಶಗಳ ನಡುವಿನ ಮಾತುಕತೆ.(1972)
👉ಉದ್ದೇಶ - ನಿಷೇಧಾತ್ಮಕ ಅಣ್ವಸ್ತ್ರಗಳ ಬಳಕೆಯ ಮಿತಿಗೊಳಿಸಲಾಯಿತು.
👉ಖಂಡಾಂತರ ವಿರೋಧಿ ಕ್ಷಿಪಣಿಗಳ ಮಿತಿ 100ಕ್ಕೆ ಇಳಿಕೆ.
👉 ಇಂಗ್ಲೆಂಡ್, ಅಮೇರಿಕ, ರಷ್ಯಾ ರಾಷ್ಟ್ರಗಳು ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಮಿತಿಗೊಳಿಸುವ ವಿಚಾರ ವಿನಿಮಯ
👉ಅಂತಿಮವಾಗಿ 1979ರಲ್ಲಿ ಎರಡೂ ಅಮೆರಿಕ ಮತ್ತು ರಷ್ಯಾ ಸಹಿ.
👉ಚಂದ್ರನ ಮೇಲೂ ಅಣ್ವಸ್ತ್ರ ಪ್ರಯೋಗ ನಿಷೇಧ.

4. ಪಾಕ್ಷಿಕ ಪ್ರಯೋಗ ನಿಷೇಧ ಒಪ್ಪಂದ :
👉ಇದನ್ನು PTBT,LTBT,NTBT ಎಂದು ಕರೆಯುವರು
Ptbt-Partial test ban treaty
Ltbt-Limited test ban treaty
NTBT-Nuclear test ban treaty
👉 1963ರಲ್ಲಿ ಅಮೆರಿಕ, ರಷ್ಯಾ, ಬ್ರಿಟನ್ ಸಹಿ ಹಾಕಿದವು.
👉ಅಣ್ವಸ್ತ್ರ ಪರೀಕ್ಷೆಯನ್ನು ವಾಯುಮಂಡಲ, ಬಾಹ್ಯಾಕಾಶ, ಸಾಗರದಡಿಯಲ್ಲಿ, ಅಂತರವಲಯದಲ್ಲಿ ನಿಷೇಧ ಮಾಡಲಾಯಿತು.
👉ಆದರೆ ಭೂಗರ್ಭದಲ್ಲಿ ಪರೀಕ್ಷೆ ಮಾಡಬಹುದು.

5. ಸಮಗ್ರ ಪರೀಕ್ಷಾ ನಿಷೇಧ ಒಪ್ಪಂದ (CTBT)
👉199 6ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (160ರಾಷ್ಟ್ರಗಳು) ಅಂಗೀಕಾರ. 1998ರಲ್ಲಿ ಜಾರಿಯಾಯಿತು.
👉ಅಣ್ವಸ್ತ್ರ ಪರೀಕ್ಷೆಯನ್ನು ಸಂಪೂರ್ಣ ನಿಷೇಧ ಮಾಡಲಾಯಿತು.

6. ಫಲಿಕೆ ನಿಷೇಧ ಒಪ್ಪಂದ - ಸಾಲ್ಟ್ - ಪ್ರಭಲ ಅಸ್ತ್ರಗಳ ಮಿತಗೊಳಿಸುವ ಮಾತುಕತೆ(Strategic Arms Limitation Talks)
👉ಅಮೇರಿಕಾ ಮತ್ತು ರಷ್ಯಾ ದೇಶಗಳ ನಡುವಿನ ಮಾತುಕತೆ.(1972)
👉ಉದ್ದೇಶ - ನಿಷೇಧಾತ್ಮಕ ಅಣ್ವಸ್ತ್ರಗಳ ಬಳಕೆಯ ಮಿತಿಗೊಳಿಸಲಾಯಿತು.
👉ಖಂಡಾಂತರ ವಿರೋಧಿ ಕ್ಷಿಪಣಿಗಳ ಮಿತಿ 100ಕ್ಕೆ ಇಳಿಕೆ.
👉 ಇಂಗ್ಲೆಂಡ್, ಅಮೇರಿಕ, ರಷ್ಯಾ ರಾಷ್ಟ್ರಗಳು ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಮಿತಿಗೊಳಿಸುವ ವಿಚಾರ ವಿನಿಮಯ
👉ಅಂತಿಮವಾಗಿ 1979ರಲ್ಲಿ ಎರಡೂ ಅಮೆರಿಕ ಮತ್ತು ರಷ್ಯಾ ಸಹಿ.
👉ಚಂದ್ರನ ಮೇಲೂ ಅಣ್ವಸ್ತ್ರ ಪ್ರಯೋಗ ನಿಷೇಧ.

7. ಸಾಂಸ್ಕೃತಿಕ ಕ್ರಾಂತಿ:
👉ಚಿನಾದ ಕಮ್ಯುನಿಸ್ಟ್ ಪಕ್ಷದ ನಾಯಕರಲ್ಲಿ ಉನ್ನತ ಅಧಿಕಾರಕ್ಕಾಗಿ ನಡೆದ ಪೈಪೋಟಿಯೇ ಸಾಂಸ್ಕೃತಿಕ ಕ್ರಾಂತಿ.
👉 ಇದನ್ನು ಲಿನ್ಪಿಯಾವೋ ವಿರೋಧಿ ಗುಂಪು ಸದೆಬಡೆಯಲು1966ರಲ್ಲಿ ಮಾವೋ ಆರಂಭಿಸಿದನು.
👉ಉದ್ದೇಶ- ಮಾವೋನ ತತ್ವ ಗಳನ್ನು ಉನ್ನತಿಕರಿಸುವದು ಮತ್ತು ಶ್ರೇಷ್ಠ ತೆಯನ್ನು ಎತ್ತಿ ಹಿಡಿಯುವದು.

8. ವ್ಯೋಮ ಸಮರ -
ಬಾಹ್ಯಾಕಾಶ (ವ್ಯೋಮ ಸಮರ) ಯುದ್ಧವು ಬಾಹ್ಯಾಕಾಶದಲ್ಲಿ ನಡೆಯುವ ಯುದ್ಧವಾಗಿರುತ್ತದೆ . 
ಆದ್ದರಿಂದ ಬಾಹ್ಯಾಕಾಶ ಯುದ್ಧದ ವ್ಯಾಪ್ತಿಯು ಭೂಮಿಯಿಂದ ಉಪಗ್ರಹಗಳ ಮೇಲೆ ಆಕ್ರಮಣ ಮಾಡುವಂತಹ ನೆಲದಿಂದ ಬಾಹ್ಯಾಕಾಶ ಯುದ್ಧವನ್ನು ಒಳಗೊಂಡಿದೆ ; 
ಉಪಗ್ರಹಗಳು ಉಪಗ್ರಹಗಳ ಮೇಲೆ ದಾಳಿ ಮಾಡುವಂತಹ ಬಾಹ್ಯಾಕಾಶದಿಂದ ಬಾಹ್ಯಾಕಾಶ ಯುದ್ಧ ; ಮತ್ತು ಭೂಮಿಯ ಆಧಾರಿತ ಗುರಿಗಳ ಮೇಲೆ ಉಪಗ್ರಹಗಳು ದಾಳಿ ಮಾಡುವಂತಹ ಬಾಹ್ಯಾಕಾಶದಿಂದ ನೆಲಕ್ಕೆ ಯುದ್ಧ .

9. ಸಾಮ್ರಾಜ್ಯಶಾಹಿತ್ವ ಅರ್ಥ:
👉ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸೈನಿಕವಾಗಿ ಪ್ರಬಲವಾದ ರಾಷ್ಟ್ರಗಳು ದುರ್ಬಲ ವಾದ ರಾಷ್ಟ್ರಗಳನ್ನು ಗೆದ್ದು ಅಲ್ಲಿ ತಮ್ಮ ರಾಜಕೀಯ ಹಾಗೂ ಆರ್ಥಿಕ ಪರಮಾಧಿಕಾರ ಸ್ಥಾಪಿಸುವದು.

10. ವಸಹಾತುಶಾಹಿತ್ವ ಅರ್ಥ:
👉ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಲ್ಲಿ ತನ್ನ ಅಗತ್ಯ ಬೇಡಿಕೆಗಳ ಈಡೇರಿಕೆಗೆ ಗಾಗಿ ನೆಲೆಸುವ ನಾಡುಗಳನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲೆ ನಿಲ್ಲುವಿಕೆಯನ್ನು ವಸಹಾತುಶಾಹಿತ್ವ ಎನ್ನುವರು.

11. ಜೆಸೂಟ್ : ಇಗ್ನೇಶಿಯಸ್ ಲಯೊಲ ಎಂಬಾತನು ಸಾ.ಶ 1534ರಲ್ಲಿ ಪ್ಯಾರಿಸ್‌ನಲ್ಲಿ ‘ಜೀಸಸ್ ಸಂಘ’ವನ್ನು ಕಟ್ಟಿದನು. ಇದು ಪುರುಷ ಕ್ಯಾಥೋಲಿಕ್ ಪಂಥಿಯ ಧರ್ಮಾಸಕ್ತರ ಸಭೆಯಾಗಿತ್ತು. ಈ ಜೀಸಸ್ ಸಂಘದ ಸದಸ್ಯರೇ ಜೆಸೂಟ್‌ಗಳು.
12. ಮಿಷನರಿ : ವಿದೇಶಗಳಲ್ಲಿ ಕ್ರೈಸ್ತ್ ಧರ್ಮದ ಪ್ರಚಾರಕ್ಕಾಗಿ ಕಳುಹಿಸಲ್ಪಡುವ ಧರ್ಮ ಪ್ರಚಾರಕರು.
13. ಭಾರತೀಯಶಾಸ್ತ್ರ : ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತ  ಅಧ್ಯಯನ ನಡೆಸುವ ಶಾಸ್ತç.
14. ಪೌರಾತ್ಯವಾದಿ : ಪೂರ್ವ ದೇಶಗಳ ಇತಿಹಾಸ, ಸಂಸ್ಕೃತಿ, ಆಧ್ಯಾತ್ಮ ಮುಂತಾದವುಗಳ ಬಗೆಗೆ ಒಲವುಳ್ಳ ಯುರೋಪಿನ ವಿದ್ವಾಂಸರು.
15. ನಾಗರಿಕತೆ - ನಗರ ಜೀವನ, ವಾಣಿಜ್ಯದ ಬೆಳವಣಿಗೆ, ಬರವಣಿಗೆಯ ಕಲೆ, ಲೋಹಗಳ ಬಳಕೆ ಇವೆಲ್ಲವೂ ನಾಗರಿಕತೆಯನ್ನು ಸೂಚಿಸುತ್ತದೆ.
16. ನೆಲೆಗಳು - ಪ್ರಾಚೀನ ಕಾಲದ ವಾಸಸ್ಥಳಗಳು,
17. ಡುಬ್ಬ- ಗೂಳಿ ಮೊದಲಾದವುಗಳ ಹಿಣಿಲು.
Share:

SSLC HISTORY - MCQ PDF BOOK

 PDF BOOK ನೋಡಲು ಮತ್ತು DOWN LOAD ಕ್ಲಿಕ್ ಮಾಡಿ

HISTORY PDF BOOK

Share:

ಇತಿಹಾಸ ಅಧ್ಯಾಯ - 1 ರಿಂದ 3 : "ಸವಿ ಸಮಯ 50 ನಿಮಿಷ"

ಈ Online ಪರೀಕ್ಷೆಯ ಉದ್ದೇಶಗಳು: 1. SSLC ವಾರ್ಷಿಕ ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯ ಮಹತ್ವ ತಿಳಿಸುವದು. 2. ಸಮಾಜ ವಿಜ್ಞಾನ ವಿಷಯ ಪ್ರಬುತ್ವ ಹೆಚ್ಚಿಸುವದು. 3. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವದು. 4. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವದು 5. ನಿಗಧಿತ ಸಮಯದಲ್ಲಿಯೇ ಉತ್ತರಿಸುವ ಕೌಶ್ಯ ಬೆಳೆಸುವದು.

TEST ಆರಂಭಿಸಲು ಕೆಳಗಿನ  ಕೆಳಗೆ ಕ್ಲಿಕ್‌ ಮಾಡಿ
 



Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com