"ನಾನು...ನನ್ನ ಕನಸು" ಒಂದು ಸಿನೆಮಾದ ಹೆಸರಿನಂತಿದೆಯಲ್ಲ ಅಂತ ಅನಿಸುತ್ತಿದೆಯಲ್ಲ..! ನಿಜ ಇದೇ ಸಾಲು ವಿದ್ಯಾರ್ಥಿಗಳಿಗೆ, ಪರೀಕ್ಷೆ ಎದುರಿಸುವ ಆತ್ಮ ಸ್ಥೈರ್ಯ ತುಂಬಿತು. ನಾವು ಒಮ್ಮೊಮ್ಮೆ ಕೆಲವು ವಿದ್ಯಾರ್ಥಿಗಳ ಬಗ್ಗೆ ಪೂರ್ವ ನಿರ್ಧರಿತವಾಗಿರುತ್ತೇವೆ ಅವನಿಂದ ಸಾಧ್ಯವಿಲ್ಲ, ಎಷ್ಟು ಹೇಳಿದರೂ ಅವನು ಬದಲಾಗುವುದಿಲ್ಲ, ಓದಿನ ಕಡೆಗೆ ಆಸಕ್ತಿ ಇಲ್ಲ, ದಡ್ಡ ಹೀಗೆ ಸಾಗುತ್ತೆ ನಕಾರಾತ್ಮಕ ಪಟ್ಟಿ. ನಿಜವಾಗಿಯೂ ನಾವು ಮಾಡುವ ದೊಡ್ಡ ತಪ್ಪು ಇದು. ಅವರು ಆ ರೀತಿಯ ವರ್ತನೆಗೆ ಕೆಲವು ಸಲ ನಾವೇ ಕಾರವಾಗಬಹುದು.
ನಮ್ಮ ಶಾಲೆಯಲ್ಲಿ ಒಂದು ಪರೀಕ್ಷಾ ಭಯ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಪ್ರವೀಣ ದೇಶಪಾಂಡೆ ಅನ್ನುವವರು ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ಅವರ ಆರಂಭಿಕ ಸಾಲೇ..."ನಾನು ನನ್ನ ಕನಸು" ವಿದ್ಯಾರ್ಥಿಗಳಲ್ಲಿ ಕನಸನ್ನು ಬಿತ್ತುವ ಪ್ರಯತ್ನ ಸಾಗಿತು , ಪ್ರತಿ ವಿದ್ಯಾರ್ಥಿಗಳು ತಮ್ಮ ಕನಸು ಕಟ್ಟಿಕೊಳ್ಳಲು, ಅವರು ವ್ಯಕ್ತಪಡಿಸಲು ಸತತ ನಿರಂತರವಾಗಿ ಮೂರು ಘಂಟೆಗಳು ಬೇಕಾಯಿತು..! ವಿದ್ಯಾರ್ಥಿಗಳ ಮೊಗದಲ್ಲಿ ವಿರಾಮ, ಹಸಿವಿನ ಭಾವ ಇಲ್ಲದೆ, ಆಸಕ್ತಿಯ ನಗುಮೊಗದ ಭಾವದೊಂದಿಗೆ..! ಹಾಗಾದರೆ ಆ ಗುರು ನಮ್ಮ ವಿದ್ಯಾರ್ಥಿಗಳನ್ನು ಯಾವ ವಿಧಾನದಿಂದ ಅವರ ಆಸಕ್ತಿಯನ್ನು ತನ್ನ ಕಡೆಗೆ ಹಿಡಿದಿಟ್ಟುಕೊಂಡಿರಬೇಕು ನೀವೇ ಊಹಿಸಿ. ನಮಗೂ ಆಶ್ಚರ್ಯವಾಯಿತು ಎಂದೂ ಉತ್ತರಿಸದ, ಮುಂದೆ ಬರದ ಮಾತನಾಡದ ವಿದ್ಯಾರ್ಥಿಗಳು ಮುಂದೆ ಬಂದು ನಾವು ಖಂಡಿತ ನಮ್ಮ ಕನಸು, ನಿಮ್ಮ ಕನಸು, ನಮ್ಮ ತಂದೆ ತಾಯಿಯ ಕನಸು ನನಸಾಗಿಸಲು ಇವತ್ತಿನಿಂದಲೇ ಕಾರ್ಯಪ್ರವೃತ್ತವಾಗುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿದರು...! ನಿಜಕ್ಕೂ ಇದಕ್ಕಿಂತ ಹೆಚ್ಚಿಗೇನು ಬೇಕು ಗುರುವಿಗೆ...? ಹಾಗದರೆ ಆ ಗುರು ಮಾಡಿದ್ದಾದರೂ ಏನು..? ಸರಳ ..! ದೊಡ್ಡ ದೊಡ್ಡದಾದ ಸಿದ್ದಾಂತಗಳನ್ನು, ತತ್ವಗಳನ್ನು , ಆದರ್ಶಗಳನ್ನು , ಕಥೆಗಳನ್ನು ಹೇಳಲಿಲ್ಲ. ಬದಲಾಗಿ ಪ್ರತಿ ವಿದ್ಯಾರ್ಥಿ ಯ ಮನಸ್ಸು ಅರ್ಥೈಸಿಕೊಳ್ಳು ಕೆಲ ಹೊತ್ತು ಕೆಲ ತಮ್ಮ ಸುತ್ತಲಿನ ಪ್ರಶ್ನೆಗಳನ್ನು ಕೇಳಿದರು...ಪ್ರಶ್ನೆಗಳಿಗೆ ಬರುವ ಉತ್ತರಗಳನ್ನು ಕೇಳಿ ಸರಿ ಇರುವದನ್ನು ಹೊಗಳುತ್ತಾ ತಪ್ಪು ಇರುವದನ್ನು ಸರಿಪಡಿಸುತ್ತಾ ಸಾಗಿದರು... ಅಲ್ಲಿಗೆ ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಅವರ ಕೌಟುಂಬಿಕ, ತಂದೆ ತಾಯಿ ಕನಸು, ತಮ್ಮ ಮಕ್ಕಳ ಬಗೆಗಿನ ಪಾಲಕರ ಕನಸು, ಅದರ ನನಸಿಗಾಗಿ ಪಡುತ್ತಿರುವ ಕಷ್ಟಗಳನ್ನು ಏಳೆ ಏಳೆಯಾಗಿ ಇಡುತ್ತಾ ಹೋದರು.. ಮಕ್ಕಳ ಮನಸ್ಸನ್ನು ಹಿಡಿತಕ್ಕೆ ತರಲು ಅನೇಕ ವಿಡಿಯೋಗಳನ್ನು , ಚಿತ್ರಗಳನ್ನು ತೋರಿಸಿದರು, ಮಕ್ಕಳು ಎಲ್ಲಿ ಎಡವುತ್ತಿದ್ದಾರೆ ಎನ್ನುವದನ್ನು ತಿಳಿಸಿದರು... ಕನಸಿನ ಮಹತ್ವ ತಿಳಿಸಿದರು. ಕನಸು ಗುರಿಯಾಗಬೇಕು ಗುರಿ ಈಡೇರಿಕೆಗಾಗಿ 100% ಪ್ರಯತ್ನ ಬೇಕು ಎಂಬುವದನ್ನು ತಿಳಿಸಿದರು. ಈ ಪ್ರಯತ್ನದಲ್ಲಿ ಗುರುವಿನ ಮಾರ್ಗದರ್ಶನ ಬಹಳ ಮುಖ್ಯ ಎಂದು ಸಾರಿದರು. ಯಶಸ್ಸು ಒಂದು ಎರಡು ದಿನದಲ್ಲಿ ಸಿಗುವದಲ್ಲ, ನಿರಂತರ ಪ್ರಯತ್ನ ದಿಂದ ಮಾತ್ರ ಸಾಧ್ಯ. ಕೆಲವರಿಗೆ ದೇವರು ಹುಟ್ಟುತ್ತಲೇ ಕೆಲವು ವಿಶೇಷ ಶಕ್ತಿಯನ್ನು, ಕ್ರಿಯಾಶೀಲತೆಯನ್ನು ನೀಡಿರುತ್ತಾನೆ, ಅವುಗಳನ್ನು ನಿಮ್ಮ ಆಸಕ್ತಿಯನ್ನು ಹೊರಹಾಕಿ ಯಶಸ್ವಿಗೆ ಭದ್ರಬುನಾಧಿ ಹಾಕಿಕೊಳ್ಳಿ, ಆದರ್ಶ ವ್ಯಕ್ತಿಯಾಗಿ ನಾವು ಅನೇಕರ ಹೆಸರು ಹೇಳುತ್ತೇವೆ ಆದರೆ ಅವರ ಆದರ್ಶಗಳು, ಸಾಧನೆಗಳು ನಮಗೆ ಗೊತ್ತೆಯಿಲ್ಲ ..ಬದಲಿಗೆ ನಿಮ್ಮನ್ನು ನೀವು ಆದರ್ಶವಾಗಿಸಿ, ನಿಮ್ಮ ಗುರುಗಳನ್ನು ಆದರ್ಶವಾಗಿಸಿಕೊಳ್ಳಿ .. ಎನ್ನುವ ಭಾವನಾತ್ಮಕ ಅಂಶಗಳಿಂದ ಇನ್ನಷ್ಟು ಅವರನ್ನು ಪ್ರೇರಿತಗೊಳಿಸಿರು.
ಓದುವ ಸಮಯ, ಓದುವ ರೀತಿ, ಯಾವುದನ್ನು ಹೇಗೆ ? ಓದಬೇಕು ಎಂಬುದನ್ನು ತಿಳಿಸುವದರ ಮೂಲಕ ಅವರಿಂದ ಪರೀಕ್ಷಾ ಭಯವನ್ನು ಹೋಗಲಾಡಿಸಿದರು. SSLCಯಲ್ಲಿ ಶೇಖಡಾ 30, 60,70, 80. ಇದ್ದ ಗುರಿ 100% ಬಂದಾಗ ಈ ಕಾರ್ಯಕ್ರಮದ ಉದ್ದೇಶ ಈಡೇರಿತ್ತು. ಇದೇ ಬೇಕಾಗಿತ್ತು ನಮಗೆ ಉನ್ನತ ಮಟ್ಟದ ಗುರಿ ಒಂದು ಸಣ್ಣ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.
ಗುರುವಾಗಿ ನಾವು ಮಕ್ಕಳ ಮನಸ್ಸನ್ನು ಮೊದಲು ಅರ್ಥೈಸಿಕೊಂಡಾಗ ಖಂಡಿತ ಆ ಮಗುವಿನಲ್ಲಿ ಕನಸು ಬಿತ್ತಲು ಸಾಧ್ಯವಾಗುತ್ತದೆ. ಇದು ನಾನು ಬರೆಯುತ್ತಿರು ಮೊದಲ article ಇದಕ್ಕೆ ಪ್ರೇರಣೆಯಾದ ಪ್ರವೀಣ ದೇಶಪಾಂಡೆಯವರಿಗೆ ಧನ್ಯವಾದಗಳು.
ಶ್ರೀ ರವೀಂದ್ರ ಜಿ ಆಹೇರಿ
ಕಲಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ಕೋಣನಕೇರಿ.
9739138998
nice article sir
ReplyDelete