For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಮೆಗಾಸ್ತನೀಸ್ ಇಂಡಿಕಾ




ಗ್ರಂಥದ ಹೆಸರು: ಇಂಡಿಕಾ

ಲೇಖಕ/ ಸಂಗ್ರಹಕಾರ:ಮೆಗಾಸ್ತನೀಸ್

ಮೂಲ ಭಾಷೆ : ಗ್ರೀಕ್


ಇಂಗ್ಲಿಷ್, ಲಾಟಿನ್ ಮತ್ತು ಹಿಂದಿ ಭಾಷೆಗಳಲ್ಲಿ ಅನುವಾದಗಳು ಲಭ್ಯವಿವೆ.


ಗ್ರಂಥದ ಮುಖ್ಯವಸ್ತು: ಭಾರತದಲ್ಲಿ ಮೌರ್ಯರ ಕಾಲದ ಪರಿಚಯ


ರೋಮನ್ ಕಾಲದ ಚರಿತ್ರಕಾರನೂ, ವಾಗ್ಮಿ ಮತ್ತು ದಾರ್ಶನಿಕನೂ ಆದ ಮೆಗಾಸ್ತನೀಸ್ ಎಂಬ ಗ್ರೀಕ್ ಚರಿತ್ರಕಾರನು, ಭಾರತದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಲ್ಲಿನ ಸ್ಥಿತಿಯ ಪರಿಚಯವೇ ‘ಇಂಡಿಕಾ’ ಎನ್ನುವ ಗ್ರಂಥ. ಮೂಲದಲ್ಲಿ ಗ್ರೀಕ್ ಭಾಷೆಯಲ್ಲಿರುವ ಈ ‘ಇಂಡಿಕಾ’ ಗ್ರಂಥವು, ಪಾಶ್ಚಾತ್ಯರು ಭಾರತವನ್ನು ಕುರಿತು ಬರೆದ ಮೊಟ್ಟಮೊದಲಿನ ಕೃತಿಗಳಲ್ಲೊಂದು.


ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಚರಿತ್ರೆಯ ಅಧ್ಯಯನದ ಹರಿಕಾರನೆಂದೇ ಕರೆಯಲ್ಪಡುವ ‘ ಮೆಗಾಸ್ತನೀಸ್ ‘ನು, ಭಾರತದ ಚರಿತ್ರೆಯಲ್ಲಿ ಉಲ್ಲೇಖಗೊಂಡಿರುವ ಮೊಟ್ಟ ಮೊದಲನೆಯ ವಿದೇಶೀ ರಾಯಭಾರಿ. ‘ಇಂಡಿಕಾ’ ದ ಮೂಲ ಗ್ರಂಥ ಲುಪ್ತವಾಗಿ ಹೋಗಿದ್ದರೂ, ಅದರ ತುಣುಕುಗಳು, ಮುಖ್ಯವಾಗಿ ಕೆಲ ಉಲ್ಲೇಖಗಳು ಮಾತ್ರ ಮುಂದಿನ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲಿ ಲಭ್ಯವಿದೆ.


ಜೆ. ಡಬ್ಲೂ. ಮ್ಯಾಕ್ ಕ್ರಿಂಡಲ್ ಎಂಬ ಮಹಾಶಯನಿಂದ ಪುನರಚಿಸಲ್ಪಟ್ಟ ಮೆಗಾಸ್ತನೀಸನ ‘ಇಂಡಿಕಾ’ ಗ್ರಂಥವು, ಭಾರತದ ಅಂದಿನ ಭೂಗೋಳ, ಚರಿತ್ರೆ, ಗಿಡ ಮರಗಳು, ಪ್ರಾಣಿ ಪಕ್ಷಿಗಳು, ಆರ್ಥಿಕ ವ್ಯವಸ್ಥೆ, ಸಾಮಾಜಿಕ ಸ್ಥಿತಿಗತಿಗಳು ಮತ್ತು ಇಲ್ಲಿನ ಆಡಳಿತವನ್ನು ವಿವರಿಸುತ್ತದೆ.


ಭಾರತದ ಭೂ ಮೇಲ್ಮೈಯನ್ನು ವಿವರಿಸುವಾಗ ‘ಇಂಡಿಕಾ’ ಕೇವಲ ಭಾರತದ ನದಿಗಳು ಮತ್ತು ಉಪನದಿಗಳನ್ನು ಉಲ್ಲೇಖಮಾಡುತ್ತದೆ. ಗಿಡಮರ ಮತ್ತು ಪ್ರಾಣಿಗಳ ವಿವರಗಳಲ್ಲಿ, ಫಲ ವೃಕ್ಷಗಳು ಮತ್ತು ಹಲವಾರು ಪ್ರಾಣಿಗಳ ವಿವರಗಳಿವೆ. ಇಲ್ಲಿ ಸಿಗುವ ಆರೋಗ್ಯಕರವಾದ ಆಹಾರದ ಕಾರಣವಾಗಿ ಇಲ್ಲಿನ ಗಜ ಸಮೂಹ ಲಿಬಿಯಾದ ಗಜಗಳಿಗಿಂತ ಹೆಚ್ಚು ಶಕ್ತಿಶಾಲಿ ಎಂದು ವಿವರಿಸಲ್ಪಟ್ಟಿದೆ.


ಆರ್ಥಿಕ ವಿವರಗಳ ಪುಟಗಳಲ್ಲಿ, ಭಾರತದ ಭೂಮಿಯಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರವು ಹೇರಳವಾಗಿ ಲಭ್ಯವಿದೆ ಎಂದು ಹೇಳಲಾಗಿದೆ. ವಿಶಾಲವಾದ ಮತ್ತು ಫಲವತ್ತಾದ ಪ್ರಸ್ತಭೂಮಿಯಿರುವುದರಿಂದ, ವ್ಯಾಪಕವಾಗಿ, ನೀರಾವರಿ ಮತ್ತು ಬೇಸಾಯವನ್ನು ಕಾಣಬಹುದೆಂದು ಉಲ್ಲೇಖಗೊಂಡಿದೆ.


ವೈವಿಧ್ಯಮಯ ಮತ್ತು ಭಿನ್ನ ಭಿನ್ನ ಜನಾಂಗಗಳಿಂದ ನೆಲೆಸಲ್ಪಟ್ಟಿರುವ ‘ಭಾರತ’ ಬಹಳ ವಿಶಾಲದೇಶವೆಂದಿದ್ದಾನೆ ಮೆಗಾಸ್ತನೀಸ. ಇಡೀ ಜನಸಂಖ್ಯೆಯನ್ನು ಏಳು ಸಗೋತ್ರೀಯ ಮತ್ತು ಅನುವಂಶೀಯ ವಿಭಾಗಗಳಾಗಿಸಿ, ಅವರನ್ನು ತತ್ವಶಾಸ್ತ್ರಿಗಳು, ಬೇಸಾಯಗಾರರು, ದನಗಾಹಿಗಳು, ಕಲಾವಿದರು, ಮೇಲ್ವಿಚಾರಕರು, ಯೋಧರು ಮತ್ತು ಪುರಪ್ರಮುಖರೆಂದು ವಿಭಾಗಿಸಲಾಗಿದೆ ಎಂದಿದ್ದಾನೆ. ವಿದೇಶೀಯರನ್ನು ಬಹಳ ಉತ್ತಮವಾಗಿ ನಡೆಸಿಕೊಳ್ಳುತ್ತಾರೆ ಎಂದು ಪ್ರಶಂಸಿದ್ದಾನೆ, ಈ ಗ್ರಂಥದ ಕರ್ತೃ, ಮೆಗಾಸ್ತನೀಸ.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com