For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ರಾಮನಗರ ಜಿಲ್ಲೆಯ ವಿಶೇಷತೆಗಳು


ರಾಮನಗರ ಜಿಲ್ಲೆಯ ವಿಶೇಷತೆಗಳು


1) ಕರ್ನಾಟಕದ ರೇಷ್ಮೆನಗರಿ ಎಂದು ಕರೆಯಲ್ಪಡುವ ಜಿಲ್ಲೆ ನಮ್ಮ ರಾಮನಗರ.


2) ಕರ್ನಾಟಕದ 2ನೇ ಮುಖ್ಯಮಂತ್ರಿ ಹಾಗೂ ವಿಧಾನಸೌದದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ತವರು ರಾಮನಗರ.


3) ರಾಮನಗರ ಜಿಲ್ಲೆಯ ಮಾಗಡಿಯ ನಾಡಪ್ರಭು ಕೆಂಪೇಗೌಡರು ವಿಶ್ವವಿಖ್ಯಾತ ಬೆಂಗಳೂರಿನ ಸ್ಥಾಪಕರು.


4) ಬೊಂಬೆಗಳ ನಗರಿ ಚನ್ನಪಟ್ಟಣದ ಬೊಂಬೆಗಳು ವಿಶ್ವಪ್ರಸಿದ್ಧವಾಗಿವೆ.


5) ಅಮೇರಿಕಾದ ಶ್ವೇತಭವನವನ್ನು ಚನ್ನಪಟ್ಟಣದ ಬೊಂಬೆಗಳು ಅಲಂಕರಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.


6) ಗಂಗ ವಂಶದ ರಾಜರ 4 ಪ್ರಮುಖವಾದ ರಾಜಧಾನಿಗಳಲ್ಲಿ ಚನ್ನಪಟ್ಟಣ ತಾಲ್ಲೂಕಿನ ಮಾಕುಂದ ಎಂಬ ಊರು ಕೂಡ ಒಂದು.


7) ಭಾರತೀಯ ಚಿತ್ರರಂಗದ ಮೈಲುಗಲ್ಲೆನಿಸಿದ ಹಿಂದಿಯ ಖ್ಯಾತ ಶೋಲೆ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕರಣಗೊಂಡು ಲೋಕವಿಖ್ಯಾತವಾಯಿತು.


8) ರಾಮನಗರವು ಜಾನಪದ ಕಲೆಗಳಿಗೆ ಹೆಸರುವಾಸಿಯಾದ ಜಿಲ್ಲೆ.ಚನ್ನಪಟ್ಟಣ ತಾಲ್ಲೂಕಿನ ಸಮೀಪ ಪ್ರಸಿದ್ಧವಾದ ಜಾನಪದ ಲೋಕವಿದೆ.


9) ಜಾನಪದ ಗಾಯನದಲ್ಲಿ ರಾಮನಗರದ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದರು.


10) ಕಾವೇರಿ ಮತ್ತು ಅರ್ಕಾವತಿ ನದಿಗಳ ಪವಿತ್ರ ಸಂಗಮವಾಗುವ ಸ್ಥಳ ಕನಕಪುರದ ಸಂಗಮ ಎಂಬ ಊರಿನಲ್ಲಿದೆ.


11) ದಕ್ಷಿಣ ಭಾರತದ ಪ್ರಖ್ಯಾತ ನಟಿಯಾದ ಪದ್ಮಭೂಷಣ ಡಾ!!.ಬಿ.ಸರೋಜಾದೇವಿಯವರು ಚನ್ನಪಟ್ಟಣದ ದಶವಾರ ಎಂಬ ಗ್ರಾಮದವರು.


12) ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ನಾಡೋಜ ದೇ.ಜವರೇಗೌಡರ ಜನ್ಮಸ್ಥಳ ಚನ್ನಪಟ್ಟಣದ ಬಳಿಯ ಚಕ್ಕೆರೆ ಎಂಬ ಊರು.


13) ವಿಶ್ವದಲ್ಲೇ ಇತಿಹಾಸ ಪ್ರಸಿದ್ಧ ಸುಗ್ರೀವನ ದೇವಾಲಯ ಹೊಂದಿರುವ ಸ್ಥಳ‌ ಚನ್ನಪಟ್ಟಣ.


14) ಗಿಡಮರಗಳನ್ನೇ ತನ್ನ ಮಕ್ಕಳೆಂದು ಭಾವಿಸಿ, ಅವುಗಳನ್ನು ಸಂರಕ್ಷಿಸಿ ಬೆಳೆಸಿ ದೇಶಕ್ಕೇ ಆದರ್ಶ ಮಹಿಳೆಯಾದ ಸಾಲುಮರದ ತಿಮ್ಮಕ್ಕ ನವರ ಊರು ಮಾಗಡಿ.


15) ವಿಷ್ಣುಸಹಸ್ರ ನಾಮದಲ್ಲಿ ಉಲ್ಲೇಖವಾಗಿರುವ ಅಪ್ರಮೇಯ ಎಂಬ ನಾಮದ ವಿಶ್ವದಲ್ಲೇ ಏಕೈಕ ದೇವಾಲಯವಿರುವುದು ಚನ್ನಪಟ್ಟಣದ ಸಮೀಪದ ದೊಡ್ಡ ಮಳೂರು ಎಂಬ ಗ್ರಾಮದಲ್ಲಿ ಮಾತ್ರ.


16) ಕರ್ನಾಟಕ ರತ್ನ, ಪದ್ಮಭೂಷಣ ಸಿದ್ಧಗಂಗಾ ಶ್ರೀಗಳಾದ ಡಾ!!.ಶಿವಕುಮಾರ ಮಹಾಸ್ವಾಮಿಗಳ ಜನ್ಮಸ್ಥಳ ಮಾಗಡಿಯ ಸಮೀಪದ ವೀರಾಪುರ ಗ್ರಾಮ


17) ಪದ್ಮಭೂಷಣ ಬಾಲಗಂಗಾಧರನಾಥ ಸ್ವಾಮಿಗಳ ಜನ್ಮಸ್ಥಳ ಬಿಡದಿ ಸಮೀಪದ ಬಾನಂದೂರು.


18) ಭಾರತ ದೇಶದಲ್ಲಿ ಉದ್ದ ಕೊಕ್ಕಿನ ಹದ್ದುಗಳು ಅತಿ ಹೆಚ್ಚು ಕಂಡುಬರುವುದು ರಾಮನಗರದ ರಾಮದೇವರ ಬೆಟ್ಟದಲ್ಲಿ ಮಾತ್ರ.


19) ದಕ್ಷಿಣ ಭಾರತದಲ್ಲಿ ಅತಿದೊಡ್ಡ ಏಕಶಿಲಾ ಬೆಟ್ಟ ಇರುವುದು ರಾಮನಗರದಲ್ಲಿ.


20) ಮಾಧ್ವ ಪರಂಪರೆಯಲ್ಲಿ ಬಂದ ಯತಿಗಳಾದ ಬ್ರಹ್ಮಣ್ಯತೀರ್ಥರ ಬೃಂದಾವನ ಚನ್ನಪಟ್ಟಣದ ಅಬ್ಬೂರು ಗ್ರಾಮದಲ್ಲಿ ಇದೆ.


21) ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ವ್ಯಾಸರಾಯರು ಚನ್ನಪಟ್ಟಣದ ದೇವರಹೊಸಹಳ್ಳಿಯಲ್ಲಿ ಮುಖ್ಯಪ್ರಾಣ ಹನುಮಂತನ ವಿಗ್ರಹ ಸ್ಥಾಪಿಸಿದ್ದಾರೆ.


22) ಪುರಂದರದಾಸರು ಚನ್ನಪಟ್ಟಣದ ಅಪ್ರಮೇಯ ದೇವಾಲಯದಲ್ಲಿನ ಅಂಬೆಗಾಲು ಕೃಷ್ಣನ ಮೂರ್ತಿಯನ್ನು ನೋಡಿ ಪ್ರಸಿದ್ಧ ಕೀರ್ತನೆಯಾದ 'ಆಡಿಸಿದಳು ಯಶೋಧೆ ಸುಗುಣಾಂತರಂಗನ ಅಪ್ರಮೇಯನ` ಎಂಬ ಗೀತೆ ರಚಿಸಿದ್ದಾರೆ.


23) ಪ್ರತಿಷ್ಠಿತ ಪೋಲೀಸ್ ತರಬೇತಿ ಶಾಲೆ( PTS ) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿದೆ.


25) 1999ನೇ ಇಸವಿಯಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ S.L.ಭೈರಪ್ಪನವರು ಅಧ್ಯಕ್ಷರಾಗಿದ್ದರು.


24) ಭಾರತ ದೇಶದಲ್ಲಿ ಕಪ್ಪುಬಣ್ಣದ ಗ್ರಾನೈಟ್ ಶಿಲೆಗೆ ಕನಕಪುರ ಪ್ರಸಿದ್ಧಿಪಡೆದಿದೆ.


26) ಪ್ರಾಚೀನ ಕಾಲದಲ್ಲಿ ಚನ್ನಪಟ್ಟಣ ವೀಣೆ ತಂತಿಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿದ್ದುದಕ್ಕೆ ಐತಿಹಾಸಿಕ ದಾಖಲೆಗಳು ದೊರೆಯುತ್ತವೆ.


27) ಚನ್ನಪಟ್ಟಣವನ್ನು ಮೊದಲು ತಿಮ್ಮಪ್ಪ ರಾಜ ಅರಸು ಎಂಬ ಸಾಮಂತ ಆಳುತ್ತಿದ್ದರು.


28) ಚನ್ನಪಟ್ಟಣದ ಅಬ್ಬೂರ ಸಮೀಪ ಪುರಾಣ ಪ್ರಸಿದ್ಧ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಈ ಭಾಗದಲ್ಲಿ ಹರಿಯುವ ನದಿಗೆ ಕಣ್ವನದಿ ಎಂದು ಹೆಸರು ಬಂದಿದೆ.


29) ರೇವಣಸಿದ್ದೇಶ್ವರ ಸ್ವಾಮಿಗಳ ಪುಣ್ಯಕ್ಷೇತ್ರ ರಾಮನಗರ ಸಮೀಪದ‌ ಅವ್ವೇರಹಳ್ಳಿಯ ಬೆಟ್ಟದಲ್ಲಿದೆ.


30) ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಾಮಾನುಜಾಚಾರ್ಯರು ಕೆಲವು ದಿನಗಳು ಚನ್ನಪಟ್ಟಣದ ವರದರಾಜಸ್ವಾಮಿ ದೇವಾಲಯದಲ್ಲಿ ನೆಲೆಸಿ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾಗಿ ಉಲ್ಲೇಖವಿದೆ.


31) ಚನ್ನಪಟ್ಟಣದ ಪ್ರಾಚೀನ ಹೆಸರು '‌ ಚಂದದ ಪಟ್ಟಣ' ಎಂಬುದಾಗಿ ಇತ್ತು.


32) ರಾಮನಗರದ‌ ಪ್ರಾಚೀನ ಹೆಸರು ' ‌ಕ್ಲೋಸ್ ಪೇಟೆ '.


33) ಕನಕಪುರದ ಮೊದಲ ಹೆಸರು 'ಕಾನಕಾನ ಹಳ್ಳಿ' ಎಂದು ಕರೆಯಲಾಗುತ್ತಿತ್ತು.


34) ಕರ್ನಾಟಕ ರಾಜ್ಯದ ಏಕೈಕ ಕಾರು ತಯಾರಿಕಾ ಕಂಪನಿ "ಟೊಯೋಟಾ ಕಿರ್ಲೋಸ್ಕರ್ ಮೋಟಾರ್" ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ.


35) ಮಾಗಡಿಯ ಸಾವನದುರ್ಗ ಬೆಟ್ಟ ಇತಿಹಾಸ ಪ್ರಸಿದ್ಧ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com