ಇತಿಹಾಸ
ಅಧ್ಯಾಯ-1, ಭಾರತಕ್ಕೆ ಯೂರೋಪಿಯನ್ನರ ಆಗಮನ:
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 1453ರಲ್ಲಿ ಆಟೋಮನ್ ಟರ್ಕ್ರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು
2. ಭಾರತ ಹಾಗೂ ಯೂರೋಪ್ ನಡುವೆ ಹೊಸ ಜಲಮಾರ್ಗವನ್ನು ವಾಸ್ಕೋಡಗಾಮನು ಕಂಡುಹಿಡಿದನು
3. ಭಾರತದಲ್ಲಿ ಫ್ರೆಂಚರ ರಾಜಧಾನಿ ಪಾಂಡಿಚೇರಿ
4. ರಾಬರ್ಟ್ ಕ್ಲೈವ್ನು 1757ರಲ್ಲಿ ಸಿರಾಜುದ್ದೌಲನ ಮೇಲೆ ಪ್ಲಾಸೀ ಕದನ ಸಾರಿದನು
5. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು
6. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು ರಾಬರ್ಟ ಕ್ಲೈವ್
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಮಧ್ಯಕಾಲದಲ್ಲಿ ಭಾರತ ಮತ್ತು ಯೂರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?
2. ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಸಹಾಯಕವಾದ ಅಂಶಗಳನ್ನು ಚರ್ಚಿಸಿ
3. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯೂರೋಪಿಯನ್ನರನ್ನು ಪಟ್ಟಿ ಮಾಡಿ
4. ಎರಡನೇ ಕರ್ನಾಟಿಕ್ ಯುದ್ದವನ್ನು ವಿವರಿಸಿ.
5. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ ಕಾರಣಗಳು :-
6. ಬಕ್ಸಾರ್ ಕದನದ ಫಲಿತಾಂಶಗಳನ್ನು ವಿವರಿಸಿ ಮೀರ್ ಖಾಸಿಂನ ಒಕ್ಕೂಟ ಸೇನೆಗೆ ಸೋಲಾಯಿತು
7. ದ್ವಿಸರ್ಕಾರ ಪದ್ದತಿಯನ್ನು ವ್ಯಾಖ್ಯಾನಿಸಿ

- ಮಧ್ಯದಲ್ಲಿ ಭಾರತದೊಂದಿಗೆ ಯೂರೋಪಿಯನ್ನರ ವ್ಯಾಪಾರವು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ಜರುಗುತ್ತಿತ್ತು.
- ಅರಬ್ಬರು ಭಾರತದ ವ್ಯಾಪಾರೀ ಸರಕುಗಳನ್ನು ಕಾನ್ಸ್ಟಾಂಟಿನೋಪಲ್ಗೆ ತರುತ್ತಿದ್ಧರು.
- ಇಟಲಿಯ ವ್ಯಾಪಾರಿಗಳು ಈ ಸರಕುಗಳನ್ನು ಖರೀದಿಸಿ ಯೂರೋಪ್ ಖಂಡದಲ್ಲಿ ಮಾರುತ್ತಿದ್ದರು
2. ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಸಹಾಯಕವಾದ ಅಂಶಗಳನ್ನು ಚರ್ಚಿಸಿ
- ಕಾನ್ಸ್ಟಾಂಟಿನೋಪಲ್ ನಗರದ ಪತನ ಭಾರತೀಯ ಮಸಾಲೆ ಪದಾರ್ಥಗಳಿಗಿದ್ದ ಅಪಾರ ಬೇಡಿಕೆ
- ನಾವಿಕರ ದಿಕ್ಸೂಚಿ, ಸಿಡಿಮದ್ದು, ಬಂದೂಕು, ಭೂಪಟಗಳ ಅನ್ವೇಷಣೆ
- ಕ್ರೈಸ್ತ ಧರ್ಮದ ಪ್ರಸಾರ
3. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯೂರೋಪಿಯನ್ನರನ್ನು ಪಟ್ಟಿ ಮಾಡಿ
- ಪೋರ್ಚುಗೀಸರು.
- ಡಚ್ಚರು,
- ಬ್ರಿಟೀಷರು ಹಾಗೂ
- ಫ್ರಂಚರು
4. ಎರಡನೇ ಕರ್ನಾಟಿಕ್ ಯುದ್ದವನ್ನು ವಿವರಿಸಿ.
- ಫ್ರೆಂಚರ ನೆರವಿನೊಂದಿಗೆ ಹೈದರಾಬಾದಿನಲ್ಲಿ ಸಲಬತ್ಜಂಗ್ ನಿಜಾಮ ಹುದ್ದೆಗೂ ಹಾಗೂ ಕರ್ನಾಟಕ್ನಲ್ಲಿ ಚಂದಾಸಾಹೇಬ್ ನವಾಬನ ಹುದ್ದೆಗೂ ನೇಮಿಸಲ್ಪಟ್ಟರು.
- ಚಂದಾಸಾಹೇಬನು ತಿರುಚನಾಪಳ್ಳಿ ಕೋಟೆ ಮೇಲೆ ಧಾಳಿ ಮಾಡಿದಾಗ ಚಾಣಕ್ಷನಾದ ರಾಬರ್ಟ್ಕ್ಲೈವ್ನು ಆರ್ಕಾಟಿನ ಮೇಲೆ ಧಾಳಿಮಾಡಿದನು.
- ಆರ್ಕಾಟಿನಲ್ಲಿ ನಡೆದ ಯುದ್ದದಲ್ಲಿ ಚಂದಾಸಾಹೇಬನನ್ನು ಕೊಲೆಮಾಡಲಾಯಿತು.
- ಮಹಮ್ಮದ್ ಆಲಿಯು ಅರ್ಕಾಟಿನ ನವಾಬನಾಗಿ ನೇಮಿಸಲ್ಪಟ್ಟನು
5. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ ಕಾರಣಗಳು :-
- ದಸ್ತಕ್ಗಳ ದುರುಪಯೋಗ
- ನವಾಬನ ಅನುಮತಿಯಿಲ್ಲದೇ ಬ್ರಿಟೀಷರು ಪೋರ್ಟ್ ವಿಲಿಯಂ ಕೋಟೆ ಬಲಪಡಿಸಿಕೊಂಡಿದ್ದು
- ಕಪ್ಪು ಕೋಣೆ ದುರಂತ
- ಸಿರಾಜುದ್ದೌಲನ ಕೊಲೆಯಾಯಿತು
- ಮೀರ್ ಜಾಫರ್ ಬಂಗಾಳದ ನವಾಬನಾದನು
- ಬ್ರಿಟಿಷರಿಗೆ 24 ಪರಗಣ ಪ್ರದೇಶ ಬಳುವಳಿಯಾಗಿ ದೊರೆಯಿತು
6. ಬಕ್ಸಾರ್ ಕದನದ ಫಲಿತಾಂಶಗಳನ್ನು ವಿವರಿಸಿ ಮೀರ್ ಖಾಸಿಂನ ಒಕ್ಕೂಟ ಸೇನೆಗೆ ಸೋಲಾಯಿತು
- ಎರಡನೇ ಷಾ ಆಲಂ ಬ್ರಿಟೀಷರಿಗೆ ಬಂಗಾಳದ ದಿವಾನಿ ಹಕ್ಕನ್ನು ಹಸ್ತಾಂತರಿಸಿದನು
- ಬಂಗಾಳದಲ್ಲಿ ಬ್ರಿಟೀಷರು ಭದ್ರವಾಗಿ ನೆಲೆಯೂರಿದರು
- ಔದ್ನ ನವಾಬ 50 ಲಕ್ಷ ರೂ ಯುದ್ಧ ಪರಿಹಾರವಾಗಿ ಬ್ರಿಟೀಷರಿಗೆ ನೀಡಬೇಕಾಯಿತು.
7. ದ್ವಿಸರ್ಕಾರ ಪದ್ದತಿಯನ್ನು ವ್ಯಾಖ್ಯಾನಿಸಿ
- ರಾಬರ್ಟ್ಕ್ಲೆ ೈವ್ ಜಾರಿಗೆ ತಂದ ದ್ವಿ ಸರಕಾರ ಪದ್ದತಿಯು ಎರಡು ಬಗೆಯ ಅಧಿಕಾರವನ್ನು ಹೊಂದಿತ್ತು
- ದಿವಾನಿ ಹಕ್ಕು : ಇದು ಬ್ರೀಟೀಷರು ಭೂಕಂದಾಯ ಸಂಗ್ರಹಿಸುವ ಹಕ್ಕಾಗಿತ್ತು
- ನಿಜಾಮಿ ಹಕ್ಕು ; ಇದು ನವಾಬನಿಗಿದ್ದ ದೈನಂದಿನ ಆಡಳಿತ, ನ್ಯಾಯ ತಿರ್ಮಾನ ಮಾಡುವ ಹಕ್ಕಾಗಿತು

ಇನ್ನು ಸ್ವಲ್ಪ ವಿವರವಾಗಿ ನಿಡಬೇಕು
ReplyDelete