For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ
​
Showing posts with label 10thಅಭ್ಯಾಸ ಪ್ರಶ್ನೆಗಳು. Show all posts
Showing posts with label 10thಅಭ್ಯಾಸ ಪ್ರಶ್ನೆಗಳು. Show all posts

ಅಧ್ಯಾಯ -6 ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ (1857)

ಅಧ್ಯಾಯ -6 ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ (1857)
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 1857ರ ದಂಗೆಯನ್ನು ಬ್ರಿಟಿಷ ಇತಿಹಾಸಕಾರರು ಸಿಪಾಯಿದಂಗೆ ಎಂದು ಕರೆದಿದ್ದಾರೆ
2. ಡಾಲ್‍ಹೌಸಿಯು ಜಾರಿಗೆ ತಂದ ನೀತಿ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
3. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ ಅಧಿಕಾರಿಯನ್ನು ಕೊಂದವನು ಮಂಗಲ ಪಾಂಡೆ
4. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ದದ ಯುದ್ಧದಲ್ಲಿ ಗ್ವಾಲೀಯರನ್ನು ವಶಕ್ಕೆ ಪಡೆದಳು

II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದಾದ ಪರಿಣಾಮಗಳಾವುವು? ವಿಶ್ಲೇಷಿಸಿ

  • ದೇಶಿಯ ಸಂಸ್ಥಾನಗಳು ತಮ್ಮ ಅಸ್ಥಿತ್ವಗಳನ್ನು ಕಳೆದುಕೊಂಡವು
  • ಸತಾರ, ಜೈಪುರ ಹಾಗೂ ಝಾನ್ಸಿಗಳು ಬ್ರಿಟಿಷರ ವಶವಾದವು
  • ತಂಜಾವೂರು ಹಾಗೂ ಕರ್ನಾಟಿಕ್ ನವಾಬರಿಗಿದ್ದ ರಾಜಪದವಿಗಳು ರದ್ಧಾದವು
  • ಮೊಘಲ್ ಚಕ್ರವರ್ತಿಯನ್ನು ಪದಚ್ಯುತಗೊಳಿಸಿದರು
  • ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು
  • 1857ರ ದಂಗೆಗೆ ಪ್ರೇರಣೆಯನ್ನು ನೀಡಿತು


2. 1857ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ವಿವರಿಸಿ

  • ಇಂಗ್ಲೇಂಡಿನ ಕೈಗಾರಿಕಾ ಕ್ರಾಂತಿಯಿಂದ ಭಾರತದ ಕೈಗಾರಿಕೆಗಳು ನಶಿಸಿದವು
  • ಭಾರತವು ಇಂಗ್ಲೇಂಡಿಗೆ ಕಚ್ಚಾ ಸಾಮಾಗ್ರಿಗಳನ್ನು ಪೂರೈಸುವ ದೇಶವಾಯಿತು
  • ಇಂಗ್ಲೇಂಡಿನ ಸಿದ್ಧವಸ್ತುಗಳನ್ನು ಮಾರುವ ಮಾರುಕಟ್ಟೆಯಾಗಿ ಭಾರತವನ್ನು ಬಳಸಿಕೊಂಡರು
  • ಲಕ್ಷಾಂತರ ಜನರು ನಿರುದ್ಯೋಗಿಗಳಾದರು
  • ಭಾರತೀಯ ಸರಕಿನ ಮೇಲೆ ದುಬಾರಿ ಸುಂಕಗಳನ್ನು ಹೇರಲಾಯಿತು
  • ಇನಾಂ ಕಮೀಷನ್ ಮೂಲಕ ಕೊಡುಗೆ ಭೂಮಿಗಳನ್ನು ಹಿಂಪಡೆದರು
  • ಜಮಿನ್ಧಾರರು ರೈತರನ್ನು ಶೋಷಣೆ ಮಾಡಿದರು


3. 1857ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು?

  • ಸೈನಿಕರನ್ನು ಸಾಗರದಾಚೆಗಿನ ಸೇವೆಗೆ ಒತ್ತಾಯ ಪಡಿಸಲಾಯಿತು
  • ರಾಯಲ್ ಎನ್‍ಫೀಲ್ಡ್ ಬಂದೂಕಿನ ತುಪಾಕಿಗಳಿಗೆ ಹಂದಿ ಮತ್ತು ದನದ ಕೊಬ್ಬನ್ನು ಲೇಪಿಸಲಾಗಿತ್ತು


4. ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ತತ್‍ಕ್ಷಣದ ಕಾರಣಗಳಾವುವು?

  • ಬ್ರಿಟಿಷರು ಹೊಸ ಮಾದರಿಯ ರಾಯಲ್ ಎನ್‍ಫೀಲ್ಡ್ ಬಂದೂಕುಗಳನ್ನು ಪರಿಚಯಿಸಿದರು. 
  • ಈ ಬಂದೂಕಿನ ತುಪಾಕಿಗಳಿಗೆ ಹಂದಿ ಮತ್ತು ದನದ ಕೊಬ್ಬನ್ನು ಲೇಪಿಸಲಾಗಿತ್ತು, 
  • ಇದನ್ನು ಬಳಸಲು ಸೈನಿಕರಿಗೆ ಒತ್ತಾಯ ಪಡಿಸಿದ್ದರಿಂದ ದಂಗೆ ಸ್ಪೋಟಗೊಂಡಿತು.


5. 1857 ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿಮಾಡಿ

  • ಇದು ದೇಶದಾದ್ಯಂತ ವ್ಯಾಪಿಸಿರಲಿಲ್ಲ
  • ಕೆಲವರ ವೈಯುಕ್ತಿಕ ಕಾರಣಗಳ ಈಡೇರಿಕೆಗಾಗಿ ದಂಗೆ ಸಂಭವಿಸಿತು
  • ಸಂಘಟನೆಯ ಕೊರತೆಯು ಹೆಚ್ಚಾಗಿತ್ತು
  • ಭಾರತೀಯ ಸೈನಿಕರಲ್ಲಿ ಒಗ್ಗಟ್ಟಿನ ಕೊರತೆ ಇತ್ತು
  • ದಂಗೆಯು ಸೂಕ್ತ ನಿರ್ದೇಶನ ಹಾಗೂ ನಾಯಕತ್ವದ ಕೊರತೆಯನ್ನು ಹೊಂದಿತ್ತು
  • ಬ್ರಿಟಿಷರು ಆಧುನಿಕ ಶಸ್ರ್ತಾಸ್ರ್ತಗಳನ್ನು ಪರಿಣಾಮಕಾರಿಯಾಗಿ ಬಳಸಿದರು
  • ದೇಶಿಯ ರಾಜರು ಬ್ರಿಟಿಷರಿಗೆ ನಿಷ್ಟರಾಗಿ ಉಳಿದುಕೊಂಡರು
  • ಭಾರತೀಯ ಸಿಪಾಯಿಗಳು ಆಧುನಿಕ ಶಸ್ರ್ತಾಸ್ರ್ತಗಳ ಕೊರತೆ ಹೊಂದಿದ್ದರು


6. 1857 ರ ದಂಗೆಯ ಪರಿಣಾಮಗಳನ್ನು ಪಟ್ಟಿಮಾಡಿ

  • ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯು ಅಂತ್ಯಗೊಂಡಿತು
  • ಭಾರತದ ಆಳ್ವಿಕೆಯು ಬ್ರಿಟ್ಟನ್ನಿನ ರಾಣಿಯ ನಿಯಂತ್ರಣಕ್ಕೆ ಒಳಪಟ್ಟಿತು
  • ರಾಣಿಯು ಭಾರತದ ಆಡಳಿತದ ಜವಾಬ್ದಾರಿಯನ್ನು ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ವಹಿಸಿದಳು
  • 1858 ರಲ್ಲಿ  ‚ವಿರಿಯಾ ರಾಣಿಯ ಘೋಷಣೆ’ಗಳು ಜಾರಿಗೆ ಬಂದವು
  • ಮುಂದಿನ ಸ್ವಾತಂತ್ರಹೋರಾಟಕ್ಕೆ ಹೊಸ ಸ್ಪೂರ್ತಿಯನ್ನು ನೀಡಿತು
  • ಭಾರತೀಯರ ಬೆಂಬಲವಿಲ್ಲದೆ ಶಾಂತಿಯುತ ಆಳ್ವಿಕೆ ಸಾದ್ಯವಿಲ್ಲವೆಂದು ಬ್ರಿಟೀಷರು ಅರಿತರು
  • ರಾಣಿಯು ‘ದತ್ತು ಮಕ್ಕಳಿಗೆ ಉತ್ತರಾಧಿಕಾರತ್ವದ ಹಕ್ಕಿಲ್ಲ ನೀಯಮ ರದ್ದು


7. ’1858 ರ ಬ್ರಿಟನ್ನಿನ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?

  • ಈಸ್ಟ್ ಇಂಡಿಯಾ ಕಂಪನಿ ಭಾರತೀಯ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು
  • ಮುಂದುವರಿಸಲಾಯಿತು
  • ಭಾರತೀಯರಿಗೆ ಸ್ಥಿರ ಹಾಗೂ ಸುಭದ್ರ ಸರ್ಕಾರದ ಭರವಸೆಯನ್ನು ನೀಡಲಾಯಿತು
  • ಕಾನೂನಿನನ್ವಯ ಎಲ್ಲರಿಗೂ ಸಮಾನತೆ ನೀಡಲಾಯಿತು
  • ಧಾರ್ಮಿಕ ಸಾಮರಸ್ಯ ಸ್ಥಾಪಿಸುವ ಭರವಸೆ ನೀಡಲಾಯಿತು
  • ಭಾರತೀಯರ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ಭರವಸೆ ನೀಡಿದರು
  • ‘ದತ್ತು ಮಕ್ಕಳಿಗೆ ಉತ್ತರಾಧಿಕಾರತ್ವದ ಹಕ್ಕಿಲ್ಲ ನೀಯಮ ರದ್ದು



8. 1857ರ ದಂಗೆಯ ಕಾರಣಗಳನ್ನು ಪಟ್ಟಿಮಾಡಿ. ಒಂದನ್ನು ವಿವರಿಸಿ

  • ರಾಜಕೀಯ ಕಾರಣಗಳು
  • ಆರ್ಥಿಕ ಕಾರಣಗಳು
  • ಸಾಮಾಜಿಕ ಕಾರಣಗಳು
  • ಆಡಳಿತಾತ್ಮಕ ಕಾರಣಗಳು
  • ಸೈನಿಕ ಕಾರಣಗಳು
  • ತತ್‍ಕ್ಷಣದ ಕಾರಣಗಳು
Share:

ಅಧ್ಯಾಯ -5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

ಅಧ್ಯಾಯ -5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 19ನೇ ಶತಮಾನವನ್ನು ಭಾರತೀಯ ನವೋದಯ ಕಾಲವೆಂದು ಕರೆಯಲಾಗಿದೆ
2. ರಾಮ್ ಮೊಹನರಾಯರು ಸಂವಾದ ಕೌಮುದಿ ಪತ್ರಿಕೆಯನ್ನು ಪ್ರಾರಂಭಿಸಿದರು
3. ಪ್ರಾರ್ಥನಾ ಸಮಾಜದ ಸ್ಥಾಪಕರು ಡಾ.ಆತ್ಮಾರಾಂ ಪಾಂಡುರಂಗ
4. ಯುವ ಬಂಗಾಳಿ ಚಳುವಳಿಯನ್ನು ಪ್ರಾರಂಭಿಸಿದವರು ಹೆನ್ರಿ ಲೂಯಿಸ್ ವಿವಿಯನ್ ಡಿರೇಜಿಯೋ
5. ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು ಶ್ರೀ ರಾಮಕೃಷ್ಣ ಪರಮಹಂಸರು
6. ಆಂಗ್ಲೋ-ಓರಿಯಂಟಲ್ ಕಾಲೇಜನ್ನು ಆಲಿಘಡ ಎಂಬಲ್ಲಿ ಸ್ಥಾಪಿಸಲಾಗಿದೆ

II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಬ್ರಹ್ಮ ಸಮಾಜದ ಬೋಧನೆಗಳಾವುವು

  • ಏಕದೇವತಾರಧನೆಗೆ ಪ್ರೋತ್ಸಾಹ
  • ಬಾಲ್ಯ ವಿವಾಹಕ್ಕೆ ವಿರೋಧ
  • ಮಹಿಳಾ ಶಿಕಣ್ಷ ಕ್ಕೆ ಪ್ರೋತ್ಸಾಹ
  • ಸತಿ ಪದ್ಧತಿಗೆ ವಿರೋಧ


2. ದಯಾನಂದ ಸರಸ್ವತಿಯವರ ‘ವೇದಗಳಿಗೆ ಹಿಂದುರಿಗಿ’ ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ

  • ವೇದಗಳು ಸತ್ಯ ಮತ್ತು ಜ್ಞಾನದ ಪ್ರತೀಕ ಅದ್ದರಿಂದ ´ಸ್ವಾಮಿ  ದಯಾನಂದ ಸರಸ್ವತಿ ‘ವೇದಗಳಿಗೆ ಹಿಂದಿರುಗಿ’ ಎಂಬ ಘೋಷಣೆಯನ್ನು ನೀಡಿದರು


3. ಸತ್ಯ ಶೋಧಕ ಸಮಾಜವು ಪ್ರತಿಪಾದಿಸಿದ ಸುಧಾರಣೆಗಳನ್ನು ವಿವರಿಸಿ

  • ಶೂದ್ರರು ಹಾಗೂ ಮಹಿಳೆಯರಿಗೆ ಶಾಲೆಗಳ ಸ್ಥಾಪನೆ
  • ಸಮಾನತೆಯ ಹಕ್ಕಿಗಾಗಿ ಪ್ರೋತ್ಸಾಹ
  • ಜಾತಿ ಪದ್ಧತಿಯನ್ನು ವಿರೋಧಿಸುವುದು
  • ಮಾನವ ಹಕ್ಕುಗಳ ನಿರಾಕರಣೆಯನ್ನು ಖಂಡಿಸುವುದು

4. ಆಲಿಘರ್ ಚಳುವಳಿಯ ಉದ್ದೇಶಗಳನ್ನು ವಿಶ್ಲೇಷಿಸಿ

  • ಮಹಿಳಾ ಶಿಕಣ್ಷ ಕ್ಕೆ ಆದ್ಯತೆ ನೀಡುವುದು
  • ಬಹುಪತ್ನಿತ್ವಕ್ಕೆ ವಿರೋಧ
  • ಮುಸ್ಲಿಂ ಸಮಾಜದಲ್ಲಿ ಇಂಗ್ಲೀμï ಶಿಕಣ್ಷ ಕ್ಕೆ ಪ್ರೋತಾಹ್ಸಿ ಸುವುದು
  • ಪಾಶ್ಚಿಮಾತ್ಯ ವಿಜ್ಞಾನ ಹಾಗೂ ಸಂಸ್ಕøತಿಯನ್ನು ಪ್ರಸಾರ ಮಾಡುವುದು

5. ರಾಮಕೃಷ್ಣ ಮಿಷನ್ನಿನ ದೃಷ್ಟಿಕೋನವನ್ನು ವಿವರಿಸಿ

  • ರಾಮಕೃಷ್ಣ ಪರಮಹಂಸರ ಬೋಧನೆಗಳ ಪ್ರಸಾರ
  • ಭಾರತೀಯ ತತ್ವಜ್ಞಾನದ ಮಹತ್ವವನ್ನು ತಿಳಿಸುವುದು
  • ಜಾತಿರಹಿತ ಸಮಾಜದ ಸ್ಥಾಪನೆಯನ್ನು ಪ್ರೋತ್ಸಾಹಿಸುವುದು
  • ಬಡತನ  ಶೋಷಣೆ, ಅನಕ್ಷರತೆ ನಿರ್ಮೂಲನೆ ಮಾಡುವುದು


6. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಪ್ರೇರಕರಾಗಿದ್ದರು ಹೇಗೆ ಎಂಬುದನ್ನು ವಿವರಿಸಿ

  • ಇವರು ಯುವಕರಿಗೆ ‚ಏಸಿ,ಏದ್ದೇಸಿ,ಗುರಿ ಮುಟ್ಟುವ ತನಕ ನ್ಲಿದಿ ರಿ‛ ಎಂದು ಕರೆ ನೀಡಿದರು
  • ವ್ಯಕ್ತಿಯಲ್ಲಿರುವ ಸಾಮಥ್ರ್ಯದ ಪೂರ್ಣ ಬಳಕೆಯನ್ನು ಪ್ರೇರೇಪಿಸಿದರು
  • ಸಮಾಜ ಸೇವೆಯ ಮಹತ್ವವನ್ನು ತಿಳಿಸಿದರು
  • ಭಾರತದ ಸಂಸ್ಕøತಿಯ ಮಹತ್ವವನ್ನು ಚಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಸಾರಿದರು


7. ಅನಿಬೆಸೆಂಟರ ಸುಧಾರಣಾ ಕ್ರಮಗಳಾವುವು?

  • ಸಮಾನತೆ ಹಾಗೂ ಸಹೋದರತೆಯನ್ನು ವೃದ್ಧಿಸುವುದು
  • ವಿಶ್ವಭಾತೃತ್ವದ ನಿರ್ಮಾಣ
  • ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವದು
  • ಸ್ವಾತಂತ್ರ ಚಳುವಳಿಯನ್ನು ಬೆಂಬಲಿಸುವುದು

8. ನಾರಯಣ ಗುರು ಧರ್ಮಪರಿಪಾಲನ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ

  • ಹಿಂದುಳಿದ ಹಾಗೂ ಶೋಷಿತ ಸಮುದಾಯಗಳನ್ನು ಬಲಪಡಿಸುವುದು
  • ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಹಾಗೂ ಒಂದೇ ದೇವರು
  • ಶಿಕಣ್ಷ ವನ್ನು ಪ್ರೋತಾಹ್ಸಿ ಸುವುದು
  • ಹಿಂದುಳಿದ ವರ್ಗದವರಿಗಾಗಿ ದೇವಾಲಯಗಳ ನಿರ್ಮಾಣ
  • ‘ವೈಕಂ’ ಎಂಬ  ಸತ್ಯಾಗ್ರಹ ನಡೆಸುವದು


9. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿಮಾಡಿ

  • ಆರ್ಯರು ಬ್ರಾಹ್ಮಣರ ಹೆಸರಿನಲ್ಲಿನ ಜನಾಂಗೀಯ ತಾರತಮ್ಯವನ್ನು ವಿರೋಧಿಸುವುದು
  • ಸಂಸೃತ ಸಾಹಿತ್ಯ ಹಾಗೂ ಭಾಷೆಗೆ ವಿರೋಧ
  • ಜಾತಿ, ಲಿಂಗಾಧಾರಿತ ತಾರತಮ್ಯಕ್ಕೆ ವಿರೋಧ ಹಾಗೂ ಸಮಾನತೆಗೆ ಆದ್ಯತೆ ನೀಡುವುದು
  • ಜಾತಿ. ಲಿಂಗ ಹಾಗೂ ಧಾರ್ಮಿಕ ತಾರತಮ್ಯವನ್ನು ವಿರೋಧಿಸುವುದು


10. ಪ್ರಾರ್ಥನಾ ಸಮಾಜದ ಉದ್ಧೇಶಗಳೇನು?

  • ಇದು ವಿಧವಾ ವಿವಾಹವನ್ನು ಪ್ರೋತ್ಸಾಹಿಸಿತು
  • ಸ್ತ್ರೀ ಶಿಕಣ್ಷ ಕ್ಕೆ ಆದ್ಯತೆ ನೀಡಿತು
  • ಅಂತರ್ಜಾತಿಯ ವಿವಾಹವನ್ನು ಪ್ರೋತ್ಸಾಹಿಸಿತು
  • ಸಹ ಭೋಜನವನ್ನು ಪ್ರೇರೇಪಿಸಿತು


11. ಭಾರತೀಯ ನವೋದಯದ ಜನಕ ಎಂದು ಯಾರನ್ನು ಕರೆಯಲಾಗುತ್ತದೆ? ಏಕೆ?

  • ರಾಮಮೋಹನ ರಾಯರನ್ನು ಭಾರತೀಯ ನವೋದಯದ ಜನಕ ಎಂದು ಕರೆಯಲಾಗುತ್ತದೆ. 
  • ಇವರು ಭಾರತದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣಾ ಚಳುವಳಿಯನ್ನು ಆರಂಭಿಸಿದ ಮೊದಲ ವ್ಯಕ್ತಿಯಾಗಿರುವುದರಿಂದ ಹಾಗೆ ಕರೆಯಲಾಗುತ್ತದೆ.
Share:

ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟೀಷ ಆಳ್ವಿಕೆಗೆ ಪ್ರತಿರೋಧಗಳು

ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟೀಷ ಆಳ್ವಿಕೆಗೆ ಪ್ರತಿರೋಧಗಳು
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮೈಸೂರು ಯುದ್ದವು ಹೈದರಾಲಿ ಮತ್ತು ಬ್ರಿಟೀಷರ ನಡುವೆ ನಡೆಯಿತು
2. ಎರಡನೇ ಆಂಗ್ಲೋ-ಮೈಸೂರು ಯುದ್ಧವು ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು
3. ಕಿತ್ತೂರು ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದ್ದಿದಳು
4. ಕಿತ್ತೂರು ಸಂಸ್ಥಾನದ ರಾಯಣ್ಣನ ಊರು ಸಂಗೊಳ್ಳಿ
5. ಸುರಪುವು ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ
6. ಈಗಿನ ಬಾಗಲಕೋಟೆ ಜಿಲ್ಲೆಯ ಹಲಗಲಿಯ ಬೇಡರು ಬ್ರಿಟೀಷರ ವಿರುದ್ದ ದಂಗೆಯೆದ್ದಿದ್ದರು
7. ಅಮರ ಸುಳ್ಯ ಬಂಡಾಯವು ಮೂಲತ ರೈತರ ಬಂಡಾಯ

II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಹೈದರಾಲಿ ಹೇಗೆ ಅಧೀಕಾರಕ್ಕೆ ಬಂದನು?

  • ಹೈದರಾಲಿಯು ಮೈಸೂರು ಸೇನೆಗೆ ಸೇರ್ಪಡೆಗೊಂಡನು
  • ದೇವನಹಳ್ಳಿ ಕೋಟೆಯ ಧಾಳಿಯಲ್ಲಿ ಹೈದರಾಲಿಯು ವೀರಾವೇಷದಿಂದ ಹೋರಾಡಿ ಪ್ರಸಿದ್ಧಿಗೆ ಬಂದನು 
  • ಆರ್ಕಾಟಿನ ನಿಜಾಮನ ಮೇಲೆ ಯಶಸ್ವಿ ಧಾಳಿ ನಡೆಸಿದನು
  • ಸೈನಿಕರ ಮನಸನ್ನು ಗೆದ್ದು ದಳಾವಯಿಗಳನ್ನು ಬದಿಗೊತ್ತಿ ನವಾಬ ಹೈದರಾಲಿಯಾದನು
  • ಕೃಷ್ಣರಾಜ ಒಡೆಯರ ಅಸಮರ್ಥತೆಯು ಹೈದರಾಲಿ ಏಳಿಗೆಗೆ ಬರಲು ಸಹಾಯಕವಾಯಿತು

2. ಎರಡನೇ ಆಂಗ್ಲೋ-ಮೈಸೂರು ಯುದ್ಧದಿಂದ ಉಂಟಾದ ಪರಿಣಾಮಗಳೇನು?

  • ಖಾಯಿಲೆಯಿಂದಾಗಿ ಹೈದರಾಲಿಯು ಮರಣ ಹೊಂದಿದನು
  • ಯುದ್ದವನ್ನು ಮುನ್ನಡೆಸಿದ ಟಿಪ್ಪುವು ಮಂಗಳೂರು ಬಳಿ ಬ್ರಿಟೀಷರನ್ನು ಸೋಲಿಸಿದನು
  • ಬ್ರಿಟೀಷರು ಹಾಗೂ ಟಿಪ್ಪು ಮಂಗಳೂರು ಒಪ್ಪಂದಕ್ಕೆ ಸಹಿ ಹಾಕಿದರು
  • ಬ್ರಿಟೀಷರು ಟಿಪ್ಪುವಿಗೆ ಮಂಗಳೂರನ್ನು ಬಿಟ್ಟುಕೊಟ್ಟರು

3. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಾವುವು?

  • ಇದರ ಪರಿಣಾಮವಾಗಿ ತನ್ನ ಅರ್ಧರಾಜ್ಯವನ್ನು ಬ್ರಿಟಿಷರಿಗೆ ನೀಡಬೇಕಾಯಿತು
  • 3 ಕೋಟಿ ರೂಪಾಯಿಗಳನ್ನು ಯುದ್ಧ ಪರಿಹಾರವಾಗಿ ನೀಡಬೇಕಾಯಿತು
  • ಹಣ ಸಂದಾಯವಾಗುವವರೆಗು ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡಬೇಕಾಯಿತು.
  • ಯುದ್ಧಖೈದಿಗಳನ್ನು ಯಾವುದೇ ಷರತ್ತು ಇಲ್ಲದೇ ಬಿಡುಗಡೆಮಾಡಬೇಕಾಯಿತು
  • ಬ್ರಿಟೀಷರು ಶ್ರೀರಂಗಪಟ್ಟಣದಿಂದ ತಮ್ಮ ಸೈನ್ಯವನು ಹಿಂದಕ್ಕೆ ಪಡೆದರು

4. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಬ್ರಿಟೀಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು. ಸಮರ್ಥಿಸಿ

  • ಈ ಯುದ್ಧದಲ್ಲಿ ಬ್ರಿಟೀಷರು ಟಿಪ್ಪುವನ್ನು ಕೊಂದರು
  • ಸಾಮ್ರಾಜ್ಯವನ್ನು ಬ್ರಿಟೀಷರು, ಮರಾಠರು ಹಾಗೂ ನಿಜಾಮರು ಪರಸ್ಪರ ಹಂಚಿಕೊಂಡರು
  • ಸಣ್ಣ ಪ್ರಾಂತ್ಯವನ್ನು ಮೈಸೂರು ಒಡೆಯರಿಗೆ ಹಿಂದರುಗಿಸಲಾಯಿತು
  • ಬ್ರಿಟೀಷರ ಸಹಾಯಕ ಸೈನ್ಯಪದ್ಧತಿಗೆ ಮೈಸೂರು ಒಡೆಯರು ಸಹಿಹಾಕಿದರು

5. ದೋಂಡಿಯ ವಾಘನು ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿಶ್ಲೇ ಷಿಸಿ

  • ದೊಂಡಿಯ ವಾಘನು ತನ್ನದೇ ಆದ ಖಾಸಗಿ ಸೈನ್ಯವನ್ನು ಹೊಂದಿದ್ಧನು
  • ಕುಡಲೂರು ಕೋಟೆಯ ಮೇಲೆ ಧಾಳಿ ಮಾಡುವ ಪ್ರಯತ್ನ ಮಾಡಿದನು
  • ಶಿವಮೊಗ್ಗ ಹಾಗೂ ಚಿತ್ರದುರ್ಗ ಕೋಟೆಗಳ ಮೇಲೂ ಧಾಳಿ ಮಾಡಿದನು
  • ಬ್ರಿಟೀಷರ ವಿರುದ್ಧ ಹೊರಾಡಲು ಪಾಳೆಯಗಾರರು ವಾಘನಿಗೆ ಬೆಂಬಲ ನೀಡಿದರು
  • ಪ್ರೆಂಚ್‌ ರ ನೆರವನ್ನು ಸಹ ವಾಘ ಪಡೆದುಕೊಂಡನು

6. ಸಂಗೊಳ್ಳಿ ರಾಯಣ್ಣನು ಸ್ವಾತಂತ್ರ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ.

  • ರಾಯಣ್ಣನು ತನ್ನದೇ ಆದ ಸೈನ್ಯವನ್ನು ಸಂಘಟಿಸಿದನು
  • ರಹಸ್ಯ ಸಭೇಗಳನ್ನು ಆಯೋಜಿಸಿ ಯೋಜನೆ ರೂಪಿಸಿಕೊಂಡರು
  • ಸೈನ್ಯದಲ್ಲಿ ರಾಷ್ಟ್ರೀಯ ಭಾವನೆಯನ್ನು ಬೆಳೆಸಿದನು
  • ಬ್ರಿಟೀಷರ ಖಜಾನೆ ತಾಲ್ಲೂಕು ಕಛೇರಿಗಳನ್ನು ಲೂಟಿ ಮಾಡಿದನು


7. ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪ್ರಾಂತ್ಯದ ಪುಟ್ಟಬಸಪ್ಪನ ಪಾತ್ರವನ್ನು ವಿವರಿಸಿ.

  • ಪುಟ್ಟಬಸಪ್ಪನು ‘ಕಲ್ಯಾಣ ಸ್ವಾಮಿ’ ಹಾಗೂ ‘´ಸ್ವಾಮಿ ಅಪರಂಪರ’ ಎಂದೇ ಪರಿಚಿತರಾಗಿದ್ದರು
  • ದಂಗೆಕೋರರನ್ನು ಪುಟ್ಟಬಸಪ್ಪನು ಸಂಘಟಿಸಿದನು
  • ತಂಬಾಕು ಹಾಗೂ ಉಪ್ಪಿನ ಮೇಲಿನ ತೆರಿಗೆಯನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿದನು
  • ಬಳ್ಳಾರಿಯ ಸರ್ಕಾರಿ ಕಛೇರಿಯನ್ನು ಲೂಟಿಮಾಡಿದನು
  • ಅಮಲ್ದಾರನೊಬ್ಬನನ್ನು ಕೊಂದು ಭಂಟ್ವಾಳದ ಖಜಾನೆ ಹಾಗೂ ಸೆರೆಮನೆಯನ್ನು ಲೂಟಿಮಾಡಿದನು

8. ಸುರಪುದ ದಂಗೆಯನ್ನು  ಸಂಕ್ಷಿಪ್ತವಾಗಿ ವಿವರಿಸಿ

  • 1857ರ ದಂಗೆಯ ಸಮಯದಲ್ಲಿ ವೆಂಕಟಪ್ಪ ನಾಯಕನು ಸುರಪುರ ದಂಗೆಯನ್ನು ಪ್ರಾರಂಭಿಸಿದನು
  • ನಾನಾ ಸಾಹೇಬನ ಪ್ರತಿನಿಧಿಗಳು ವೆಂಕಟಪ್ಪ ನಾಯಕನ ದಂಗೆಯನ್ನು ಬೆಂಬಲಿಸಿದರು
  • ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಅನುಮಾನದಿಂದ ನೋಡಿದರು
  • ವೆಂಕಟಪ್ಪ ನಾಯಕ ಕುರಿತು ವರದಿ ನೀಡಲು ಕ್ಯಾಂಪ್‍ಬೆಲ್ ಎಂಬ ಅಧಿಕಾರಿಯನ್ನು ನೇಮಿಸಲಾಯಿತು
  • ಹೈದರಾಬಾದಿನ ರೆಸಿಡೆಂಟನಿಗೆ ನೀಡಿದ ವರದಿಯಲ್ಲಿ ಸುರಪುದ ದುರಾಡಳಿತಕ್ಕೆ ವೆಂಕಟಪ್ಪ ಕಾರಣವೆಂದು ತಿಳಿಸಲಾಯಿತು
  • ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಅಧೀಕಾರದಿಂದ ಕೆಳಗಿಳಿಸಿದರು
Share:

ಅಧ್ಯಾಯ -3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು.

ಅಧ್ಯಾಯ -3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು.
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯವನ್ನು ಸ್ಥಾಪಿಸಿದವನು ಲಾರ್ಡ್ ವಾರನ್ ಹೇಸ್ಟಿಂಗ್ಸ್
2. ಸೂಪರಿಡೆಂಟ್‍ಂಟ್ ಆಫ್ ಪೋಲೀಸ್ ಹುದ್ದೆಯನ್ನು ಸೃಷ್ಟಿಸಿದವನು ಲಾರ್ಡ್ ಕಾರ್ನವಾಲೀಸ್
3. ಖಾಯಂ ಜಮೀನ್ದಾರಿ ಪದ್ದತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ 1793 ರಲ್ಲಿ ಜಾರಿಗೆ ತರಲಾಯಿತು
4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ರೈತವಾರಿ ಪದ್ದತಿ
5. ಆಧುನಿಕ ಶಿಕಣ್ಷ ಪ್ರಸಾರಕ್ಕೆ ಉತ್ತೇಜನ  ನೀಡಿದ ಮೊದಲ ಬ್ರಿಟೀಷ ಅಧಿಕಾರಿ ಲಾರ್ಡ್ ವಾರನ್ ಹೇಸ್ಟೀ ಂಗ್ಸ್
6. ರೇಗ್ಯೂಲೇಟಿಂಗ್ ಕಾಯಿದೆಯು ಜಾರಿಗೆ ಬಂದ ವರ್ಷ 1773
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟೀಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇ ಷಿಸಿ

  • ದಿವಾನಿ ಅದಾಲತ್:-ಇದು ನಾಗರೀಕ ನ್ಯಾಯಾಲಯವಾಗಿದ್ದು ಹಿಂದೂಗಳಿಗೆ ಹಿಂದೂ ಧರ್ಮಶಾಸ್ರ್ತದ ಪ್ರಕಾರ
  • ಮುಸಲ್ಮಾನರಿಗೆ ಷರೀಯತ್ ಕಾನೂನಿನ ಪ್ರಕಾರ ನ್ಯಾಯ ತಿರ್ಮಾನ ಮಾಡಲಾಗುತ್ತಿತ್ತು. 
  • ಈ ನ್ಯಾಯಾಲುಗಳ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು
  • ಫೌಜದಾರಿ ಅದಾಲ್:-ಇದು ಅಪರಾಧಿಕ ನ್ಯಾಯಾಯ ವಾಗಿದ್ದು ‘ಖಾಜಿ’ಗಸು ನ್ಯಾಯ ತೀರ್ಮಾನ ಮಾಡುತ್ತಿದ್ದರು.
  • ಇದರ ಅಧ್ಯಕ್ಷತೆಯನ್ನು  ಯೂರೋಪಿಯನ್ನವರೇ ವಹಿಸಿಕೊಳತ್ತಿದ್ದರು


2. ಬ್ರಿಟೀಷ ಕಾಲದಲ್ಲಿ ಪೋಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?

  • ಪ್ರತೀ ಜಿಲ್ಲೆಗಳನ್ನು  ಅನೇಕ ಪೋಲಿಸ್‌ ‘ಠಾಣೆ’ ಗಸನ್ನಾಗಿ ವಿಭಜಿಸಲಾಯಿತು
  • ಪ್ರತೀ ಠಾಣೆಯ ಉಸ್ತುವಾರಿಗೆ ‘ಕೊತ್ವಾಲ’ ರನ್ನು ನೇಮಿಸಲಾಯಿತು
  • ಪೋಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‍ರ ಅಧೀನಕೊಳ್ಳಪಟ್ಟರು
  • 1902 ರಲ್ಲಿ ‘ಪೋಲಿಸ್‌ ಕಮಿಶನ್‌  ಕಾಯ್ದೆ’ಯನ್ನು ಜಾರಿಗೆ ತರಲಾಯಿತು


3. ಖಾಯಂ ಜಮೀನ್ದಾರಿ ಪದ್ದತಿಯು ರೈತರನ್ನು ‚ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿಸಿ, ಸಾಲದಲ್ಲೇ ಸಾಯುವಂತೆ ಮಾಡಿತು‛. ಹೇಗೆ? ವಿವರಿಸಿ

  • ಈ ಪದ್ದತಿಯು ರೈತರ ಭೂ ಮಾಲಿಕತ್ವವನ್ನು ಕಸಿದುಕೊಂಡಿತು 
  • ಜಮೀನ್ದಾರರು ನಿಗಧಿತ ದರಕ್ಕಿಂತ ಹೆಚ್ಚಿನ ತೆರಿಗೆಯನ್ನು ರೈತರಿಂದ ಸಂಗ್ರಹಿಸುತ್ತಿದ್ದರು
  • ರೈತರು ಜಮೀನ್ದಾರರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು 
  • ಜಮೀನ್ದಾರರು ರೈತರನ್ನು ಶೋಷಣೆಗೊಳಪಡಿಸಿದರಲ್ಲದೇ ರೈತರ ಜೀವನ ಆಭದ್ರತೆಯಿಂದ ಕೂಡಿತು


4. ರೈತವಾರಿ ಪದ್ದತಿಯು ಒಳಗೊಂಡ ಪ್ರಮುಖಾಂಶಗಳಾವುವು?

  • ಉಳುವವನನ್ನೇ ಭೂಮಿಯ ಒಡೆಯನೆಂದು ಗುರುತಿಸಿತು
  • ಭೂ ಮಾಲಿಕನು ಒಟ್ಟು ಉತ್ಪನ್ನದ 50% ರಷ್ಟನ್ನು ತೆರಿಗೆಯಾಗಿ ನೀಡಬೇಕಾಗಿತ್ತು
  • ಭೂ ಕಂದಾಯದ ಪರಿಷ್ಕರಣೆಯ ಅವಧಿ 30 ವರ್ಷಗಳಾಗಿತ್ತು
  • ತೆರಿಗೆ ಸಂಗ್ರಹಿಸಲು ಬ್ರಿಟೀಷರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು


5. ಬ್ರಿಟೀಷ ಕಂದಾಯ ನೀತಿಗಳಿಂದಾದ ಪರಿಣಾಮಗಳಾವುವು?

  • ಈ ಪದ್ದತಿಯಿಂದ ಕಂಪನಿಗೆ ನಿರಂತರವಾಗಿ ನಿಗಧಿತ ಕಂದಾಯ ಸಂದಾಯವಾಗತೊಡಗಿತು
  • ಕಂಪನಿಯು ಭಾರತೀಯ ರೈತರನ್ನು ಶೋಷಣೆ ಮಾಡಿತು
  • ರೈತರು ಭೂ ಮಾಲಿಕತ್ವವನ್ನು ಕಳೆದುಕೊಂಡರು
  • ನಿಗಧಿತ ದರಕ್ಕಿಂತ ಹೆಚ್ಚಿನ ಕಂದಾಯವನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದರು

6. ಬ್ರಿಟೀಷ ಶಿಕಣ ದಿಂದ ಉಂಟಾದ ಪರಿಣಾಮಗಳನ್ನು ಪಟ್ಟಿಮಾಡಿ

  • ಇಂಗ್ಲೀಷ ಶಿಕಣ ವು ಜಾರಿಗೆ ಬಂದಿತು
  • ಭಾರತೀಯರಲ್ಲಿ ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಹಾಗೂ ವಿಮರ್ಶಾತ್ಮಕ ಜ್ಞಾನ ಭೆಳೆಯಿತು
  • ಸ್ಥಳೀಯ ಭಾಷೆ ಹಾಗೂ ಸಾಹಿತ್ಯ ಪೋಷಿಸಲ್ಪಟ್ಟಿತು
  • ಭಾರತದ ಸ್ವಾತಂತ್ರ ಹೋರಾಟಕ್ಕೆ ಸ್ಪೂರ್ತಿ ಲಭಿಸಿತು

7. ರೆಗ್ಯೂಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು?

  • ಬಂಗಾಳ ಪ್ರೆಸಿಡೆನ್ಸಿಯು ಇತರ ಎಲ್ಲಾ ಪ್ರೆಸಿಡೆನ್ಸಿಗಳ ಮೇಲೆ ನಿಯಂತ್ರಣ ಹೊಂದಿತು
  • ಬಂಗಾಳದ ಗವರ್ನರ್ ಹುದ್ದೆಯನ್ನು ಭಾರತದ ಗವರ್ನರ್ ಜನರಲ್ ಎಂದು ಬದಲಾಯಿಸಲಾಯಿತು
  • ಕೋಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪಿಸಲಾಯಿತು
  • ಲಾರ್ಡ್ ವಾರನ್ ಹೇಸ್ಟಿಂಗ್ಸ್ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕಗೊಂಡನು

8. 1858ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?

  • ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರ ಸನ್ನದನ್ನು ರದ್ದುಪಡಿಸಲಾಯಿತು
  • ಭಾರತದ ಆಳ್ವಿಕೆಯನ್ನು ಬ್ರಿಟೀμï ರಾಣಿಯ ನಿಯಂತ್ರಣಕ್ಕೆ ಒಪ್ಪಿಸಲಾಯಿತು
  • ಗವರ್ನರ್ ಜನರಲ್ಷಿ‌ ಹುದ್ದೆಯನ್ನು ‘ವೈಸರಾಯ್’ ಎಂದು ಬದಲಾಯಿಸಲಾಯಿತು.
  • ಲಾರ್ಡ್ ಕ್ಯಾನಿಂಗ್ ಪ್ರಥಮ ವೈಸರಾಯ್ ಆಗಿ ನೇಮಿಸಲ್ಪಟ್ಟನು

9. 1935ರ ಭಾರತ ಸರ್ಕಾರ ಕಾಯ್ದೆ ‚ಭಾರತ  ಸಂವಿಧಾನದ ಬುನಾದಿ‛ ಸಮರ್ಥಿಸಿ

  • ಭಾರತ ಸಂವಿಧಾನದ ಅನೇಕ ನಿಮಂಧನೆಗಳಿಗೆ ಈ ಕಾಯ್ದೆಯೇ ಆಧಾರವಗಿದೆ
  • ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚನೆಗೆ ಈ ಕಾಯಿದೆ ಅವಕಾಶ ನೀಡಿತು
  • ದೇಶಿಯ ಸಂಶ್ಥಾನಗಳು, ಬ್ರಿಟೀμï ಸಂಸ್ಥಾನಗಳನ್ನೊಳಗೊಂಡ ಒಕ್ಕೂಟ ರಚನೆಗೆ ಅವಕಾಶ ನೀಡಿತು
  • ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಿತು

10. 1919ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?

  • ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ ನೀಡಿತು
  • ಭಾರತಕ್ಕೆ ಒಬ್ಬ ಹೈ ಕಮೀಷನರ್ ನೇಮಕ ಮಾಡಲು ಸೂಚಿಸಿತು
  • ಪ್ರಾಂತೀಯ ಆಯವ್ಯಯವನ್ನು ಕೇಂದ್ರ ಆಯವ್ಯಯದಿಂದ ಪ್ರತ್ಯೇಕಿಸಲಾಯಿತು
  • ಮುಸಲ್ಮಾನರು, ಸಿಖ್ಖರು ಹಾಗೂ ಆಂಗ್ಲೋ ಇಂಡಿಯನ್ನರಿಗೆ ‚ಪ್ರತ್ಯೇಕ ಚುನಾವಣಾ ಮತಗಟ್ಟೆ‛ಗಳನ್ನು ನಿಗಧಿ ಪಡಿಸಿತು
Share:

ಅಧ್ಯಾಯ -2 ಬ್ರಿಟೀಷ್ಆ‌ ಳ್ವಿಕೆಯ ವಿಸ್ತರಣೆ

ಅಧ್ಯಾಯ -2 ಬ್ರಿಟೀಷ ಆಳ್ವಿಕೆಯ ವಿಸ್ತರಣೆ:
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಹಾಗೂ ಬ್ರಿಟೀಷರ ಮಧ್ಯೆ ಸಾಲ್ಬಾಯ್ ಒಪ್ಪಂದ ಆಯಿತು
2. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ಲಾರ್ಡ್ ವೆಲ್ಲೆಸ್ಲಿ
4. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು ಲಾರ್ಡ್ ಡಾಲ್‍ಹೌಸಿ

II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಮೊದಲನೇ ಆಂಗ್ಲೋ-ಮರಾಠ ಯುದ್ದದ ಕಾರಣಗಳನ್ನು ವಿವರಿಸಿ

  • ರಘುನಾಥರಾಯನಿಂದ ಪೇಶ್ವೆ ನಾರಯಣರಾವ್‍ನ ಕೊಲೆ
  • ಮರಾಠ ಒಕ್ಕೂಟದಿಂದ ಪೇಶ್ವೆ ಹುದ್ದೆಗೆ ಮಾದವರಾವ್‍ನ ನೇಮಕ
  • ಇದರಿಂದ ವಿಚಲಿತನಾದ ರಘುನಾಥರಾಯನು ಬ್ರಿಟೀಷರ ನೆರವುಯಾಚಿಸಿದ್ದು

2. ಸಹಾಯಕ ಸೈನ್ಯ ಪದ್ದತಿಯ ನಿಂಬಂಧನೆಗಳಾವುವು? ವಿವರಿಸಿ

  • ಈ ಪದ್ಧತಿಯ ಅನುಸಾರ ದೇಶಿಯ ರಾಜನು ಬ್ರಿಟಿಷರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು
  • ದೇಶಿಯ ರಾಜರಿಗೆ ಬ್ರಿಟೀಷರು ಸೈನ್ಯವನ್ನು ನೀಡುತ್ತಿದ್ದರು
  • ಬ್ರಿಟಿಷರ ಅನುಮತಿಯಿಲ್ಲದೆ ಈ ಸೈನ್ಯವನ್ನು ಬಳಸುವಂತಿರಲಿಲ್ಲ
  • ಸೈನ್ಯ ವೆಚ್ಚವನ್ನು ದೇಶಿಯ ರಾಜರೇ ನೋಡಿಕೊಳ್ಳಬೇಕಾಗಿತ್ತು.
  • ದೇಶಿಯ ರಾಜರ ಆಂಗ್ಲ್‌  ರೆಸಿಡೆಂಟ್ ಅಧಿಕಾರಿಯನ್ನು ಬ್ರಿಟಿಷರು ನೇಮಿಸುತ್ತಿದ್ದರು.


3. ಮೂರನೇ ಆಂಗ್ಲೋ-ಮರಾಠ ಯುದ್ದವನ್ನು ವಿವರಿಸಿ

  • ಮೂರನೇ ಆಂಗ್ಲೋ-ಮರಾಠ ಯುದ್ದದಲ್ಲಿ ಪೇಶ್ವೇ ಎರಡನೇ ಬಾಜಿರಾಯನು ಪುಣೆಯಲ್ಲಿನ ಬ್ರಿಟೀಷ ರೆಸಿಡೆನ್ಸಿ ಮತ್ತು ಕೋರೆಗಾವ್ ಹಾಗೂ ಆಷ್ಟಿಗಳ ಮೇಲೆ ಧಾಳಿಮಾಡಿ ಸೋಲಿಸಲ್ಪಟ್ಟನು. 
  • ಇಂಗ್ಲೀಷರು ಪೇಶ್ವೆ ಹುದ್ದೆಯನ್ನು ರದ್ದು ಪಡಿಸಿದರಲ್ಲದೆ ಪೇಶ್ವೆ ಎರಡನೇ ಬಾಜಿರಾಯನಿಗೆ ವಿಶ್ರಾಂತಿ ವೇತನವನ್ನು ನೀಡಿದರು. 
  • ಶಿವಾಜಿಯ ವಂಶಸ್ಥ ಪ್ರತಾಪ್‍ಸಿಂಹನನ್ನು ಮರಾಠರ ಮುಖಂಡರಾಗಿ ನೇಮಿಸಿದರು

4. ಬ್ರಿಟೀಷ ಅಧಿಕಾರ ವಿಸ್ತರ್ಣೆ  ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯು ಹೇಗೆ ಸಹಕಾರಿಯಾಯಿತು ವಿವರಿಸಿ

  • ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ವಯ ದೇಶಿಯ ರಾಜನಿಗೆ ಸ್ವಾಭಾವಿಕ ಮಕ್ಕಳು ಇಲ್ಲದಿದ್ದರೆ ಆತ ತನ್ನ ಸಾಮ್ರಾಜ್ಯವನ್ನು ದತ್ತು ಮಕ್ಕಳಿಗೆ ಹಸ್ತಾಂತರ ಮಾಡುವಂತಿರಲಿಲ್ಲ
  • ಈ ನೀತಿಯ ಅನುಸಾರ ಸತಾರ, ಝಾನ್ಸಿ, ನಾಗಪುರ, ಜೈಪುರ, ಸಂಬಲ್‍ಪುರ, ಉದಯಪುರಗಳನ್ನು ಡಾಲ್ ಹೌಸಿ ವಶಪಡಿಸಿಕೊಂಡನು. 
  • ಈ ನೀತಿಯನ್ನು ಜಮೀನ್ದಾರರಿಗೂ ಅನ್ವಯಿಸಿದ್ದರಿಂದ ಜಮೀನ್ದಾರರು ತಮ್ಮ ಹಕ್ಕಗಳನ್ನು ಕಳೆದುಕೊಂಡರು, 
  • ಈ ನೀತಿಯು ರಾಜಕೀಯ ಅಸ್ರ್ತವಾಗಿ ಬಳಸಲ್ಪಟ್ಟಿತು

5. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?

  • ಸತಾರ, ಝಾನ್ಸಿ, ನಾಗಪುರ, ಜೈಪುರ, ಸಂಬಲ್‍ಪುರ, ಉದಯಪುರಗಳು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾಗಿವೆ.
Share:

ಅಧ್ಯಾಯ-1, ಭಾರತಕ್ಕೆ ಯೂರೋಪಿಯನ್ನರ ಆಗಮನ

ಇತಿಹಾಸ 
ಅಧ್ಯಾಯ-1,        ಭಾರತಕ್ಕೆ ಯೂರೋಪಿಯನ್ನರ ಆಗಮನ:
I    ಖಾಲಿ  ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 1453ರಲ್ಲಿ  ಆಟೋಮನ್  ಟರ್ಕ್‍ರು ಕಾನ್‍ಸ್ಟಾಂಟಿನೋಪಲ್  ನಗರವನ್ನು  ವಶಪಡಿಸಿಕೊಂಡರು
2.  ಭಾರತ  ಹಾಗೂ  ಯೂರೋಪ್  ನಡುವೆ  ಹೊಸ  ಜಲಮಾರ್ಗವನ್ನು  ವಾಸ್ಕೋಡಗಾಮನು  ಕಂಡುಹಿಡಿದನು
3.  ಭಾರತದಲ್ಲಿ  ಫ್ರೆಂಚರ  ರಾಜಧಾನಿ  ಪಾಂಡಿಚೇರಿ
4.  ರಾಬರ್ಟ್  ಕ್ಲೈವ್‍ನು  1757ರಲ್ಲಿ  ಸಿರಾಜುದ್ದೌಲನ  ಮೇಲೆ  ಪ್ಲಾಸೀ  ಕದನ  ಸಾರಿದನು
5.  ಈಸ್ಟ್  ಇಂಡಿಯಾ  ಕಂಪನಿಗೆ  ಬಂಗಾಳದ  ದಿವಾನಿ  ಹಕ್ಕನ್ನು  ಎರಡನೇ  ಷಾ  ಆಲಂ  ನೀಡಿದನು
6. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು ರಾಬರ್ಟ ಕ್ಲೈವ್
II  ಈ ಪ್ರಶ್ನೆಗಳಿಗೆ  ಉತ್ತರ  ಬರೆಯಿರಿ
1. ಮಧ್ಯಕಾಲದಲ್ಲಿ  ಭಾರತ  ಮತ್ತು  ಯೂರೋಪ್  ನಡುವೆ  ವ್ಯಾಪಾರ  ಹೇಗೆ  ನಡೆಯುತ್ತಿತ್ತು?

  • ಮಧ್ಯದಲ್ಲಿ  ಭಾರತದೊಂದಿಗೆ  ಯೂರೋಪಿಯನ್ನರ  ವ್ಯಾಪಾರವು  ಕಾನ್‍ಸ್ಟಾಂಟಿನೋಪಲ್  ನಗರದ  ಮೂಲಕ ಜರುಗುತ್ತಿತ್ತು.  
  • ಅರಬ್ಬರು  ಭಾರತದ  ವ್ಯಾಪಾರೀ  ಸರಕುಗಳನ್ನು  ಕಾನ್‍ಸ್ಟಾಂಟಿನೋಪಲ್‍ಗೆ  ತರುತ್ತಿದ್ಧರು.
  • ಇಟಲಿಯ ವ್ಯಾಪಾರಿಗಳು  ಈ  ಸರಕುಗಳನ್ನು  ಖರೀದಿಸಿ  ಯೂರೋಪ್  ಖಂಡದಲ್ಲಿ  ಮಾರುತ್ತಿದ್ದರು

2.  ಭಾರತಕ್ಕೆ  ಹೊಸ  ಜಲಮಾರ್ಗವನ್ನು  ಕಂಡುಹಿಡಿಯಲು  ಸಹಾಯಕವಾದ  ಅಂಶಗಳನ್ನು  ಚರ್ಚಿಸಿ

  • ಕಾನ್‍ಸ್ಟಾಂಟಿನೋಪಲ್  ನಗರದ  ಪತನ   ಭಾರತೀಯ  ಮಸಾಲೆ  ಪದಾರ್ಥಗಳಿಗಿದ್ದ  ಅಪಾರ  ಬೇಡಿಕೆ 
  • ನಾವಿಕರ  ದಿಕ್ಸೂಚಿ,  ಸಿಡಿಮದ್ದು,  ಬಂದೂಕು,  ಭೂಪಟಗಳ  ಅನ್ವೇಷಣೆ 
  • ಕ್ರೈಸ್ತ  ಧರ್ಮದ  ಪ್ರಸಾರ

3.  ಭಾರತಕ್ಕೆ  ವ್ಯಾಪಾರಕ್ಕಾಗಿ  ಬಂದ  ಯೂರೋಪಿಯನ್ನರನ್ನು  ಪಟ್ಟಿ  ಮಾಡಿ

  • ಪೋರ್ಚುಗೀಸರು.  
  • ಡಚ್ಚರು,  
  • ಬ್ರಿಟೀಷರು  ಹಾಗೂ  
  • ಫ್ರಂಚರು

 4.  ಎರಡನೇ  ಕರ್ನಾಟಿಕ್  ಯುದ್ದವನ್ನು  ವಿವರಿಸಿ.

  • ಫ್ರೆಂಚರ  ನೆರವಿನೊಂದಿಗೆ  ಹೈದರಾಬಾದಿನಲ್ಲಿ  ಸಲಬತ್‍ಜಂಗ್  ನಿಜಾಮ  ಹುದ್ದೆಗೂ  ಹಾಗೂ  ಕರ್ನಾಟಕ್‍ನಲ್ಲಿ ಚಂದಾಸಾಹೇಬ್  ನವಾಬನ  ಹುದ್ದೆಗೂ  ನೇಮಿಸಲ್ಪಟ್ಟರು.  
  • ಚಂದಾಸಾಹೇಬನು  ತಿರುಚನಾಪಳ್ಳಿ  ಕೋಟೆ  ಮೇಲೆ  ಧಾಳಿ ಮಾಡಿದಾಗ  ಚಾಣಕ್ಷನಾದ  ರಾಬರ್ಟ್‍ಕ್ಲೈವ್‍ನು  ಆರ್ಕಾಟಿನ  ಮೇಲೆ  ಧಾಳಿಮಾಡಿದನು.  
  • ಆರ್ಕಾಟಿನಲ್ಲಿ  ನಡೆದ ಯುದ್ದದಲ್ಲಿ  ಚಂದಾಸಾಹೇಬನನ್ನು  ಕೊಲೆಮಾಡಲಾಯಿತು.  
  • ಮಹಮ್ಮದ್  ಆಲಿಯು  ಅರ್ಕಾಟಿನ  ನವಾಬನಾಗಿ ನೇಮಿಸಲ್ಪಟ್ಟನು

5. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ ಕಾರಣಗಳು :-

  • ದಸ್ತಕ್‍ಗಳ  ದುರುಪಯೋಗ  
  • ನವಾಬನ  ಅನುಮತಿಯಿಲ್ಲದೇ  ಬ್ರಿಟೀಷರು  ಪೋರ್ಟ್  ವಿಲಿಯಂ  ಕೋಟೆ  ಬಲಪಡಿಸಿಕೊಂಡಿದ್ದು
  • ಕಪ್ಪು ಕೋಣೆ ದುರಂತ
ಪರಿಣಾಮಗಳು  :- 
  • ಸಿರಾಜುದ್ದೌಲನ  ಕೊಲೆಯಾಯಿತು 
  • ಮೀರ್  ಜಾಫರ್  ಬಂಗಾಳದ  ನವಾಬನಾದನು 
  • ಬ್ರಿಟಿಷರಿಗೆ  24  ಪರಗಣ  ಪ್ರದೇಶ  ಬಳುವಳಿಯಾಗಿ  ದೊರೆಯಿತು

6.  ಬಕ್ಸಾರ್  ಕದನದ  ಫಲಿತಾಂಶಗಳನ್ನು  ವಿವರಿಸಿ   ಮೀರ್  ಖಾಸಿಂನ  ಒಕ್ಕೂಟ  ಸೇನೆಗೆ  ಸೋಲಾಯಿತು

  • ಎರಡನೇ ಷಾ ಆಲಂ ಬ್ರಿಟೀಷರಿಗೆ ಬಂಗಾಳದ ದಿವಾನಿ ಹಕ್ಕನ್ನು ಹಸ್ತಾಂತರಿಸಿದನು
  • ಬಂಗಾಳದಲ್ಲಿ ಬ್ರಿಟೀಷರು ಭದ್ರವಾಗಿ ನೆಲೆಯೂರಿದರು
  • ಔದ್ನ ನವಾಬ  50 ಲಕ್ಷ ರೂ ಯುದ್ಧ ಪರಿಹಾರವಾಗಿ ಬ್ರಿಟೀಷರಿಗೆ ನೀಡಬೇಕಾಯಿತು.

7. ದ್ವಿಸರ್ಕಾರ ಪದ್ದತಿಯನ್ನು ವ್ಯಾಖ್ಯಾನಿಸಿ

  • ರಾಬರ್ಟ್‍ಕ್ಲೆ ೈವ್ ಜಾರಿಗೆ ತಂದ ದ್ವಿ ಸರಕಾರ  ಪದ್ದತಿಯು ಎರಡು ಬಗೆಯ ಅಧಿಕಾರವನ್ನು ಹೊಂದಿತ್ತು
  • ದಿವಾನಿ ಹಕ್ಕು : ಇದು ಬ್ರೀಟೀಷರು ಭೂಕಂದಾಯ ಸಂಗ್ರಹಿಸುವ ಹಕ್ಕಾಗಿತ್ತು
  • ನಿಜಾಮಿ ಹಕ್ಕು ; ಇದು ನವಾಬನಿಗಿದ್ದ ದೈನಂದಿನ ಆಡಳಿತ, ನ್ಯಾಯ ತಿರ್ಮಾನ ಮಾಡುವ ಹಕ್ಕಾಗಿತು
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com