For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ
​

ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟೀಷ ಆಳ್ವಿಕೆಗೆ ಪ್ರತಿರೋಧಗಳು

ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟೀಷ ಆಳ್ವಿಕೆಗೆ ಪ್ರತಿರೋಧಗಳು
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮೈಸೂರು ಯುದ್ದವು ಹೈದರಾಲಿ ಮತ್ತು ಬ್ರಿಟೀಷರ ನಡುವೆ ನಡೆಯಿತು
2. ಎರಡನೇ ಆಂಗ್ಲೋ-ಮೈಸೂರು ಯುದ್ಧವು ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು
3. ಕಿತ್ತೂರು ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದ್ದಿದಳು
4. ಕಿತ್ತೂರು ಸಂಸ್ಥಾನದ ರಾಯಣ್ಣನ ಊರು ಸಂಗೊಳ್ಳಿ
5. ಸುರಪುವು ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ
6. ಈಗಿನ ಬಾಗಲಕೋಟೆ ಜಿಲ್ಲೆಯ ಹಲಗಲಿಯ ಬೇಡರು ಬ್ರಿಟೀಷರ ವಿರುದ್ದ ದಂಗೆಯೆದ್ದಿದ್ದರು
7. ಅಮರ ಸುಳ್ಯ ಬಂಡಾಯವು ಮೂಲತ ರೈತರ ಬಂಡಾಯ

II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಹೈದರಾಲಿ ಹೇಗೆ ಅಧೀಕಾರಕ್ಕೆ ಬಂದನು?

  • ಹೈದರಾಲಿಯು ಮೈಸೂರು ಸೇನೆಗೆ ಸೇರ್ಪಡೆಗೊಂಡನು
  • ದೇವನಹಳ್ಳಿ ಕೋಟೆಯ ಧಾಳಿಯಲ್ಲಿ ಹೈದರಾಲಿಯು ವೀರಾವೇಷದಿಂದ ಹೋರಾಡಿ ಪ್ರಸಿದ್ಧಿಗೆ ಬಂದನು 
  • ಆರ್ಕಾಟಿನ ನಿಜಾಮನ ಮೇಲೆ ಯಶಸ್ವಿ ಧಾಳಿ ನಡೆಸಿದನು
  • ಸೈನಿಕರ ಮನಸನ್ನು ಗೆದ್ದು ದಳಾವಯಿಗಳನ್ನು ಬದಿಗೊತ್ತಿ ನವಾಬ ಹೈದರಾಲಿಯಾದನು
  • ಕೃಷ್ಣರಾಜ ಒಡೆಯರ ಅಸಮರ್ಥತೆಯು ಹೈದರಾಲಿ ಏಳಿಗೆಗೆ ಬರಲು ಸಹಾಯಕವಾಯಿತು

2. ಎರಡನೇ ಆಂಗ್ಲೋ-ಮೈಸೂರು ಯುದ್ಧದಿಂದ ಉಂಟಾದ ಪರಿಣಾಮಗಳೇನು?

  • ಖಾಯಿಲೆಯಿಂದಾಗಿ ಹೈದರಾಲಿಯು ಮರಣ ಹೊಂದಿದನು
  • ಯುದ್ದವನ್ನು ಮುನ್ನಡೆಸಿದ ಟಿಪ್ಪುವು ಮಂಗಳೂರು ಬಳಿ ಬ್ರಿಟೀಷರನ್ನು ಸೋಲಿಸಿದನು
  • ಬ್ರಿಟೀಷರು ಹಾಗೂ ಟಿಪ್ಪು ಮಂಗಳೂರು ಒಪ್ಪಂದಕ್ಕೆ ಸಹಿ ಹಾಕಿದರು
  • ಬ್ರಿಟೀಷರು ಟಿಪ್ಪುವಿಗೆ ಮಂಗಳೂರನ್ನು ಬಿಟ್ಟುಕೊಟ್ಟರು

3. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಾವುವು?

  • ಇದರ ಪರಿಣಾಮವಾಗಿ ತನ್ನ ಅರ್ಧರಾಜ್ಯವನ್ನು ಬ್ರಿಟಿಷರಿಗೆ ನೀಡಬೇಕಾಯಿತು
  • 3 ಕೋಟಿ ರೂಪಾಯಿಗಳನ್ನು ಯುದ್ಧ ಪರಿಹಾರವಾಗಿ ನೀಡಬೇಕಾಯಿತು
  • ಹಣ ಸಂದಾಯವಾಗುವವರೆಗು ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡಬೇಕಾಯಿತು.
  • ಯುದ್ಧಖೈದಿಗಳನ್ನು ಯಾವುದೇ ಷರತ್ತು ಇಲ್ಲದೇ ಬಿಡುಗಡೆಮಾಡಬೇಕಾಯಿತು
  • ಬ್ರಿಟೀಷರು ಶ್ರೀರಂಗಪಟ್ಟಣದಿಂದ ತಮ್ಮ ಸೈನ್ಯವನು ಹಿಂದಕ್ಕೆ ಪಡೆದರು

4. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಬ್ರಿಟೀಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು. ಸಮರ್ಥಿಸಿ

  • ಈ ಯುದ್ಧದಲ್ಲಿ ಬ್ರಿಟೀಷರು ಟಿಪ್ಪುವನ್ನು ಕೊಂದರು
  • ಸಾಮ್ರಾಜ್ಯವನ್ನು ಬ್ರಿಟೀಷರು, ಮರಾಠರು ಹಾಗೂ ನಿಜಾಮರು ಪರಸ್ಪರ ಹಂಚಿಕೊಂಡರು
  • ಸಣ್ಣ ಪ್ರಾಂತ್ಯವನ್ನು ಮೈಸೂರು ಒಡೆಯರಿಗೆ ಹಿಂದರುಗಿಸಲಾಯಿತು
  • ಬ್ರಿಟೀಷರ ಸಹಾಯಕ ಸೈನ್ಯಪದ್ಧತಿಗೆ ಮೈಸೂರು ಒಡೆಯರು ಸಹಿಹಾಕಿದರು

5. ದೋಂಡಿಯ ವಾಘನು ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿಶ್ಲೇ ಷಿಸಿ

  • ದೊಂಡಿಯ ವಾಘನು ತನ್ನದೇ ಆದ ಖಾಸಗಿ ಸೈನ್ಯವನ್ನು ಹೊಂದಿದ್ಧನು
  • ಕುಡಲೂರು ಕೋಟೆಯ ಮೇಲೆ ಧಾಳಿ ಮಾಡುವ ಪ್ರಯತ್ನ ಮಾಡಿದನು
  • ಶಿವಮೊಗ್ಗ ಹಾಗೂ ಚಿತ್ರದುರ್ಗ ಕೋಟೆಗಳ ಮೇಲೂ ಧಾಳಿ ಮಾಡಿದನು
  • ಬ್ರಿಟೀಷರ ವಿರುದ್ಧ ಹೊರಾಡಲು ಪಾಳೆಯಗಾರರು ವಾಘನಿಗೆ ಬೆಂಬಲ ನೀಡಿದರು
  • ಪ್ರೆಂಚ್‌ ರ ನೆರವನ್ನು ಸಹ ವಾಘ ಪಡೆದುಕೊಂಡನು

6. ಸಂಗೊಳ್ಳಿ ರಾಯಣ್ಣನು ಸ್ವಾತಂತ್ರ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ.

  • ರಾಯಣ್ಣನು ತನ್ನದೇ ಆದ ಸೈನ್ಯವನ್ನು ಸಂಘಟಿಸಿದನು
  • ರಹಸ್ಯ ಸಭೇಗಳನ್ನು ಆಯೋಜಿಸಿ ಯೋಜನೆ ರೂಪಿಸಿಕೊಂಡರು
  • ಸೈನ್ಯದಲ್ಲಿ ರಾಷ್ಟ್ರೀಯ ಭಾವನೆಯನ್ನು ಬೆಳೆಸಿದನು
  • ಬ್ರಿಟೀಷರ ಖಜಾನೆ ತಾಲ್ಲೂಕು ಕಛೇರಿಗಳನ್ನು ಲೂಟಿ ಮಾಡಿದನು


7. ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪ್ರಾಂತ್ಯದ ಪುಟ್ಟಬಸಪ್ಪನ ಪಾತ್ರವನ್ನು ವಿವರಿಸಿ.

  • ಪುಟ್ಟಬಸಪ್ಪನು ‘ಕಲ್ಯಾಣ ಸ್ವಾಮಿ’ ಹಾಗೂ ‘´ಸ್ವಾಮಿ ಅಪರಂಪರ’ ಎಂದೇ ಪರಿಚಿತರಾಗಿದ್ದರು
  • ದಂಗೆಕೋರರನ್ನು ಪುಟ್ಟಬಸಪ್ಪನು ಸಂಘಟಿಸಿದನು
  • ತಂಬಾಕು ಹಾಗೂ ಉಪ್ಪಿನ ಮೇಲಿನ ತೆರಿಗೆಯನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿದನು
  • ಬಳ್ಳಾರಿಯ ಸರ್ಕಾರಿ ಕಛೇರಿಯನ್ನು ಲೂಟಿಮಾಡಿದನು
  • ಅಮಲ್ದಾರನೊಬ್ಬನನ್ನು ಕೊಂದು ಭಂಟ್ವಾಳದ ಖಜಾನೆ ಹಾಗೂ ಸೆರೆಮನೆಯನ್ನು ಲೂಟಿಮಾಡಿದನು

8. ಸುರಪುದ ದಂಗೆಯನ್ನು  ಸಂಕ್ಷಿಪ್ತವಾಗಿ ವಿವರಿಸಿ

  • 1857ರ ದಂಗೆಯ ಸಮಯದಲ್ಲಿ ವೆಂಕಟಪ್ಪ ನಾಯಕನು ಸುರಪುರ ದಂಗೆಯನ್ನು ಪ್ರಾರಂಭಿಸಿದನು
  • ನಾನಾ ಸಾಹೇಬನ ಪ್ರತಿನಿಧಿಗಳು ವೆಂಕಟಪ್ಪ ನಾಯಕನ ದಂಗೆಯನ್ನು ಬೆಂಬಲಿಸಿದರು
  • ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಅನುಮಾನದಿಂದ ನೋಡಿದರು
  • ವೆಂಕಟಪ್ಪ ನಾಯಕ ಕುರಿತು ವರದಿ ನೀಡಲು ಕ್ಯಾಂಪ್‍ಬೆಲ್ ಎಂಬ ಅಧಿಕಾರಿಯನ್ನು ನೇಮಿಸಲಾಯಿತು
  • ಹೈದರಾಬಾದಿನ ರೆಸಿಡೆಂಟನಿಗೆ ನೀಡಿದ ವರದಿಯಲ್ಲಿ ಸುರಪುದ ದುರಾಡಳಿತಕ್ಕೆ ವೆಂಕಟಪ್ಪ ಕಾರಣವೆಂದು ತಿಳಿಸಲಾಯಿತು
  • ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಅಧೀಕಾರದಿಂದ ಕೆಳಗಿಳಿಸಿದರು
Share:

ಅಧ್ಯಾಯ -3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು.

ಅಧ್ಯಾಯ -3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು.
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯವನ್ನು ಸ್ಥಾಪಿಸಿದವನು ಲಾರ್ಡ್ ವಾರನ್ ಹೇಸ್ಟಿಂಗ್ಸ್
2. ಸೂಪರಿಡೆಂಟ್‍ಂಟ್ ಆಫ್ ಪೋಲೀಸ್ ಹುದ್ದೆಯನ್ನು ಸೃಷ್ಟಿಸಿದವನು ಲಾರ್ಡ್ ಕಾರ್ನವಾಲೀಸ್
3. ಖಾಯಂ ಜಮೀನ್ದಾರಿ ಪದ್ದತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ 1793 ರಲ್ಲಿ ಜಾರಿಗೆ ತರಲಾಯಿತು
4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ರೈತವಾರಿ ಪದ್ದತಿ
5. ಆಧುನಿಕ ಶಿಕಣ್ಷ ಪ್ರಸಾರಕ್ಕೆ ಉತ್ತೇಜನ  ನೀಡಿದ ಮೊದಲ ಬ್ರಿಟೀಷ ಅಧಿಕಾರಿ ಲಾರ್ಡ್ ವಾರನ್ ಹೇಸ್ಟೀ ಂಗ್ಸ್
6. ರೇಗ್ಯೂಲೇಟಿಂಗ್ ಕಾಯಿದೆಯು ಜಾರಿಗೆ ಬಂದ ವರ್ಷ 1773
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟೀಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇ ಷಿಸಿ

  • ದಿವಾನಿ ಅದಾಲತ್:-ಇದು ನಾಗರೀಕ ನ್ಯಾಯಾಲಯವಾಗಿದ್ದು ಹಿಂದೂಗಳಿಗೆ ಹಿಂದೂ ಧರ್ಮಶಾಸ್ರ್ತದ ಪ್ರಕಾರ
  • ಮುಸಲ್ಮಾನರಿಗೆ ಷರೀಯತ್ ಕಾನೂನಿನ ಪ್ರಕಾರ ನ್ಯಾಯ ತಿರ್ಮಾನ ಮಾಡಲಾಗುತ್ತಿತ್ತು. 
  • ಈ ನ್ಯಾಯಾಲುಗಳ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು
  • ಫೌಜದಾರಿ ಅದಾಲ್:-ಇದು ಅಪರಾಧಿಕ ನ್ಯಾಯಾಯ ವಾಗಿದ್ದು ‘ಖಾಜಿ’ಗಸು ನ್ಯಾಯ ತೀರ್ಮಾನ ಮಾಡುತ್ತಿದ್ದರು.
  • ಇದರ ಅಧ್ಯಕ್ಷತೆಯನ್ನು  ಯೂರೋಪಿಯನ್ನವರೇ ವಹಿಸಿಕೊಳತ್ತಿದ್ದರು


2. ಬ್ರಿಟೀಷ ಕಾಲದಲ್ಲಿ ಪೋಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?

  • ಪ್ರತೀ ಜಿಲ್ಲೆಗಳನ್ನು  ಅನೇಕ ಪೋಲಿಸ್‌ ‘ಠಾಣೆ’ ಗಸನ್ನಾಗಿ ವಿಭಜಿಸಲಾಯಿತು
  • ಪ್ರತೀ ಠಾಣೆಯ ಉಸ್ತುವಾರಿಗೆ ‘ಕೊತ್ವಾಲ’ ರನ್ನು ನೇಮಿಸಲಾಯಿತು
  • ಪೋಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‍ರ ಅಧೀನಕೊಳ್ಳಪಟ್ಟರು
  • 1902 ರಲ್ಲಿ ‘ಪೋಲಿಸ್‌ ಕಮಿಶನ್‌  ಕಾಯ್ದೆ’ಯನ್ನು ಜಾರಿಗೆ ತರಲಾಯಿತು


3. ಖಾಯಂ ಜಮೀನ್ದಾರಿ ಪದ್ದತಿಯು ರೈತರನ್ನು ‚ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿಸಿ, ಸಾಲದಲ್ಲೇ ಸಾಯುವಂತೆ ಮಾಡಿತು‛. ಹೇಗೆ? ವಿವರಿಸಿ

  • ಈ ಪದ್ದತಿಯು ರೈತರ ಭೂ ಮಾಲಿಕತ್ವವನ್ನು ಕಸಿದುಕೊಂಡಿತು 
  • ಜಮೀನ್ದಾರರು ನಿಗಧಿತ ದರಕ್ಕಿಂತ ಹೆಚ್ಚಿನ ತೆರಿಗೆಯನ್ನು ರೈತರಿಂದ ಸಂಗ್ರಹಿಸುತ್ತಿದ್ದರು
  • ರೈತರು ಜಮೀನ್ದಾರರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು 
  • ಜಮೀನ್ದಾರರು ರೈತರನ್ನು ಶೋಷಣೆಗೊಳಪಡಿಸಿದರಲ್ಲದೇ ರೈತರ ಜೀವನ ಆಭದ್ರತೆಯಿಂದ ಕೂಡಿತು


4. ರೈತವಾರಿ ಪದ್ದತಿಯು ಒಳಗೊಂಡ ಪ್ರಮುಖಾಂಶಗಳಾವುವು?

  • ಉಳುವವನನ್ನೇ ಭೂಮಿಯ ಒಡೆಯನೆಂದು ಗುರುತಿಸಿತು
  • ಭೂ ಮಾಲಿಕನು ಒಟ್ಟು ಉತ್ಪನ್ನದ 50% ರಷ್ಟನ್ನು ತೆರಿಗೆಯಾಗಿ ನೀಡಬೇಕಾಗಿತ್ತು
  • ಭೂ ಕಂದಾಯದ ಪರಿಷ್ಕರಣೆಯ ಅವಧಿ 30 ವರ್ಷಗಳಾಗಿತ್ತು
  • ತೆರಿಗೆ ಸಂಗ್ರಹಿಸಲು ಬ್ರಿಟೀಷರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು


5. ಬ್ರಿಟೀಷ ಕಂದಾಯ ನೀತಿಗಳಿಂದಾದ ಪರಿಣಾಮಗಳಾವುವು?

  • ಈ ಪದ್ದತಿಯಿಂದ ಕಂಪನಿಗೆ ನಿರಂತರವಾಗಿ ನಿಗಧಿತ ಕಂದಾಯ ಸಂದಾಯವಾಗತೊಡಗಿತು
  • ಕಂಪನಿಯು ಭಾರತೀಯ ರೈತರನ್ನು ಶೋಷಣೆ ಮಾಡಿತು
  • ರೈತರು ಭೂ ಮಾಲಿಕತ್ವವನ್ನು ಕಳೆದುಕೊಂಡರು
  • ನಿಗಧಿತ ದರಕ್ಕಿಂತ ಹೆಚ್ಚಿನ ಕಂದಾಯವನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದರು

6. ಬ್ರಿಟೀಷ ಶಿಕಣ ದಿಂದ ಉಂಟಾದ ಪರಿಣಾಮಗಳನ್ನು ಪಟ್ಟಿಮಾಡಿ

  • ಇಂಗ್ಲೀಷ ಶಿಕಣ ವು ಜಾರಿಗೆ ಬಂದಿತು
  • ಭಾರತೀಯರಲ್ಲಿ ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಹಾಗೂ ವಿಮರ್ಶಾತ್ಮಕ ಜ್ಞಾನ ಭೆಳೆಯಿತು
  • ಸ್ಥಳೀಯ ಭಾಷೆ ಹಾಗೂ ಸಾಹಿತ್ಯ ಪೋಷಿಸಲ್ಪಟ್ಟಿತು
  • ಭಾರತದ ಸ್ವಾತಂತ್ರ ಹೋರಾಟಕ್ಕೆ ಸ್ಪೂರ್ತಿ ಲಭಿಸಿತು

7. ರೆಗ್ಯೂಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು?

  • ಬಂಗಾಳ ಪ್ರೆಸಿಡೆನ್ಸಿಯು ಇತರ ಎಲ್ಲಾ ಪ್ರೆಸಿಡೆನ್ಸಿಗಳ ಮೇಲೆ ನಿಯಂತ್ರಣ ಹೊಂದಿತು
  • ಬಂಗಾಳದ ಗವರ್ನರ್ ಹುದ್ದೆಯನ್ನು ಭಾರತದ ಗವರ್ನರ್ ಜನರಲ್ ಎಂದು ಬದಲಾಯಿಸಲಾಯಿತು
  • ಕೋಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪಿಸಲಾಯಿತು
  • ಲಾರ್ಡ್ ವಾರನ್ ಹೇಸ್ಟಿಂಗ್ಸ್ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕಗೊಂಡನು

8. 1858ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?

  • ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರ ಸನ್ನದನ್ನು ರದ್ದುಪಡಿಸಲಾಯಿತು
  • ಭಾರತದ ಆಳ್ವಿಕೆಯನ್ನು ಬ್ರಿಟೀμï ರಾಣಿಯ ನಿಯಂತ್ರಣಕ್ಕೆ ಒಪ್ಪಿಸಲಾಯಿತು
  • ಗವರ್ನರ್ ಜನರಲ್ಷಿ‌ ಹುದ್ದೆಯನ್ನು ‘ವೈಸರಾಯ್’ ಎಂದು ಬದಲಾಯಿಸಲಾಯಿತು.
  • ಲಾರ್ಡ್ ಕ್ಯಾನಿಂಗ್ ಪ್ರಥಮ ವೈಸರಾಯ್ ಆಗಿ ನೇಮಿಸಲ್ಪಟ್ಟನು

9. 1935ರ ಭಾರತ ಸರ್ಕಾರ ಕಾಯ್ದೆ ‚ಭಾರತ  ಸಂವಿಧಾನದ ಬುನಾದಿ‛ ಸಮರ್ಥಿಸಿ

  • ಭಾರತ ಸಂವಿಧಾನದ ಅನೇಕ ನಿಮಂಧನೆಗಳಿಗೆ ಈ ಕಾಯ್ದೆಯೇ ಆಧಾರವಗಿದೆ
  • ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚನೆಗೆ ಈ ಕಾಯಿದೆ ಅವಕಾಶ ನೀಡಿತು
  • ದೇಶಿಯ ಸಂಶ್ಥಾನಗಳು, ಬ್ರಿಟೀμï ಸಂಸ್ಥಾನಗಳನ್ನೊಳಗೊಂಡ ಒಕ್ಕೂಟ ರಚನೆಗೆ ಅವಕಾಶ ನೀಡಿತು
  • ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಿತು

10. 1919ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?

  • ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ ನೀಡಿತು
  • ಭಾರತಕ್ಕೆ ಒಬ್ಬ ಹೈ ಕಮೀಷನರ್ ನೇಮಕ ಮಾಡಲು ಸೂಚಿಸಿತು
  • ಪ್ರಾಂತೀಯ ಆಯವ್ಯಯವನ್ನು ಕೇಂದ್ರ ಆಯವ್ಯಯದಿಂದ ಪ್ರತ್ಯೇಕಿಸಲಾಯಿತು
  • ಮುಸಲ್ಮಾನರು, ಸಿಖ್ಖರು ಹಾಗೂ ಆಂಗ್ಲೋ ಇಂಡಿಯನ್ನರಿಗೆ ‚ಪ್ರತ್ಯೇಕ ಚುನಾವಣಾ ಮತಗಟ್ಟೆ‛ಗಳನ್ನು ನಿಗಧಿ ಪಡಿಸಿತು
Share:

ಅಧ್ಯಾಯ -2 ಬ್ರಿಟೀಷ್ಆ‌ ಳ್ವಿಕೆಯ ವಿಸ್ತರಣೆ

ಅಧ್ಯಾಯ -2 ಬ್ರಿಟೀಷ ಆಳ್ವಿಕೆಯ ವಿಸ್ತರಣೆ:
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಹಾಗೂ ಬ್ರಿಟೀಷರ ಮಧ್ಯೆ ಸಾಲ್ಬಾಯ್ ಒಪ್ಪಂದ ಆಯಿತು
2. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ಲಾರ್ಡ್ ವೆಲ್ಲೆಸ್ಲಿ
4. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು ಲಾರ್ಡ್ ಡಾಲ್‍ಹೌಸಿ

II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಮೊದಲನೇ ಆಂಗ್ಲೋ-ಮರಾಠ ಯುದ್ದದ ಕಾರಣಗಳನ್ನು ವಿವರಿಸಿ

  • ರಘುನಾಥರಾಯನಿಂದ ಪೇಶ್ವೆ ನಾರಯಣರಾವ್‍ನ ಕೊಲೆ
  • ಮರಾಠ ಒಕ್ಕೂಟದಿಂದ ಪೇಶ್ವೆ ಹುದ್ದೆಗೆ ಮಾದವರಾವ್‍ನ ನೇಮಕ
  • ಇದರಿಂದ ವಿಚಲಿತನಾದ ರಘುನಾಥರಾಯನು ಬ್ರಿಟೀಷರ ನೆರವುಯಾಚಿಸಿದ್ದು

2. ಸಹಾಯಕ ಸೈನ್ಯ ಪದ್ದತಿಯ ನಿಂಬಂಧನೆಗಳಾವುವು? ವಿವರಿಸಿ

  • ಈ ಪದ್ಧತಿಯ ಅನುಸಾರ ದೇಶಿಯ ರಾಜನು ಬ್ರಿಟಿಷರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು
  • ದೇಶಿಯ ರಾಜರಿಗೆ ಬ್ರಿಟೀಷರು ಸೈನ್ಯವನ್ನು ನೀಡುತ್ತಿದ್ದರು
  • ಬ್ರಿಟಿಷರ ಅನುಮತಿಯಿಲ್ಲದೆ ಈ ಸೈನ್ಯವನ್ನು ಬಳಸುವಂತಿರಲಿಲ್ಲ
  • ಸೈನ್ಯ ವೆಚ್ಚವನ್ನು ದೇಶಿಯ ರಾಜರೇ ನೋಡಿಕೊಳ್ಳಬೇಕಾಗಿತ್ತು.
  • ದೇಶಿಯ ರಾಜರ ಆಂಗ್ಲ್‌  ರೆಸಿಡೆಂಟ್ ಅಧಿಕಾರಿಯನ್ನು ಬ್ರಿಟಿಷರು ನೇಮಿಸುತ್ತಿದ್ದರು.


3. ಮೂರನೇ ಆಂಗ್ಲೋ-ಮರಾಠ ಯುದ್ದವನ್ನು ವಿವರಿಸಿ

  • ಮೂರನೇ ಆಂಗ್ಲೋ-ಮರಾಠ ಯುದ್ದದಲ್ಲಿ ಪೇಶ್ವೇ ಎರಡನೇ ಬಾಜಿರಾಯನು ಪುಣೆಯಲ್ಲಿನ ಬ್ರಿಟೀಷ ರೆಸಿಡೆನ್ಸಿ ಮತ್ತು ಕೋರೆಗಾವ್ ಹಾಗೂ ಆಷ್ಟಿಗಳ ಮೇಲೆ ಧಾಳಿಮಾಡಿ ಸೋಲಿಸಲ್ಪಟ್ಟನು. 
  • ಇಂಗ್ಲೀಷರು ಪೇಶ್ವೆ ಹುದ್ದೆಯನ್ನು ರದ್ದು ಪಡಿಸಿದರಲ್ಲದೆ ಪೇಶ್ವೆ ಎರಡನೇ ಬಾಜಿರಾಯನಿಗೆ ವಿಶ್ರಾಂತಿ ವೇತನವನ್ನು ನೀಡಿದರು. 
  • ಶಿವಾಜಿಯ ವಂಶಸ್ಥ ಪ್ರತಾಪ್‍ಸಿಂಹನನ್ನು ಮರಾಠರ ಮುಖಂಡರಾಗಿ ನೇಮಿಸಿದರು

4. ಬ್ರಿಟೀಷ ಅಧಿಕಾರ ವಿಸ್ತರ್ಣೆ  ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯು ಹೇಗೆ ಸಹಕಾರಿಯಾಯಿತು ವಿವರಿಸಿ

  • ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ವಯ ದೇಶಿಯ ರಾಜನಿಗೆ ಸ್ವಾಭಾವಿಕ ಮಕ್ಕಳು ಇಲ್ಲದಿದ್ದರೆ ಆತ ತನ್ನ ಸಾಮ್ರಾಜ್ಯವನ್ನು ದತ್ತು ಮಕ್ಕಳಿಗೆ ಹಸ್ತಾಂತರ ಮಾಡುವಂತಿರಲಿಲ್ಲ
  • ಈ ನೀತಿಯ ಅನುಸಾರ ಸತಾರ, ಝಾನ್ಸಿ, ನಾಗಪುರ, ಜೈಪುರ, ಸಂಬಲ್‍ಪುರ, ಉದಯಪುರಗಳನ್ನು ಡಾಲ್ ಹೌಸಿ ವಶಪಡಿಸಿಕೊಂಡನು. 
  • ಈ ನೀತಿಯನ್ನು ಜಮೀನ್ದಾರರಿಗೂ ಅನ್ವಯಿಸಿದ್ದರಿಂದ ಜಮೀನ್ದಾರರು ತಮ್ಮ ಹಕ್ಕಗಳನ್ನು ಕಳೆದುಕೊಂಡರು, 
  • ಈ ನೀತಿಯು ರಾಜಕೀಯ ಅಸ್ರ್ತವಾಗಿ ಬಳಸಲ್ಪಟ್ಟಿತು

5. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?

  • ಸತಾರ, ಝಾನ್ಸಿ, ನಾಗಪುರ, ಜೈಪುರ, ಸಂಬಲ್‍ಪುರ, ಉದಯಪುರಗಳು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾಗಿವೆ.
Share:

ಅಧ್ಯಾಯ-1, ಭಾರತಕ್ಕೆ ಯೂರೋಪಿಯನ್ನರ ಆಗಮನ

ಇತಿಹಾಸ 
ಅಧ್ಯಾಯ-1,        ಭಾರತಕ್ಕೆ ಯೂರೋಪಿಯನ್ನರ ಆಗಮನ:
I    ಖಾಲಿ  ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 1453ರಲ್ಲಿ  ಆಟೋಮನ್  ಟರ್ಕ್‍ರು ಕಾನ್‍ಸ್ಟಾಂಟಿನೋಪಲ್  ನಗರವನ್ನು  ವಶಪಡಿಸಿಕೊಂಡರು
2.  ಭಾರತ  ಹಾಗೂ  ಯೂರೋಪ್  ನಡುವೆ  ಹೊಸ  ಜಲಮಾರ್ಗವನ್ನು  ವಾಸ್ಕೋಡಗಾಮನು  ಕಂಡುಹಿಡಿದನು
3.  ಭಾರತದಲ್ಲಿ  ಫ್ರೆಂಚರ  ರಾಜಧಾನಿ  ಪಾಂಡಿಚೇರಿ
4.  ರಾಬರ್ಟ್  ಕ್ಲೈವ್‍ನು  1757ರಲ್ಲಿ  ಸಿರಾಜುದ್ದೌಲನ  ಮೇಲೆ  ಪ್ಲಾಸೀ  ಕದನ  ಸಾರಿದನು
5.  ಈಸ್ಟ್  ಇಂಡಿಯಾ  ಕಂಪನಿಗೆ  ಬಂಗಾಳದ  ದಿವಾನಿ  ಹಕ್ಕನ್ನು  ಎರಡನೇ  ಷಾ  ಆಲಂ  ನೀಡಿದನು
6. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು ರಾಬರ್ಟ ಕ್ಲೈವ್
II  ಈ ಪ್ರಶ್ನೆಗಳಿಗೆ  ಉತ್ತರ  ಬರೆಯಿರಿ
1. ಮಧ್ಯಕಾಲದಲ್ಲಿ  ಭಾರತ  ಮತ್ತು  ಯೂರೋಪ್  ನಡುವೆ  ವ್ಯಾಪಾರ  ಹೇಗೆ  ನಡೆಯುತ್ತಿತ್ತು?

  • ಮಧ್ಯದಲ್ಲಿ  ಭಾರತದೊಂದಿಗೆ  ಯೂರೋಪಿಯನ್ನರ  ವ್ಯಾಪಾರವು  ಕಾನ್‍ಸ್ಟಾಂಟಿನೋಪಲ್  ನಗರದ  ಮೂಲಕ ಜರುಗುತ್ತಿತ್ತು.  
  • ಅರಬ್ಬರು  ಭಾರತದ  ವ್ಯಾಪಾರೀ  ಸರಕುಗಳನ್ನು  ಕಾನ್‍ಸ್ಟಾಂಟಿನೋಪಲ್‍ಗೆ  ತರುತ್ತಿದ್ಧರು.
  • ಇಟಲಿಯ ವ್ಯಾಪಾರಿಗಳು  ಈ  ಸರಕುಗಳನ್ನು  ಖರೀದಿಸಿ  ಯೂರೋಪ್  ಖಂಡದಲ್ಲಿ  ಮಾರುತ್ತಿದ್ದರು

2.  ಭಾರತಕ್ಕೆ  ಹೊಸ  ಜಲಮಾರ್ಗವನ್ನು  ಕಂಡುಹಿಡಿಯಲು  ಸಹಾಯಕವಾದ  ಅಂಶಗಳನ್ನು  ಚರ್ಚಿಸಿ

  • ಕಾನ್‍ಸ್ಟಾಂಟಿನೋಪಲ್  ನಗರದ  ಪತನ   ಭಾರತೀಯ  ಮಸಾಲೆ  ಪದಾರ್ಥಗಳಿಗಿದ್ದ  ಅಪಾರ  ಬೇಡಿಕೆ 
  • ನಾವಿಕರ  ದಿಕ್ಸೂಚಿ,  ಸಿಡಿಮದ್ದು,  ಬಂದೂಕು,  ಭೂಪಟಗಳ  ಅನ್ವೇಷಣೆ 
  • ಕ್ರೈಸ್ತ  ಧರ್ಮದ  ಪ್ರಸಾರ

3.  ಭಾರತಕ್ಕೆ  ವ್ಯಾಪಾರಕ್ಕಾಗಿ  ಬಂದ  ಯೂರೋಪಿಯನ್ನರನ್ನು  ಪಟ್ಟಿ  ಮಾಡಿ

  • ಪೋರ್ಚುಗೀಸರು.  
  • ಡಚ್ಚರು,  
  • ಬ್ರಿಟೀಷರು  ಹಾಗೂ  
  • ಫ್ರಂಚರು

 4.  ಎರಡನೇ  ಕರ್ನಾಟಿಕ್  ಯುದ್ದವನ್ನು  ವಿವರಿಸಿ.

  • ಫ್ರೆಂಚರ  ನೆರವಿನೊಂದಿಗೆ  ಹೈದರಾಬಾದಿನಲ್ಲಿ  ಸಲಬತ್‍ಜಂಗ್  ನಿಜಾಮ  ಹುದ್ದೆಗೂ  ಹಾಗೂ  ಕರ್ನಾಟಕ್‍ನಲ್ಲಿ ಚಂದಾಸಾಹೇಬ್  ನವಾಬನ  ಹುದ್ದೆಗೂ  ನೇಮಿಸಲ್ಪಟ್ಟರು.  
  • ಚಂದಾಸಾಹೇಬನು  ತಿರುಚನಾಪಳ್ಳಿ  ಕೋಟೆ  ಮೇಲೆ  ಧಾಳಿ ಮಾಡಿದಾಗ  ಚಾಣಕ್ಷನಾದ  ರಾಬರ್ಟ್‍ಕ್ಲೈವ್‍ನು  ಆರ್ಕಾಟಿನ  ಮೇಲೆ  ಧಾಳಿಮಾಡಿದನು.  
  • ಆರ್ಕಾಟಿನಲ್ಲಿ  ನಡೆದ ಯುದ್ದದಲ್ಲಿ  ಚಂದಾಸಾಹೇಬನನ್ನು  ಕೊಲೆಮಾಡಲಾಯಿತು.  
  • ಮಹಮ್ಮದ್  ಆಲಿಯು  ಅರ್ಕಾಟಿನ  ನವಾಬನಾಗಿ ನೇಮಿಸಲ್ಪಟ್ಟನು

5. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ ಕಾರಣಗಳು :-

  • ದಸ್ತಕ್‍ಗಳ  ದುರುಪಯೋಗ  
  • ನವಾಬನ  ಅನುಮತಿಯಿಲ್ಲದೇ  ಬ್ರಿಟೀಷರು  ಪೋರ್ಟ್  ವಿಲಿಯಂ  ಕೋಟೆ  ಬಲಪಡಿಸಿಕೊಂಡಿದ್ದು
  • ಕಪ್ಪು ಕೋಣೆ ದುರಂತ
ಪರಿಣಾಮಗಳು  :- 
  • ಸಿರಾಜುದ್ದೌಲನ  ಕೊಲೆಯಾಯಿತು 
  • ಮೀರ್  ಜಾಫರ್  ಬಂಗಾಳದ  ನವಾಬನಾದನು 
  • ಬ್ರಿಟಿಷರಿಗೆ  24  ಪರಗಣ  ಪ್ರದೇಶ  ಬಳುವಳಿಯಾಗಿ  ದೊರೆಯಿತು

6.  ಬಕ್ಸಾರ್  ಕದನದ  ಫಲಿತಾಂಶಗಳನ್ನು  ವಿವರಿಸಿ   ಮೀರ್  ಖಾಸಿಂನ  ಒಕ್ಕೂಟ  ಸೇನೆಗೆ  ಸೋಲಾಯಿತು

  • ಎರಡನೇ ಷಾ ಆಲಂ ಬ್ರಿಟೀಷರಿಗೆ ಬಂಗಾಳದ ದಿವಾನಿ ಹಕ್ಕನ್ನು ಹಸ್ತಾಂತರಿಸಿದನು
  • ಬಂಗಾಳದಲ್ಲಿ ಬ್ರಿಟೀಷರು ಭದ್ರವಾಗಿ ನೆಲೆಯೂರಿದರು
  • ಔದ್ನ ನವಾಬ  50 ಲಕ್ಷ ರೂ ಯುದ್ಧ ಪರಿಹಾರವಾಗಿ ಬ್ರಿಟೀಷರಿಗೆ ನೀಡಬೇಕಾಯಿತು.

7. ದ್ವಿಸರ್ಕಾರ ಪದ್ದತಿಯನ್ನು ವ್ಯಾಖ್ಯಾನಿಸಿ

  • ರಾಬರ್ಟ್‍ಕ್ಲೆ ೈವ್ ಜಾರಿಗೆ ತಂದ ದ್ವಿ ಸರಕಾರ  ಪದ್ದತಿಯು ಎರಡು ಬಗೆಯ ಅಧಿಕಾರವನ್ನು ಹೊಂದಿತ್ತು
  • ದಿವಾನಿ ಹಕ್ಕು : ಇದು ಬ್ರೀಟೀಷರು ಭೂಕಂದಾಯ ಸಂಗ್ರಹಿಸುವ ಹಕ್ಕಾಗಿತ್ತು
  • ನಿಜಾಮಿ ಹಕ್ಕು ; ಇದು ನವಾಬನಿಗಿದ್ದ ದೈನಂದಿನ ಆಡಳಿತ, ನ್ಯಾಯ ತಿರ್ಮಾನ ಮಾಡುವ ಹಕ್ಕಾಗಿತು
Share:

8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಗಾಗಿ ಮಾದರಿ ಪ್ರಶ್ನೆ ಪತ್ರಿಕೆಗಳು:




8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಗಾಗಿ ಮಾದರಿ ಪ್ರಶ್ನೆ ಪತ್ರಿಕೆಗಳು:
ಇಲ್ಲಿ ಬಳಸಿರುವ ಪ್ರಶ್ನೆಪತ್ರಿಕೆಗಳು ಕೇವಲ ಮಾದರಿಯಾಗಿದ್ದು ಇವುಗಳೇ ಅಂತಿಮವಲ್ಲ.
ಕ್ರ.ಸಂ
ಪ್ರಶ್ನೆ ಪತ್ರಿಕೆ ರಚನಾಕಾರರು
ಪ್ರಶ್ನೆ ಪತ್ರಿಕೆ
ನೀಲ ನಕಾಶೆ
1
ಶ್ರೀ ಆರ್‌ ಜಿ ಆಹೇರಿ
2



3



4



5



6



7



Share:

ನಮ್ಮ ಈ ಒಂದು ಸಣ್ಣ ನಡವಳಿಕೆಯು

"ನಮ್ಮ ಈ ಒಂದು ಸಣ್ಣ ನಡವಳಿಕೆಯು ......"

ಅದೊಂದು ಕೈಗಾರಿಕಾ ಪ್ರದೇಶ. ನೂರಾರು ಕಾರಖಾನೆಗಳ ನಡುವೆ ಅದೊಂದು ಫ್ರೀಜರ್ ಘಟಕ. ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಶೀತಲೀಕರಣ ಯಂತ್ರಗಳು ಅದರ ಮುಖ್ಯ ಭಾಗ. ಅದೊಂದು ದಿನ ಸಂಜೆ ಎಲ್ಲರೂ ಮನೆಗೆ ಹೊರಡುವ ಸಮಯ ಆಗಿತ್ತು. ಒಬ್ಬೊಬ್ಬರಾಗಿ, ಗಡಿಯಾರ ನೋಡಿಕೊಂಡು, ಘಟಕದಿಂದ ಮರಳಿ ಮನೆಯ ಕಡೆ ಪ್ರಯಾಣ ಬೆಳೆಸಲು ಆರಂಭಿಸಿದ್ದರು. ಆದರೆ ಆ ಘಟಕದ ಎಲೆಕ್ಟ್ರಾನಿಕ್ಸ್ ವಿಭಾಗದ ಇಂಜಿನಿಯರ್ ಒಬ್ಬರು ಎಲ್ಲಾ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ನೋಡಿಕೊಂಡು ಬರುತ್ತಿರುವಾಗ, ಯಾವುದೋ ಫ್ರೀಜರಿನಲ್ಲಿ ಸಮಸ್ಯೆ ಇರುವುದು ಗೊತ್ತಾಯಿತು. ಒಂದು ಗೋಡೌನ್‌ನಷ್ಟು ಗಾತ್ರವಿದ್ದ, ಆ ಫ್ರೀಜರಿನಲ್ಲಿರುವ ಸಮಸ್ಯೆಯನ್ನು ಗುರುತಿಸಲು ಆತನಿಗೆ ಸಮಯ ಸಾಲದಾಯಿತು. ಅದರ ಒಳಗೆ ಸಮಸ್ಯೆಯನ್ನು ಬಗೆ ಹರಿಸಿ, ಹೊರಗೆ ಬರಲು ನೋಡಿದರೆ ಮನೆಗೆ ಹೋಗುವ ಆತುರದಲ್ಲಿ ಯಾರೋ ಒಬ್ಬ, ಎಲ್ಲರೂ ಹೊರಗೆ ಬಂದಿದ್ದಾರೆ ಎಂದು ನೋಡದೆ ಹೊರಗಿನಿಂದ ಬಾಗಿಲು ಹಾಕಿ ಬಿಟ್ಟಿದ್ದನು. ಒಳಗಿದ್ದ ಇಂಜಿನಿಯರ್ ಕಿರುಚುತ್ತಾ ಯಾರಾದರೂ ಸಹಾಯ ಮಾಡುತ್ತಾರಾ ಎಂದು ಕರೆದನು. ಆದರೆ ಅವನಿಗೆ ಪ್ರತಿಕ್ರಿಯಿಸುವವರು ಯಾರೂ ಇರಲಿಲ್ಲ. ಸಾಲದ್ದಕ್ಕೆ ಘಟಕದ ಒಳಭಾಗದ ದೀಪಗಳೆಲ್ಲ ಆರಿಸಲ್ಪಟ್ಟಿದ್ದವು. ಮೈನಸ್ ಉಷ್ಣಾಂಶವಿದ್ದ ಆ ಫ್ರೀಜರ್ ಘಟಕ ಆತನಿಗೆ ಮಂಜುಗಡ್ಡೆಯ ಸಮಾಧಿಯಂತೆ ಕಾಣಿಸಲಾರಂಭಿಸಿತು. ಅವನು ಧರಿಸಿದ್ದ ಬೆಚ್ಚನೆಯ ಉಡುಪು ಸಹ ಚಳಿಯನ್ನು ತಡೆಯಲು ಅಸಾಧ್ಯ ಎನ್ನುವಂಥ ಸ್ಥಿತಿ ತಲುಪಿತು. ಹೀಗೆ ಸಮಯ  ಕಳೆಯುತ್ತ ಹೋಯಿತು. ಇವನ ಕೈ ಕಾಲು ಮರಗಟ್ಟಲು ಆರಂಭಿಸಿತು. ಅಷ್ಟರಲ್ಲಿ ಯಾರೋ ಬಾಗಿಲು ತೆರೆಯುತ್ತಿರುವುದು ಕಾಣಿಸಿತು. ಆ ಘಟಕದ ಸೆಕ್ಯೂರಿಟಿ ಗಾರ್ಡ್ ಟಾರ್ಚ್ ಹಿಡಿದುಕೊಂಡು ಯಾರನ್ನೋ ಹುಡುಕುತ್ತಾ ಬಂದಂತೆ ಕಂಡನು. ಅವನನ್ನು ಕರೆದಾಗ ಓಡಿ ಬಂದು, ಬಾಗಿಲು ತೆರೆದನು. ಓಡಿ ಹೋಗಿ ತಾನು ರಾತ್ರಿಗೆಂದು ಫಾಸ್ಕ್‌ನಲ್ಲಿ ತುಂಬಿ ತಂದಿದ್ದ ಬಿಸಿ ಬಿಸಿ ಚಹವನ್ನು ಸುರಿದು ಕೊಟ್ಟನು. ಬದುಕಿದೆಯಾ ಬಡಜೀವವೇ, ಎಂಬಂತಾಗಿದ್ದ ಇವನು ಆ ಚಹವನ್ನು ಕುಡಿದು ಚೇತರಿಸಿಕೊಂಡನು ಹಾಗೂ ಕುತೂಹಲದಿಂದ ಆ ಗಾರ್ಡನನ್ನು ಕೇಳಿದನು. "ನಾನು ಒಳಗೆ ಸಿಕ್ಕಿ ಹಾಕಿಕೊಂಡಿದ್ದೆ ಎಂದು ನಿನಗೆ ಹೇಗೆ ಗೊತ್ತಾಯಿತು? ಯಾರು ನಿನಗೆ ತಿಳಿಸಿದರು? " ಎಂದು ಕೇಳಿದನು. ಅದಕ್ಕೆ ಆ ಗಾರ್ಡ್ ಹೇಳಿದನು " ಯಾರೂ ಹೇಳಲಿಲ್ಲ ಸರ್, ಈ ಪ್ಲಾಂಟ್‌ನಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ, ಆದರೆ ಬೆಳಗ್ಗೆಯಾದರೆ ಒಂದು ಹಾಯ್, ಸಂಜೆಯಾದರೆ ಬಾಯ್, ಎಂದು ಹೇಳಿ ಹೋಗುವುದು ಮಾತ್ರ ನೀವೊಬ್ಬರೇ! ನಾನು ನಿಮಗೆ ನಮಸ್ಕಾರ ಹೇಳುವ ಮೊದಲೇ ನೀವು ಮೇಲಧಿಕಾರಿ ಎಂಬ ಭಾವನೆಯನ್ನೂ ತೋರದೆ ನೀವಾಗಿಯೇ ನನ್ನ ಕಡೆ ನೋಡಿ ನಗುತ್ತಾ ಕೈಬೀಸಿ ಹಾಯ್ ಹೇಳುತ್ತೀರಿ ಹಾಗೂ ಸಂಜೆ ಮನೆಗೆ ಹೋಗುವಾಗಲೂ ಅದೇ ನಗುಮುಖದಿಂದ ಬಾಯ್ ಹೇಳಿ ಹೋಗುತ್ತಿರುವ. ನಾನು ಬೆಳಗ್ಗೆಯಿಂದ ಗೇಟಿನಲ್ಲೇ ಇದ್ದೆ, ಬೆಳಗ್ಗೆ ನೀವು ಒಳಗೆ ಬಂದವರು ಹೊರಗೆ ಬರಲಿಲ್ಲ, ಅದಕ್ಕೆ ಸಂಶಯ ಬಂದು ನಿಮ್ಮನ್ನೇ ಹುಡುಕಿಕೊಂಡು ಬಂದೆ ಎಂದನು.
ಇದನ್ನು ಕೇಳಿದ ಆ ನೌಕರ ಆ ಗಾರ್ಡನನ್ನು ಬಾಚಿ ತಬ್ಬಿಕೊಂಡ. ಹೇಳಲು ಅವನ ಬಳಿ ಪದಗಳೇ ಇರಲಿಲ್ಲ. ಕೇಳಲು ಆ ಗಾರ್ಡ್‌ಗೆ ಯಾವ ಪ್ರಶ್ನೆಗಳೇ ಇರಲಿಲ್ಲ.

ಒಮ್ಮೆ ಆಲೋಚಿಸಿ. ಒಬ್ಬ ಮನುಷ್ಯನಿಗೆ ಆ ನೌಕರ ತೋರಿದ ಒಂದು ಸಣ್ಣ ಗೌರವ ಪೂರ್ವಕ ನಡವಳಿಕೆ ಆತನ ಜೀವವನ್ನು ಉಳಿಸಿತು.
ಹಾಗಾಗಿ ಯಾರನ್ನಾದರು ಭೇಟಿಯಾದಾಗ ಅವರಿಗೆ ಒಂದು ನಮಸ್ಕಾರ ಹೇಳಿ. ಕನಿಷ್ಠ ಪಕ್ಷ ಅವರಿಗೆ ಗೌರವ ಪೂರ್ವಕವಾಗಿ ನಗುತ್ತ ಮಾತನಾಡಿಸಿ. ಈ ಸಮಯದಲ್ಲಿ ಒಂದು ಮುಗುಳ್ನಗೆ ನಿಮ್ಮ ಮುಖದಲ್ಲಿರಬೇಕೆಂಬುದನ್ನು ಮರೆಯಬೇಡಿ. ಇಂತಹ ಉತ್ತಮ ಶಿಷ್ಠಾಚಾರಗಳನ್ನು ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡುವುದನ್ನು ಮತ್ತು ನೀವೂ ಪಾಲಿಸಲು ಮರೆಯಬೇಡಿ. ಇದರಿಂದ ನಮಗೆ ಒಳ್ಳೆಯದೇ ಆಗುತ್ತದೆಯೇ ಹೊರತು ನಷ್ಟ ಎಂದಿಗೂ ಆಗದು! ಯಾರು ಬಲ್ಲರು?, ನಮ್ಮ ಈ ಒಂದು ಸಣ್ಣ ನಡವಳಿಕೆಯು ನಮ್ಮ ಜೀವನದಲ್ಲಿ ಪವಾಡವನ್ನೇ ಮಾಡಬಹುದು! ಅಲ್ಲವೇ?                                               ಸಂಗ್ರಹ: ವೀರೇಶ್ ಅರಸಿಕೆರೆ.
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com